ತುರುವೇಕೆರೆ: ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು ಪೋಸ್ಟ್‍ಮ್ಯಾನ್ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಶಾಸಕ ಮಸಾಲೆ ಜಯರಮ್ ತಿಳಿಸಿದರು. ತಾಲೂಕಿನ ಅರಿಶಿನದಹಳ್ಳಿ ಗ್ರಾಮದಲ್ಲಿನ ನೂತನ ಅಂಗನವಾಡಿ ಕಟ್ಟಡವನ್ನು ಉಧ್ಘಾಟನೆಗೊಳಿಸಿ ಮಾತನಡಿದ ಅವರು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಹಾಗೂ ಸಾಮಾನ್ಯ ಜನರೊಂದಿಗಿನ ಕೊಂಡಿಯಂತೆ ವರ್ತಿಸಬೇಕು ಸರ್ಕಾರ ಮಕ್ಕಳಿಗೆ ನೀಡುವ ಗುಣಮಟ್ಟದ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಮಕ್ಕಳಿಗೆ ನೀಡಬೇಕು ಅರಿಶಿನದಹಳ್ಳಿಯಲ್ಲಿ ನಿರ್ಮಾಣವಾಗಿರುವ ಅಂಗನವಾಡಿ ಕಟ್ಟಡ ಬಹಳ ಸುಸರ್ಜಿತ ರೀತಿಯಲ್ಲಿದ್ದು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ನಾನು ಶಾಸಕನಾದ ನಂತರ ಮೊದಲ ಬಾರಿಗೆ ಈ ಗ್ರಾಮಕ್ಕೆ ಬೇಟಿ ನೀಡುತ್ತಿದ್ದೇನೆ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಹಾಗೂ ಅರಳೀಕೆರೆಯಿಂದ ಅರಿಶಿನದಹಳ್ಳಿವರೆಗೆ ಸಂಪರ್ಕ ಕಲ್ಪಿಸಲು ಡಾಂಬರು ರಸ್ತೆಯನ್ನು ಇನ್ನೆರಡು ತಿಂಗಳೊಳಗಾಗಿ ನಿರ್ಮಾಣಮಾಡುತ್ತೇನೆ ತಾಲೂಕಿನ ಸಮರ್ಗ ಅಭಿವೃದ್ದಿ ನನ್ನಲ್ಲಿದ್ದು ನಾನು ನಿಮ್ಮ ಒಡನಾಡಿಯಾಗಿ ಕೆಲಸ ಮಾಡುತ್ತೇನೆ ಎಂದರು. …
Author: News Desk Benkiyabale
ತುಮಕೂರು: ರಾಷ್ಟ್ರೀಕರಣಗೊಂಡಿದ್ದ ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ರೈತರ ಸ್ಥಿತಿ ಡೋಲಾಯಮಾನವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಎನ್.ಶಿವಣ್ಣ ಆರೋಪಿಸಿದರು. ನಗರದಲ್ಲಿ ಪಕ್ಷದ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಪೋರೇಟ್ ಕಂಪನಿಗಳು ರೈತರ ಫಲವತ್ತಾದ ಕೃಷಿ ಜಮೀನಿನ ಮೇಲೆ ಕಣ್ಣಿಟ್ಟಿದ್ದು, ಕಾರ್ಮಿಕರ ಹೋರಾಟದ ಪ್ರತಿಫಲವಾಗಿ ರೂಪುಗೊಂಡಿದ್ದ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಶಿಕ್ಷಣ ವ್ಯವಸ್ಥೆ ಖಾಸಗಿ ವ್ಯಕ್ತಿಗಳ ಕೈಗೆ ಸಿಲುಕಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದಕ್ಕದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಭವ್ಯಭಾರತ ಪ್ರಪಂಚದೆಲ್ಲೆಡೆ ಪ್ರಕಾಶಿಸುತ್ತಿದ್ದರು ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಇನ್ನು ಬದುಕುವ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿಯಿದೆ. ಒಂದು ಕಡೆ ರಾಷ್ಟ್ರದ ಸಂಪತ್ತು ಕೆಲವೇ ಮಂದಿ ಕೊಳ್ಳೆಯೊಡೆಯುತ್ತಿದ್ದು, ದುಡಿಯುವ ವರ್ಗ ಬೀದಿಗೆ ಬಿಳಬೇಕಾದ ಸ್ಥಿತಿಯಲ್ಲಿ ಜಾತಿ ದೌರ್ಜನ್ಯ, ಕೋಮು ವೈಷಮ್ಯಗಳ…
