Author: News Desk Benkiyabale

ದೆಹಲಿ:        ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾರತದ ಬಾಕ್ಸಿಂಗ್‌ ತಾರೆ ಎಂ.ಸಿ. ಮೇರಿ ಕೋಮ್‌ ದಾಖಲೆಯ ಆರನೇಯ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.       ಇಂದು ನಡೆದ 48 ಕೆಜಿ ಲೈಟ್‌ ಫ್ಲೈವೇಟ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಉಕ್ರೇನ್‌ನ ಎಚ್ ಓಕೋಟೊ ವಿರುದ್ಧ 5-0 ಅಂತರದ ಗೆಲುವು ಸಾಧಿಸುವ ಮೂಲಕ, ಆರು ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ವಿಶ್ವದ ಮೊದಲ ಬಾಕ್ಸಿಂಗ್ ತಾರೆ ಎಂಬ ಗೌರವಕ್ಕೆ ಮೇರಿ ಕೋಮ್ ಪಾತ್ರವಾಗಿದ್ದಾರೆ.        ಮೇರಿ ಕೋಮ್ ಈ ಹಿಂದೆ ಐದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕದೊಡನೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಮಿಂಚಿದ್ದರು. ಮೇರಿ ಕೋಮ್‌ 2010ರಲ್ಲಿ ಕೊನೆಯದಾಗಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನ ಗೆದ್ದಿದ್ದರು.

Read More

ಬೆಂಗಳೂರು:       ನವೆಂಬರ್ 25ನೇ ತಾರೀಕು (ಭಾನುವಾರ) ನಿಗದಿಯಾಗಿದ್ದ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ (2113 ಹುದ್ದೆಗಳು) ಹುದ್ದೆ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದರ ಬಗ್ಗೆ ರಾಜ್ಯದ ನಾನಾ ಭಾಗಗಳಿಂದ ದೂರುಗಳು ಬಂದಿದ್ದು, 116 ಅಭ್ಯರ್ಥಿಗಳು, ಆರೋಪಿ ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.       ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯ ಕೊಠಡಿಯೊಂದರಲ್ಲಿ ಅಭ್ಯರ್ಥಿಗಳನ್ನೆಲ್ಲ ಒಟ್ಟಿಗೆ ಮಾಡಿಕೊಂಡು, ಪ್ರಶ್ನೆಪತ್ರಿಕೆ ಹಾಗೂ ಅದಕ್ಕೆ ಉತ್ತರ ಹೇಳಿಕೊಡಲು ಸಿದ್ಧತೆ ನಡೆಸಲಾಗಿತ್ತು. ಶಿವಕುಮಾರ್ ಹಾಗೂ ಬಸವರಾಜ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳಿವು ಸಿಕ್ಕಿತ್ತು.       ಆ ಮಾಹಿತಿ ಆಧರಿಸಿ ಎರಡು ತಂಡಗಳನ್ನು ರಚಿಸಿಕೊಂಡ ಸಿಸಿಬಿ ಪೊಲೀಸರು ಶನಿವಾರ ಬೆಳಗ್ಗೆ ದಾಳಿ ನಡೆಸಿದ್ದರು. ಈ ವೇಳೆ ಪ್ರಮುಖ ಆರೋಪಿ ಶಿವಕುಮಾರ್ ನನ್ನು ಬಂಧಿಸಲಾಗಿದೆ. ಪ್ರತಿ ಅಭ್ಯರ್ಥಿಯಿಂದ 6 ರಿಂದ 8 ಲಕ್ಷದವರೆಗೆ ಹಣ ಪಡೆದಿರುವುದಾಗಿಯೂ ಆತ ಒಪ್ಪಿಕೊಂಡಿದ್ದಾನೆ. ಈ ಕೃತ್ಯಕ್ಕಾಗಿ ಬೇರೆ…

