Author: News Desk Benkiyabale

 ತುಮಕೂರು:       ಕಳೆದ 10 ವರ್ಷಗಳಿಂದ ನಗರದಲ್ಲಿ ನಿರಂತರವಾಗಿ ಸಾಹಿತ್ಯ,ಸಂಗೀತ,ನಾಡು, ನುಡಿ, ಭಾರತೀಯ ಸಂಸ್ಕøತಿಯ ವಿಚಾರವಾಗಿ ಉಪನ್ಯಾಸಗಳನ್ನು ಏರ್ಪಡಿಸುತ್ತಾ ಬಂದಿರುವ ಜ್ಞಾನಬುತ್ತಿ ಸತ್ಸಂಗ ಕೇಂದ್ರದ 500ನೇ ಕಾರ್ಯಕ್ರಮ 2019ರ ಫೆಬ್ರವರಿ 05 ರಂದು ಸೋಮೇಶ್ವರಪುರಂನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಲಾಗಿದೆ ಎಂದು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಪಿ.ಶಾಂತಿಲಾಲ್ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು,ಪ್ರತಿ ಮಂಗಳವಾರ ವಿದ್ಯಾವಾಹಿನಿ ಕಾಲೇಜಿನಲ್ಲಿ,ಗುರುವಾರ ಸಾಯಿಬಾಬಾ ದೇವಾಲಯದಲ್ಲಿ ಮತ್ತು ಭಾನುವಾರಗಳಂದು ರಾಮದೇವರ ಬೆಟ್ಟದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುತಿದ್ದು,ಇದು ಗಿನ್ನಿಸ್ ದಾಖಲೆ ಸೇರಿದೆ.ಇದರ 500 ನೇ ಕಾರ್ಯಕ್ರಮವನ್ನು ಸಹ ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದು,ಫೆಬ್ರವರಿ 05 ರಂದು ವಾಸವಿ ದೇವಾಲಯದಲ್ಲಿ ಕುಮಾರವ್ಯಾಸ ಭಾರತ ಕಾವ್ಯದಲ್ಲಿರುವ ನವರಸಗಳು ಎಂಬ ವಿಷಯ ಕುರಿತು ಗಮಕ ಕಲೆಯನ್ನು ಪ್ರದರ್ಶಿಸುವ ಕಾರ್ಯಕ್ರಮವಿದೆ.ಕೆಲ ಸಮಾನ ಮನಸ್ಕ ಗೆಳೆಯರೊಂದಿಗೆ ಕಟ್ಟಿದ ಈ ಸಂಸ್ಥೆ ಇಂದು…

Read More

ತುಮಕೂರು:       ಗಂಡು ಹೆಣ್ಣೆಂಬ ತಾರತಮ್ಯ ತೋರದೆ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ತಿಳಿಸಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ಜಿಲ್ಲಾ ಬಾಲಭವನ ಸಂಘಗಳ ಸಹಯೋಗದಲ್ಲಿಂದು ನಗರದ ಸೆಂಟ್‍ಮೇರಿಸ್ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಹೆಣ್ಣು ಮಕ್ಕಳ ಲಿಂಗಾನುಪಾತ 1000ಕ್ಕೆ 943 ಇದ್ದು, ಇದನ್ನು ಸರಿದೂಗಿಸವ ಹಾಗೂ ಹೆಣ್ಣು ಮಗುವಿನ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.       ಕಾರ್ಯಕ್ರಮ ಉದ್ದೇಶಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿರ್ದೇಶಕ ನಟರಾಜ್ ಮಾತನಾಡಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರದ ಭೇಟಿ-ಬಚಾವೋ, ಭೇಟಿ-ಪಡಾವೋ ಜೊತೆಗೆ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ, ಉದ್ಯೋಗಿನಿ ಮುಂತಾದ…

