Author: News Desk Benkiyabale

ತುರುವೇಕೆರೆ:       ಮನುಷ್ಯನ ತನ್ನ ಜೀವನದ ಆದರ್ಶದ ಬದುಕು ಸಮಾಜದಲ್ಲಿ ಉತ್ತಂಗಕ್ಕೆ ಕರೆದೊಯ್ಯಲಿದೆ ಎಂದು ಮೈಸೂರು ಮಹಾರಾಜ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.       ತಾಲೂಕಿನ ಆನಡಗು ಗ್ರಾಮದಲ್ಲಿ ಚಿತ್ರನಟ ಜಗ್ಗೇಶ್ ಕುಟುಂಬ ನಿರ್ಮಿಸಿರುವ ಕಾಲಬೈರವೇಶ್ವರ ನೂತನ ದೇವಾಲಯ ಲೋಕಾರ್ಪಣೆ, ಸ್ಥಿರಮೂರ್ತಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಿತ್ರ ನಟ ಜಗ್ಗೇಶ್ ತನ್ನ ಹುಟ್ಟೂರಿನಲ್ಲಿ ದೇವಸ್ಥಾನ ನಿರ್ಮಿಸಿ ಅದರ್ಶವನ್ನು ಮುಂದುವರೆದಿದ್ದಾರೆ. ಪ್ರತಿಯೊಬ್ಬರು ಸಮಾಜಕ್ಕೆ ತನ್ನ ಕೈಲಾದ ಕೊಡುಗೆ ನೀಡಬೇಕಾಗಿದೆ. ಉತ್ತರ ಕರ್ನಾಟಕದಲ್ಲಿ ಕಾರ್ಯಕ್ರಮ ಒತ್ತಡ ಇದ್ದರು ಸಹ ದೈವ ಕೃಪೆಯಿಂದ ಕಾರ್ಯಕ್ರಮವನ್ನು ರದ್ದು ಮಾಡಿ ಆಗಮಿಸಿದ್ದೇನೆ. ಮೈಸೂರು ಸಂಸ್ಥಾನ ಜೊತೆ ಸಾರ್ವಜನಿಕರ ಸಂಬಂದ ಈಗೇ ಮುಂದುವರೆಯಬೇಕು ಎಂದು ತಿಳಿಸಿದರು       ಚಿತ್ರ ನಟ ಜಗ್ಗೇಶ್ ಮಾತನಾಡಿ ನಮ್ಮ ತಾತ 1930ರಲ್ಲಿಯೇ ನಮ್ಮ ಗ್ರಾಮಕ್ಕೆ ಒಂದು ಬಾವಿ, ಶಾಲೆಯನ್ನು ಕಟ್ಟಿಸಿದ್ದರು. ಮಲೇಶಿಯಗೇ ಹೋಗಬೇಕಿದ್ದ ಕಾಲಬೈರವ ಮೂರ್ತಿ ನನಗೆ ಸಿಕ್ಕಿ ಇಂದು ನಮ್ಮ…

Read More

ದೆಹಲಿ:        ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ 0.25ರಷ್ಟು ಅಂಕ ಇಳಿಕೆ ಮಾಡಿದೆ. ಇದರಿಂದಾಗಿ ಈ ಹಿಂದೆ ಇದ್ದ ಶೇ.6.50 ರೆಪೋ ದರ ಈಗ ಶೇ.6.25ಕ್ಕೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಗೃಹ, ಮೋಟಾರು ವಾಹನ ಸಾಲಗಳ ಮೇಲಿನ ಬಡ್ಡಿದರ ಕಡಿಮೆಯಾಗಲಿವೆ.        ಆರ್‌ಬಿಐನ ನೂತನ ಗವರ್ನರ್ ಆಗಿ ಶಕ್ತಿಕಾಂತ ದಾಸ್ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಆರ್‌ಬಿಐ ಬಿಡುಗಡೆ ಮಾಡಿದ ಮೊದಲ ವಿತ್ತೀಯ ನೀತಿ ಇದಾಗಿದೆ. ಆರು ಸದಸ್ಯರನ್ನು ಒಳಗೊಂಡ ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ಈ ನಿರ್ಧಾರಕ್ಕೆ ಒಪ್ಪಿಗೆ ಎಂದು ಶಕ್ತಿಕಾಂತ್ ದಾಸ್ ಹೇಳಿದರು.       ಆರ್‌ಬಿಐನ ಈ ನಿರ್ಧಾರದಿಂದ ಗೃಹ, ಮೋಟಾರು ವಾಹನ ಸಾಲ ಪಡೆಯುವ ಆಕಾಂಕ್ಷಿಗಳಿಗೆ ಇಎಂಐ ಹೊರೆ ಕಡಿಮೆಯಾಗಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು. ಆರ್‌ಬಿಐನ ಈ ದರ ಇಳಿಕೆ ನೀತಿಯನ್ನು ಅನುಸರಿಸಿ ಬ್ಯಾಂಕುಗಳ ತಾವು ನೀಡುವ ಗೃಹ, ಮೋಟಾರು ವಾಹನಗಳ ಸಾಲದ ಮೇಲಿನ ಬಡ್ಡಿಯು ಕಡಿಮೆಯಾಗಲಿದೆ…

