ತುಮಕೂರು: ಮಹಿಳೆಯರು ಶಬರಿಮಲೆ ದೇಗುಲವ ಪ್ರವೇಶಿಸಿರುವುದು ದಾಖಲೆಗಷ್ಟೇ ಹೊರತು ಅವರಿಗೆ ದೇವರ ದರ್ಶನವಾಗಿಲ್ಲ, ಮಹಿಳೆಯರನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸುವಂತಹ ಅಚಾತುರ್ಯವನ್ನು ಕೇರಳ ಸರ್ಕಾರ ಮಾಡಿರುವುದು ಸರಿಯಲ್ಲ ಎಂದು ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು. ನಗರದ ಟೌನ್‍ಹಾಲ್ ಸರ್ಕಲ್‍ನಲ್ಲಿ ಶಬರಿಮಲೆಗೆ ಮಹಿಳೆಯ ಪ್ರವೇಶಿಸಿರುವುದನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳು ನಡೆಸಿದ ಮಾನವ ಸರಪಳಿ ನಿರ್ಮಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಮಹಿಳೆಯರನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸಿರುವ ಪಿಣರಾಯಿ ಅವರ ಕಮ್ಯುನಿಸ್ಟ್ ಸರ್ಕಾರ ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆಯನ್ನು ಮಾಡಿದೆ, ಪಿಣರಾಯಿ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಎಲ್ಲ ಸಂಘಟನೆಗಳೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಈಗಾಗಲೇ ಕೇರಳದಲ್ಲಿ ಅಯ್ಯಪ್ಪಸ್ವಾಮಿ ಆ್ಯಕ್ಷನ್ ಕೌನ್ಸಿಲ್ ಮೂಲಕ ಹೋರಾಟಕ್ಕೆ ಮುಂದಾಗಿದೆ. ಈ ಕೌನ್ಸಿಲ್‍ನ ಹೆಸರಲ್ಲಿನ ಇಂದು ಕೇರಳ ಬಂದ್‍ಗೆ ಕರೆ ನೀಡಲಾಗಿದೆ,…
Author: News Desk Benkiyabale
ತುಮಕೂರು : ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳು ಬೇಗ ಹುಷಾರಾಗಲಿ ಎಂದು ಬಾಹುಬಲಿ ಪ್ರಾರ್ಥನೆ ಮಾಡಿದ್ದೇವೆ ಶ್ರವಣ ಬೆಳಗೊಳದ ಚಾರುಕೀರ್ತ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ. ಇಂದು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಶ್ರೀಗಳು ಬೇಗ ಹುಷಾರಾಗಲಿ ಎಂದು ಬಾಹುಬಲಿ ಪ್ರಾರ್ಥನೆ ಮಾಡಿ ಬಂದಿದ್ದೇವೆ, ನಾಡಿನ ಶ್ರೇಷ್ಟ ಹಿರಿಯಜ್ಜ ಸಿದ್ದಗಂಗಾ ಶ್ರೀಗಳಿಗೆ ಆರೋಗ್ಯ ಭಾಗ್ಯ ಸಿಗಲಿ ಎಂದು ತಿಳಿಸಿದ್ದಾರೆ. ಇನ್ನೂ ಸ್ವಾಮೀಜಿಗಳ ಆರೋಗ್ಯ ನಿನ್ನೆಗಿಂತ ಇಂದು ಸುಧಾರಣೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮ ನಾಡಿನ ಶ್ರೇಷ್ಟ ಸ್ವಾಮೀಜಿಗಳಲ್ಲಿ ಸಿದ್ದಗಂಗಾ ಶ್ರೀಗಳಿಗೆ ಬಹಳ ಗೌರವ ಇದೆ. ಮಠದ ಕೊಡುಗೆ ಅರ್ಥಭರಿತ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ಶಬರಿಮಲೆ: ಭಾರೀ ಹೋರಾಟ, ಪರ- ವಿರೋಧಗಳ ಬಳಿಕ ಕೊನೆಗೂ ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸುಪ್ರೀಂ ತೀರ್ಪಿನ ಬಳಿಕ ಇದೇ ಮೊದಲ ಬಾರಿ ಇಬ್ಬರು ಮಹಿಳಾ ಭಕ್ತರು ಅಯ್ಯಪ್ಪನ ದೇಗುಲ ಪ್ರವೇಶಿಸಿದ್ದಾರೆ. ಶತಮಾನಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಹೊಸ ವರ್ಷದ ಆರಂಭದಲ್ಲಿ 40 ವರ್ಷದ ಇಬ್ಬರು ಮಹಿಳೆಯರು ಪೊಲೀಸ್ ಬಿಗಿ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ್ದಾರೆ. ಮಕರ ಸಂಕ್ರಾಂತಿ ವೇಳೆಗೆ ದೇಗುಲ ಪ್ರವೇಶಿಸಬೇಕೆಂಬ ನಿಟ್ಟಿನಲ್ಲಿ ಮಹಿಳಾ ಕ್ರಾಂತಿ ಆರಂಭವಾಗಿತ್ತು. ಆದರೀಗ ತೀವ್ರ ವಿರೋಧದ ನಡುವೆಯೂ ಬುಧವಾರ ಮುಂಜಾನೆ 3.45ಕ್ಕೆ ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ. ದೇಗುಲ ಪ್ರವೇಶಿಸಿದ ಮಹಿಳೆಯರನ್ನು ಕನಕದುರ್ಗಾ ಹಾಗೂ ಬಿಂದು ಎಂದು ಗುರುತಿಸಲಾಗಿದ್ದು, ತಾವು ದೇಗುಲ ಪ್ರವೆಶಿಸುತ್ತಿರುವ ವಿಡಿಯೋವನ್ನು ಖುದ್ದು ಮಹಿಳೆಯರೇ ಬಹಿರಂಗಪಡಿಸಿದ್ದಾರೆ ಹಾಗೂ ಸುಪ್ರೀಂ ತೀರ್ಪಿನ ಬಳಿಕವೂ ಅಸಾಧ್ಯವೆನ್ನಲಾಗುತ್ತಿದ್ದ ಕಾರ್ಯವನ್ನು ಮಾಡಿದ್ದಾರೆ. ಇನ್ನು ಗುರುವಾದಂದು ಮಹಿಳಾ ಸಮಾನತೆ ಹಾಗೂ ದೇಗುಲ ಪ್ರವೇಶಿಸಲು ಅವಕಾಶ ಕಲ್ಪಿಸುವ…
ತುಮಕೂರು: ಇದೇ ಜನವರಿ 5 ಮತ್ತು 6 ರಂದು ಏರ್ಪಡಿಸಿರುವ “ಸಾವಯವ ಸಿರಿಧಾನ್ಯ ಮೇಳ”ದಲ್ಲಿ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಪ್ರಯೋಜನ ಪಡೆಯಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದರು. ಸಾವಯವ ಸಿರಿಧಾನ್ಯ ಮೇಳದ ಅಂಗವಾಗಿ ಇಂದು ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಸಿರಿಧಾನ್ಯ ಮೇಳದ ಪ್ರಚಾರದ ಬಗ್ಗೆ ಏರ್ಪಡಿಸಿದ್ದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾಥಾವು ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಎಸ್.ಎಸ್.ಪುರಂ ಮುಖ್ಯ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿತು. ಜಾಥಾದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಉಪಕೃಷಿ ನಿರ್ದೇಶಕರು, ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಲೀಡ್ ಬ್ಯಾಂಕ್ ಮ್ಯಾನೇಜರ್, ನಿರ್ಮಿತಿ ಕೇಂದ್ರದ ಅಭಿಯಂತರರು, ಇತರೆ ಇಲಾಖಾಧಿಕಾರಿಗಳು ಸೇರಿದಂತೆ ಸಾವಯವ ರೈತರು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
ತುರುವೇಕೆರೆ: ಹೊಸ ವರ್ಷದ ಆಚರಣೆ ಸಲುವಾಗಿ ಇಡೀ ದಿನ ಕುಣಿದು ಕುಪ್ಪಳಿಸುವುದು. ಪಾನ ಗೋಷ್ಠಿ ನಡೆಸುವುದು. ಕೇಕ್ ಕಟ್ ಮಾಡುವುದು ಸೇರಿದಂತೆ ಇನ್ನಿತರ ವಿಧಾನಗಳಲ್ಲಿ ಆಚರಿಸುವುದು ಸಾಮಾನ್ಯ. ಆದರೆ ಇಲ್ಲಿಯ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಭೋಧಕ ವರ್ಗ ಇಲ್ಲಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಮಾಡುವ ಮೂಲಕ ಹೊಸ ವರ್ಷದ ಆಚರಣೆಯನ್ನು ಬಹಳ ವಿಶೇಷವಾಗಿ ಆಚರಿಸಿ ಇತರರಿಗೆ ಮಾದರಿಯಾದರು. ಪ್ರಾಂಶುಪಾಲ ಗಂಗಾಧರ ದೇವರ ಮನೆ ನೇತೃತ್ವದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಆಸ್ಪತ್ರೆಯ ವಾರ್ಡ್‍ಗಳಲ್ಲಿದ್ದ ಹಲವಾರು ರೋಗಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿ ಬೇಗನೇ ಗುಣಮುಖರಾಗಿ ಎಂದು ಹಾರೈಸಿ ಹಣ್ಣು ಮತ್ತು ಹಾಲನ್ನು ವಿತರಿಸಿದರು. ಪುಟ್ಟಕಂದಮ್ಮಗಳು : ಹೊಸ ವರ್ಷದ ಆಚರಣೆಗೆ ಈಗಷ್ಠೇ ಕಣ್ಣು ಬಿಟ್ಟಿರುವ ಪುಟ್ಟ ಕಂದಮ್ಮಗಳಿಗೂ ವಿದ್ಯಾರ್ಥಿಗಳು ಶುಭ ಹಾರೈಸಿದರು. ಹಲವಾರು…
ತುರುವೇಕೆರೆ : ಜನವರಿ 30 ಮತ್ತು 31 ರಂದು ನಡೆಯಲಿರುವ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವಾನುಮತದಿಂದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತ ಸಾಹಿತಿ, ವೈಜ್ಞಾನಿಕ ಚಿಂತಕ ಹುಲಿಕಲ್ ನಟರಾಜು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಕಸಾಪ ಭವನದಲ್ಲಿ ಮಂಗಳವಾರ ನಂ.ರಾಜು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆ, ಸಮಿತಿ ಉಪಸಮಿತಿಗಳ ಆಯ್ಕೆ, ಬಗೆಗೆ ಹಲವು ಸುತ್ತಿನ ಚರ್ಚೆ ನಂತರ ಅಂತಿಮವಾಗಿ ಆಯ್ಕೆ ಪ್ರಕ್ರಿಯೆಗಳನ್ನು ಅಧ್ಯಕ್ಷ ನಂ.ರಾಜು ಪ್ರಕಟಿಸಿದರು. ತಾಲ್ಲೂಕಿನ ಹುಲಿಕಲ್‍ನ ಕಲ್ಲೇಶಪ್ಪ – ಸೌಭ್ಯಮ್ಮ ದಂಪತಿಗಳ ಸುಪುತ್ರರಾದ ನಟರಾಜ್ ಧರ್ಮ, ದೇವರ ಹೆಸರಿನ ಹಿನ್ನೆಲೆಯಲ್ಲಿ ನಡೆಯುವ ಮೌಡ್ಯತೆ, ಬೂಟಾಟಿಕೆಯೊಂದಿಗೆ ಅಮಾಯಕರನ್ನು ವಂಚಿಸುವ ಮಾಟ, ಮಂತ್ರ, ಪವಾಡಗಳೆಂದು ನಂಬಿಸುವ ವಂಚಕರ ರಹಸ್ಯಗಳನ್ನು ವೈಜ್ಞಾನಿಕವಾಗಿ ಭೇದಿಸುವುದರೊಂದಿಗೆ ಇಡೀ ಸಮಾಜಕ್ಕೆ ಚಿಕಿತ್ಸಕ ಬುದ್ದಿಯನ್ನು ನೀಡಿದ್ದಾರೆ. ಇಂತಹ ಪವಾಡ ರಹಸ್ಯ ಬಯಲಿನ ಸಹಸ್ರಾರು ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ಇಂದಿನ…
