Author: News Desk Benkiyabale

 ತುಮಕೂರು :       ಕಳೆದ ವರ್ಷದಂತೆ  ಈ ಬಾರಿಯೂ ನವೆಂಬರ್ 26ರಂದು ಸಂತಶ್ರೇಷ್ಠ ಕನಕದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಸಂತಶ್ರೇಷ್ಠ ಕನಕದಾಸ ಜಯಂತಿಯನ್ನು ಅರ್ಥಪೂರ್ಣ ಹಾಗೂ ಸಂತಸದಿಂದ ಆಚರಿಸಲು ತುಮಕೂರು ಜಿಲ್ಲೆಯಲ್ಲಿರುವ ಕುರುಬ ಸಮುದಾಯದ ಸಂಘ ಸಂಸ್ಥೆಗಳು-ಮುಖಂಡರ ಸಹಕಾರ ಅತಿ ಮುಖ್ಯ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.       ಅಂದು ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಕಲಾ ತಂಡಗಳೊಂದಿಗೆ ಶಿರಾಗೇಟ್‍ನ ಬಳಿಯ ಕನಕ ವೃತ್ತದಲ್ಲಿರುವ ಕನಕದಾಸರ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಚಾಲನೆ ನೀಡಲಾಗುತ್ತದೆ. ಮೆರವಣಿಗೆಯು ತುಮಕೂರು ನಗರದ ವಿವಿಧ ರಸ್ತೆಗಳಲ್ಲಿ ತೆರಳಿ ಸಮಾರಂಭ ನಡೆಯುವ ಸ್ಥಳದಲ್ಲಿ ಕೊನೆಗೊಳ್ಳಲಿದೆ ಎಂದು ಅವರು ಹೇಳಿದರು.       ಕನಕದಾಸರ ಬದುಕು ಮತ್ತು ಸಂದೇಶದ ಮಹತ್ವದ ಬಗ್ಗೆ ಇಂದಿನ ಯುವ ಪೀಳಿಗೆಗೆ ಹಾಗೂ ಜನರಿಗೆ ಅರಿವು…

Read More

ಮೈಸೂರು:          ಅರ್ಥಿಕ ಪರಿಸ್ಥಿತಿ ಹಿಂದುಳಿದ ಏರಿಯಾಗಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡುತ್ತೇನೆ. ಹಾಗೆಯೇ ಸರ್ಕಾರದಿಂದ ಮಹಿಳೆಯರಿಗೆ ಬರುವ ಎಲ್ಲಾ ಸೌಲಭ್ಯ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಮೇಯರ್​ ಪುಷ್ಪಲತಾ ಹೇಳಿದರು.       ಉಪ ಮೇಯರ್ ಆಗಿ ಅನುಭವ ಪಡೆದಿದ್ದೆ. ಈಗ ಮೇಯರ್ ಆಗಿರುವುದು ತುಂಬಾ ಖುಷಿ ತಂದಿದೆ. ಈ ಹಿಂದೆ ಕೆಲಸ ಮಾಡಿದ ರೀತಿಯಲ್ಲೇ ಕೆಲಸ ಮಾಡಿ ಪ್ರಾಮಾಣಿಕತೆಯಿಂದ ಇರುತ್ತೇನೆ. ನನ್ನ ಮೊದಲ ಆದ್ಯತೆ ಸ್ವಚ್ಛತೆ ಕಡೆಗೆ. ಸ್ವಚ್ಛತೆಯಲ್ಲಿ ಮೈಸೂರಿಗೆ ಮತ್ತೆ ಮೊದಲ ಸ್ಥಾನ ತರುವುದು ನನ್ನ ಗುರಿ ಎಂದರು.      ಮಾಧ್ಯಮಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರ ಹಠ ಈ ಚುನಾವಣೆಯಲ್ಲಿ ಗೆದ್ದಿದೆ. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಮೈಸೂರಿನಲ್ಲಿ ಕಾಂಗ್ರೆಸ್​ಗೆ ಅಧಿಕಾರ ಇರಲಿಲ್ಲ. ಆದರೆ ಮೈತ್ರಿ ಸರ್ಕಾರದಿಂದ ಈಗ ಮೇಯರ್ ಸ್ಥಾನ ಸಿಕ್ಕಿದೆ. ಮೇಯರ್ ಆಗಿ ಆಯ್ಕೆಯಾಗಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ.  ಶಾಸಕರಾದ ವಾಸು, ತನ್ವೀರ್…

