Author: News Desk Benkiyabale

 ತುಮಕೂರು :         ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ ರಾಜಧನ ವಂಚಿಸುತ್ತಿರುವ ಗುತ್ತಿಗೆದಾರರನ್ನು ಹೆಡೆಮುರಿ ಕಟ್ಟಲು ಶಾಸಕ ಡಿ ಸಿ ಗೌರೀಶಂಕರ್ ಮುಂದಾಗಿದ್ದು ಗಣಿ ಪ್ರದೇಶದಲ್ಲಿ ವಾಸ ಮಾಡುವ ಬಡವರ ಸಂಕಷ್ಟ ವನ್ನು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವ ದಂಧೆಕೋರರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಗಣಿ ಮತ್ತು ಭೂ ವಿಜ್ಙಾನ ಸಚಿವರನ್ನು ಆಗ್ರಹಿಸಿದ್ದಾರೆ.       ಬೆಳಗಾವಿ ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ಗ್ರಾಮಾಂತರ ಕ್ಷೇತ್ರದಲ್ಲಿ ಇದುವರೆಗೂ ಮಂಜೂರಾದ ಗ್ರಾನೈಟ್ ಕ್ವಾರಿಗಳು ಹಾಗೂ ಜಲ್ಲಿಕ್ರಶರ್ ಗಳ ಸಂಖ್ಯೆ ಎಷ್ಟು? ಅವು ಯಾವುವು? ಗ್ರಾನೈಟ್ ಕ್ವಾರಿಗಳಿಂದ ಸರಕಾರಕ್ಕೆ ಕೋಟ್ಯಂತರ ರೂಪಾಯಿಗಳ ರಾಜಧನ ನಷ್ಟ ಹಾಗೂ ಪರಿಸರಕ್ಕೆ ಉಂಟಾಗುತ್ತಿರುವ ಹಾನಿ ಸರ್ಕಾರದ ಗಮನಕ್ಕೆ ಬಂದಿದೆಯೇ? ಸರ್ಕಾರದ ಗಮನಕ್ಕೆ ಬಂದಿದ್ದರೆ ರಾಜಧನ…

Read More

ತುಮಕೂರು :      ತಾಂತ್ರಿಕ ದೋಷದ ಕಾರಣ ಟೆಂಪೋ ಟ್ರಾವೆಲರ್ ನಡುರಸ್ತೆಯಲ್ಲೇ ಹೊತ್ತಿಉರಿದಿರುವ ಘಟನೆ ಕುಣಿಗಲ್ ತಾಲೂಕು ಹುಲಿಯೂರುದುರ್ಗದ ಐಬಿ ವೃತ್ತದಲ್ಲಿ ನಡೆದಿದೆ.       ತುಮಕೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ತಕ್ಷಣ ಚಾಲಕ ವಾಹನ ಚಾಲನೆ ಸ್ಥಗಿತಗೊಳಿಸಿದರು.  ಏನಾಗಿದೆ ಎಂದು ಚಾಲಕ ಪರೀಕ್ಷಿಸಲು ಮುಂದಾಗುತ್ತಿದ್ದಂತೆ ಟೆಂಪೋ ಟ್ರಾವೆಲರ್ ಒಳಗೆ ಶಾರ್ಟ್​ ಸರ್ಕ್ಯೂಟ್ ಆಗಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ ತಕ್ಷಣ ವಾಹನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ. ನೋಡ ನೋಡುತ್ತಿದ್ದಂತೆ ವಾಹನ ಧಗ ಧಗ ಹೊತ್ತಿ ಉರಿದಿದೆ.       ಭಾರಿ ಪ್ರಮಾಣದಲ್ಲಿ ಬೆಂಕಿ ಜ್ವಾಲೆ ವ್ಯಾಪಿಸಿದ್ದರಿಂದ ಇನ್ನಿತರ ವಾಹನ ಚಾಲಕರು, ಜನರು  ಕೆಲಕಾಲ ಗಾಬರಿಗೊಂಡರು. ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ದೌಡಾಯಿಸಿದ್ದಾರೆ.  ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ  ಪ್ರಾಣಾಪಾಯ ಸಂಭವಿಸಿಲ್ಲ

