ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಂಡ್ಯ ಭೇಟಿ ದಿನವೇ ರೈತರೊಬ್ಬರು ಸಾಲಬಾಧೆ ಮತ್ತು ಅನಾರೋಗ್ಯ ಸಮಸ್ಯೆ ತಾಳಲಾರದೆ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆೆ ಮಾಡಿಕೊಂಡ ಘಟನೆ ತಾಲೂಕಿನ ಕನ್ನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಜೈಕುಮಾರ(43) ಮೃತ ರೈತ. ತನ್ನ ಸಾಲ ಮತ್ತು ಅನಾರೋಗ್ಯದ ಸಮಸ್ಯೆೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಳಾಸಕ್ಕೆೆ ಡೆತ್‌ನೋಟ್ ಬರೆದಿಟ್ಟು, ಆತ ತನ್ನ ಜಮೀನಿನ ಬಳಿ ವಿಷ ಸೇವಿಸಿ, ಆತ್ಮಹತ್ಯೆೆ ಮೊರೆ ಹೋಗಿದ್ದಾನೆ. 35 ಗುಂಟೆ ಜಮೀನು ಹೊಂದಿದ್ದ ರೈತ ಜೈಕುಮಾರ ಕಬ್ಬು ಮತ್ತು ತರಕಾರಿ ಬೇಸಾಯ ಮಾಡುತ್ತಿದ್ದರು. 2.80 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರ ಚಿಕಿತ್ಸೆೆಗೆ 3 ಲಕ್ಷ ರು. ಅಗತ್ಯವೆಂದು ವೈದ್ಯರು ತಿಳಿಸಿದ್ದರು. ಒಂದೆಡೆ ಸಾಲ, ಮತ್ತೊಂದೆಡೆ ಮಾರಕ ಕ್ಯಾನ್ಸರ್. ಎರಡರಿಂದ ಬೇಸತ್ತ ಜೈಕುಮಾರ ಆತ್ಮಹತ್ಯೆೆ ಮೊರೆ ಹೋದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.…
Author: News Desk Benkiyabale
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಿಎಂ ಹೇಳುವುದೊಂದು, ಮಾಡುವುದೊಂದು. ಸರ್ಕಾರ ದಿವಾಳಿಯಾಗಿದೆ. ಸರ್ಕಾರ ಸತ್ತು ಹೋಗಿದೆ. ರಾಜ್ಯದಲ್ಲಿ ಸರ್ಕಾರ ಎಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿನ ವಿಪಕ್ಷ ನಾಯಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಈ ಸರಕಾರ ಅಸ್ತಿತ್ವದಲ್ಲೆ ಇಲ್ಲ, ಸತ್ತು ಹೋಗಿದೆ’ ಎಂದು ಟೀಕಿಸಿದ್ದಾರೆ. ಐದಾರು ತಿಂಗಳಿಂದ ಪಿಂಚಣಿ ನೀಡಲು ಈ ಸರಕಾರದ ಬಳಿ ಹಣವಿಲ್ಲ. ವಿವಿಧ ಕಾಮಗಾರಿಗಳ 6 ಸಾವಿರ ಕೋಟಿ ರೂ.ಬಿಲ್ ಬಾಕಿ ಇದೆ. ಇನ್ನೂ 46 ಸಾವಿರ ಕೋಟಿ ರೂ.ರೈತರ ಸಾಲಮನ್ನಾವೂ ಆಗಿಲ್ಲ. ಸರಕಾರದ ಖಜಾನೆ ಖಾಲಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ. ಸಕ್ಕರೆ ಸಚಿವರು ಇದ್ದಾರೆಂದು…