Read More

  ನಂಜನಗೂಡು:     ಬಡ ಕೂಲಿಕಾರ್ಮಿಕರ ಪುಟ್ಟ ಗುಡಿಸಿಲಿನಲ್ಲಿ ಒಬ್ಬಂಟಿಯಾಗಿದ್ದ ಪುಟ್ಟ ಕಂದಮ್ಮಳನ್ನು ಗಮನಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.       ನಂಜಗೂಡಿನ ಕೈಗಾರಿಕಾ ನಿರ್ಜನ ಪ್ರದೇಶದ ಪುಟ್ಟ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಕುಮಾರ ಮತ್ತು ತಾಯಮ್ಮ ಎಂಬ ದಂಪತಿಗಳ ಮೊದಲ ಮಗ¼ರುವ ಬಾಲಕಿ ಚಾಮಲಾಪುರದ ಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದಳು. ಬಾಲಕಿಯ ತಂದೆ ಕುಮಾರ್, ಸನಿಹದ ಜನಿತ್ ಟೆಕ್ಸ್‍ಟೈಲ್ಸ್ ಕಾರ್ಖಾನೆಯ ಬಳಿ ಪುಟ್ಟದಾದ ನಾಲ್ಕು ಚಕ್ರದ ಗಾಡಿಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದರು. ಇವರು ಬೆಳಗ್ಗೆ 9 ಗಂಟೆಗೆ ತಮ್ಮ ಹೋಟೆಲ್‍ಗೆ ಕೆಲಸಕ್ಕೆ ತೆರಳಿದರೆ ಮತ್ತೆ ಮನೆಗೆ ಹಿಂತಿರುಗುವುದು ಸಂಜೆ 6 ಗಂಟೆ ವೇಳೆಗೆ. ಇದನ್ನು ಗಮನಿಸಿ, ಹೊಂಚುಹಾಕುತ್ತಿದ್ದ ಕಾಮುಕರು ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ.       ಸಂಜೆ ಐದು ಗಂಟೆಯ ಸಮಯದಲ್ಲಿ ಗುಡಿಸಿಲಿನಲ್ಲಿ ಬಾಗಿಲು ತೆರೆದು ನೋಡಿದಾಗ ಪುಟ್ಟ ಬಾಲಕಿ ರಕ್ತದ…

Read More

ತುಮಕೂರು:       ತುಮಕೂರು-ಗ್ರಾಮಾಂತರ ಕ್ಷೇತ್ರವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನ್ಮದಿನದಂದು 70 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವುದಾಗಿ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ತಿಳಿಸಿದರು.       ಅವರು ಶುಕ್ರವಾರದಂದು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರು ಜಿಲ್ಲಾಪಂಚಾಯ್ತಿ ವ್ಯಾಪ್ತಿಯ ಅರೆಯೂರು, ದೊಮ್ಮನಕುಪ್ಪೆ,  ಗೊಲ್ಲರಹಟ್ಟಿ, ರೈತರ ಪಾಳ್ಯ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡನಿರ್ಮಾಣಕ್ಕೆ ಶಂಕುಸ್ತಾಪನೆ. ಹರಳೂರು, ಗುಡಿಪಾಲಸಂದ್ರಗ್ರಾಮಗಳಲ್ಲಿ ಸಿ ಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಗೂಳಹರಿವೆ,ಕೆ ಪಾಲಸಂದ್ರ,ಕಿತ್ತಗಾನಹಳ್ಳಿ,ಕರಡಿಗೆರೆ ಕಾವಲ್ ಸರ್ಕಾರಿಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ದೊಮ್ಮನಕುಪ್ಪೆ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.       ಮುಂದಿನ ತಿಂಗಳು ಡಿಸೆಂಬರ್ 16 ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನ್ಮದಿನವಿದ್ದು ಅಂದು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಹಾಗು ನಾನು ವೈಯಕ್ತಿಕವಾಗಿ ದೇಣಿಗೆ ಹಾಕಿ ಗ್ರಾಮಾಂತರಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಿಗೆ 70 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿರುವುದಾಗಿ…

Read More

ತುಮಕೂರು:        ‘#Metoo ಅನುಭವ ನನಗೂ ಆಗಿದೆ. ನನ್ನ ಕಾಲದಲ್ಲಿ ಅದನ್ನು ಅನುಭವಿಸಿದ್ದೇನೆ. ನನ್ನ ಆತ್ಮಚರಿತ್ರೆ ‘ಕಣ್ಣಾಮುಚ್ಚೆ ಕಾಡೇಗೂಡೆ’ ಪುಸ್ತಕದಲ್ಲಿ ಹೇಳಿದ್ದೇನೆ’ ಎಂದು ಹಿರಿಯ ಕಲಾವಿದೆ ಬಿ.ಜಯಶ್ರೀ ಹೇಳಿದರು.       ನಗರದಲ್ಲಿ ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಮಿಟೂ ಅನುಭವ ವೈಯಕ್ತಿಕದಾದುದು. ಅದನ್ನು ಯಾಕೆ ಹೇಳಿಕೊಳ್ಳಬೇಕು ಎಂಬುದು ನನ್ನ ಪ್ರಶ್ನೆ. ಏನಾದರೂ ಆಗಿದ್ದರೆ ಇಬ್ಬರಿಗೆ ಮಾತ್ರ ಗೊತ್ತಿರುತ್ತದೆ’ ಎಂದು ಹೇಳಿದರು.       ‘ಮಿಟೂಗೆ ಸಂಬಂಧಿಸಿದಂತೆ ಎಷ್ಟರ ಮಟ್ಟಿಗೆ ಸಾಕ್ಷಿ ಒದಗಿಸುತ್ತೀರಿ ಎಂಬುದೇ ಪ್ರಶ್ನೆಯಾಗಿದೆ. ಉದಾಹರಣೆಗೆ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಎಷ್ಟೊಂದು ಪ್ರಶ್ನೆ ಕೇಳ್ತಾರೆ. ಅದಕ್ಕೆ ಉತ್ತರಿಸುವಾಗ ಸಾಕಷ್ಟು ನೋವು ಆಗುತ್ತದೆಯಲ್ಲವೆ’ ಎಂದು ಹೇಳಿದರು.       ‘ಅಭಿಪ್ರಾಯ ಸ್ವಾತಂತ್ರ್ಯದ ಹೆಸರಿನಲ್ಲಿ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನಸೋ ಇಚ್ಛೆ ಹೇಳಿಕೊಳ್ಳಲಾಗುತ್ತಿದೆ. ಹೀಗೆ ಅಭಿಪ್ರಾಯ ಹಂಚಿಕೊಳ್ಳುವಾಗಲೂ ಒಂದು ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