Read More

ತುಮಕೂರು:        ಎಲ್ಲಿ ಜ್ಞಾನ ಇರುತ್ತದೆಯೇ, ಆ ಜ್ಞಾನವನ್ನು ಹುಡುಕಿಕೊಂಡು ನಾವು ಜ್ಞಾನ ಇರುವಲ್ಲಿಗೆ ಹೋಗಬೇಕು. ಆಗ ಜ್ಞಾನ ಎಲ್ಲರಿಗೂ ಸಿಗುತ್ತದೆ. ಇಷ್ಟು ವರ್ಷ ನಮ್ಮ ನಡುವೆ ನೂರಾಹನ್ನೊಂದು ವರ್ಷ ಬದುಕಿದ್ದ ನಡೆದಾಡುವ ದೇವರು ಎನ್ನಿಸಿಕೊಂಡಿದ್ದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಅವರು ನಡೆದ ದಾರಿಯಲ್ಲಿ ನಡೆದರೆ ಸಾಕು ನಾವು ಅವರಿಗೆ ಸಲ್ಲಿಸುವ ಗೌರವ ಎಂದು ತುಮಕೂರಿನ ಹಿರೇಮಠ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.       ಅವರು ಸಓಮೇಶ್ವರಪುರಂ ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗದ 500ನೇ ಸಾಪ್ತಾಹಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನಬುತ್ತಿ ಸತ್ಸಂಗದ ಬಗ್ಗೆ ನನಗೆ ತುಂಬಾ ಗೌರವ ಇದೆ. ಈ ಸಂಘದ ಪಿ.ಶಾಂತಿಲಾಲ್ ಮತ್ತು ಟಿ.ಮುರಳೀಕೃಷ್ಣಪ್ಪ ಇಬ್ಬರು ಎರಡು ಕಣ್ಣುಗಳಿದ್ದಂತೆ. ಈ ಎರಡು ಕಣ್ಣುಗಳು ಅತ್ಯಂತ ಶ್ರೇಷ್ಠ ಎಂದು ಹೇಳಿದರು.       ಅಮ್ಮ ಮಕ್ಕಳಿಗೆ ಕೈತುತ್ತು ಕೊಡುತ್ತಾರೆ. ಅದೇ ಅಮ್ಮ ಮಕ್ಕಳು ಹಸಿದುಕೊಂಡಿರಬಾರದೆಂದು ಬುತ್ತಿ ಕೊಡುತ್ತಾಳೆ.…

Read More

ಗುಬ್ಬಿ :       ಮನೆ ಬಾಗಿಲು ಬೀಗ ಮುರಿದು ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು, ನಗದು ದೋಚಿದ ಘಟನೆ ಪಟ್ಟಣದ ವಿನಾಯಕನಗರ ಬಡಾವಣೆಯಲ್ಲಿ ನಡೆದಿದೆ.       ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಅವರ ಮನೆಗೆ ಕನ್ನ ಹಾಕಿದ ಕಳ್ಳರು ಟವಿ, 10  ಸಾವಿರ ರೂ. ನಗದು ಸೇರಿದಂತೆ ಕೆಲ ಗೃಹೋಪಯೋಗಿ ವಸ್ತುಗಳನ್ನು ದೋಚಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸುಳಿವು ಪಡೆದು ಈ ಕೃತ್ಯವೆಸಗಿದ್ದಾರೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

