ಶಿವಮೊಗ್ಗ: ಕುಮಾರಸ್ವಾಮಿ ತಮ್ಮಕುಟುಂಬದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕುಮಾರ್ ಬಂಗಾರಪ್ಪ, ಕುಮಾರಸ್ವಾಮಿಯವರು ಎಚ್ಚರದಿಂದ ಇರಬೇಕು ಮುಂದಿನ ದಿನಗಳಲ್ಲಿ ಅವರ ವಿರುದ್ಧವೂ ಮಿಟೂ ಬಾಂಬ್ ಸಿಡಿಯುವ ಸಾಧ್ಯತೆ ಇದೆ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು, ಸಿಎಂ ಕುಮಾರಸ್ವಾಮಿ ಅವರು ಸೊರಬಕ್ಕೆ ಬಂದಾಗ ನನ್ನನ್ನೇ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಸುಳ್ಳಿಗೆ ಯಾವಾಗಲೂ ಸಾಕ್ಷಿ, ಆಧಾರ ಇರುವುದಿಲ್ಲ. ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ಬಗ್ಗೆ ಸಾಕ್ಷಿ ಸಮೇತ ನಾನು ಮಾತನಾಡುತ್ತೇನೆ. ಇನ್ನೂ ಹೆಚ್ಚು ಮಾತನಾಡಿದರೆ ಮೀ ಟೂದಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಬಹುದು ಎಂದು ಎಚ್ಚರಿಕೆ ನೀಡಿದರು. ಸಿಎಂ ಕುಮಾರಸ್ವಾಮಿ ಕುರಿತಾದ ಬೇಕಾದಷ್ಟು ಸಾಕ್ಷಿಗಳು ಸಾಮಾಜಿಕ ಜಾಲತಾಣದಲ್ಲಿ ಲಿಂಕ್ ಆಗಿವೆ. ಹುಟ್ಟುಹಬ್ಬ ಆಚರಣೆ ಮಾಡಿರುವುದು, ಮತ್ತೊಂದು ಮಾಡಿರುವುದು, ತಲೆಮರೆಸಿಕೊಂಡಿರುವುದು ಸಾಕಷ್ಟು ಲಿಂಕ್ಗಳು ಸಿಗುತ್ತವೆ. ನಿಮ್ಮ ಕುಟುಂಬ ಭಾಗವಾದರೆ, ಅವರನ್ನು ಸ್ವೀಕರಿಸಿ ರಾಮನಗರ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಎದುರಿಸಿ, ಅವರನ್ನು ಮತ್ತೊಂದೆಡೆ…
Author: News Desk Benkiyabale
ಭೋಪಾಲ್ : ಪನಾಮಾ ಪೇಪರ್ಸ್ ಹಗರಣದಲ್ಲಿ ತನ್ನ ಹೆಸರು ಎಳೆದು ತಂದಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ್ ಚೌಹಾಣ್ ಇಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ನಡುವೆ ರಾಹುಲ್ ಗಾಂಧಿ ಅವರು ತಾನು ಚೌಹಾಣ್ ಅವರ ಪುತ್ರನ ಹೆಸರನ್ನು ಪನಾಮಾ ಪೇಪರ್ ಹಗರಣ ಸಂಬಂಧ ಉಲ್ಲೇಖಸಿರುವುದು ತನ್ನಲ್ಲಿನ ಗೊಂದಲದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ. “ಸೋಮವಾರ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್, ಸಿಎಂ ಪುತ್ರನ ಹೆಸರು ಸೋರಿಕೆಯಾದ ಪನಾಮಾ ಪೇಪರ್ಸ್ನಲ್ಲಿ ಉಲ್ಲೇಖಗೊಂಡಿತ್ತು ಎಂದಿದ್ದರು. ಇದು ಕ್ರಿಮಿನಲ್ ಉದ್ದೇಶ ಹೊಂದಿದ ಆಕ್ಷೇಪಾರ್ಹ ಹೇಳಿಕೆ” ಎಂದು ಕಾರ್ತಿಕೇಯ್ ವಕೀಲ ಎಸ್ ಶ್ರೀವಾಸ್ತವ ಹೇಳಿದ್ದಾರೆ. ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಹಲವಾರು ಹಗರಣಗಳೊಂದಿಗೆ ಥಳುಕು ಹಾಕಿದ ರಾಹುಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ಮುಖ್ಯಮಂತ್ರಿ ಸೋಮವಾರ ರಾತ್ರಿಯೇ ಹೇಳಿದ್ದರು.…
