ತುಮಕೂರು: ಒಂದು ಜಾತಿಯಿಂದ ಗೆಲುವು ಸಾಧಿಸಿದ್ದೇನೆ ಎಂದು ಹೇಳಿಕೆ ನೀಡಿರುವ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಸೋಲಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ. ಛಲವಾದಿ ಸಮುದಾಯದಿಂದ ನಾನು ಗೆಲುವು ಸಾಧಿಸಿದ್ದೇನೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಸಮುದಾಯದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದು, ಕಳೆದ ಚುನಾವಣೆ ಸಂದರ್ಭದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ತಳಸಮುದಾಯಗಳು ಹಾಗೂ ಮಾದಿಗ ಸಮುದಾಯ ಬೆಂಬಲ ನೀಡಿದ್ದು, ಮಾದಿಗ ಸಮುದಾಯವನ್ನು ಕಡೆಗಣಿಸಿರುವ ಸಂಸದರನ್ನು ಸೋಲಿಸುವಂತೆ ಮಾದಿಗ ಸಂಘಟನೆಗಳು ನಿರ್ಣಯ ಕೈಗೊಂಡಿವೆ. ರಾಜಕೀಯ ಅಸ್ತಿತ್ವವೇ ಇಲ್ಲದ ಮುದ್ದಹನುಮೇಗೌಡರಿಗೆ ಮತ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಜನಪರ ಯೋಜನೆಗಳು ಕಾರಣವಷ್ಟೇ, ಅದನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ಎಸ್.ಪಿ.ಮುದ್ದಹನುಮೇಗೌಡರಿಗೆ ಮತ ನೀಡಿಲ್ಲ. 2013ರಲ್ಲಿ 3 ಅಹಿಂದ ವರ್ಗಕ್ಕೆ ಸೇರಿದ ಶಾಸಕರು ತುಮಕೂರು ಜಿಲ್ಲೆಯಲ್ಲಿದ್ದರು, ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ಮಧುಗಿರಿಯಲ್ಲಿ ಅಹಿಂದ ನಾಯಕರ ಸೋಲಿಗೆ ಸಂಸದ ಮುದ್ದಹನುಮೇಗೌಡ ನೇರ ಕಾರಣವಾಗಿದ್ದು, ಇಂತಹ…
Author: News Desk Benkiyabale
ತುಮಕೂರು: ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಉದ್ಯೋಗಾಕಾಂಕ್ಷಿ ಯುವಕ/ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಫೆಬ್ರುವರಿ 16 ಹಾಗೂ 17ರಂದು ನಡೆಯಲಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸುವವರಿಗೆ ಅನುಕೂಲವಾಗುವಂತೆ ಫೆಬ್ರುವರಿ 6 ಹಾಗೂ 7ರಂದು ನೋಂದಣಿ ಮತ್ತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ತರಬೇತಿ ಕಾರ್ಯಕ್ರಮವನ್ನು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 9 ಗಂಟೆಗೆ ಶಾಸಕ ಡಿ.ಸಿ.ಗೌರಿಶಂಕರ್ ಉದ್ಘಾಟಿಸಲಿದ್ದಾರೆ. ನೋಂದಣಿ ಮತ್ತು ತರಬೇತಿಯು ಫೆಬ್ರುವರಿ 6ರಂದು ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಹಾಗೂ ಫೆ.7ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಉದ್ಯೋಗಾರ್ಥಿಗಳು ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ತರಬೇತಿಯಲ್ಲಿ 18 ರಿಂದ 35 ವರ್ಷದೊಳಗಿನ 7ನೇ ತರಗತಿ ಉತ್ತೀರ್ಣ, 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ,…