Read More

ತುಮಕೂರು:         ಸಿದ್ದಗಂಗಾ ಶ್ರೀಗಳ ಲಿಂಗಶರೀರ ಗದ್ದುಗೆ ಬಂದು ತಲುಪಿದೆ. ಬಳಿಕ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ  ಸಲ್ಲಿಸಲಾಯಿತು.ಶ್ರೀಗಳ ಲಿಂಗಶರೀರಕ್ಕೆ ರಾಷ್ಟ್ರಧ್ವಜವನ್ನ ಹೊದಿಸಿ ಕುಶಾಲ ತೋಪುಗಳನ್ನ ಹಾರಿಸಲಾಯಿತು.         ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಲಕ್ಷಾಂತರ ಭಕ್ತರು ಅಂತಿಮ ದರ್ಶನ ಪಡೆದ ಬಳಿಕ ಶ್ರೀಗಳ ಲಿಂಗ ಶರೀರದ ಮೆರವಣಿಗೆ ನಡೆಯಿತು. ಲಿಂಗ ಶರೀರವನ್ನ ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿಕೊಂಡು ಹಳೇ ಮಠದ ಕ್ರಿಯಾ ಸಮಾಧಿವರೆಗೆ ಮೆರವಣಿಗೆ ಮಾಡಲಾಯಿತು. ಸದ್ಯ ಲಿಂಗಶರೀರ ಕ್ರಿಯಾ ಸಮಾಧಿ ಬಳಿ ತಲುಪಿತು.        ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಡಿಸಿಎಂ ಡಾ.ಜಿಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಸಚಿವರಾದ ಡಿಕೆ ಶಿವಕುಮಾರ್, ಸಾರಾ ಮಹೇಶ್, ಆರ್​ವಿ ದೇಶಪಾಂಡೆ, ವೆಂಕಟರಾವ್ ನಾಡಗೌಡ, ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಡಿಸಿಎಂ ಆರ್​.ಅಶೋಕ್, ಶಾಸಕರಾದ ವಿ.ಸೋಮಣ್ಣ, ಸುರೇಶ್ ಕುಮಾರ್, ಲಕ್ಷ್ಮಿ…

Read More

ತುಮಕೂರು:       ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಸೋಮವಾರ ಶಿವೈಕ್ಯರಾಗಿದ್ದು, ಇಂದು ಅವರ ಕ್ರಿಯಾ ಸಮಾಧಿಯ ವಿಧಿ ವಿಧಾನಗಳು ವೀರಶೈವ ಲಿಂಗಾಯಿತ ಆಗಮೋಕ್ತ ರೀತಿಯಲ್ಲಿ ನಡೆಯಲಿದೆ.        ಲಿಂಗ ಶರೀರವನ್ನ ರುದ್ರಾಕ್ಷಿ ಮಂಟಪದಲ್ಲಿ ಕೂರಿಸಿಕೊಂಡು ಹಳೇ ಮಠದ ಕ್ರಿಯಾ ಸಮಾಧಿವರೆಗೆ ಮೆರವಣಿಗೆ ಮಾಡಲಾಯಿತು. ಸದ್ಯ ಪಾರ್ಥೀವ ಶರೀರ ಕ್ರಿಯಾ ಸಮಾಧಿ ಬಳಿ ತಲುಪಿದ್ದು, ಸಕಲ ಸರ್ಕಾರಿ ಗೌರವಗಳು ನಡೆಯುತ್ತಿದೆ. ಇನ್ನೇನು ಕೆಲ ವೇ ಹೊತ್ತಿನಲ್ಲಿ ಅಂತಿಮ ವಿಧಾನ ಆರಂಭವಾಗಲಿದೆ.       ಮೊದಲಿಗೆ ಪಾರ್ಥಿವ ಶರೀರಕ್ಕೆ ಅಂತಿಮಪುಣ್ಯ ಸ್ನಾನ ಮಾಡಿಸಲಾಗುತ್ತದೆ. ನಾಡಿನ ಪುಣ್ಯ ನದಿಗಳಿಂದ ತರಿಸಿರುವ ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಿ ಹೊಸ ಕಷಾಯ ವಸ್ತ್ರಗಳನ್ನು ಧಾರಣೆ ಮಾಡಿಸಲಾಗುತ್ತದೆ. ನಂತರ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರಿಗೆ ಪಟ್ಟಾಧಿಕಾರ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಲಾಗುತ್ತದೆ.       ಈ ವೇಳೆ ಶ್ರೀಗಳ ಕೈಯಲ್ಲಿ ಇಷ್ಟ ಲಿಂಗವನ್ನು…

