Author: News Desk Benkiyabale

ಕೊರಟಗೆರೆ:      ಪತ್ನಿಯು ಪರ ಪುರುಷನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆಂದು ಅನುಮಾನಗೊಂಡ ವ್ಯಕ್ತಿಯೊಬ್ಬ ತನ್ನ ಹಾಲುಗಲ್ಲದ ಮಗುವನ್ನು ಹತ್ಯೆ ಮಾಡಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.      ನರಸಿಂಹಮೂರ್ತಿಯೇ ಮಗುವನ್ನು ಕೊಲೆ ಮಾಡಿ ಆರೋಪಿ ಸ್ಥಾನದಲ್ಲಿ ನಿಂತಿರುವ ತಂದೆ. ಈತ ಚಿಕ್ಕಬಳ್ಳಾಪುರದ ಕಲ್ಯಾಣ ಮಂಟಪವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ತನ್ನ ಪತ್ನಿಗೆ ಅನೈತಿಕ ಸಂಬಂಧ ಇದೆ ಅಂತಾ ಸೇಡು ತೀರಿಸಿಕೊಳ್ಳಲು ಹೆಣ್ಣುಮಗುವನ್ನು ಕೊಲೆ ಮಾಡಿ ಬಾವಿಗೆ ಬಿಸಾಡಿದ್ದಾಗಿ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.       ಡಿಸೆಂಬರ್ 12ರಂದು ಎಂ.ವೆಂಟಾಪುರ ಗ್ರಾಮದ ಶಿವಶಂಕರಯ್ಯ ಎಂಬವರ ಜಮೀನಿನ  ಬಾವಿಯೊಂದರಲ್ಲಿ ಎರಡೂವರೆ ವರ್ಷದ ಹೆಣ್ಣುಮಗುವಿನ ಶವ ಪತ್ತೆಯಾಗಿದ್ದು, ಮಗುವಿನ ಶವಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆಯಲಾಗಿತ್ತು ಎನ್ನಲಾಗಿದೆ.       ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿ ಮತ್ತು ಮಗುವಿನ ಪೋಷಕರಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಬಳಿಕ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್, ವಾಟ್ಸಪ್ ಹಾಗೂ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ…

Read More

ಬೆಂಗಳೂರು:       ಎಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳ ಪ್ರವೇಶ ಪತ್ರ(ಹಾಲ್ ಟಿಕೆಟ್)ಗಳಲ್ಲಿ ಲೋಪದೋಷವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಡಿ.31ವರೆಗೂ ಅವಕಾಶ ಕಲ್ಪಿಸಿದೆ. 2019ನೇ ಸಾಲಿನ ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶ ಪತ್ರಗಳ ಡೌನ್‌ಲೋಡ್ ಹಾಗೂ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಸೂಚನೆ ನೀಡಿದ್ದಾರೆ.       ಎಸ್ ಎಸ್ ಎಲ್ ಸಿ ಪರೀಕ್ಷೆ ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿದ್ದು, ಡಿಸೆಂಬರ್ 31ರೊಳಗೆ ಲೋಪದೋಷಗಳನ್ನು ಗುರುತಿಸಿ ಸರಿ ಪಡಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಎಸ್ ಎಸ್ ಎಲ್ ಸಿ ಬೋರ್ಡ್ ಸೂಚಿಸಿದೆ.       ಶಾಲಾ ಆಡಳಿತ ಮಂಡಳಿಗೆ ಬೋರ್ಡ್  ವೆಬ್ ಸೈಟ್ ನ ಪಾಸ್ ವರ್ಡ್ ನೀಡಲಾಗಿದ್ದು, ಅದರಲ್ಲಿ ಲಾಗಿನ್ ಆಗಿ ತಪ್ಪುಗಳಿದ್ದರೇ ಸರಿ ಪಡಿಸುವ ಅವಕಾಶ ಕಲ್ಪಿಸಲಾಗಿದೆ, ವೆಬ್ ಸೈಟ್ ನಲ್ಲಿ 9 ವರ್ಗಗಳಿದ್ದು, ಅಭ್ಯರ್ಥಿಯ ಹೆಸರು, ಪೋಷಕರು ಹೆಸರು, ಹುಟ್ಟಿದ ದಿನಾಂಕ, ಲಿಂಗ,…