ಮಧುಗಿರಿ : ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲಾ ಮಗು ಎಂದು ಹಸುಳೆ ದ್ರುವನಿಗೆ ನಾರದ ಮಹರ್ಷಿ ಹೇಳಿದಂತೆ ಮಹಿಳೆಯೊಬ್ಬರು ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ರಾಜ್ಯ ಸರಕಾರದ ಒಂದು ನೌಕರಿ ಮತ್ತು ನಾಲ್ಕು ಅಧಿಕಾರಿ ಸ್ಥಾನವನ್ನು ಗಿಟ್ಟಿಸಿರುವ ಗ್ರಾಮೀಣ ಬಹುಮುಖ ಪತ್ರಿಭೆ ಮಧುಗಿರಿ ತಾಲೂಕಿನ ತವಕದಹಳ್ಳಿ ಗ್ರಾಮದವರಾಗಿದ್ದಾರೆ. ತವಕದಹಳ್ಳಿ ಗ್ರಾಮದ ಟಿ.ರಮ್ಯ ಈ ಸಾಧನೆ ಮಾಡಿರುವ ಸಾಧಕಿಯಾಗಿದ್ದು ಈಕೆ ಪ್ರಾಥಮಿಕ ಶಿಕ್ಷಣವನ್ನು ತವಕದಹಳ್ಳಿ ಗ್ರಾಮದಲ್ಲಿ, ಬಿಜವರ ಗ್ರಾಮದಲ್ಲಿ ಪ್ರೌಢಶಿಕ್ಷಣವನ್ನು ತುಮಕೂರಿನಲ್ಲಿ ಪಿಯುಸಿ ಮತ್ತು ಡಿಇಡಿ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದರು. ಡಿಇಡಿ ಅಂತಿಮ ಹಂತದಲ್ಲಿದ್ದಾಗ 2006 ರಲ್ಲಿ ಪೊಲೀಸ್ ಕಾನ್ಸ್‍ಸ್ಟೇಬಲ್ ಹುದ್ದೆಗೆ ಅರ್ಜಿಸಲ್ಲಿಸಿ, 2007 ರಲ್ಲಿ ಪೊಲೀಸ್ ಇಲಾಖೆಗೆ ನೇಮಕವಾದ ನಂತರ ಡಿಇಡಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ಆಗ ಅವರು 19 ವರ್ಷ ಪೂರೈಸಿದ್ದರು. ಧಾರವಾಡದಲ್ಲಿ ತರಬೇತಿಯಲ್ಲಿದ್ದಾಗಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮೂಲಕ ಬಿಎ ಪದವಿ ಪಡೆದರು. ಅದಾದನಂತರ ದೂರಶಿಕ್ಷಣದ ಮೂಲಕ…
ಮಧುಗಿರಿ : ಗಂಡನಿಂದ ಹೆಂಡತಿಗೆ ದಾನಪತ್ರ ನೊಂದಣಿ ಮಾಡಿಸುವ ಸಲುವಾಗಿ 5 ಸಾವಿರ ರೂಗಳ ಲಂಚ ಸ್ವೀಕರಿಸುತ್ತಿದ್ದ ಸಬ್ ರಿಜಿಸ್ಟ್ರರ್ ವೈ.ಎನ್. ರಾಮಚಂದ್ರಯ್ಯ ಎಸಿಬಿ ಬಲೆಗೆ ಶುಕ್ರವಾರ ಸಿಕ್ಕಿ ಬಿದ್ದಿದ್ದಾರೆ. ಮಧುಗಿರಿ ತಾಲೂಕಿನ ಪುರವರ ಹೋಬಳಿ ಚಿಕ್ಕಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 21/10 ರ 2 ಎಕರೆ 14 ಗುಂಟೆ ಜಮೀನಿನ್ನು ತನ್ನ ಪತ್ನಿಯ ಹೆಸರಿಗೆ ದಾನಪತ್ರವನ್ನು ಮಾಡಿಸಲು ಮುದ್ದಯ್ಯನಪಾಳ್ಯದ ದೇವರಾಜು ಎಂಬುವವರು ನ. 20 ರಂದು ಸಬ್ ರಿಜಿಸ್ಟ್ರರ್ ರಿಂದ ಮಾಹಿತಿ ಪಡೆದಿದ್ದರು ಈ ವೇಳೆ ನಡೆದಿದ್ದ ಒಂದು ಎಕರೆಗೆ 5 ಸಾವಿರದಂತೆ ನಡೆದ ಲಂಚದ ಮಾತುಕತೆಯನ್ನು ವೀಡಿಯೋ ಚಿತ್ರಿಕರಣ ಮಾಡಿಕೊಂಡು ಎಸಿಬಿಗೆ ನೀಡಿದ್ದರು. ಅದರ ಆಧಾರದಂತೆ ನ.23 ರಂದು ಚಿಕ್ಕಹೊಸಹಳ್ಳಿ ಗ್ರಾಮದ ಸುರೇಂದ್ರರೆಡ್ಡಿ ಹಾಗೂ ಮುದ್ದಯ್ಯನಪಾಳ್ಯದ ನಾಗರಾಜು ರವರ ಸಹಕಾರದೊಂದಿಗೆ ದೇವರಾಜು ಎಸಿಬಿಯವರು ನೀಡಿದ್ದ 5 ಸಾವಿರ ಹಣವನ್ನು ಕಚೇರಿಯ ಗುಮಾಸ್ಥ ರಂಗನಾಥನಿಗೆ ನೀಡಿದ್ದಾರೆ. ನಂತರ ತುಮಕೂರು ಡಿವೈಎಸ್‍ಪಿ ಪಿ.…
