Author: News Desk Benkiyabale

ಹುಳಿಯಾರು: ರಾಷ್ಟçಪತಿ ಪದಕ ವಿಜೇತ ಪ್ರಬಂಧಕಾರ, ಸಾಹಿತಿ ಹಾಗೂ ವಿಶ್ರಾಂತ ಉಪನ್ಯಾಸಕ ಡಾ.ಅಬ್ದುಲ್ ಹಮೀದ್ (ವಯಸ್ಸು 88) ಅವರು ವಯೋಸಹಜ ಶುಕ್ರವಾರ ನಿಧನರಾಗಿದ್ದಾರೆ. ಸುಮಾರು ಮೂವತ್ತೆöÊದಕ್ಕೂ ಹೆಚ್ಚಿನ ವರ್ಷಗಳ ಉಪನ್ಯಾಸಕ ಸೇವೆ ಹಾಗೂ ಸಾ.ಶಿ.ಮರುಳಯ್ಯ ಮತ್ತು ಜಿ.ಎಸ್.ಶಿವರುದ್ರಪ್ಪನವರ ಆಪ್ತ ಬಳಗ ಮೃತರು ಸೂಫಿ ಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ ನಡೆಸಿ, ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗೌರವ ಸಂದಿತ್ತು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಶನಿವಾರ ಹಂದನಕೆರೆ ಗ್ರಾಮದ ತೋಟದ ಮನೆ ಕೆಂಗಲಾಪುರ ಮಾರ್ಗದಲ್ಲಿರುವ ತಾಜ್ ಕುರಿ ಫಾರಂ ಅಂತ್ಯಕ್ರಿಯೆ ನೆರವೇರಲಿದೆ.

Read More

ತುಮಕೂರು: ಮೋಡ ಕವಿದ ವಾತಾವರಣದ, ಶೀತಗಾಳಿ ನಡುವೆಯೂ ಕಲ್ಪತರುನಾಡಿನ ವಿವಿಧೆಡೆ ಮುಂಜಾನೆಯಿAದಲೇ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸುವ ಮೂಲಕ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯ, ಶೆಟ್ಟಿಹಳ್ಳಿ ಗೇಟ್‌ನಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಾಲಯ, ಬಿ.ಹೆಚ್. ರಸ್ತೆಯ ಆರ್‌ಟಿಓ ಕಚೇರಿ ಮುಂಭಾಗದಲ್ಲಿರುವ ವರಪ್ರಸಾದ ವೀರಾಂಜನೇಯ ಸ್ವಾಮಿ ದೇಗುಲ, ಶ್ರೀರಾಮನಗರದ ಕಿಕ್ಕೇರಿ ಆಂಜನೇಯಸ್ವಾಮಿ ದೇವಾಲಯ, ಬಟವಾಡಿ ಸಮೀಪದ ಭಕ್ತಾಂಜನೇಯಸ್ವಾಮಿ ದೇವಾಲಯ, ವಿದ್ಯಾನಗರದ ಪುಟ್ಟಾಂಜನೇಯ ಸ್ವಾಮಿ ದೇವಸ್ಥಾನ, ಹನುಂತಪುರದ ಬಯಲಾಂಜನೇಯಸ್ವಾಮಿ ದೇವಾಲಯ, ಬನಶಂಕರಿಯ ಮಾರುತಿ ದೇವಾಲಯ, ಮೆಳೇಕೋಟೆಯ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊAದಿಗೆ ಹನುಮ ನಾಮ ಸ್ಮರಣೆ, ವೇದ ಘೋಷಗಳು, ಭಜನೆಗಳು ಮೊಳಗಿದವು. ಹನುಮ ಜಯಂತಿ ಪ್ರಯುಕ್ತ ಕೋಟೆ ಶ್ರೀಆಂಜನೇಯ ಸ್ವಾಮಿ ವೃತ್ತ, ಟೌನ್ ಹಾಲ್ ವೃತ್ತ, ಕಾಲ್ಟ್ಟ್ಯಾಕ್ಸ್, ಎಂ.ಜಿ. ರಸ್ತೆ, ಬಾರ್‌ಲೈನ್ ರಸ್ತೆ, ಎಸ್.ಎಸ್.ಪುರಂ…

