ಕೊರಟಗೆರೆ: ಡಿ.17ರಂದು ಲೋಕಸಭಾ ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತಾ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನ ಖಂಡಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ಮೂಲಕ ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್ ರಾಮ್‌ಪ್ರಸಾದ್ ಮುಖೇನಾ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಚಿಂತಕರ ಕೇಂದ್ರ ಗೃಹ ಸಚಿವರನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನ ಏರ್ಪಡಿಸಿದ್ದರು. ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಲೋಕಸಭಾ ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ದೇಶದ ಎಲ್ಲಾ ದಲಿತ ಸಂಘ-ಸAಸ್ಥೆಗಳು ಖಂಡಿಸುತ್ತೇವೆ. ದಲಿತರು ಶೋಷಣೆಗೆ ಒಳಗಾಗಿದ್ದಾಗ ಯಾವ ದೇವರು ಸಹ ನಮ್ಮನ್ನು ಕಾಪಾಡಲಿಲ್ಲ ಸಂವಿಧಾನವೊAದೇ ದಲಿತರಿಗೆ ರಕ್ಷಣೆ ನೀಡಿ ಸಮಾನತೆ ಕಲ್ಪಿಸಿರುವುದು ಎಂದು ಆಕ್ರೋಶ ಹೊರಹಾಕಿದರು. ಪಪಂ ಸದಸ್ಯ ಕೆ.ಎನ್.ನಟರಾಜು ಮಾತನಾಡಿ ಸಚಿವರಾಗಿ ನೀವು…
Author: News Desk Benkiyabale
ತುಮಕೂರು: ನಗರದ ಗಂಗಸAದ್ರದಲ್ಲಿ 6 ಎಕರೆ ಜಾಗದಲ್ಲಿ ನೂತನವಾಗಿ ಸುಸಜ್ಜಿತವಾಗಿ ರುದ್ರವನವನ್ನು ವೀರಶೈವ ಸಮಾಜದಿಂದ ನಿರ್ಮಾಣ ಮಾಡಿದ್ದು, ಅಲ್ಲಿ ಸಿದ್ದೇಶ್ವರ ದೇವಾಲಯ ಸ್ಥಾಪನೆ ಮಾಡಿ, ಎಂಟು ದಿಕ್ಕುಗಳಲ್ಲಿ ಲಿಂಗಮುದ್ರೆ ಕಲ್ಲುಗಳನ್ನು ನೆಟ್ಟು ಲೋಕಾರ್ಪಣೆ ಮಾಡಲಾಗಿದೆ. ಶವಸಂಸ್ಕಾರಕ್ಕಾಗಿ ಸಮಾಜದವರು ಈ ರುದ್ರಭೂಮಿಯನ್ನು ಬಳಸಿಕೊಳ್ಳಬಹುದು ಎಂದು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು. ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಗುರುವಾರ ನಡೆದ ಸಮಾಜ ಸೇವಾ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಬನಶಂಕರಿಯ ರುದ್ರಭೂಮಿಯಲ್ಲಿ 1960ರಿಂದ ಶವಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿ ಜಾಗದ ಕೊರತೆ ಎದುರಾಗಿದೆ. ಹೀಗಾಗಿ ಗಂಗಸAದ್ರದ ರುದ್ರವನ ನಿರ್ಮಾಣ ಮಾಡಿ ಅಂತ್ಯಸAಸ್ಕಾರ ಕಾರ್ಯಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇದೂವರೆಗೆ ಸಮಾಜದಿಂದ ಶವಸಂಸ್ಕಾರಕ್ಕೆ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಮಾಡಲಾಗುತ್ತಿತ್ತು, ಅದರ ಖರ್ಚನ್ನು ಸಮಾಜ ಭರಿಸುತ್ತಿತ್ತು. ಸಭೆಯ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಉಚಿತ ಸೇವೆ ಮುಂದುವರೆಸುವುದಾಗಿ ಹೇಳಿದ ಅಧ್ಯಕ್ಷ ಟಿ.ಬಿ.ಶೇಖರ್, ಶಕ್ತಿ ಇರುವವರು ರುದ್ರಭೂಮಿಯ ಅಭಿವೃದ್ಧಿ ದೇಣಿಗೆ ನೀಡಿ…