Read More

ಕುಣಿಗಲ್:       ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಸರ್ಕಾರ ವಿವಿಧ ಸೌಲಭ್ಯಗಳನ್ನ ರೈತರಿಗೆ,ಬಡವರಿಗೆ,ಶೋಷಿತರಿಗೆ ನೀಡುತ್ತಿದ್ದರೂ ಸಹ ಅಧಿಕಾರಿಗಳು ತಲುಪಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಬೆಂ.ಗ್ರ್ರಾ.ಸಂಸದ ಡಿ.ಕೆ.ಸುರೇಶ್ ತಿಳಿಸಿದರು.       ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ,ಸರ್ಕಾರ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಹಲವಾರು ಸೌಲಭ್ಯಗಳನ್ನ ನೀಡುತ್ತಿದ್ದರೂ ಸಹ ಅಧಿಕಾರಿಗಳು ಈ ವರ್ಗಧ ಜನರಿಗೆ ಸಮರ್ಪಕವಾಗಿ ತಲುಪಿಸಲು ಆಗುತ್ತಿಲ್ಲ.ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಂಡು ವಿವಿಧ ಸೌಲಭ್ಯಗಳನ್ನ ರೈತರಿಗೆ,ಬಡವರಿಗೆ ತಲುಪಿಸುವಂತಹ ಕಾರ್ಯವನ್ನ ಕೈಗೊಳ್ಳಬೇಕಾಗಿದೆ. ಗ್ರ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ಶುದ್ಧ ನೀರಿನ ಘಟಕಗಳನ್ನ ಆರಂಭಿಸಿದ್ದು,ಇವುಗಳ ನಿರ್ವಹಣೆಯನ್ನ ಪಂಚಾಯ್ತಿಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದರು.        ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರನ್ನ ವೈ.ಕೆ.ರಾಮಯ್ಯ ಹುಚ್ಚಮಾಸ್ತಿಗೌಡ ಸೇರಿದಂತೆ ಹಲವಾರು ಹೋರಾಟಗಾರರು ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಿರುತ್ತಾರೆ,ನಮ್ಮ ಪಾಲಿನ ಹಕ್ಕಿನ ಪ್ರಕಾರ ನೀರು ತೆಗೆದುಕೊಳ್ಳಲು ಯಾರ ಅಪ್ಪಣೆಯೂ ಬೇಕಾಗಿಲ್ಲ,ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡುವುದು…

Read More

ಕೊರಟಗೆರೆ:        ಕಾರು ಚಾಲಕನ ಅಡ್ಡಾದಿಡ್ಡಿ ಚಾಲನೆಯಿಂದ ಹಾಲಿನ ಲಾರಿ ಮತ್ತು ಶಾಲಾ ವಾಹನದ ನಡುವೆ ಅಪಘಾತ ಆಗಿ ಶಾಲಾ ವಾಹನ ಚಾಲಕನಿಗೆ ಪೇಟ್ಟಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.       ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆ ಗ್ರಾಪಂ ವ್ಯಾಪ್ತಿಯ ಯಾದಗೆರೆ ಗ್ರಾಮದ ಸಮೀಪದ ಸೇಂಟ್ ಮೇರಿಸ್ ಪಬ್ಲಿಕ್ ಸ್ಕೂಲ್‍ನ ಶಾಲಾ ವಾಹನದ ಚಾಲಕನಿಗೆ ತೀರ್ವವಾಗಿ ತಲೆಗೆ ಪೆಟ್ಟಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀದ್ದಾರೆ. ಶಾಲಾ ವಾಹನದಲ್ಲಿದ್ದ ಓರ್ವ ವಿದ್ಯಾರ್ಥಿಗೆ ಯಾವುದೇ ರೀತಿಯ ಗಾಯ ಆಗದೇ ಪ್ರಾಣಪಾಯದಿಂದ ಪಾರಾಗಿದ್ದಾನೆ.       ತುಮಕೂರು ಕಡೆಯಿಂದ ಬಂದ ಹಾಲಿನ ವಾಹನ ಮತ್ತು ಕೊರಟಗೆರೆ ಕಡೆಯಿಂದ ವಿದ್ಯಾರ್ಥಿಗಳನ್ನು ಕರೆತರಲು ಬೆಳಧರ ಹೋಗುವ ವೇಳೆ ಅಡ್ಡದಿಡ್ಡಿಯಾಗಿ ಕಾರು ಚಲಾಯಿಸಿಕೊಂಡು ಬಂದ ವೇಳೆ ಅಪಘಾತ ವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.       ಅಪಘಾತ ಆದ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಬೇಟಿ ನೀಡಿ ಪರಿಶೀಲನೆ…

