ತುಮಕೂರು: ಮಾನಸಿಕ ಏಕತೆಯ ತತ್ತ÷್ವದಿಂದ ರಾಮಾಯಣ ಮಹಾಕಾವ್ಯ ವಿಶ್ವ ಕಥನವಾಯಿತು. ಇವತ್ತಿಗೆ ಬೇಕಾದ ರಾಜಕೀಯ ನೈತಿಕತೆಯ ಪಾಠವನ್ನು, ಜೀವನ ಮೌಲ್ಯವನ್ನು ರಾಮಾಯಣ ಸಾರುವುದರಿಂದ ‘ರಾಮಾಯಣ ಮರುಹುಟ್ಟುಗಳ ಮಹಾಕಾವ್ಯ’ವಾಗಿ ನಮಗೆಲ್ಲ ಕಾಣುತ್ತದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗ ಹಾಗೂ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಜಂಟಿಯಾಗಿ ಹಮ್ಮಿಕೊಂಡಿರುವ ‘ರಾಮಾಯಣಂಗಳ್: ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಬಗೆ’ ಎಂಬ ಪರಿಕಲ್ಪನೆಯ ಎರಡು ದಿನಗಳ ‘ಸಹಿತ-2’ ಸಾಹಿತ್ಯೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಅಧಿಕಾರಕ್ಕೇರಲು ರಾಮನ ಹೆಸರನ್ನು ಬಳಸುತ್ತಿರುವ ಸಂದರ್ಭವಿದು. ರಾಮಾಯಣ ಗರ್ಭಗುಡಿಯ ಕಾವ್ಯವೆಂಬ ತಪ್ಪುಗ್ರಹಿಕೆ ಮಾಯವಾಗಬೇಕು. ಮಹಾಕಾವ್ಯಗಳು ರಾಜಕೀಯ ಅಸ್ತçವಾದಾಗ ಅದರ ಅಸ್ಮಿತೆ ನಾಶವಾಗುತ್ತದೆ. ರಾಮಾಯಣ ಅಧ್ಯಯನಶೀಲ ಕಾವ್ಯವಾಗಿ ವಾಸ್ತವತೆ ಮತ್ತು ಕಲ್ಪಿತ ಕಥೆಗಳ ಸಮನ್ವಯವಾಗಿದೆ. ಆತ್ಮಸ್ಥೆöÊರ್ಯದ ಮಹಾಕಾವ್ಯ ರಾಮಾಯಣದಲ್ಲಿ ಹತಾಶೆಯಿಲ್ಲ. ಸಾಂಸ್ಕೃತಿಕ ಘಟಕಗಳನ್ನು, ಸಂಸ್ಕೃತಿಯ ಚಲನಶೀಲತೆ, ಅಧಿಕಾರ-ಭೋಗದ ನಿರಸನದ ಸ್ಥಿತ್ಯಂತರಗಳನ್ನು ಕಾಣಬಹುದು ಎಂದು ತಿಳಿಸಿದರು. ಸಮಕಾಲೀನ ಸಂದರ್ಭದಲ್ಲಿರುವ ಪ್ರಸ್ತುತತೆಯಿಂದ ರಾಮಾಯಣದ ಕಥನವನ್ನು…
Author: News Desk Benkiyabale
ತುಮಕೂರು: ನಗರದಲ್ಲಿ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದ್ದು, ಒಂದೇ ರಾತ್ರಿ ಸುಮಾರು 6 ಅಂಗಡಿಗಳ ಬಾಗಿಲು ಮೀಟಿ ಸರಣಿ ಕಳ್ಳತನ ಮಾಡಿರುವ ಘಟನೆ ನಡೆದಿದೆ. ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸುಮಾರು 6 ಅಂಗಡಿಗಳಲ್ಲಿ ತಡರಾತ್ರಿ ಕಳ್ಳರು ತಮ್ಮ ಕೈಚಳ ತೋರಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ನಗದು ಹಾಗೂ ಇತರೆ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ನಗರದ ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿರುವ ಆಧೀಶ್ವರ ಮಾರ್ಕೆಟಿಂಗ್, ಬಿ.