Author: News Desk Benkiyabale

ತುಮಕೂರು:       ಸಿದ್ದಗಂಗಾ ಶ್ರೀಗಳಿಗೆ ಉಸಿರಾಟದ ಸಮಸ್ಯೆ ಇದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಎಂ ಮಂಜುನಾಥ್ ತಿಳಿಸಿದ್ದಾರೆ.       ಸಿದ್ದಗಂಗಾ ಶ್ರೀಗಳ ಆರೋಗ್ಯ ತಪಾಸಣೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ ರಾಜ್ಯ ಸರ್ಕಾರದ ನಿರ್ದೇಶನದಂತೆ ನಾವು ಐದು ಜನ ವೈದ್ಯರು ಜಂಟಿಯಾಗಿ ಶ್ರೀಗಳ ತಪಾಸಣೆ ಮಾಡಿ, ಮಾಹಿತಿ ಪಡೆದಿದ್ದೇವೆ ಎಂದರು.       ಶ್ರೀಗಳ ಹೃದಯಬಡಿತ, ರಕ್ತದೊತ್ತಡ ಎಲ್ಲವೂ ಕೂಡ ಸಹಜವಾಗಿದೆ. ಶ್ರೀಗಳ ಶಕ್ತಿ ಕ್ಷೀಣಿಸಿದೆ. ಸ್ವತಹ ಉಸಿರಾಟದ ಶಕ್ತಿಯ ಕೊರತೆ ಇದೆ. ಆದ್ದರಿಂದ ಕೃತಕ ಉಸಿರಾಟದ ವ್ಯವಸ್ಥೆ ಮುಂದುವರೆಸಿದ್ದೇವೆ ಎಂದು ಡಾ.ಎಂ ಮಂಜುನಾಥ್ ತಿಳಿಸಿದ್ದಾರೆ.

Read More

 ತುಮಕೂರು:       ಯುವ ಮಹಿಳೆಯರು ಶಿಕ್ಷಣ,ಸುರಕ್ಷತೆ,ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ಉತ್ತಮ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಮಹಿಳಾ ಕಾಂಗ್ರೆಸ್‍ನ ಯುವ ಘಟಕ “ಪ್ರಿಯದರ್ಶಿನಿ” ಯುವ ಮಹಿಳಾ ಮಣಿಗಳಿಗೆ ಅತ್ಯುತ್ತಮ ಸುರಕ್ಷಿತ ರಾಜಕೀಯ ವೇದಿಕೆ ಎಂದು ಘಟಕದ ರಾಜ್ಯಾಧ್ಯಕ್ಷೆ ಭವ್ಯ ತಿಳಿಸಿದ್ದಾರೆ.       ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,16 ರಿಂದ 35 ವರ್ಷದ ವಯಸ್ಸಿನ ಯುವ ಮಹಿಳಾ ಮನಸ್ಸುಗಳ ದ್ವನಿಗೆ ಪೂರಕವಾಗಿ ಪ್ರಿಯದರ್ಶಿನಿ ವೇದಿಕೆ ಕೆಲಸ ಮಾಡಲಿದೆ.ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 800 ಯುವ ಮಹಿಳೆಯರನ್ನು ಪ್ರಿಯದರ್ಶಿನಿ ವೇದಿಕೆಗೆ ನೊಂದಾಯಿಸಿ,ಅವರ ಮೂಲಕ ಹದಿ ಹರೆಯದ ಮಹಿಳೆಯ ಬೇಡಿಕೆಗಳನ್ನು ತಿಳಿದು,ಅವುಗಳನ್ನು ಸರಕಾರದ ಮುಂದಿಟ್ಟು, ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಿಯದರ್ಶಿನಿ ಕೆಲಸ ಮಾಡಲಿದೆ ಎಂದರು.       ಇಂದಿನ ಪೈಪೋಟಿ ಯುಗದಲ್ಲಿ ಮಹಿಳೆಯರಿಗೆ ಅದರಲ್ಲಿಯೂ ಗ್ರಾಮೀಣ ಮಹಿಳೆಯರಿಗೆ ಪ್ರಪಂಚದ ಎಲ್ಲಾ ಜ್ಞಾನವೂ ಹೆಣ್ಣು ಮಕ್ಕಳಿಗೆ ದೊರೆಯುವಂತೆ ಮಾಡುವುದರ ಜೊತೆಗೆ, ಶಾಲೆಯಿಂದ ಹೊರಗುಳಿವ ವಿದ್ಯಾರ್ಥಿನಿಯರನ್ನು ಪತ್ತೆ…