ಕುಣಿಗಲ್: ಅಕ್ರಮವಾಗಿ ವಶಪಡಿಸಿಕೊಂಡಿದ್ದ ಸರ್ಕಾರಿ ಭೂಮಿಯನ್ನು ತಹಸೀಲ್ದಾರ್ ಎಸ್ ನಾಗರಾಜ್ ಪೊಲೀಸ್ ಬಂದೂಬಸ್ತ್ ನಲ್ಲಿ ವಶಕ್ಕೆ ಪಡೆದು ದಾರಿ ನಿರ್ಮಿಸಿದರು. ತಾಲೂಕಿನ ಸೋಮೇದೇವರಪಾಳ್ಯದಲ್ಲಿ ಸರ್ವೆ ನಂಬರ್13 ರಲ್ಲಿ ರೂಢಿ ದಾರಿ ಮತ್ತು ಗೋಮಾಳವನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಪಡಿಸಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮತ್ತು ಪೆÇಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಾರಿಯನ್ನು ತೆರವು ಮಾಡಿದರು . ಗೋಮಾಳದಲ್ಲಿ ಇರುವ ಕಲ್ಯಾಣಿ ಮತ್ತು ಅದರ ಸುತ್ತಲಿನ ಪ್ರದೇಶ ನಮಗೆ ಸೇರಿದ್ದು ಎಂದು ನಿಂಗೇಗೌಡ , ಹೇಮ ಸೇರಿದಂತೆ ಕೆಲವರು ಜೆಸಿಪಿಯನ್ನು ತಡೆದು ಪ್ರತಿಭಟಿಸಿದರು , ಇದನ್ನು ಪ್ರಶ್ನಿಸಲು ಹೋಗಿದ್ದ ಲೋಕೇಶ್ ಎಂಬುವರಿಗೆ ಹೇಮ ಎಂಬಾಕೆ ಚಾಕುವಿನಿಂದ ಗಾಯಗೊಳಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದಂತೆ ಸಿಪಿಐ ಅಶೋಕ್ ನೇತೃತ್ವದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗಲಭೆಯನ್ನು ಹತೋಟಿಗೆ ತಂದರು . ನಿಂಗೇಗೌಡ ನಾವು ಪುರಾತನ ಕಾಲದಿಂದ…
ಕೊರಟಗೆರೆ: ಚಿರತೆ ದಾಳಿಗೆ ಒಂದು ಮೇಕೆ ಬಲಿಯಾಗಿದ್ದು, ಸುತ್ತಮುತ್ತಲಿನ ರೈತರಲ್ಲಿ ಆತಂಕ ವ್ಯಕ್ತವಾಗಿರುವ ಘಟನೆ ಶನಿವಾರ ಸಂಜೆ ಕೊರಟಗೆರೆ ಪಟ್ಟಣ ಹೊರವಲಯದಲ್ಲಿ ನಡೆದಿದೆ. ಪಟ್ಟಣದ ಹೊರವಲಯದ ಬಸವನ ಬೆಟ್ಟದಲ್ಲಿ ಎರಡು ಚಿರತೆಗಳು ದಾಳಿ ಮಾಡಿ ಒಂದು ಮೇಕೆಯನ್ನು ಕೊಂದು ತಿಂದಿದ್ದು, ಇದನ್ನು ಕಂಡ ಸುತ್ತಮುತ್ತಲಿನ ರೈತರು ತಮ್ಮ ಜಮೀನಿನ ಕಡೆ ಹೋಗಲು ಭಯಬೀತರಾಗಿರುವ ರೈತರು ತಿಳಿದರು. ಈ ಘಟನೆಯ ಬಗ್ಗೆ ಸ್ಥಳಿಯರು ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಮೇಕೆ ಕಳೆದಕೊಂಡ ಬಡರೈತನಿಗೆ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಮೈಸೂರು: ಹಾವು ಕಚ್ಚಿ 13 ವರ್ಷದ ಹೆಣ್ಣು ಚಿರತೆ (ಜಾಗ್ವಾರ್) ಮೃತಪಟ್ಟಿರುವ ಘಟನೆ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದಿದೆ. ಮೃಗಾಲಯದಲ್ಲಿ ಚಿರತೆ (ಜಾಗ್ವಾರ್) ಇರುವ ಸ್ಥಳಕ್ಕೆ ಹಾವು ನುಗ್ಗಿದೆ. ಆಗ ಆಕ್ರೋಶಗೊಂಡ ಚಿರತೆ ಹಾವಿಗೆ ಕಚ್ಚಿದೆ. ಈ ವೇಳೆ ರೊಚ್ಚಿಗೆದ್ದ ಹಾವು ಕೂಡ ಚಿರತೆಗೆ ಕಚ್ಚಿದೆ. ಹೀಗೆ ಚಿರತೆ ದಾಳಿಯಿಂದ ಗಾಯಗೊಂಡಿದ್ದ ಹಾವು ಮೃತಪಟ್ಟಿದೆ. ಇನ್ನು ಹಾವು ಕಡಿದಿದ್ದರಿಂದ ಗಾಯಗೊಂಡಿದ್ದ ಚಿರತೆಗೆ ಮೃಗಾಲಯದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಚಿರತೆಯೂ ಮೃತಪಟ್ಟಿದೆ. ಈ ಚಿರತೆಯನ್ನು ದೆಹಲಿ ಮೃಗಾಲಯದಿಂದ ತರಲಾಗಿತ್ತು. ಈ ಬಗ್ಗೆ ಮೃಗಾಲಯದ ಸಿಇಓ ಅಜಿತ್ ಕುಲಕರ್ಣಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಹಿರಿಯ ನಿರ್ದೇಶಕ ಎಂ.