Read More

ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ಅಭಿವೃದ್ಧಿ ನಿಗಮಗಳಿಗೆ ನೀಡಬೇಕಾದ ಅನುದಾನ ಬಿಡುಗಡೆ ಮಾಡದೆ, ಈ ವರ್ಗದ ಜನರಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿ, ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಬಿಜಿಎಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಹಿಂದುಳಿದ ವರ್ಗದ ಜನರ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಕೃಷಿ ಅನುದಾನ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ಹಿಂದುಳಿದವರ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂ.ಗಳನ್ನು ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ 1500 ಕೋಟಿ ರೂ.ಗಳಲ್ಲಿ ಕೇವಲ 170 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.…

Read More

ತುಮಕೂರು: ಪರಿಶುದ್ಧ ರಾಜಕಾರಣ ನಡೆಸಿದ ಎಸ್.ಎಂ.ಕೃಷ್ಣ ತಮ್ಮ ಘನತೆ, ಗಾಂಭೀರ್ಯ, ತೂಕದ ಮಾತುಗಳಿಂದ ಎಲ್ಲ ಸಮುದಾಯಗಳ ಮನಸ್ಸನ್ನು ಗೆದ್ದಿದ್ದವರು ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ ಬಡವರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದ ಇವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು ಕರ್ನಾಟಕದಲ್ಲಿ ಪಾಂಚಜನ್ಯ ಮೊಳಗಿಸಿದ ಮೂಲಕ ಆ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಪಟ್ಟವನ್ನಲಂಕರಿಸಿದ ಧಿಮಂತನಾಯಕ ಎಸ್.ಎಂ.ಕೃಷ್ಣರಾಗಿದ್ದಾರೆ ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ನುಡಿದರು. ಅವರು ಜಿಲ್ಲಾ ಕ.ಸಾ.ಪ. ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಎಸ್.ಎಂ.ಕೃಷ್ಣರವರ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನುಡಿನಮನ ಸಲ್ಲಿಸಿದರು. ರಾಜಕಾರಣದಲ್ಲಿ ಯುವಕರ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಇವರು ತಾವು ಮುಖ್ಯಮಂತ್ರಿಯಾಗಿದ್ದಾಗ ಅಪಾರ ಸವಾಲುಗಳನ್ನು ಎದುರಿಸಬೇಕಾಯಿತು. ಈ ಎಲ್ಲ ಸವಾಲುಗಳನ್ನು ಜಾಣ್ಮೆಯಿಂದ ಬಗೆಹರಿಸಿ ಸರ್ಕಾರವನ್ನು ಮುನ್ನಡೆಸಿದ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ. ದೂರದ ಅಮೆರಿಕಾದಲ್ಲಿ ವಿದ್ಯಾಭ್ಯಾಸವಾಗಿದ್ದರೂ ತಮ್ಮ ಶಿಸ್ತಿನ ದಿನಚರಿಯಿಂದ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಇವರ ಮರಣ ರಾಜಕಾರಣ, ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತುಂಬಲÁರದ…

Read More

ತುಮಕೂರು: ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ಅಧಿಕಾರಿಗಳು ಭ್ರಷ್ಟಾಚಾರದ ಹಾದಿ ಹಿಡಿದಿದ್ದು, ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧುಸ್ವಾಮಿ ಆರೋಪಿಸಿದರು. ನಗರದ ತಹಸೀಲ್ದಾರ್ ಕಚೇರಿಯಲ್ಲಿ ಅಂತರ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಅಂಗವಾಗಿ ತಹಸೀಲ್ದಾರ್‌ಗೆ ತಾಲ್ಲೂಕು ಕಛೇರಿಯನ್ನು ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಮಾಡುವಂತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವಂತೆ ಆಗ್ರಹ ಪತ್ರ ಸಲ್ಲಿಸಿ ಮಾತನಾಡಿದ ಅವರು, ತಾಲೂಕು ಕೇಂದ್ರಕ್ಕೆ ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿಲ್ಲ. ದಿನನಿತ್ಯ ಕಚೇರಿಗೆ ಅಲೆದರೂ ಬಡವರ ಕೆಲಸಗಳು ಆಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ಜನಸಾಮಾನ್ಯರಿಂದ ಹಣ ಪಡೆದು ಕೆಲಸ ಮಾಡಿ ಕೊಡುತ್ತಿದ್ದಾರೆ. ನೇರವಾಗಿ ಕಚೇರಿಗೆ ಭೇಟಿ ನೀಡಿ ಕೆಲಸ ಮಾಡಿಕೊಡಲು ಮನವಿ ಸಲ್ಲಿಸಿದರೆ ಯಾವುದೇ ಕೆಲಸಗಳು ಆಗುವುದಿಲ್ಲ. ಆದರೆ, ಮಧ್ಯವರ್ತಿಗಳು ಕೈ ಹಾಕಿದ ಕೆಲಸಗಳು ಕಚೇರಿಗಳಲ್ಲಿ ಕೆಲವೇ ನಿಮಿಷಗಳಲ್ಲಿ…

