Author: News Desk Benkiyabale

ಬೆಂಗಳೂರು:       ಎಚ್.ಡಿ.ರೇವಣ್ಣ ಸೂಪರ್ ಸಿಎಂ ಅಲ್ಲ, ಅವರು ಕೇವಲ ಸಚಿವರಷ್ಟೇ. ಕಾಂಗ್ರೆಸ್‌ನವರು ಒತ್ತಡ ಹಾಕಲು ಮುಂದಾದರೆ ನಮ್ಮ ದಾರಿ ನಮಗೆ ಎಂದು ಅನವಶ್ಯಕವಾಗಿ ಹೇಳಿಕೆ ನೀಡಿದ್ದಾರೆ ಎಂದು ರೇವಣ್ಣ ಹೇಳಿಕೆಗೆ ಮಾಜಿ ಸಚಿವ ಎಚ್.ಎಂ ರೇವಣ್ಣ ತಿ ರುಗೇಟು ನೀಡಿದ್ದಾರೆ.       ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಡಿ ರೇವಣ್ಣ ಏನೂಸೂಪರ್ ಸಿಎಂ ಅಲ್ಲ ಪರಿಸ್ಥಿತಿ ಮತ್ತು ಮಿತಿಯನ್ನು ಅರಿತು ಮಾತನಾಡಬೇಕು. ಹೈಕಮಾಂಡ್ ನಿರ್ದೇಶನದ ಮೇರೆಗೆ ಕೋಮುವಾದಿ ಪಕ್ಷ ದೂರವಿಡಲು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಆದರೆ ಪಕ್ಷದಲ್ಲಿ ಇದೀಗ ಎಲ್ಲರೂ ಮಾತನಾಡಲು ಆರಂಭಿಸಿದ್ದಾರೆ ಎಂದು ದೂರಿದರು.       ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಜೆಡಿಎಸ್​ ಮತ್ತು ಕಾಂಗ್ರೆಸ್​ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಂದು ರಾಜ್ಯದ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಬೆಂಗಳೂರಿಗೆ ಬರುತ್ತಾರೆ. ಅವರೊಂದಿಗೆ ಚರ್ಚೆ ಮಾಡಿ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ…

Read More

 ತುಮಕೂರು:       ವರದಿಯನುಸಾರ ಜಿಲ್ಲೆಯಲ್ಲಿ 337 ತೀವ್ರ ಅಪೌಷ್ಠಿಕ ಮಕ್ಕಳಿದ್ದು, ಅಂಗನವಾಡಿ ಕೇಂದ್ರಗಳು ಕೂಡಲೇ ಇಂತಹ ಮಕ್ಕಳನ್ನು ಜಿಲ್ಲಾಸ್ಪತ್ರೆಯಲ್ಲಿರುವ “ಪೌಷ್ಠಿಕ ಪುನರ್ವಸತಿ ಕೇಂದ್ರ”(ಓಖಅ)ಕ್ಕೆ ಶಿಫಾರಸ್ಸು ಮಾಡಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗವು ಅಧಿಕಾರಿಗಳಿಗೆ ಸೂಚನೆ ನೀಡಿತು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಷ್ಠಾನ ಕುರಿತಂತೆ ಅಧ್ಯಕ್ಷ ಡಾ: ಎನ್. ಕೃಷ್ಣಮೂರ್ತಿ, ಸದಸ್ಯ ಕಾರ್ಯದರ್ಶಿ ಸುಜಾತ ಹೊಸಮನಿ, ಸದಸ್ಯರಾದ ವಿ.ಬಿ. ಪಾಟೀಲ್, ಡಿ.ಜಿ.ಹಸಬಿ, ಮಂಜುಳಾಬಾಯಿ, ಬಿ.ಎ.ಮಹಮ್ಮದ್ ಅಲಿ ಅವರನ್ನೊಳಗೊಂಡ ಆಯೋಗವು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿತು.       ಆಯೋಗದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಆಹಾರ ಭದ್ರತಾ ಕಾಯ್ದೆಯು ದೇಶದಲ್ಲಿ 2013ರಲ್ಲಿಯೇ ಜಾರಿಗೆ ಬಂದಿದ್ದರೂ, ರಾಜ್ಯದಲ್ಲಿ 2017ರ ಜುಲೈ 5ರಂದು ಆಯೋಗ ರಚನೆಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಆಯೋಗ ಕಾರ್ಯಾರಂಭಿಸಿದ ನಂತರ ರಾಜ್ಯದ ಹಿಂದುಳಿದ ರಾಯಚೂರು, ಬೀದರ್, ಗುಲ್ಬರ್ಗಾ, ಚಾಮರಾಜನಗರ, ಬಿಜಾಪುರ ಜಿಲ್ಲೆ ಸೇರಿದಂತೆ 14 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಂಗನವಾಡಿ…

Read More

ಬೆಂಗಳೂರು:       ಭಾರತಕ್ಕೆ ‘ಬಂದ್’ ಗಳೇನು ಹೊಸತಲ್ಲ. ಒಂದಿಲ್ಲೊಂದು ಕಾರಣಕ್ಕೆ ತಿಂಗಳಿಗೊಂದಾದರೂ ಬಂದ್ ನಡೆಯುವುದು ಮಾಮೂಲು.       ಅಂತೆಯೇ ಇಂದು ಜನವರಿ 8 ಮತ್ತು 9 ರಂದು ಭಾರತ್ ಬಂದ್ ಗೆ ವಿವಿಧ ಕಾರ್ಮಿಕ ಸಂಘಟನೆಗಳು ಕರೆನೀಡಿವೆ. ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ.       ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೂ ಬಂದ್ ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿದ್ದು, ಉಬರ್ ಮತ್ತು ಓಲಾ ಕ್ಯಾಬ್ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?       ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್…

Read More

ತುಮಕೂರು:       ಸಾವಿರ ಮಕ್ಕಳ ತಾಯಿ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಪಣ್ಯ ಸ್ಮರಣ ಅಂಗವಾಗಿ ಜನವರಿ 10 ರ ಬೆಳಗ್ಗೆ 11.30ಕ್ಕೆ ಸೂಲಗಿತ್ತಿ ನರಸಮ್ಮ ನೆನಪುಗಳು ಕವನ ಸಂಕಲನ ಬಿಡುಗಡೆ,ಡಾ.ಸೂಲಗಿತ್ತಿ ನರಸಮ್ಮ ಸ್ಮಾರಕ ಭವನ ಶಂಕುಸ್ಥಾಪನೆ ಸಮಾರಂಭವನ್ನು ಸೂಲಗಿತ್ತಿ ನರಸಮ್ಮ ಸ್ಮಾರಕ ಸ್ಥಳ ಗಂಗಸಂದ್ರ ವಾರ್ಡ್ ನಂ 11 ದೊಡ್ಡಸಾರಂಗಿ ಮುಖ್ಯರಸ್ತೆ ತುಮಕೂರು ಇಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪಾವಗಡ ತಾಲೂಕಿನ ಕೃಷ್ಣಾಪುರದಲ್ಲಿ ಜನಿಸಿದ ಡಾ.ಸೂಲಗಿತ್ತಿ ನರಸಮ್ಮ ತಮ್ಮ ಹಿರಿಯರಿಂದ ಕಲಿತ ಸೂಲಿಗಿತ್ತಿ ವೃತ್ತಿಯನ್ನು ತನ್ನ ಇಳಿ ವಯಸ್ಸಿನವರೆಗೆ ಮುಂದುವರೆಸಿಕೊಂಡು ಬಂದಿದ್ದು,ಇದುವರೆಗೂ 15 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.ಇವರಿಗೆ ಕೇಂದ್ರ ಸರಕಾರದ ಪ್ರತಿಷ್ಠಿತ ಪದ್ಮಶ್ರೀ, ವಯೋಶ್ರೇಷ್ಠ ಸನ್ಮಾನ್ ರಾಷ್ಟ್ರಪ್ರಶಸ್ತಿಯ ಜೊತೆಗೆ, ರಾಜ್ಯ ಸರಕಾರದ ಡಿ.ದೇವರಾಜ ಅರಸು, ಕಿತ್ತೂರು ರಾಣಿ ಚನ್ನಮ್ಮ, ತುಮಕೂರು ಜಿಲ್ಲಾಡಳಿತ ನೀಡುವ ಮಹಿಳಾ ಸಾಧಕಿ ಪ್ರಶಸ್ತಿ,ತುಮಕೂರು ವಿವಿಗೆ ಗೌರವ ಡಾಕ್ಟರೇಟ್ ಸೇರಿದಂತೆ…