Read More

ತುಮಕೂರು:        ನಡೆದಾಡುವ ದೇವರು ಡಾ.ಶಿವಕುಮಾರ ಶ್ರೀಗಳಿಗೆ ಭಾರತರತ್ನ ಮಾತ್ರವಲ್ಲ ವಿಶ್ವರತ್ನ ಪ್ರಶಸ್ತಿ ಕೊಟ್ಟರೂ ಕಡಿಮೆಯಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು. ತುಮಕೂರು ನಗರದ ಅಮಾನಿಕೆರೆ ಬಳಿ ಇರುವ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮಠದ ಭಕ್ತರು ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೀಗೆ ಭಾರತರತ್ನ ಪ್ರಶಸ್ತಿಯನ್ನು ನೀಡಿ ಸ್ವಾಮೀಜಿಯವರನ್ನು ಕುಬ್ಜರನ್ನಾಗಿ ಮಾಡುತ್ತಿದ್ದಾರೆ ಎನಿಸುತ್ತದೆ. ಹಾಗಾಗಿ ಶ್ರೀಗಳಿಗೆ ಯಾವ ಪ್ರಶಸ್ತಿ ನೀಡಿದರೂ ಅದು ಕಡಿಮೆಯೇ ಆಗುತ್ತದೆ ಎಂದು ಹೇಳಿದರು.       ಶ್ರೀಗಳು ಯಾವುದೇ ವಿದೇಶಕ್ಕೆ ಹೋಗಲಿಲ್ಲ. ಪ್ರಶಸ್ತಿಯ ಹಿಂದೆ ಬೀಳಲಿಲ್ಲ. ಆದರೂ ಅವರನ್ನು ಅರಸಿಕೊಂಡು ಹಲವು ಪದವಿಗಳು ಬಂದಿವೆ. ವಿಶ್ವದ ಯಾವುದೇ ನಾಯಕರು ನಿರ್ಗಮಿಸಿದ ಸಂದರ್ಭದಲ್ಲಿಯೂ ಇಷ್ಟೊಂದು ಜನರು ಸೇರಿರಲಿಲ್ಲ. ಆದರೆ ಶ್ರೀಗಳ ನಿರ್ಗಮನದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಬಂದು…

