ಕೊರಟಗೆರೆ: ಸಂಜೀವಿನಿ ತಾಣ ಮತ್ತು ಸಾಧುಸಂತರ ತಪೋಭೂಮಿ ಎಂದೇ ಪ್ರಸಿದ್ದಿ ಪಡೆದಿರುವ ಸಿದ್ದರಬೇಟ್ಟದ ಶ್ರೀಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಕಾರ್ತಿಕ ಮಾಸದ ಲಕ್ಷದಿಪೋತ್ಸವ ಕಾರ್ಯಕ್ರಮವನ್ನು ಡಿ.3ರ ಸೋಮವಾರ ಏರ್ಪಡಿಸಲಾಗಿದೆ ಎಂದು ಸಿದ್ದರಬೇಟ್ಟ ಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು. ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೇಟ್ಟ ಕ್ಷೇತ್ರದ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಲಕ್ಷದಿಪೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ದಿವ್ಯಾ ಸಾನಿಧ್ಯ ವಹಿಸಿ ಮಾತನಾಡಿದರು. ಸಿದ್ದರಬೇಟ್ಟ ಪುಣ್ಯಕ್ಷೇತ್ರದಲ್ಲಿ ನಡೆಯುವ ಲಕ್ಷದಿಪೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಸಾವಿರಾರು ಭಕ್ತಾಧಿಗಳು ಬರುವ ನೀರಿಕ್ಷೆ ಇದೆ. ಪ್ರವಾಸಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಿಲಾಗಿದೆ. ಕಾರ್ಯಕ್ರಮ ಯಶಸ್ವಿಗಾಗಿ ಸ್ಥಳೀಯ ಮುಖಂಡರು ಮತ್ತು ಭಕ್ತಾಧಿಗಳ ಸಹಕಾರ ಅಗತ್ಯವಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದರು. ತಹಶೀಲ್ದಾರ್ ನಾಗರಾಜು ಮಾತನಾಡಿ…
Author: News Desk Benkiyabale
ತುಮಕೂರು: ತುಮಕೂರು ನಗರದ ರೌಡಿ ಶೀಟರ್ ಮಾಜಿ ಮಹಾಪೌರ ರವಿಕುಮಾರ್ ಆಲಿಯಾಸ್ ಗಡ್ಡ ರವಿಯ ಹತ್ಯೆಯ ಹಿಂದೆ ಸೈಲೆಂಟ್ ಸುನಿನ ಅಸೋಸಿಯೇಟ್ ಲಕ್ಷ್ಮೀ ಆಲಿಯಾಸ್ ಲಕ್ಷ್ಮೀನಾರಾಯಣನ ಕೈಚಳಕವಿದೆ ಎಂದು ಪೊಲೀಸರು ಸಂಶಯಿಸಲಾಗಿದ್ದು, ಇಂದು ತುಮಕೂರು ಪೊಲೀಸರು ಸೈಲೆಂಟ್ ಸುನೀಲನನ್ನು ರೌಡಿ ರವಿಯ ಹತ್ಯೆಯ ಕಾರಣಕ್ಕೆ ತನಿಖೆಗೊಳಪಡಿಸಲಿದ್ದಾರೆ. ಮಾಜಿ ಮೇಯರ್ ಕೊಲೆಯ ಹಿಂದಿನ ದಿನ ಸೈಲೆಂಟ್ ಸುನಿಲನ ಸಹಚರರ ಜೊತೆ ಮೀಟಿಂಗ್ ¯ಕ್ಷ್ಮೀ ಸೈಲೆಂಟ್ ಸುನಿಲ್ ಅಸೋಸಿಯೇಟ್ ಸುಜಯ್ ಜೊತೆ ಮೀಟಿಂಗ್ ನಡೆಸಿದ್ದ ಲಕ್ಷ್ಮೀನಾರಾಯಣ ಸೈಲೆಂಟ್ ಸುನಿಲ ಕೋಕಾ ಕಾಯ್ದೆಯ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ಇನ್ಸ್‍ಪೆಕ್ಟರ್ ಪ್ರಕಾಶ್ ಗೆ ಲಾಕ್‍ಆಗಿದ್ದು ತನಿಖೆಯಲ್ಲಿ ವಿಷಯ ಬಹಿರಂಗಗೊಂಡಿರುವ ಸಾಧ್ಯತೆಗಳಿವೆ. ಹತ್ಯೆಗೂ ಒಂದು ದಿನ ಮುನ್ನ ಡಾಬಾದಲ್ಲಿ ಮೀಟಿಂಗ್ ನಡೆಸಿದ್ದು, ಸೈಲೆಂಟ್ ಸಹಚರ ಲಕ್ಷ್ಮೀ ಆಲಿಯಾಸ್ ಲಕ್ಷ್ಮೀನಾರಾಯಣ ಈ ಕೊಲೆಯ ಬಗ್ಗೆ ಸಂಚು ರೂಪಿಸಿರುವ ಬಗ್ಗೆ ವಿಷಯ ಹೊರಬರುತ್ತಿದ್ದು, ಸದರಿ ವಿಚಾರವಾಗಿ ಗುರುವಾರ ಸೈಲೆಂಟ್…