 ತುಮಕೂರು:       ಪಾವಗಡ ತಾಲೂಕು ಅಚ್ಚಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮೇಗಲಹಳ್ಳಿ ಗ್ರಾಮದ ಮನೆಗಳ ಬಾಗಿಲಿಗೆ ಕ್ಯಾನ್‍ಗಳ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.       ಮಂಗಳವಾರ ಪಾವಗಡ ತಾಲೂಕು  ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಚ್ಚಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ.ಗೆ ಮೇಗಲಹಳ್ಳಿಯಲ್ಲಿರುವ ಎಲ್ಲ ಮನೆಗಳ ಬಾಗಿಲಿಗೆ ಕುಡಿಯುವ ನೀರನ್ನು ಕ್ಯಾನ್ ಮೂಲಕ ಸರಬರಾಜು ಮಾಡಲು ನಿರ್ದೇಶನ ನೀಡಲಾಗಿತ್ತು. ಮೇಗಲಹಳ್ಳಿಯಲ್ಲಿದ್ದ ಆರ್.ಓ. ಪ್ಲಾಂಟ್ ಕೆಟ್ಟು ಹೋಗಿದ್ದರಿಂದ ಗ್ರಾಮಸ್ಥರು 1 ಕಿ.ಮೀ. ದೂರದಿಂದ ಕುಡಿಯುವ ನೀರು ತರುತ್ತಿರುವ ಬಗ್ಗೆ ಕಳೆದ ಫೆಬ್ರುವರಿ 2ರಂದು ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಬರ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಗಿತ್ತು. ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದ್ದರ ಪರಿಣಾಮ ಮೇಗಳಹಳ್ಳಿ ಗ್ರಾಮದ ಮನೆಗಳ ಬಾಗಿಲಿಗೆ…

Read More

ಗುಬ್ಬಿ :       ಕೆಲವು ನಿಯಮಗಳೊಂದಿಗೆ ರೈತರಿಗೆ 6 ಸಾವಿರ ರೂಗಳನ್ನು ನೀಡಲು ಮುಂದಾದ ಕೇಂದ್ರ ಸರ್ಕಾರ ಪುಡಿ ಜಮೀನಿನ ರೈತರು ಹಾಗೂ ಕೃಷಿ ಕಾರ್ಮಿಕರ ಬದುಕನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಮರುಳೀಧರ್ ಹಾಲಪ್ಪ ಟೀಕಿಸಿದರು.       ಪಟ್ಟಣದ ಕಾಂಗ್ರೆಸ್ ಕಚೇರಿಯ ಮುಂದೆ ಜಮಾಯಿಸಿದ ಕಾರ್ಯಕರ್ತರು, ಗಾಂಧೀಜಿ ಅವರನ್ನು ಅವಮಾನಿಸಿದ ಘಟನೆಯನ್ನು ಖಂಡಿಸಿ ಕಪ್ಪುಪಟ್ಟಿ ಪ್ರದರ್ಶನದೊಂದಿಗೆ ಮೌನ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು 2.5 ಹೆಕ್ಟೇರ್ ಪ್ರದೇಶ ಹೊಂದಿದ ರೈತರನ್ನು ಮಾತ್ರ ಪರಿಗಣಿಸಿ ಅತಿ ಸಣ್ಣ ರೈತರನ್ನು ಕಡೆಗಣಿಸಿರುವ ಜತೆಗೆ ಅವಿಭಕ್ತ ಕುಟುಂಬದಲ್ಲಿನ ರೈತರನ್ನು ಗಣನೆಗೆ ತೆಗೆದುಕೊಳ್ಳದಿರುವುದು ಅವೈಜ್ಞಾನಿಕ ಅನಿಸಿದೆ ಎಂದರು.       ಕೇಂದ್ರ ಬಜೆಟ್‍ನಲ್ಲಿ ಸಾಕಷ್ಟು ನೂನ್ಯತೆಗಳಿವೆ. ಸಮಾಜ ಕಲ್ಯಾಣಕ್ಕೆ 72 ಸಾವಿರ ಕೋಟಿ ರೂ ಬಳಸಲಾಗಿದೆ. ಆದರೆ ರಾಜ್ಯ ಸರ್ಕಾರವೇ ಈ ಹಿಂದೆ ಸಮಾಜ ಕಲ್ಯಾಣಕ್ಕೆ 48 ಕೋಟಿ ಸಾವಿರ ರೂಗಳನ್ನ ಮೀಸಲಿಟ್ಟಿತ್ತು. ಇದನ್ನು…