Read More

 ತುಮಕೂರು:       ನಿನ್ನೆ ನಿಧನರಾದ “ಪದ್ಮಶ್ರೀ” ಪುರಸ್ಕತೆ ಡಾ: ಸೂಲಗಿತ್ತಿ ನರ ಸಮ್ಮ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ನಗರದ ಗಂಗಸಂದ್ರದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ನೆರವೇರಿಸಲಾಯಿತು.       ಇದಕ್ಕೂ ಮುನ್ನ ಸಚಿವರಾದ ವೆಂಕಟರಮಣಪ್ಪ, ಯು.ಟಿ.ಖಾದರ್, ಎಸ್.ಆರ್.ಶ್ರೀನಿವಾಸ್, ಆರ್.ಬಿ.ತಿಮ್ಲಾಪುರೆ, ಮಾಜಿ ಸಚಿವರಾದ ಎಚ್. ಆಂಜನೇಯ, ಸೊಗಡು ಶಿವಣ್ಣ, ಸಂಸದರಾದ ಎಸ್.ಪಿ. ಮುದ್ದಹನುಮೇಗೌಡ, ಚಂದ್ರಪ್ಪ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ತಿಮ್ಮರಾಯಪ್ಪ, ಶಾಸಕರಾದ ಜ್ಯೋತಿಗಣೇಶ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಸಂಸದ ಜಿ.ಎಸ್.ಬಸವರಾಜು, ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಅಭಿಮಾನಿಗಳು ನಗರದ ಗಾಜಿನ ಮನೆಯಲ್ಲಿಡಲಾಗಿದ್ದ ಮೃತ ಸೂಲಗಿತ್ತಿ ನರಸಮ್ಮ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.       ಸೂಲಗಿತ್ತಿ ನರಸಮ್ಮರವರು ಆಗಿನ ಕಾಲದಲ್ಲೇ ಆರೋಗ್ಯದ ಬಗ್ಗೆ ಹೆಚ್ಚಿನ ಮಹತ್ವ…

Read More

ತುಮಕೂರು:        ಗಣಿತ ಎಂದಾಕ್ಷಣ ಕಬ್ಬಿಣದ ಕಡಲೆ. ಅದು ಕಷಷ್ಟ. ಅದು ನಮ್ಮ ತಲೆಗೆ ಹತ್ತುವುದಿಲ್ಲ ಎಂದು ಹೇಳುತ್ತಿದ್ದ ಕಾಲ ಒಂದಿತ್ತು. ಆದರೆ ಈಗ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಸ್ಮರಿಸಲೇಬೇಕಾದ ಗಣಿತ ಕ್ಷೇತ್ರದ ಮಹಾನ್ ಸಾಧಕರಾದ ಶ್ರೀನಿವಾಸ ರಾಮಾನುಜನ್ ಎಂದು ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎ.ಸೋಮೇಶ್ವರಗುಪ್ತ ಹೇಳಿದರು.       ಅವರು ತುಮಕೂರಿನ ಎಸ್‍ಐಟಿ ಮಉಖ್ಯರಸ್ತೆಯಲ್ಲಿರುವ ವಾಸವಿ ಪದವಿಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರದ ಮುಖ್ಯಸ್ಥ ಜಿ.ಹನುಮಂತಯ್ಯ ನೇತೃತ್ವದಲ್ಲಿ ನಡೆದ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟಹಬ್ಬದ ಸವಿನೆನಪಿಗಾಗಿ ಎಸ್‍ಎಸ್‍ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಗಣಿತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.       ಗಣಿತದ ಬಗ್ಗೆ ಭಯಬಿಟ್ಟು ಶ್ರದ್ಧೆಯಿಂದ ಪಾಠ ಹೇಳಿ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿನಿತ್ಯ ಮನಸ್ಸಳ್ಳ ಮನಸ್ಸಿನಿಂದ ಸಾಕಷ್ಟು ಲೆಕ್ಕಗಳನ್ನು ಮಾಡಿ ನಿಮ್ಮ ಬದುಕಿನ ಲೆಕ್ಕವನ್ನು ಸರಿಪಡಿಸಿಕೊಳ್ಳಿ. ಈ ದಿನ ನಡೆಯುವ ರಸಪ್ರಶ್ನೆ…