ಶಿರಾ : ತಾಲ್ಲೂಕಿನ ಅಮಲಗೊಂದಿ ಗ್ರಾಮದ ಮಂಜು ಪ್ರಸಾದ್ ರವರ ತೋಟದ 20 ಅಡಿ ಆಳದ ಪಾಳು ಬಾವಿಯಲ್ಲಿ ಬಿದ್ದಿದ್ದ ಪುನುಗ ಬೆಕ್ಕನ್ನು (ಸ್ಮಾಲ್‍ಇಂಡಿಯನ್ ಸಿವಿಟ್ ಕ್ಯಾಟ್) ರಕ್ಷಣೆ ಮಾಡಲಾಗಿದೆ. ಬಾವಿಯಲ್ಲಿ ಬಿದ್ದಿದ್ದ ಸುಮಾರು 2-3 ವರ್ಷದ ಪುನುಗ ಬೆಕ್ಕನ್ನು ಗಮನಿಸಿದ ರೈತ ಮಂಜು ಪ್ರಸಾದ್ ಮೊದಲಿಗೆ ಬಾವಿಯೊಳಗೆ ಏಣಿ ನಿಲ್ಲಿಸಿ ಬೆಕ್ಕು ತಾನಾಗಿಯೆ ಮೇಲೆ ಬರಲು ಪ್ರಯತ್ನಿಸಿದರು. ಗಾಬರಿಗೆ ಒಳಗಾಗಿದ್ದ ಪುನುಗ ಬೆಕ್ಕು ಮೇಲೆ ಬರಲಿಲ್ಲವಾದ್ದರಿಂದ ತುಮಕೂರಿನ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ವಾರ್ಕೊ ಸಂಸ್ಥೆಯ ಕಾರ್ತಿಕ್ ಸಿಂಗ್, ಮನು ಮತ್ತು ಅವರ ತಂಡ ಮೊದಲಿಗೆ ಸ್ಥಳದಲಿದ್ದ ಜನರ ಗುಂಪನ್ನು ಶಾಂತಪಡಿಸಿ, ತಂಡದವರು ಬಾವಿಯೊಳಗೆ ಇಳಿದು ಸುರಕ್ಷಿತವಾಗಿ ಪ್ರಾಣಿಯನ್ನು ಬೋನಿನಿಂದ ಹಿಡಿದು ಮೇಲೆ ತಂದಿದ್ದಾರೆ ಸ್ಥಳದಲ್ಲಿದ್ದ ಶಿರಾ ತಾಲ್ಲೂಕಿನ ವಲಯಅರಣ್ಯಾಧಿಕಾರಿರಾಧಾ ಮತ್ತು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ…
ತುಮಕೂರು: ವಿದ್ಯಾರ್ಥಿಗಳು ಮಿತವಾಗಿ ಮೊಬೈಲ್ ಬಳಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಕಿವಿಮಾತು ಹೇಳಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನಗರದ ಕುಂಚಿಟಿಗರ ಭವನದಲ್ಲಿ ಸೋಮವಾರ IಂS, IPS, ಏಂS, ಬ್ಯಾಂಕಿಂಗ್ ಇತ್ಯಾದಿ ಪರೀಕ್ಷೆಗಳ ಪೂರ್ವ ತಯಾರಿ ಬಗ್ಗೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು IಂS ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಹಾಗೂ ಪರೀಕ್ಷೆಯ ಹಂತಗಳ ಬಗ್ಗೆ ಮಾಹಿತಿ ನೀಡಿದರು. ಯಾವುದೇ ವಿಷಯವನ್ನು ಓದಿ ಇತರರಿಗೆ ಅದನ್ನು ವಿವರಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕಲ್ಲದೆ, ತಿಳಿದುಕೊಂಡ ವಿಷಯವನ್ನು ಹಾಗೆಯೇ ಬರೆಯುವ ಅಭ್ಯಾಸವನ್ನು ಕರಗತ ಮಾಡಿಕೊಳ್ಳಬೇಕು. ಸರ್ಕಾರ ಹಮ್ಮಿಕೊಂಡಿರುವ ಇಂತಹ ಸ್ವರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮಗಳ ಬಗ್ಗೆ ಇತರೆ ರಾಜ್ಯದವರಿಂದ ಉತ್ತಮ ಅಭಿಪ್ರಾಯ ಬರುತ್ತಿದ್ದು, ಜಿಲ್ಲೆಯ ಪ್ರತಿಯೊಬ್ಬ ವಿದ್ಯಾರ್ಥಿಯು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ…
ಕೊರಟಗೆರೆ: ಕೊರಟಗೆರೆ ತಾಲ್ಲೂಕು ಕಛೇರಿಯಲ್ಲಿಯ ಭೂ ದಾಖಲೆಗಳ ಸಹಾಯ ನಿರ್ದೇಶಕರ ಕಛೇರಿಯಲ್ಲಿ 4:20 ರ ಸಮಯದಲ್ಲಿ 5000(ಐದು ಸಾವಿರ) ಲಂಚ ಪಡೆಯುವಾಗ ಎ.ಸಿ.ಬಿ ಬಲೆಗೆ ಸರ್ವೇಯರ್ ಎಚ್. ಆರ್. ಮಮತಾ ಬಿದ್ದಿದ್ದಾರೆ. ತಾಲ್ಲೂಕಿನ ಚನ್ನರಾಯನ ದುರ್ಗ ಹೋಬಳಿ ಕುರಂಕೋಟೆ ಗ್ರಾಮದ ನಿವಾಸಿಯೊಬ್ಬರು ಸರ್ವೇ ಹದ್ದುಬಸ್ತು ಕೋರಿ ತೋವಿನಕೆರೆ ನಾಡ ಕಛೇರಿಗೆ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಿದ್ದು ಸರ್ವೇಯರ್ , ಹೆಚ್.ಆರ್ ಮಮತ ಸರ್ವೇ ಮಾಡಿಕೊಟ್ಟಿದ್ದು ಭೂ ದಾಖಲೆಗಳ ಸಹಾಯ ನಿರ್ದೇಶಕರ ಕಛೇರಿ, ತಾಲ್ಲೂಕು ದಂಡಾಧಿಕಾರಿಗಳ ಕಛೇರಿಯಲ್ಲಿ ಬೇಡಿಕೆ ಇಟ್ಟಿದ್ದ 10,000 (ಹತ್ತು ಸಾವಿರ ) ರೂಗಳ ಪೈಕಿ 5000(ಐದು ಸಾವಿರ) ಹಣ ಪಡೆಯುವಾಗ ಎ.ಸಿ.ಬಿ.ಬಲೆಗೆ ಬಿದ್ದಿದ್ದಾರೆ.
