Author: News Desk Benkiyabale

ತುಮಕೂರು: ಜಿಲ್ಲೆಯಲ್ಲಿ 2024ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ 16 ತಾಯಿ ಮರಣ ಹಾಗೂ 196 ಶಿಶು ಮರಣ ಸಂಭವಿಸಿದ್ದು, ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ಶೂನ್ಯಕ್ಕಿಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2024ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ 19,583 ಹೆರಿಗೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 16 ತಾಯಿ ಮರಣ ಹಾಗೂ 196 ಶಿಶು ಮರಣ ಸಂಭವಿಸಿವೆ. ತಾಯಿ ಮತ್ತು ಶಿಶು ಮರಣಗಳ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರಲ್ಲದೆ, ಖಾಸಗಿ/ ಸರ್ಕಾರಿ ಆಸ್ಪತ್ರೆಗಳಲ್ಲಿ ಉದಾಸೀನ ಮಾಡದೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ತಾಯಿ ಮತ್ತು ಶಿಶು ಮರಣ ಸಂಭವಿಸಿದ ನಂತರ ಮರಣ ಪ್ರಮಾಣದ ಬಗ್ಗೆ ಚರ್ಚಿಸುವ ಬದಲು ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಬೇಕೆಂದು…

Read More

ತುರುವೇಕೆರೆ: ನಮ್ಮ ಕನ್ನಡ ಭಾಷೆಗೆ ದಕ್ಕೆಯಾಗದಂತೆ ಕನ್ನಡಿಗರು ನೆಡೆದುಕೊಳ್ಳಬೇಕು ಎಂದು ರಾಜ್ಯ ಯುವ ಜೆಡಿಎಸ್ ಪ್ರದಾನ ಕಾರ್ಯದರ್ಶಿ ದೊಡ್ಡಘಟ್ಟ ಚಂದ್ರೇಶ್ ತಿಳಿಸಿದರು. ತಾಲೂಕಿನ ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ರಂಗ ತರಂಗ ಕ್ರೀಡೆ ಮತ್ತು ಸಾಂಸ್ಕೃತಿಕ ಗೆಳೆಯರ ಬಳಗವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 69ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ಹಾಗೂ ದ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ನಾಡು ನುಡಿಗೆ ಹಲವರು ತನ್ನದೆಯಾದ ಸೇವೆ ಸಲ್ಲಿಸಿದ್ದಾರೆ.ಕನ್ನಡ ಬಾಷೆಗೆ ವಚನ ಹಾಗೂ ದಾಸ ಸಾಹಿತ್ಯ ಎರಡು ಕಣ್ಣಗಳಿದ್ದಂತೆ.ಹಲವಾರು ಕವಿಗಳು ತನ್ನ ಸಾಹಿತ್ಯ ಕ್ಷೇತ್ರದಲ್ಲಿ ದಲ್ಲಿ ಸಾದನೆ ಮೂಲಕ ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಕನ್ನಡ ಇತಿಹಾಸ ತಿಳಿಯುವದು ತುಂಬಾ ಇದೆ ವಿದ್ಯಾರ್ಥಿಗಳು ಕನ್ನಡ ನಾಡಿನ ಇತಿಹಾಸ ಪರಂಪರೆ ತಿಳಿದುಕೊಂಡು ಕನ್ನಡ ಉಳಿಸುವ ಬೆಳೆಸುವ ಜವಬ್ದಾರಿ ನಿಮ್ಮ ಮೇಲಿದೆ ಎಂದರು. ಈ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸಾದನೆಗೈದ ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಿದರು. ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ…