ಚಿಕ್ಕನಾಯಕನಹಳ್ಳಿ: ಗ್ಯಾರೆಂಟಿ ಯೋಜನೆಯ ಉದ್ದೇಶ ಜನಸಾಮಾನ್ಯರಿಗೆ ಸಹಾಯ ಮಾಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಹಾಗೂ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸಿಡಿ ಚಂದ್ರಶೇಖರ್ ಹೇಳಿದರು. ಅವರು ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿದ ಸಂದರ್ಭದಲ್ಲಿ ಮಾತನಾಡುತ್ತಾ ನಾವು ಸರ್ಕಾರದ ಪ್ರತಿನಿಧಿಗಳಾಗಿದ್ದೇವೆ. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅಧಿಕಾರಿಗಳ ಮೂಲಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಈಗಿರುವಾಗ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಿದೆ ಎಂದು ವರದಿಗಳನ್ನು ಪರಿಶೀಲಿಸಿದರು. ಗೃಹಲಕ್ಷ್ಮಿ ಯೋಜನೆಯಲ್ಲಿ ಆಗಸ್ಟ್ 23 ರಿಂದ ಸೆಪ್ಟೆಂಬರ್ 24ರ ವರೆಗೆ ಪರಿಶಿಷ್ಟ ಜಾತಿ ಮಹಿಳೆಯರು 9558 ಕುಟುಂಬಗಳು ಪರಿಶಿಷ್ಟ ಪಂಗಡದ 3835 ಕುಟುಂಬ ಅಲ್ಪಸಂಖ್ಯಾತರ ಪಂಗಡದಿAದ 3166 ಕುಟುಂಬ ಹಿಂದುಳಿದ ವರ್ಗದ 16537 ಕುಟುಂಬ ಇತರೆ ವರ್ಗದ 21293 ಒಟ್ಟಿಗೆ 54, 389 ಕುಟುಂಬದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ನೆರವು ಪಡೆಯುವ ಮೂಲಕ…
ತುಮಕೂರು: ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮಾತದಾನ ಅತ್ಯಂತ ಪ್ರಮುಖವಾಗಿದ್ದು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಯುವಜನತೆಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಆರ್. ಅಧಿಕಾರಿಗಳಿಗೆ ಸೂಚಿಸಿದರು. ನಗರದ ನಿರೀಕ್ಷಣಾ ಮಂದಿರ ಸಭಾಂಗಣದಲ್ಲಿAದು ಸಭೆ ನಡೆಸಿ ಮಾತನಾಡಿದ ಅವರು, ವಿವಿಧ ಶಿಕ್ಷಣ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವಕರು ಚುನಾವಣೆ ಸಂದರ್ಭಗಳಲ್ಲಿ ತಮ್ಮ ಕ್ಷೇತ್ರಗಳಿಗೆ ತೆರಳಿ ಮತದಾನ ಮಾಡಲು ಆಸಕ್ತಿ ತೋರದೆ ಇರುವುದರಿಂದ ಅವರು ಇರುವ ಸ್ಥಳಗಳಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು. ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆಯಡಿ ಸ್ವೀಕೃತವಾದ ಅರ್ಜಿಗಳು, ಮನೆ-ಮನೆ ಸಮೀಕ್ಷೆಯ ಪ್ರಗತಿ ಹಾಗೂ ಇ.ಪಿ.ರೇಷಿಯೋ, ಜೆಂಡರ್ ರೇಷಿಯೋ ಮುಂತಾದ ಮತದಾರರ ಪಟ್ಟಿಯ ಸಂಬAಧ ಸಾಧಿಸಿರುವ ಪ್ರಗತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರನ್ನು ನೋಂದಣಿ ಮಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಇ.ಪಿ. ರೇಷಿಯೋ ಮತ್ತು ಜೆಂಡರ್ ರೇಷಿಯೋ…
