Author: News Desk Benkiyabale

  ತುರುವೇಕೆರೆ:       ರಸ್ತೆಯ ಅಗಲೀಕರಣಕ್ಕೆ ಕ್ಷಣಗಣನೆ ಎಣಿಸುತ್ತಿರುವ ದಬ್ಬೇಘಟ್ಟ ರಸ್ತೆಯನ್ನು ರಸ್ತೆ ಮಧ್ಯಭಾಗದಿಂದ ಎರಡೂ ಬದಿ ತಲಾ 50 ಅಡಿ ತೆರವುಗೊಳಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ವಿಶ್ವಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮುಂದಿನ 50 ವರ್ಷಗಳ ಗುರಿಯನ್ನು ಹೊಂದಿ ರಸ್ತೆ ಅಗಲೀಕರಣಕ್ಕೆ ಜಿಲ್ಲಾ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಕೆಲವು ಪಟ್ಟಭದ್ರಾಹಿತಾಸಕ್ತಿಗಳು ರಸ್ತೆ ಅಗಲೀಕರಣಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ರಸ್ತೆಗಳ ಅಕ್ಕಪಕ್ಕದ ಮರಗಳ ತೆರವು ಕಾರ್ಯಾಚರಣೆ ಮಾಡುವ ಸಂಧರ್ಭದಲ್ಲಿ ಸುಮ್ಮನಿದ್ದವರು ತಮ್ಮ ಕಟ್ಟಡಗಳನ್ನು ಉಳಿಸಿಕೊಳ್ಳಲು ಮುಂದಾಗಿರುವುದು ವಿಪರ್ಯಾಸ.       ವಾಸ್ತವವಾಗಿ ಜಿಲ್ಲಾ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಕನಿಷ್ಠ 25 ಮೀಟರ್ ರಸ್ತೆ ಅಗಲೀಕರಣವಾಗಬೇಕು ಎಂಬ ನಿಯಮವಿದೆ. ಆದರೆ ಸದ್ಯ ದಬ್ಬೇಘಟ್ಟ ರಸ್ತೆ ನಿರ್ಮಾಣದ ವೇಳೆ ರಸ್ತೆಯ ಮಧ್ಯಭಾಗದಿಂದ ಕನಿಷ್ಠ 50 ಅಡಿಯನ್ನಾದರೂ…

Read More

ಚಿಕ್ಕನಾಯಕನಹಳ್ಳಿ :        ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರತಿಯೊಬ್ಬರಿಗೂ ಸೂರು ಎನ್ನುವ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಕಲ್ಲೇನಹಳ್ಳಿ ಬಳಿ ನೂತನವಾಗಿ ಎರಡು ಎಕರೆಯಲ್ಲಿ 400ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಲಾಗುವುದು ಎಂದು ಸಾಯಿರಾಂ ಹೌಸಿಂಗ್ ಕಂಪನಿಯ ನಿರ್ದೇಶಕ ವಿವೇಕಾನಂದ ಶೆಟ್ಟಿ ತಿಳಿಸಿದರು.       ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ವಸತಿ ಸಮುಚ್ಚಯ ಆಸ್ಪತ್ರೆಗಳು ನಿರ್ಮಾಣ ಮಾಡಿದ್ದೇವೆ ವಸತಿ ಸಮುಚ್ಛಯ ನಿರ್ಮಿಸಲು ಒಟ್ಟು 7.25 ಸಾವಿರ ಬೆಲೆಯಲ್ಲಿ ಮನೆಗಳು ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾಋ 2.65 ಲಕ್ಷರೂ ಸಬ್ಸಿಡಿ ನೀಡುತ್ತಿದೆ ಉಳಿದ ಹಣವನ್ನು ಬ್ಯಾಂಕ್‍ಗಳ ಮೂಲಕ ಸಾಲದ ರೂಪದಲ್ಲಿ ಹಣ ನೀಡುತ್ತಿದ್ದು, ಇದಕ್ಕೆ ಬ್ಯಾಂಕ್ ಖಾತೆ ಹಾಗೂ ಆಧಾರ್‍ಕಾರ್ಡ್ ಇದ್ದರೆ ಸಾಕು ವಸತಿ ರಹಿತರಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಈ ಯೋಜನೆ ಮಾರ್ಚ್‍ನಲ್ಲಿ…