ತುಮಕೂರು: ಭಾರತೀಯ ಪರಂಪರೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ರೂಢಿಯಲ್ಲಿದ್ದ ಗುರುಕುಲಗಳ ಮಾದರಿಯಲ್ಲಿಯೇ ಇಂದೂಸಹ ಸಮಾಜದ ನಿರ್ಗತಿಕ ಮಕ್ಕಳಿಗೆ ಶಿಕ್ಷಣ-ಸಂಸ್ಕಾರಗಳನ್ನು ನೀಡಲು ಆಶ್ರಮ ಶಾಲೆಯನ್ನು ತೆರೆದು ಮುನ್ನೆಡೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದುಜಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭರತ್ ಕುಮಾರ್ ಕೆ.ಎಸ್. ತಿಳಿಸಿದರು. ಅವರು ಮೈದಾಳದ ಶ್ರೀ ಶಿವ ಶೈಕ್ಷಣಿಕ ಸೇವಾ ಆಶ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಪಾಲನಾ ಸಂಸ್ಥೆಯಲ್ಲಿನ ಮಕ್ಕಳಿಗೆ ‘ಮಕ್ಕಳ ಹಕ್ಕುಗಳು’ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಕಾರಗಳಿಗೆ ಗುರುಕುಲ ಮಾದರಿಯ ಇಂತಹ ಆಶ್ರಮ ಶಾಲೆಗಳು ಅತ್ಯಗತ್ಯ ನಾನೂ ಕೂಡ ಶ್ರೀ ಸಾಯಿನಾಥ ಆಶ್ರಮದ ಶಾಲೆಯಲ್ಲಿ ಓದಿದವನು.ಹಾಗಾಗಿ ಆಶ್ರಮಶಾಲೆಗಳಲ್ಲಿ ಓದಿದವರು ಉತ್ತಮ ಶಿಕ್ಷಣ,ಸಂಸ್ಕಾರಗಳಿಂದ ಒಳ್ಳೆಯ ವಿದ್ಯಾರ್ಥಿಗಳಾಗಿ ರೂಪುಗೊಂಡು ತಮ್ಮ ಜೀವನದಲ್ಲಿ ಗುರಿ ಮುಟ್ಟಿ ಉನ್ನತ ಸ್ಥಾನಕ್ಕೇರುತ್ತಾರೆ. ಇಂದು ಈ ಆಶ್ರಮ ನೋಡಿ ನನ್ನ ಮನಸ್ಸಿಗೆ ತುಂಬಾ ಸಂತೋಷವಾಯಿತು…
ಬೆಂಗಳೂರು : ದೋಸ್ತಿ ಸರ್ಕಾರವು ಪಿಯುಸಿ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ಇನ್ಮುಂದೆ ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡಲು ಮುಂದಾಗಿದೆ. ಈ ಕುರಿತು ರಾಜ್ಯದ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಲಾಗಿದ್ದು, ಸುತ್ತೋಲೆ ಹೊರಡಿಸಲಾಗಿದೆ. ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಲ್ಯಾಪ್ ಟಾಪ್ ಕೂಡಾ ಕೊಂಡೊಯ್ಯುವಂತಿಲ್ಲವೆಂದು ತಿಳಿಸಲಾಗಿದೆ. ಕಾಲೇಜು ಅವಧಿಯಲ್ಲಿ ಇನ್ಮುಂದೆ ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಬಳಸುವ ಹಾಗಿಲ್ಲ ಎಂದು ಪಿಯುಸಿ ಬೋರ್ಡ್ ಮಹತ್ವದ ಆದೇಶವನ್ನು ಹೊರಡಿಸಿದೆ. ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬ್ಯಾನ್ ಮಾಡಲಾಗಿದೆ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಪಿಯುಸಿ ಬೋರ್ಡ್ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಬ್ಬರಿಗೂ ಮೊಬೈಲ್ ಹಾಗೂ ಲ್ಯಾಪ್ ಟ್ಯಾಪ್ ಬ್ಯಾನ್ ಮಾಡಿದೆ. ಈಗಾಗಲೇ ಪಿಯುಸಿ ಬೋರ್ಡ್ ಆದೇಶ ಜಾರಿಗೆ ತರುವಂತೆ ಎಲ್ಲ ಉಪನಿರ್ದೇಶಕರಿಗೆ ಸುತ್ತೋಲೆ…
