ಹುಳಿಯಾರು: ಪಟ್ಟಣ ಪಂಚಾಯಿತಿಯ ೨೦೨೫-೨೬ ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷೆ ರತ್ನಮ್ಮ ಮಂಗಳವಾರ ಮಂಡಿಸಿದ್ದು ಪಟ್ಟಣ ಪಂಚಾಯಿತಿಗೆ ವಿವಿಧ ಮೂಲಗಳಿಂದ ಒಟ್ಟು ೩೩,೦೮,೬೨,೦೦೦ ರೂ ಆದಾಯ ನಿರೀಕ್ಷಿಸಲಾಗಿದ್ದು ಹಾಗೂ ೪೧, ೪೧,೨೪,೨೪೪ ರೂ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು ೪೦,೪೮,೫೧೫ ರೂಪಾಯಿ ಆಖೈರು ಶಿಲ್ಕಿನೊಂದಿಗೆ ಉಳಿತಾಯ ಬಜೆಟ್ ಮಂಡಿಸಲಾಯಿತು. ಬಜೆಟ್ ಪ್ರಮುಖ ಅಂಶಗಳು: ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ ೧೨೦ ಲಕ್ಷ ರೂಪಾಯಿ, ನೀರು ಸರಬರಾಜು ಸಂಪರ್ಕಗಳಿAದ ೩೦ ಲಕ್ಷ ರೂಪಾಯಿ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ ೫೦ ಲಕ್ಷ ರೂಪಾಯಿ, ಪರಿವೀಕ್ಷಣ ಶುಲ್ಕ- ಉದ್ಯಮ ಪರವಾನಿಗೆ-ಕಟ್ಟಡ ಪರವಾನಿಗೆ -ಖಾತಾ ನಕಲು ಮತ್ತಿತರ ಶುಲ್ಕಗಳಿಂದ ೧೦೫.೩೭ ಲಕ್ಷ ರೂಪಾಯಿ, ವೇತನ ಮತ್ತು ವಿದ್ಯುತ್ ಅನುದಾನ ಮೂಲಗಳಿಂದ ೫೪೮ ಲಕ್ಷ, ಎಸ್ಎಫ್ಸಿ ವಿಶೇಷ ಮತ್ತು ಇತರೆ ಮೂಲಗಳಿಂದ ೬೯ ಲಕ್ಷ ರೂಪಾಯಿ, ಬರಪರಿಹಾರ, ಕುಡಿಯುವ ನೀರು ಇತರೆ ಕಾಮಗಾರಿ ಅನುದಾನ ೫೫ ಲಕ್ಷ, ೧೫ ನೇ ಹಣಕಾಸು ಯೋಜ ನೆಯಿಂದ ೧೨೫ ಲಕ್ಷ, ಸೂಚನಫಲಕ, ಜಾಹೀರಾತು ತೆರಿಗೆಯಿಂದ…
Author: News Desk Benkiyabale
ತುಮಕೂರು: ದೇಶದ ಪ್ರಜೆಗಳು ಪ್ರಮಾಣಿಕವಾಗಿ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ ಮಾತ್ರ ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿ ಅಭಿವೃದ್ಧಿಯತ್ತ ಮುಂದೆ ಸಾಗುತ್ತದೆ ಎಂದು ತುಮಕೂರು ವಿಭಾಗದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಅರುಣ್ ಕುಮಾರ್ ತಿಳಿಸಿದರು. ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾ ರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಂಗಳವಾರ (ಇಂದು ) ಸಾಹೇ ವಿಶ್ವವಿದ್ಯಾ ನಿಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ ಟಿಡಿಎಸ್ ಜಾಗೃತಿ’ ಕುರಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆರಿಗೆ ಪಾವತಿಯ ವಿವಿಧ ಹಂತಗಳನ್ನು ವಿವರಿಸಿದರು. ಸಾಹೇ ವಿಶ್ವ ವಿದ್ಯಾಲಯದ ಉಪಕುಲ ಪತಿಗಳಾದ ಡಾ. ಕೆ.