Read More

 ತುಮಕೂರು:      ನಗರದ ಟಿಪ್ಪುನಗರ ಮುಖ್ಯರಸ್ತೆಯ ಮಾರಿಮುತ್ತು ದೇವಸ್ಥಾನದ ಹಿಂಭಾಗ ತುಮಕೂರು ಜಿಲ್ಲಾ ಅಂತಾರಾಷ್ಟ್ರೀಯ ಮಾನವ ಹಕ್ಕು ಕಾರ್ಯ ಸಮಿತಿಯನ್ನು ಉದ್ಘಾಟಿಸಲಾಯಿತು.      ಐ.ಹೆಚ್.ಆರ್.ಎ.ಸಿ. (International Human Rights Action Committee) ಅಂತಾರಾಷ್ಟ್ರೀಯ ಮಾನವಹಕ್ಕು ಕಾರ್ಯ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸ್ಥಾಪಕ ಎಂ. ರಾಜಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ವಿಧಿಸಲಾಗಿರುವ ಕಾನೂನುಗಳು ಯಾವು ಮೇಲು ಕೀಳುಗಳಿಲ್ಲದೆ ಎಲ್ಲರಿಗೂ ಅನ್ವಯವಾಗುತ್ತವೆ. ಕಾನೂನಿನ ಮುಂದೆ ಯಾರೂ ದೊಡ್ಡವರೂ ಅಲ್ಲ ಚಿಕ್ಕವರೂ ಅಲ್ಲ. ಮಾನವ ಸ್ವತಂತ್ರವಾಗಿ ಬದುಕಲು ಕಾನೂನು ಹಾಗೂ ನಿಯಮ ನಿಬಂಧನೆಗಳನ್ನು ರಚಿಸಲಾಗಿದೆ. ಆದರೆ, ಕೆಲವೊಮ್ಮೆ ಸಮಾಜಘಾತುಕರಿಂದ ಹಾಗೂ ಮೋಸಗಾರರ ದಬ್ಬಾಳಿಕೆದಾರರ ಕುತಂತ್ರ ಹಾಗೂ ಕಾನೂನು ತಿರುಚುವಿಕೆಯಿಂದ ಅಮಾಯಕರು ನರಳಾಡುವಂತಾಗಿದೆ. ಆದ್ಧರಿಂದ ಸರ್ವರೂ ಸಂವಿಧಾನದಲ್ಲಿ ಮಾನವನಿಗಾಗಿ ನೀಡಲಾಗಿರುವ ಮೂಲಭೂತ ಹಕ್ಕುಗಳ ಬಗ್ಗೆ ಅರಿಯುವುದು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬರಿಗೂ ಕಾನೂನಿನ ಅರಿವಿನ ನೆರವು ನೀಡುವುದು ಹಾಗೂ ಅವಶ್ಯಕತೆ ಇರುವಲ್ಲಿ ಮಾನವಹಕ್ಕುಗಳ…

Read More

ತುಮಕೂರು:        ಇಹಲೋಕದ ಹಂಗು ತೊರೆದು ಸಾಗಿರುವ ಸಿದ್ದಗಂಗಾ ಶ್ರೀಗಳ ಕ್ರಿಯಾದಿಗಳು ಕಾರ್ಯ ಮಂಗಳವಾರ (ಜನವರಿ 22) ಸಂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಗುರುವಿನಂತೆ ಶಿಷ್ಯರ ಅಂತಿಮ ವಿಧಿ ವಿಧಾನ:       ತಮ್ಮ ಗುರು ಶ್ರೀ ಶ್ರೀ ಶ್ರೀ ಉದ್ದಾನ‌ ಶಿವಯೋಗಿಗಳಿಗೆ ಯಾವ ರೀತಿಯಲ್ಲಿ ಅಂತಿಮ ವಿಧಿ ವಿಧಾನ ಪೂರೈಸಲಾಗಿರುತ್ತದೋ ಅದೇ ರೀತಿಯಲ್ಲಿ ತಮ್ಮ ಕ್ರಿಯಾ ವಿಧಾನ ಮಾಡಬೇಕೆಂದು ಶ್ರೀಗಳು ಬರೆದಿಟ್ಟಿದ್ದು ಅದೇ ರೀತಿಯಲ್ಲಿ, ಅವರು ಇಚ್ಛೆಪಟ್ಟ ಜಾಗದಲ್ಲಿಯೇ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಕ್ರಿಯಾ ಸಮಾಧಿ ಕಾರ್ಯಗಳಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 15-20 ಶ್ರೀಗಳ ಸಮ್ಮುಖದಲ್ಲಿ ಕ್ರಿಯಾ ಸಮಾಧಿ ಕಾರ್ಯ ನೆರವೇರಲಿದೆ.          ತಮ್ಮ ಗುರು ಶ್ರೀ ಶ್ರೀ ಶ್ರೀ ಉದ್ದಾನ‌ ಶಿವಯೋಗಿಗಳ  ರೀತಿಯಲ್ಲಿ ಅಂತಿಮ ವಿಧಿ ವಿಧಾನ ಪೂರೈಸಲಾಗಿರುತ್ತೋ ಅದೇ ರೀತಿಯಲ್ಲಿ ತಮ್ಮ ಕ್ರಿಯಾ ವಿಧಾನ ಮಾಡಬೇಕೆಂದು ಶ್ರೀಗಳು ಬರೆದಿಟ್ಟಿದ್ದು ಅದೇ ರೀತಿಯಲ್ಲಿ, ಅವರ ಸ್ವಯಿಚ್ಚೆಯಂತೆ ಅವರ…