ತುಮಕೂರು: ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಬಗ್ಗೆ ಆಲೋಚಿಸಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ. ಅಂತಹ ಜನಪ್ರತಿನಿಧಿಗಳಲ್ಲಿ 5ನೇ ವಾರ್ಡ್‍ನ ಕಾಪೋರೇಟರ್ ಎನ್.ಮಹೇಶ್ ಸಹ ಒಬ್ಬರಾಗಿದ್ದು, ತಮ್ಮ ವಾರ್ಡ್‍ನ ಜನರಿಗಾಗಿ ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಸಂಸದ ಮುದ್ದ ಹನುಮೇಗೌಡ ತಿಳಿಸಿದ್ದಾರೆ. ನಗರದ 5ನೇ ವಾರ್ಡ್‍ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಸಂಸದ ಮುದ್ದ ಹನುಮೇಗೌಡ ಮಾತನಾಡಿದ ಅವರು, ಜನರಿಗೆ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಜನರ ಬಳಕೆ ಮುಕ್ತಮಾಡಬೇಕಿದ್ದು, ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಸೂಚನೆ ನೀಡಿದರು. ಮುಂಜಾನೆ ಗೆಳೆಯರ ಬಳಗದ ಗೌರವಾಧ್ಯಕ್ಷ ಕರಾಟೆ ಕೃಷ್ಣಮೂರ್ತಿ ಅವರು, ಅಮಾನಿಕೆರೆಗೆ ಶೀಘ್ರವಾಗಿ ಹೇಮಾವತಿ ನೀರನ್ನು ಹರಿಸುವ ಮೂಲಕ ಸುತ್ತಮುತ್ತಲಿನ ಕೊಳವೆಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಹಾಗೂ ರಸ್ತೆ ಅಭಿವೃದ್ಧಿ, ಈಜುಕೊಳ ಮುಂತಾದ…
ತುಮಕೂರು: ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ ಅವರು ಕಲ್ಲು ಗಣಿಗಾರಿಕೆ ಮಾಲೀಕರಿಂದ ೨೫ ಲಕ್ಷ ರೂ. ಹಫ್ತ ವಸೂಲಿ ಮಾಡಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದ್ದಾರೆ. ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಡಿ.ಸಿ.ಗೌರಿಶಂಕರ ಅವರು ಮತ್ತು ಅವರ ಹಿಂಬಾಲಕರಾದ ಹರಳೂರು ಗ್ರಾಮದ ರುದ್ರೇಶ ಮತ್ತು ಸಂಗಡಿಗರು ದಿನಾಂಕ 16-01-2019 ರಂದು ರಾತ್ರಿ 8.30 ಇಂದ 9 ಗಂಟೆ ಸಮಯದಲ್ಲಿ ನಂದಿಹಳ್ಳಿ ಗ್ರಾಮದ ಸರ್ವೆ ನಂಬರ್ 42 ರಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಸ್ಥಳಕ್ಕೆ ಅಕ್ರಮವಾಗಿ ನುಗ್ಗಿ ಕಲ್ಲು ದಿಮ್ಮಿ ತುಂಬಿದ್ದ 6 ಲಾರಿಗಳನ್ನು ಅಡ್ಡಗಟ್ಟಿ ಚಾಲಕರಿಗೆ ಬಾಟಲ್ ತೋರಿಸಿ ತಿವಿಯುವುದಾಗಿ ಬೆದರಿಸಿ ಅದೇ ಚಾಲಕರಿಂದ ಗ್ರಾನೈಟ್ ಮಾಲೀಕರಿಗೆ ಪೋನು ಮಾಡಿಸಿದ ಶಾಸಕರು ಗ್ರಾನೈಟ್ ಮಾಲೀಕರಿಗೆ ರೂ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ. ಈ ವಿಷಯಕ್ಕೆ ಗ್ರಾನೈಟ್ ಮಾಲಿಕರು ಹಣ ನೀಡಲು…