ಬಿ ಲಿಂಗೇಗೌಡ ರವರು ಮಾತನಾಡಿ ನಾವು ದೇಶಕ್ಕೆ ಸಲ್ಲಿಸುವ ತೆರಿಗೆಯನ್ನು ದೇಶ ಸೇವೆ ಅಂದುಕೊಳ್ಳಬೇಕು. ಹಾಗಾಗಿ ಪ್ರಜೆಗಳು ಪ್ರಮಾಣಿಕವಾಗಿ ತೆರಿಗೆಯನ್ನು ಸಲ್ಲಿಸಬೇಕು. ಆದಾಯ ತೆರಿಗೆಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮುಂದಿನ ಅಧ್ಯಯನಕ್ಕೆ ಬಹಳ ಸಹಕಾರಿಯಾಗುತ್ತದೆ ಎಂದು ತಿಳಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ವಿಭಾಗದ ಇನ್ಸ್ ಪೆಕ್ಟರ್ ಸುನಿಲ್ ಗುಪ್ತಾ, ಸಾಹೇ ವಿ.ವಿ.…
ಪಾವಗಡ: ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಸಂಘಟನೆಗಳ ವತಿಯಿಂದ ಪಟ್ಟಣದ ಕುಮಾರಸ್ವಾಮಿ ಬಡಾವಣೆ ವಾಲ್ಮೀಕಿ ದೇವಸ್ಥಾನ ಆವರಣದಲ್ಲಿ ಎಲ್ .ಜಿ. ಹಾವನೂರು ರವರ ೧೦೦ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ನಿಡುಗಲ್ಲು ವಾಲ್ಮೀಕಿ ಆಶ್ರಮದ ಪೀಠಧ್ಯಕ್ಷರಾದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ ಸ್ವಾಮೀಜಿಗಳು ಎಲ್ .ಜಿ. ಹಾವನೂರು ಒಬ್ಬ ಮಹಾನ್ ಚೇತನ ಆದರ್ಶ ವ್ಯಕ್ತಿ ಒಬ್ಬ ಕಾನೂನು ಪಂಡಿತರಾಗಿ ಅವರ ಸೇವೆ ಅನನ್ಯವಾದುದು ನಮ್ಮ ನಾಡಿಗೆ ಹಿಂದುಳಿದ ತಳ ಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕರು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದಕ್ಕೆ ಅವರ ಆಯೋಗ ನೀಡಿದ ವರದಿ ಹಿಂದುಳಿದ ವರ್ಗಗಳ ಬೈಬಲ್ ಆಗಿದೆ. ಅಂದಿನ ಮುಖ್ಯಮಂತ್ರಿ ಡಿ ದೇವರಾಜು ಅರಸು ರವರು ಸಚಿವ ಸಂಪುಟದಲ್ಲಿ ಹಾವನೂರು ವರದಿಯನ್ನು ಅನುಮೋದನೆ ಮಾಡಿ ಹಿಂದುಳಿದ ಸಮುದಾಯದಕ್ಕೆ ಕ್ರಾಂತಿಕಾರಿ ಸಾಮಾಜಿಕ ನ್ಯಾಯ ಕೊಡಿಸಿದ ಕೀರ್ತಿ ಹಾವನೂರು ರಚಿಸಿದ ಆಯೋಗ ಆಯೋಗಕ್ಕೆ ಸಲ್ಲುತ್ತದೆ . ಇಂತಹ ಮಹಾನ್ ನಾಯಕನನ್ನು ನಾವು…
ಪಾವಗಡ: ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಡಿ ೬ ವರ್ಷದ ಮಕ್ಕಳ ಮತ್ತು ಗರ್ಭಿಣಿ ಹಾಗೂ ಬಾಣಂತಿ ತಾಯಂದಿರಿಗೆ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದ ಅನುಸಾರ ಅಕ್ಕಿ, ತರಕಾರಿ, ಬೆಳೆಗಳು, ಗೋಧಿ ಸಕ್ಕರೆ ಮೊಟ್ಟೆ ಇತ್ಯಾದಿಗಳನ್ನು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಮೂಲಕ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಾಗೂ ದೈಹಿಕ ಆರೋಗ್ಯಕ್ಕೆ ಬಲ ನೀಡುವ ಸದುದ್ದೇಶದಿಂದ ಪೋಶಣ್ ಅಭಿಯಾನ ಯೋಜನೆ, ಮಾತೃಪೂರ್ಣ ಯೋಜನೆ, ಕ್ಷೀರಭಾಗ್ಯ ಹಾಗೂ ಸೃಷ್ಟಿ ಇತ್ಯಾದಿ ಯೋಜನೆಗಳನ್ನು ಪ್ರತಿಷ್ಠಾತ್ಮಕವಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಗ್ಯೂ ಅಧಿಕಾರಿಗಳ ಹಣದಾಸೆ ಮತ್ತು ಅಧಿಕಾರ ದುರುಪಯೋಗ ದಿಂದಾಗಿ ಯಾವುದೇ ಯೋಜನೆಯು ಸಂಪೂರ್ಣವಾಗಿ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ತಲುಪದೆ ಇರುವುದರಿಂದ ಸಫಲತೆ ಕಾಣ ದೆ ಸರ್ಕಾರದ ಹಣ ಪೋಲಾಗುತ್ತಿರುವುದು ವಿಪರ್ಯಾ ಸವೆ ಸರಿ. ಇದಕ್ಕೆ ನಿದರ್ಶನ ಪಾವಗಡ ಶಿಶುಅಭಿವೃದ್ಧಿ ಯೋಜನೆಯ ಅಕ್ರಮಗಳ ಕರ್ಮಕಾಂಡವೇ ಸಾಕ್ಷಿ ಆಗಿರುತ್ತದೆ. ಪಾವಗಡ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಸುಮಾರು ೩೩೬ ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಟಿಕ…
ಕೊರಟಗೆರೆ: ಮಹಿಳೆಯರು ಸ್ವಾವಲಂಬಿಗಳಾದರೆ ಸಮಾಜವು ಶಕ್ತಿವಂತಾಗುತ್ತದೆ ಮಹಿಳೆಯರಿಗೆ ಅವಕಾಶ ಕಲ್ಪಿಸಿಲು ನಮ್ಮ ಆಕ್ವಿನ್ ಪೈನಾನ್ಸಿಯಲ್ ಸೊಲ್ಯೂಷನ್ಸ್ ಸಂಸ್ಥೆ ಸದಾ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಮೂಲಕ ನಿಮ್ಮೊಂದಿಗೆ ಇರುತ್ತದೆ ಎಂದು ಅಕ್ವಿನ್ ಸಂಸ್ಥೆಯ ಉಪಾದ್ಯಕ್ಷರಾದ ರೇಷ್ಮಾಗೋಯಲ್ ತಿಳಿಸಿದರು. ಅವರು ಕೊರಟಗೆರೆ ಪಟ್ಟಣದಲ್ಲಿ ಉಚಿತ ಕಂಪ್ಯೋಟರ್ ಮತ್ತು ಹೊಲಿಗೆ ತರಬೇತಿ ನೀಡು ತ್ತಿರುವ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆ ಯಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚೆಣೆ ಮತ್ತು ತರಬೇತಿ ಪಡೆದ ೪೦೦ ಫಲಾನುಭವಿಗಳಿಗೆ ಪ್ರಮಾ ಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತ ನಾಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸದಾ ಕ್ರೀಯಾಶೀಲರಾಗಿ ಉದ್ಯಮಶೀಲತೆಯನ್ನು ಮೈಗೊಡಿಸಿಕೊಳ್ಳಬೇಕು, ಸಮಾಜದ ಎಲ್ಲಾ ಕ್ಷೇತ್ರಗ ಳಲ್ಲಿಯೂ ಮಹಿಳೆಯು ಸಾಧನೆಗೈಯುವ ಮೂಲಕ ಹೆಣ್ಣು ಅಬಲೆಯಲ್ಲ ಸಬಲೆ ಎಂದು ತಿಳಿಸಿದರು. ಬೆಂಗಳೂರು ಅಕ್ವಿನ್ ಫೈನಾನ್ಸಿಯಲ್ ಸೊಲ್ಯೋ ಷನ್ ಸಂಸ್ಥೆಯ ಅಧ್ಯಕ್ಷ ವಿಜಯ್ಕುಮಾರ್ ಮಾತ ನಾಡಿ, ಮಹಿಳೆಯರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಯ ಮುನ್ನಡೆಗೆ ತರತಕ್ಕದ್ದು ಪುರುಷರ ಕೆಲಸವಾಗಿದೆ, ಕೊರಟಗೆರೆಯಲ್ಲಿ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಮೂಲಕ…
