ತುಮಕೂರು: ಕಟ್ಟಡ ಕಾರ್ಮಿಕರು ಸುರಕ್ಷತೆ ಇಲ್ಲದೆ ಅನಾರೋಗ್ಯದಿಂದ ನರಳುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳು ಸಹ ಸರಿಯಾದ ವೇಳೆಗೆ ದೊರೆಯದೆ ಸಾಲದ ಸುಳಿಗೂ ಸಹ ಸಿಲುಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಉಮೇಶ್ ಒತ್ತಾಯಿಸಿದ್ದಾರೆ. ತುಮಕೂರು ತಾಲೂಕು ಹೊಬ್ಬೂರು ಹೋಬಳಿಯ ಸಿರಿವರ ಗ್ರಾಮದಲ್ಲಿ ಪಂಚಾಯಿತಿ ಮಟ್ಟಡ ಕಟ್ಟಡ ಕಾರ್ಮಿಕರ ಸಮಾವೇಶ ದಲ್ಲಿ ಮಾತನಾಡಿದರು. 1996ರಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಜಾರಿಗೊಂಡ ಕಟ್ಟಡ ಕಾರ್ಮಿಕರ ಸೌಲಭ್ಯಗಳು ಕಲ್ಯಾಣ ಮಂಡಳಿಯ ಅಡಿಯಲ್ಲಿ ಸಿಗುವಂತೆ ಕಾನೂನು ರೂಪಿಸಲಾಗಿ 2006ರಲ್ಲಿ ರಾಜ್ಯದಲ್ಲೂ ಜಾರಿಗೆ ಬಂದಿದೆ. ಕಾರ್ಮಿಕರನ್ನು ತಲುಪುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಇದಕ್ಕೆ ಸಿಬ್ಬಂದಿ ಕೊರತೆ, ಇಚ್ಛಾಶಕ್ತಿ ಕೊರತೆ, ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಪರಸ್ಪರ ಸಹಕಾರವಿಲ್ಲದೆ ನಿಧಾನಗತಿಯಲ್ಲಿ ಸವಲತ್ತು ಸಿಗುತ್ತಿವೆ. ಎಚ್.ಡಿ.ಕುಮಾರಸ್ವಾಮಿಯವರು…
Author: News Desk Benkiyabale
ತುರುವೇಕೆರೆ: ಪಟ್ಟಣದ ಸಮೀಪ ಮಾಯಸಂದ್ರ ರಸ್ತೆಯ ಬೆಳ್ಳಿ ಪೆಟ್ರೋಲ್ ಬಂಕ್ ಬಳಿ ಅತೀ ವೇಗದಲ್ಲಿ ಚಲಿಸಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು ಓರ್ವನಿಗೆ ತೀವ್ರತರ ಪೆಟ್ಟಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತ ದುರ್ದೈವಿ ಕಿಶೋರ್ (29) ಎಂದು ತಿಳಿದು ಬಂದಿದ್ದು ತಾಲೂಕಿನ ಹುಲಿಕೆರೆ ಗ್ರಾಮದವನಾಗಿದ್ದು ಪಟ್ಟಣದಲ್ಲಿ ಸೈಬರ್ ಸೆಂಟರ್ ನಡೆಸುತ್ತಿದ್ದನು. ಶನಿವಾರ ರಾತ್ರಿ ಮಾಯಸಂದ್ರ ಕಡೆಗೆ ಸ್ನೇಹಿತರೊಂದಿಗೆ ಅತೀ ವೇಗದಲ್ಲಿ ಕಾರಿನಲ್ಲಿ ತೆರಳುವಾಗ ಆಯಾ ತಪ್ಪಿ ವಿದ್ಯುತ್ ಕಂಬಕ್ಕ ಗುದ್ದಿದೆ. ಕಾರಿನಲ್ಲಿದ್ದ ಕಿಶೋರ್ (25) ಸಾವನ್ನಪ್ಪಿದ್ದು. ಇನ್ನೊಬ್ಬ ಯುವಕ ವಿಠಲದೇವರಹಳ್ಳಿ ಶಿವರಾಜುಪಟೇಲ್ (30) ತೀವ್ರತರ ಪೆಟ್ಟಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಗುದ್ದಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ: ಮುಂಬರುವ 2019ನೇ ಲೋಕಸಭಾ ಚುನಾವಣೆಗೆ ಮಕ್ಕಳ್ ನಿಧಿ ಮೈಯಮ್ (ಎಂಎನ್ಎಂ) ಪಕ್ಷ ಖಂಡಿತವಾಗಿಯೂ ಸ್ಪರ್ಧಿಸುತ್ತದೆ ಎಂದು ನಟ, ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾನ ಮನಸ್ಸಿನ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲೂ ನಮ್ಮ ಎಂಎನ್ಎಂ ಪಾರ್ಟಿ ಸಿದ್ಧವಾಗಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೋಸ್ಕರ ಸಮಿತಿ ರಚನೆ ಮಾಡುತ್ತೇವೆ. ಈ ಬಾರಿಯ ಸಾರ್ವತ್ರಿಕ ಚುನಾವಣೆಯನ್ನು ನಾನು ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಮೈತ್ರಿ ಬಗ್ಗೆ ಚುನಾವಣೆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ತಮಿಳುನಾಡಿನ ರಾಜಕೀಯದ ಮೂಲ ಸ್ವರೂಪವನ್ನೇ ಬದಲಿಸಲು ಹೊರಟ ಪಕ್ಷಗಳೊಂದಿಗೆ ಯಾವ ಕಾರಣಕ್ಕೂ ಹೊಂದಾಣಿಕೆ ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ನಡೆಸುತ್ತೇವೆ ಎಂದಿದ್ದಾರೆ.
ಬೆಂಗಳೂರು: ಸಮ್ಮಿಶ್ರ ಸರಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಶನಿವಾರ ಸಂಜೆ ನಿಗದಿಯಂತೆ ನಡೆದಿದ್ದು, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ 8 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಮೊದಲಿಗೆ ಎಂ.ಬಿ. ಪಾಟೀಲ್ ಪ್ರಮಾಣ ವಚನ ಸ್ವೀಕರಿಸಿದರು. ಎರಡನೆಯವರಾಗಿ ಆರ್.ಬಿ. ತಿಮ್ಮಾಪುರ ; ಮೂರನೆಯವರಾಗಿ ಸತೀಶ್ ಜಾರಕಿಹೊಳಿ ಅವರು ಬುದ್ಧಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಾಲ್ಕನೆಯವರಾಗಿ ಸಿ.ಎಸ್. ಶಿವಳ್ಳಿ, ಐದನೆಯವರಾಗಿ ಪಿ.ಟಿ. ಪರಮೇಶ್ವರ್ನಾಯ್ಕ್ಶ್ರೀ ತುಳಜಾಭಾನಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆರನೆಯವರಾಗಿ ಇ. ತುಕಾರಾಂ, ಏಳನೆಯವರಾಗಿ ರಹೀಂ ಖಾನ್ ಹಾಗೂ ಕೊನೆಯವರಾಗಿ ಎಂಟಿಬಿ ನಾಗರಾಜ್ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡುವುದರ ಜತೆಗೆ…