ಎಸ್ ರಾಜಶೇಖರ್ (75) ಸೋಮವಾರ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸ್ಯಾಂಡಲ್ವುಡ್ ನ ಸೃಜನಶೀಲ ನಿರ್ದೇಶಕ ಅಂತಲೇ ಕರೆಸಿಕೊಂಡಿದ್ದ ಎಂ.ಎಸ್. ರಾಜಶೇಖರ್ ಅವರು 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಪತ್ನಿ ರಾಣಿ, ಮಗಳು ಶಾರದಾ, ಮಗ ರಘು ಅವರನ್ನು ಅಗಲಿದ್ದಾರೆ. ನಾಳೆ ನಾಗರಬಾವಿ ಸಮೀಪದ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬೆಂಗಳೂರು: ದ್ವಿತೀಯ ಪಿಯುಸಿ 2019ನೇ ಸಾಲಿನ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ. ತಾತ್ಕಾಲಿಕ ವೇಳಾ ಪಟ್ಟಿಯ ಪ್ರಕಾರ ಮಾರ್ಚ್ 1 ರಿಂದ ಪರೀಕ್ಷೆ ಆರಂಭವಾಗಲಿದ್ದು, ವೇಳಾಪಟ್ಟಿಯಲ್ಲಿ ತಕರಾರುಗಳಿದ್ದಲ್ಲಿ ಮನವಿ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. 2019ರ ಮಾರ್ಚ್ 1- ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ, ಮಾರ್ಚ್ 2- ಎನ್ಎಸ್ಕ್ಯೂಎ ಪರೀಕ್ಷೆ, ಮಾರ್ಚ್ 3-ರವಿವಾರದ ರಜೆ, ಮಾರ್ಚ್ 4- ಮಹಾಶಿವರಾತ್ರಿ ರಜೆ, ಮಾರ್ಚ್ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್. ಮಾರ್ಚ್ 6- ಲಾಜಿಕ್, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮಾರ್ಚ್ 7- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ, ಮಾರ್ಚ್ 8- ಉರ್ದು, ಸಂಸ್ಕೃತ, ಮಾರ್ಚ್ 9- ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ, ಮಾರ್ಚ್ 10-ರವಿವಾರ ರಜೆ, ಮಾರ್ಚ್ 11- ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ. ಮಾರ್ಚ್ 12-ಭೂಗೋಳಶಾಸ್ತ್ರ, ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ, ಮಾರ್ಚ್ 13-…
ಬೆಳಗಾವಿ: ರಾಜ್ಯ ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿದ್ದ ವಿವಾದಿತ ಬೆಳಗಾವಿಯ ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷ ಚುನಾವಣೆ ವೇಳೆ ಉಭಯ ಬಣಗಳ ರಾಜಿ ಸಂಧಾನದ ಅಧ್ಯಕ್ಷ ರಾಗಿದ್ದ ಮಹದೇವ ಪಾಟೀಲ್ ಸೋಮವಾರ ನಿಧನರಾಗಿದ್ದಾರೆ. ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣಾ ಕದನದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣದಿಂದ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರು. ಬೆಳಗಾವಿಯ ಫೂಲ್ಬಾಗ್ ಗಲ್ಲಿ ನಿವಾಸದಲ್ಲಿ ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಣ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಜೆಡಿಎಸ್ ಹಾಗೂ ಕ್ರಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ನಡುಗಿಸಿತ್ತು. ಆದ್ರೆ ಈಗ ಅಧ್ಯಕ್ಷ ಮಹಾದೇವ್ ಪಾಟೀಲ್ ಮೃತಪಟ್ಟಿರುವುದರಿಂದ ತೆರವಾದ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯುವುದು ಅನಿವಾರ್ಯವಾಗಿದೆ.
ಮಧುಗಿರಿ: ಕಸಾಯಿ ಖಾನೆಗಳಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಐದು ವಾಹನಗಳನ್ನು ವಶಕ್ಕೆ ಪಡೆದ ಮಧುಗಿರಿ ಪೊಲೀಸರು 34 ಗೋವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರದಿಂದ ಆಲಿಪುರಕ್ಕೆ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ನಂತರ ಗೋವುಗಳನ್ನು ಗೋಶಾಲೆಗೆ ರವಾನಿಸಿದ ಘಟನೆ ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ 20 ಕ್ಕೂ ಹೆಚ್ಚು ಹಸು ಕರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳೀಯರು ಹಾಗೂ ಪೊಲೀಸರು ವಾಹನವನ್ನು ಅಡ್ಡಗಟ್ಟಿದ್ದಾರೆ. ಜಾನುವಾರುಳನ್ನು ವಶಕ್ಕೆ ಪಡೆದ ಪೊಲೀಸರು ನಂತರ ಗೋವುಗಳನ್ನು ಸ್ಥಳೀಯ ಗೋ ಶಾಲೆಗೆ ರವಾನಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಳ್ಳಾರಿ : ಲೋಕಸಭೆ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 11 ಲಕ್ಷ ರೂ.ನಗದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸಾರಿಗೆ ಇಲಾಖೆ ಬಸ್ ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಗದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 11 ಲಕ್ಷ ರೂ.ಗಳನ್ನು ಮರಿಯಮ್ಮನಹಳ್ಳಿ ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಿ ಹಣ ಖಜಾನೆಯಲ್ಲಿಡಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಝಹೀರ್ ಅಬ್ಬಾಸ್, ತಾಲ್ಲೂಕು ನೋಡಲ್ ಅಧಿಕಾರಿ ರಾಜಪ್ಪ, ತಹಸೀಲ್ದಾರ್ ರೆಹಮಾನ ಪಾಷಾ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ವಿಶ್ವನಾಥ್ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಎಸ್ಎಸ್ಟಿ ತಂಡದವರು ಇದ್ದರು