ಬೆಂಗಳೂರು: ನಕಲಿ ಉಕ್ಕು ಮತ್ತು ಕಬ್ಬಿಣದ ಕಂಪನಿಯ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 200 ಕೋಟಿ ರೂಪಾಯಿ ಜಿಎಸ್‌ಟಿ ಕ್ಲೇಮ್ ಮಾಡಿಕೊಂಡ ಆರೋಪದ ಮೇಲೆ ಕೇಂದ್ರ ತೆರಿಗೆ ಆಯುಕ್ತಾಲಯದ ಅಧಿಕಾರಿಗಳು ರಾಜ್ಯದಲ್ಲಿ ಮೂವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಇದು ದೇಶದಲ್ಲೇ ಜಿಎಸ್‌ಟಿ ವಂಚನೆಯ ಅತಿದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ. ಸುಹೇಲ್, ಬಾಷಾ ಮತ್ತು ಹಫೀಸ್ ಬಂಧಿತ ಆರೋಪಿಗಳು. ಇವರು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಜಿಎಸ್‌ಟಿ ಕ್ಲೇಮ್ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರಕಿದ್ದರಿಂದ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ತೆರಿಗೆ ಆಯುಕ್ತಾಲಯದ ಬೆಂಗಳೂರು ವಲಯದ ಆಯುಕ್ತ ಜಿ.ನಾರಾಯಣಸ್ವಾಮಿ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.12ರಂದು ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ 25 ಕಡೆ ಶೋಧ ಕಾರ್ಯ ನಡೆಸಲಾಯಿತು. ಆರೋಪಿಗಳು ಕಬ್ಬಿಣ ಮತ್ತು ಉಕ್ಕು ತ್ಯಾಜ್ಯಗಳನ್ನು ಕಾನೂನುಬಾಹಿರವಾಗಿ ಕೆಲವು ಉಕ್ಕು ಮತ್ತು ಕಬ್ಬಿಣ ಕಂಪನಿಗಳಿಗೆ ಸರಬರಾಜು ಮಾಡುತ್ತಿದ್ದರು. ನಕಲಿ…
ಶಿವಮೊಗ್ಗ: ಸಿಲಿಂಡರ್ ತುಂಬಿದ್ದ ಲಾರಿಯೊಂದು ಸಾಗರ ತಾಳಗುಪ್ಪ ಮಧ್ಯೆ ಇರುವ ಮುಂಡಿಗೆಹಳ್ಳಿಯ ಬಳಿ ಸ್ಫೋಟಗೊಂಡಿದ್ದು ಚಾಲಕ ಸಜೀವ ದಹನವಾಗಿರುವ ದುರ್ಘಟನೆ ಸಂಭವಿಸಿದೆ. ಇಂಡಿಯನ್ ಗ್ಯಾಸ್ ಕಂಪೆನಿಯ ಸಿಲಿಂಡರ್‌ಗಳನ್ನು ತುಂಬಿಕೊಂಡಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು, ಬೆಳಗಿನ ಜಾವ ನಾಲ್ಕೂವರೆ ಗಂಟೆ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದೆ. ಸಾಗರದಿಂದ ಕಾರ್ಗಲ್ ಕಡೆಗೆ ಸಿಲಿಂಡರ್ ಹೊತ್ತುಕೊಂಡು ಲಾರಿ ಸಂಚರಿಸುತಿತ್ತು. ಈ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿಬಿದ್ದಿದೆ. ಬಿದ್ದ ರಭಸಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಗಳು ಸ್ಫೋಟಗೊಂಡಿವೆ. ಸ್ಫೋಟದಿಂದ ಬೆಂಕಿ ಹತ್ತಿಕೊಂಡು ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ. ಲಾರಿ ಸಂಪೂರ್ಣ ಭಸ್ಮವಾಗಿದ್ದು, ಚಾಲಕ ಯಾರು, ಲಾರಿಯಲ್ಲಿ ಎಷ್ಟು ಜನರಿದ್ದರು ಎನ್ನುವ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.ಲಾರಿಯ ನಂಬರ್ ಪ್ಲೇಟ್ ಸಹ ಹೊತ್ತಿ ಉರಿದ ಪರಿಣಾಮ ಮಾಲಕರು ಯಾರು ಎನ್ನುವುದು ತಿಳಿದು ಬಂದಿಲ್ಲ. ಚಾಲಕನ ಒಂದು ಮೃತದೇಹ ಮಾತ್ರ…
