ತುರುವೇಕೆರೆ: ಚಾಮರಾಜನಗರ ದಿಂದ ಜೇವರ್ಗಿಯವರೆಗೆ ಅಭಿವೃದ್ದಿಪಡಿಸಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ತುರುವೇಕೆರೆ ಪಟ್ಟಣದಲ್ಲಿಯೇ ಹಾದು ಹೋಗಬೇಕೆ ಹೊರತು ಬೈಪಾಸ್ ನಿರ್ಮಾಣವೆಂಬುದು ಅವೈಜ್ನಾನಿಕ ನಿರ್ಧಾರವಾಗಿದೆ ಎಂದು ಪರಿಸರ ತಜ್ನ ಡಾ:ಎ.ಎನ್.ಯಲ್ಲಪ್ಪರೆಡ್ಡಿ ಸರ್ಕಾರದ ಕ್ರಮವನ್ನು ಖಂಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲವತ್ತಾದ ಕೃಷಿ ಭೂಮಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುವುದೇ ಅಭಿವೃದ್ದಿ ಎನ್ನುವುದಾದರೆ, ಅಂಥಹ ಅಭಿವೃದ್ದಿ ನಮಗೆ ಅವಶ್ಯಕತೆಯಿಲ್ಲ, ರೈತರು ತಮ್ಮ ಜಮೀನುಗಳಲ್ಲಿ ಬೆಳೆಸುವ ಮರಗಳನ್ನು ತಮ್ಮ ಮಕ್ಕಳ ರೀತಿ ಪೋಷಿಸಿರುತ್ತಾರೆ, ಅಂತಹ ಅವಿನಾಭಾವ ಸಂಭಂದವನ್ನು ಅವರು ತಮ್ಮ ಜಮೀನಿನೊಡನೆ ಹೊಂದಿರುತ್ತಾರೆ, ಏಕಾ-ಏಕಿ ಕೇಂದ್ರದ ನಿರ್ಧಾರ ಅಥವಾ ರಾಜ್ಯದ ನಿರ್ಧಾರವೆಂದು ರೈತರಿಗೆ ನೋಟೀಸ್ ನೀಡಿ ವಶಪಡಿಸಿಕೊಂಡರೆ ಸಾಕಿ-ಸಲಹಿ ಶಿಕ್ಷಣಕೊಡಿಸಿದ ಮಕ್ಕಳನ್ನು ತನ್ನ ಕಣ್ಣ ಮುಂದೆಯೇ ಹತ್ಯೆಗೈದಂತಾಗುತ್ತದೆ ಇಂತಹ ಭಾವನಾತ್ಮಕ ಸಂಭಂಧ ಸರ್ಕಾರಕ್ಕೆ ಕಾಣುವುದಿಲ್ಲ. ಬೈಪಾಸ್ ನಿರ್ಮಾಣ ಮಾಡಿದರೆ 850 ಎಕರೆ ಕೃಷಿ ಭೂಮಿಯನ್ನು ರೈತ ಕಳೆದುಕೊಳ್ಳುತ್ತಾನೆ, ರೈತರ ಜಮೀನುಗಳು…
Author: News Desk Benkiyabale
ತುರುವೇಕೆರೆ: ಜಾತಿ, ಮತ, ಧರ್ಮಗಳೆಂಬ ಸೀಮಾತೀತ ಎಲ್ಲೆಯನ್ನೂ ಮೀರಿದ ಆಶಯಗಳನ್ನು ಹೊಂದಿರುವ ರೋಟರಿ ಸಂಸ್ಥೆ ದೇಶದಾದ್ಯಂತ ಹೆಚ್ಚಿನ ಜನಮನ್ನಣೆ ಗಳಿಸಿಕೊಂಡಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸುರೇಶ್‍ಹರಿ ಅಭಿಪ್ರಾಯಪಟ್ಟರು. ಪಟ್ಟಣದ ಜೆ.ಪಿ, ಆಂಗ್ಲಶಾಲಾ ಆವರಣದಲ್ಲಿ ತಾಲ್ಲೂಕು ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ರೋಟರಿ ಜಿಲ್ಲಾ-3190 ರಾಜ್ಯಪಾಲಾರ ಅಧಿಕೃತ ಭೇಟಿ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶುದ್ದಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ ಜನರಿಗೆ ಅನುಕೂಲವಾಗುವ ಇನ್ನು ಹತ್ತಾರು ಶಾಶ್ವತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ರೋಟರಿ ಕ್ಲಬ್ ತೊಡಗಿಸಿಕೊಳ್ಳಬೇಕು. ದುಡಿಮೆಯ ಸ್ವಲ್ಪಭಾಗವನ್ನಾದರೂ ಸಮಾಜಕ್ಕೆ ಮರಳಿ ನೀಡುವ ಎಷ್ಟೋ ಮಂದಿ ದಾನಿಗಳಿದ್ದಾರೆ. ಅವರಿಂದ ದಾನ ಪಡೆದು ಗ್ರಾಮೀಣ ಪ್ರದೇಶದ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸಿ ಎಂದು ರೋಟರಿ ಸದಸ್ಯರಿಗೆ ಕಿವಿ ಮಾತು ಹೇಳಿದರು. ಸಾರ್ವಜನಿಕರ ಹಿತಕ್ಕಾಗಿ ರೋಟರಿ ಸದಸ್ಯರು ಹಣದ ಬಿಕ್ಷೆ ಬೇಡುವುದರಲ್ಲಿ ಯಾವುದೇ ಕೀಳಿರುಮೆ ಉಂಟಾಗದು. ತನ್ನ…
