Author: News Desk Benkiyabale

ಚಿಕ್ಕನಾಯಕನಹಳ್ಳಿ :       ತಾಲ್ಲೂಕಿನ ಹಂದನಕೆರೆ ಹೋಬಳಿಯ ರಂಗಾಪುರ ಗ್ರಾಮದ 21 ವರ್ಷದ ಯಶೋಧ ತನ್ನ ವೇಲನ್ನೇ ಕುತ್ತಿಗೆಗೆ ಕುಣಿಕೆ ಮಾಡಿಕೊಂಡು ಮೃತ ಪಟ್ಟಿರುವ ಘಟನೆ ನಡೆದಿದೆ.       ಹುಳಿಯಾರು ಹೋಬಳಿಯ ಕುರಿಹಟ್ಟಿ ನಿವಾಸಿ ಲಿಂಗರಾಜುಗೆ ಮಗಳಾದ ಯಶೋದಳನ್ನು ಹಂದನಕೆರೆ ಹೋಬಳಿಯ ರಂಗಾಪುರ ಗ್ರಾಮದ ನಿವಾಸಿ ಪಾಂಡುರಂಗನಿಗೆ ವಿವಾಹ ಮಾಡಿಕೊಡಲಾಗಿತ್ತು, ಗಂಡ ಪಾಂಡುರಂಗ ತನ್ನ ಹೆಂಡ್ತಿಗೆ ಹಣ ತರುವಂತೆ ಪೀಡಿಸುತ್ತಿದ್ದ ಇವನ ಒತ್ತಡಕ್ಕೆ ಮಣಿದ ಮಾವನ ಮನೆಯವರು ಒಂದು ಚಿನ್ನದ ಸರವನ್ನು ಕೊಟ್ಟಿದ್ದರು. ತೃಪ್ತನಾಗದ ಅಳಿಮಯ್ಯ ಹೆಂಡತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇವನ ಕಾಟಕ್ಕೆ ಸೋತುಹೋಗಿದ್ದ ಹೆಂಡತಿ ಯಶೋಧ ಗಂಡನ ಮನೆಯಲ್ಲಿ ನೇಣು ಬಿಗಿದು ಸತ್ತಿರುತ್ತಾಳೆ.       ಮೃತ ಯಶೋದ ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡಿಕೊಂಡು ಗಂಡನ ಹೆಗಲಿಗೆ ಹೆಗಲಾಗಿ ದುಡಿದು ಜೀವನ ನಡೆಸುತ್ತಿದ್ದಳು. ಆರೋಪಿ ಪಾಂಡುರಂಗ ತಲೆ ಮರೆಸಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಹಂದನಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿ.ಎಸ್.ಐ ಟಿ.ಎನ್.ನರಸಿಂಹಮೂರ್ತಿ…

Read More

 ತುರುವೇಕೆರೆ:       ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹಂತಹಂತವಾಗಿ ಕೇಂದ್ರದಿಂದ ನೀಡುವ ಶೇಕಡ 75ರಷ್ಟು ಅನುದಾವನ್ನು ಕಡಿತ ಮಾಡಿರುವುದು ಬಡಜನ ವಿರೋಧಿ ಕ್ರಮವಾಗಿದೆ. ಹಾಗೆಯೇ ಅಪೌಷ್ಠಕತೆಯಿಂದ ಬಳಲುವ ಮಕ್ಕಳು ಮತ್ತು ಮಹಿಳೆಯರಿಗೆ ಖರ್ಚು ಮಾಡಲು ತಯಾರಿಲ್ಲದ ಸರ್ಕಾರ ಲಕ್ಷಗಟ್ಟಲೆ ಕೋಟಿಗಳ ತೆರಿಗೆ ವಿನಾಯಿತಿಯನ್ನು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ. ಇದು ಸರ್ಕಾರ ಯಾರ ಪರ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ ಸಿಐಟಿಯು ರಾಜ್ಯಧ್ಯಕ್ಷರು ಹಾಗೂ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಆಪಾದಿಸಿದರು.       ತುರುವೇರೆ ಪಟ್ಟಣದ ಸಿದ್ದರಾಮೇಶ್ವ ಸಮುದಾಯ ಭವನದಲ್ಲಿ ನಡೆಯುತ್ತಿರುವ ರಾಜ್ಯ ಅಂಗನವಾಡಿ ನೌಕರರ ಸಂಘದ ತುಮಕೂರು ಜಿಲ್ಲೆಯ ಆರನೇ ಸಮ್ಮೇನಳನ ಉದ್ಘಾಟಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಅಂಗನವಾಡಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ಕೂಲಿ ಪಿಂಚಣಿ ಹಾಗೂ ಸೇವಾಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ. ಅಂಗನವಾಡಿಗಳನ್ನು ಶಾಲಾಪೂರ್ವ ಶಿಕ್ಷಣದ ಭಾಗವಾಗಿ ಕಡ್ಡಾಯ ಗೊಳಿಸುವಂತೆ ಆಗ್ರಹಿಸಿದರು.…