ತುಮಕೂರು: ಲಿಂಗೈಕ್ಯ ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಸರ್ಕಾರದ ವತಿಯಿಂದ ಕಾರ್ಯಕ್ರಮವೊಂದನ್ನು ರೂಪಿಸಲು ಬರುವ ಆಯವ್ಯಯದಲ್ಲಿ ಮಂಡಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು. ಮಠಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲಿಂಗೈಕ್ಯ ಪರಮ ಪೂಜ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿಯವರ ಅವರ ನೆನಪು ಉಳಿಯುವಂತಹ ಸರ್ಕಾರದಿಂದ ಯಾವುದಾದರೊಂದು ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡಲು ಬರುವ ಆಯವ್ಯಯದಲ್ಲಿ ಮಂಡಿಸಬೇಕೆಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು. ಶ್ರೀಗಳು ಲಿಂಗೈಕ್ಯರಾಗಿ ಇಂದಿಗೆ 5 ದಿನಗಳು ಕಳೆದಿದ್ದು, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಮಾಡಿರುವ ಶ್ರೀಗಳಂತಹ ಪುಣ್ಯ ಪುರುಷರು ಮತ್ತೊಮ್ಮೆ ಸಾರ್ವಜನಿಕ ಬದುಕಿನಲ್ಲಿ ಹುಟ್ಟಿ ಬರಲು ಸಾಧ್ಯವಿಲ್ಲ. ಅವರ ಕಾಲಘಟ್ಟದಲ್ಲಿ ಬದುಕಿದ್ದೆವು ಎನ್ನುವುದು ನಮ್ಮೆಲ್ಲರ ಭಾಗ್ಯ.…
ತುಮಕೂರು: ಪ್ರಾಥಮಿಕ ಶಿಕ್ಷಣ ಸಚಿವರ ನೇಮಕ ಸೇರಿದಂತೆ ವಿವಿಧ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸಚಿವರಿಲ್ಲದೇ ಶಿಕ್ಷಣ ಇಲಾಖೆ ನಿರ್ಜೀವವಾಗಿದ್ದು ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ, ಪರೀಕ್ಷೆಗಳು ಹತ್ತಿರವಾಗುತ್ತಿದ್ದರು, ಶಿಕ್ಷಣ ಸಚಿವರನ್ನು ನೇಮಿಸದೇ ರಾಜ್ಯ ಸರ್ಕಾರ ಶಿಕ್ಷಣ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದು, ಕಳೆದ ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಈ ಭಾರೀ ಪರೀಕ್ಷೆಗಳು ಸಮೀಪಿಸುತ್ತಿದ್ದರು, ಇಲಾಖೆಗೆ ಸಚಿವರಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮಹಮ್ಮದ್ ತಪ್ಸೀರ್ ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರಾಜಕೀಯ ಕಚ್ಚಾಟದಿಂದ ಶಿಕ್ಷಣ…