Read More

 ತುಮಕೂರು:       ಹೊಸ ವರ್ಷದ ಅಂಗವಾಗಿ ಹಾಗೂ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಹಿನ್ನೆಲೆಯಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಆಯೋಜಿಸಿದ್ದ ನಂದಿನ ಸಿಹಿ ಉತ್ಪನ್ನಗಳ ಶೇ10ರ ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಸವ ಮಾರಾಟ ಪ್ರಕ್ರಿಯೆಗೆ ಬುಧವಾರ ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಪ್ಪ ಚಾಲನೆ ನೀಡಿದರು.       ನಗರದ ಜಿಲ್ಲಾ ಪಂಚಾಯಿತಿ ಸಮೀಪವಿರುವ ನಂದಿನಿ ಉತ್ಪನ್ನಗಳ ಮಳಿಗೆಯಲ್ಲಿ ಮಾರುಕಟ್ಟೆಗೆ ಶೇ10ರ ರಿಯಾಯಿತಿ ದರದ ಉತ್ಪನ್ನಗಳ ಬಿಡುಗಡೆ ಮಾಡಿ, ಗ್ರಾಹಕರಿಗೆ ನೀಡುವ ಮೂಲಕ ಡಿಸೆಂಬರ್ 21 ರಿಂದ 2019 ರ ಜನವರಿ 09ರವರೆಗೆ ಇರುವ ರಿಯಾಯಿತಿ ಮಾರಾಟ ಆರಂಭಿಸಿದರು.       ಈ ವೇಳೆ ಮಾತನಾಡಿದ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಪ್ಪ,ಇಂದು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಇಡೀ ದೇಶದಲ್ಲಿಯೇ ಗುಣಮಟ್ಟದಲ್ಲಿ ಮತ್ತು ರುಚಿಯಲ್ಲಿ ಹೆಸರುವಾಸಿಯಾಗಿವೆ.ಆದ್ದರಿಂದ ನಂದಿನಿ ಸಿಹಿ ಉತ್ಪನ್ನಗಳಿಗೆ ಬಾರಿ ಬೇಡಿಕೆಯಿದೆ. ಹೊಸದ ಹಿನ್ನೆಲೆಯಲ್ಲಿ ಸಿಹಿ ಖರೀದಿಸುವವರು,ತಾಜಾ ಮತ್ತು ಗುಣಮಟ್ಟದಿಂದ ಕೂಡಿದ…