Read More

ತುಮಕೂರು:        ಪ್ರತಿಯೊಬ್ಬ ಮನುಷ್ಯನ ಜೀವನ ಜೀವನದಿ ಇದ್ದಂತೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಆದುದರಿಂದ ಜೀವನ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ನಿವೃತ್ತರು ಚಿಂತೆ ಮಾಡುವುದನ್ನು ಬಿಟ್ಟು ಸಹಜವಾದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದರು.       ಅವರು ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಬಾಲಭವನದಲ್ಲಿ ನಡೆದ ನಿವೃತ್ತರ ದಿನಾಚರಣೆ ಮತ್ತು ಹಿರಿಯ ಚೇತನಗಳಿಗೆ ಸನ್ಮಾನ ಹಾಗೂ ನಿವೃತ್ತರ ವಾಣಿ ಬಿಡುಗಡೆ ಮತ್ತು ಕುವೆಂಪು ನೆನಪಿನ ದಿನಾಚರಣೆಯ ಕಾರ್ಯಮವನ್ನು ಉದ್ಘಾಟಿಸಿ ಹಿರಿಯ ಚೇತನಗಳಿಗೆ ಹಾಗೂ ಎಂಬತ್ತೈದು ವರ್ಷ ಪೂರೈಸಿದ ಮಹಾಚೇತನಗಳಿಗೆ ಸನ್ಮಾನ ಮಾಡಿ ಮಾತನಾಡಿದರು.       ನಿವೃತ್ತರಾಗಿ ಹಿರಿಯರಾಗಿರುವ ಪ್ರತಿಯೊಬ್ಬರು ಹೇಳುವುದೇನೆಂದರೆ ಮೊದಲು ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನಿವೃತ್ತಿ ಎಂಬುದು ನಿಮ್ಮಲ್ಲಿ ನ್ಯೂವೃತ್ತಿಯಾಗಬೇಕು. ಮಹಾತ್ಮರುಗಳಾದ ಅರವಿಂದ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಗಾಂಧೀಜಿಯಂತಹವರ ಜೀವನ ಚರಿತ್ರೆಯ ಒಳ್ಳೆಯ ಪುಸ್ತಕಗಳನ್ನು ಓದಿ ಒಳ್ಳೆಯ ಸಿನಿಮಾ ಒಳ್ಳೆಯ ಧಾರಾವಾಹಿಗಳನ್ನು ನೋಡಿ ನಗುನಗುತ್ತಾ…

