Author: News Desk Benkiyabale

ಚಿಕ್ಕನಾಯಕನಹಳ್ಳಿ :       2018-19ನೇ ಸಾಲಿಗೆ ಗ್ರಾಮೀಣ ರಸ್ತೆಗಳ ನಿರ್ವಹಣೆ ಕಾಮಗಾರಿಗಳಿಗಾಗಿ ತಾಲ್ಲೂಕಿಗೆ 67.94ಲಕ್ಷರೂ ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.       ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಸಭೆ ನಡೆಸಿದ ಶಾಸಕರು, ತಾಲ್ಲೂಕಿಗೆ 2018-19ನೇ ಸಾಲಿನ ರಸ್ತೆಗಳ ನಿರ್ವಹಣೆಗೆ ನಿರ್ವಹಣಾ ಅನುದಾನದ ಅಡಿಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ ಕಾಮಗಾರಿಯ ಕ್ರಿಯಾ ಯೋಜನೆ ಪಟ್ಟಿ ತಯಾರಿಸುವ ಬಗ್ಗೆ ಚರ್ಚಿಸಿದರು.       ಸರ್ಕಾರ ನೀಡಿರುವ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತುರ್ತು ಹಾಗೂ ಅಗತ್ಯ ರಸ್ತೆ, ಚರಂಡಿ ಮತ್ತು ಕಾಲುಸಂಕ ಕಾಮಗಾರಿಗಳನ್ನು ನಿರ್ವಹಣೆ ಮಾಡಲು ಮತ್ತು ಅನುದಾನವನ್ನು ತಾಲ್ಲೂಕಿನ ಗ್ರಾಮೀಣ ರಸ್ತೆಗಳ ಉದ್ದಳತೆಗಳಿಗೆ ಅನುಗುಣವಾಗಿ ಸಮನಾಗಿ ಹಂಚಿಕೆ ಮಾಡಬೇಕಾಗಿದೆ ಎಂದ ಅವರು, ಕ್ರಿಯಾ ಯೋಜನೆ ತಯಾರಿಸುವಾಗ ಪ್ರಕೃತಿ ವಿಕೋಪದಿಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆ, ಚರಂಡಿ ಮತ್ತು ಕಾಲುಸಂಕಗಳನ್ನು ತುರ್ತು ದುರಸ್ತಿ ಕೈಗೊಳ್ಳುವುದು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ನಮ್ಮ ಗ್ರಾಮ-ನಮ್ಮ…

Read More

ತುಮಕೂರು :       ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎಸ್.ನಟರಾಜ್ ಅವರು ಮಕ್ಕಳಿಗೆ ಕರೆ ನೀಡಿದರು. ಬೆಂಗಳೂರಿನ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ಮಕ್ಕಳ ಸಹಾಯವಾಣಿಯ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಬಾಲಭವನದಲ್ಲಿ “ಕನ್ನಡ ರಾಜ್ಯೋತ್ಸವ” ಹಾಗೂ “ಮಕ್ಕಳ ದಿನಾಚರಣೆ”ಯ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲೆ/ಕನ್ನಡ ಗೀತೆ/ರಂಗೋಲಿ/ವೇಷಭೂಷಣ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಆಂಗ್ಲಭಾಷೆಯನ್ನು ಕಲಿಯುವುದರೊಂದಿಗೆ ಮಾತೃ ಭಾಷೆ ಕನ್ನಡವನ್ನು ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.       ಡಿಡಿಪಿಐ ಕೆ.ಮಂಜುನಾಥ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಜಿಲ್ಲಾ ಬಾಲಭವನದಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಆಯೋಜಿಸುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರಲ್ಲದೆ, ಇಂತಹ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.  …

