Author: News Desk Benkiyabale

ಮೈಸೂರು:        ಕಂಬಿ ಬೇಲಿ ದಾಟಲು ಯತ್ನಿಸಿ ಒಂಟಿ ಸಲಗವೊಂದು ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟಿದೆ. ನಾಗರಹೊಳೆ ವ್ಯಾಪ್ತಿಯ ವೀರನಹೊಸಳ್ಳಿ ಬಳಿ ದಾರುಣ ಘಟನೆ ನಡೆದಿದೆ.        ಮೂರು ಕಾಡಾನೆಗಳು ಗ್ರಾಮಕ್ಕೆ ಬಂದಿದ್ದು ಅರಣ್ಯ ಇಲಾಖೆ ಸಿಬಂದಿ ಮತ್ತು ಗ್ರಾಮಸ್ಥರು ಕಾಡಿಗೆ ಓಡಿಸಿದ್ದರು. ಆದರೆ 42 ವರ್ಷ ಪ್ರಾಯದ ಗಂಡಾನೆ ರೈಲು ಕಂಬಿ ತಡೆಗೊಡೆಗೆ ಹಾರಲು ಯತ್ನಿಸಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದೆ.       ಆನೆಗಳ‌ ಹಾವಳಿ ನಿಯಂತ್ರಿಸಲು ರೈಲು ಕಂಬಿಗಳಿಗೆ ತಡೆಗೋಡೆ ನಿರ್ಮಿಸಲಾಗಿತ್ತು. ಕಂಬಿ ಬೇಲಿಯನ್ನ ಜಿಗಿದು ಇನ್ನೊಂದು ಕಡೆ ಹೋಗಲು ಯತ್ನಿಸಿದೆ. ಎರಡು ಕಾಲುಗಳನ್ನ ಮುಂದೆ ಚಾಚಿ ಹಾರಿದಾಗ ಅದರ ಹೊಟ್ಟೆ ಬೇಲಿ ಮೇಲೆ ಸಿಕ್ಕಾಕಿಕೊಂಡಿದೆ. ಪರಿಣಾಮ ಆನೆ ಬೇಲಿ ಮೇಲೆ ನೇತಾಡಿದೆ.  ಅನೆಯ ಹೃದಯ ಭಾಗ ಕಂಬಿಗೆ ಸಿಲುಕಿ ಭಾರ ತಾಳಲಾರದೆ ಶ್ವಾಸಕೋಶದ ಮೇಲೆ ಒತ್ತಡ ಬಿದ್ದು ಸಾವನ್ನಪ್ಪಿದೆ ಎಂದು  ಹೇಳಲಾಗಿದೆ.

Read More

ತುರುವೇಕೆರೆ:       ಪ್ರತಿಯೊಬ್ಬ ಮನುಷ್ಯನೂ ಈ ಸಮಾಜದ ಪ್ರತ್ಯಕ್ಷ ಅಥವಾ ಪರೋಕ್ಷ ಕೊಡುಗೆಗಳಿಂದಲೇ ಅಭಿವೃದ್ಧಿ ಹೊಂದಿರುತ್ತಾನೆ. ಸಮಾಜದಿಂದ ಪಡೆದದ್ದನ್ನು ವಾಪಸ್ ಸಮಾಜಕ್ಕೆ ಕೊಡುವ ಬಾಧ್ಯತೆ ಅವನ ಮೇಲಿರುತ್ತದೆ. ಇಂತದೊಂದು ಋಣ ಸಂದಾಯದಿಂದ ಮಾತ್ರವೇ ಸಮುದಾಯವೊಂದು ಗುಣಾತ್ಮಕವಾಗಿ ಬೆಳೆಯಲು ಸಾಧ್ಯ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.       ತಾಲ್ಲೂಕಿನ ಬೋಚಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಾಠೋಪಕರಣಗಳು ಮತ್ತು ಪೀಠೋಪಕರಣಗಳನ್ನು ಕೊಡುಗೆ ನೀಡಿದ ಕಲ್ಕೆರೆ ರಘು ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.       ಮಕ್ಕಳು ಆಧುನಿಕತೆ ಮತ್ತು ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವಕ್ಕೊಳಗಾಗಿ ನಮ್ಮ ಸಂಸ್ಕøತಿ ಪರಂಪರೆಯ ಸೊಗಡನ್ನೇ ಮರೆಯುತ್ತಿದ್ದಾರೆ. ನಮ್ಮ ಸಂಸ್ಕøತಿಯ ಉದಾತ್ತ ಮೌಲ್ಯಗಳು ಇಂದು ಮೂಲೆಗುಂಪಾಗುತ್ತಿವೆ. ಹೀಗಾಗಿ ಸೇವೆ, ನಿಸ್ವಾರ್ಥತೆ ಮತ್ತು ಋಣಸಂದಾಯದ ಮನೋಭಾವದ ಬದಲು ಸ್ವಾರ್ಥ,ಐಶರಾಮಿ ಬದುಕಿನ ವೈಭೋಗವೇ ತುಂಬಿ ತುಳುಕುತ್ತಿವೆ. ಯುವಪೀಳಿಗೆಯನ್ನು ಮರಳಿ ಮೌಲ್ಯಗಳೆಡೆಗೆ ತಂದು ಸಮಾಜಮುಖಿಯನ್ನಾಗಿಸಲು ಕಲ್ಕೆರೆ ರಘು ಅಂತಹವರು ಅನುಕರಣೀಯ ಮಾದರಿ ಆಗಿದ್ದಾರೆ…