ಹೆಚ್. ರಸ್ತೆಯಲ್ಲಿರುವ ಅಪೊಲೋ ಮೆಡಿಕಲ್ ಸ್ಟೋರ್, ಉಡ್‌ಲ್ಯಾಂಡ್, ಕಾಂತಿಸ್ವೀಟ್ಸ್, ಅಥರ್ವ ಮೆಡಿಸ್ಕಿನ್ ಕ್ಲಿನಿಕ್ ಸೇರಿದಂತೆ 6 ಅಂಗಡಿಗಳ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ಗಲ್ಲಾಪೆಟ್ಟಿಗೆ ಒಡೆದು ನಗದು ಹಾಗೂ ಅಂಗಡಿಯಲ್ಲಿದ್ದ ಇತರೆ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಆಧೀಶ್ವರ ಮಾರ್ಕೆಟಿಂಗ್ ಅಂಗಡಿ ಮಳಿಗೆಯಲ್ಲಿ 42 ಸಾವಿರಕ್ಕೂ ಅಧಿಕ ಹಾಗೂ ಅಪೊಲೋ ಮೆಡಿಕಲ್ ಸ್ಟೋರ್‌ನಲ್ಲಿ 62 ಸಾವಿರಕ್ಕೂ ಅಧಿಕ ನಗದನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಅಂಗಡಿಗಳ ಷೆಟರ್ ಮೀಟಿ ಒಳನುಗ್ಗಿರುವ ಕಳ್ಳರು ಅಂಗಡಿಗಳ ಒಳಗಿದ್ದ…
ತುಮಕೂರು: ಭಾರತ ಸರಕಾರದ ಕ್ರೀಡಾ ಇಲಾಖೆಗೆ ನೋಂದಾಯಿತವಾಗಿರುವ ಭಾರತ್ ಒಲಂಪಿಕ್ ಸಂಸ್ಥೆಗೆ ಸದಸ್ಯ ಸಂಸ್ಥೆಯಾಗಿರುವ ಯೋಗಾಸನ ಭಾರತವು ಇದೇ ಡಿಸೆಂಬರ್ 12 ರಿಂದ 15 ರವರೆಗೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಐದನೆಯ ಹಿರಿಯರ ರಾಷ್ಟಿçÃಯ ಯೋಗಾಸನ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ಧಲಿಂಗ ಮಹಢಸ್ವಾಮೀಜಿ ತಿಳಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಎಸ್ ಜಿ ಎಸ್ ಅಂತರರಾಷ್ಟಿçÃಯ ಯೋಗ ಪ್ರತಿಷ್ಠಾನ ವಿದ್ಯಾಲಯ ಇವರುಗಳ ಸಹಯೋಗದೊಂದಿಗೆ ಡಿಸೆಂಬರ್ 12ರಿಂದ 15 ರವರೆಗೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಸುತ್ತಿದೆ. ಈ ಸ್ಪರ್ಧೆಗೆ 30 ರಾಜ್ಯ ತಂಡಗಳೊAದಿಗೆ ಒಟ್ಟು 32 ತಂಡಗಳಿAದ 800ಕ್ಕೂ ಹೆಚ್ಚು ಕ್ರೀಡಾಪಟುಗಳು, 80ಕ್ಕೂ ಹೆಚ್ಚು ತೀರ್ಪುಗಾರರು ಹಾಗೂ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಯೋಗಾಸಂಸ್ಥೆಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದರು. ತುಮಕೂರು ನಗರದಲ್ಲಿ ಇಂತಹ ಬೃಹತ್ ಯೋಗಾಸನ ಸ್ವರ್ಧೆ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.ಒಳ್ಳೆಯ ಆರೋಗ್ಯದ ದೃಷ್ಟಿಯಿಂದ ಯೋಗಾಸನ ಒಳ್ಳೆಯದು. ಅಂತರರಾಷ್ಟಿçÃಯ ಮಟ್ಟದಲ್ಲಿ ಯೋಗಾಸನ…
ತುಮಕೂರು: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನೀಡುವ ರಾಷ್ಟಿçÃಯ ‘ವೀರಭದ್ರ ಪ್ರಶಸ್ತಿ’ಯನ್ನು ಈ ತಿಂಗಳ 12ರಂದು ಕೇಂದ್ರ ಜಲಶಕ್ತ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ವೇದಿಕೆಯ ಕಾರ್ಯದರ್ಶಿ ಎಸ್.