Author: News Desk Benkiyabale

ತುಮಕೂರು:      ಪ್ರಪಂಚದ ಮುಂದುವರೆದ ದೇಶಗಳು ಡಾ.ಬಿ.ಆರ್.ಅಂಬೇಡ್ಕರ್ ರನ್ನು ಸ್ಮರಿಸುತ್ತವೆ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ. ನಿಧಿಕುಮಾರ್ ತಿಳಿಸಿದರು.       ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಶೋಷಿತ ಸಮುದಾಯದ ಏಳ್ಗೆಗಾಗಿ ಶ್ರಮಿಸಿದ ಡಾ.ಅಂಬೇಡ್ಕರ್ ಅವರು, ಕಡುಬಡತನದ ನಡುವೆಯೇ ಭಾರತಕ್ಕೆ ಪ್ರಪಂಚದಲ್ಲಿಯೇ ಶ್ರೇಷ್ಠ ಸಮುದಾಯವನ್ನು ನೀಡಿದವರು. ದೇಶದ ಮೂಲ ನಿವಾಸಿಗಳಾದ ದಲಿತರ ಮೇಲಿನ ಅಸ್ಪಶ್ಯತೆ ವಿರುದ್ಧ ಹೋರಾಡಿದ ಫಲವಾಗಿಯೇ ಸಂವಿಧಾನವನ್ನು ಸಮಾನತೆಯ ತಳಹದಿಯ ಮೇಲೆ ರೂಪಿಸಿದ್ದಾರೆ ಎಂದರು.        ಅತ್ಯಂತ ಬಲಿಷ್ಠ ಸಂವಿಧಾನವನ್ನು ರೂಪಿಸಿದ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಲೇ ಇಲ್ಲ ಎನ್ನುವಂತಹ ಸುಳ್ಳು ವದಂತಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿದ್ದು, ಯುವ ಸಮುದಾಯ ಅಂಬೇಡ್ಕರ್ ಅವರ ಬಗ್ಗೆ ಅರಿಯುವ ಅವಶ್ಯಕತೆ ಇದೆ. ಭಾರತದ ಸಂವಿಧಾನದ ಆತ್ಮ ಅಂಬೇಡ್ಕರ್ ಎನ್ನುವುದನ್ನು ಯಾರು ಅಳಿಸಲು ಸಾಧ್ಯವಿಲ್ಲ ಎಂದು…

Read More

 ತಿಪಟೂರು :       ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೃಷಿ ಚಟುವಟಿಕೆಗಳು ಭಾರತದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ವಿನಾಶದ ಹಾದಿ ತಲುಪುತ್ತಿರುವುದು ವಿಷಾಧನೀಯ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.       ನಗರದ ಸಹಾಯಕ ಕೃಷಿ ಇಲಾಖೆಯ ಕಛೇರಿಯ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ದುರಾಸೆಗೆ ಕೀಟ ನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚುತ್ತಿದ್ದು ಮಣ್ಣಿನ ಸಾರಾಂಶ ಕಡಿಮೆಯಾಗಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹಿಂದೆ ಭೂಮಿಯಲ್ಲಿ ಬೇಕಾದ ಬೆಳೆಯನ್ನು ಬೆಳೆಯುವ ಕಾಲವಿತ್ತು. ಆದರೆ ಇಂದು ರಾಸಾಯನಿಕ ಗೊಬ್ಬರಗಳ ಸಿಂಪಡಣೆಯಿಂದ ಬೆಳೆದ ಬೆಳೆಗಳನ್ನು ತಿನ್ನುವಂತಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಗೊಬ್ಬರಗಳಿಂದ ಕೊಟ್ಯಾಂತರ ಕ್ರಿಮಿ, ಕೀಟಗಳು ನಶಿಸಿ ಹೋಗುತ್ತಿರುವುದರಿಂದ ಇಂದಿನ ದಿನಮಾನಗಳಲ್ಲಿ ಮಣ್ಣಿನ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕೆಂದರು.       ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ಎಂ.ಸುರೇಶ್…