Read More

ಹೊಸದಿಲ್ಲಿ :        ಕಳೆದ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪಾವತಿಯಾಗದ ಸಾಲಗಳ ಪ್ರಮಾಣ ಹೆಚ್ಚಾಗುವಲ್ಲಿ ಕರ್ತವ್ಯ ಲೋಪ ತೋರಿದ ಆರು ಸಾವಿರಕ್ಕೂ ಅಧಿಕ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.       ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಲೋಕಸಭೆಯಲ್ಲಿಂದು, ತಪ್ಪುಗಾರ ಅಧಿಕಾರಿಗಳಿಗೆ ಲಘು ಪ್ರಮಾಣದಿಂದ ಕಠಿನ ಪ್ರಮಾಣದ ವರೆಗಿನ ದಂಡವನ್ನು ಹೇರಲಾಗಿದೆ ಎಂದು ಲಿಖೀತ ಉತ್ತರದಲ್ಲಿ ಈ ವಿಷಯ ತಿಳಿಸಿದರು.       ಕೆಲವೊಂದು ಪ್ರಕರಣಗಳಲ್ಲಿ ಕೆಲಸದಿಂದ ಕಿತ್ತು ಹಾಕುವ, ಕಡ್ಡಾಯ ನಿವೃತ್ತಿ ನೀಡುವ ಮತ್ತು ಹಿಂಭಡ್ತಿ ನೀಡುವ ಶಿಕ್ಷೆಯನ್ನು ಕರ್ತವ್ಯ ಲೋಪ ತೋರಿದ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.

Read More

ಮಂಗಳೂರು:       ನಗರದ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ  ಪ್ರವಾಚಕ (ರೀಡರ್) ಮಂಜುನಾಥಯ್ಯ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ಮಂಗಳೂರು ಮತ್ತು ಉಡುಪಿಯಲ್ಲಿ ದಾಳಿ ನಡೆಸಿದ್ದಾರೆ.       ಮಂಜುನಾಥಯ್ಯ ಅಕ್ರಮ ಆಸ್ತಿ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಉಡುಪಿಯ ವಾಸದ ಮನೆ, ದಾವಣಗೆರೆ, ಚಿಕ್ಕಮಗಳೂರಿನಲ್ಲಿರುವ ಸಂಬಂಧಿಕರ ಮನೆ, ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಕಚೇರಿಗೆ ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಕಚೇರಿಯಲ್ಲಿರುವ ಹಲವು ಕಡತಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.       ಮಂಜುನಾಥಯ್ಯ ಮೂರು ತಿಂಗಳ ಹಿಂದೆ ನಗರದಲ್ಲಿರುವ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರಾಗಿ ಬಂದಿದ್ದರು.ಆದರೆ ಒಂದೂವರೆ ತಿಂಗಳಿನಿಂದ ಕೆಲಸಕ್ಕೆ ಬಾರದೆ ತುರ್ತು ರಜೆ ಹಾಕಿದ್ದರು. ಬಿಎಡ್ ಕಾಲೇಜಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಈ ವ್ಯಕ್ತಿ ಬಂದ ಒಂದು ತಿಂಗಳಲ್ಲೇ ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Read More

ತುಮಕೂರು:       ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆರೋಗ್ಯವಾಗಿದ್ದು, ಸುಸ್ತು ಇರುವುದರಿಂದ ಸ್ವಲ್ಪ ವಿಶ್ರಾಂತಿ ಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ತಿಳಿಸಿದರು. ಇಂದು ಸಿದ್ಧಗಂಗಾ ಮ ಠಕ್ಕೆ ಭೇಟಿ ನೀಡಿದ್ದ ವೇಳೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಮಠದ ಕಿರಿಯ ಸ್ವಾಮೀಜಿ ಅವರೊಂದಿಗೆ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದರು.       ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿಯವರ ಎಲ್ಲಾ ಪ್ಯಾರಾ ಮೀಟರ್ಸ್ ನಾರ್ಮಲ್ ಆಗಿದೆ. ಬಿಪಿ, ಪಲ್ಸ್​ ರೇಟ್, ಆಕ್ಸಿಜನ್ ಸ್ಯಾಚುರೇಷನ್ ಕೂಡ ಸಹಜ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.       ಯಾವಾಗ ಬಂದ್ರಿ,  ಚೆನ್ನಾಗಿದ್ದೀರಾ ಪ್ರಸಾದ ಮಾಡಿಕೊಂಡು ಹೋಗಿ. ಇನ್ನೂ ಸ್ವಲ್ಪ ಹೊತ್ತು ಇದ್ದು ಹೋಗಿ  ಎಂದು ಶಿವಕುಮಾರ ಸ್ವಾಮೀಜಿ ತಮ್ಮೊಂದಿಗೆ ಮಾತನಾಡಿದ್ದಾರೆ. ತಾವು ಹೇಗಿದ್ದೀರಿ ಸ್ವಾಮೀಜಿ ಅಂತ ಕೇಳಿದ್ದಕ್ಕೆ ‘ನಾನು ಚೆನ್ನಾಗಿದ್ದೇನೆ’ ಎಂದು ಕೂಡ ಮಾತನಾಡಿದ್ದಾರೆ ಎಂದು…