Read More

 ತುಮಕೂರು:       ಕಟ್ಟಡ ಕಾರ್ಮಿಕರ ಮಂಡಳಿಗೆ ನರೇಗಾ ಕಾರ್ಮಿಕರ ನೊಂದಣಿಯನ್ನು ತಡೆಗಟ್ಟಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ್ 2 ರಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ವತಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಎಐಟಿಯುಸಿ ಹಾಗೂ ಇನ್ನಿತರ ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ 2006ರಲ್ಲಿ ಕರ್ನಾಟಕದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಸ್ವಿತ್ವಕ್ಕೆ ಬಂದಿದ್ದು,2018ರ ಸೆಪ್ಟಂಬರ್ ಅಂತ್ಯಕ್ಕೆ ಸುಮಾರು 18.18 ಲಕ್ಷದ ಕಾರ್ಮಿಕರು ತಮ್ಮ ಹೆಸರು ನೊಂದಾಯಿಸಿದ್ದು, ಸೆಸ್ ರೂಪದಲ್ಲಿ 7064.74 ಕೋಟಿ ರೂ ಹಣ ಸಂಗ್ರಹವಾಗಿದೆ.ತಮ್ಮಲ್ಲಿ ನೊಂದಾಯಿಸಿರುವ ಕಾರ್ಮಿಕರಿಗೆ 14 ವಿವಿಧ ತರಹದ ಸೌಲಭ್ಯ ನೀಡಬೇಕಾದ ಮಂಡಳಿ ಇದುವರೆಗೂ ಕೇವಲ 418 ಕೋಟಿ ರೂ ಮಾತ್ರ ಖರ್ಚು ಮಾಡಿದ್ದು, 415 ಕೋಟಿರೂಗಳ ತೆರಿಗೆ ಪಾವತಿಸಿದೆ. ಸೌಲಭ್ಯಗಳಿಗಾಗಿ ಅರ್ಜಿ…

Read More

ತುಮಕೂರು:         ಐದು ಬೆರಳಿನ ಗೂಬೆ ಹಾಗೂ ಎರಡು ತಲೆಯ ಹಾವು ನೀಡುವುದಾಗಿ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತುಮಕೂರು ಜಿಲ್ಲಾ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಆನಂದ(35), ದೀಪಾ(38), ಜಯಾ(45) ಬಂಧಿತ ಆರೋಪಿಗಳು.  ಕಾರ್ಯಾಚರಣೆ ವೇಳೆ ಅದೇ ಕಾಲೋನಿಯ ನಿವಾಸಿಗಳಾದ ಚಿನ್ನು(25), ವಿಜುಕುಮಾರ್(45) ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.       ಆರೋಪಿಗಳು ಪತ್ರಕರ್ತರೊಬ್ಬರನ್ನು ಸಂಪರ್ಕಿಸಿ ಐದು ಬೆರಳಿನ ಗೂಬೆ ಹಾಗೂ 2 ಕಾಲಿನ ಹಾವುಗಳನ್ನು ಮನೆಯಲ್ಲಿಟ್ಟುಕೊಂಡು ಸಾಕಿದರೆ ಬೇಗ ಶ್ರೀಮಂತರಾಗುತ್ತಾರೆ ಎಂದು ನಂಬಿಸಿದ್ದರು. ಇದನ್ನು ಪೊಲೀಸಗರ ಗಮನಕ್ಕೆ ತಂದಾಗ ಪೊಲೀಸರು ಆ ಪತ್ರಕರ್ತನ ಮೂಲಕ ಕಾರ್ಯತಂತ್ರ ರೂಪಿಸಿದ್ದಾರೆ.        ಅದರಂತೆ ಪತ್ರಕರ್ತ ತನ್ನ ಸ್ನೇಹಿತನೊಂದಿಗೆ ಅಕ್ಕಿಪಿಕ್ಕಿ ಕಾಲೋನಿಗೆ ಹೋದಾಗ ಆರೋಪಿಗಳು ಒಂದು ಗೂಬೆಯನ್ನು ತೋರಿಸಿ ಎರಡು ಲಕ್ಷ ನೀಡಿದರೆ ಅದನ್ನು ಮಾರುವುದಾಗಿ ಹೇಳಿದ್ದಾರೆ.…