Read More

ತುಮಕೂರು: ಸರ್ಕಾರ ಎಷ್ಟೇ ಅನುದಾನ, ಪ್ರೋತ್ಸಾಹ ನೀಡಿದರೂ ಜನಬೆಂಬಲ ಇಲ್ಲದೆ ಯಾವ ಕಲೆಯೂ ಬೆಳೆಯುವುದಿಲ್ಲ. ಜನರೇ ಅವುಗಳ ಶಕ್ತಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಅಭಿಪ್ರಾಯಪಟ್ಟರು. ಯಕ್ಷದೀವಿಗೆ ಸಂಸ್ಥೆಯ ದಶಮಾನೋತ್ಸವ ವರ್ಷದ ಉದ್ಘಾಟನೆಯನ್ನು ನಗರದ ಶ್ರೀಕೃಷ್ಣಮಂದಿರದಲ್ಲಿ ನೆರವೇರಿಸಿ ಅವರು ಮಾತನಾಡಿದರು. ಯಕ್ಷಗಾನ ಕಲೆಗೆ ಸುಸಂಸ್ಕೃತ ಕಲಾವಿದರ ಹಿನ್ನೆಲೆ ಇದೆ. ಅದರ ಪ್ರೇಕ್ಷಕರಲ್ಲೂ ಕಲೆಯ ಕುರಿತು ಅಪಾರ ಶ್ರದ್ಧೆ ಹಾಗೂ ಗೌರವ ಇರುತ್ತದೆ. ಅವರು ಕಾಟಾಚಾರಕ್ಕೋ ಕಾಲಹರಣಕ್ಕೋ ಬರುವವರಲ್ಲ. ಯಕ್ಷಗಾನ ಇಷ್ಟು ಜನಪ್ರಿಯವಾಗಿರುವುದಕ್ಕೆ ಕಲಾವಿದರು ಹಾಗೂ ಪ್ರೇಕ್ಷಕರ ಕೊಡುಗೆ ಹೆಚ್ಚಿನದ್ದಾಗಿದೆ ಎಂದರು. ಕಳೆದ ಏಳೆಂಟು ಶತಮಾನಗಳಿಂದ ಯಕ್ಷಗಾನ ಕಲೆ ನಿರಂತರವಾಗಿ ಬೆಳೆದು ಬಂದಿದೆ. ವಿದೇಶೀಯರಿಂದಲೂ ಮೆಚ್ಚುಗೆ ಪಡೆದಿದೆ. ಕಲೆಯೊಳಗಿನ ಅಂತಃಶಕ್ತಿ ಅದನ್ನು ಇಷ್ಟು ಎತ್ತರಕ್ಕೆ ಏರುವಂತೆ ಮಾಡಿದೆ ಎಂದರು. ಕೈಗಾರಿಕೋದ್ಯಮಿ ಹೆಚ್. ಜಿ. ಚಂದ್ರಶೇಖರ್ ಮಾತನಾಡಿ, ಯಕ್ಷಗಾನ ವಾಚಿಕ ಪ್ರಧಾನವಾದ ಕಲೆ. ಯಕ್ಷಗಾನ ಕಲಾವಿದರ ಮಾತಿನ ಮೋಡಿಗೆ ಒಳಗಾಗದವರಿಲ್ಲ. ಅನೇಕ ವಿದ್ವಾಂಸರು ನೂರಾರು ವರ್ಷಗಳಿಂದ ಯಕ್ಷಗಾನದ…