Read More

ತಿಪಟೂರು :       ಸಾರ್ವಜನಿಕರ ಸಂಪರ್ಕ ರಸ್ತೆಗಾಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಘಟನೆ ಕಸಬಾ ಹೋಬಳಿ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಬುಧವಾರ ರಾತ್ರಿ ನಡೆಯಿತು.       ಈ ವೇಳೆ ಮಾತನಾಡಿದ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅನುದಾನದಲ್ಲಿ ಬಿದರೆಗುಡಿಯಿಂದ ಮತ್ತಿಹಳ್ಳಿ ಹಾಗೂ ಮಾಣಿಕಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜೆಲ್ಲಿ-ಕಲ್ಲು, ಮಣ್ಣನ್ನು ಹಾಕಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಸುಮಾರು ವರ್ಷಗಳಿಂದ ಇದೇ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರು. ಆದರೆ ಏಕಾಏಕಿ ರಸ್ತೆಗೆ ಕೆಲವರು ಮುಳ್ಳು ಹಾಕಿ, ಗುಂಡಿಗಳನ್ನು ತೆಗೆದು ರಸ್ತೆಯಲ್ಲಿ ಓಡಾಡಲು ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿದರು. ಈ ಬಗ್ಗೆ ಗ್ರಾಮಪಂಚಾಯಿತಿಗೆ ದೂರು ಸಲ್ಲಿಸಲಾಗಿದ್ದು, ಅಲ್ಲದೆ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಆಕ್ರಮ ಎಸೆಗಿರುವ ವ್ಯಕ್ತಿಗೆ ನೊಟೀಸ್ ಜಾರಿ ಮಾಡಿದರೂ ಅದನ್ನು ತಿರಸ್ಕರಿಸಿದÀ ಕಾರಣ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.       ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ದಂಡಾಧಿಕಾರಿ ಡಾ.…

Read More

ರಾಮನಗರ:       ಸಿಎಂ ಕುಮಾರಸ್ವಾಮಿ ಅವರು ಆಯ್ಕೆಯಾಗಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಜೆಡಿಎಸ್​ ಘಟಕದ ಪಕ್ಷದ ಕಚೇರಿಯಲ್ಲಿ ಮಾರಾಮಾರಿ ನಡೆದಿದೆ.       ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಜೆಡಿಎಸ್​ ಅಧ್ಯಕ್ಷ, ಒಕ್ಕಲಿಗರ ಸಂಘದ ಸದಸ್ಯ ಜಯಮುತ್ತು ಮತ್ತು ಬಮೂಲ್​ನ ಮಾಜಿ ನಿರ್ದೇಶಕ ಲಿಂಗೇಶ್​ಕುಮಾರ್​ ಅವರ ನಡುವಿನ ಸಿಟ್ಟು ಘಟನೆಗೆ ಕಾರಣ ಎನ್ನಲಾಗಿದೆ.        ಜಯಮುತ್ತು ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಅವರ ಬೆಂಬಲಿಗರು ಬುಧವಾರ ಮೊದಲಿಗೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎರಡೂ ಬಣಗಳ ಮುಖಂಡರ ನಡುವೆ ಹೊಡೆದಾಟ ಸಂಭವಿಸಿದೆ. ಪಕ್ಷದ ಕಚೇರಿಯ ಪೀಟೋಪಕರಣಗಳನ್ನು ಪುಡಿ ಮಾಡಿ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದರು. ಈ ವೇಳೆ ಜಯಮುತ್ತು ಸೇರಿದಂತೆ ಹಲವು ಮುಖಂಡರಿಗೆ ಗಾಯಗಳಾಗಿವೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಚನ್ನಪಟ್ಟಣದ ಪುರ ಪೋಲೀಸರು ಭೇಟಿ ನೀಡಿದ್ದಾರೆ.