ಕೊರಟಗೆರೆ : ತಾಲೂಕಿನಲ್ಲಿ ಪುರಾತನ ಇತಿಹಾಸವುಳ್ಳ ಕುಂಚಿಟಿಗರ ಆರಾದ್ಯ ಕುಲದೈವವಾದ ಶ್ರೀವೀರನಾಗಮ್ಮ ದೇವಾಲಯಕ್ಕೆ 2.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ರಾಜಗೂಪುರ ಹಾಗೂ ತಾಯಿಮುದ್ದಮ್ಮ ಮತ್ತು ಸಿದ್ದರಾಮೇಶ್ವರಸ್ವಾಮಿ ದೇವಾಲಯಗಳನ್ನು ರಾಜ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲಕ್ಷಾಂತರ ಭಕ್ತರ ಸಮುಂಖ ದಲ್ಲಿನ.19 ರಂದು ಲೋಕಾರ್ಪಣೆ ಮಾಡಲಿದ್ದಾರೆಂದು ಕುಂಚಿಟಿಗರ ಮಹಾ ಸಂಸ್ಥಾನ ಮಠದ ಡಾ. ಶ್ರೀ ಹನುಮಂತನಾಥ ಮಹಾಸ್ವಾಮೀಜಿಗಳು ತಿಳಿಸಿದರು. ತಾಲೂಕಿನ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಸುಮಾರು 800 ವರ್ಷಗಳ ಇತಿಹಾಸವಿರುವ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ನೆಲೆಸಿರುವ ಕುಂಚಿಟಿಗ ಸಮುದಾಯದ 33 ವಂಶಸ್ಥರ ಆರಾದ್ಯ ದೈವ ಶ್ರೀವೀರನಾಗಮ್ಮ ದೇವಾಲಯಕ್ಕೆ ಭಕ್ತಾದಿಗಳ ಕಾಣಿಕೆಯಿಂದ ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ನಿರ್ಮಣವಾಗಿರುವ ರಾಜಗೋಪುರ ಹಾಗೂ ದೇವಾಲಯದ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ತಾಯಿಮುದ್ದಮ್ಮ ಮತ್ತು ಸಿದ್ದರಾಮೇಶ್ವರ ಸ್ವಾಮಿ ದೇವಾಲಯಗಳನ್ನು ನೂತನವಾಗಿ ನಿರ್ಮಾಸಿರುವ ದೇವಾಲಯಗಳನ್ನು ಶಿರಾ ತಾಲೂಕು ಶ್ರೀ ಕ್ಷೇತ್ರ ಪಟ್ಟನಾಯ್ಕನಹಳ್ಳಿಯ ಶ್ರೀ ನಂಜಾವಧೂತ…
ಪಾವಗಡ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಮಿಕ ಸಚಿವ ವೆಂಕಟರಮಣಪ್ಪರ ಪತ್ನಿ ಬುಧವಾರ ಮದ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ. ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ ರವರ ಪತ್ನಿ ಶಾರದಮ್ಮ(65) ವರ್ಷ ಬುಧವಾರ ಮದ್ಯಾಹ್ನ 2.10 ನಿಮಿಷಕ್ಕೆ ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ವಿಧಿವಷರಾಗಿದ್ದಾರೆ. ಕಳೆದು ಒಂದು ತಿಂಗಳಿನಿಂದ ಆರೋಗ್ಯದಲ್ಲಿ ಏರುಪೇರಾದ ಕಾರಣ ಬೆಂಗಳೂರಿನ ಮಗಳ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು, ಆರೋಗ್ಯ ಹದಗೆಟ್ಟ ಕಾರಣದಿಂದ ವಾರದ ಹಿಂದೆ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುತ್ತಾರೆ.