Read More

ಗುಬ್ಬಿ :       ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್‍ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರೇಣುಕಾಚಾರ್ಯ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ಧೋರಣೆಗೆ ಜೆ.ಡಿ.ಎಸ್.ಕಾರ್ಯಕರ್ತರು ಹಾಗೂ ಮುಖಂಡರುಗಳು ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ರೇವಣ್ಣ ತಿಳಿಸಿದರು.       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಚಿವ ಎಸ್.ಆರ್.ಶ್ರೀನಿವಾಸ್‍ರವರು 20 ವರ್ಷಗಳ ರಾಜಕೀಯ ಭವಿಷ್ಯದಲ್ಲಿ ಅಭಿವೃದ್ಧಿಯ ಪಥಕ್ಕೆ ಹೆಚ್ಚಿನ ಒತ್ತು ನೀಡಿದ್ದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ 7 ಬಾರಿ ದಾವಣಗೆರೆಗೆ ಭೇಟಿ ನೀಡಿದ್ದು ಜಿಲ್ಲೆಯ ಅಭಿವೃದ್ದಿಗೆ ಮಾರಕವಾದ ಮರಳು ದಂಧೆಗೆ ಕಡಿವಾಣ ಹಾಕಿದ್ದು ಮರಳುದಂಧೆಕೋರರಿಗೆ ಅತಿ ಹೆಚ್ಚಿನ ಬೆಂಬಲ ನೀಡುತ್ತಿದ್ದ ರೇಣುಕಾಚಾರ್ಯರವರ ಮಾಮುಲನ್ನು ನಿಲ್ಲಿಸಿದ ಪರಿಣಾಮ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದು ಕೇವಲ ಮೋಜು ಮಸ್ತಿ ಮಾಡಲು ದಾವಣಗೆರೆ ಬರುತ್ತಿದ್ದಾರೆ ಎಂಬ ಹೇಳಿಕೆಯಿಂದ ರಾಜ್ಯದ ಜೆ.ಡಿ.ಎಸ್. ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ತೀವ್ರವಾಗಿ ಖಂಡಿಸಲಿದ್ದಾರೆ ಎಂದ ಅವರು ಭಾರತೀಯ ಜನತಾ…

Read More

ಗುಬ್ಬಿ :       ಅನಾಥಾಲಯದ ಹೆಸರಿನಲ್ಲಿ ಹಣ ದುರ್ಬಳಕೆಯಾಗಿ ವಿದ್ಯಾರ್ಥಿಗಳೇ ಇಲ್ಲದ ಅನಾಥಾಲಯಕ್ಕೆ 2017-18ನೇ ಸಾಲಿನಲ್ಲಿ 93 ವಿದ್ಯಾರ್ಥಿಗಳಿಗೆ 77,13,300 ರೂ.ಗಳನ್ನು ಸಭೆಯ ಅನುಮೋದನೆ ಪಡೆಯದೆ ನೀಡಿರುವುದು ಎಷ್ಟು ಸಮಂಜಸ ಎಂದು ದೇವರಾಜು ಅರಸು ಅಭಿವೃದ್ದಿ ನಿಗಮದ ಅಧಿಕಾರಿಗಳನ್ನು ಸಚಿವ ಎಸ್.ಆರ್.ಶ್ರೀನಿವಾಸ್ ತರಾಟೆಗೆ ತೆಗೆದುಕೊಂಡ ಘಟನೆ ಕೆ.ಡಿ.ಪಿ ಸಭೆಯಲ್ಲಿ ನಡೆಯಿತು.       ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಕರೆದಿದ್ದ ಕೆ.ಡಿ.ಪಿ ಸಭೆಯ ಇಲಾಖಾವಾರು ಅಭಿವೃದ್ದಿಯ ಸಭೆಯಲ್ಲಿ ಮಾತನಾಡಿದ ಅವರು ಹಿಂದಿನ ಬಾರಿಯೇ ಈ ಬಗ್ಗೆ ವಿವರಣೆ ಕೇಳಿದ್ದು ಇಲ್ಲಿಯವರೆಗೂ ಯಾವುದೇ ದಾಖಲಾತಿಯನ್ನು ಕೇಳದೆ ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂಗಳನ್ನು ನೀಡುವಲ್ಲಿ ಸರಿಯಾದ ಮಾಹಿತಿ ನೀಡದೆ ಇಲಾಖೆಯ ಅನುಮತಿ ಪಡೆಯದೆ ಎಸ್.ಡಿ.ಎಂ.ಸಿ ಸದಸ್ಯರುಗಳೇ ಶೂಗಳನ್ನು ಖರೀದಿಸುವ ಹಕ್ಕನ್ನು ನೀಡಿ ಕಳಪೆ ಕಂಪನಿಯ ಶೂಗಳನ್ನು ನೀಡುತ್ತಿದ್ದು ಇಲ್ಲಿನ ಶಿಕ್ಷಣಾಧಿಕಾರಿಗಳು ಪರಿಶೀಲಿಸದೆ…