Read More

ಕೊರಟಗೆರೆ:         ಚಿರತೆಯೊಂದು ದಾಳಿ ಮಾಡಿ  ಹೊಲದಲ್ಲಿ  ಮೇಯುತ್ತಿದ್ದ ಮೇಕೆಯನ್ನು  ಕೊಂದು ಪರಾರಿಯಾಗಿರುವ ಘಟನೆ ಇಂದು ನಡೆದಿದೆ.         ತಾಲೂಕಿನ ಕೋಳಾಲ ಸಮೀಪದ ಗೋಪೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ರೈತ ವಸಂತಕುಮಾರ್ ಎಂಬುವರ ಜಮೀನಿನಲ್ಲಿ ಮೇಕೆ ಮೇವು ತಿನ್ನುವಾಗ ದಿಡೀರನೆ ದಾಳಿ ನಡೆಸಿದ ಚಿರತೆ ಮೇಕೆಯ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿ ಸಾಯಿಸಿದೆ. ಇದನ್ನು ಕಂಡ ರೈತರು ಬಯದಿಂದಲೇ ಕೂಗಾಟ ನಡೆಸಿ ಚಿರತೆಯನ್ನು ಅಟ್ಟಿದ್ದಾರೆ.       ಇದರಿಂದ ಗಾಬರಿಗೊಂಡಿರುವ ರೈತರು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಚಿರತೆ ಹಾವಳಿಯನ್ನು ತಪ್ಪಿಸುವಂತೆ ಒತ್ತಾಯಿಸಿದ್ದು ರೈತನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

Read More

ಬೆಂಗಳೂರು:      ವಿದೇಶದಲ್ಲಿ ವಿದ್ಯಾಭ್ಯಾಸ ಕಲ್ಪಿಸುವ ನೆಪ ಹೇಳಿ ಯುವತಿಯರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸುತಿದ್ದ ಖದೀಮನೊಬ್ಬನನ್ನು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.       ಟೊಮಿ ಟಾಮ್ (36) ಎಂಬ ಆರೋಪಿ ಪೋಲೀಸರ ಬಲೆಗೆ ಬಿದ್ದಿದ್ದು ಈ ವೇಳೆ ಅವನ ಸಂಪರ್ಕದಲ್ಲಿದ್ದ 32 ಯುವತಿಯರನ್ನು ರಕ್ಷಿಸಲಾಗಿದೆ. ಟೊಮಿ ತಾನು ಯುವತಿಯರಿಗೆ ವಿದೇಶದಲ್ಲಿ ವಿದ್ಯಾಭ್ಯಾಸ ಕಲ್ಪಿಸುವುದಾಗಿ ನಂಬಿಸಿದ್ದಾನೆ. 32 ಯುವತಿಯರೂ ಕೇರಳ ಮೂಲದವರಾಗಿದ್ದು ಇವರೆಲ್ಲಾ ಬೆಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಪಡೆದಿದ್ದರು ಎನ್ನಲಾಗಿದೆ. ಟೊಮಿ ಅವರಿಗೆ ಜರ್ಮನಿಯಲ್ಲಿ ಅಲ್ಪಾವಧಿ ಕೋರ್ಸ್ ಗೆ ಸೇರಿಸುವ ಆಮಿಷವೊಡ್ಡಿ ವಿದೇಶಕ್ಕೆ ಕರೆದೊಯ್ಯುತ್ತಿದ್ದ.       ಆದರೆ ವಿಮಾನ ಸಿಬ್ಬಂದಿಗೆ ಯುವತಿಯರನ್ನು ಕಂಡು ಸಂದೇಹ ಮೂಡಿದ್ದು ತಕ್ಷಣ ಇಮಿಗ್ರೇಷನ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಗ ಸತ್ಯ ಬಯಲಾಗಿದೆ. ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳು ಪೋಲೀಸರಿಗೆ ಮಾಹಿತಿ ನೀಡಿದ್ದು ಮಾನವ ಕಳ್ಳಸಾಗಣೆ ಜಾಲದ ನಂಟು ಹೊಂದಿದ್ದ ಆರೋಪಿ ಟೊಮಿಯನ್ನು ಬಂಧಿಸಲಾಗಿದೆ.