Read More

ತುರುವೇಕೆರೆ:       ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಸಂಜೆ ನೆಡೆದಿದೆ. ಮೃತ ದುರ್ದೈವಿ ತಿಪಟೂರಿನ ಗೊರಗೊಂಡನಹಳ್ಳಿ ನಿವಾಸಿ ಶ್ರೀನಿವಾಸ್(20) ಎಂದು ತಿಳಿದು ಬಂದಿದೆ.       ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನವೀಕರಣ ಕಾಮಗಾರಿ ಕೆಲಸ ನಿರ್ವಹಿಸಲು ಆಗಮಿಸಿದ್ದ ಈತ ಆಸ್ಪತ್ರೆ ನಾಮಫಲಕದ ಗೋಪುರದ ಸೆಂಟ್ರಿಂಗ್ ಕಾಮಗಾರಿ ಮಾಡಲು ಮಂಗಳವಾರ ಮುಂದಾಗಿದ್ದು. ಮಂಗಳವಾರ ಬೆಸ್ಕಾಂ ಇಲಾಖೆ ಸಂಜೆವರೆವಿಗೂ ವಿದ್ಯುತ್ ಖಡಿತಗೊಳಿಸಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಿದ್ದನ್ನು ಗಮನಿಸಿ ಖಚಿತ ಗೊಳಿಸಿಕೊಂಡೆ ಕಾರ್ಯನಿರ್ವಹಣೆಗೆ ಮುಂದಾಗಿದ್ದಾನೆ, ಆದರೆ ಸಂಜೆ 5ಗಂಟೆ ಸುಮಾರಿಗೆ ಹೆಬ್ಬಾಗಿಲಿನ ಸೆಂಟ್ರಿಂಗ್‍ಗೆ ಅಳವಡಿಸಿದ್ದ ಮರದ ಹಲಗೆಗಳನ್ನು ಕಬ್ಬಿಣದ ರಾಡಿನಿಂದ ತೆರವುಗೊಳಿಸುವ ಸಂದರ್ಬದಲ್ಲಿ ಸೆಂಟ್ರಿಂಗ್ ಮೇಲ್ಭಾಗದಲ್ಲಿಯೇ ಇದ್ದ ವಿದ್ಯುತ್ ತಂತಿಗೆ ಕಬ್ಬಿಣದ ರಾಡು ತಗಲಿ ವಿದ್ಯುತ್ ಶಾಕ್‍ನಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಸಾರ್ವಜನಿಕರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.      ವೈದ್ಯರು ಚಿಕಿತ್ಸೆ ನೀಡಿದ್ದಾರೆ ಚಿಕಿತ್ಸೆ ಪಲಕಾರಿಯಾಗದೆ…

Read More

ತುರುವೇಕೆರೆ:       ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು 74 ಎಮ್ಮೆ ಹಾಗೂ ಹಸುಗಳನ್ನು ಪಟ್ಟಣದ ಪೊಲೀಸರು ರಕ್ಷಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.       ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿಯಲ್ಲಿ 3 ಕಂಟೈನರ್‍ನಲ್ಲಿ ತುಂಬಿದ್ದ ಎಮ್ಮೆ, ಹಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯನ್ನದಾರಿಸಿ ಪಟ್ಟಣದ ಪೊಲೀಸರು ಮೂರು ಲಾರಿಗಳನ್ನು ತಡದು ತಪಾಸಣೆ ಮಾಡಿದ್ದಾಗ ಅಕ್ರಮವಾಗಿ ಸುಮಾರು 74 ಎಮ್ಮೆ, ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೂಡಲೇ ಮೂರು ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಎಮ್ಮೆ , ಹಸುಗಳನ್ನು ಮೈಸೂರಿನ ಗೋ ಶಾಲೆಗೆ ಸುರಕ್ಷಿತವಾಗಿ ಸಾಗಿಸಲಾಗಿದೆ.  