Read More

 ತುಮಕೂರು:       ನಮ್ಮ ನಾಡಿನ ಭವ್ಯ ಪರಂಪರೆ, ಸಂಸ್ಕೃತಿಯನ್ನು ಉಳಿಸುವ ಜತೆಗೆ ಕನ್ನಡ ಶಾಲೆಗಳನ್ನು ಸಂರಕ್ಷಿಸಬೇಕು ಎಂದು ಸಾಹಿತಿ ಕವಿತಾಕೃಷ್ಣ ಸರ್ಕಾಕವನ್ನು ಒತ್ತಾಯಿಸಿದರು.       ಇಲ್ಲಿನ ಮಾರುತಿ ನಗರದಲ್ಲಿ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ವಿವಿಧ ರಾಜ್ಯಗಳ ಭಾಷೆಗಳು ರಾಷ್ಟ್ರಭಾಷೆಯಾಗಿದ್ದು, ನಮ್ಮ ಕನ್ನಡವೂ ಸಹ ರಾಷ್ಟ್ರಭಾಷೆಯೇ ಆಗಿದೆ ಎಂದರು.       ಕರ್ನಾಟಕಕ್ಕೆ ನಮ್ಮ ತುಮಕೂರು ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದವರಲ್ಲಿ ನಮ್ಮ ಜಿಲ್ಲೆಯ ಶಿವಮೂರ್ತಿ ಶಾಸ್ತ್ರಿಗಳು ಪ್ರಮುಖರಾಗಿದ್ದಾರೆ. ಇನ್ನು ಈ ದೇಶಕ್ಕೆ ರಾಷ್ಟ್ರಪತಿ ಎಂಬ ಶಬ್ದವನ್ನು ಪರಿಚಯಿಸಿದವರು ನಮ್ಮ ಜಿಲ್ಲೆಯ ಹೆಮ್ಮೆಯ ಸಾಹಿತಿ ದಿ. ತೀ.ನಂ.ಶ್ರೀ.ರವರು ಎಂದು ಅವರು ಹೇಳಿದರು. ಇಂದು ಕನ್ನಡತನ ಮಾಯವಾಗುತ್ತಿದೆ. ಅಪ್ಪ, ಅಮ್ಮ ಎಂದು ಮುದ್ದಿನಿಂದ ಕನ್ನಡದಲ್ಲಿ ಕರೆಯುವುದು ಕ್ಷೀಣವಾಗುತ್ತಿದ್ದು, ಮಮ್ಮಿ-ಡ್ಯಾಡಿ ಸಂಸ್ಕೃತಿ ಆವರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.    …