ತುಮಕೂರು: ಸಿದ್ಧಗಂಗಾಶ್ರೀ ಡಾ.ಶಿವಕುಮಾರಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದ್ದು, ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಿದ್ಧಗಂಗಾ ಮಠದ ಕಿರಿಯಶ್ರೀಗಳಾದ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು. ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಆರೋಗ್ಯದ ವಿಚಾರವಾಗಿ ಮಾಧ್ಯಮಗಳಲ್ಲಿ ಸಾಕಷ್ಟು ಮಾಹಿತಿ ನೀಡಲಾಗುತ್ತಿದ್ದು, ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ಮಾಹಿತಿಯಿಂದ ಜನರಲ್ಲಿ ಆತಂಕ ಉಂಟಾಗುತ್ತಿದ್ದು, ಮಾಧ್ಯಮಗಳು ಮಠದಲ್ಲಿ ಉಳಿದುಕೊಂಡಿರವುದು ಜನರಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡುತ್ತಿದೆ. ಶ್ರೀಗಳ ಆ ರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಮಾಧ್ಯಮಗಳಿಗೆ ಬೆಳಿಗ್ಗೆ ಮತ್ತು ಸಂಜೆ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡ ಲಾಗುವುದು ಎಂದು ಹೇಳಿದರು. ಇದೇ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಕಣ್ಣೂರು ಸ್ವಾಮೀಜಿ, ಮಠದ ಮಹದೇವು ಇತರರು ಚಿತ್ರದಲ್ಲಿದ್ದಾರೆ.
ತುಮಕೂರು : ನಡೆದಾಡುವ ದೇವರು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಇಂದಿಲ್ಲಿ ತಿಳಿಸಿದರು. ನಗರದ ಸಿದ್ದಗಂಗಾ ಮಠಕ್ಕೆ ತಮ್ಮ ಪತ್ನಿ ಆಶಾಪಾಟೀಲ್ ಅವರೊಂದಿಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಕೊಠಡಿಗೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದಿದ್ದೇನೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಎಲ್ಲ ಪ್ಯಾರಮೀಟರ್ ಚೆನ್ನಾಗಿದೆ ಎಂದರು. ಶ್ರೀಗಳ ಆರೋಗ್ಯ ಕುರಿತು ವೈದ್ಯರೊಂದಿಗೂ ಚರ್ಚಿಸಿದ್ದೇನೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಶ್ರೀಗಳನ್ನು ಬಹಳಷ್ಟು ಜಾಗರೂಕತೆಯಿಂದ ನೋಡಿಕೊಳ್ಳಲಾಗುತ್ತಿದೆ. ಶ್ರೀಗಳನ್ನು ನೋಡಲು ಹೋದ ಸಂದರ್ಭದಲ್ಲಿ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ನಮ್ಮೆಲ್ಲರಿಗೂ ಮಾಸ್ಕ್ ಹಾಕಿ ಒಳಗೆ ಪ್ರವೇಶ ನೀಡಲಾಯಿತು ಎಂದ ಅವರು, ವೈದ್ಯರು ಶ್ರೀಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದು ಶೀಘ್ರ ಗುಣಮುಖರಾಗಲಿದ್ದಾರೆ ಎಂದರು. …