Read More

ಶಿವಮೊಗ್ಗ:       ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ಲತಾ ಗಣೇಶ್, ಉಪ ಮೇಯರ್ ಆಗಿ ಚನ್ನಬಸಪ್ಪ ಆಯ್ಕೆಯಾಗುವ ಮೂಲಕ ಬಿಜೆಪಿ ತೆಕ್ಕೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಒಲಿದಿದೆ.       ಒಟ್ಟು 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 2, ಪಕ್ಷೇತರರು 5, ಎಸ್.ಡಿ.ಪಿ.ಐ 1 ಸ್ಥಾನ ಗಳಿಸಿತ್ತು. ಇದಲ್ಲದೆ ಇಬ್ಬರು ಬಿಜೆಪಿಯ ಶಾಸಕರು ಹಾಗೂ ಇಬ್ಬರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಹಾಗೂ ಒರ್ವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 40 ಸದಸ್ಯರಿಗೆ ಮತ ಚಲಾವಣೆಗೆ ಅವಕಾಶವಿದ್ದು ಪಾಲಿಕೆ ಅಧಿಕಾರ ಹಿಡಿಯಲು ಕನಿಷ್ಟ 21 ಸದಸ್ಯರ ಬೆಂಬಲ ಬೇಕಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ 20 ಪಾಲಿಕೆ ಸದಸ್ಯರ ಜೊತೆಗೆ ನಾಲ್ವರು ಬಿಜೆಪಿಯ ಶಾಸಕರು, ಮೂವರು ಪಕ್ಷೇತರ ಸದಸ್ಯರ ಬೆಂಬಲ ಸೇರಿ ಸದಸ್ಯ ಬಲ 27 ಕ್ಕೆ ತಲುಪಿ ನಿಚ್ಚಳ ಬಹುಮತ ಪಡೆಯಲು…

Read More

 ತುಮಕೂರು:       ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠ 10500 ರೂ ವೇತನ ನೀಡಬೇಕು,ಕೆಲಸದ ಭದ್ರತೆ, ಪಿ.ಎಫ್ ಮತ್ತು ಇಎಸ್‍ಐ ಹಾಗೂ 3000 ಮಾಸಿಕ ಪಿಂಚಿಣಿಗೆ ಆಗ್ರಹಿಸಿ ಡಿಸೆಂಬರ್ 2 ರಿಂದ ಅಕ್ಷರ ದಾಸೋಹ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುತ್ತಿರುವುದಾಗಿ ನೌಕರರ ಸಂಘದ ಜಿಲ್ಲಾ ಸಂಚಾಲಕಿ ರಾಧಮ್ಮ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2002ರಿಂದ ಸರಕಾರದ ಈ ಯೋಜನೆಯಲ್ಲಿ ಮಹಿಳೆಯರು ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಇಂದು ಸಹ ಮುಖ್ಯ ಅಡುಗೆಯವರಿಗೆ ಮಾಸಿಕ 2700 ಮತ್ತು ಅಡುಗೆ ಸಹಾಯಕರಿಗೆ 2600 ರೂ ನೀಡಲಾಗುತ್ತಿದೆ. ಇಂದಿನ ಬೆಲೆ ಹೆಚ್ಚಳದಲ್ಲಿ ಕೇವಲ 2700 ರೂಗಳಿಗೆ ಜೀವನ ನಡೆಸುವುದು ದುಸ್ತರವಾಗಿದೆ. ಮಕ್ಕಳು ಓದು, ಮನೆಯ ಖರ್ಚು ಸೇರಿದಂತೆ ಮನೆ ನಿಭಾಯಿಸುವುದು ಕಷ್ಟವಾಗಿದೆ.ಆದ್ದರಿಂದ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಸರಕಾರವೇ ನಿಗಧಿಪಡಿಸಿರುವಂತೆ ಮಾಸಿಕ 10500 ರೂ ಕನಿಷ್ಠ ವೇತನ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ.ಕಳೆದ 10 ವರ್ಷಗಳಿಂದ ಈ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರೂ ಇದುವರೆಗೂ…