Read More

ಬೆಂಗಳೂರು:        ವೇಗವಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್ ಹರಿದು ಬಿಬಿಎಂಪಿ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.       ಬಿಬಿಎಂಪಿಯ ಕಸ್ತೂರ ಬಾ ಕಾಲೇಜಿನ ಪಿಯು ವಿದ್ಯಾಥಿಗಳಾದ ಚಂದ್ರಕಾಂತ್(17) ಮತ್ತು ಯದುಕುಮಾರ್(18) ಮೃತ ವಿದ್ಯಾರ್ಥಿಗಳೆಂದು ಪೊಲೀಸರು ತಿಳಿಸಿದ್ದಾರೆ.       ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ರಾಜಶೇಖರ್ ಎಂಬವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ವಿವರ:        ಮೈಸೂರು ರಸ್ತೆಯ ಕೆಬಿ ನಗರದ ಬಿಬಿಎಂಪಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಚಂದ್ರಕಾಂತ್, ದ್ವಿತೀಯ ಪಿಯುಸಿ ಓದುತ್ತಿದ್ದ ಯದುಕುಮಾರ್ ಅವರು ಸ್ನೇಹಿತ ರಾಜಶೇಖರ್ ಜತೆ ಕಾಲೇಜಿಗೆ ಹೋಗಲು ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮೈಸೂರು ರಸ್ತೆಯ ಕಸ್ತೂರ ಬಾ ಕಾಲೇಜಿನ ಕ್ರಿಶ್ಚಿಯನ್ ಸ್ಮಶಾನದ ಬಳಿ ರಸ್ತೆ ದಾಟುತ್ತಿದ್ದರು ಎನ್ನಲಾಗಿದೆ. ಈ ವೇಳೆ ದೊಡ್ಡ…

Read More

ತುಮಕೂರು:       ತುರುವೇಕೆರೆ ತಾಲೂಕು ದಬ್ಬೆಘಟ್ಟ ಹೋಬಳಿ ಕೋಡಿಪುರ ಮಜರೆ ಮುದಿಗೆರೆ ಗ್ರಾಮದ ಶ್ರೀ ಕೋಡಿರಂಗನಾಥಸ್ವಾಮಿ ದೇವಾಲಯದಲ್ಲಿಂದು ವೈಕುಂಠ ಏಕಾದಶಿಯ 10ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.       ಪೂಜಾ ಕಾರ್ಯಕ್ರಮದ ಪ್ರಯುಕ್ತ ಸ್ವಾಮಿಗೆ ಅಂದು ಬೆಳಿಗ್ಗೆ 5 ಗಂಟೆಯಿಂದ ವಿಶೇಷ ಅಭಿಷೇಕ, ಅಲಂಕಾರ, ಹೋಮ, ಮಹಾ ಮಂಗಳಾರತಿ ಸೇವೆಗಳು ಜರುಗಿದವು.       ನಂತರ 11 ಗಂಟೆಯಿಂದ ಭಕ್ತಾದಿಗಳು ಪ್ರಮುಖ ಬೀದಿಯಲ್ಲಿ ಸ್ವಾಮಿಯ ತೇರನ್ನು ಎಳೆದು ಪೂಜೆ ಸಲ್ಲಿಸುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ತೇರಿನೊಂದಿಗೆ ವಿವಿಧ ಜಾನಪದ ಕಲಾತಂಡಗಳು ಕೋಲಾಟ, ಗೊಂಬೆ ಕುಣಿತ, ಪ್ರದರ್ಶನ ನೀಡಿದವಲ್ಲದೆ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ಸಂಜೆ ಸುಗಮ ಸಂಗೀತ ಕಾರ್ಯಕ್ರಮ, ದೀಪೋತ್ಸವ, ಕಾಮಧೇನು ಉತ್ಸವ, ಮಹಾ ಪ್ರಸಾದ ಸೇವೆಗಳು ಜರುಗಿದವು.

Read More

ಬೆಳಗಾವಿ:       ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಆಯೋಜಿಸಿರುವ ಔತಣ ಕೂಟಕ್ಕೆ ನಾನು ಹೋಗಲ್ಲ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.       ಒಂದೆಡೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಹಲವು ಪ್ರಮುಖ ನಾಯಕರು ಗೈರಾಗಿದ್ದಾರೆ. ಇನ್ನೊಂದೆಡೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ಕರೆದಿರುವ ಔತಣಕೂಟದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.       ಈ ಮೂಲಕ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಮುನಿಸು ಹೊರಹಾಕಿದ್ದಾರೆ.  