Read More

 ತುಮಕೂರು:        ನಗರದ ಇಸ್ರೋ ಕ್ಯಾಂಪಸ್‍ನಲ್ಲಿಂದು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಮಾರು 15 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಟ್ಯಾಂಕರ್‍ಗಳ ನಿರ್ಮಾಣದ ಮೊದಲ ಹಂತದ ಕಾಮಗಾರಿಗೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಲಾಯಿತು.       ಭೂಮಿಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ತುಮಕೂರಿನಲ್ಲಿ ವಿಶ್ವ ವಿಖ್ಯಾತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಕಾರ್ಯಾರಂಭ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲೋಕಸಭಾ ಅಧಿವೇಶನವನ್ನು ಬಿಟ್ಟು ಬಂದಿದ್ದೇನೆ ಎಂದು ತಿಳಿಸಿದರು.       ದಿವಂಗತ ಕೆ.ಲಕ್ಕಪ್ಪನವರ ಪರಿಶ್ರಮದಿಂದ ತುಮಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಎಂ.ಟಿ ಕಾರ್ಖಾನೆ ದುರಾದೃಷ್ಠವಶಾತ್ ನಷ್ಟವುಂಟಾಗಿ ಮುಚ್ಚಲ್ಪಟ್ಟಾಗ ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮನ ಒಲಿಸಿ ಇಸ್ರೋ ಸಂಸ್ಥೆಯನ್ನು ತುಮಕೂರಿಗೆ ತರುವಲ್ಲಿ ಸಹಕರಿಸಿದ ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹಾಗೂ ಅವರ ತಂಡದವರ ಪರಿಶ್ರಮವನ್ನು ಅಭಿನಂದಿಸಿದರು. ಇಸ್ರೋ ಸಂಸ್ಥೆಯು ಇತ್ತೀಚಿನ ದಿನಮಾನಗಳಲ್ಲಿ ಅನೇಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆ…

Read More

 ತುಮಕೂರು :       ನಗರದ ಉಪ್ಪಾರಹಳ್ಳಿ ಕೆಳಸೇತುವೆ ಬಳಿ ಸೋಮವಾರ ತಡರಾತ್ರಿ 11.30ರ ಸಮಯದಲ್ಲಿ ಇನ್ನೋವಾ ಕ್ರಿಸ್ತಾ ಕಾರನ್ನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದ 6 ಜನ ಯುವಕರನ್ನು ಮದ್ಯಪಾನ ತಪಾಸಣೆ ಮಾಡುವ ಸಂದರ್ಭದಲ್ಲಿ ಜಯನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ನವೀನ್ ಕುಮಾರ್ ಆಯತಪ್ಪಿ ಬಿದ್ದು ಮುಖ, ಮೂಗು, ಕೈ, ಮೊಣಕಾಲುಗಳಿಗೆ ತೀವ್ರತರ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ವಂಶಿಕೃಷ್ಣ ತಿಳಿಸಿದರು.       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಮವಾರ ತಡರಾತ್ರಿ ಪಿಎಸ್‍ಐ ನವೀನ್ ಕುಮಾರ್ ಅವರು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಅನುಮಾನಾಸ್ಪದವಾಗಿ ಬಂದ ಕಾರನ್ನು ತಡೆಯಲು ಹೋದಾಗ ಈ ಘಟನೆ ಸಂಭವಿಸಿದೆ. ಕಾರಿನಲ್ಲಿ ಪಾನಮತ್ತ ಸ್ಥಿತಿಯಲ್ಲಿದ್ದ ಸುಮಾರು 25 ರಿಂದ 35 ವರ್ಷದೊಳಗಿನ 6 ಯುವಕರು ಹಾಗೂ ಅಪರಾಧ ಕೃತ್ಯಗಳಿಗೆ ಬಳಸುವ ಉಪಕರಣಗಳು ಇರುವುದು ಕಂಡುಬಂದಿದೆ. ತಪಾಸಣೆಗಾಗಿ ಕಾರಿನ ಸ್ಟೇರಿಂಗ್ ಹಿಡಿದು…