ತುಮಕೂರು: ಸಮಾನತೆ,ಸ್ವಾತಂತ್ರ, ಭಾತೃತ್ವ ಹಾಗೂ ಮಾನವೀಯ ಹಿನ್ನೆಲೆಯಲ್ಲಿ ರಚಿತವಾಗಿರುವ ಭಾರತದ ಸಂವಿಧಾನ ಸಂಪೂರ್ಣವಾಗಿ ಜಾರಿಗೆ ಬರಬೇಕೆಂದರೆ,ಕೇಂದ್ರದಲ್ಲಿ ಮಯಾವತಿ ಅವರ ನೇತೃತ್ವದ ಬಿಎಸ್‍ಪಿ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಸಾಧ್ಯ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹಾಗೂ ಉತ್ತರಪ್ರದೇಶದ ವಿಧಾನಪರಿಷತ್ ಮಾಜಿ ಸದಸ್ಯ ಥೋಮರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಬಿಎಸ್‍ಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಈ ದೇಶದ ಎಲ್ಲಾ ಬಡವರಿಗೆ, ಕೂಲಿಕಾರರಿಗೆ, ರೈತರಿಗೆ, ಶ್ರಮಜೀವಿಗಳಿಗೆ ಮೂರು ಹೊತ್ತಿನ ಊಟ,ಇರಲು ಮನೆ, ಹಾಕಲು ಬಟ್ಟೆಗಳು ಸಿಗಬೇಕು.ಆದರೆ ಇದುವರೆಗೂ ಅಧಿಕಾರ ನಡೆಸಿದ ರಾಜಕೀಯ ಪಕ್ಷಗಳಿಂದ ಇದು ಸಾಧ್ಯವಾಗಿಲ್ಲ.ಸಂವಿಧಾನದಲ್ಲಿ ಈ ಎಲ್ಲಾ ಅಂಶಗಳು ಅಡಕವಾಗಿದ್ದರೂ, ಅವುಗಳು ಜಾರಿಯಾಗಿಲ್ಲ. ಶ್ರೀಮಂತರ ಪರವಾದ ನೀತಿಗಳು ಮಾತ್ರ ಜಾರಿಯಾಗುತ್ತಿಲ್ಲ.ಇವುಗಳ ವಿರುದ್ದ ಸೆಟೆದ್ದು ನಿಲ್ಲುವ ಧೈರ್ಯ ಇರುವುದು ಬಿಎಸ್ಪಿ ಪಕ್ಷಕ್ಕೆ ಮಾತ್ರ ಎಂದರು. ದೇಶದಲ್ಲಿ ಇದುವರೆಗೂ ಅಧಿಕಾರ ನಡೆಸಿದ…
ದೇಶ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಹಾಗೂ 58 ವಿತ್ತಪರಾಧಿಗಳನ್ನು ಕರೆ ತರಲು ಶತಾಯಗತಾಯ ಕಾರ್ಯಪ್ರವೃತ್ತವಾಗಿರುವುದಾಗಿ ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಅಷ್ಟೇ ಅಲ್ಲದೆ ಒಟ್ಟು 58 ವಿತ್ತಪರಾಧಿಗಳನ್ನು ಕರೆ ತರಲು ಕಾರ್ಯಚರಣೆ ನಡೆಸಿರುವುದಾಗಿ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ ಸಿಂಗ್ ಈ ಸಂಬಂಧ ಲೋಕಸಭೆಗೆ ವಿವರಗಳನ್ನು ನೀಡಿದ್ದಾರೆ. ಒಟ್ಟು 58 ಆರೋಪಿಗಳ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಚಿವ ವಿ.ಕೆ ಸಿಂಗ್ ಮಾಹಿತಿ ನೀಡಿದ್ದಾರೆ. ಒಟ್ಟು 58 ವಿತ್ತಪರಾಧಿಗಳ ಪೈಕಿ 16 ಮಂದಿಯ ಗಡಿಪಾರು ಕೋರಿ ಬ್ರಿಟನ್, ಯುಎಇ, ಬೆಲ್ಜಿಯಂ, ಈಜಿಪ್ತ್, ಅಮೆರಿಕ, ಅಂಟಿಗುವಾ ಮತ್ತು ಬಾರ್ಬುಡಾಗೆ ಮನವಿ ಸಲ್ಲಿಸಲಾಗಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ, ಲಲಿತ್ ಮೋದಿ, ನೀರವ್ ಮೋದಿ ಸೋದರ ನೀಶಲ್, ಆಪ್ತನಾದ ಸುಭಾಷ್ ಪರಬ್, ನಿತಿನ್ ಮತ್ತು ಚೇತನ್ ಸಂದೇಸರ,…