ತುರುವೇಕೆರೆ: ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ ಅಧ್ಯಕ್ಷತೆಯಲ್ಲಿ ಶುಕ್ರವಾರ 2019-20ನೇ ಸಾಲಿನ 11.15.35.000ಕೋಟಿ ಆಯ-ವ್ಯಯವನ್ನು ಮಂಡಿಸಲಾಯಿತು. ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಬಜೆಟ್ ಸಭೆ ಫ್ರಾರಂಭವಾದ ನಂತರ ನಾಲ್ಕನೇ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್ ಬಜೆಟ್ ಪ್ರತಿ ಹಿಡಿದು ಸಭೆಯಲ್ಲಿ ವಿವರವಾಗಿ ಮಂಡಿಸಿದರು. 2019-20ನೇ ಸಾಲಿನ ಒಟ್ಟು ನಿರೀಕ್ಷಿತ ಆದಾಯ 11.29.00.585ಕೋಟಿ ರೂಪಾಯಿಗಳಾಗಿದ್ದು, 11.15.35.000ಕೋಟಿ ವಿವಿಧ ಕಾರ್ಯಗಳಿಗೆ ಖರ್ಚುಮಾಡುವ ಯೋಜನೆಯಿದ್ದು, 13.65.585.ಲಕ್ಷರೂಪಾಯಿಗಳು ಉಳಿತಾಯವಾಗಲಿದೆ ಎಂದು ತಿಳಿಸಿದರು. ನಂತರ ಆರಂಭಗೊಂಡ ಬಜೆಟ್ ಮೇಲಿನ ಕರ್ಚ-ವೆಚ್ಚದ ಚರ್ಚೆಯಲ್ಲಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ಹಲವು ವರ್ಷಗಳಿಂದ ನೆಲಗುದಿಗೆ ಬಿದ್ದಿರುವ ವಾಣಿಜ್ಯ ಸಂಕೀರ್ಣ ಮುಂದುವರಿದ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಬಜೆಟ್‍ನಲ್ಲಿ 1.90.00.000ರೂಪಾಯಿಗಳು ಮೀಸಲಿಟ್ಟಿರುವುದು ಸಂತಸದ ವಿಚಾರ. ಕಾಮಗಾರಿ ಪೂರ್ಣಗೊಳಿಸಲು ನಾನು ಸರ್ಕಾರದಿಂದ ಹೆಚ್ಚುವರಿ ಕಾಮಗಾರಿ ಬಿಡುಗಡೆ ಗೊಳಿಸುತ್ತೇನೆ ಎಂದು ಭರವಸೆ ನೀಡಿದರು.…
ತುರುವೇಕೆರೆ: ಪಟ್ಟಣ ಪಂಚಾಯಿತಿ ಬಜೆಟ್ ಸಭೆಯ ಮುಕ್ತಾಯಕ್ಕೂ ಮುನ್ನ ಸದಸ್ಯರುಗಳ ಸಲಹೆಯನ್ನು ಕೇಳದೆ ಮತ್ತು ಪಟ್ಟಣ ಪಂಚಾಯಿತಿಗೆ ಮೊದಲ ಬಾರಿಗೆ ಆಗಮಿಸಿದ ತಹಶೀಲ್ದಾರ್‍ಗೆ ಸ್ವಾಗತ ಕೋರದೆ ಹಾಗೂ ಸಭೆಯಲ್ಲಿ ವಂದನಾರ್ಪಣೆ ಮಾಡದೆ ಸಭೆಯನ್ನು ಅತುರಾತುರವಾಗಿ ಮುಕ್ತಾಯಕ್ಕೆ ಮುಂದಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಶಾಸಕರು ಶಿಷ್ಠಾಚಾರದ ಪಾಠ ಮಾಡಿದರು. ಬಜೆಟ್ ಸಭೆಯಲ್ಲಿ ತಹಶೀಲ್ದಾರ್ ನಯೀಮ್ ಉನ್ನೀಸ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಬಸುಮ್, ಸದಸ್ಯರುಗಳಾದ ಶಶಿಶೇಕರ್, ಕೆ.ಟಿ.ಶಿವಶಂಕರ್, ಶ್ರೀನಿವಾಸ್, ನದೀಂ, ನವ್ಯಪ್ರಕಾಶ್, ಮಾನಸಪ್ರಸನ್ನ, ನೇತ್ರಾವತಿ ರಂಗಸ್ವಾಮಿ, ರುದ್ರೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮುಂಜುಳಾದೇವಿ, ಇಂಜಿನಿಯರ್ ಸತ್ಯನಾರಯಣ್, ಸಿಬ್ಬಂದಿವರ್ಗ ಹಾಜರಿದ್ದರು.