Read More

 ಬೆಳಗಾವಿ:       ಕಾಂಗ್ರೆಸ್‍ನವರು ಹೇಳಿದಾಗ ಸಂಪುಟ ವಿಸ್ತರಣೆ ಆಗಲಿದೆ. ಸಂಪುಟ ವಿಸ್ತರಣೆಗೆ ನಾವು ತಯಾರಾಗಿದ್ದೇವೆ. ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.        ಕಾಂಗ್ರೆಸ್ ನಾಯಕರು ಯಾವ ಸಮದಯಲ್ಲಿ ಎಂದು ಹೇಳುತ್ತಾರೋ ಆಗ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿದ್ಧನಿದ್ದೇನೆ. ಹೀಗಂತ ಮುಖ್ಯಮಂತ್ರಿ ಹೆಚ್ . ಡಿ . ಕುಮಾರಸ್ವಾಮಿ ಹೇಳಿದ್ದಾರೆ .                 ಡಿ. 22 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ . ಅದೇ ರೀತಿ ಸಂಪುಟ ವಿಸ್ತರಣೆ ಮಾಡಲು ತಾವು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕಾಂಗ್ರೆಸ್ಶಾಸಕರು ಗೈರು ಆಗಿರುವ ವಿಚಾರದ ಬಗ್ಗೆ ತಮಗೆ ಮಾಹಿತಿ ಇಲ್ಲ . ಆದರೆ ಕಾಂಗ್ರೆಸ್ ನವರು ಹೇಳಿದ ದಿನದಂದು ಸಂಪುಟವಿಸ್ತರಣೆಗೆ ಸಿದ್ಧವಿರುವುದಾಗಿ ಸಿಎಂ ಹೇಳಿದರು. 

Read More

ಬೆಳಗಾವಿ :       ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಡಿ ಕೆ ಶಿವಕುಮಾರ್ ನಾಳೆ ಸಂಜೆ ಸರ್ವ ಪಕ್ಷದ ಶಾಸಕರಿಗೆ ಭೋಜನಕೂಟ ಆಯೋಜಿಸಿದ್ದಾರೆ.       ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಶಾಸಕರಿಗೆ ಜಾರಕೀಹೊಳಿ ಬ್ರದರ್ಸ್ ಭೋಜನಕೂಟ ಏರ್ಪಡಿಸುತ್ತಿದ್ದರು. ಈ ಬಾರಿ ಅಧಿವೇಶ ಆರಂಭವಾಗಿ ವಾರ ಕಳೆದರೂ ಜಾರಕಿಹೊಳಿ ಬ್ರದರ್ಸ್ ಅವರಿಂದ ಶಾಸಕರಿಗೆ ಉಟದ ವಿಚಾರ ಪ್ರಸ್ತಾಪವಾಗಿರಲಿಲ್ಲ. ಬೆಳಗಾವಿ ಉಸ್ತುವಾರಿ ಸಚಿವರಾದ್ರೂ ರಮೇಶ್ ಜಾರಕಿಹೊಳಿ ಮೌನ ವಹಿಸಿದ್ದಾರೆ.       ಡಿಕೆಶಿ ಸರ್ವ ಪಕ್ಷದ ಸಚಿವರಿಗೆ ಭೋಜನಕೂಟ ಆಯೋಜಿಸಿದ್ದು ಜಾರಕೀಹೊಳಿ ಬ್ರದರ್ಸ್ ಗೆ ಟಾಂಗ್ ಕೊಡಲು ಮುಂದಾಗಿದ್ದಾರಾ ಎಂಬ ಮಾತು ಕೇಳಿ ಬರುತ್ತಿದೆ.

Read More

  ಬೆಳಗಾವಿ:     ಸದನದಲ್ಲಿ ಮತ್ತೆ ಮೊಬೈಲ್ ಬಳಕೆ ವಿವಾದ ಸದ್ದು ಮಾಡಿದೆ. ಸದನದಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ, ಮಾಜಿ ಸಚಿವರೊಬ್ಬರು ಮೊಬೈಲ್‌ನಲ್ಲಿ ಯುವತಿಯ ಫೋಟೋ ವೀಕ್ಷಣೆಯಲ್ಲಿ ನೋಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.        ಮಾಜಿ ಸಚಿವ ಎನ್​. ಮಹೇಶ್​ ಅವರು ಸೋಮವಾರ ಮಧ್ಯಾಹ್ನ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಹೇಶ್​ ಅವರು ಮೊಬೈಲ್​ ಬಳಕೆಯಲ್ಲಿ ಮಗ್ನರಾಗಿದ್ದರು. ಈ ಮೂಲಕ ಅವರು ಸದನದ ನಿಯಮವನ್ನು ಉಲ್ಲಂಘಿಸಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

Read More