Read More

ಚಿಕ್ಕಬಳ್ಳಾಪುರ:      ನಂದಿಬೆಟ್ಟದ ಬಳಿ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ವೇಗವಾಗಿ ಹೋಗುತ್ತಿದ್ದ ಮಾರುತಿ ಓಮ್ನಿವ್ಯಾನ್ ಮುಂದೆ ಹೋಗುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿ 7 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ದೇವನಹಳ್ಳಿಯ ಬಳಿ ಮಧ್ಯರಾತ್ರಿ ಘಟನೆ ನಡೆದಿದೆ .              ಆರ್ . ಟಿ ನಗರದ ಚೋಳನಾಯ್ಕನಪಾಳ್ಯದ ಸುಂದರ್ ( 25), ವೆಂಕಟೇಶ್ (28) ಸತೀಶ್ (24), ವಿಕಾಸ್ ( 23) ಮೃತಪಟ್ಟವರು.ಗಾಯಗೊಂಡಿರುವ ವ್ಯಾನ್ ಚಾಲಕ ಹೇಮಂತ್, ಅಜೀತ್, ರವಿ,ಭರತ್, ಅವಿನಾಶ್, ಮಧು ಹಾಗೂ ಮನೋಜ್ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ಹೂವಿನ ಅಲಂಕಾರ ಮಾಡುವ ಕೆಲಸ ಮಾಡುತ್ತಿದ್ದ ಮೃತ ನಾಲ್ವರು ಗಾಯಗೊಂಡಿರುವಹೇಮಂತ್ , ಅಜೀತ್ , ರವಿ , ಭರತ್ , ಅವಿನಾಶ್ ಸೇರಿ 9ಮಂದಿ ಮಾರುತಿ ವ್ಯಾನ್ ನಲ್ಲಿನಂದಿಬೆಟ್ಟದ ಕಡೆಗೆ ರಾತ್ರಿ 12.30ರ ವೇಳೆ ದೇವನಹಳ್ಳಿಯ ಕನ್ನಮಂಗಲಪಾಳ್ಯ ಗೇಟ್ ರಸ್ತೆಯಲ್ಲಿ ಅತಿ ವೇಗವಾಗಿ ಹೋಗುತ್ತಾ ಮುಂದೆ ಚಿಕ್ಕಬಳ್ಳಾಪುರದ ಕಡೆ ಹೋಗುತ್ತಿದ್ದ ಇನ್ನೋವಾಕಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ . ಢಿಕ್ಕಿಯ ರಭಸಕ್ಕೆ ಸುಂದರ್ , ವೆಂಕಟೇಶ್ , ಸತೀಶ್ , ವಿಕಾಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇತರ ಐವರು ಗಾಯಗೊಂಡಿದ್ದಾರೆ. 

Read More

      ಭೂಮಿಗೆ ಸಂಬಂಧಿಸಿದ  ವ್ಯಾಜ್ಯಗಳ ಕುರಿತು ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರು ಸುತ್ತೋಲೆಯೊಂದನ್ನ ಹೊರಡಿಸಿದ್ದಾರೆ.      ಭೂ ದಾಖಲೆಗಳು ಯಾರ ಹೆಸರಿನಲ್ಲಿವೆಯೋ ಆತನಿಗೇ ರಕ್ಷಣೆ ನೀಡಬೇಕು ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿಯೇ ಪರಿಹಾರವಾಗಬೇಕು ಎಂದು ಡಿಜಿ ಐಜಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.       ಜನರಲ್ ಪವರ್​ ಆಫ್ ಅಟಾರ್ನಿ ಮೂಲಕ ಕೃಷಿ ಅಥವಾ ಕೃಷಿಯೇತರ ಭೂಮಿಯ ಸ್ವಾಧೀನ ಪಡೆಯಲು ಬಯಸುವ ವ್ಯಕ್ತಿಗೆ ರಕ್ಷಣೆ ನೀಡುವಂತಿಲ್ಲ ಎಂದೂ ಅವರು ತಾಕೀತು ಮಾಡಿದ್ದಾರೆ. ಒಂದು ವೇಳೆ ಪ್ರಕರಣಗಳು ನ್ಯಾಯಾಲಯದ ಕಟೆಕಟೆಗೆ ಹೋದರೆ ಕಾನೂನು ಸಲಹೆಗಾರರ ಸಲಹೆ ಪಡೆದು ನ್ಯಾಯಾಲಯಕ್ಕೆ ಸೂಕ್ತ ಕಾರಣಗಳೊಂದಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ. ಡಿಜಿಐಜಿ ನೀಲಮಣಿ ರಾಜು ಸುತ್ತೋಲೆ:       ಜಮೀನು ಮಾರಾಟದ ಒಪ್ಪಂದ ಪತ್ರ, ಅಡ್ವಾನ್ಸ್ ಹಣ ನೀಡಿರುವ ದಾಖಲೆಗಳ ಆಧಾರದ ಮೇಲೆ ಒಂದು ವೇಳೆ ನಿಜವಾದ ಮಾಲೀಕನನ್ನ ಹೊರ ಹಾಕಿದರೆ…