ತುಮಕೂರು: ನಗರದ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಅಗಳಕೋಟೆ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಎಸ್ಎಸ್ಐಟಿ ಕ್ಯಾಂಪಸ್, ಮರಳೂರು, ತುಮಕೂರು. ಈದಿನ ಡಾಟ್ ಕಾಮ್ ಹಾಗೂ ಶ್ರೀ ಸಿದ್ಧಾ ರ್ಥ ಪ್ರಥಮ ದರ್ಜೆ ಕಾಲೇಜು (ಪತ್ರಿಕೋದ್ಯಮ ವಿಭಾಗ) ಇವರ ಸಹಯೋಗದಲ್ಲಿ ಮಾರ್ಚ್ ೨೭ ಮತ್ತು ೨೮ರಂದು “ಡಿಜಿಟಲ್ ಮಾಧ್ಯಮ: ಸವಾಲು ಮತ್ತು ಸಾಧ್ಯತೆಗಳು” ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಎಸ್ಎಸ್ಐಟಿ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ. ಗುರುವಾರ ಬೆಳಗ್ಗೆ ೧೦.೦೦ಕ್ಕೆ ನಡೆಯುವ ಕಾರ್ಯಾ ಗಾರವನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರು ಹಾಗೂ ಸಾಹೇ ವಿವಿಯ ಕುಲಾಧಿಪತಿಗಳಾದ ಡಾ. ಜಿ.ಪರಮೇಶ್ವರ ಅವರು ಉದ್ಘಾಟನೆ ಮಾಡಲಿದ್ದಾರೆ. ತುಮಕೂರು ಜಿಲ್ಲಾಧಿಕಾರಿಯಾದ ಶ್ರೀಮತಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕ ರ್ತರಾದ ಡಿ.ಉಮಾಪತಿ ಅವರು “ಉತ್ತಮ ಪತ್ರಕ ರ್ತರಾಗುವುದು ಹೇಗೆ..? ಮತ್ತು ತಯಾರಿ” ವಿಷಯ ಕುರಿತು ಮಾತನಾಡಲಿದ್ದಾರೆ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ…
ತುಮಕೂರು: ಸಮಾಜಮುಖಿ ನಾಯಕರಾದ ಎಲ್.ಜಿ.ಹಾವನೂರು ಅವರು ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದರು. ದೂರದೃಷ್ಟಿ ಚಿಂತನೆಯ ಅವರು ಹಿಂದುಳಿದ ವರ್ಗ, ಶೋಷಿತ ವರ್ಗಗಳಿಗೆ ಶಕ್ತಿ ತುಂಬಿದ್ದರು ಎಂದು ಹೇಳಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು, ಹಾವನೂರ ಕೊಡುಗೆ ಸ್ಮರಿಸಿದರು. ವಾಲ್ಮೀಕಿ ಪತ್ತಿನ ಸಹಕಾರ ಸಂಘ, ಜಿಲ್ಲಾ ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಾಲ್ಮೀಕಿ ವಿದ್ಯಾವರ್ಧಕ ಸಂಘ, ಪ್ರಗತಿಪರ ವಕೀಲರ ವೇದಿಕೆ, ಶಬರಿ ಮಹಿಳಾ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಮಂಗಳವಾರ ನಗರದ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಎಲ್.