Read More

ತುಮಕೂರು:       ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರಿನಲ್ಲಿ ತಲೆದೋರಿದ್ದ ನೀರಿನ ಸಮಸ್ಯೆ ಬಗ್ಗೆ ಗೂಳೂರಿನ ಗ್ರಾಮಸ್ತರು ಹಾಗು ಗಣಪತಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ ಭಕ್ತಾಧಿಗಳು ಶಾಸಕ ಡಿ ಸಿ ಗೌರೀಶಂಕರ್ ಅವರ ಗಮನಕ್ಕೆ ತಂದ ತಕ್ಷಣ ಶಾಸಕರ ಅನುದಾನದಡಿ ಎರಡು ಬೋರ್ ವೆಲ್ ಗಳನ್ನು ಕೊರೆಸಿ ನೀರಿನ ಭವಣೆ ನೀಗಿಸಿದ್ದಾರೆ.       ಐತಿಹಾಸಿಕ ಪ್ರಸಿದ್ದ ಗೂಳೂರು ಗಣಪತಿ ವಿಸರ್ಜನೆಗೆ ಲಕ್ಷಾಂತರ ಜನ ಭಕ್ತಾಧಿಗಳು ಭಾಗವಹಿಸಲಿದ್ದು ಈ ಮಧ್ಯೆ ಗೂಳೂರು ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿತ್ತು ಗೂಳೂರಿನ ಗ್ರಾಮಸ್ತರು ಹಾಗು ಭಕ್ತಾಧಿಗಳು ಮತ್ತು ಸ್ತಳೀಯ ಜೆಡಿಎಸ್ ಮುಖಂಡರು ಶಾಸಕ ಡಿ ಸಿ ಗೌರೀಶಂಕರ್ ಅವರಿಗೆ ಸಮಸ್ಯೆ ಬಗ್ಗೆ ವಿವರಿಸಿ ಬೋರ್ ವೆಲ್ ಕೊರೆಸುವಂತೆ ಮನವಿ ಮಾಡಿದ್ದರು,ಶಾಸಕರು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿದ್ದರೂ ಸಹ ತಕ್ಷಣ ದೂರವಾಣಿ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತಾಗಿ ಎರಡು ಬೋರ್ ವೆಲ್ ಕೊರೆಯುವಂತೆ ತಾಕೀತು ಮಾಡಿದ್ದರು ,ಶಾಸಕರ ಆದೇಶದಂತೆ ಒಂದೇ ದಿನದಲ್ಲಿ ಎರಡು ಬೋರ್…