ಬೆಂಗಳೂರು: ಬೆಂಗಳೂರಿನ ಬಿಡಿಎ ಬಡಾವಣೆಯೊಂದಕ್ಕೆ ರೆಬಲ್ ಸ್ಟಾರ್ ಅಂಬರೀಶ್ ಹೆಸರಿಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರನಟ, ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮರಣಾರ್ಥವಾಗಿ ಬಡಾವಣೆಗೆ ಅಂಬರೀಶ್ ಹೆಸರಿಡಲು ನಿರ್ಧರಿಸಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿರುವ ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರಿಡಲಾಗುತ್ತಿದೆ, ಚಾಲುಕ್ಯ ವೃತ್ತದಿಂದ ಮೌರ್ಯ ಸರ್ಕಲ್ ವರೆಗಿನ ವಾರ್ಡ್ 197ರ ವಸಂತಪುರ ಬಡಾವಣೆಯ ಪಿಕಾಸಿಪುರ ಬಿಡಿಎ ಬಡಾವಣೆಗೆ ಅಂಬರೀಶ್ ಹೆಸರಲ್ಲಿ ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ, ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು: ನಮಗೆ ಸ್ವಾರ್ಥರಹಿತ ರಾಜಕಾರಣದ ಅವಶ್ಯಕತೆ ಇದೆ. ಹೀಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ನಾವು ಹರಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರಿಂದಲೇ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ. ಹೀಗಾಗಿ ಅವರು ಮತ್ತೊಮ್ಮೆ ಪ್ರಧಾನಿಯಾಗಲೆಂದು ದತ್ತಾತ್ರೇಯಸ್ವಾಮಿಗೆ ಹರಕೆ ಮಾಡಿಕೊಂಡಿದ್ದೇವೆ. ನಾವು ಲೋಕಸಭಾ ಚುನಾವಣೆಯಲ್ಲಿ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕಾಗಿದೆ ಎಂದರು. ಡಿ. 13ರಂದು ನಡೆಯಲಿರುವ ದತ್ತಜಯಂತಿ ಹಿನ್ನಲೆ ಇರುಮುಡಿ ರೂಪದಲ್ಲಿ ದತ್ತಪೀಠಕ್ಕೆ ತೆರಳಲು ದತ್ತ ಭಕ್ತರು ಸಿದ್ಧತೆ ನಡೆಸುತ್ತಿದ್ದಾರೆ. ದತ್ತ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಪಡಿ ಸಂಗ್ರಹ ಮಾಡಲಾಯಿತು. ದತ್ತಮಾಲಾಧಾರಿಯಾಗಿರುವ ಶಾಸಕ ಸಿ.ಟಿ.ರವಿ ಹಾಗೂ ಮಾಲಾಧಾರಿಗಳಿಂದ ಪಡಿ ಸಂಗ್ರಹ ನಡೆಯಿತು. ಬಸನಹಳ್ಳಿ ಮುಖ್ಯ ರಸ್ತೆ, ರಾಘವೇಂದ್ರ ಮಠದ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿ ಸಂಗ್ರಹಿಸಲಾಯಿತು.