ತುಮಕೂರು: ಸಮಾಜದ ಪ್ರತಿಯೊಬ್ಬರೂ ತಾರತಮ್ಯವಿಲ್ಲದೆ, ಸಮಾನವಾಗಿ ಬಾಳುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಹಕ್ಕುಗಳ ಅರಿವಿಲ್ಲದವರಿಂದ ಕಾನೂನಿನ ಉಲ್ಲಂಘನೆ ಆಗಬಹುದು ಅಥವಾ ಹಕ್ಕುಗಳ ಬಗ್ಗೆ ತಿಳಿದಿಲ್ಲದವರ ಮೇಲೆ ದೌರ್ಜನ್ಯ ನಡೆಯಬಹುದು. ಈ ಕಾರಣದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾನವ ಹಕ್ಕುಗಳ ಅರಿವು ಮೂಡಿಸಬೇಕು ಎಂದು ಅಡಿಷನಲ್ ಎಸ್ಪಿ ವಿ.ಮರಿಯಪ್ಪ ಹೇಳಿದರು. ಮಾನವ ಹಕ್ಕುಗಳ ಜಾಗೃತಿ ದಳ ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಆಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾರೂ ಯಾರ ಹಕ್ಕನ್ನು ಕಸಿಯುವಂತಿಲ್ಲ, ಎಲ್ಲರಿಗೂ ಸಮಾನ ಹಕ್ಕಿದೆ. ಇದಕ್ಕೆ ಸಂಬAಧಿಸಿದAತೆ ನಿಬಂಧನೆಗಳನ್ನು ರೂಪಿಸಲಾಗಿದೆ. ಹಕ್ಕುಗಳ ಅರಿವು ಬೆಳೆಸಿಕೊಂಡರೆ ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳಲು ಸಾಧ್ಯವಾಗುತ್ತದೆ ಎಂದರು. ಮಾನವ ಹಕ್ಕುಗಳ ಅರಿವಿಲ್ಲದವರು, ಕಾನೂನಿನ ತಿಳವಳಿಕೆಯಿಲ್ಲದವರು, ಅಮಾಯಕರು ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಅಂತಹವರಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಅವರ ಹಕ್ಕುಗಳು ದಮನವಾಗದಂತೆ ನೆರವಾಗಬೇಕು. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದು…
ತುಮಕೂರು: ತುಮಕೂರಿನ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಫೌಂಡೇಶನ್ ಹಾಗೂ ತುಮಕೂರು ವಿವಿಯ ಸಮಾಜಕಾರ್ಯ ವಿಭಾಗದ ಸಹಯೋಗದಲ್ಲಿ ತಮಿಳುನಾಡಿನ ಕೃಷ್ಣಗಿರಿ, ತಿರುವಣ್ಣಾಮಲೈ, ತಿಂಡಿವನA, ವಿಲ್ಲುಪುರಂ ಪ್ರದೇಶಗಳಲ್ಲಿ ಫೆಂಗಲ್ ಚಂಡಮಾರುತದಿAದ ಸಂತ್ರಸ್ತರಾದ ಜನರಿಗೆ ಪರಿಹಾರ ವಸ್ತುಗಳನ್ನು ವಿತರಿಸಲಾಯಿತು. ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳು, ಕಂಬಳಿ, ಬಟ್ಟೆ ಸೇರಿದಂತೆ 3000 ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಕಳೆದ ಒಂದು ವಾರದಿಂದ ಶುರುವಾಗಿರುವ ಪರಿಹಾರ ವಿತರಣಾ ಕಾರ್ಯವು ಇದೇ ಡಿ.30ರ ವರೆಗೂ ಮುಂದುವರಿಯಲಿದ್ದು, ಫೆಂಗಲ್ ಚಂಡಮಾರುತದಿAದ ಹಾನಿಗೊಳಗಾಗಿರುವ ತಮಿಳುನಾಡಿನ ವಿವಿಧ ಪ್ರದೇಶಗಳ ಸಂತ್ರಸ್ತರಿಗೆ ನೆರವಾಗಲಿದೆ. ‘ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಲು ಇನ್ಫೋಸಿಸ್ ಪ್ರತಿಷ್ಠಾನವು ಶ್ರೀ ರಾಮಕೃಷ್ಣ ಸೇವಾಶ್ರಮದೊಂದಿಗೆ ಕಳೆದ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪುದುಚೇರಿ, ವಿಲ್ಲುಪುರಂ, ಕಡಲೂರು, ತಿರುವಣ್ಣಾಮಲೈ, ಕೃಷ್ಣಗಿರಿ ಸೇರಿದಂತೆ ಫೆಂಗಲ್ ಪೀಡಿತ ಜಿಲ್ಲೆಗಳಿಗೆ ಪರಿಹಾರ ಸಾಮಗ್ರಿಗಳನ್ನು ನೀಡುತ್ತಿದ್ದೇವೆ. ಮೊದಲ ಹಂತದಲ್ಲಿ ಕೃಷ್ಣಗಿರಿ ಜಿಲ್ಲೆ ಹಾಗೂ ಸಮೀಪದ ವೆಟ್ಟಿಯಂಪಟ್ಟಿ, ಕಲ್ಲಾವಿಯಲ್ಲಿ 1,000 ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.…
ತುಮಕೂರು : ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಜನವರಿ ಮಾಹೆಯ ಅಂತ್ಯದಲ್ಲಿ ಫಲ-ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತಿದ್ದು, ಫಲ-ಪುಷ್ಪ ಪ್ರದರ್ಶನವನ್ನು ವೈಶಿಷ್ಟö್ಯಪೂರ್ಣವಾಗಿ ಏರ್ಪಡಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿAದು ಜರುಗಿದ ಫಲ-ಪುಷ್ಪ ಪ್ರದರ್ಶನ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೃಷಿ, ಮೀನುಗಾರಿಕೆ, ಪಶು ಸಂಗೋಪನೆ, ಅರಣ್ಯ, ರೇಷ್ಮೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಮಾಹಿತಿಯುಕ್ತವಾದ ಮಳಿಗೆಗಳನ್ನು ತೆರೆದು ವಸ್ತುಪ್ರದರ್ಶನವನ್ನು ಏರ್ಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಹಳ್ಳಿಯಲ್ಲಿ ಕಣ್ಮರೆಯಾಗುತ್ತಿರುವ ಆಹಾರ ಪದಾರ್ಥಗಳು ಮತ್ತು ಇಲಾಖೆಗೆ ಸಂಬAಧಿಸಿದ ವಿಷಯಗಳ ಕುರಿತು ವಿಶೇಷ ವಸ್ತು ಪ್ರದರ್ಶನ ಏರ್ಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳಿಗೆ ಸಂಬAಧಿಸಿದ ಮೌಲ್ಯಯುತ ಪುಸ್ತಕಗಳ ಪ್ರದರ್ಶನ ಏರ್ಪಡಿಸಲು ಕನ್ನಡ ಮತ್ತು ಸಂಸ್ಕೃತಿ…
ತುಮಕೂರು: ಇಂಡಿಯನ್‌ಪ್ರಿನ್ಯೂರ್ ನಿಯತಕಾಲಿಕ ಕೊಡಮಾಡುವ ಎಡೆಕ್ಸ್ ಅವಾರ್ಡ್ 2024ಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಪಿ. ಪರಮಶಿವಯ್ಯ ಹಾಗೂ ವಾಣಿಜ್ಯಶಾಸ್ತç ಸಹಪ್ರಾಧ್ಯಾಪಕ ಡಾ. ಬಿ. ಕೆ. ಸುರೇಶ್ ಭಾಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಇಬ್ಬರು ಪ್ರಾಧ್ಯಾಪಕರಿಗೆ ಈ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೆ. ಅರುಣ್ ಚಕ್ರವರ್ತಿ, ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮತ್ತಿತರ ಗಣ್ಯರು ಈ ಸಂದರ್ಭ ಹಾಜರಿದ್ದರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.
