ತುಮಕೂರು : ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಫೆಬ್ರುವರಿ 1 ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1.50ರೂ.ಗಳಷ್ಟು ಹೆಚ್ಚಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದರು. ಸರ್ಕಾರಿ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 22 ರೂ.ಗಳನ್ನು ನೀಡುತ್ತಿದ್ದು, ಫೆಬ್ರುವರಿ 1ರಿಂದ 23.50 ರೂ.ಗಳಿಗೆ ಹೆಚ್ಚಿಸಲಾಗುವುದು. ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ದಿನವೊಂದಕ್ಕೆ 10.30ಲಕ್ಷ ರೂ.ಗಳಷ್ಟು ಹೆಚ್ಚುವರಿ ಖರ್ಚು ಬರಲಿದೆ. ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಮಾತ್ರ ಈ ದರವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಇದಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಹಾಲು ಉತ್ಪಾದಕ ಸದಸ್ಯರುಗಳ 70ಸಾವಿರ ರಾಸುಗಳಿಗೆ 5ಕೋಟಿ ರೂ. ವೆಚ್ಚದಲ್ಲಿ ವಿಮಾ ಸೌಲಭ್ಯ ಒದಗಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ ಹಾಲು…
Author: News Desk Benkiyabale
ತುಮಕೂರು: ಕುಷ್ಠರೋಗ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂದಿನಿಂದ ಜನವರಿ 13ರವರೆಗೆ ಕುಷ್ಠ ರೋಗ ಅರಿವು ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಡಾ: ಪ್ರೇಮ್‍ಕುಮಾರ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಕುಷ್ಠರೋಗ ಅರಿವು ಆಂದೋಲನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ 72 ಕುಷ್ಠ ರೋಗ ಪ್ರಕರಣಗಳು ನೋಂದಣಿಯಾಗಿದ್ದು, ಡಿಸೆಂಬರ್ ಅಂತ್ಯಕ್ಕೆ 67 ಪ್ರಕರಣಗಳಿಗೆ ಔಷಧೋಪಚಾರ ಮಾಡಲಾಗಿದೆ ಎಂದು ತಿಳಿಸಿದರು. ಆಂದೋಲನ ಕಾರ್ಯಕ್ರಮಕ್ಕೆ ನಿಯೋಜಿಸಿರುವ ಅಧಿಕಾರಿಗಳು ಕಾರ್ಯಕ್ರಮಕ್ಕೆ ಕೈಜೋಡಿಸಿ ಸಹಕರಿಸಬೇಕೆಂದು ಸೂಚಿಸಿದರಲ್ಲದೆ ಕುಷ್ಠರೋಗ ನಿವಾರಣೆ ಕುರಿತಂತೆ ಗ್ರಾಮಸಭೆ, ಶಾಲಾ ಮಕ್ಕಳೊಂದಿಗೆ ಕ್ವಿಜ್ ಕಾರ್ಯಕ್ರಮ, ಅಂಗನವಾಡಿ ಕೇಂದ್ರ, ಸ್ವಸಹಾಯ ಸಂಘಗಳೊಂದಿಗೆ ಅರಿವು ಕಾರ್ಯಕ್ರಮಗಳನ್ನು ನಡೆಸಲು ತಾಕೀತು ಮಾಡಿದರು. ಸಭೆಯಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|| ಸನತ್‍ಕುಮಾರ್, ಜಿಲ್ಲಾ ಆಶಾ ಮೇಲ್ವಿಚಾರಕಿ ಆರ್. ಯಶೋಧ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ…