ತುಮಕೂರು: ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ, ಬಸವ ಪ್ರಶಸ್ತಿ ಪುರಸ್ಕøತರಾದ ಲಿಂಗೈಕ್ಯ ಡಾ: ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸ್ಮರಣೆ ಸಮಾರಂಭವನ್ನು ಜನವರಿ 31ರ ಬೆಳಿಗ್ಗೆ 10.30 ಗಂಟೆಗೆ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಸಲಾಗುವುದು ಎಂದು ಸಿದ್ಧಗಂಗಾ ಮಠದ ಶ್ರೀಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು. ಮಠದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನವರಿ 21ರಂದು ಪ್ರಾತಃಕಾಲ 11.44 ಸಮಯದಲ್ಲಿ ಲಿಂಗೈಕ್ಯರಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭವನ್ನು 11ನೇ ದಿನವಾದ ಜ.31ರಂದು ಮಠದ ಆವರಣದಲ್ಲಿರುವ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುತ್ತೂರು ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಸಿರಿಗೆರೆಯ ತರಳಬಾಳು ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಡಾ: ಶ್ರೀಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀಶ್ರೀ ನಿರ್ಮಲಾನಂದನಾಥ…
ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ಕೊಡುವಂತೆ ಜೆಡಿಎಸ್ ವರಿಷ್ಠರಿಗೆ ಅಲ್ಪಸಂಖ್ಯಾತರ ಘಟಕದ ನಗರ ಕಾರ್ಯದರ್ಶಿ ಮಖ್‍ದುಲ್ ಅಲಿ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಮೇಯರ್ ಸ್ಥಾನವು ಬಿಸಿಎಂ(ಎ) ಮಹಿಳೆಗೆ ಮೀಸಲಾಗಿದ್ದು, 29ನೇ ವಾರ್ಡಿನಿಂದ ಗೆದ್ದಿರುವ ನಾಜಿಮಾ ಬಿ ಇಸ್ಮಾಯಿಲ್ ಹಾಗೂ 21ನೇ ವಾರ್ಡಿನಿಂದ ಗೆದ್ದಿರುವ ಲಲಿತಾ ರವೀಶ್ ನಡುವೆ ಪೈಪೋಟಿ ಇದ್ದು, ಈ ಹಿಂದೆ 2013ರಲ್ಲಿ ಈಗಾಗಲೇ ಲಲಿತಾ ರವೀಶ್ ಅವರು ಮೇಯರ್ ಆಗಿರುವ ಕಾರಣದಿಂದಾಗಿ ಈ ಭಾರೀ ಅಲ್ಪಸಂಖ್ಯಾತ ಮಹಿಳೆಗೆ ಅವಕಾಶ ನೀಡುವಂತೆ ವರಿಷ್ಠರಿಗೆ ಈಗಾಗಲೇ ಮೌಖಿಕವಾಗಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದಂತೆ ತುಮಕೂರು ಮಹಾನಗರ ಪಾಲಿಕೆಯಲ್ಲಿಯೂ ಆಡಳಿತ ನಡೆಸಲು ಎರಡು ಪಕ್ಷಗಳು ಮುಂದಾಗಿದ್ದು, ಜೆಡಿಎಸ್ ಮೇಯರ್ ಸ್ಥಾನವನ್ನು, ಕಾಂಗ್ರೆಸ್ ಉಪಮೇಯರ್ ಸ್ಥಾನವನ್ನು ಹಂಚಿಕೆ ಮಾಡಿಕೊಳ್ಳಲು ಮಾತುಕತೆ ನಡೆದಿವೆ, 2013ರ ಮತಗಳಿಕೆಗೆ ಹೋಲಿಕೆ ಮಾಡಿದರೆ 2018ರ ಚುನಾವಣೆಯಲ್ಲಿ…