ತುಮಕೂರು: ಜನವರಿ 8 ಮತ್ತು 9ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ತುಮಕೂರು ನಗರದಲ್ಲಿ ಪ್ರಚಾರಾಂದೋಲನ ಮತ್ತು ಬೀದಿಬದಿ ಸಭೆಗಳಿಗೆ ಚಾಲನೆ ನೀಡಲಾಯಿತು. ಪ್ರಚಾರಾಂದೋಲನದಲ್ಲಿ ಜನರಿಗೆ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ನಿರಂತರ ಸಭೆಗಳನ್ನು ಮಾಡಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಲಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ನೂರಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಆಶಯಗಳು ಮತ್ತು ದೇಶದ ಸಂಪತ್ತನ್ನು ಉಳಿಸಲು ನಡೆಸುವ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಸ್ವಾತಂತ್ರ್ಯ ಚೌಕದಲ್ಲಿ ನಡೆದ ಪ್ರಚಾರಾಂದೋಲನದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಈ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಕೇಂದ್ರ ಸರ್ಕಾರ ಜನರ…
ತುಮಕೂರು: ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಮನೆ ಮನೆಗೆ ಅಡುಗೆ ಅನಿಲ ಸರಬರಾಜು ಮಾಡುವ ಪೈಪ್‍ಲೈನ್ ಅಳವಡಿಸುವ ಕಾಮಗಾರಿಗೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಶೆಟ್ಟಿಹಳ್ಳಿ ವೃತ್ತದ ದೋಬಿಘಾಟ್ ರಸ್ತೆಯಲ್ಲಿ ಚಾಲನೆ ನೀಡಿದರು. ಕೇಂದ್ರ ಮತ್ತು ರಾಜ್ಯ ಸರಕಾರದ 50ಃ50ರ ಅನುದಾನದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಯೋಜಯ ಪಿಪಿಪಿ ಮಾಡಲ್‍ನಲ್ಲಿ ಮನೆಮನೆಗೆ ಅಡುಗೆ ಅನಿಲ ವಿತರಿಸುವ ಪೈಪ್‍ಲೈನ್ ಕಾಮಗಾರಿಯ ಜವಾಬ್ದಾರಿಯನ್ನು ಮೇಗಾ ಗ್ಯಾಸ್ ಏಜೆನ್ಸಿಗೆ ನೀಡಲಾಗಿದೆ.ಮುಂದಿನ ಐದು ವರ್ಷದಲ್ಲಿ ನಗರದ ಎಲ್ಲಾ ಮನೆಗಳಿಗೂ ಪೈಪ್‍ಲೈನ್ ಮೂಲಕವೇ ಅಡುಗೆ ಅನಿಲ ವಿತರಣೆಯಾಗಲಿದೆ ಎಂದು ಶಾಸಕ ಜೋತಿ ಗಣೇಶ್ ತಿಳಿಸಿದ್ದಾರೆ. ಅಭಿವೃದ್ದಿ ಕಾಮಗಾರಿಗಳು ನಡೆಯುವಾಗ ರಸ್ತೆ ಅಗೆಯುವುದು ಸಹಜ.24*7 ನಿರಂತರ ಕುಡಿಯುವ ನೀರು ಸರಬರಾಜು, ಯುಜಿಡಿ,ಜಿಯೋ ಬ್ರಾಡ್‍ಬಾಂಡ್ ಪೈಪ್‍ಲೈನ್,ಅಡುಗೆ ಅನಿಲ ಸರಬರಾಜು ಹಾಗೂ ವಿದ್ಯುತ್ ಸಂಪರ್ಕಕ್ಕೆ ಸಹ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಅಗೆಯುವ ಕಾಮಗಾರಿ ನಡೆಯುವಾಗ ಹಾಲಿ ಇರುವ ಟೆಲಿಪೋನ್,ಕುಡಿಯುವ ನೀರಿನ ಪೈಪ್‍ಲೈನ್ ಸಂಪರ್ಕಕ್ಕೆ ತೊಂದರೆಯಾದರೆ…