ತುಮಕೂರು : ರಾಜ್ಯದಲ್ಲಿ ಸಣ್ಣ ಕೈಗಾರಿಕೆಯಿಂದಲೇ ಶೇ.60ರಷ್ಟು ಉದ್ಯೋಗ ಸೃಷ್ಟಿ ಹಾಗೂ ಶೇ. 40ರಷ್ಟು ಜಿ.ಎಸ್.ಟಿ. ಸಂಗ್ರಹವಾಗುತ್ತಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಧಾರವಾಡದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್)ದ ವತಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿಂದು ಏರ್ಪಡಿಸಿದ್ದ 6 ದಿನಗಳ ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಯುವಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕೈಗಾರಿಕಾ ಇಲಾಖೆಯಿಂದ ದೊರೆಯುವ ಸಾಲ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸಹಾಯಧನಕ್ಕಾಗಿಯೇ ಸಾಲವನ್ನು ಪಡೆಯಬಾರದು. ಇಲಾಖೆಯು ಸ್ವಯಂ ಉದ್ಯೋಗ ಕೈಗೊಳ್ಳಲು ನೀಡುವ ಸಾಲ ಸೌಲಭ್ಯದಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಸಾಲ ಸೌಲಭ್ಯವನ್ನು ಒಂದೇ ಕುಟುಂಬದವರು ಪಡೆಯದೆ ಇತರೆ ಬಡ ಕುಟುಂಬದ ನಿರುದ್ಯೋಗಿಗಳಿಗೆ ಅವಕಾಶ ಮಾಡಿಕೊಡಬೇಕು. ದುಡಿಯುವ ಕೈಗಳಿಗೆ ಮಾತ್ರ ಸಾಲ…
ತುಮಕೂರು: ನಗರದ ಸಿದ್ದಗಂಗಾ ಮಠದಲ್ಲಿ ಜ.31 ರಂದು ನಡೆಯಲಿರುವ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ,ಶ್ರೀ ಶಿವಕುಮಾರಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಒಂದು ಲಾರಿ ಹಾಗು ಒಂದು ಟೆಂಪೋ ಎರಡು ಲೋಡ್ ಅಕ್ಕಿ ಸಮರ್ಪಿಸಿದರು. ಜಿಲ್ಲೆಯ ಮೂಲೆ ಮೂಲೆಗಳಿಂದ ಭಕ್ತರು ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಧವಸ ಧಾನ್ಯ ಅರ್ಪಿಸುತ್ತಿದ್ದಾರೆ ,ಶ್ರೀ ಮಠದ ಪರಮಭಕ್ತರಾಗಿರುವ ಮಾಜಿ ಸಚಿವ ಸಿ ಚನ್ನಿಗಪ್ಪ ಅವರ ಕುಂಟುಂಬ ಮೊದಲಿನಿಂದಲೂ ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಮಂಗಳವಾರ ಕುಟುಂಬದ ಪರವಾಗಿ ಶಾಸಕ ಡಿ ಸಿ ಗೌರೀಶಂಕರ್ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಸಮ್ಮುಖದಲ್ಲಿ ಶ್ರೀ ಮಠಕ್ಕೆ ಅಕ್ಕಿ ಸಮರ್ಪಿಸಿದರು. ಶ್ರೀ ಮಠಕ್ಕೆ ಆಗಮಿಸಿದ ಶಾಸಕ ಡಿ ಸಿ ಗೌರೀಶಂಕರ್ ಸಿದ್ದಗಂಗಾಶ್ರೀಗಳ ಆಶೀರ್ವಾದ ಪಡೆದು ಪುಣ್ಯಸ್ಮರಣೆ ಕಾರ್ಯಕ್ರಮದ ಸಿದ್ದತೆಗಳ ಕುರಿತಾಗಿ ಶ್ರೀಗಳ ಜೊತೆ ಸಮಾಲೋಚಿಸಿದರು. ಬಳಿಕ…
ದೆಹಲಿ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ (ಜೂನ್ 03, 1930 – ಜನವರಿ 29, 2019) ಮಂಗಳವಾರ ಬೆಳಿಗ್ಗೆ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಅವರು ಅಲ್ಝಮೈರ್(ಮರೆವಿನ ಕಾಯಿಲೆ) ಕಾಯಿಲೆಯಿಂದ ಬಳಲುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದ ಫರ್ನಾಡಿಸ್ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಾಮಾಜಿಕ ಹೋರಾಟಕ್ಕೆ ಧುಮುಕಿದ್ದರು. ಮೂಲತಃ ಮಂಗಳೂರಿನವರಾದ ಜಾರ್ಜ್ ಫರ್ನಾಂಡಿಸ್ 1930 ಜೂನ್ 3 ರಂದು ಜನಿಸಿದ್ದರು.