Read More

 ತುಮಕೂರು:       ತುಮಕೂರು ನಗರವನ್ನು ಕ್ರೀಡಾ ನಗರಿಯನ್ನಾಗಿ ರೂಪಿಸಬೇಕೆನ್ನುವ ನಾಗರಿಕರ ಒತ್ತಾಸೆಗೆ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸುಮಾರು 8 ಕೋಟಿ ವೆಚ್ಚದಲ್ಲಿ ಸಿಂಥಟಿಕ್ ಟ್ರಾಕ್ ನಿರ್ಮಾಣಕ್ಕೆ ಮುಂದಾಗಿರುವುದು ಪುಷ್ಠಿ ನೀಡಿದಂತಿದೆ ಎಂದು ಜಿಲ್ಲಾ ವಕ್ಪ್ ಬೋರ್ಡನ ಮಾಜಿ ಆಡಳಿತಾಧಿಕಾರಿ ನವೀದ್ ಬೇಗ್ ತಿಳಿಸಿದ್ದಾರೆ.       ನಗರದ ಹೊಯ್ಸಳ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲಾ ಉಸ್ತುವಾರಿ ಸಚಿವರು,ಕ್ರೀಡಾ ಹಾಗೂ ಯುವಸಬಲೀಕರಣ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರು, ಮಹಾತ್ಮಗಾಂಧಿ ಕ್ರೀಡಾಂಗಣ ದಲ್ಲಿ ಅಂದಾಜು 8 ಕೋಟಿ ರೂ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸಿಂಥಟಿಕ್ ಅಥ್ಲೇಟಿಕ್ ಟ್ರಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನರವೇರಿಸಿರುವುದು ಜಿಲ್ಲೆಯ ಎಲ್ಲಾ ನಾಗರಿಕರು, ಕ್ರೀಡಾಪ್ರೇಮಿಗಳು ಸಂತಸ ಪಡುವ ವಿಚಾರವಾಗಿದೆ.ಇದಕ್ಕಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರುಗಳಿಗೆ ಜಿಲ್ಲೆಯ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.       ಕೆಲ ಸಮಾನ ಮನಸ್ಕರು ಸೇರಿ ತುಮಕೂರು ಜಿಲ್ಲೆಯನ್ನು ಕ್ರೀಡಾ…

Read More

 ತುಮಕೂರು:       ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದರಿಂದ ಭವಿಷ್ಯದಲ್ಲಿ ಉತ್ತಮ ಕಲಾ ಪ್ರತಿಭೆಗಳಾಗಿ ಹೊರಹೊಮ್ಮಲಿದ್ದಾರೆ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಡಾ. ಲಕ್ಷ್ಮಣ್‍ದಾಸ್ ಅಭಿಪ್ರಾಯಪಟ್ಟರು.       ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶಿರಾ ತಾಲ್ಲೂಕು ಭೂವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಹಯೋಗದಲ್ಲಿ ವಸತಿ ಶಾಲೆಯಲ್ಲಿಂದು ಆಯೋಜಿಸಲಾಗಿದ್ದ “ಚಿಗುರು” ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಿಗುರು ಕಾರ್ಯಕ್ರಮವು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.       ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಕಲಾಭಿರುಚಿಯನ್ನು ಬೆಳೆಸಲು ಸರ್ಕಾರವು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.       ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್.ರಾಜಕುಮಾರ್…

Read More

ಬೆಂಗಳೂರು:       ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ(98) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.       ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೃಷ್ಣಾಪುರದವರಾದ ಸೂಲಗಿತ್ತಿ ನರಸಮ್ಮ ಆಸ್ಪತ್ರೆ ಹಾಗೂ ವೈದ್ಯರಿಲ್ಲದ ಕಾಲದಲ್ಲಿ ಹೆರಿಗೆ ತಜ್ಞೆಯಾಗಿದ್ದರು.  ಸುಮಾರು 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಕೀರ್ತಿ ಅವರದ್ದು, ವೈದ್ಯರು ಇಲ್ಲದ ಕಾಲದಲ್ಲಿ ವೈದ್ಯರಂತೆ ಹೆರಿಗೆ ಮಾಡಿಸಿದ್ದರು. 2018ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಕಳೆದ 25 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ, ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.       ಆಸ್ಪತ್ರೆ, ವೈದ್ಯರು ಇಲ್ಲದ ಕಾಲದಲ್ಲಿ ಪ್ರಸೂತಿ ತಜ್ಞೆಯಾಗಿದ್ದ ನರಸಮ್ಮನವರ ಅಪರಿಮಿತವಾದ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರವು 2018ನೇ ಸಾಲಿನಲ್ಲಿ ದೇಶದ ಪ್ರತಿಷ್ಠಿತ ನಾಗರಿಕ ಸನ್ಮಾನ ‘ಪದಶ್ಮೀ’ ನೀಡಿ ಗೌರವಿಸಿತ್ತು.        ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮ…