Read More

ತುಮಕೂರು:       ‘ನಡೆದಾಡುವ ದೇವರು’ ಶಿವಕುಮಾರ ಸ್ವಾಮೀಜಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.        ಶ್ವಾಸಕೋಶದ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಚೆನ್ನೈನ ರೇಲಾ ಆಸ್ಪತ್ರೆಯ ಸೋಂಕು ತಜ್ಞ ಡಾ. ಸುಬ್ರ ಸೂಚನೆ ಮೇರೆಗೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಶ್ರೀಗಳನ್ನು ಸ್ಥಳಾಂತರ ಮಾಡಲಾಗಿದೆ.       ಸಿದ್ದಗಂಗಾ ಆಸ್ಪತ್ರೆ ಆ್ಯಂಬುಲೆನ್ಸ್ ಮೂಲಕ ಮಠದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶ್ರೀಗಳನ್ನ ವೈದ್ಯರ ಸಲಹೆ ಮೇರೆಗೆ ಶಿಫ್ಟ್ ಮಾಡಲಾಗುತ್ತಿದೆ. ಸೋಂಕು ತಜ್ಞ ಡಾ. ಸುಬ್ರ ಇಂದು ಸಂಜೆ ಶ್ರೀಗಳನ್ನ ತಪಾಸಣೆ ಮಾಡಿದ್ದರು. ಸೋಂಕು ಸಂಪೂರ್ಣವಾಗಿ ನಿವಾರಿಸಲು ಶ್ರೀಗಳನ್ನ ಸಿದ್ದಗಂಗಾ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಶ್ರೀಗಳಿಗೆ ಈವರೆಗೆ ಮಠದ ಕೊಠಡಿಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಶ್ರೀಗಳಿಗೆ ಗಣ್ಯರ ಕಿರಿಕಿರಿ  ಆಗಬಾರದೆಂದು ಸಿದ್ದಗಂಗಾ ಆಸ್ಪತ್ರೆಗೆ ಗಣ್ಯರ ನಿರ್ಬಂಧ ಮಾಡಲಾಗಿದೆ ಎಂದು ಕಿರಿಯ ಸಿದ್ದಲಿಂಗ ಶ್ರೀಗಳು ಹೇಳಿದ್ದಾರೆ.         ಶಿವಕುಮಾರ…

Read More

ಬೆಂಗಳೂರು:       ಅನಾರೋಗ್ಯ ಸಮಸ್ಯೆಯಿಂದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದ ಎಚ್‌.ವಿಶ್ವನಾಥ್‌ ಅವರ ಮನವಿಯನ್ನು ವರಿಷ್ಠ ದೇವೇಗೌಡ ಅವರು ತಿರಸ್ಕರಿಸಿದ್ದಾರೆ.       ಇಂದು ನಡೆದ ಜೆಡಿಎಸ್‌ ಮುಖಂಡರ ಸಭೆಯಲ್ಲಿ ಈ ಬಗ್ಗೆ ದೇವೇಗೌಡರು ಸೂಚನೆ ನೀಡಿದ್ದು, ಲೋಕಸಭೆ ಚುನಾವಣೆ ಮುಂದು ಇರುವ ಕಾರಣ ಅನುಭವಿ ಎಚ್‌.ವಿಶ್ವನಾಥ್ ಅವರನ್ನು ಬದಲಾಯಿಸುವುದು ಸೂಕ್ತವಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.        ಇತ್ತೀಚೆಗೆ ಅನಾರೋಗ್ಯ ಕಾಡುತ್ತಲೇ ಇದೆ. ಹಾಗಾಗಿ ನನ್ನ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಲು ಆಗುತ್ತಿಲ್ಲ. ರಾಜ್ಯಾಧ್ಯಕ್ಷನಾಗಿ ಪಕ್ಷದಲ್ಲೂ ಸರಿಯಾಗಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ನನ್ನ ಸ್ಥಾನದಿಂದ ಬಿಡುಗಡೆ ಕೋರಲು ನಿರ್ಧರಿಸಿದ್ದೆ ಎಂದು ಸ್ಪಷ್ಟಪಡಿಸಿದರು.       ಆದರೆ ವಿಶ್ವನಾಥ್‌ ಅವರ ಬಳಿ ಸಮಾಲೋಚನೆ ನಡೆಸಿರುವ ದೇವೇಗೌಡ ಅವರು, ದೈವಬಲ ನಂಬಿ ಎಲ್ಲರೂ ಜೊತೆಯಾಗಿ ಹೋಗೋಣ. ಲೋಕಸಭೆ ಚುನಾವಣೆ ಎಂಬ ಬಹುದೊಡ್ಡ ಸವಾಲು ನಮ್ಮ ಮುಂದೆ ಇದೆ ಎಂದಿದ್ದಾರೆ, ಹಾಗಾಗಿ ಅವರ ಮಾತಿನಂತೆ ನಾನೇ ಜೆಡಿಎಸ್ ರಾಜ್ಯಾಧ್ಯಕ್ಷನಾಗಿ…