Read More

 ತುಮಕೂರು:       ಅರಣ್ಯ ಬೆಳೆಸುವ ಮೂಲಕ ಪರಿಸರವನ್ನು ಉಳಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.       ಮಕ್ಕಳಲ್ಲಿ ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ “ಚಿಣ್ಣರ ವನ ದರ್ಶನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಅರಣ್ಯ ಬೆಳೆಸುವ ಹಾಗೂ ಪರಿಸರ ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಅರಣ್ಯ ಪ್ರದೇಶಗಳಾದ ಬನ್ನೇರುಘಟ್ಟ, ಬಂಡೀಪುರ, ನಾಗರಹೊಳೆ ಪ್ರದೇಶಕ್ಕೆ ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿ ಶೈಕ್ಷಣಿಕ ಪ್ರವಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.       ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದೆ ಪರಿಸರದಲ್ಲಿ ವೈಪರಿತ್ಯ ಉಂಟಾಗಿ ಅರಣ್ಯ ನಾಶವಾಗುತ್ತಿದೆ. ನಮ್ಮ ಕಾಲದಲ್ಲಿ ಬಾವಿಗಳಲ್ಲಿ ನೀರನ್ನು ನೋಡುತ್ತಿದ್ದೆವು. ಇಂದಿನ ದಿನಗಳಲ್ಲಿ ಮಕ್ಕಳು ಬಾಟಲ್‍ಗಳಲ್ಲಿ ನೀರನ್ನು ನೋಡುವ ಕಾಲ ಬಂದಿದೆ. ಮುಂದಿನ ಪೀಳಿಗೆಗೆ ಎಂತಹ ಪರಿಸ್ಥಿತಿ…

Read More

ಗುಬ್ಬಿ :       ಸಾಮಾಜಿಕ ನ್ಯಾಯಕ್ಕೆ ವಚನಗಳ ಮೂಲಕ ಬದ್ದತೆ ತೋರಿದ ಶರಣ ಸಿದ್ದರಾಮೇಶ್ವರರ ಜಯಂತೋತ್ಸವ ಅದ್ದೂರಿಗಾಗಿ ಪೂರ್ವ ಸಿದ್ದತೆಯನ್ನು ಸ್ವಯಂ ಸೇವಕರಾಗಿ ನೂರಾರು ಭಕ್ತರೇ ನಡೆಸಿಕೊಡುತ್ತಿದ್ದಾರೆ.       ಬೆಟ್ಟದಹಳ್ಳಿ ಗವಿಮಠದ ನಿರ್ವಹಣೆಯಲ್ಲಿ ನಡೆಯಲಿರುವ 846 ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಶ್ರೀ ಚಂದ್ರಶೇಖರ ಸ್ವಾಮೀಜಿಗಳ ಮಾಗದರ್ಶನದಲ್ಲಿ ಎಲ್ಲಾ ಭಕ್ತರು, ಮುಖಂಡರು ಪಕ್ಷಾತೀತವಾಗಿ ನಡೆಸಿದ್ದಾರೆ. ಜನವರಿ 14 ಮತ್ತು 15 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು 40 ಎಕರೆ ವಿಶಾಲ ಪ್ರದೇಶವನ್ನ ಬಾಗೂರು ಗೇಟ್ ಬಳಿ ಸಿದ್ದಗೊಳಿಸಲಾಗುತ್ತಿದೆ. ವಿಶಾಲವಾದ ಪೆಂಡಾಲ್ 20 ಸಾವಿರ ಆಸನಗಳ ವ್ಯವಸ್ಥೆ ಮಾಡಬಹುದಾಗಿದೆ. ಹೆದ್ದಾರಿ ಬದಿಯಲ್ಲೇ ಇರುವ ಈ ಸ್ಥಳ ಗುಬ್ಬಿ ನಿಟ್ಟೂರು ಮಾರ್ಗ ಮಧ್ಯೆ ಸುತ್ತಲೂ ಶರಣರ ಚಿತ್ರಗಳ ಫ್ಲೆಕ್ಸ್‍ನಿಂದ ಸಜ್ಜಾಗಿದೆ.       ರಾಜ್ಯದ ನಾನಾಭಾಗದಿಂದ 108 ಮಠಾಧೀಶರು ಆಗಮಿಸುವ ಈ ವೇದಿಕೆ ಸಂಪೂರ್ಣ ಶರಣರ ಸ್ಮರಣೆಯಿಂದ ಕೂಡಲಿದೆ. ಎಲ್ಲಾ ಪಕ್ಷದ ಮುಖಂಡರನ್ನೂ ಆಹ್ವಾನಿಸಿ ಗೌರವಿಸುವ…