ತುಮಕೂರು: ನಗರದ ಟೌನ್‍ಹಾಲ್ ಸರ್ಕಲ್‍ನಲ್ಲಿರುವ ನಾಗರಕಟ್ಟೆ ಗಣಪತಿ ದೇವಾಲಯದ ತೆರವಿಗೆ ನಗರಪಾಲಿಕೆ ನೊಟೀಷ್ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಜರಂಗದಳ ಹಾಗೂ ನಾಗರಕಟ್ಟೆ ಗಣಪತಿ ದೇವಾಲಯ ಕಮಿಟಿ ಸದಸ್ಯರು, ನೊಟೀಷ್‍ನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬಜರಂಗದಳ ಹಾಗೂ ದೇವಾಲಯದ ಕಮಿಟಿಯ ಸದಸ್ಯರು, ನಾಗರಕಟ್ಟೆ ಗಣಪತಿ ದೇವಾಲಯ ಹಿಂದೂ ಸಮಾಜ ಬಾಂಧವರ ಶ್ರದ್ದಾ, ಭಕ್ತಿಯ ಕೇಂದ್ರವಾಗಿದೆ.ಹಾಗೆಯೇ ಪಕ್ಕದಲ್ಲಿಯೇ ಇರುವ ದರ್ಗಾ ಕೂಡಲೇ ಬಹಳ ವರ್ಷಗಳಿಂದ ಆ ಸಮುದಾಯದ ಆರಾಧನಾ ಕೇಂದ್ರವಾಗಿದೆ.ಎರಡು ಸ್ಥಳಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ.ದರ್ಗಾದ ವಿರುದ್ದ ಹಿಂದೂಗಳಾಗಲಿ,ನಾಗರಕಟ್ಟೆ ವಿರುದ್ದ ಮುಸ್ಲಿಂರಾಗಲಿ ದೂರು ನೀಡಿಲ್ಲ. ಹೀಗಿದ್ದರೂ ಜಿಲ್ಲಾಡಳಿತ ಎರಡು ಕೇಂದ್ರಗಳನ್ನು ತೆರೆವು ಮಾಡಲು ಮುಂದಾಗುವ ಮೂಲಕ ನಗರದಲ್ಲಿ ಕೋಮು ಸೌಹಾರ್ಧತೆಯನ್ನು ಕದಡಲು ಮುಂದಾಗಿದೆ ಎಂದು ಚಂದ್ರಶೇಖರ್ ಆರೋಪಿಸಿದರು. ಈಗಾಗಲೇ ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ನ್ನು ನಗರದ ಹೊರಭಾಗದಲ್ಲಿ ತೆಗೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ. ಆದ್ದರಿಂದ…
ತುಮಕೂರು: ಮನೆಯಲ್ಲಿ ಉತ್ಪತ್ತಿಯಾಗುವ ಕಸದಿಂದ ವಿದ್ಯುತ್‍ಚ್ಛಕ್ತಿ ತಯಾರಿಸುವುದು, ಸೈಪೋನ್ ತಂತ್ರಜ್ಞಾನ, ರಸ್ತೆಯಲ್ಲಿ ಸೋಲಾರ್ ಫಲಕ ಅಳವಡಿಕೆ, ರಾಕೇಟ್ ಒಲೆ ಸೇರಿದಂತೆ ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಗಳ ಪ್ರದರ್ಶನಕ್ಕೆ ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಯಿತು. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಡಿ.ಎಸ್.ಇ.ಆರ್.ಟಿ. ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಇನ್ಸ್‍ಪೈರ್ ಅವಾರ್ಡ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ 10 ತಾಲ್ಲೂಕುಗಳ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು 435 ವಿಭಿನ್ನ ರೀತಿಯ ವಿಜ್ಞಾನ ವಸ್ತುಪ್ರದರ್ಶನವನ್ನು ಪ್ರದರ್ಶಿಸಿದರು. ಮಕ್ಕಳ ಈ ವಿಜ್ಞಾನ ವಸ್ತುಪ್ರದರ್ಶನಕ್ಕೆ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಕ್ಕಳಲ್ಲಿರುವ ಚಿಂತನೆ ಮತ್ತು ಪ್ರತಿಭೆ ಬೆಳೆಯಲು ಇನ್ಸ್‍ಪೈರ್ ಅವಾರ್ಡ್ ತಂತ್ರಜ್ಞಾನ ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮವು ಭಾರತ ಸರ್ಕಾರದಿಂದ ಅನಾವರಣಗೊಂಡ ಕಾರ್ಯಕ್ರಮವಾಗಿದೆ. ಇದರ…