Read More

 ತುಮಕೂರು:       ಜಿಲ್ಲೆಯಲ್ಲಿ ವೀರಶೈವ ಸಮುದಾಯ ಇಷ್ಟು ಉತ್ತುಂಗಕ್ಕೆರಲು ಕಾರಣರಾದವರು ದಿವಂಗತರಾದ ಜಿ.ಎಸ್.ಶಿವನಂಜಪ್ಪ ಮತ್ತು ಮಲ್ಲಿಕಾರ್ಜುನಯ್ಯ ಅವರುಗಳನ್ನು ಸಮುದಾಯ ಎಂದಿಗೂ ಮರೆಯುವಂತಿಲ್ಲ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.        ನಗರದ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಮಾಜಿ ಶಾಸಕ ಜಿ.ಎಸ್.ಶಿವನಂಜಪ್ಪ ಅವರು 90ನೇ ಹುಟ್ಟು ಹಬ್ಬದ ಅಂಗವಾಗಿ ಸಿದ್ದರಾಮೇಶ್ವರ್ ಸಹಕಾರಿ ಬ್ಯಾಂಕು, ಗುರುಕುಲ ವಿದ್ಯಾರ್ಥಿನಿಲಯ ಹಾಗೂ ಗುರುಕುಲ ವಿವಿದೋದ್ದೇಶ ಸಹಕಾರಿ ಸಂಘ,ಬೆಂಗಳೂರಿನ ಅಪಲೋ ಆಸ್ಪತ್ರೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಹಳ್ಳಿಗಾಡಿನಿಂದ ನಗರಕ್ಕೆ ಬಂದಂತಹ ವೀರಶೈವ ಸಮುದಾಯ ಜನರು, ನಗರದಲ್ಲಿ ನೆಲೆಗೊಳ್ಳಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿ ಈ ಇಬ್ಬರು ಮಹನೀಯರು ಮಾಡಿದ ಪರಿಣಾಮ, ಇಂದು ನಗರದಲ್ಲಿ ವೀರ ಶೈವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಲು ಸಾಧ್ಯವಾಗಿದೆ ಎಂದರು.       ಆರೋಗ್ಯ ಇಂದು ಎಲ್ಲರಿಗೂ ಬೇಕಾಗಿದೆ.ಮನುಷ್ಯನಿಗೆ ಅತಿ ಅಗತ್ಯವಿರುವ ವ್ಯವಸ್ಥೆಗಳಲ್ಲಿ ಆರೋಗ್ಯ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ನಂತರದ…

Read More

ದೊಡ್ಡೇರಿ:       ಟಾಟಾ ಏಸ್ ವಾಹನವೊಂದು ಆಕಸ್ಮಿಕವಾಗಿ ಮೋರಿಗೆ ಬಿದ್ದ ಪರಿಣಾಮ 20 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ   ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೃಷ್ಣರಾಜ ಸಾಗರ ಗ್ರಾಮದಲ್ಲಿ ನಡೆದಿದೆ.         ಸಿಡದರಲ್ಲು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಭೆ ಮುಗಿಸಿಕೊಂಡು ದಂಡಿನದಿಬ್ಬ ಗ್ರಾಮಕ್ಕೆ ವಾಪಸ್ ತೆರಳುತ್ತಿದ್ದ  20 ಜನ ಅಡುಗೆ ಸಹಾಯಕರಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದಿದ್ದು, ಇದರಿಂದಾಗಿ ಅವರಿಗೆ ಗಂಭೀರ ಗಾಯಗಳಾಗಿವೆ.         ಗಾಯಗೊಂಡವರನ್ನು ಕೂಡಲೆ 108 ವಾಹನದಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ. ಈ ಪ್ರಕರಣ ಸಂಬಂಧ ಬಡವನಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Read More