Read More

ತುಮಕೂರು : ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸನ್ನ ಸಾಧಿಸಲು ಸಾಧ್ಯವಾಗುತ್ತದೆ. ಪ್ರಾಮಾಣಿಕವಾಗಿ ನಿರಂತರ ಸಾಧನೆಯಲ್ಲಿ ತೊಡಗಿಸಿಕೊಂಡರೆ ಸಫಲತೆ ಕಾಣಬಹುದು ಎಂದು ಇಸ್ರೋದ ಮಾಜಿ ಪ್ರಾಜೆಕ್ಟ್ ಇಂಜಿನಿಯರ್ ಹಾಗೂ ವಿಜ್ಞಾನಿ ಕೆ.ಟಿ. ಸುಂದರಮೂರ್ತಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ತುಮಕೂರಿನ ಗೊಲ್ಲಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 18ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಹಳೆ ವಿದ್ಯಾರ್ಥಿಸಂಘದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನವೋದಯ ವಿದ್ಯಾಲಯದ ಕಾರ್ಯ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಹನುಮಂತ ರೆಡ್ಡಿ ಅವರು ಮಾತನಾಡಿ, ಶಾಲೆಯ ಸುಂದರ ಪರಿಸರವನ್ನು ಅಂದಗೆಡದAತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸಿದರು. ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಶ್ರೀಕಲಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಹಳೆ ವಿದ್ಯಾರ್ಥಿಗಳ 18 ನೇ ಬ್ಯಾಚಿನ ವಿದ್ಯಾರ್ಥಿಗಳು 2024 25 ನೇ ಸಾಲಿನಲ್ಲಿ ಹಮ್ಮಿಕೊಂಡ ವೃತ್ತಿ ಮಾರ್ಗದರ್ಶನ ಶಿಬಿರ, ವೈದ್ಯಕೀಯ ಶಿಬಿರ ಮೊದಲಾದ…

Read More

ತುಮಕೂರು: ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ನ್ಯಾಯವಾದಿ, ಸುಫಿಯಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್. ರಮೇಶ್ ಪ್ರತಿಪಾದಿಸಿದರು. ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ಸಮಾಜಕಾರ್ಯ ವಿಭಾಗ, ವರದಕ್ಷಿಣೆ ವಿರೋಧಿ ವೇದಿಕೆ-ಸಾಂತ್ವನ ಕೇಂದ್ರದ ವತಿಯಿಂದ ವಿಶ್ವ ವಿದ್ಯಾಲಯದ ಚಿವುಕಲ ಸಭಾಂಗಣದಲ್ಲಿ ಆಯೋಜಿಸಿದ್ದ, ಮಾನವ ಹಕ್ಕುಗಳ ದಿನಾಚರಣೆ ವಿಚಾರಗೋಷ್ಟಿ- ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಂತಿ ಸಹಬಾಳ್ವೆಗೆ ಒತ್ತು ಕೊಡುವುದಕ್ಕಿಂತ ಅಶಾಂತಿ, ಅಸಹನೆಗೆ ಒತ್ತು ನೀಡುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದೆ. ಧರ್ಮ ಜಾತಿಗಳನ್ನು ಮುಂದಿಟ್ಟುಕೊAಡು ಕಲಹಗಳಾಗುತ್ತಿವೆ. ಮಾರಣ ಹೋಮಗಳು ನಡೆಯುತ್ತಿವೆ. ಇವುಗಳ ಬಗ್ಗೆ ಯುವ ಜನತೆ ಎಚ್ಚರಿಕೆಯಿಂದ ಇರಬೇಕು ಎಂದರು. ನಮ್ಮ ಸಂವಿಧಾನವು ಘನತೆಯ ಹಕ್ಕನ್ನು ಪ್ರತಿಪಾದಿಸಿದೆ. ಆದರೆ ಒಟ್ಟಾರೆ ಸಮಾಜದಲ್ಲಿ ಅಂತಹ ವಾತಾವರಣವೇ ಕಾಣುತ್ತಿಲ್ಲ. ಆರೋಗ್ಯ ಸಮಸ್ಯೆ ಸುಧಾರಿಸಿಲ್ಲ. ಎಲ್ಲರಿಗೂ ಆರೋಗ್ಯ ವ್ಯವಸ್ಥೆ ಕೈಗೆಟುಕುತ್ತಿಲ್ಲ. ವಿದ್ಯೆ ಕಲಿತವರಿಗೆ ಉದ್ಯೋಗ ಸಿಗುತ್ತಿಲ್ಲ. ಇದರಿಂದಾಗಿ ಭ್ರಮನಿರಸನಗೊಂಡ ಯುವಕರು ಅಡ್ಡದಾರಿ…