Read More

ಚಿಕ್ಕನಾಯಕನಹಳ್ಳಿ :     ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಖಾಲಿ ಇರುವ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲು ಗ್ರಂಥಾಲಯ ಇಲಾಖೆ ಹೊರಡಿಸಿರುವ ಆದೇಶಕ್ಕೆ ಓದುಗರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.       ತಾಲ್ಲೂಕಿನ 23 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಶಾಲಾ ಕೊಠಡಿಗಳಿಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ, 7 ಪಂಚಾಯಿತಿಗಳಲ್ಲಿ ಮಾತ್ರ ಶಾಲಾ ಕೊಠಡಿಗಳ ಲಭ್ಯತೆ ಇಲ್ಲದೆ ಇರುವುದರಿಂದ ಗ್ರಂಥಾಲಯಗಳನ್ನು ಇರುವ ಕಛೇರಿಯಲ್ಲೇ ಮುಂದುವರೆಸಲು ತೀರ್ಮಾನಿಸಲಾಗಿದೆ.       ಇಲಾಖೆಯ ಆದೇಶದಲ್ಲಿ ಪಂಚಾಯಿತಿ ವ್ಯಾಪ್ತಿಯ ಯಾವುದೇ ಊರುಗಳಲ್ಲಿ ಖಾಲಿ ಶಾಲಾ ಕೊಠಡಿ ಗುರುತಿಸಿ ಗ್ರಂಥಾಲಯ ಸ್ಥಳಾಂತರಿಸುವ ಅವಕಾಶ ಕಲ್ಪಿಸಲಾಗಿದೆ, ಇದರಿಂದ ಈಗಾಗಲೇ ಗ್ರಂಥಾಲಯ ಹೊಂದಿರುವ ಕೆಲವು ಪಂಚಾಯ್ತಿ ಕಛೇರಿಗಳು ಗ್ರಂಥಾಲಯವನ್ನು ಕಳೆದುಕೊಳ್ಳುವಂತಾಗಿದೆ, ಅಲ್ಲದೆ ಜನಸಾಂದ್ರತೆ ಇಲ್ಲದ ಕುಗ್ರಾಮಗಳಿಗೆ ಗ್ರಂಥಾಲವನ್ನು ಸ್ಥಳಾಂತರಿಸಲಾಗಿದ್ದು ಇದರಿಂದ ಪುಸ್ತಕ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ.       ಬರಕನಾಳು ಪಂಚಾಯ್ತಿಯ ಗ್ರಂಥಾಲಯವನ್ನು ಸಂಗೇನಹಳ್ಳಿಗೆ, ಹೊಯ್ಸಳಕಟ್ಟೆ ಪಂಚಾಯ್ತಿ ಗ್ರಂಥಾಲಯವನ್ನು ತಿಮ್ಮಪ್ಪನಹಟ್ಟಿಗೆ, ಮಲ್ಲಿಗೆರೆ…

Read More

 ಕೊರಟಗೆರೆ:       ಅಕ್ರಮವಾಗಿ ಮರಳು ಶೇಖರಣೆ ಮತ್ತು ಸಾಗಾಣಿಕೆ ಮಾಡುತ್ತೀದ್ದ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಪಿಎಸೈ ಮಂಜುನಾಥ ನೇತೃತ್ವದ ಪೊಲೀಸರ ತಂಡ 2ಟ್ರಾಕ್ಟರ್ ಮತ್ತು 1ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುವ ಘಟನೆ ಗುರುವಾರ ನಡೆದಿದೆ.       ತಾಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಬೋರಪ್ಪನಹಟ್ಟಿ ಸಮೀಪದ ಗೋಬಲಗುಟ್ಟೆ ಕೆರೆಯ ಮರಳನ್ನು ಟ್ರಾಕ್ಟರ್ ಮೂಲಕ ಮರಳು ಸಾಗಾಣಿಕೆಯ ಮೂಲಕ ಬೋರಪ್ಪನಹಟ್ಟಿ ಸರಕಾರಿ ಶಾಲೆಯ ಹಿಂಭಾಗ ಮರಳು ಶೇಖರಣೆ ಮಾಡಿದ ಮರಳನ್ನು ಲಾರಿಯ ಮೂಲಕ ಬೆಂಗಳೂರಿಗೆ ಸಾಗಾಣಿಕೆ ಮಾಡುತ್ತೀದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.       ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಬೋರಪ್ಪನಹಟ್ಟಿಯ ಗಿರೀಶ್ ಮತ್ತು ಗಟ್ಲಹಳ್ಳಿಯ ಮೋಹನ್ ಎಂಬುವರನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಪೊಲೀಸ್ ಇಲಾಖೆಯ ಸದಾನಂದ, ರಾಜಶೇಖರ್, ರಂಗನಾಥ, ಸಿದ್ದಲಿಂಗಪ್ರಸನ್ನ, ಕಿರಣ್ ಇದ್ದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