ತಿಪಟೂರು: ನಗರದ ಬ್ಯಾಂಕ್ ನಲ್ಲಿ ಆಗತಾನೆ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿ ಹಣವನ್ನು ತನ್ನ ಬೈಕ್‍ನ ಡಿಕ್ಕಿಯಲ್ಲಿರಿಸಿ, ಮೆಡಿಕಲ್ ಸ್ಟೋರ್ ಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಆಗ್ರೋ ಇಂಡಸ್ಟ್ರಿ ಮಾಲಿಕ ಪಾರ್ಥಸಾರಥಿ ಎಂಬುವರೇ ಹಣ ಕಳೆದುಕೊಂಡವರು. ಇವರು ಆಗತಾನೆ ವಿಜಯ ಬ್ಯಾಂಕ್ ನಲ್ಲಿ 5.30 ಲಕ್ಷ ಹಣ ಡ್ರಾ ಮಾಡಿ, ಬ್ಯಾಂಕ್ ಎದುರು ತಮ್ಮ ಆಕ್ಟಿವಾ ಹೊಂಡ ಬೈಕ್ ನಿಲ್ಲಿಸಿ, ಡಿಕ್ಕಿಯಲ್ಲಿ ಹಣ ಇಟ್ಟಿದ್ದರು. ಮೆಡಿಕಲ್ ಸ್ಟೋರ್ ಗೆ ಹೋಗಿ ಔಷಧಿ ಸಾಮಗ್ರಿ ತೆಗೆದುಕೊಂಡು ಬರುವಷ್ಟರಲ್ಲಿ, ಪಲ್ಸರ್ ಬೈಕ್ ನಲ್ಲಿ ಬಂದ ಮುಸುಕುದಾರಿ ಕಳ್ಳರು, ಆಕ್ಟಿವಾ ಹೊಂಡ ಡಿಕ್ಕಿ ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ನಾನು ಇನ್ನು ಮುಂದೆ ಮಾಧ್ಯಮಗಳ ಜತೆ ಮಾತನಾಡುವುದೇ ಇಲ್ಲ. ನಾನು ವೇದಿಕೆ ಮೇಲೆ ಏನು ಮಾತನಾಡುತ್ತೇನೋ ಅಷ್ಟೆ. ಬೇಕಾದರೆ, ಬರೆದುಕೊಳ್ಳಿ, ಇಲ್ಲದಿದ್ದರೆ ಬಿಡಿ, ಇನ್ಮುಂದೆ ಮಾಧ್ಯಮಗಳ ಜತೆ ಪ್ರತ್ಯೇಕವಾಗಿ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಗುರುವಾರ ಬಡವರ ಬಂಧು ಯೋಜನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿ, ನಾನು ಏನು ಮಾತನಾಡಿದರೂ ತಪ್ಪಾಗಿ ಭಾವಿಸುತ್ತಾರೆ. ನಾನು ಏನು ಮಾತನಾಡಬೇಕೆಂದು ಮಾಧ್ಯಮಗಳ ನೇತೃತ್ವದಲ್ಲಿ ಒಂದು ಸಮಿತಿ ಮಾಡಿ ಅವರಿಂದ ಸಲಹೆ ಪಡೆದು ಮಾತನಾಡಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗಾಗಿ ಬಡವರ ಬಂಧು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬಡ್ಡಿ ಇಲ್ಲದೆ ಸಾಲ ಕೊಟ್ಟರೆ ಮರುಪಾವತಿ ಮಾಡಲ್ಲ. ಶೇ.4 ರಷ್ಟಾದರೂ ಬಡ್ಡಿ ವಿಧಿಸಿ ಎಂದು ಅಧಿಕಾರಿಗಳು ಸಲಹೆ ಕೊಟ್ಟಿದ್ದರು. ಆದರೆ, ನಾನು ಒಪ್ಪಲಿಲ್ಲ. ನನಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ. ಬಡ್ಡಿ ಇಲ್ಲದೆ ನೀಡುವ ಸಾಲವನ್ನು ಸದುಪಯೋಗ ಪಡಿಸಿಕೊಳ್ಳಿ, ಸರಿಯಾಗಿ ಮರುಪಾವತಿ ಮಾಡಿದರೆ…