Read More

ತುಮಕೂರು :       ರೈತರು ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಒಳ್ಳೆಯ ಬೆಳೆ ಬೆಳೆದು ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಉಪಾಧ್ಯಕ್ಷ ರಂಗಸ್ವಾಮಯ್ಯ ತಿಳಿಸಿದರು.       ತಾಲ್ಲೂಕಿನ ಕಂಬಳಾಪುರದಲ್ಲಿ ಐಡಿಎಫ್ ಸಂಸ್ಥೆ, ಕೊಲ್ಲಾಪುರದಮ್ಮ ರೈತ ಉತ್ಪಾದಕರ ಕಂಪನಿಯ ಹೆಬ್ಬೂರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಬರದ ಹಿನ್ನೇಲೆಯಲ್ಲಿ ಸರ್ಕಾರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೂನ್ಯ ಬಂಡವಾಳ ಕೃಷಿ, ಕೃಷಿ ಯಂತ್ರಧಾರೆ, ಸಾವಯವ ಕೃಷಿ, ಕೃಷಿ ಭಾಗ್ಯ, ಇಸ್ರೇಲ್ ಮಾದರಿ ಕೃಷಿ ಹೀಗೆ ರೈತರಿಗೆ ಹತ್ತು ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು ಇವುಗಳ ಸದ್ಬಳಕೆಯನ್ನು ಪ್ರತಿಯೊಬ್ಬ ರೈತರು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವಲ್ಲಿ ಪ್ರಯತ್ನ ಮಾಡುವಲ್ಲಿ ಮುಂದಾಗಬೇಕು ಎಂದರು.      …

Read More

 ತುಮಕೂರು:       ಭಾರತರತ್ನ ಮಾಜಿ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿರವರಿಗೆ ಸಿದ್ದಗಂಗೆಯ ಹಿರಿಯ ಶ್ರೀಗಳಾದ ಡಾ|| ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮಿಜೀಗಳನ್ನು ಕಂಡರೆ ಅತ್ಯಂತ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದರು.       ತುಮಕೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ 95ನೇ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸುಶಾಸನ ದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಜಪೇಯಿರವರುರವರಿಗೆ  ಶ್ರೀ.ಶ್ರೀ.ಶ್ರೀ.ಶಿವಕುಮಾರಸ್ವಾಮಿಜೀಗಳನ್ನು ಕಂಡರೆ ಅತ್ಯಂತ ಪ್ರೀತಿ ಮತ್ತು ಭಕ್ತಿ.  ವಾಜಪೇಯಿರವರು ಪ್ರಧಾನಮಂತ್ರಿಗಳಾದ ಸಂದರ್ಭದಲ್ಲಿ ನಾನು ತುಮಕೂರಿನಲ್ಲಿ ಸಂಸದನಾಗಿದ್ದೆ. ತುಮಕೂರಿನ ಸಂಸದ ಎಂದ ಕೂಡಲೇ ಕೈಸೆಹೋ ಭೇಟಾ ನಮ್ಮ ಸಿದ್ದಗಂಗ ಸ್ವಾಮಿಜಿಗಳು ಹೇಗೆ ಇದ್ದಾರೆ ಅವರ ಯೋಗಕ್ಷೇಮವನ್ನು ವಿಚಾರಿಸಿದೆ ಎಂದು ಹೇಳಿ ಎಂದು ಹೇಳುತ್ತಿದ್ದರು. ವಾಜಪೇಯಿರವರು ವಿದೇಶಾಂಗ ಮತ್ತು ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿದ್ದ  ಸಂದರ್ಭದಲ್ಲಿ ಈ ಸಮಿತಿಯ ಸದಸ್ಯನಾಗಿದ್ದ ನಾನು ವಾಜಪೇಯಿರವರ ಒಡನಾಟ ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವರ ಸರಳತೆ ಮತ್ತು ವ್ಯಕ್ತಿತ್ವದಿಂದ ವಿರೋಧ ಪಕ್ಷದವರಿಗೂ ಅತ್ಮೀಯರಾಗಿದ್ದರು ಎಂದು ತಮ್ಮ ಅನುಭವ ಹಂಚಿಕೊಂಡರು.    …

Read More