ಬೆಳಗಾವಿ : ಕಳೆದ ಇಪ್ಪತ್ತು ತಿಂಗಳ ಆಡಳಿತದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ಮಾತಿನಲ್ಲಿ ಮೈ ಮರೆತಿದೆಯೇ ಹೊರತು ಒಂದೇ ಒಂದು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಭ್ರಷ್ಟಾಚಾರದಲ್ಲಿ, ದುರಾಡಳಿತದಲ್ಲಿ ಮತ್ತು ಸ್ವಜನ ಪಕ್ಷಪಾತದಲ್ಲಿ ಈ ಸರ್ಕಾರ ಮುಳುಗಿದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡರು ಸೋಮವಾರ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾವು ಒಂದೇ ಒಂದು ಬೃಹತ್ ಅಭಿವೃದ್ಧಿ ಯೋಜನೆ ನೋಡಿಲ್ಲ. ಪಂಚ ಗ್ಯಾರಂಟಿಗಳ ಗುಂಗಿನಲ್ಲಿಯೇ ಈ ಸರ್ಕಾರ ಕಾಲ ಕಳೆಯುತ್ತಿದೆ. ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣದಂಥ ಕನಿಷ್ಠ ಅಗತ್ಯಗಳನ್ನು ಈಡೇರಿಸಲೂ ಈ ಸರ್ಕಾರದ ಬಳಿ ಹಣ ಇಲ್ಲದಂಥ ದುರ್ಗತಿ ಬಂದಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು. ಈ ಗ್ಯಾರಂಟಿ ಯೋಜನೆಗಳನ್ನು ಮುಂದೆ ಮಾಡಿಕೊಂಡು ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ ಎದುರಿಸಿತು. ಆದರೆ, ಅವರ ಪಕ್ಷ ಒಂದAಕಿಯ ಗೆಲುವಿಗೇ ತೃಪ್ತಿ ಪಡಬೇಕಾಯಿತು. ಈ ಯೋಜನೆಗಳು ಸಂಪೂರ್ಣ ವಿಫಲ ಎಂದು…
ಚಿಕ್ಕನಾಯಕನಹಳ್ಳಿ: ಪಟ್ಟಣದ ರ‍್ಕಾರಿ ಪದವಿ ಕಾಲೇಜಿಗೆ ಹಾಗೂ ಅಂತರಕಾಲೇಜು ಕುಸ್ತಿ ಸ್ರ‍್ಧೆಯಲ್ಲಿ 1ಚಿನ್ನ ಹಾಗೂ 3 ಬೆಳ್ಳಿಪದಕ ಲಭಿಸಿದೆ. 2024-25 ನೇ ಸಾಲಿನ ಶಿವಮೊಗ್ಗದಲ್ಲಿ ನಡೆದ ರ‍್ನಾಟಕ ಅಮೆಚೂರ್ ಬಾಕ್ಸಿಂಗ್ ಸಂಸ್ಥೆ ಆಯೋಜಿಸಿದ್ದ ಮುಕ್ತ ರಾಜ್ಯಮಟ್ಟದ ಬಾಕ್ಸಿಂಗ್ ಸ್ರ‍್ಧೆಯಲ್ಲಿ ಪಟ್ಟಣದ ರ‍್ಕಾರಿ ಪದವಿಕಾಲೇಜಿನ ಪ್ರಥಮ ಬಿಸಿಎ ವಿದ್ಯರ‍್ಥಿ ಜಿ.ಎಂ. ಅಕ್ಷಯ್ ಕಂಚಿನ ಪದಕ ಗಳಿಸಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಅಂತರಕಾಲೇಜು ಪುರುಷರ ಹಾಗೂ ಮಹಿಳೆಯರ ಕುಸ್ತಿ ಸ್ರ‍್ಧೆಯಲ್ಲಿ ಪಟ್ಟಣದ ರ‍್ಕಾರಿ ಪದವಿ ಕಾಲೇಜಿನ ಪ್ರಥಮ ಬಿಬಿಎ ವಿದ್ಯರ‍್ಥಿನಿ ಎಸ್.ಯಶಸ್ವಿನಿ ಚಿನ್ನದ ಪದಕ ಹಾಗೂ ದ್ವಿತಿಯ ಬಿಎ ವಿದ್ಯರ‍್ಥಿನಿ ಎಸ್. ಪ್ರೀತಿ ಮತ್ತು ಪ್ರಥಮಬಿಬಿಎ ವಿದ್ಯರ‍್ಥಿನಿ ಆರ್. ರಶ್ಮಿ ಹಾಗೂ ದ್ವಿತೀಯ ಬಿಎ ವಿದ್ಯರ‍್ಥಿ ವರುಣ್‌ಕುಮಾರ್ ಸಿ.ಎ. ಬೆಳ್ಳಿಪದಕಗಳಿಸಿರುತ್ತಾರೆ. ವಿದ್ಯರ‍್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜ್ಯೋತಿ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ಶೈಲೈಂದ್ರಕುಮಾರ್ ಎಸ್.ಜೆ. ಅದ್ಯಾಪಕ ವೃಂದ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಅಭಿನಂದಿಸಿದ್ದಾರೆ.