Read More

ಗುಬ್ಬಿ :       ಶಿಕ್ಷಕ ವರ್ಗದಲ್ಲಿ ಕಾಣುವ ಸೃಜನಶೀಲತೆ ವಿದ್ಯಾರ್ಥಿ ವೃಂದದಲ್ಲಿ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ನಡವಳಿಕೆ ಮುಖ್ಯವಾಗಿದೆ ಎಂದು ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.       ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಚಿಣ್ಣರ ಚಿಲುಮೆ ವಲಯ ಮಟ್ಟದ ನಾಟಕೋತ್ಸವವನ್ನು ಉದ್ಘಾಟಿಸಿದ ಅವರು ಹಣ ಗಳಿಕೆಯಿಂದಲೇ ಸಂತೋಷ ಸಿಗುತ್ತದೆ ಎಂಬ ಕಲ್ಪನೆಯಲ್ಲಿ ಇಂದಿನ ಜನಾಂಗ ಸಂಗೀತ, ಸಾಹಿತ್ಯ, ಕಲೆ ಹಾಗೂ ಕ್ರೀಡೆಯಿಂದ ದೂರವಾಗಿ ಬದುಕಿನ ಸಂತಸದ ಕ್ಷಣಗಳನ್ನು ಕಳೆದುಕೊಂಡಿದ್ದಾರೆ ಎಂದರು.       ರಂಗಭೂಮಿಯಲ್ಲಿ ಸಮಾಜ ನಿರ್ಮಾಣ ಎಂಬ ಅಂಶ ಅಡಗಿದೆ. ಈ ಹಿಂದೆ ನಮ್ಮ ಮನರಂಜನೆಯಾಗಿದ್ದ ನಾಟಕಗಳು ಮುಂದೆ ಜಾಗೃತಿ ಮೂಡಿಸುವ ಉತ್ತಮ ಸಂದೇಶ ಒದಗಿಸುವ ವೇದಿಕೆಯಾಗಿದೆ. ಇಂತಹ ರಂಗಭೂಮಿಯ ಅಭಿರುಚಿಯನ್ನ ಇವತ್ತಿನ ಮಕ್ಕಳಲ್ಲಿ ಮೂಡಿಸಬೇಕಿದೆ. ಈ ಕಾರ್ಯವನ್ನ ಗುಬ್ಬಿ ವೀರಣ್ಣ ಟ್ರಸ್ಟ್ ನಿರಂತರವಾಗಿ ನಡೆಸಿದೆ ಎಂದು ಶ್ಲಾಘಿಸಿದರು.       ಕ್ಷೇತ್ರ ಶಿಕ್ಷಣಾಧಿಕಾರಿ…

Read More

ತುರುವೇಕೆರೆ:       ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಪಟ್ಟಣ ಪಂಚಾಯ್ತಿ ವ್ಯಾಪ್ಯಿಯಿಂದ ಪುರ ಸಭೆ ವ್ಯಾಪ್ತಿಗೇರಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.       ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಗುರುವಾರ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ವಾಣಿಜ್ಯ ಸಂಕೀರ್ಣ ಪೂರ್ಣ ಗೊಳಿಸುವ 1.90 ಲಕ್ಷ ವ್ಯಚ್ಚದ ಕಾಮಗಾರಿಗೆ ಶಾಸಕ ಮಸಾಲ ಜಯರಾಮ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪಟ್ಟಣದ ಸಂರ್ವಾಗೀಣ ಅಭಿವೃದ್ದಿಯೇ ನನ್ನ ದ್ಯೇಯವಾಗಿದೆ. ಪಟ್ಟಣದ ಜನರಿಗೆ ಮೂಲ ಭೂತ ಸೌಕರ್ಯ ಕಲ್ಪಿಸಬೇಕಿದೆ. ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ರಸ್ತೆ, ಒಳಚರಂಡಿ, ಒಂದು ಹೈಟೆಕ್ ಶಾಪಿಂಗ್ ಮಾಲ್ ಮಾಡುವ ಮೂಲಕ ಪಟ್ಟಣ ಅಭಿವೃದ್ದಿ ಪಡಿಸಲಾಗುವುದು. ವಾಣಿಜ್ಯ ಸಂಕೀರ್ಣದಲ್ಲಿ ಸುಸರ್ಜಿತ 52 ಅಂಗಡಿ, ಒಂದು ಹೋಟಲ್ ಮಳಿಗೆ ಸೇರಿ ಮುಂಬಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಪಟ್ಟಣದ ಜನರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ದಿನ ಬಳಕೆಯ ವಸ್ತುಗಳು ಒಂದೇ ಕಡೆ ಸಿಗುವಂತಂಹ ಹೈಟೆಕ್ ಮಾಲ್ ಒಂದು ವರ್ಷದಲ್ಲಿ…