Read More

 ತುಮಕೂರು:       ಭಾರತದಲ್ಲಿ ಮುಚ್ಚಿಟ್ಟ ಇತಿಹಾಸವನ್ನು ತೆರೆದಿಡುವ ಪ್ರಯತ್ನವನ್ನು ಮಾಡಿದ್ದು ಡಾ.ಬಿ.ಅಂಬೇಡ್ಕರ್ ಅವರೊಬ್ಬರೆ, ಅವರ ಸಾಹಿತ್ಯ, ಪುಸ್ತಕಗಳನ್ನು ಓದುವ ಮೂಲಕ ಈ ನೆಲದ ಮುಚ್ಚಿಟ್ಟ ಇತಿಹಾಸವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಯುವ ಸಮೂಹ ಮಾಡಬೇಕಿದೆ ಎಂದು ಉಪನ್ಯಾಸಕ ಗುಣಶೀಲ ಅಭಿಪ್ರಾಯಪಟ್ಟರು.       ನಗರದ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೋಚಿಂಗ್ ಸೆಂಟರ್‍ನಲ್ಲಿ ನಡೆದ ಸಾವಿತ್ರಿ ಬಾ ಫುಲೆ ಅವರ ಜನ್ಮ ಜಯಂತಿಯಲ್ಲಿ ಮಾತನಾಡಿದ ಅವರು ಇಂದು ಎಲ್ಲರೂ 40 ವರ್ಷಗಳ ಇತಿಹಾಸಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ, ಅದಕ್ಕಿಂತಲೂ ಹಿಂದೆ ಅಡಗಿರುವ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ, ಅಂಬೇಡ್ಕರ್ ಅವರು ಮುಚ್ಚಿಟ್ಟ ಇತಿಹಾಸವನ್ನು ಶೋಧಿಸಿದಲೇ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಫುಲೆ ಅವರ ಬಗ್ಗೆ ನಾವೆಲ್ಲ ಇಂದು ತಿಳಿದುಕೊಳ್ಳುವಂತಾಗಿದ್ದು ಎಂದರು.       ಅಂಬೇಡ್ಕರ್ ಅವರಿಗೆ ದಲಿತರ ಸ್ವಾಭಿಮಾನದ ವಿಜಯೋತ್ಸವದ ಸಂಕೇತವಾಗಿರುವ ಕೋರೆಗಾಂವ ಘಟನೆ ಬಗ್ಗೆ ಗೊತ್ತಿರಲಿಲ್ಲ, ನಮ್ಮ ಇತಿಹಾಸದಲ್ಲಿಯೂ ಅದರ ಉಲ್ಲೇಖವಿರಲಿಲ್ಲ, ಅಂಬೇಡ್ಕರ್ ಅವರು ಉನ್ನತ…

Read More

ಚಾಮರಾಜನಗರ:        ಸುಳವಾಡಿ ವಿಷ ಪ್ರಸಾದ ಸೇವನೆ ದುರಂತಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜ.16ರ ವರೆಗೆ ವಿಸ್ತರಿಸಲಾಗಿದೆ.       ಮೈಸೂರಿನ ಕಾರಾಗೃಹದಲ್ಲಿದ್ದ ನಾಲ್ವರು ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮೀಜಿ ಆಗಿದ್ದ ಇಮ್ಮಡಿ ಮಹದೇವ ಸ್ವಾಮಿ,‌ ಅಂಬಿಕಾ, ಮಾದೇಶ್ ಮತ್ತು ದೊಡ್ಡಯ್ಯರನ್ನು ಗುರುವಾರ ಬೆಳಗ್ಗೆ 11.30 ಗಂಟೆ ವೇಳೆ ಜಿಲ್ಲಾ ಪೊಲೀಸರು ಕೊಳ್ಳೇಗಾಲದ ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಜೆ.ಕೃಷ್ಣ ಅವರ ಎದುರು ಹಾಜರು ಪಡಿಸಿದ್ದರು.       ಇಮ್ಮಡಿ ಮಹದೇವ ಸ್ವಾಮಿ ಬಿಳಿ ಪಂಚೆ, ಶರ್ಟ್, ಶಲ್ಯ ಹಾಕಿಕೊಂಡು ನ್ಯಾಯಾಲಯಕ್ಕೆ ಹಾಜರಾಗಿದ್ದರು.