Read More

ತುರುವೇಕೆರೆ:       ಮಕ್ಕಳಲ್ಲಿ ಲೆಕ್ಕಾಚಾರ, ವ್ಯಾಪಾರ ವಹಿವಾಟು, ಸ್ವಾವಲಂಭನೆ ಬದುಕು ರೂಪಿಸುವ ಸಲುವಾಗಿ ಇಂತಹ ವಿನೂತನ ಮಕ್ಕಳ ಸಂತೆಯನ್ನು ಪ್ರೋತ್ಸಾಹಿಸಲಾಗಿದೆ ಎಂದು ವಿಶ್ವವಿಜಯ ವಿಧ್ಯಾಶಾಲೆಯ ವ್ಯವಸ್ಥಾಪಕ ಮುಖ್ಯೋಪಾಧ್ಯಾಯಿಣಿ ಶ್ರೀಮತಿ ವಿಜಯಲಕ್ಷ್ಮಿಎಂ.ವಿಶ್ವೇಶ್ವರಯ್ಯ ತಿಳಿಸಿದರು.       ಪಟ್ಟಣದ ವಿಶ್ವವಿಜಯ ವಿಧ್ಯಾಶಾಲಾ ಆವರಣದಲ್ಲಿ ಮಕ್ಕಳಿಂದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಶಾಲೆಗಳಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಿಗೆ ಪಾಠದ ಜೊತೆಗೆ ಒಂದು ಮನರಂಜನೆ ಸಿಗಲಿದ್ದು ವ್ಯವಹಾರಿಕ ಜ್ಞಾನ ವೃದ್ದಿಯಾಗಲಿದೆ. ಗಣಿತದಲ್ಲಿ ಹೆಚ್ಚು ಜ್ಞಾನ ಹೊಂದುವ ಜೊತೆಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುವಾಗ ಗ್ರಾಹಕರೊಂದಿಗೆ ಮಾತನಾಡುವ ನೈಪುಣ್ಯತೆ ಗಳಿಸಲಿದ್ದಾರೆ ಎಂದರು.       ಶಿಕ್ಷಕರ ಮಾರ್ಗದರ್ಶಕರಂತೆ ಪ್ರತ್ಯೇಕ ಸಾಲುಗಳಲ್ಲಿ ಹಣ್ಣು, ತೆಂಗಿನಕಾಯಿ,ಕುಂಬಳಕಾಯಿ, ಪೆಪ್ಸಿ-ಕೋಲಾ ಸೇರಿದಂತೆ ವಿವಿದ ವಸ್ತುಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಮತ್ತೊಂದೆಡೆ ತಿನಿಸು ಪದಾರ್ಥಗಳಾದ ಪಾನಿಪೂರಿ, ಚಿರುಮುರಿ, ಗೋಬಿಮಂಜೂರಿ ಇತ್ಯಾದಿಗಳನ್ನು ತಮ್ಮ ಪುಟ್ಟ ಪುಟ್ಟ ಕೈಗಳಿಂದ ಮಕ್ಕಳು ತಯಾರಿಸಿ ಕೊಡುವುದರೊಂದಿಗೆ ಸಂತೆಗೆ ಆಗಮಿಸಿದ್ದ ಸಾರ್ವಜನಿಕರ ಮೆಚ್ಚುಗೆ…

Read More

ಚಾಮರಾಜನಗರ:       ಹನೂರು ತಾಲೂಕಿನ ಸೂಲವಾಡಿ ಬಿಚ್ಚುಕತ್ತಿ ಮಾರಮ್ಮನ ದೇಗುಲದ ಪ್ರಸಾದ ಸೇವಿಸಿ 7 ಮಂದಿ ಮೃತಪಟ್ಟಿರುವ ಘಟನೆಗೆ ವಿಷ ಪ್ರಾಶನವೇ ಕಾರಣ ಎನ್ನಲಾಗಿದೆ.       ಗೋಪಿಯಮ್ಮ(35), ಶಾಂತಾ (20). ಪಾಪಣ್ಣ (35), ಅನಿಲ್​ (12), ಅನಿತಾ (14) ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡವರನ್ನೆಲ್ಲ ಆಂಬುಲೆನ್ಸ್​ ಮೂಲಕ ಕೊಳ್ಳೆಗಾಲ, ಕಾಮಗೆರೆ, ಮೈಸೂರು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ.       ಸುಲ್ವಾಡಿಯಲ್ಲಿ ಕಿಚ್ಚುಕುತ್ತಿ ಮಾರಮ್ಮದೇವಸ್ಥಾನದಲ್ಲಿ ಗೋಪುರ ಶಂಕುಸ್ಥಾಪನೆ ಸಮಾರಂಭವಿತ್ತು. ಕಾರ್ಯಕ್ರಮದಲ್ಲಿ ರೈಸ್​ಬಾತ್​ ತಯಾರಿಸಲಾಗಿತ್ತು. ಅದನ್ನು ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಅದರಲ್ಲೂ 6 ಜನರ ಸ್ಥಿತಿ ಚಿಂತಾಜನಕವಾಗಿದೆ. 25ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯದಲ್ಲೂ ಏರುಪೇರಾಗಿದೆ.        ಅಲ್ಲಲ್ಲಿ ಚೆಲ್ಲಿದ್ದ ಪ್ರಸಾದ ತಿಂದ ಕಾಗೆಗಳು, ಹಲವು ಪಕ್ಷಿಗಳೂ ಅಸ್ವಸ್ಥಗೊಂಡಿದ್ದು ಸುಮಾರು 3000 ಕಾಗೆಗಳು ಮೃತಪಟ್ಟಿವೆ.        ಗೋಪುರ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು…