ಮೈಸೂರು: ನಮ್ಮ ಕ್ಷೇತ್ರದ ಎಂಎಲ್‌ಎ ಆದ ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ಕೈಗೆ ಸಿಗೋದಿಲ್ಲ. ನಮ್ಮ ಕೆಲಸ ಹೇಗೆ ಮಾಡಿಸೋದು? ಎಂದು ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಮಹಿಳೆಯೋರ್ವರು ಟೇಬಲ್ ಕುಟ್ಟಿ ಆವಾಜ್ ಹಾಕಿದ ಘಟನೆ ನಡೆದಿದೆ. ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ತಮ್ಮ ಊರಿನ ಸಮಸ್ಯೆ ಕುರಿತು ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಮಲಾರ್ ಹಾಗೂ ಮಹಿಳೆಯೋರ್ವರು ವಿವರಿಸುತ್ತಿದ್ದರು. ಇದೇ ವೇಳೆ ಮಹಿಳೆಯೋರ್ವರು ನಿಮ್ಮ ಮಗ ಹಾಗೂ ಎಂಎಲ್‌ಎ ಯತೀಂದ್ರ ಊರಿಗೆ ಬರುವುದಿಲ್ಲ. ಕೈಗೂ ಸಿಗುವುದಿಲ್ಲ, ನಮ್ಮ ಸಮಸ್ಯೆ ಕೇಳುವವರಿಲ್ಲ ಎಂದು ಎದುರಿನ ಟೇಬಲ್ ಕುಟ್ಟಿದರು. ಮಹಿಳೆ ವರ್ತನೆ ಕಂಡು ಕೆಂಡಮಂಡಲರಾದ ಸಿದ್ದರಾಮಯ್ಯ ಸಮಸ್ಯೆ ಹೇಳುತ್ತಿದ್ದ ಆಕೆಯ ಬಳಿಯಿಂದ ಮೈಕ್ ಕಿತ್ತುಕೊಂಡರು. ಅಲ್ಲದೇ ಮಹಿಳೆಯ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಇದರೊಟ್ಟಿಗೆ ಮಾಜಿ ಸಿಎಂ…
ಸಂವಿಧಾನದ ಆಶಯಗಳು ಎಲ್ಲರಿಗೂ ತಿಳಿಯಬೇಕು ಮತ್ತು ವೈಚಾರಿಕತೆ ವಿಸ್ತರಣೆಯಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್.ಜಗದೀಶ್ ಅಭಿಪ್ರಾಯಪಟ್ಟರು. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನಜಾಗೃತಿ ಆಂದೋಲನ ಮತ್ತು ಸಂವಿಧಾನ ಪ್ರೀತಿ ಕಲಾಬಳಗ ವತಿಯಿಂದ ತುಮಕೂರಿನ ರೈಲ್ವೆ ನಿಲ್ಧಾಣದ ಸಮೀಪ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಲಾಜಾಥಾದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಿಧಾನ ಪ್ರೀತಿ ಕಲಾಬಳಗದ ಕಲಾವಿದರು ಸಂವಿಧಾನದ ಆಶಯಗಳೇನೆಂಬುದನ್ನು ಬೀದಿನಾಟಕದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟಿದ್ದಾರೆ. ಬೀದಿನಾಟಕ ಪರಿಣಾಮಕಾರಿ ಸಾಧನವಾಗಿದೆ. ಇದಕ್ಕಾಗಿ ಕಲಾತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು. ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಮಾತನಾಡಿ, ಸಂವಿಧಾನ ಅಳವಡಿಸಿಕೊಂಡು 70 ವರ್ಷಗಳ ನಂತರ ಸಂವಿಧಾನದ ಆಶಯಗಳನ್ನು ಜನರಿಗೆ ತಿಳಿಸಬೇಕಾದಂತಹ ಸನ್ನಿವೇಶ ಬಂದಿರುವುದು ವಿಷಾದನೀಯ. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪ್ರಾಥಮಿಕ ವಿಷಯಗಳನ್ನು ತಿಳಿಸುವ ನಿಟ್ಟಿನಲ್ಲಿ ಪಠ್ಯದಲ್ಲಿ ಅಳವಡಿಸಬೇಕು. ಕೇವಲ…
ಚಿಕ್ಕನಾಯಕನಹಳ್ಳಿ: 2 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯವನ್ನು ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು. ಪಟ್ಟಣದ ಪ್ರವಾಸಿ ಮಂದಿರದ ಹಿಂಭಾಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸಿರುವ ನೂತನವಾಗಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿ 18 ಕೊಠಡಿಗಳಲ್ಲಿ 16 ಕೊಠಡಿಗಳಲ್ಲಿ 50 ಜನ ವಿದ್ಯಾರ್ಥಿನಿಯರು ವಾಸ ಮಾಡಬಹುದು 16 ಕೊಠಡಿಗಳು ಶೌಚಾಲಯ ಸಹಿತ ಕೊಠಡಿಗಳಾಗಿದ್ದು, ಈಗಿರುವ ವಸತಿ ನಿಲಯ ಚಿಕ್ಕದಾಗಿತ್ತು. ನೂತನವಾಗಿ ನಿರ್ಮಿಸಿರುವ ವಸತಿ ನಿಲಯ ಸುಸಜ್ಜಿತವಾಗಿದ್ದು, ಅಡುಗೆ ಮನೆ ಸೇರಿದಂತೆ ಮೂಲ ಸೌಕರ್ಯಗಳನ್ನು ಹೊಂದಿದೆ. ವಸತಿ ನಿಲಯವನ್ನು ಸ್ವಚ್ಛವಾಗಿಟ್ಟುಕೊಂಡು ಉತ್ತಮ ವಿದ್ಯಾಭ್ಯಾಸ ಮಾಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಳಮ್ಮ, ಆರ್.