Read More

ತುಮಕೂರು:      ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ 134ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.       ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂಸ್ಥಾಪನಾ ದಿನವನ್ನು ಆರಂಭಿಸಿದರು.       ಕಾರ್ಯಕ್ರಮ ಕುರಿತು ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್,ಸ್ವಾತಂತ್ರ ಹೋರಾಟಗಾರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1885ರಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಆರಂಭದಲ್ಲಿ ರಾಜಕೀಯೇತರ ಸಂಘಟನೆಯಾಗಿ, ಸ್ವಾತಂತ್ರ ಚಳವಳಿಗೆ ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿ, ಹತ್ತಾರು ವರ್ಷಗಳ ನಿರಂತರ ಹೋರಾಟದ ಫಲವಾಗಿ 1947 ರಲ್ಲಿ ದೇಶ ಸ್ವಾತಂತ್ರ ಪಡೆಯುವಂತಾಯಿತು.ಮಹಾತ್ಮಗಾಂಧಿ ಮತ್ತು ಇನ್ನಿತರ ನಾಯಕರ ತ್ಯಾಗ ಮತ್ತು ಹೋರಾಟದ ಫಲವಾಗಿ ದೇಶ ಅಭಿವೃದ್ದಿಯತ್ತ ಸಾಗಿದೆ.ಸ್ವಾತಂತ್ರ ನಂತರದಲ್ಲಿ ರಾಜಕೀಯ ಪಕ್ಷವಾಗಿ ನೊಂದಾಯಿತವಾದ ಕಾಂಗ್ರೆಸ್, ಐವತ್ತು ವರ್ಷಗಳ ಕಾಲ ದೇಶವನ್ನು ಆಳಿ, ವಿಜ್ಞಾನ, ತಂತ್ರಜ್ಞಾನ, ಆಹಾರ, ಕೃಷಿ ಹೀಗೆ…

Read More

 ತುಮಕೂರು:       ಕನ್ನಡ ಸೇರಿದಂತೆ ದೇಶದ ಹಲವು ಪ್ರಾದೇಶಿಕ ಭಾಷೆಗಳು ಸಮಸ್ಯೆಯನ್ನು ಎದುರಿಸುತ್ತಿದ್ದು, ಇವುಗಳ ಉಳಿವಿಗೆ ಮನೆಯಿಂದಲೇ ಮಕ್ಕಳಿಗೆ ಅಯಾಯ ಸ್ಥಳೀಯ ಭಾಷೆಗಳನ್ನು ಕಲಿಸುವ ಮತ್ತು ಬಳಸುವ ಕೆಲಸ ಆಗಬೇಕಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.       ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಕನ್ನಡ ನುಡಿ ಸಿರಿ-2018ಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ತಾಯಂದಿರುವ ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತನಾಡು ವುದನ್ನು ಆರಂಭಿಸಿದರೆ ತಾನಾಗಿಯೇ ಕನ್ನಡ ಬೆಳೆಯಲು ಕಾರಣವಾಗುತ್ತದೆ ಎಂದರು.       ಇಂದು ಒಂದು ಮಗು ಕನ್ನಡ ಭಾಷೆಯಿಂದ ಶಿಕ್ಷಣ ಪಡೆದಾಗ, ಅದರ ಮನಸ್ಸು ವಿಕಾಸಗೊಳ್ಳುವುದರ ಜೊತೆಗೆ, ಭಾಷೆಯ ಜೊತೆಯಲ್ಲಿಯೇ ಅಂಟಿಕೊಂಡಿರುವ ಸಂಸ್ಕøತಿ, ಸಾಂಸ್ಕøತಿಕ ಹಿರಿಮೆ, ಗರಿಮೆಗಳ ಪರಿಚಯವಾಗುತ್ತದೆ. ಆಡಳಿತ ಭಾಷೆ ಯಾವುದೇ ಇದ್ದರೂ ಮನೆಯಲ್ಲಿ ಕನ್ನಡ ಮಾತನಾಡುವುದನ್ನು ರೂಢಿಸಿಕೊಂಡರೆ, ಅದನ್ನು ನಿರಂತರವಾಗಿ ಬಳಸಿದರೆ ಭಾಷೆಯ ಮೇಲಿನ ಹಿಡಿತ ಹೆಚ್ಚಾಗುವುದಲ್ಲದೆ, ಎಂತಹ ವಿಚಾರಗಳನ್ನು ತನ್ನ…