Read More

 ತುಮಕೂರು:       ಟ್ರಾಯ್‍ನ ಹೊಸ ದರ ನಿಗದಿಪಡಿಸಿರುವ ನೀತಿಯನ್ನು ಖಂಡಿಸಿ ಜಿಲ್ಲಾ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ವತಿಯಿಂದ ನಗರಲ್ಲಿ ಪ್ರತಿಭಟನೆ ನಡೆಸಲಾಯಿತು.       ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಕೇಬಲ್ ಆಪರೇಟರ್ಸ್ ಟೆಲಿಕಾಮ್ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.       ಡಿ. 29 ರಿಂದ ಜಾರಿಗೆ ತರಲು ಹೊರಟಿರುವ ಹೊಸ ದರ ನಿಗದಿ ನಿಯಮದಿಂದ ಸ್ಥಳೀಯ ಕೇಬಲ್ ನಿರ್ವಾಹಕರು ನಿರುದ್ಯೋಗಿಗಳಾಗುವ ಆತಂಕ ಎದುರಾಗಿದೆ. ಅಲ್ಲಗೆ ಗ್ರಾಹಕರಿಗೂ ತೊಂದರೆಯುಂಟಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.        ಜಿಲ್ಲೆಯಲ್ಲಿ ಕೇಬಲ್ ನಿರ್ವಾಹಕರು ಮತ್ತು ಸಹಾಯಕರು ಸೇರಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಇದೇ ಉದ್ಯೋಗವನ್ನು ಅವಲಂಬಿಸಿದ್ದು, ಕಳೆದ 25 ವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಸೇವೆ…

Read More

 ತುಮಕೂರು:       ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ(ರಿ) ಇವರ ಸಹಯೋಗದಲ್ಲಿ ನಗರದ ಅಮಾನಿಕೆರೆ ದ್ವಾರದ ಬಳಿ ಡಿಸೆಂಬರ್ 16ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ “ವೈಭವದ ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.       ಮಹಾ ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷರಾದ ಟಿ.ಹೆಚ್.ವಾಸುದೇವ್ ಅವರು ಅಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸುವರು. ರಾಜ್ಯೋತ್ಸವದ ಅಂಗವಾಗಿ ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ವೇದಿಕೆ ಕಾರ್ಯಕ್ರಮವನ್ನು ಹಿರೇಮಠದ ಡಾ: ಶ್ರೀ ಶ್ರೀ ಶಿವಾನಂದ ಶಿವಾಚಾರ್ಯಸ್ವಾಮಿಗಳವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಾಗೂ ಸನ್ಮಾನಿತರಾಗಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಡಿವೈಎಸ್‍ಪಿ ನಾಗರಾಜು, ಹೋಮ್ ಆಫ್ ಹೋಮ್ ಸಂಸ್ಥಾಪಕ ಹಾಗೂ ಸಮಾಜ ಸೇವಕ ಟಿ. ರಾಜ (ಆಟೋ ರಾಜ) ಅವರು ಪಾಲ್ಗೊಳ್ಳುವರು.  …