Read More

ಶಿರಾ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಚಿಕ್ಕನಹಳ್ಳಿಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ. ಶಿರಾ ತಾಲ್ಲೂಕು ಚಿಕ್ಕನಹಳ್ಳಿಯಲ್ಲಿ ದಿನಾಂಕ 16- 12- 2024 ನೇ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ದೇವರಹಳ್ಳಿ ಗ್ರಾಮದ ನಾಗಪ್ಪ ಅಧ್ಯಕ್ಷರಾಗಿ ಮತ್ತು ಚಿಕ್ಕದಾಸರಹಳ್ಳಿಯ ಮಂಜುನಾಥ್ ಸಿ. ಪಿ. ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ದಿನಾಂಕ: 08-12-2024 ರಂದು ನಡೆದ ಆಡಳಿತ ಮಂಡಲಿ ನಿರ್ದೇಶಕರುಗಳ ಚುನಾವಣೆಯಲ್ಲಿ ಸಾಮಾನ್ಯ, ಅನುಸೂಚಿತ ಜಾತಿ/ಪರಿಶಿಷ್ಟಪಂಗಡ, ಹಿಂದುಳಿದ ಪ್ರವರ್ಗ ಹಾಗೂ ಮಹಿಳೆಯರಿಗೆ ಮೀಸಲಿಸಿದ ಸ್ಥಾನಗಳಿಗೆ ಸ್ಪರ್ಥಿಸಿ, ಈ ಕೆಳಕಂಡ ಅಭ್ಯರ್ಥಿಗಳು ಚುನಾವಣೆ ಮೂಲಕ ಸಹಕಾರ ಸಂಘಗಳ ನಿಯಮ 1960, ನಿಯಮ14ಜಿ ಅಡಿಯಲ್ಲಿ ಒಟ್ಟು 12 ಜಯಶೀಲರಾಗಿ ನಿರ್ದೇಶಕರುಗಳಾಗಿ ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಇಂದ್ರಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಭೂತೇಶ್, ರಾಜಣ್ಣ, ಮಂಜುನಾಥ್. ಎನ್., ಲೋಕೇಶ್ ಬಿ. ಆರ್., ಪರುಶುರಾಮಯ್ಯ, ತಿಮ್ಮಣ್ಣ, ಬ್ಯಾಟೇಗೌಡ,…

Read More

ತುಮಕೂರು: ಪರ್ಯಾಯ ರಾಜಕಾರಣಕ್ಕೆ ಜನರ ಬೆಂಬಲ ಹಾಗೂ ಜನರು ನೀಡುವ ಹಣದಲ್ಲೆ ಪರಿರ್ಯಾಯ ರಾಜಕಾರಣ ಬೆಂಬಲಿಸಿ ಬೆಳೆಸಬೇಕಾಂದAತಹ ಅಗತ್ಯವಿದೆಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಡಾ. ಕೆ ಪ್ರಕಾಶ್‌ಅವರು ಅಭಿಪ್ರಾಯಪಟ್ಟರು. ಸಿಪಿಐ(ಎಂ) 24 ನೇ ರಾಜ್ಯ ಸಮ್ಮೇಳನವು ಡಿಸೆಂಬರ್ 29 ರಿಂದ 3 ರ ವರಗೆ ತುಮಕೂರಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ “ ಜನತೆಯಿಂದ ನಿಧಿ ಸಂಗ್ರಹಕ್ಕೆ ಅಭಿಯಾನಕ್ಕೆ “ ನಗರದ ಮಹಾತ್ಮಗಾಂದಿ üರಸ್ತೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಬಂಡವಾಳಶಾಹಿ ರಾಜಕೀಯ ಪಕ್ಷಗಳು ಕಾರ್ಪೊರೇಟರ್ ಧನಿಗಳಿಂದ ಪೆಡದ ಹಣ ಪಡೆದು ರಾಜಕಾರಣ ಮಾಡಿ ಅವರ ಹಿತಕಾಪಾಡುತ್ತಿದ್ದಾರೆ ಹಾಗಾಗಿ ಜನ ಹಿತಕಾಪಾಡಲು ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಲು ಪರ್ಯಾಯ ರಾಜಕಾರಣಕ್ಕೆ ಜನಧನ ಬಲವನ್ನು ಜನರೆ ನೀಡಬೇಕು ಎಂದು ಅಭಿಪ್ರಾಯ ಪಟ್ಟರು. ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಕೆ. ಮಹಾಂತೇಶ್ ಮಾತನಾಡಿ ದಾಸೋಹ ಸಂಸ್ಕೃತಿಗೆ ಹೆಸರಾದ ಕಲ್ಪತರು ನಾಡಿನ ಜನತೆ ಸಮ್ಮೇಳನದ ಯಶಸ್ವಿಗೆ ವಸ್ತುಗಳನ್ನುಹಾಗು ಧನ ಸಹಾಯ ಮಾಡಿ ಬೆಂಬಲಿಸುವAತೆ ಮನವಿ ಮಾಡಿದರು,ನರಂಹಮೂರ್ತಿ, ಕಾರ್ಮಿಕ…