Read More

 ತುಮಕೂರು :       ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸಾಲ ಸೌಲಭ್ಯದ ನೆರವು ಪಡೆದು ಬೃಹತ್ ಉದ್ದಿಮೆದಾರರಾಗಬೇಕೆಂದು ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಕರೆ ನೀಡಿದರು.       ರಾಜ್ಯ ಹಣಕಾಸು ಸಂಸ್ಥೆ ಜಿಲ್ಲಾ ಕಚೇರಿ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ಡಿಐಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ “ಉದ್ದಿಮೆದಾರರ ಸಮಾವೇಶ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯಿಂದ ತಾವು ಪಡೆದ ಸಾಲ ಸೌಲಭ್ಯದ ನೆರವಿನ ಬಗ್ಗೆ ಅನುಭವವನ್ನು ಹಂಚಿಕೊಂಡರು. ಉದ್ದಿಮೆದಾರರು ಕಡಿಮೆ ಬಡ್ಡಿ ದರದಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಕಾರಣೀಭೂತರಾಗಬೇಕೆಂದು ಸಲಹೆ ನೀಡಿದರು.       ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್. ನಾಗರಾಜು ಮಾತನಾಡಿ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಕೈಗಾರಿಕೋದ್ಯಮಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.        ಕೆಎಸ್‍ಎಫ್‍ಸಿ ಪ್ರಧಾನ ವ್ಯವಸ್ಥಾಪಕ ಜಿ.ವಿ.ಚಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಣಕಾಸು ಸಂಸ್ಥೆಯ…

Read More

ತುಮಕೂರು :       ವಿಕಲಚೇತನರಿಗೆ ವಿವಿಧ ಇಲಾಖೆಗಳಲ್ಲಿರುವ ಯೋಜನೆಗಳ ಬಗ್ಗೆ ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಅವರು ತಿಳಿಸಿದರು.        ನಗರದ ಬಾಲಭವನದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಹೊಸ ಕಾಯ್ದೆ ಪ್ರಕಾರ 21 ವಿವಿಧ ರೀತಿಯ ದೈಹಿಕ ಹಾಗೂ ಮಾನಸಿಕ ವೈಕಲ್ಯತೆಗಳು ಸೇರ್ಪಡೆಗೊಂಡಿದ್ದು, ವಿಕಲಚೇತನ ರ ಸಂಖ್ಯೆ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಅಂಗವಿಕಲರ ಸಮೀಕ್ಷೆ ನಡೆಸಲು ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಸಂಪೂರ್ಣ ಸಮೀಕ್ಷೆ ನಡೆಸಲು ಎರಡು ವರ್ಷಗಳು ಬೇಕಾಗುವುದು ಎಂದು ಅವರು ತಿಳಿಸಿದರು.        ತುಮಕೂರು ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳಿಗೆ ಹೊಸ ಕಾಯ್ದೆಯಲ್ಲಿ ಕೆಲವೊಂದು ನಿಯಮಗಳ ಬಗ್ಗೆ ಅರಿವು ಬೇಕಾಗಿದೆ ಎಂದು ಅವರು ತಿಳಿಸಿದರು.        ತುಮಕೂರು ಜಿಲ್ಲೆಯಲ್ಲಿ ವಿಕಲಚೇತನರಿಗೆ  ಅನುಕೂಲವಾಗುವಂತೆ ಜಿಲ್ಲಾ ಅಂಗವಿಕಲ ಪುನರ್‍ವಸತಿ…

Read More