  ಹುಳಿಯಾರು:       ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಖಾಲಿ ಇರುವ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲು ಗ್ರಂಥಾಲಯ ಇಲಾಖೆ ಆದೇಶ ಹೊರಡಿಸಿದೆ.       ಇಲಾಖೆಯ ಆದೇಶದಲ್ಲಿ ಪಂಚಾಯಿತಿ ವ್ಯಾಪ್ತಿಯ ಯಾವುದೇ ಊರುಗಳಲ್ಲಿ ಖಾಲಿ ಶಾಲಾ ಕೊಠಡಿ ಗುರುತಿಸಿ ಗ್ರಂಥಾಲಯ ಸ್ಥಳಾಂತರಿಸುವ ಅವಕಾಶ ಕಲ್ಪಿಸಲಾಗಿದೆ, ಇದರಿಂದ ಈಗಾಗಲೇ ಗ್ರಂಥಾಲಯ ಹೊಂದಿರುವ ಕೆಲವು ಪಂಚಾಯಿತಿ ಕಚೇರಿಗಳು ಗ್ರಂಥಾಲಯವನ್ನು ಕಳೆದುಕೊಳ್ಳುವಂತಾಗಿದೆ.       ತಾಲ್ಲೂಕಿನ 23 ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಶಾಲಾ ಕೊಠಡಿಗಳಿಗೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ. 7 ಪಂಚಾಯಿತಿಗಳಲ್ಲಿ ಪಂಚಾಯಿತಿ ಕಟ್ಟಡದಲ್ಲಿ ಗ್ರಂಥಾಲಯಗಳನ್ನು ಮುಂದುವರಿಸಲಾಗಿದೆ. 10 ಪಂಚಾಯಿತಿ ಕೇಂದ್ರಗಳಲ್ಲಿ ಖಾಲಿ ಶಾಲಾ ಕೊಠಡಿ ಸಿಗದೆ ಜನ ಸಾಂದ್ರತೆ ಇಲ್ಲದ ಕುಗ್ರಾಮಗಳಿಗೆ ಗ್ರಂಥಾಲಯಗಳನ್ನು ವರ್ಗಾಯಿಸಲಾಗಿದೆ.       ಬರಕನಾಳು ಪಂಚಾಯಿತಿಯ ಗ್ರಂಥಾಲಯವನ್ನು ಸಂಗೇನಹಳ್ಳಿಗೆ, ಹೊಯ್ಸಳಕಟ್ಟೆ ಪಂಚಾಯಿತಿ ಗ್ರಂಥಾಲಯವನ್ನು ತಿಮ್ಮಪ್ಪನಹಟ್ಟಿಗೆ, ಮಲ್ಲಿಗೆರೆ ಪಂಚಾಯಿತಿಯ ಗ್ರಂಥಾಲಯವನ್ನು ಕಾನ್ಕೆರೆಗೆ, ಬರಗೂರು ಗ್ರಂಥಾಲಯವನ್ನು ಟಿ.ತಾಂಡ್ಯಕ್ಕೆ, ಚೌಳಕಟ್ಟೆ…

Read More