ತುಮಕೂರು: ತುಮಕೂರು ಲೋಕಸಭೆಯನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ರೆ ನನ್ನದೊಂದು ಅರ್ಜಿ ಇರುತ್ತೆ ಎಂದು ಮಾಜಿ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆಎನ್ ರಾಜಣ್ಣ ಅವರು ಜೆಡಿಎಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರವನ್ನ ಜೆಡಿಎಸ್‌ಗೆ ಬಿಟ್ಟುಕೊಡುವ ವಿಚಾರದ ಕುರಿತು ಮಾಜಿ ಶಾಸಕ ಕೆ.ಎನ್.ಆರ್ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸ್ತುತ ಕಾಂಗ್ರೆಸ್ ಸಂಸದರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವಾಗ ನಮಗೇ ಬಿಟ್ಟುಕೊಡಿ ಎಂದು ಜೆಡಿಎಸ್ ನವ್ರು ಕೇಳುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಬೇಡ್ವಾ? 8 ಕ್ಷೇತ್ರದಲ್ಲಿ ನಾವೇ ಮುಂದಿದ್ದೇವೆ ಅನ್ನುವುದಾದರೆ, ಹಿಂದೆ ನಾಲ್ಕು ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದನ್ನ ಜೆಡಿಎಸ್ ನವ್ರು ಮರೆತು ಬಿಟ್ರಾ? ಒಂದು ವೇಳೆ ಜೆಡಿಎಸ್‌ಗೆ ಬಿಟ್ಟು ಕೊಟ್ರೆ ನನ್ನದೊಂದು ಅರ್ಜಿ ಇದ್ದೇ ಇರುತ್ತೆ ಎಂದು ಮಾಜಿ ಶಾಸಕ ರಾಜಣ್ಣ ಬಂಡಾಯವೆದ್ದು ಸ್ಪರ್ಧೆ ಮಾಡುವ ಬಗ್ಗೆಯೂ ಎಚ್ಚರಿಕೆ ನೀಡಿದರು.
ತುಮಕೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಮುಂಬರುವ 2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳಲು 1950 ಮತದಾರರ ಸಹಾಯವಾಣಿ ಕಾರ್ಯಾರಂಭಕ್ಕೆ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳ ಕಛೇರಿ ಸ್ಪಂದನ ಕೇಂದ್ರದಲ್ಲಿಂದು ಚಾಲನೆ ನೀಡಿದರು. ಈ ಸ್ಪಂದನ ಕೇಂದ್ರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಿಂದ ತೆಗೆದು ಹಾಕುವುದು, ವರ್ಗಾವಣೆ ಮಾಹಿತಿಗಳು, ಮತಗಟ್ಟೆ ಮಾಹಿತಿ, ಇವಿಎಂ, ವಿವಿ ಪ್ಯಾಟ್‍ಗಳ ಕಾರ್ಯಾಚರಣೆ ಕುರಿತು ಟೋಲ್ ಫ್ರೀ ಸಂಖ್ಯೆ 1950ಗೆ ಮೊಬೈಲ್ ಅಥವಾ ಸ್ಥಿರ ದೂರವಾಣಿಯಿಂದ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಚುನಾವಣಾ ಸಂದರ್ಭದಲ್ಲಿ ಈ ಸಹಾಯವಾಣಿಗೆ ಕರೆ ಮಾಡುವ ಮೂಲಕ ಜಿಲ್ಲೆಗೆ ಸಂಬಂಧಿಸಿದ ದೂರುಗಳನ್ನು ಸಹ ದಾಖಲಿಸಬಹುದಾಗಿದ್ದು, ದೂರುದಾರರಿಗೆ ದೂರು ನೋಂದಣಿ ಸಂಖ್ಯೆಯನ್ನು ಒದಗಿಸಲಾಗುವುದು. ಜಿಲ್ಲೆಯ ಹೊರಗಿನಿಂದ ಕರೆ ಮಾಡಿ ಮಾಹಿತಿ ಪಡೆಯಬೇಕಾದಲ್ಲಿ ಎಸ್‍ಟಿಡಿ ಕೋಡ್ ಸಂಖ್ಯೆ 0816 ಬಳಸಿ, ಟೋಲ್ ಫ್ರೀ ಸಂಖ್ಯೆ…
ತುಮಕೂರು: ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗಾಗಿ ಫೆಬ್ರವರಿ 16, 17ರಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ ಉದ್ಯೋಗಮೇಳದ ಬಗ್ಗೆ ಎರಡೂ ಜಿಲ್ಲೆಗಳ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಟಾಂ-ಟಾಂ ಮೂಲಕ ಜನರಿಗೆ ಮಾಹಿತಿ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮೇಳದಲ್ಲಿ 18 ರಿಂದ 35 ವರ್ಷದೊಳಗಿನ 7ನೇ ತರಗತಿ ಉತ್ತೀರ್ಣ, 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ, ಪಿ.