Read More

ತಿಪಟೂರು:       ಹಳೇ ದ್ವೇಷದ ಹಿನ್ನೆಲೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ.       22 ವರ್ಷದ ಯೋಗೀಶ್ ಎಂಬುವವನೇ ಚಾಕುವಿನಿಂದ ಇರಿತಕ್ಕೆ ಒಳಗಾದ ಯುವಕ. ಈಡೇನಹಳ್ಳಿ ಗ್ರಾಮದ ಯೋಗೀಶ್ ಹಾಗೂ ಸೂಗುರಿನ ರಾಜೇಶ್ ಎಂಬುವನಿಗೂ ಹಲವು ದಿನಗಳಿಂದ ವೈಶಮ್ಯ ಇತ್ತು, ಹಲವು ಬಾರಿ ಹಲ್ಲೆ ಮಾಡೋಕೆ ರಾಜೇಶ್ ಪ್ರಯತ್ನಿಸಿದ್ದನಂತೆ.. ಇಂದು ಯೋಗೀಶ್ ಒಂಟಿಯಾಗಿದ್ದುದ್ದನ್ನು ಗಮನಿಸಿದ ರಾಜೇಶ್ ಏಕಾಏಕಿ ಚಾಕುವಿನಿಂದ ಪಕ್ಕೆಗೆ ಇರಿದು ಪರಾರಿಯಾಗಿದ್ದಾನೆ. ಕೂಡಲೇ ಗಾಯಾಳು ಯೋಗೀಶ್ ನನ್ನು ತಿಪಟೂರು ತಾಲೂಕು ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ನೊಣವಿನಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜೇಶ್ ಬಂಧಿಸಲು ಬಲೆ ಬೀಸಿದ್ದಾರೆ.

Read More

 ತುಮಕೂರು:       ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ವೈ.ಹೆಚ್.ಹುಚ್ಚಯ್ಯ ನವರು, ಗ್ರಾಮಾಂತರ ಶಾಸಕರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು,ಈಗಾಗಲೇ ನ್ಯಾಯಾಲಯದಲ್ಲಿರುವ ಸಿವಿಲ್ ಪ್ರಕರಣವೊಂದನ್ನು ನೆಪ ಮಾಡಿಕೊಂಡು ಶಾಸಕರ ತೇಜೋವಧೆಗೆ ಯತ್ನಿಸಿರುವುದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದು ಬೆಳಗುಂಬ ಗ್ರಾ.ಪಂ.ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಹೇಳಿದ್ದಾರೆ.       ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ಕೈಗೊಳ್ಳುತ್ತಿರುವ ಅಭಿವೃದ್ದಿ ಕಾರ್ಯಕ್ರಮಗಳಿಂದ ಹತಾಶೆಗೆ ಒಳಗಾಗಿರುವ ಮಾಜಿ ಶಾಸಕರಾದ ಬಿ.ಸುರೇಶಗೌಡರು, ದಲಿತ ಜನಾಂಗಕ್ಕೆ ಸೇರಿದ ವೈ.ಹೆಚ್.ಹುಚ್ಚಯ್ಯ ಅವರನ್ನು ಮುಂದಿಟ್ಟುಕೊಂಡು ಶಾಸಕರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.       ಜೆಡಿಎಸ್ ಶಾಸಕರ ಮೇಲೆ ಆರೋಪ ಮಾಡಿರುವ ಜಿ.ಪಂ.ಸದಸ್ಯ ವೈ.ಹೆಚ್.ಹುಚ್ಚಯ್ಯ ಜೆಡಿಎಸ್ ಪಕ್ಷದಲ್ಲಿದ್ದುಕೊಂಡು, ಜಿ.ಪಂ.ಸದಸ್ಯರಾಗಿ,ಜಿ.ಪಂ.ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದವರು,ಕಳೆದ ಜಿ.ಪಂ.ಚುನಾವಣೆ ವೇಳೆ ಟಿಕೇಟ್ ದೊರೆಯು ವುದು ಅನಿಶ್ಚಿತವಾದಾಗ ಬಿಜೆಪಿಗೆ ಹಾರಿ,ಜಿ.ಪಂ.ಸದಸ್ಯರಾಗಿದ್ದಾರೆ.ಉಂಡ ಮನೆಯ ಜಂತಿ ಎಣಿಸುವ…