ಜಿ.ಹಾವನೂರರ ನೂರನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಮುಂದಿನ ವರ್ಷ ಹಾವನೂರರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸೋಣ ಎಂದರು. ಮುಖ್ಯಮAತ್ರಿ ದೇವರಾಜ ಅರಸು ಸರ್ಕಾರ ಸ್ಥಾಪಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರಾಗಿದ್ದ ಎಲ್.ಜಿ.ಹಾವನೂರು ಅವರು ಕರ್ನಾಟಕದ ಹಿಂದುಳಿದ ವರ್ಗಗಳ ಅಧ್ಯಯನಾತ್ಮಕ ವರದಿ ರಚಿಸಿದ್ದರು. ಈ ವರದಿಯು ಹಿಂದುಳಿದ ವರ್ಗಗಳ ಒಂದು ವೈಜ್ಞಾನಿಕ ಅಧ್ಯಯನ ಎಂದು ಸುಪ್ರೀಂ ಕೋರ್ಟ್ನ ಪ್ರಶಂಸೆಗೂ…
ತುಮಕೂರು: ಹದಿನೆಂಟನೆಯ ಶತಮಾನದಲ್ಲೇ ಕಲ್ಯಾಣರಾಜ್ಯದ ಪರಿಕಲ್ಪನೆಯನ್ನು ನನಸಾಗಿಸಿದ ದಿಟ್ಟ ಆಡಳಿತಗಾರ್ತಿ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಬಲೀಕರಣದ ಅತ್ಯುತ್ತಮ ಮಾದರಿ ಎಂದು ಲೇಖಕ, ವಿದ್ವಾಂಸ ಆಶುತೋಷ್ ಅದೋ ನಿ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವಶಾಸ್ತç, ರಾಜ್ಯಶಾಸ್ತç, ಸಾರ್ವಜನಿಕ ಆಡಳಿತ, ಕನ್ನಡ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳು ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ‘ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ ಮತ್ತು ಸಾಧನೆಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಹಲ್ಯಾಬಾಯಿ ಕಾಲದಲ್ಲಿ ಮಾಳ್ವ ಪ್ರದೇಶವು ಭಾರತದ ಅತ್ಯಂತ ಶ್ರೀಮಂತ ರಾಜ್ಯವೆಂದು ಗುರು ತಿಸಿಕೊಂಡಿತ್ತು. ತನ್ನ ಪತಿ ಹಾಗೂ ಮಗನನ್ನು ಅಕಾಲದಲ್ಲಿ ಕಳೆದುಕೊಂಡ ಆಕೆ ಅನೇಕ ತೊಂದರೆ ಗಳನ್ನು ಮೆಟ್ಟಿನಿಂತು ದಕ್ಷ ಆಡಳಿತ ನೀಡಿದಳು. ಏಕಾಂಗಿ ಹೋರಾಟ ಮಾಡಿ ಸುಖೀರಾಜ್ಯವನ್ನು ಸ್ಥಾಪಿಸಿದಳು ಎಂದು ವಿವರಿಸಿದರು. ಅಸಚ್ಚಾರಿತ್ರö್ಯವಿಲ್ಲದೆ ಯಾವುದೇ ರಾಷ್ಟç ಎದ್ದುನಿ ಲ್ಲದು. ಯಾರೇ ಆಡಳಿತಗಾರರು ಶ್ರೇಷ್ಠರು ಎನಿಸಿಕೊ ಳ್ಳಲಾರರು. ಆದರೆ ಅಹಲ್ಯಾಬಾಯಿ ನೈತಿಕವಾಗಿ ಅದ್ಭುತ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು. ಅವರ ವೈಯಕ್ತಿಕ ಬದುಕು ಪಾರದರ್ಶಕವಾಗಿತ್ತು.…