Read More

 ತುಮಕೂರು:       ಐತಿಹಾಸಿಕ ಗೂಳೂರು ಶ್ರೀ ಮಹಾಗಣಪತಿಯ ವಿಸರ್ಜನಾ ಮಹೋತ್ಸವ ಡಿ.15ಮತ್ತು16ರಂದು ನಡೆಯಲಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ಗೂಳೂರು ಶಿವಕುಮಾರ್ ತಿಳಿಸಿದ್ದಾರೆ.       ನರಕ ಚರ್ತುದರ್ಶಿಯಂದು ಆರಂಭವಾದ ಗೂಳೂರು ಗಣಪನ ಪೂಜಾ ಕೈಂಕರ್ಯಗಳು ಕಾರ್ತಿಕ ಮಾಸದಲ್ಲಿ ಸಂಪೂರ್ಣಗೊಂಡಿದ್ದು, ಸಕಲ ಧಾರ್ಮಿಕ ವಿಧಿವಿಧಾನಗಳ ಮೂಲಕ ಡಿಸೆಂಬರ್ 15ರಂದು ಮಹಾಗಣಪತಿಯ ಉತ್ಸವ ಹಾಗೂ 16ರಂದು ಗೂಳೂರು ಕೆರೆಯಲ್ಲಿ ವಿಸರ್ಜನಾ ಮಹೋತ್ಸವ ನಡೆಯಲಿದೆ       ಡಿ.15ರಂದು ರಾತ್ರಿ 8ಗಂಟೆಗೆ ಗ್ರಾಮದ 18 ಕೋಮಿನ ಜನರು ಒಗ್ಗೂಡಿ ನಿರ್ಮಿಸಿರುವ ಸರ್ವಾಲಂಕೃತ ವಾಹನದಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪಿಸಲಾಗುವುದು ನಂತರ ಇಡೀರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ, ಕರಡಿಮಜಲು, ನಾಸಿಕ್ ಡೋಲ್, ನಂದಿಕೋಲು, ಕೀಲು ಕುದುರೆ, ಬೊಂಬೆಕುಣಿತ, ವೀರಭದ್ರನ ಕುಣಿತ, ಡೊಳ್ಳುಕುಣಿತ, ಪೂಜಾಕುಣಿತ, ಸೋಮನ ಕುಣಿತದಂತಹ ಜನಪದ ಕಲಾತಂಡಗಳ ಜೊತೆಗೆ ಬಾಣಬಿರುಸು, ಸಿಡಿಮದ್ದಿನ ಸದ್ದಿನೊಂದಿಗೆ ಮೆರವಣಿಗೆ ನಡೆಸಲಾಗುವುದು.       ಮೆರವಣಿಗೆ…

Read More

ಚನ್ನೈ:       ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಿದ್ದಗಂಗಾ ಮಠ ಇವರ ಆರೋಗ್ಯ ವಿಚಾರಿಸಿದರು.       ಶ್ರೀಗಳು ಶೀಘ್ರವೇ ಗುಣಮುಖರಾಗಿ ಜನತಾ ಜನಾರ್ದನನ ಸೇವೆಯಲ್ಲಿ ತೊಡಗಲಿ. ಶ್ರೀಗಳು ಮಾಡುತ್ತಿರುವ ತ್ರಿವಿಧ ದಾಸೋಹ ಕೈಂಕರ್ಯ ಇಡೀ ದೇಶಕ್ಕೆ ಮಾದರಿಯಾಗಿದ್ದು ಅವರ ಆಶೀರ್ವಾದ ಎಲ್ಲರ ಮೇಲೂ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

Read More

ತುಮಕೂರು:       ನಗರದ 15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಾಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ಇಂದು ಪಾಲಿಕೆಯ ಅಧಿಕಾರಿಗಳು ಮತ್ತು ನಾಗರಿಕರ ಜನಸ್ಪಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.        ಪಾಲಿಕೆಯ ಪರವಾಗಿ ಆರೋಗ್ಯಾಧಿಕಾರಿ ಡಾ.ನಾಗೇಶ್,ಇಂಜಿನಿಯರ್‍ಗಳಾದ ಸಂದೀಪ್, ಮಧುಸೂಧನ್, ಪರಿಸರ ವಿಭಾಗದ ಕೃಷ್ಣಮೂರ್ತಿ, ಕಂದಾಯ ವಿಭಾಗದ ರುದ್ರಮೂರ್ತಿ, ಬೀದಿ ದೀಪ, ಕಸ ನಿರ್ವಹಣೆ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರೆ,ಜೈನ ಸಮಾಜದ ಸುರೇಶ್, ಧನಿಯಕುಮಾರ್,ಬೆಸ್ಟೆಕ್ ರಾಮರಾಜು,ವಿನೋದ್,ಬಾಲಚಂದ್ರ, ಸುಮಾರು ಮೂವತ್ತು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಮಾತನಾಡಿದ ಪಾಲಿಕೆಯ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯಕುಮಾರ್,ನಾವು ಚುನಾವಣೆ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಹಲವು ನಾಗರಿಕರು ತಮ್ಮ ಬಡಾವಣೆಯ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಿದ್ದರು. ಅವರುಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕುಡಿಯುವ ನೀರು ಮತ್ತು ಕಸ ವಿಲೇವಾರಿಯನ್ನು ಹೊರತುಪಡಿಸಿ, ಉಳಿದಂತೆ ಬೇರೆ ಸಮಸ್ಯೆಗಳು ಬಗೆಹರಿದಿಲ್ಲ.ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಮತ್ತು ಜನಸಾಮಾನ್ಯರನ್ನು ಮುಖಾಮುಖಿಯಾಗಿಸಿ,ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ…

Read More