ತಿಪಟೂರು : ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲೇ ಶ್ರದ್ಧೆ ಮತ್ತು ಏಕಾಗ್ರತೆಯಿಂದ ಜ್ಞಾನದ ಅರಿವನ್ನು ಹೆಚ್ಚಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನುಗ್ಗಬೇಕೆಂದು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಜಾಗೃತಿ ಸೇವಾಸಂಸ್ಥೆಯ ವತಿಯಿಂದ ಮಂಗಳವಾರ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಲೈಫ್ ಎಂಪವರ್‍ಮೆಂಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು ತಂದೆ-ತಾಯಿಗಳಿಗೆ ಪರೀಕ್ಷೆಯಲ್ಲಿ ತಮ್ಮ ಮಕ್ಕಳು ಉತ್ತಮ ಫಲಿತಾಂಶ ಪಡೆಯಬೇಕೆಂಬ ಆಸೆ ಇರುತ್ತದೆ. ಅದರಂತೆ ಮಕ್ಕಳು ತಂದೆ ತಾಯಿಗಳ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕು. ಯುವಜನಾಂಗದಲ್ಲಿ ಏಕಾಗ್ರತೆಯ ಅರಿವು ಕಡಿಮೆಯಾಗುತ್ತಿದ್ದು, ಧ್ಯಾನ, ಯೋಗದಿಂದ ಏಕಾಗ್ರತೆಯನ್ನು ಸಾಧಿಸಿ ಸನ್ಮಾರ್ಗದತ್ತ ಶ್ರಮಿಸಬೇಕು. ಮನುಷ್ಯ ತನ್ನನು ತಾನು ರಕ್ಷಣೆ ಮಾಡಿಕೊಳ್ಳುವುದು ಅಂತರಂಗದ ಬುದ್ದಿಯಿಂದಲೆ. ಬುದ್ದಿಯಿಂದ ತಾನು ಅನುಭವ ಹೊಂದುವುದು ಬಹಳ ಶ್ರೇಷ್ಠ. ಈ ಬುದ್ದಿ ವಿಕಾಸವಾಗಬೇಕಾದರೆ ಏಕಾಗ್ರತೆ ಅಗತ್ಯ. ಇಲ್ಲದಿದ್ದರೆ ಏನನ್ನೂ ಸಾಧನೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆಯನ್ನು ಅಳವಡಿಸಿಕೊಳ್ಳುವ…
ತಿಪಟೂರು: ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಕೃಷಿಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಡಾ. ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಖಿಲ ಭಾರತ ರೈತ ಸಂಘರ್ಷ ವತಿಯಿಂದ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು. ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನ.30ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರದ ಎಲ್ಲಾ ಜಿಲ್ಲೆಗಳಿಂದ ಬಂದಂತಹ ರೈತರ ಸಮಾವೇಶವನ್ನು ಮಾಡಲಾಗುವುದು. ಡಾ. ಸ್ವಾಮಿನಾಥನ್ ವರದಿ ಅನ್ವಯ ಉತ್ಪಾದನ ವೆಚ್ಚದ ಮೇಲೆ ಕನಿಷ್ಠ 50ರಷ್ಟು (ಸಿ2+50) ಲಾಭವನ್ನು ಸೇರಿಸಿ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು. ಎಲ್ಲಾ ರೈತರಿಗೆ ಕೃಷಿ ಕೂಲಿ ಕಾರ್ಮಿಕರಿಗೆ ಅಗತ್ಯವಿರುವಷ್ಟು ಕಡಿಮೆ ಬಡ್ಡಿಯ ಬ್ಯಾಂಕ್ ಸಾಲ ನೀಡಬೇಕು. ಸಾಲಮನ್ನವನ್ನು ಖಾತ್ರಿಗೊಳಿಸುವ ಋಣಮುಕ್ತ ಕಾಯಿದೆಗಳನ್ನು ಕೂಡಲೇ ಲೋಕಸಭೆಯಲ್ಲಿ ವಿಶೇಷ ಸಮಸ್ಯೆಗಳೆಂದು ಪರಿಗಣಿಸಿ ಅಧಿವೇಶನದಲ್ಲಿ ಅವಕಾಶ…