ಚಿ.ನಾ.ಹಳ್ಳಿ : ತಾಲೂಕಿನ ಹಂದನಕೆರೆ ಹೋಬಳಿಯ ಬೆಳಗುಲಿ ಹೊನ್ನಮರಡಿ ಶ್ರೀ ರಂಗನಾ ಥಸ್ವಾಮಿ ಜಾತ್ರಾ ಮಹೋತ್ಸವ ಏ ೬ ರಿಂದ ೧೫ರವರೆಗೆ ನಡೆಯಲಿದೆ. ಏ. ೬ ರಂದು ಧ್ವಜಾರೋಹಣ, ಹೊನ್ನಮರಡಿ ಬೆಟ್ಟದಲ್ಲಿ ಕಳಸ ಸ್ಥಾಪನೆ, ೭ ರಂದು ಹೊನ್ನಮರಡಿ ಬೆಟ್ಟದಲ್ಲಿ ಅನ್ನ ದಾಸೋಹ, ಹನುಮಂತೋತ್ಸವ, ೮ ರಂದು ಗರುಡೋತ್ಸವ, ೯ ರಂದು ಸರ್ಪೋತ್ಸವ, ೧೦ ರಂದು ಅಶ್ವರೋಹಣ, ೧೧ ರಂದು ಧ್ವಜರೋಹಣೋತ್ಸವ, ನೊರೊಂದಡೆ ಸೇವೆ, ೧೨ ರಂದು ಬೆಳಗುಲಿ ಗ್ರಾಮದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಅಂದು ರಾತ್ರಿ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನ , ರಸಮಂಜರಿ ಹಮ್ಮಿಕೊಳ್ಳಲಾಗಿದೆ. ೧೩ ರಂದು ಆಳು ಪಲ್ಲಕ್ಕಿ ಉತ್ಸವ, ೧೪ ರಂದು ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕೊನೆಯ ದಿನವಾದ ೧೫ ರಂದು ಗಂಗಸ್ನಾನ, ಅಗ್ನಿ ಕೊಂಡೋತ್ಸವ, ಅವಭೃತ ಸ್ನಾನ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಕೊರಟಗೆರೆ: ಹುಟ್ಟುಹಬ್ಬಗಳನ್ನು ಸಾರ್ವಜನಿಕ ಸೇವೆಯನ್ನಾಗಿ ಆಚರಿಸಿದರೆ ಅರ್ಥ ಪೂರ್ಣವಾಗಿರುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ತಿಳಿಸಿದರು. ಅವರು ತಮ್ಮ ೫೬ ನೇ ಹುಟ್ಟು ಹಬ್ಬದ ಪ್ರಯುಕ್ತ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಗೂ ಕೋಳಾಲ ಹೋಬಳಿಯ ಹೊಸಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಪಾಠಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪಠ್ಯದ ಸಲಕರಣೆಗಳನ್ನು ವಿತರಿಸಿ ಮಾತನಾಡಿ ನನ್ನ ಹುಟ್ಟು ಹಬ್ಬವನ್ನು ನಮ್ಮ ಸ್ನೇಹಿತರ ಜೊತೆಗೂಡಿ ಸಾರ್ವಜನಿಕ ಸೇವೆಯನ್ನಾಗಿ ಮಾಡಿಕೊಂಡಿರುವುದು ಸಂತೋಷ ತಂದಿದೆ, ನಮ್ಮ ಕೊರಟಗೆರೆ ಪಟ್ಟಣದ ಬಸ್ಟಾಂಡ್ ಗೆಳೆಯರ ಬಳಗದ ಬೇಡಿಕೆಯಂತೆ ಸಾರ್ವಜನಿಕರಿಗೆ ಕುಡಿಯುವ ನೀರಿನ ಘಟಕವನ್ನು ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಂದ ಹಾಕಿಸಿಕೊಡಲಾಗುವುದು ಮುಂದಿನ ದಿನಗಳಲ್ಲೂ ಸಹ ಸಾರ್ವಜನಿಕ ಸೇವೆಗೆ ಬದ್ದನಾಗಿರುತ್ತೇನೆ. ಮಾಜಿ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಪ್ರೇಮಮಹಾಲಿಂಗಪ್ಪ ಮಾತನಾಡಿ ಹಲವು ವರ್ಷಗಳಿಂದ ನಮ್ಮ ಕುಟುಂಬದವರು ಸಾರ್ವಜನಿಕ ಸೇವೆಯಲ್ಲಿ ತೋಡಗಿಸಿಕೊಂಡಿದ್ದೇವೆ ಸರ್ಕಾರಿ ಶಾಲಾ ಮಕ್ಕಳಿಗೆ ಜನಪ್ರತಿನಿಧಿಗಳಾದ ನಾವುಗಳು ಈ ರೀತಿಯ…