ತುಮಕೂರು: ವಿಕಲಚೇತನರ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳನ್ನು ಕಡ್ಡಾಯವಾಗಿ ಅರ್ಹ ವಿಕಲಚೇತನರಿಗೆ ತಲುಪಿಸಬೇಕೆಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜು ಅವರು ಸೂಚಿಸಿದರು. ತುಮಕೂರು ನಗರದ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ನಡೆದ ವಿಕಲ ಚೇತನರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದ ಅವರು. ಅಂಗವಿಕಲರ ಅಧಿನಿಯಮದ ಪ್ರಕಾರ ಶೇ.5ರಷ್ಟು ಮೀಸಲಾತಿಯನ್ನು ವಿಕಲ ಚೇತನರಿಗೆ ನೀಡಬೇಕಾಗಿದೆ ಹಾಗೂ ವಿಕಲ ಚೇತನ ಸ್ನೇಹಿ ವಾತಾವಾರಣವನ್ನು ನಿರ್ಮಿಸಬೇಕಾಗಿದೆ. ವಿಕಲಚೇತನರ ಕಲ್ಯಾಣಕ್ಕಾಗಿರುವ ಯೋಜನೆಗಳನ್ನು ಸಂಬಂದಿಸಿದ ಇಲಾಖೆಗಳು ಶೇಕಡ 100 ರಷ್ಟು ಅನುಷ್ಠಾನಗೊಳಿಸಬೇಕು ಎಂದರು. ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ವಿಕಲಚೇತನರಿಗೆ ಮೀಸಲಿಟ್ಟ ಆಸನಗಳನ್ನು ವಿಕಲ ಚೇತನರಿಗೆ ಬಿಟ್ಟು ಕೊಡಬೇಕು. ಬಸ್ಸಿನ ಚಾಲಕ/ನಿರ್ವಾಹಕರು ಈ ಬಗ್ಗೆ ನಿಗಾವಹಿಸಿ ಮಾನವೀಯತೆ ಮೆರೆಯಬೇಕು ಎಂದು ಅವರು ತಿಳಿಸಿದರು. ಶಿರಾ ಹಾಗೂ ಮಧುಗಿರಿ ತಾಲೂಕನ್ನು ಚಿತ್ರದುರ್ಗ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಕಛೇರಿಯ ವ್ಯಾಪ್ತಿಗೆ ವರ್ಗಾಯಿಸಿದ್ದು, ವಿಕಲಚೇತನರಿಗೆ ಚಿತ್ರದುರ್ಗಕ್ಕೆ ತೆರಳಿ ಬಸ್‍ಪಾಸ್‍ಗಳ…
ತುಮಕೂರು: ಸತತ ಬರಗಾಲದಿಂದ ತತ್ತರಿಸಿರುವ ದೇಶದ ಬೆನ್ನೆಲಬು, ನಮ್ಮೆಲ್ಲರ ಅನ್ನದಾತರಾದ ರೈತರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುಚ್ಚಯ್ಯ ಅಭಿಪ್ರಾಯಪಟ್ಟರು. ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾಲ್ಲೂಕು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿಕ ಸಮಾಜದ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ರೈತರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಾ, ತಾವು ಬೆಳೆದ ಬೆಳೆಗೆ ನಿರೀಕ್ಷಿತ ಫಲ ದೊರೆಯದಿದ್ದಾಗ ಹತಾಶರಾಗಿ ಆತ್ಮಹತ್ಯೆಗೆ ಶರಣಾಗದೆ ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸಬೇಕು. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕೆಂದು ತಿಳಿಸಿದರು. ಉಪ ಕೃಷಿ ನಿರ್ದೇಶಕ ಡಾ: ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರವು ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ರೈತರಿಗೆ ಮನವರಿಕೆ ಮಾಡಿದರು. ಜಂಟಿ…
ಚಿಕ್ಕನಾಯಕನಹಳ್ಳಿ: ಪೋಷಕರೆ ನಿಮ್ಮ ಮಕ್ಕಳು ಹಾರ್ಲಿಕ್ಸ್ ಪ್ರಿಯರೇ ಎಚ್ಚರ, ಏಕೆಂದರೆ ಪಟ್ಟಣದ ಹಣ್ಣಿನ ವ್ಯಾಪಾರಿ ಕೊಂಡಿರುವ ಹಾರ್ಲಿಕ್ಸ್ ಪ್ಯಾಕ್‍ನಲ್ಲಿ ಸತ್ತಿರುವ ಮೂರು ಜಿರಲೆಗಳು ಪತ್ತೆಯಾಗಿವೆ, ಹಾರ್ಲಿಕ್ಸ್‍ನಲ್ಲಿ ಜಿರಲೆಗಳು ಸತ್ತಿರುವದನ್ನು ಹಣ್ಣಿನ ವ್ಯಾಪಾರಿ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದು ವಾಟ್ಸ್‍ಪ್ ಗ್ರೂಪ್‍ಗಳಲ್ಲಿ ಹರಿಬಿಟ್ಟು ಗ್ರಾಹಕರು ಯಾವುದೇ ಆಹಾರವನ್ನು ಕೊಂಡರು ಎಚ್ಚರದಿಂದಿರಲು ತಿಳಿಸಿದ್ದಾರೆ. ಪಟ್ಟಣದ ಸಿವಿಲ್ ಬಸ್ಟಾಂಡ್ ಬಳಿ ಹಣ್ಣಿನ ವ್ಯಾಪಾರ ಮಾಡುವ ಮಹಮದ್‍ಷಫಿರವರು ಕಳೆದ 25ದಿನಗಳ ಹಿಂದೆ ತನ್ನ 8ನೇ ವರ್ಷದ ಮಗ ಮಹಮದ್‍ಅಬ್ದುಲ್‍ಗಾಗಿ ಹಾರ್ಲಿಕ್ಸ್ ಪ್ಯಾಕೆಟ್‍ನ್ನು ಕೊಂಡುಕೊಂಡಿದ್ದಾರೆ, ಹಾರ್ಲಿಕ್ಸ್‍ನ್ನು ತನ್ನ ಮಗನಿಗೆ ಪ್ರತಿನಿತ್ಯ ಎರಡು ಚಮಚದ ಮೂಲಕ ಕೊಡುತ್ತಾ ಬಂದಿದ್ದಾರೆ, ಹಾರ್ಲಿಕ್ಸ್ ಪಾಕೆಟ್‍ನ ಖಾಲಿಯಾಗುವ ಸ್ಥಿತಿಗೆ ಬಂದಾಗ ತಳದಲ್ಲಿ ಸತ್ತಿರುವ ಮೂರು ಜಿರಲೆಗಳು ಕಂಡಬಂದಿತು, ಮಹಮದ್‍ಷಫಿ ತಕ್ಷಣವೇ ತನ್ನ ಮಗನನ್ನ ಕರೆದುಕೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಜಿರಲೆ ಇದ್ದ ಹಾರ್ಲಿಕ್ಸ್ ಪ್ಯಾಕೆಟ್ 08-09-2018ರಲ್ಲಿ ಪ್ಯಾಕ್ ಮಾಡಲಾಗಿದೆ. ಈ ಮಧ್ಯದಲ್ಲಿ…
ಬೆಂಗಳೂರು: ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಬಸ್ ದರ ಏರಿಕೆಯ ಶಾಕ್ ನೀಡುವ ಸಾಧ್ಯತೆ ಇದೆ. ಬಸ್ ದರ ಏರಿಕೆ ಸಂಬಂಧ ಮತ್ತೊಮ್ಮೆ ಸಿಎಂಗೆ ಪ್ರಸ್ತಾಪ ಸಲ್ಲಿಸಲು ಸಾರಿಗೆ ಇಲಾಖೆ ಮುಂದಾಗಿದೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಪದೆ ಪದೇ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕುತ್ತಿದ್ದು, ಸಾರಿಗೆ ಬಸ್ ಪ್ರಮಾಣ ದರ ಏರಿಕೆ ಅನಿವಾರ್ಯ ಎಂದು ತಿಳಿಸಿದರು. ಈ ಮುಂಚೆ ಶೇ.18 ದರ ಏರಿಕೆಗೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಈಗ ಮತ್ತೆ ಸಿಎಂ ಮುಂದೆ ಪ್ರಸ್ತಾಪ ಸಲ್ಲಿಸಿ ನಿಮ್ಮ ವಿವೇಚನೆಗನುಸಾರವಾಗಿ ದರ ಏರಿಕೆ ಮಾಡುವಂತೆ ಮನವಿ ಮಾಡಲಿದ್ದೇವೆ. ನಿನ್ನೆ ನಡೆದ ಮಂಡಳಿ ಸಭೆಯಲ್ಲೂ ಸಾರಿಗೆ ನಿಗಮಗಳ ಎಂಡಿಗಳು ದರ ಏರಿಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಸಿಎಂಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದಿದ್ದಾರೆ.…
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೊಠಡಿಯಲ್ಲಿ ಡಿಜಿಟಲ್ ಹಾಗೂ ಸ್ಮಾರ್ಟ್ ಕೈಗಡಿಯಾರವನ್ನು ನಿಷೇಧಿಸಿ ಕರ್ನಾಟಕ ಪ್ರೌಢಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ನಕಲು ಮಾಡುವ ಸಾಧ್ಯತೆ ಇದೆ ಎಂದು ಎಲ್ಲಾ ಕೈಗಡಿಯಾರವನ್ನು ನಿಷೇಧಿಸಲು ಮೊದಲ ಚಿಂತನೆ ನಡೆದಿತ್ತು ಆದರೆ ಎಲ್ಲಾ ವಿದ್ಯಾರ್ಥಿಗಳ ಬಳಿಕ ಡಿಜಿಟಲ್ ಕೈಗಡಿಯಾರ ಇರುವುದಿಲ್ಲ. ನಮಗೆ ಸಮಯ ನೋಡಲು ತೊಂದರೆಯಾಗುತ್ತದೆ ಹಾಗಾಗಿ ಅನಾಲಾಗ್, ಮೆಕ್ಯಾನಿಕಲ್ ಕೈಗಡಿಯಾರವನ್ನು ಕಟ್ಟಲು ಅವಕಾಶ ಮಾಡಿಕೊಡಿ ಎಂದು ವಿದ್ಯಾರ್ಥಿಗಳು ಇಲಾಖೆಯಗೆ ಮನವಿ ಮಾಡಿದ್ದರು. ಈ ಕುರಿತು ಗಂಭೀರ ಚಿಂತನೆ ನಡೆಸಿರುವ ಪ್ರೌಢಶಿಕ್ಷಣ ಮಂಡಳಿ ಅನಾಲಾಗ್, ಮೆಕ್ಯಾನಿಕಲ್ ಕೈಗಡಿಯಾರವನ್ನು ಬಳಕೆ ಮಾಡಬಹುದು, ಡಿಜಿಟಲ್, ಸ್ಮಾರ್ಟ್ ವಾಚ್‌ಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಹುಬ್ಬಳ್ಳಿ: ಮೈತ್ರಿ ಸರಕಾರದ ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದಲ್ಲಿ ಆಗಲೀ ಅಥವಾ ಡಿಸಿಎಂ ಮತ್ತು ತಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೃಹಖಾತೆ ಬಿಟ್ಟುಕೊಡುವ ಕುರಿತಂತೆ ಉಪಮುಖ್ಯಮಂತ್ರಿಡಾ.ಜಿ.ಪರಮೇಶ್ವರ್ ಜೊತೆವಾದ – ವಾಗ್ದಾದವೂ ನಡೆಲಿಲ್ಲ . ಗೃಹ ಖಾತೆ ಬಿಟ್ಟು ಕೊಡಿ ಎಂದು ಪಟ್ಟು ಹಿಡಿದಿಲ್ಲ ಎಂದರು. ಬಾದಾಮಿಗೆ ತೆರಳುವ ಮುನ್ನವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಸಚಿವರಿಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರುಖಾತೆಗಳಿಗೂ ಹಂಚಿಕೆ ಮಾಡುತ್ತಾರೆ . ಹೀಗಾಗಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು. ಇದೇ ವೇಳೆ ಬಿಜೆಪಿಯವರ ವಿರುದ್ಧ ಕಿಡಿಕಾರಿದ ಸಿದ್ರಾಮಯ್ಯ, ಬಿಜೆಪಿ ಶಾಸಕ ಉಮೇಶ ಕತ್ತಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸರಕಾರ ಅವಧಿ ಪೂರ್ಣಗೊಳಿಸಲಿದೆ ಎಂದರು.