Read More

ಚಿಕ್ಕನಾಯಕನಹಳ್ಳಿ :       ತುಮಕೂರು ವಿಶ್ವವಿದ್ಯಾನಿಲಯದಲ್ಲಿ ತೀ.ನಂ.ಶ್ರೀ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು.       ಪಟ್ಟಣದಲ್ಲಿ ತೀ.ನಂ.ಶ್ರೀ 113ನೇ ಜನ್ಮದಿನಾಚರಣೆ ಅಂಗವಾಗಿ ಆಚಾರ್ಯ ತೀ.ನಂ.ಶ್ರೀಕಂಠಯ್ಯನವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತೀ.ನಂ.ಶ್ರೀ ಗುರು ಪರಂಪರೆಯಲ್ಲಿ ಅದ್ವಿತೀಯ ನಾಯಕ ಹಾಗೂ ಚಿಂತಕ, ವಿದ್ವತ್ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಸಮಕಾಲೀನ ವಿದ್ವಾಂಸರೊಂದಿಗೆ ವಿನಯತೆಯನ್ನು ಸಾರಿದ ವ್ಯಕ್ತಿ, ತೀ.ನಂ.ಶ್ರೀಯವರ ಕಾವ್ಯಮೀಮಾಂಸೆ ಸಾಹಿತ್ಯದ ಅಧ್ಯಯನಕ್ಕೆ ಭದ್ರ ಬುನಾದಿ ಹಾಕಿದೆ, ಬಿ.ಎಲ್.ಎನ್.ಎನ್, ಬಿ.ಎಂ.ಶ್ರೀ ಮುಂತಾದವರ ಸಾಲಿನಲ್ಲಿ ತೀ.ನಂ.ಶ್ರೀಯವರ ಕಾವ್ಯ ಹೆಚ್ಚು ವಿಶಿಷ್ಠತೆಯನ್ನು ಮೆರೆದಿದೆ.       ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳ ನಡುವೆ ತೀ.ನಂ.ಶ್ರೀಯವರ ವ್ಯಕ್ತಿತ್ವ ಇಂದಿನ ಯುವ ಪೀಳಿಗೆಗೆ ಆದರ್ಶ, ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ತೀ.ನಂ.ಶ್ರೀ ಭವನ ಒಂದು ಸಾಂಸ್ಕøತಿಕ ಚಟುವಟಿಕೆಗಳ ಕೇಂದ್ರವಾಗಲಿ, ಶೈಕ್ಷಣಿಕವಾಗಿ ತೀ.ನಂ.ಶ್ರೀ ವಿಚಾರಗಳ ಕುರಿತು ಸಂಶೋಧನೆಗಳಾಗಲಿ ಎಂದು ಆಶಿಸಿದ ಅವರು, ತೀ.ನಂ.ಶ್ರೀ ಅಧ್ಯಯನ ಪೀಠದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ…

Read More

ತುಮಕೂರು :       ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಂತೆ ಜಲಾನಯನ ಅಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನೂ ಸಹ ನರೇಗಾ ಯೋಜನೆಯಡಿ ಕೈಗೊಳ್ಳಬೇಕೆಂದು ಜಲಾನಯನ ಅಭಿವೃದ್ದಿ ಇಲಾಖಾಯುಕ್ತ ಪ್ರಭಾಷ್ ಚಂದ್ರ ರೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.       ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಪಂಚಾಯತಿಯ ಜಂಟಿ ಆಶ್ರಯದಲ್ಲಿ ಶನಿವಾರ ಬಾಲಭವನದಲ್ಲಿ ನರೇಗಾ ಯೋಜನಾನುಷ್ಠಾನಾಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.       ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೂ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಉದ್ಯೋಗ ನೀಡುವಲ್ಲಿ ನಿರ್ಗತಿಕರು, ಕಡು ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಪ್ರಥಮಾದ್ಯತೆ ನೀಡಬೇಕು. ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಾನವ ದಿನಗಳನ್ನು ಸೃಜಿಸುವ ಪ್ರಮಾಣವನ್ನು 100 ರಿಂದ 150ಕ್ಕೆ ಹೆಚ್ಚಿಸಲಾಗಿದ್ದು, ಎಲ್ಲಾ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ನಿಗಧಿತ ಗುರಿಯನ್ನು…

Read More

ಮಂಡ್ಯ:        ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಜಿಲ್ಲೆಯ ಪಾಂಡವಪುರ ತಾಲೂಕು ಕನಗನಮರಡಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್​ ವಿ.ಸಿ.ನಾಲೆಗೆ ಉರುಳಿ ಸುಮಾರು30 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.       ನಾಲೆಯಲ್ಲಿ ಬಸ್‌ ಸಂಪೂರ್ಣ ಮುಳುಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸದ್ಯಕ್ಕೆ 30 ಮೃತದೇಹಗಳನ್ನು ಹೊತೆಗೆಯಲಾಗಿದ್ದು, ಮಂಡ್ಯ, ಮೈಸೂರಿನಿಂದ ಆರು ಅಗ್ನಿಶಾಮಕ‌ ಮತ್ತು ತುರ್ತು ಸೇವೆಗಳ ಸಿಬ್ಬಂದಿ ನಿಯೋಜಿಸಲಾಗಿದೆ. ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ. 35ಕ್ಕೂ ಹೆಚ್ಚು ಮಂದಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.       ಪಾಂಡವಪುರದಿಂದ ಕನಗನಮರಡಿ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದ ಬಸ್‌ ಚಾಲಕನ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿದ್ದ ನಾಲೆಗೆ ಉರುಳಿದೆ. ನಾಲೆಗೆ ತಡೆಗೋಡೆ ಇಲ್ಲದಿರುವುದೂ ಬಸ್​ ಸುಲಭವಾಗಿ ನಾಲೆಗೆ ಉರುಳಲು ಕಾರಣ ಎನ್ನಲಾಗಿದೆ.       ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ…