Read More

ಚಿಕ್ಕನಾಯಕನಹಳ್ಳಿ,: ಕನಕದಾಸರ ಕೀರ್ತನೆಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವಂತೆ ಜಿ.ಪಂ ಸದಸ್ಯ ವೈ.ಸಿ ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸಿದರು. ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕನಕದಾಸರ 531ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೇವಲ ಕನಕದಾಸರ ಜಯಂತಿಯನ್ನು ಆಚರಿಸಿದರೆ ಸಾಲದು ಅವರು ಹಾಕಿಕೊಟ್ಟ ದಾರಿ ಹಾಗೂ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಕನಕದಾಸರು ಮಾನವರೆಲ್ಲ ಒಂದೇ ಕುಲ ಎಂದು ಸಾರಿದ ಅವರು ಕನಕದಾಸರನ್ನು ಜಾತಿಗೆ ನೇಮಿತಗೊಳಿಸಬಾರದು ಎಂದರು. ಶಾಸಕ ಜೆ.ಸಿಮಾಧುಸ್ವಾಮಿ ಮಾತನಾಡಿ ಉಡುಪಿಯಲ್ಲಿ ಸಂಪ್ರದಾಯದ ಕಟ್ಟು ಪಾಡುಗಳನ್ನು ದೂರ ಮಾಡಿ ದೇವರಿಗೆ ಭಕ್ತರೇ ಶ್ರೇಷ್ಠರುಎಂದ ಅವರು ಮನುಷ್ಯನಿಗೆ ನಂಬಿಕೆ ವಿಶ್ವಾಸ ಶ್ರೇಷ್ಠ ಅರಿವನ್ನು ಮೂಡಿಸುವವನೇ ಗುರು ದಾಸ ಪರಂಪರೆಯಲ್ಲಿ ದಾಸ ಶ್ರೇಷ್ಠರಾದ ವ್ಯಾಸರಾಯರ ಶಿಷ್ಯರಾಗಿ ಕಿರ್ತನೆಗಳನ್ನು ರಚಿಸುವ ಮೂಲಕ ಸಮಾಜದಲ್ಲಿರುವ ಮೂಡನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಯ್ಯ ಮಾತನಾಡಿ ಕನಕದಾಸರು ಕವಿಯಾಗಿ ಸಂತನಾಗಿ, ಕೀರ್ತನಕಾರನಾಗಿ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಕವಿ ಸಾಯುತ್ತಾನೆ ಹೊರತು ಅವನು ರಚಿಸಿದ ಕೀರ್ತನೆಗಳು ಚಿಂತನೆಗಳು ಎಂದು ಸಾಯುವುದಿಲ್ಲ ಸಂಪ್ರದಾಯ ವಾದಿಗಳು…

Read More

 ತುಮಕೂರು: ತುಮಕೂರು ಜಿಲ್ಲಾಧಿಕಾರಿ ಕಛೇರಿಯಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯನ್ನು ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಉದ್ಘಾಟಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 114ರಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಡಾ: ಜಿ.ಪರಮೇಶ್ವರ ಅವರ ಅಧಿಕೃತ ಕಛೇರಿಯನ್ನು ತೆರೆಯಲಾಗಿದೆ. ಉದ್ಘಾಟಿಸಿ ಮಾತನಾಡಿದ ಸಂಸದ ಮುದ್ದಹನುಮೇಗೌಡ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಬಹಳ ದಿನಗಳಿಂದ ಕಛೇರಿಯನ್ನು ತೆರೆಯುವುದಾಗಿ ಹೇಳುತ್ತಿದ್ದರು. ಉಪಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಇಂದು ಈ ಕಛೇರಿಯನ್ನು ನಾನು ಉದ್ಘಾಟಿಸಿದ್ದೇನೆ ಎಂದರು. ಜಿಲ್ಲೆಯ ಜನರು ತಮ್ಮ ಸಮಸ್ಯೆಗಳನ್ನು ಉಸ್ತುವಾರಿ ಸಚಿವರ ಬಳಿ ಸಲ್ಲಿಸಲು/ ಹೇಳಿಕೊಳ್ಳಲು ಈ ಕಛೇರಿ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಈ ಕಛೇರಿಗೆ ವಿಶೇಷಾಧಿಕಾರಿ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗುವುದು. ಕ್ಷೇತ್ರದ ಜನರ ಸಮಸ್ಯೆಯನ್ನು ಪರಿಹರಿಸುವ ರೀತಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.  ಈ ಸಂದರ್ಭದಲ್ಲಿ ದಿನೇಶ್, ಅಶ್ವತ್ಥ ನಾರಾಯಣ, ಅರಕೆರೆ ಶಂಕರ್ ಮತ್ತಿತರರು ಹಾಜರಿದ್ದರು.

Read More