Read More

ಗುಬ್ಬಿ :        ಕೆಲ ದುಷ್ಟಶಕ್ತಿಗಳು ಈ ಸಮಾಜವನ್ನು ಒಡೆಯುವ ಹಂತದಲ್ಲಿದ್ದು ಈಗಲಾದರೂ ಸಮಾಜವನ್ನು ಮುನ್ನಡೆಸುವ ಪ್ರಯತ್ನ ಯುವಜನಾಂಗದ ಮೇಲಿದೆ ಎಂದು ರಾಜ್ಯ ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸಮಾಜದ ಯುವಕರಿಗೆ ಎಚ್ಚರಿಕೆ ನೀಡಿದರು.       ನಿಟ್ಟೂರು ಹೋಬಳಿಯ ಬಾಗೂರು ಗೇಟ್‍ನ ಸಮೀಪವಿರುವ ಬೆಟ್ಟದಹಳ್ಳಿ ಗವೀಮಠದಿಂದ ಆಯೋಜಿಸಲಾದ 846ನೇ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಧರ್ಮ ಜಾಗೃತಿಗಾಗಿ ಅನೇಕ ಸಂತರುಗಳು ತಮ್ಮ ಜೀವಿತಾವಧಿಯನ್ನು ಕಳೆದಿದ್ದು ಈ ನೆಲದಲ್ಲಿ ನಡೆದಾಡುವ ದೇವರಾದ ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳ ಆರ್ಶೀವಾದವಿದ್ದು ಇಲ್ಲಿಯವರೆಗೂ ನಡೆದಂತಹ ಜಯಂತೋತ್ಸವಕ್ಕಿಂತ ಲಕ್ಷಾಂತರ ಭಕ್ತರನ್ನು ಜಯಂತೋತ್ಸವದ ಅಧ್ಯಕ್ಷರಾದ ಚಂದ್ರಶೇಖರ ಮಹಾಸ್ವಾಮಿಗಳ ಅಪಾರ ನಂಬಿಕೆ ಹಾಗೂ ರಾಜ್ಯದ ಮಠಾಧೀಶರುಗಳ ಆರ್ಶೀವಾದದಿಂದ ಇಂತಹ ಅಭೂತಪೂರ್ವ ಜಯಂತೋತ್ಸವವನ್ನು ಆಚರಿಸುತ್ತಿರುವುದು ಈ ಸಮಾಜದ ಒಳಿತಿಗಾಗಿ ಎಂದು ತಿಳಿಸಿದರು.       ಈ ರಾಜ್ಯದಲ್ಲಿ ಈ ಸಮಾಜದ ಮುಖಂಡರುಗಳು ಯಾರು ನಾಯಕರಾಗಬಾರದೆಂಬ ಕಲ್ಪನೆ ಕೆಲವರಲ್ಲಿದೆ. ರಾಜ್ಯದ…

Read More

ತುಮಕೂರು:       ಈ ಬಾರಿಯ ಜನವರಿ 26ರಂದು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆ ಹಾಗೂ ಆಕರ್ಷಕವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.       ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜನವರಿ 26ರಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಧ್ವಜಾರೋಹಣ ಮಾಡುವ ಸ್ಥಳದ ಸುತ್ತಮುತ್ತ ಜನವರಿ 20ರೊಳಗಾಗಿ ಸುಣ್ಣ ಬಣ್ಣ ಬಳಿದು ಸ್ವಚ್ಛತೆ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರ ನಿಲಯ, ವಸತಿ ನಿಲಯ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡುವುದು ಮೂಲಭೂತ ಕರ್ತವ್ಯವಾಗಿದ್ದು, ಸಂಬಂಧಿಸಿದವರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.       ಗಣರಾಜ್ಯೋತ್ಸವವನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದ ವಿವಿಧ…

Read More

ತುಮಕೂರು:       ಸ್ಮಾರ್ಟ್‍ಸಿಟಿ ಯೋಜನೆ ಯಲ್ಲಿ 2 ಬಸ್ ನಿಲ್ದಾಣ ಹಾಗೂ ಬಸ್ ಡಿಪೋಗಳನ್ನು 175 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು. ಅವರಿಂದು ನಗರಕ್ಕೆ ಭೇಟಿ ನೀಡಿ ಬಸ್ ನಿಲ್ದಾಣ ಹಾಗೂ ಡಿಪೋ ವೀಕ್ಷಿಸಿ ಮಾತನಾಡುತ್ತಿದ್ದರು.ನಾಲ್ಕೂವರೆ ಎಕರೆ ಜಾಗದಲ್ಲಿರುವ ಬಸ್ ನಿಲ್ದಾಣ ವನ್ನು ಆಧುನೀಕರಣಗೊಳಿಸಿ ಅದರಲ್ಲಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಮಾಡುವು ದಾಗಿ ತಿಳಿಸಿದ ಅವರು, ಮೂರು ಹಂತದ ಕಟ್ಟಡದಲ್ಲಿ ಕೆಳ ಹಂತದ ಕಟ್ಟಡದಲ್ಲಿ ದುರಸ್ತಿ ವಿಭಾಗ ಹಾಗೂ ಡಿಪೋ ಇರಲಿದ್ದು, ಇನ್ನೊಂದು ಹಂತದ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಅವರು ತಿಳಿಸಿದರು.       ತುಮಕೂರು ನಗರವು ದಿನೇ ದಿನೇ ಬೆಳೆಯುತ್ತಿದ್ದು, ಇಲ್ಲಿ ಸೂಕ್ತವಾದ ಸಾಮಾನ್ಯ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರು ವುದರಿಂದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ನಗರದಲ್ಲಿ ಎಲ್ಲಿಯೂ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ…

Read More

ತುಮಕೂರು:       ಕರ್ನಾಟಕ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಜನರಿಗೆ ಕುಡಿಯುವ ನೀರು, ಜಾನುವಾರುಗಳ ಮೇವು,ಜನರಿಗೆ ಕೆಲಸ ಸೇರಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿರುವ ಕೃಷಿ   ಸಚಿವ ಶಿವಶಂಕರ್‍ರೆಡ್ಡಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ತುಮಕೂರು ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿತು.       ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಬೈರನಹಳ್ಳಿ ಕ್ರಾಸ್‍ಗೆ ಆಗಮಿಸಿದ ತಂಡವನ್ನು ಕಾರ್ಮಿಕ ಸಚಿವ ವೆಂಕಟರವಣಪ್ಪ,ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್,ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶಕುಮಾರ್, ಸಿಇಓ ಅನೀಸ್ ಕೆ.ಜಾಯ್ ಅವರುಗಳು ತಂಡವನ್ನು ಬರ ಮಾಡಿಕೊಂಡರು.       ಬೈರನಹಳ್ಳಿ ಕ್ರಾಸ್‍ನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಲ್ಲಿ ಕೈಗೊಂಡಿರುವ ಗೋಕಟ್ಟೆಯ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ಸಚಿವರು, ಯಂತ್ರೋಪಕರಣಗಳನ್ನು ಬಳಸದೆ,ಮಾನವ ಸಂಪನ್ಮೂಲ ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.       ನಂತರ ಮಧುಗಿರಿ ತಾಲೂಕಿನ ಚನ್ನಸಾಗರ ಗ್ರಾಮದ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಜಾನುವಾರು…