ಆಸ್ಟ್ರೇಲಿಯಾ: ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎರಡನೇ ದಿನವಾದ ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಆಸ್ಟ್ರೇಲಿಯಾದ ಪರ್ರಮಟ್ಟ ನಗರದ ಜ್ಯುಬಿಲಿ ಪಾರ್ಕ್ನಲ್ಲಿ ಗಾಂಧೀಜಿ ಅವರ ಪ್ರತಿಮೆ ಇರಿಸಲಾಗಿದೆ. ಭಾರತ ಸರ್ಕಾರ ಈ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದೆ. ಶಿಲ್ಪಿಗಳಾದ ರಾಮ್ ಮತ್ತು ಅನಿಲ್ ಸುತಾರ್ ಅವರು ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಪ್ರತಿಮೆ ಅನಾವರಣಾ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕೋಟ್ ಮೋರ್ರಿಸೋನ್ ಮತ್ತು ಪರ್ರಮಟ್ಟ ನಗರದ ಮೇಯರ್ ಆ್ಯಂಡ್ರ್ಯೂ ವಿಲ್ಸನ್ ಮತ್ತು ರಾಷ್ಟ್ರಪತಿಯವರ ಪತ್ನಿ ಹಾಜರಿದ್ದರು.
ತಿಪಟೂರು: ತಿಪಟೂರಿನಿಂದ ಹಾಲ್ಕುರಿಕೆ ಮಾರ್ಗವಾಗಿ ಹುಳಿಯಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿ ಗೊಟರುಗಳಿಂದ ಕೂಡಿದ್ದು, ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ರಸ್ತೆಯನ್ನು ಸರಿಪಡಿಸಬೇಕೆಂದು ಈ ಭಾಗದ ಹಳ್ಳಿಗಳ ಸಾರ್ವಜನಿಕರು ಹಾಗೂ ವಾಹನ ಸವಾರರು ಲೋಕಪಯೋಗಿ ಇಲಾಖೆ ಹಾಗೂ ಶಾಸಕರನ್ನು ಒತ್ತಾಯಿಸಿದ್ದಾರೆ. ಈ ರಸ್ತೆಯ ಮೂಲಕ ಟಿ.ಎಂ. ಮಂಜುನಾಥನಗರ, ಬೈರನಾಯ್ಕನಹಳ್ಳಿ, ಗೆದ್ಲೇಹಳ್ಳಿ ಗೊಲ್ಲರಹಟ್ಟಿ, ಆಲೂರು, ಬೈರಾಪುರ ಗೇಟ್, ಹರಿಸಮುದ್ರ, ಹಾಲ್ಕುರಿಕೆ, ಮತ್ತಿಘಟ್ಟ ಮತ್ತಿತರ ಗ್ರಾಮಗಳಿಗೆ ಹೋಗಬೇಕಾದರೆ ಇದೇ ರಸ್ತೆ ಮುಖ್ಯವಾಗಿದೆ. ಆದರೆ ರಸ್ತೆ ಬಹಳಷ್ಟು ಕಡೆಗಳಲ್ಲಿ ಹಾಳಾಗಿದ್ದು, ಉದ್ದುದ್ದ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಹರಸಾಹಸ ಮಾಡಿಕೊಂಡು ವಾಹನಗಳನ್ನು ಚಲಾಯಿಸಬೇಕಾಗಿದೆ. ನೂರಾರು ಲಘು ಹಾಗೂ ಭಾರಿ ವಾಹನಗಳು ಇಲ್ಲಿ ಸಂಚರಿಸುತ್ತಿರುವುದರಿಂದ ಪ್ರತಿನಿತ್ಯ ಒಂದಲ್ಲೊಂದು ಅವಘಡ, ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ. ಇದೂ ಸಾಲದೆಂದು ರಸ್ತೆಯ ಎರಡೂ ಬದಿಗಳಲ್ಲಿ ಗಿಡ-ಗೆಂಟೆಗಳಿಂದ ಕೂಡಿದ ಬೇಲಿಗಳು ಬೆಳೆದಿದ್ದು, ತಿರುವುಗಳಲ್ಲಿ ಬರುವ ವಾಹನಗಳೇ ಕಾಣಿಸುವುದಿಲ್ಲ. ದಿನನಿತ್ಯ ನೂರಾರು ಬಸ್‍ಗಳು, ಸಾಕಷ್ಟು…