Read More

ತುಮಕೂರು: ವಿಪ್ರ ಸಮುದಾಯದಲ್ಲಿ ಒಗ್ಗಟ್ಟು ಹಾಗೂ ಜಾಗೃತಿ ಮೂಡಿಸಲು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ಥಾಪನೆಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ಮುಂಬರುವ ಜನವರಿ ತಿಂಗಳಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶಿವಶಂಕರ್ ಅವರು ಹೇಳಿದರು. ಅವರು ತುಮಕೂರಿನಲ್ಲಿ ಡಿಸೆಂಬರ್ 15 ರಂದು ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ರಾಜ್ಯ ಮಹಾಸಭಾವು ಸ್ಥಾಪನೆಗೊಂಡು 50 ವರ್ಷಗಳಾದ ಸುಸಂದರ್ಭದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಮತ್ತು ಭಗವದ್ಗೀತೆ ಕಂಠಪಾಠ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಯಾವ ರಾಜಕೀಯ ಪಕ್ಷಗಳಲ್ಲೂ ಬ್ರಾಹ್ಮಣ ಸಮುದಾಯಕ್ಕೆ ಸೂಕ್ತ ಸ್ಥಾನಮಾನ, ಪ್ರಾತಿನಿಧ್ಯ ಹಾಗೂ ಪ್ರಾಶಸ್ತö್ಯ ಸರಿಯಾಗಿ ದೊರೆಯುತ್ತಿಲ್ಲ. ಅಸಡ್ಡೆಯಿಂದ ಕಾಣಲಾಗುತ್ತಿದೆ. ಈ ನಿಟ್ಟಿನಲ್ಲಿ ವಿಪ್ರ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಲೂ ಸಹ ಈ ಸಮಾವೇಶ ಉತ್ತಮ ವೇದಿಕೆಯಾಗಲಿದೆ ಎಂದು ಸಮಾವೇಶದಲ್ಲಿ ನಡಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.…

Read More

ಚೇಳೂರು: ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ. ಅಪರಾಧಿ ಮೋಹನ ಮನೆಯವರ ಮೇಲೆ ನನಗೆ ಒಳ್ಳೆ ಹುಡುಗಿ ನೋಡಿ ಮದುವೆ ಮಾಡಲಿಲ್ಲ ಎಂದು ಆಗಾಗ್ಗೆ ಮನೆಯಲ್ಲಿ ಜಗಳ ಮಡುತ್ತಿದ್ದನು. ಈ ವಿಚಾರದಲ್ಲಿ ಮೋಹನನಿಗೂ ಅವನ ತಮ್ಮ ಉಮೇಶ ಮತ್ತು ತಂದೆ ಮಲ್ಲಯ್ಯ ವರಿಗೆ ಹಲವು ಬಾರೀ ಗಲಾಟೆ ಆಗಿತ್ತು. ಉಮೇಶನು ಮಲಗಿದ್ದಾಗ ಆರೋಪಿ ಇವನು ಯಾವಾಗಲೂ ಗಲಾಟೆ ಮಾಡುತ್ತಾನೆ ಹಾಗೂ ತನ್ನ ತಂದೆ ಮಲ್ಲಯ್ಯ ಗಲಾಟೆ ಬಿಡಿಸಲು ಬರುತ್ತಾನೆ ಎಂಬ ದ್ವೇಷದಿಂದ ಮಚ್ಚಿನಿಂದ ತನ್ನ ತಮ್ಮನನ್ನು ಹೊಡೆದು ಕೊಲೆಮಾಡಿದ್ದನು. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು. 50 ಸಾವಿರ ದಂಡ ಮತ್ತು 10 ವರ್ಷ ಕಾರಾಗೃಹ ಮತ್ತು 25 ಸಾವಿರ ದಂಢ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

Read More

ತುಮಕೂರು: ಜೀವನದಲ್ಲಿ ಸ್ಪಷ್ಟ ಗುರಿ, ಛಲ, ಶ್ರಮ, ಶ್ರದ್ಧೆ ಹೊಂದಿದ್ದರೆ ಸಾಧನೆ ಮಾಡಬಹುದು. ತಮಿಳು ನಾಡಿನ 18ನೇ ವಯಸ್ಸಿನ ಗುಕೇಶ್ ಚೆಸ್‌ನಲ್ಲಿ 18ನೇ ವಿಶ್ವ ಚಾಂಪಿಯನ್ ಆಗಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಶ್ರದ್ಧೆ, ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಚೆಸ್ ನಮ್ಮ ದೇಶದ ಆಟ. ಏಕಾಗ್ರತೆ, ಬುದ್ಧಿಶಕ್ತಿ ವೃದ್ಧಿಸುವ ಆಟ ಎಂದು ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್ ಹೇಳಿದರು. ನಗರದ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಶಾಲೆಗಳಲ್ಲಿ ಕ್ರೀಡೆಯೂ ಅಧ್ಯಯನದ ಭಾಗವಾಗಿ ಇರಬೇಕು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಇಂದು ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಕ್ರೀಡಾ ಸಾಧಕರಿಗೆ ಮೀಸಲಾತಿ ಸೌಲಭ್ಯವಿದೆ. ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು. ಚೆನ್ನೆöÊನಲ್ಲಿ ನಡೆದ ಚೆಸ್ ಒಲಂಪಿಯಾಡ್‌ಗೆ ಪ್ರಧಾನಿ ನರೇಂದ್ರ ಮೋದಿಯವರು ಹೆಚ್ಚಿನ ಪ್ರೋತ್ಸಾಹ ನೀಡಿದರು. ಇದಾಗಿ ಒಂದೂವರೆ ವರ್ಷದಲ್ಲಿ ಚೆಸ್‌ನಲ್ಲಿ ಚಿನ್ನದ ಪದಕ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಗುಕೇಶ್…