Read More

 ತುಮಕೂರು:       ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜ.22) ತುಮಕೂರಿಗೆ ಆಗಮಿಸುತ್ತಿದ್ದಾರೆ.      ನಾಳಿನ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿರುವ ಅವರು, ಮಠಕ್ಕೆ ಆಗಮಿಸಿ, ಶ್ರೀಗಳ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.      ಇಂದು ಸಂಜೆ ವೇಳೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರೂ ಮಠಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Read More

ತುಮಕೂರು:        ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆಯಲು ಭಕ್ತಸಾಗರವೇ ಹರಿದುಬರುತ್ತಿದೆ.       ರಾಜ್ಯ ಮಾತ್ರವಲ್ಲದೇ, ದೇಶದ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತರು, ಗಣ್ಯರು ಸ್ವಾಮೀಜಿಯ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ದರ್ಶನ ಪಡೆದಿದ್ದು, ಸುಮಾರು 10 ಲಕ್ಷ ಭಕ್ತರು ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ.       ಸ್ವಾಮೀಜಿ ಅಂತಿಮ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ, ಗಣ್ಯರಿಗೆ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸರತಿ ಸಾಲಿನಲ್ಲಿ ನಿಂತು ಅಪಾರ ಸಂಖ್ಯೆಯ ಭಕ್ತರು ಸ್ವಾಮೀಜಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.       ವಿವಿಧ ಮಠಾಧೀಶರು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಗೃಹಸಚಿವ ಎಂ.ಬಿ. ಪಾಟೀಲ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅಪಾರ ಸಂಖ್ಯೆಯ…

Read More

ತುಮಕೂರು:       ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ.       ಲಿಂಗೈಕ್ಯರಾದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿ ಅವರ ಪಾರ್ಥಿವ ಶರೀರವನ್ನು ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ಗೋಸಲ ಸಿದ್ದೇಶ್ವರ ವೇದಿಕೆಗೆ ತರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.       ಶ್ರೀಗಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುವಾಗುವಂತೆ ಶಾಲಾ ಕಾಲೇಜುಗಳು ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.        ಮಠಕ್ಕೆ ಆಗಮಿಸಲು ರಾಷ್ಟ್ರೀಯ ಹೆದ್ದಾರಿ-4 ಒಂದೇ ಸಂಚಾರಿ ಮಾರ್ಗವಿದ್ದು, ಸಂಚಾರವನ್ನು ಸುಗಮವಾಗಿಸಲು ರಸ್ತೆ ಮಾರ್ಗವನ್ನು ಬದಲಾಯಿಸಲಾಗಿದೆ. ಪೂನಾ, ಶಿರಾ ಮಾರ್ಗದ ಕಡೆ ಹೋಗುವ ವಾಹನಗಳನ್ನು ಡಾಬಸ್‍ಪೇಟೆ ಜಂಕ್ಷನ್‍ನಿಂದ ಹಾಗೂ ಶಿವಮೊಗ್ಗ ಕಡೆ ಹೋಗುವ ವಾಹನಗಳಿಗೆ ನೆಲಮಂಗಲ ಜಂಕ್ಷನ್‍ನಿಂದ ಡೈವರ್ಟ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ-4ನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು, ವಿವಿಧ ಗಣ್ಯ ಮಹೋದಯರು ಸಂಚರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಖಾಸಗಿ,…

Read More