ರಾಮಚಂದ್ರಯ್ಯ, ತಾ.ಪಂ ಸದಸ್ಯ ಕೇಶವಮೂರ್ತಿ, ತಹಶಿಲ್ದಾರ್ ತೇಜಸ್ವಿನಿ ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಹಳೇಮನೆ ಶಿವನಂಜಪ್ಪ, ಬಿ.ಸಿ.ಎಮ್ ಇಲಾಖಾಧಿಕಾರಿ ಶಿವರಾಜ್.…
ತುಮಕೂರು : ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯ ಲೋಕಸಭಾ ಕ್ಷೇತ್ರದ ಜನರ ಬೇಡಿಕೆಗನುಗುಣವಾಗಿ ಸಂಸದರ ನಿಧಿಯನ್ನು ಸದ್ವಿನಿಯೋಗಿಸಲಾಗಿದೆ ಎಂದು ಎಂದು ಲೋಕಸಭಾ ಸದಸ್ಯ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು. ನಗರದ ದೇವರಾಯ ಪಟ್ಟಣ ಬಡಾವಣೆಯಲ್ಲಿಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ದಿನ ಪಾಲಿಕೆ ವ್ಯಾಪ್ತಿಯ 23 ಕಡೆ ಕುಡಿಯುವ ನೀರಿನ ಘಟಕ, ಹೈಮಾಸ್ಡ್ ಲೈಟ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು. ಕೇಂದ್ರದಿಂದ 5 ವರ್ಷಗಳ ಅವಧಿಗಾಗಿ ಸಂಸದರ ನಿಧಿಗೆ 25ಕೋಟಿ ರೂ. ಗಳ ಅನುದಾನ ಹಂಚಿಕೆಯಾಗಿದ್ದು, ಈ ಅನುದಾನದ ಪ್ರತಿಯೊಂದು ಪೈಸೆಯನ್ನು ಜನೋಪಯೋಗಿ ಕಾರ್ಯಗಳಿಗೆ ಮಾತ್ರ ಖರ್ಚು ಮಾಡಲಾಗಿದೆ. ಲೋಕಸಭಾ ಸದಸ್ಯರ ನಿಧಿಯಿಂದ ಕೈಗೊಂಡಿರುವ ಕಾಮಗಾರಿಗಳು ಹಾಗೂ ವೆಚ್ಚದ ವಿವರಗಳ ಮಾಹಿತಿ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇನೆ ಎಂದು ತಿಳಿಸಿದ ಅವರು, ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಜನರ…
ತುರುವೇಕೆರೆ: ಅರಳೀಕೆರೆ ಗ್ರಾಮದಲ್ಲಿನ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದು ಶಾಸಕ ಮಸಾಲೆ ಜಯರಾಮ್ ತಿಳಿಸಿದರು. ತಾಲೂಕಿನ ಅರಳೀಕೆರೆ ಗ್ರಾಮದಲ್ಲಿ 25ಲಕ್ಷರೂಪಾಯಿ ವೆಚ್ಚದಲ್ಲಿನ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಅರಳೀಕೆರೆ ಗ್ರಾಮದಲ್ಲಿ ಈಗಾಗಲೇ ಕೆಲ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿವೆ ಉಳಿದಂತಿರುವ ಮಣ್ಣುರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಡಿಸಿ ಪಟ್ಟಣಕ್ಕೆ ಹೊಂದಿರುವ ಅರಳೀಕೆರೆ ಗ್ರಾಮದ ಅಭಿವೃದ್ದಿಗೆ ಶ್ರಮಿಸುತ್ತೇನೆ, ಗ್ರಾಮಗಳ ಅಭಿವೃದ್ದಿಯಾದರೆ ಮಾತ್ರ ತಾಲೂಕಿನ ಸಮರ್ಗ ಅಭಿವೃದ್ದಿ ಸಾಧ್ಯ ಈ ನಿಟ್ಟಿನಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮವನ್ನು ಅಭಿವೃದ್ದಿಗೊಳಿಸಲಾಗುವುದು ಹಳ್ಳಿಗಳಿಗೆ ಅಗತ್ಯವಿರುವ ಮೂಲಬೂರ ಸೌಕರ್ಯಗಳಿಗೆ ಒತ್ತುಕೊಟ್ಟು ಹಂತ ಹಂತವಾಗಿ ಹಳ್ಳಿಗಳ ಅಭಿವೃದ್ದಿಯೊಂದಿಗೆ ತಾಲೂಕಿನ ಅಭಿವೃದ್ದಿ ಮಾಡುತ್ತೇನೆಂದು ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಜಿಲ್ಲಾಪಂಚಾಯಿತಿ ಸದಸ್ಯೆ ರೇಣುಕಾಕೃಷ್ಣಮೂರ್ತಿ, ಮಾದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೊಮ್ಮಲಿಂಗಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶಿವಶಂಕರ್, ಅರಳೀಕೆರೆ ಶಿವಯ್ಯ, ಇತರರು ಇದ್ದರು.