Read More

ತುಮಕೂರು:       ಇತ್ತೀಚೆಗೆ ನಾಪತ್ತೆಯಾಗಿದ್ದ ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.       ಈಶ್ವರ್ (57)) ಮೃತದೇಹ ತುಮಕೂರು ಇಸ್ರೋ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಡಿಸೆಂಬರ್ 9ರಂದು ವಾಯುವಿಹಾರಕ್ಕೆಂದು ಹೊರಟವರು ಮತ್ತೆ ಹಿಂತಿರುಗಿರಲಿಲ್ಲ.       ಈಶ್ವರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರಬೇಕೆಂದು ಶಂಕೆ ವ್ಯಕ್ತವಾಗಿದ್ದು ಪ್ರಾಂಶುಪಾಲರ ನಾಪತ್ತೆ ಮತ್ತು ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.       ವಿಶ್ವವಿದ್ಯಾನಿಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಈಶ್ವರ್ ವಿರುದ್ಧ ಕೆಲ ದಿನಗಳ ಹಿಂದಷ್ಟೇ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.ಅವರ ಸಹೋದ್ಯೋಗಿಗಳೇ ಈ ಆರೋಪ ಹೊರಿಸಿದ್ದರು. ಆದರೆ ಇನ್ನೊಂದೆಡೆ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಸಹೋದ್ಯೋಗಿಗಳ ವಿರುದ್ಧ ಈಶ್ವರ್ ಪೋಷಕರು ಕಿರುಕುಳದ ಆರೋಪ ಮಾಡಿದ್ದಾರೆ.       ಘಟನೆ ಕುರಿತು ತುಮಕೂರು ಹೊಸ ಬಡಾವಣೆ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Read More

 ತುಮಕೂರು:     ಮಹಿಳೆಯರು ಕೇವಲ ಮನೆಕೆಲಸಕ್ಕೆ ಸೀಮಿತವಾಗಿರದೆ ಹೊರಗಿನ ಪ್ರಪಂಚದಲ್ಲಿ ಹೇಗೆ ಜೀವನವನ್ನು ಎದುರಿಸಬೇಕು. ಮತ್ತು ಮಹಿಳೆಯರಿಗೆ ತಾವು ಬೆಳೆಯಲು ತಾವೇ ಮನಸ್ಸು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲತಾ ರವಿಕುಮಾರ್ ರವರು ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.        ಇಂದು ತುಮಕೂರು ನಗರದ ಸಮರ್ಥ್ ಫೌಂಡೇಷನ್ ಕೌಶಲ್ಯಾಭಿವೃದ್ದಿ ಮತ್ತು ತರಬೇತಿ ಕೇಂದ್ರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಚಿತ ಟೈಲರಿಂಗ್ ತರಬೇತಿಯ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.       ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಾರದ ನರಸಿಂಹಮೂರ್ತಿಯವರು ಮಾತನಾಡುತ್ತಾ ನೀವು ತರಬೇತಿಗಷ್ಟೇ ಸೀಮಿತವಾಗದೆ ನೀವು ಕೂಡ ಉದ್ಯಮ ಶೀಲರಾಗಿ ಬೆಳೆಯಬಹುದು ಈ ತರಬೇತಿಯು ನಿಮಗೆ ಒಂದು ಪ್ರಾರಂಭ ಅಷ್ಟೇ ನೀವು ಆರ್ಥಿಕವಾಗಿ ಸಬಲರಾಗಲು ನಿಮಗೆ ಹೊಸ ಹೊಸ ದಾರಿಯನ್ನು ಇದರಿಂದ ಕಂಡುಕೊಳ್ಳಬಹುದು.ಎಂದು ಹೇಳಿದರು.       ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೈಮಗ್ಗ ಮತ್ತು ಜವಳಿ ಇಲಾಖೆಯ…