Read More

ತುಮಕೂರು      ಜಿಲ್ಲೆಯಲ್ಲಿ ಮುಂದೆ ಉದ್ಬವಿಸಬಹುದಾದ ಮೇವಿನ ಕೊರತೆ ನೀಗಿಸಲು ಹೊರ ರಾಜ್ಯಗಳಿಂದ ಮೇವು ಖರೀದಿಸುವ ಮುನ್ನ ಜಿಲ್ಲೆಯಲ್ಲಿ ನೀರಾವರಿ ಪ್ರದೇಶಗಳಲ್ಲಿ ಮೇವಿನ ಕಿಟ್ಟು ವಿತರಿಸಿ ಸ್ಥಳೀಯವಾಗಿ ಮೇವು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಕೃಷಿ ಸಚಿವ ಶಿವಶಂಕರ ರೆಡ್ಡಿ ನೇತೃತ್ವದ ಬರಪರಿಹಾರ ಅಧ್ಯಯನಕ್ಕೆ ಆಗಮಿಸಿದ್ದ ಸಚಿವ ಸಂಪುಟದ ಉಪಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.       ತುಮಕೂರು ಜಿಲ್ಲೆಗೆ ಇಂದು ಆಗಮಿಸಿದ್ದ ಕೃಷಿ ಸಚಿವ ಶಿವಶಂಕರರೆಡ್ಡಿ ನೇತೃತ್ವದ ಬರ ಪರಿಹಾರ ಅಧ್ಯಯನ ತಂಡ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮೇವು ಬ್ಯಾಂಕ್ ತೆರೆಯುವ ಬಗ್ಗೆ ಅಧಿಕಾರಿಗಳ ಪ್ರಸ್ತಾಪಕ್ಕೆ ಮೇಲಿನಂತೆ ಸಲಹೆ ನೀಡಿದ ತಂಡ, ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ. ಕೆಲವು ಕಡೆಗಳಲ್ಲಿ ಈಗಾಗಲೇ ನೀಡಿರುವ ಮೇವಿನ ಬೀಜಗಳಿಂದ ಕೆಲವು ರೈತರು ತಮ್ಮ ಗೋವುಗಳಿಗೆ ಆಗುವಷ್ಟು ಮೇವು ಬೆಳೆದುಕೊಂಡಿದ್ದು, ಸರ್ಕಾರದ ನಿಯಮದಂತೆ ಒಂದು ಟನ್‍ಗೆ ಇಷ್ಟು…

Read More

ತುಮಕೂರು:      ದೇವರನ್ನು ನಾವು ಎಲ್ಲಿ ನೋಡಿಲ್ಲ ನೋಡಲು ಸಾಧ್ಯವಿಲ್ಲ , ನಾವು ಏನೇ ಮಾಡಿದರೂ ಆ ಕೆಲಸದಲ್ಲಿ ದೇವರನು ಕಾಣಬಹುದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್ ಭರತ್ ಕುಮಾರ್  ತಿಳಿಸಿದರು.      ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ತುಮಕೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಸೇವಾ ಸಮಿತಿ ಹಾಗೂ ಜಿಲ್ಲಾ ಆಸ್ಪತ್ರೆ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಿಯ ಯುವ ಸಪ್ತಾಹ ಕಾಯಕ್ರಮವನ್ನು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್ ಭರತ್ ಕುಮಾರ್ ಉದ್ಘಾಟಿಸಿ ಮಾತನಾಡಿದರು.       ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದಶಿ ಬಾಬಾಸಾಹೇಬ್ ಎಲ್. ಜಿನರಾಲ್ಕರ್ ಮಾತನಾಡಿ ರಾಷ್ಟ್ರೀಯ ಯುವ ದಿನವಾಗಿ ಸ್ವಾಮಿ ವಿವೇಕಾನಂದರ ದಿನವನ್ನು ಆಚರಿಸುತ್ತಿದ್ದೇವೆ, ಭಾರತೀಯ ಸಂಸ್ಕೃತಿ ಮತ್ತು ವೇದಾಂತಗಳನ್ನು ಪ್ರಪಂಚಕ್ಕೆ ಸಾರಿದ್ದಾರೆ. ವಿವೇಕಾನಂದರು…