Read More

ತುಮಕೂರು: ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರಾಗಿದ್ದ ಎಸ್.ಎಂ ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.30 ರ ಸುಮಾರಿಗೆ ನಿಧನರಾದರು. ಇವರ ನಿಧನಕ್ಕೆ ತುಮಕೂರಿನಲ್ಲಿಯೂ ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರದ ಬಿಜಿಎಸ್ ವೃತ್ತದಲ್ಲಿ ಎಸ್ ಎಂ ಕೃಷ್ಣ ಅಭಿಮಾನಿಗಳು ಸೇರಿದಂತೆ ವಿವಿಧ ಮುಖಂಡರು ಜಾತ್ಯಾತೀತವಾಗಿ ಎಸ್ ಎಂ ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ಸೂಚಿಸಿದರು. ಸಂತಾಪ ಸೂಚನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ‘ಎಸ್ ಎಂ ಕೃಷ್ಣ ಅವರು ಓರ್ವ ಅಜಾತ ಶತ್ರು ಆಗಿದ್ದರು. ಹಣಕಾಸು ಸಚಿವರಾಗಿ, ರಾಜ್ಯದ ಸಿಎಂ ಆಗಿ, ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ತುಂಬಾ ನೋವು ಉಂಟುಮಾಡಿದೆ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಂತಾಪ ಸಭೆಯಲ್ಲಿ ಮುಖಂಡರಾದ ಸಿದ್ದಲಿಂಗೇಗೌಡ, ಹನುಮಂತೇಗೌಡ, ಗಿರೀಶ್, ದೊಡ್ಡಲಿಂಗಪ್ಪ, ವಿಜಯ್ ಗೌಡ, ರವೀಗೌಡ, ಮಂಜುಳಾಶಿವರಾಜ್ ಸೇರಿದಂತೆ ಇತರೆ ಅಭಿಮಾನಿಗಳು ಇದ್ದರು.

Read More

ತುಮಕೂರು: ವಿಕಲ ಚೇತನರು ತಮ್ಮ ವಿಕಲತೆಯನ್ನು ಮೆಟ್ಟಿನಿಂತು ಆತ್ಮಬಲ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ಛಲ ರೂಢಿಸಿಕೊಳ್ಳಿ. ತಮ್ಮ ಅಂಗವೈಫಲ್ಯವನ್ನು ಸವಾಲಾಗಿ ಸ್ವೀಕರಿಸಿ ಸಾಧಿಸಿರಿ. ಈ ಪ್ರಯತ್ನದಲ್ಲಿ ಹಲವರು ಯಶಸ್ವಿಯಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಮಹಾಲಕ್ಷಿö್ಮ ಬಡಾವಣೆಯ ದಾರಿದೀಪ ಟ್ರಸ್ಟ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ದೇವರು ಒಂದನ್ನು ಕಿತ್ತುಕೊಂಡರೆ ಇನ್ನೊಂದನ್ನು ಕೊಡುತ್ತಾನೆ ಎನ್ನುವಂತೆ ವಿಕಲಚೇತನರ ಅಂಗವನ್ನು ಕಿತ್ತುಕೊಂಡರೆ ಅವರಲ್ಲಿ ಅಗಾಧವಾದ ಬುದ್ಧಿಶಕ್ತಿ, ನೈತಿಕ ಬಲವನ್ನು ನೀಡಿರುತ್ತಾನೆ. ಅದರ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ ಎಂದರು. ವಿಕಲ ಚೇತನರು ಯಾರಿಗೂ ಹೊರೆಯಲ್ಲ, ಅವರಿಂದ ಸಮಸ್ಯೆಯೂ ಇಲ್ಲ. ಆದರೆ ಎಲ್ಲಾ ಅಂಗಗಳು ಚೆನ್ನಾಗಿದ್ದು ಮನಸನ್ನು ವಿಕೃತಗೊಳಿಸಿಕೊಂಡಿರುವ ಮನೋವಿಕಲರಿಂದ ಸಮಾಜಕ್ಕೆ ಅಪಾಯವೇ ಹೆಚ್ಚು. ಅನುಕೂಲ ಇರುವವರು ವಿಕಲಚೇತನರಿಗೆ ನೆರವಾಗಬೇಕು. ತುಮಕೂರಿನಲ್ಲಿ ಸಹಾಯಾಸ್ತ ಚಾಚುವವರಿಗೆ ಕೊರತೆಯಿಲ್ಲ, ಸಹಾಯದ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸಲಿ, ಪರಸ್ಪರ ನೆರವಾಗುವ ಮೂಲಕ ಸಮಾಜದಲ್ಲಿ ಸೌಹಾರ್ದತೆ,…

Read More