ಬರಗೂರು : ಸಾಲದ ಬಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬರಗೂರು ಸಮೀಪದ ರಂಗಾಪುರ ಗ್ರಾಮದಲ್ಲಿ ಬುಧವಾರ ಮುಂಜಾನೆ ಜರುಗಿದೆ. ರಂಗಪುರ ಗ್ರಾಮದ ಸರ್ವೆ ನಂಬರ್ 14/2ಎ ನಲ್ಲಿ ಮೂರು ಎಕರೆ 29 ಗುಂಟೆ ಜಮೀನು ಹೊಂದಿರುವ ರೈತ ಗೋಪಾಲ ಕೃಷ್ಣ (47) ಎಂದು ಗುರ್ತಿಸಿದ್ದು ಇವರು ನಾಲಕ್ಕೂ ಬೋರ್‍ವೇಲ್ ಕೊರೆಸಿದ್ದು ಅಂತರ್ಜಲ ಕುಸಿತದಿಂದ ನೀರು ಬಾರದೆ ತಾವು ಬೇಳೆದ ದಾಳಿಂಬೆ, ರೇಷ್ಮೆ ಕೈಕೋಟ್ಟಿದ್ದು ತನ್ನ ಜಮಿನಿನ ಅಬಿವೃದ್ದಿಗಾಗಿ ಮಾಡಿದ್ದ ಸಾಲ ಬೆನ್ನಿಗೆ ಬಿದ್ದ ಕಾರಣ ಸಾಲದ ಬಾದೆ ತಾಳಲಾರದೆ ಮರಕ್ಕೆ ನೇಣು ಬೀಗಿದು ಕೋಂಡು ಆತ್ಮಹತ್ಯೆಗೆ ಶರಣಗಿದ್ದಾರೆ ಎನ್ನಲಾಗಿದೆ. ಪಿಎಲ್‍ಡಿ ಬ್ಯಾಂಕ್‍ನಲ್ಲಿ 2.20.00, ಕೆನರ ಬ್ಯಾಂಕ್‍ನಲ್ಲಿ 40.000, ಬರಗೂರು ವಿಎಸ್‍ಎಸ್‍ಎನ್‍ನಲ್ಲಿ 25.000, ಬರಗೂರು ಧರ್ಮಸ್ಥಳ ಸಂಘದಲ್ಲಿ 80.000, ಖಾಸಗಿ ಹಣ ಸಂಸ್ಥೆಯಲ್ಲಿ 1.55.000 ಸಾಲಪಡೆದಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣವನ್ನು ಪಟ್ಟನಾಯಕನಹಳ್ಳಿ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ. …
ತುಮಕೂರು: ಮಹದಾಯಿ ಮತ್ತು ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವ ತೆಮಿಳುನಾಡು ಮತ್ತು ಗೋವಾ ಸರಕಾರಗಳ ಕ್ರಮವನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆವತಿ ಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು, ತಮಿಳುನಾಡು ಮತ್ತು ಗೋವಾ ಸರಕಾರದ ವಿರುದ್ದ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಿ.ಪಿ.ಸುಧೀರ್, ಕಾವೇರಿ ಕೊಳ್ಳದಲ್ಲಿ ಬರುವ ಮೇಕೆದಾಟು ಯೋಜನೆಯ ಬಗ್ಗೆ ಕರ್ನಾಟಕ ಸರಕಾರ ಕಳೆದ 15ವರ್ಷಗಳಿಂದ ನಿರಂತರ ಪ್ರಯತ್ನ ನಡೆಸುತ್ತಾ ಬಂದಿದ್ದರೂ,ತಮಿಳುನಾಡು ಸರಕಾರ ಅಡ್ಡಗಾಲು ಹಾಕುತ್ತಲೇ ಬಂದಿದೆ.ಪ್ರಸ್ತುತ ಕೇಂದ್ರ ಸರಕಾರ ಅನುಮತಿ ನೀಡಿದ್ದರೂ, ಅಧಿವೇಶನದಲ್ಲಿ ತಮಿಳುನಾಡು ಸಂಸದರು ವಿರೋಧಿಸುವ ಮೂಲಕ ಯೋಜನೆ ಅನುಷ್ಠಾನಗೊಳ್ಳದಂತೆ ತಡೆಯಲು ಹೊರಟಿರುವುದು ಸರಿಯಲ್ಲ. ಕೂಡಲೇ ಕೇಂದ್ರ ಸರಕಾರ ತಮಿಳುನಾಡು…