Read More

ಬೆಂಗಳೂರು:       ಸ್ಯಾಂಡಲ್ ವುಡ್ ಗೆ ಗುರುವಾರ ಬೆಳಿಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಮುಂಜಾನೆ ಆರು ಗಂಟೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಸ್ಟಾರ್ ನಿರ್ಮಾಪಕರ ಮನೆ ಮೇಲೆ ದಾಳಿ ಮಾಡಿ ಗಾಬರಿ ಮೂಡಿಸಿದ್ದಾರೆ.       ಕನ್ನಡ ಚಿತ್ರರಂಗದ 8 ಜನ ಖ್ಯಾತ ನಟ ಹಾಗೂ ನಿರ್ಮಾಪಕರು ಮನೆ, ಕಛೇರಿ ಮತ್ತು ಸಂಬಂಧಿಕರ ಮನೆ ಮೇಲೆ ರೈಡ್ ಮಾಡಲಾಗಿದ್ದು, ಸುಮಾರು 200 ಅಧಿಕಾರಿಗಳು, ಬೆಂಗಳೂರಿನ 25 ಕಡೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.       ಈ ದಾಳಿಗೆ ಒಳಗಾಗಿರುವ ನಟ ಮತ್ತು ನಿರ್ಮಾಪಕರು ಸಾಮಾನ್ಯದವರಲ್ಲ. ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರಾಗಿದ್ದಾರೆ.  ರಾಕಿಂಗ್ ಸ್ಟಾರ್ ಯಶ್:       ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಚಿನ್ನಾಭರಣಗಳು, ಹಣ, ಬ್ಯಾಂಕ್ ವ್ಯವಹಾರದ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಯಶ್ ಮನೆಯಲ್ಲಿ ಸಾಕಷ್ಟು ಚಿನ್ನಾಭರಣ…

Read More

 ತುಮಕೂರು:       ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸದಸ್ಯರಾಗಿರುವ ಎಸ್.ಪಿ.ಮುದ್ದಹನುಮೇಗೌಡರೇ ಸ್ಪರ್ಧಿಸಲಿದ್ದು,ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಿದ್ದಾರೆ ಎಂಬ ಮಾಜಿ ಶಾಸಕ ಹೆಚ್.ನಿಂಗಪ್ಪ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.       ಈ ಕುರಿತು ಪ್ರತಿಕಾ ಹೇಳಿಕೆ ನೀಡಿರುವ ಅವರು,2019ರ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಕುರಿತಂತೆ ಯಾವುದೇ ಒಪ್ಪಂದಗಳು ಇದುವರೆಗೂ ಮೈತ್ರಿ ಸರಕಾರದಲ್ಲಿ ನಡೆದಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ಹಿರಿಯ ಮುಖಂಡರು ಹಾಲಿ ಇರುವ ಸಂಸದರಿಗೆ ಟಿಕೇಟ್ ನೀಡುವುದಾಗಿ ಘೋಷಿಸಿದೆ. ಅದಾಗ್ಯೂ ಹೆಚ್.ನಿಂಗಪ್ಪ ಅವರು ಈ ರೀತಿ ಹೇಳಿಕೆ ನೀಡಿರುವುದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಲೋಕಸಭಾ ಸೀಟು ಕೈತಪ್ಪಲಿದೆ ಎಂದು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಸರಳ, ಸಜ್ಜನಿಕೆಯ ಎಸ್.ಪಿ.ಮುದ್ದಹನುಮೇಗೌಡರೇ ಅಭ್ಯರ್ಥಿಯಾಗಿ ಮುಂದುವರೆ ಯಲಿದ್ದಾರೆ.ಲೋಕಸಭಾ…

Read More