Read More

 ತುಮಕೂರು :       ಜಿಲ್ಲೆಯು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹಿಂದುಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.       ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿಂದು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್.ಸಿ.ಹೆಚ್., ಜನನಿ ಸುರಕ್ಷಾ, ಎನ್‍ಯುಹೆಚ್‍ಎಂ, ಕೆಪಿಎಂಇ ಮತ್ತು ಪಿಸಿಪಿಎನ್‍ಡಿಟಿ, ಐಸಿಟಿಸಿ ಚಟುವಟಿಕೆಗಳ ಅನುಷ್ಠಾನದಲ್ಲಿ ಜಿಲ್ಲೆಯು ಹಿಂದುಳಿದಿದ್ದು, ಇನ್ನಾದರೂ ಪ್ರಗತಿ ಸಾಧಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸೂಚಿಸಿದರು.       ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ವಾರದೊಳಗೆ ಕ್ರಮ ಕೈಗೊಳ್ಳಬೇಕೆಂದು ಡಿಹೆಚ್‍ಓ ಅವರಿಗೆ ತಾಕೀತು ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 2016ರಲ್ಲಿಯೇ ಸರ್ಕಾರದಿಂದ ಅನುಮೋದನೆ ನೀಡಿದ್ದರೂ ಈವರೆವಿಗೂ ಕಾರ್ಯಗತವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು, ಎಲ್ಲಾ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 5 ತಜ್ಞ ವೈದ್ಯರನ್ನು…

Read More

ನವದೆಹಲಿ:       ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಅನ್ವಯ ಎಂಟನೇ ತರಗತಿವರೆಗೆ ಹಿಂದಿ ಭಾಷೆ ಕಲಿಕೆ ಕಡ್ಡಾಯ ಆಗಲಿದೆ. ಹೊಸ ಶಿಕ್ಷಣ ನೀತಿ ವರದಿ ತಯಾರಿಸಲಾಗಿದ್ದು, ಕೇಂದ್ರಕ್ಕೆ ಸಲ್ಲಿಕೆ ಆಗಲಿದೆ.       ಕೆ.ಕಸ್ತೂರಿ ರಂಗನ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ಶಿಕ್ಷಣ ನೀತಿ ಕುರಿತಾಗಿ ವರದಿ ತಯಾರಿಸಿದ್ದು, ವರದಿ ಜಾರಿಯಾದಲ್ಲಿ ದೇಶದಾದ್ಯಂತ ಎಂಟನೇ ತರಗತಿ ವರೆಗೂ ಹಿಂದಿ ಶಿಕ್ಷಣ ಕಡ್ಡಾಯ ಆಗಲಿದೆ.       ಕೆ.ಕಸ್ತೂರಿರಂಗನ್ ಅವರ ಸಮಿತಿಯು ಭಾರತ ಕೇಂದ್ರಿತ ಶಿಕ್ಷಣ ಪದ್ಧತಿಗೆ ಒತ್ತು ನೀಡುವ ಸಲುವಾಗಿ ಶಿಕ್ಷಣ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಸೂಚಿಸಲಿದೆ. ವ್ಯವಸ್ಥಿತ ಮಾದರಿಯಲ್ಲಿ ಏಕರೂಪದ ಪ್ರಾಥಮಿಕ ಶಿಕ್ಷಣವನ್ನು ದೇಶದಾದ್ಯಂತ ನೀಡುವಂತೆ ಸಹ ವರದಿಯಲ್ಲಿ ಹೇಳಲಾಗಿದೆ.       2018 ರ ಡಿ. 31 ರಂದು ಅವಧಿ ಕೊನೆಗೊಳ್ಳುವ ಮುಂಚೆ ಸಮಿತಿಯು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿತ್ತು. ವರದಿಯನ್ನು ಔಪಚಾರಿಕವಾಗಿ ಹಸ್ತಾಂತರಿಸಲು ಮಾನವ ಸಂಪನ್ಮೂಲ…

Read More