Read More

ತುಮಕೂರು: ಒಳಮೀಸಲಾತಿ ಜಾರಿ ಕುರಿತು ಚಳಿಗಾಲದ ಅಧಿವೇಶನದಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದವತಿಯಿಂದ ಸಚಿವರಾದ ಕೆ.ಎನ್.ರಾಜಣ್ಣ,ಡಾ.ಜಿ.ಪರಮೇಶ್ವರ್,ಶಾಸಕರಾದ ಜೋತಿಗಣೇಶ್, ಆರ್.ರಾಜೇಂದ್ರ ಅವರುಗಳಿಗೆ ಮನವಿ ಸಲ್ಲಿಸಲಾಯಿತು. ಸುಪ್ರಿಂಕೋರ್ಟಿನ 7 ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠವು ಒಳಮೀಸಲಾತಿ ಜಾರಿ ಕುರಿತಂತೆ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಿದ್ದು, ಒಳಮೀಸಲಾತಿ ಜಾರಿಯಾದರೆ ಪರಿಶಿಷ್ಟ ಜಾತಿಯಲ್ಲಿನ ಎಲ್ಲಾ 101 ಜಾತಿಗಳಿಗೂ ಸಾಮಾಜಿಕ ನ್ಯಾಯ ದೊರಕಿದಂತಾಗುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದೆ. ಸುಪ್ರಿಂಕೋರ್ಟಿನ ತೀರ್ಪು ಬಂದ ನಂತರ ಅಧಿಕಾರಕ್ಕೆ ಬಂದ ಹರಿಯಾಣದ ಬಿಜೆಪಿ ಸರಕಾರ ತಾನು ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಸುಪ್ರಿಂಕೋರ್ಟಿನ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಿದೆ.ಆದರೆ ಕರ್ನಾಟಕದಲ್ಲಿ ತಾವು ಅಧಿಕಾರಕ್ಕೆ ಬಂದರೆ 60 ದಿನದಲ್ಲಿ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 1ವರ್ಷ 10 ತಿಂಗಳು ಕಳೆದರೂ ಒಳಮೀಸಲಾತಿ ಜಾರಿಗೊಳಿಸಲು ಮೀನಾಮೇಷ ಎಣಿಸುತ್ತಿದೆ.ಅಲ್ಲದೆ ಕರಾರುವಾಕಾದ ಜನಸಂಖ್ಯೆಯ ಅಂಕಿ ಅಂಶ ಪಡೆಯಲು ರಚಿಸಿರುವ ನ್ಯಾ.ನಾಗಮೋಹನ್‌ದಾಸ್ ನೇತೃತ್ವದ ಸಮಿತಿಗೂ ಸರಿಯಾದ ರೀತಿ ಸ್ಪಂದಿಸದೆ ಅನಗತ್ಯ…