Read More

ಗುಬ್ಬಿ :       ತೀವ್ರ ಹತಾಶೆಯಲ್ಲಿರುವ ಕೃಷಿಕ ವರ್ಗವನ್ನು ಪ್ರೋತ್ಸಾಹಿಸುವ ಯೋಜನೆಗಳನ್ನು ರೂಪಿಸದೆ ವರ್ಷಕ್ಕೆ 6 ಸಾವಿರ ರೂಗಳನ್ನು ನೀಡುವ ಕೇಂದ್ರ ಬಜೆಟ್ ರೈತರಿಗೆ ಮತ್ತಷ್ಟು ನಿರಾಸೆ ಮೂಡಿಸಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಪ್ರತಿಕ್ರಿಯಿಸಿದರು.        ತಾಲ್ಲೂಕಿನ ನಾಗಸಂದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅವರು ಸ್ವಾಭಿಮಾನ ಬೆಳೆಸಿಕೊಂಡ ರೈತರಿಗೆ ಹಣದ ಆಮೀಷೆ ತೋರುವ ಅಗತ್ಯವಿಲ್ಲ. ಕೃಷಿಗೆ ಪೂರಕ ಯೋಜನೆಗಳು, ಕೃಷಿ ಬೆಳೆಗಳಿಗೆ ಬೆಂಬಲ ಮತ್ತು ವೈಜ್ಞಾನಿಕ ಬೆಲೆ ನಿಗದಿ ಮಾಡುವ ಭರವಸೆಯಲ್ಲಿದ್ದ ಸಣ್ಣ, ಮಧ್ಯಮ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಲಾಗಿದೆ ಎಂದು ಟೀಕಿಸಿದರು.       ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ಈ ಮೊದಲು ಬಿಪಿಎಲ್ ಕಾರ್ಡ್‍ದಾರರ ಖಾತೆಗೆ 15 ಲಕ್ಷ ರೂಗಳ ಆಸೆ ತೋರಿ ನಿರಾಸೆ ಮಾಡಿತ್ತು. ಮತ್ತೆ ಅದೇ ಪ್ರವೃತ್ತಿ ಮುಂದುವರೆದು 6…

Read More

 ತುಮಕೂರು:       ಸಿದ್ಧಗಂಗೆಯ ಡಾ.ಶ್ರೀ.ಶಿವಕುಮಾರಸ್ವಾಮೀಜಿ ಅವರು 12ನೇ ಶತಮಾನದ ಬಸವಣ್ಣನವರ ಬಳಿಕ ದಾಸೋಹ ತತ್ವವನ್ನು ಜಗತ್ತಿಗೆ ಮರು ಪರಿಚಯಿಸಿದ ಮಹಾನ್ ಸಂತ ಎಂದು ಚಿಕ್ಕಪೇಟೆ ಹಿರೇಮಠಾದ್ಯಕ್ಷ ಡಾ.ಶ್ರೀ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿದರು.       ಇಲ್ಲಿನ ಪಾಂಡುರಂಗನಗರದ ಗಾಯತ್ರಿಘಿ, ವಿಶ್ವಕರ್ಮ, ವೀರಬ್ರಹ್ಮೇಂದ್ರಸ್ವಾಮಿ ದೇವಾಲಯದಲ್ಲಿ ಚಿನ್ನ ಬೆಳ್ಳಿ ಕೆಲಸಗಾರರ ಸಂಘದಿಂದ ಏರ್ಪಡಿಸಿದ್ದ ಲಿಂಗೈಕ್ಯ ಡಾ.ಶ್ರೀಘಿ. ಶಿವಕುಮಾರಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದ ಶ್ರೀಗಳು, ದಾನಕ್ಕಿಂತಲೂ ದಾಸೋಹ ಶ್ರೇಷ್ಠ. ದಾಸೋಹ ಪರಸ್ಪರ ಹಂಚುವಿಕೆ, ಸಮಾನತೆಯ ಸೂತ್ರವನ್ನು ಒಳಗೊಂಡಿದೆ ಎಂದರು.       ಸಿದ್ಧಗಂಗಾ ಮಠವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುವಲ್ಲಿ ಶ್ರೀಗಳ ಪಾತ್ರ ಹಿರಿದು. ಅವರ ಕಾಲಘಟ್ಟದಲ್ಲಿ ಬದುಕಿದ್ದೆವು ಎಂಬುದೇ ನಮಗೆಲ್ಲ ಗರಿಮೆ ಮೂಡಿಸುವ ಸಂಗತಿ. ಅವರ ಆದರ್ಶ, ಹಾಕಿಕೊಟ್ಟ ಮಾರ್ಗಗಳನ್ನು ಪಾಲಿಸುವುದೇ ನಾವು ಅವರಿಗೆ ತೋರಿಸುವ ಗೌರವ ಎಂದರು.       ನಿಟ್ಟರಹಳಿ ಆದಿಲಕ್ಷ್ಮಿ ಮಹಾಸಂಸ್ಥಾನ ಪೀಠಾದ್ಯಕ್ಷ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಸಾನಿದ್ಯ…

Read More