Read More

ಮೈಸೂರು:       ಈಗಾಗಲೇ ನಮ್ಮಿಬ್ಬರದು ಮದುವೆಯಾಗಿದೆ. ಸಂಸಾರ ಚೆನ್ನಾಗಿ ನಡೆಯುತ್ತಿದೆ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಒಂದೇ ಕುಟುಂಬ ಆಗಿರುವುದರಿಂದ ಬಾಳ್ವೆ ಚೆನ್ನಾಗಿ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ತಿಳಿಸಿದರು.       ಮೈತ್ರಿ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು,“ಇಂದು ಸಮ್ಮಿಶ್ರ ಸರಕಾರ ಆರು ತಿಂಗಳನ್ನು ಪೂರೈಸಿದೆ. ಮೈತ್ರಿ ಸರಕಾರ ಚೆನ್ನಾಗಿ ಸಂಸಾರ ಮಾಡುತ್ತಿದೆ. ತೊಂದರೆ ಏನು ಇಲ್ಲ. ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ಕುಟುಂಬವಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.       ಇಂದು ದೋಸ್ತಿ ಸರಕಾರಕ್ಕೆ ಅರ್ಧವಾರ್ಷಿಕ ಸಂಭ್ರಮ. ಮೈತ್ರಿ ಸರಕಾರ ರಚನೆಯಾಗಿ ಇಂದಿಗೆ ಆರು ತಿಂಗಳನ್ನು ಪೂರೈಸಿದೆ. 2018 ಮೇ 23 ರಂದು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.  

Read More

ಬೆಂಗಳೂರು :       ರಾಜ್ಯದ ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿಯೇ ಹೊಣೆ. ಈ ಸಾಂದರ್ಭಿಕ ಶಿಶುವಿಗೆ ಯಾವುದೇ ಗೊತ್ತು ಗುರಿ ಇಲ್ಲ. ಸರ್ಕಾರದ ಮೇಲೆ ಸಿಎಂಗೆ ಹಿಡಿತವೇ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.       ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಒಳ್ಳೆಯ ಕೆಲಸ ಮಾಡಿದ್ರೆ ಅವರೇ 5 ವರ್ಷ ಸಿಎಂ ಆಗಿರಲಿ. ಆದ್ರೆ, 6 ತಿಂಗಳು ಅಧಿಕಾರದಲ್ಲಿ ಇರೋದನ್ನೇ ಇವರು ಸಾಧನೆ ಅಂದುಕೊಂಡಿದ್ದಾರೆ. ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದು, ಕುಮಾರಸ್ವಾಮಿ ಸರಕಾರ ಏನಾದರೂ ಸಾಧನೆ ಮಾಡಿದ್ದರೆ ರೈತರು ಏಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದರು ಎಂದು ಪ್ರಶ್ನಿಸಿರುವ ವಿಪಕ್ಷ ನಾಯಕ ಯಡಿಯೂರಪ್ಪ, ರೈತರೇ ಸಿಎಂ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಅವರೇ ನೇರ ಹೊಣೆ ಎಂದು ದೂರಿದ್ದಾರೆ.       ಜನರ ಸಮಸ್ಯೆಗಳನ್ನು ಆಲಿಸುವ ಪ್ರಮೇಯವೇ ಇಲ್ಲ. ಮಹಿಳೆಯರು ಮತ್ತು ರೈತರಿಗೆ ಅಪಮಾನ ಮಾಡುವುದು ಮತ್ತು ದರ್ಪದ ಮಾತುಗಳನ್ನು…

Read More