ತಿಪಟೂರು : ಸಾರ್ವಜನಿಕ ವಲಯದಲ್ಲಿ ಲೈಸನ್ಸ್ ಯಿಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಹಾಗೂ ಸಾಗಣಿಕೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಅಂಗಡಿಗಳ ಮೇಲೆ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡು ನ್ಯಾಯಲಯಕ್ಕೆ ಒಪ್ಪಿಸಿದ ಅನಧಿಕೃತ ಮದ್ಯವನ್ನು ಬಿದರೆಗುಡಿಯಲ್ಲಿ ಮಂಗಳವಾರ ಸಂಜೆ ಪರಿಸರಕ್ಕೆ ಹಾನಿಯಾಗದಂತೆ ನಾಶ ಮಾಡಲಾಯಿತು. ತಿಪಟೂರು ತಾಲ್ಲೂಕಿನ 185 ಪ್ರಕರಣಗಳಲ್ಲಿ 1054.710 ಲೀಟರ್ ಮದ್ಯ , 20.460 ಲೀಟರ್ ಬೀಯರ್ ಹಾಗೂ ತುರವೇಕೆರೆ ತಾಲ್ಲೂಕಿನ 58 ಪ್ರಕರಣಗಳಲ್ಲಿ 74.160 ಲೀಟರ್ ಮದ್ಯ, 12.900ಲೀಟರ್ ಬೀಯರ್ ಮೇಲೆ ದಾಳಿ ನೆಡಸಿ ಸುಮಾರು ಮೂರು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ಅನಧಿಕೃತ ಮದ್ಯ ಹಾಗೂ ಬೀಯರ್‍ನÀನ್ನು ನಾಶಮಾಡಲಾಗಿದೆ ಎಂದು ತಿಪಟೂರು ಅಬಕಾರಿ ಉಪಧೀಕ್ಷಕರಾದ ಎಂ. ರಂಗಪ್ಪ ತಿಳಿಸಿದರು. ಅಬಕಾರಿ ಇನ್ಸ್‍ಪೆಕ್ಟರ್ ಕೃಷ್ಣಸ್ವಾಮಿ, ತುರವೇಕೆರೆ ಅಬಕಾರಿ…
ಮಧುಗಿರಿ : ಬೆಳಗಿನ ಜಾವ 5 ಗಂಟೆಗೆ ಹೊಲದ ಕೆಲಸಕ್ಕೆಂದು ಹೋಗುತ್ತಿದ್ದ ರೈತ ಮೇಲೆ ಕರಡಿಯೊಂದು ದಾಳಿ ಮಾಡಿ ಗಂಬೀರವಾಗಿ ಗಾಯಗೊಳಿಸಿದೆ. ತಾಲೂಕಿನ ಕಸಬಾ ವ್ಯಾಪ್ತಿಯ ಹಳೇಹಟ್ಟಿ ಗ್ರಾಮದ ರೈತ ಚಿಗಲಿಂಗಪ್ಪ(60) ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಬೆಳಗ್ಗೆ ಹೊಲದ ಕೆಲಸಕ್ಕೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಕರಡಿಯೊಂದು ಏಕಾಎಕಿ ದಾಳಿ ಮಾಡಿ ತೊಡೆಯ ಭಾಗಕ್ಕೆ ಗಂಬೀರವಾಗಿ ಗಾಯಗೊಳಿಸಿದೆ. ಈ ಸಂದರ್ಭದಲ್ಲಿ ರೈತ ಜೋರಾಗಿ ಕಿರುಚಿಕೊಂಡಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿ ಕರಡಿಯನ್ನು ಓಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದು, ಚಿಗಲಿಂಗಪ್ಪ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.