Read More

ತುಮಕೂರು: ಹೊಸ ಶಿಕ್ಷಣ ನೀತಿ-2020 ಬಂದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಈ ಬದಲಾವಣೆಗೆ ಅಗತ್ಯ ತಯಾರಿ ಮಾಡಿಕೊಂಡರಷ್ಟೇ ಸವಾಲುಗಳನ್ನು ಎದುರಿಸಿ, ನಿಲ್ಲಲ್ಲು ಸಾಧ್ಯ ಎಂದು ಬೆಂಗಳೂರು ವಿವಿ ಅರ್ಥಶಾಸ್ತç ವಿಭಾಗದ ಅಧ್ಯಕ್ಷರಾದ ಪ್ರೊ.ಎಸ್.ಆರ್.ಕೇಶವ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಸರಕಾರಿ ಪ್ರಥಮದರ್ಜೆಕಾಲೇಜು ಹಾಗೂ ಸರಕಾರಿ ಸಂಜೆ ಪ್ರಥಮದರ್ಜೆ ಕಾಲೇಜುವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್.ಎಸ್.ಎಸ್, ಸೇರಿದಂತೆ ವಿವಿಧ ಘಟಕಗಳ ಚಟುವಟಿಕೆಗಳ ಸಂಭ್ರಮ-2024 ಹಾಗೂ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ತಂತ್ರಜ್ಞಾನದÀ ಬಳಕೆಯಿಂದ ಗುತ್ತಿಗೆದಾರ, ಅಡಿಟರ್ ಸೇರಿದಂತೆ ಸುಮಾರು 40ರಷು ಹುದ್ದೆಗಳು ತನ್ನ ಅಸ್ಥಿತ್ವ ಕಳೆದುಕೊಳ್ಳಲಿವೆ. ಮುಂದಿನ ಮೂರು ವರ್ಷದ ನಂತರ ಪದವಿ ಪಡೆದ ಬರುವ ನೀವುಗಳು, ಈ ಸವಾಲನ್ನು ಸ್ವೀಕರಿಸಲು ಅಗತ್ಯವಿರುವ ತಯಾರಿ ಮಾಡಿಕೊಂಡರೆ ಮಾತ್ರ ಪೈಪೋಟಿಯುತ ಜಗತ್ತಿನಲ್ಲಿ ಉಳಿಯಲು ಸಾಧ್ಯ.ಹಾಗಾಗಿ ಈಗಿನಿಂದಲೇ ತಯಾರಿ ನಡೆಸಿ ಎಂದು ಸಲಹೆ ನೀಡಿದರು. ಹೊಸ ಶಿಕ್ಷಣ ನೀತಿ ಬಂದ ನಂತರ ಪಠ್ಯ ಮತ್ತು ಪಠ್ಯೇತರದ ನಡುವಿನ ಅಂತರ ಕುಸಿದಿದೆ.ಎರಡು ಒಂದೇ ಎನ್ನುವ…

Read More

ತುಮಕೂರು: ಶ್ರೀದೇವಿ ಇಂಜಿನಿಯರಿAಗ್ ಕಾಲೇಜು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರುಗಳ ಸಹಯೋಗದೊಂದಿಗೆ ಕೇಂದ್ರ ಕರ್ನಾಟಕ ವಿಭಾಗೀಯ ಮಟ್ಟದ ಮಹಿಳಾ ಥ್ರೋಬಾಲ್ ಪಂದ್ಯಾವಳಿಯನ್ನು ಡಿ.12 ಮತ್ತು 13 ರವರೆಗೆ ಆಯೋಜಿಸಲಾಗಿತ್ತು. ಪಂದ್ಯಾವಳಿಯನ್ನು ಉದ್ಘಾಟಿಸಿದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಮಾತನಾಡಿ ಈ ಪಂದ್ಯಾವಳಿಯನ್ನು ಆಯೋಜಿಸಲು ಅವಕಾಶ ನೀಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಧನ್ಯವಾದಗಳು. ಪ್ರತಿಯೊಬ್ಬ ವಿದ್ಯಾರ್ಥಿಗಳು ಕ್ರೀಡಾಮನೋಭಾವನೆಯಿಂದ ಆಟದಲ್ಲಿ ಭಾಗವಹಿಸಬೇಕು, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಸ್ಫೂರ್ತಿಯನ್ನು ಮೆರೆಯಬೇಕೆಂದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ವಿಟಿಯು ಪ್ರಾದೇಶಿಕ ಕಚೇರಿಯ ನಿರ್ದೇಶಕರಾದ ಡಾ.ಹೆಚ್.ಆರ್.ಸುದರ್ಶನರೆಡ್ಡಿರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸದಾ ಮೊಬೈಲ್‌ನಲ್ಲಿ ನಿರಂತರರಾಗಿರುವುದರಿAದ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ. ಹಾಗೆಯೇ ಆರೋಗ್ಯವು ಅಸೌಖ್ಯವಾಗುತ್ತಿದೆಯೆಂದು ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪ್ರತಿದಿನದಲ್ಲಿ 1 ರಿಂದ 2 ಗಂಟೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯ ಮತ್ತು ಬುದ್ದಿಮಟ್ಟವು ಹೆಚ್ಚಾಗುತ್ತದೆ. ಪೋಷಕರು ಮತ್ತು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂತರಾಷ್ಟಿçÃಯ ಥ್ರೋಬಾಲ್ ಆಟಗಾರ್ತಿ ಜಾಯ್ಸ್ವೆಸ್ಲಿರವರು…

Read More