ಯು.ಸಿ., ಯಾವುದೇ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಹೊಂದಿದ ಪುರುಷ/ ಮಹಿಳಾ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗ ಹೊಂದಬಹುದಾಗಿದೆ ಎಂದು ತಿಳಿಸಿದ ಅವರು ಉದ್ಯೋಗ ಮೇಳದ ಬಗ್ಗೆ ಸ್ಥಳೀಯ ಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸುವ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು. ಮೇಳದಲ್ಲಿ ಐಟಿಬಿಟಿ, ಆಟೋಮೊಬೈಲ್, ಮೆಕ್ಯಾನಿಕಲ್, ಕನ್ಸ್ಟ್ರಕ್ಷನ್ ಮಾರ್ಕೆಟಿಂಗ್ ಸೇಲ್ಸ್ ಅಂಡ್ ರೀಟೇಲ್, ಟೆಲಿಕಾಂ,…
ತುಮಕೂರು: ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಇಂದಿನ ಲೋಕಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಜನವರಿ 21ರಂದು ಲಿಂಗೈಕ್ಯರಾದ ಶತಾಯುಷಿ, ನಡೆದಾಡುವ ದೇವರು, ಪರಮಪೂಜ್ಯ ಶ್ರೀಶ್ರೀಶ್ರೀ ಡಾ: ಶಿವಕುಮಾರ ಮಹಾಸ್ವಾಮೀಜಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಆಗ್ರಹಿಸಿದರು. ಅನ್ನದಾಸೋಹ, ಅಕ್ಷರ ದಾಸೋಹ, ಜ್ಞಾನ ದಾಸೋಹದ ಮೂಲಕ ವಿಶ್ವದಾದ್ಯಂತ ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪರಮಪೂಜ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಪರಮಪೂಜ್ಯರಿಗೆ ಭಾರತರತ್ನ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ಈ ಹಿಂದೆ ಹಲವಾರು ಬಾರಿ ಒತ್ತಾಯ ಮಾಡಿದ್ದರೂ ಈವರೆಗೂ ನೀಡದೇ ಇರುವುದು ದುರಾದುಷ್ಟಕರ. ಈಗಲಾದರೂ ಪರಮಪೂಜ್ಯ ಶ್ರೀಗಳ ಸಾಧನೆಯನ್ನು ಗುರುತಿಸಿ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ನೀಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ತುಮಕೂರು: ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ನಡುವೆ ಇರುವ ಸಾಮರಸ್ಯದ ಕೊರತೆಯಿಂದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಅಧ್ಯಕ್ಷೆ ಡಾ: ಶಾಲಿನಿ ರಜನೀಶ್ ಬೇಸರ ವ್ಯಕ್ತಪಡಿಸಿದರು. ನಗರದ ಬಾರ್‍ಲೈನ್ ರಸ್ತೆಯಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸಿಸಿ ರಸ್ತೆ, ಚರಂಡಿ ಹಾಗೂ ಪಾದಚಾರಿ ಮಾರ್ಗ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಪಾಲಿಕೆಯಲ್ಲಿರುವ ನಗರದ ನಕ್ಷೆಯನ್ನು ಅವಲೋಕಿಸಿದ ನಂತರ ಕಾಮಗಾರಿಗಳನ್ನು ಯೋಜಿತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ತಿಳಿಸಿದರು. ಸಿಸಿ ರಸ್ತೆಯೊಂದನ್ನು ಪರಿಶೀಲಿಸುತ್ತಾ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಕ್ರಮ ಸರಿಯಲ್ಲ. ಇದರಿಂದ ಯೋಜನೆಯ ಹಣ ಪೋಲಾಗುತ್ತದೆಯಲ್ಲದೆ ಕಾಮಗಾರಿಯನ್ನು ದೀರ್ಘ ಕಾಲ ಕೈಗೊಳ್ಳುವುದರಿಂದ ಜನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಎಂದು ತಿಳಿಸಿದರು. …