Read More

 ತುಮಕೂರು:      ದೇಶದ ಭಾರತೀಯತೆಯ ನೈಜ ಅಂತ:ಸತ್ವವಿರುವುದು ಮೇಲು ಸ್ತರದ ಶ್ರೀಮಂತಿಕೆಯಲ್ಲಿ ಅಲ್ಲ. ಗುಡಿಸಲುಗಳ ಜೊಪಡಿಯಲ್ಲಿ ಎಂದು ಹೇಳಿ “ಅತಿಥಿದೇವೋ ಭವ” “ಮಾತಾಪಿತೃ ದೇವೋಭವ” ಎಂಬ ನಾಣ್ಮುಡಿಗೆ “ದೀನ ದಲಿತ ದರಿದ್ರ ನಾರಾಯಣ ದೇವೋ ಭವ” ಎಂಬ ಹೊಸ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು ಸ್ವಾಮಿ ವಿವೇಕಾನಂದರು ದೀನ ದಲಿತ ಬಡವನ ಏಳ್ಗೆಯೇ ನಿಜವಾದ ದೇವರನ್ನು ನಿರಕ್ಷರಕುಕ್ಷಿಗಳ ಸಂಕಷ್ಟದಲ್ಲಿರುವವರ ಸೇವೆ ಮಾಡುತ್ತ ಕಾಣು ಎಂದು ಕಣ್ಣು ತೆರೆಸಿದವರು ಸ್ವಾಮಿ ವಿವೇಕಾನಂದರು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಆರ್.ಕೆ.ಶ್ರೀನಿವಾಸರವರು ತಿಳಿಸಿದರು.       ಅವರು ಸ್ವಾಮಿವಿವೇಕಾನಂದರ 156ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನಾಚರಣೆಯನ್ನು ಕುರಿತು ಮಾತನಾಡಿದರು.       ದೇಶದಲ್ಲಿರುವ ಅನೇಕ ಕಂದಚಾರಗಳು ನಿರ್ಮೂಲನೆಗಾಗಿ ಸದಾ ಚಿಂತನೆ ಮಾಡುತ್ತಿದ್ದ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರದ ಮಧ್ಯವಿರುವ ಬಂಡೆಯ ಮೇಲೆ ಕುಳಿತು ಧ್ಯಾನಸಕ್ತರಾಗುತಿದ್ದರು. ಭಾರತದ ಶುಭವೇ ನನ್ನ ಶುಭ ಎಂದು ದೇಶಕ್ಕಾಗಿ ಬದುಕುವ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸಿದವರು. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ…

Read More

ನವದೆಹಲಿ:        ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿದ್ದ ಅಲೋಕ್​ ಕುಮಾರ್​ ವರ್ಮ​ ಅವರು ತಮ್ಮ ನೂತನ ಹುದ್ದೆ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.       ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ, ಅಗ್ನಿಶಾಮಕ ವಿಭಾಗದ ಡಿಜಿ ಹುದ್ದೆಗೆ ವರ್ಗಾಯಿಸಿತ್ತು.       ಇನ್ನೊಂದೆಡೆ ಅಲೋಕ್ ವರ್ಮಾ ವರ್ಗಾವಣೆಯುಇಂದ ತೆರವಾದ ಸ್ಥಾನಕ್ಕೆ ಇಂದು ಮತ್ತೆ ಹಂಗಾಮಿ ನಿರ್ದೇಶಕರಾಗಿ ಹೆಚ್ಚುವರಿ ನಿರ್ದೇಶಕ ಎಂ. ನಾಗೇಶ್ವರರಾವ್‌ ನೇಮಕ ಆಗಿದ್ದಾರೆ.        ಈ ಹಿಂದೆ ಕೇಂದ್ರೀಯ ತನಿಇಖಾ ದಳದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದ ತರುವಾಯ ಕೇಂದ್ರ ಸರ್ಕಾರ ಅಲೋಕ್ ವರ್ಮಾ ಹಾಗೂ ಅವರ ಸಹವರ್ತಿ ರಾಕೇಶ್ ಅಸ್ತಾನ ಅವರುಗಳನ್ನು ಸುದೀರ್ಘಾವಧಿಯ ಕಡ್ಡಾಯ ರಜೆ ಮೇಲೆ ಕಳಿಸಿತ್ತು. ಆದರೆ ಸರ್ಕಾರದ ಈ ಕ್ರ್ಮ ಪ್ರಶ್ನಿಸಿ ಅಲೋಕ್…

Read More