ಸೋಮಶೇಖರ ಗಾಂಧಿ ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ದೆಹಲಿಯ ಭಾರತ್ ಮಂಟಪ ಸಭಾಂಗಣದಲ್ಲಿ ಈ ತಿಂಗಳ 12ರ ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಚಿವ ವಿ.ಸೋಮಣ್ಣ ಅವರಿಗೆ ವೀರಭದ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜ್ಯೋಷಿ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯದ ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು. ಇದೂವರೆಗೆ ವೀರಭದ್ರ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಸಿ ಸಂಸದ, ಕೆಎಲ್‌ಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ನೀಡಿ ಗೌರವಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ ಸುಮಾರು 40 ವರ್ಷ ಕಾಲ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಈಗ ಕೇಂದ್ರ…
ತುಮಕೂರು: ಭಾಷಾಂತರ, ರೂಪಾಂತರಗಳನ್ನು ಕಂಡಿರುವ ರಾಮಾಯಣದಲ್ಲಿ ಭಾವ ಸತ್ಯವೇ ಕಾವ್ಯ ರೂಪವಾಗಿ ವಾಲ್ಮೀಕಿಯ ಕಲ್ಪನೆಯಲ್ಲಿ ರಸವತ್ತಾಗಿ, ಕವಿಯ ಧ್ವನಿಯಾಗಿ ಮಹಾಕಾವ್ಯವಾಗಿ ಮೂಡಿಬಂದಿದೆ ಎಂದು ಶತಾವಧಾನಿ ಡಾ. ಆರ್. ಗಣೇಶ್ ತಿಳಿಸಿದರು. ತುಮಕೂರು ವಿವಿಯ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗವು ಹಾಗೂ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಾಲ್ಮೀಕಿ ರಾಮಾಯಣದ ಕಾವ್ಯ ಸೌಂದರ್ಯ’ ಕುರಿತು ಮಾತನಾಡಿದರು. ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಸಂತೋಷ, ಸತ್ಪೆçÃರಣೆ, ರಸ, ಧ್ವನಿಯ ಔಚಿತ್ಯ, ಸಮಾಧಾನ, ಧೈರ್ಯ, ಸಂಕಟ, ಶೋಕ, ಕುಟುಂಬ ವಿಸ್ತರಣೆ, ಕಾರುಣ್ಯ, ಕೃಪೆ, ಪ್ರಕೃತಿಯ ಸೌಂದರ್ಯ, ಉತ್ಪೆçÃಕ್ಷೆ, ಕಾಲಗಳ ವರ್ಣನೆ, ಜೀವನ ಮೌಲ್ಯ, ಕಲೆ, ಆನಂದವನ್ನು ಕಾಣಬಹುದು ಎಂದು ಹೇಳಿದರು. ಹನುಮಂತ ಸೀತೆಗೆ ತುಂಬುವ ಧೈರ್ಯ ಬದುಕಿನ ದೃಷ್ಟಿಯನ್ನು ಸಕಾರಾತ್ಮವಾಗಿ ಕಾಣಲು ಸಹಕಾರಿಯಾಗುತ್ತದೆ. ರಾಮಾಯಣ ಕಾವ್ಯದ ದೃಷ್ಟಿಯಲ್ಲಿ ಸಮಾಜವನ್ನು ಬೆಸೆದು ಬಾಳುವ ರಾಮನ ಸರಳತೆಯನ್ನು ಕಾಣಬಹುದು. ನವ್ಯಕಾವ್ಯಗಳಲ್ಲಿ ಕಂಡುಬರುವ ನಿಗೂಢತೆ ರಾಮಾಯಣ ಕಾವ್ಯದಲ್ಲಿ ಇಲ್ಲದಿರುವುದರಿಂದ ಈ ಕಾವ್ಯವನ್ನು ಆಲಿಸಿದಾಗ ಧ್ವನಿಯಾಗುತ್ತದೆ,…
ತುಮಕೂರು: ನಗರದಲ್ಲಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಆದರೆ ನಿಲ್ದಾಣದ ಎದುರು ಅಶೋಕ ರಸ್ತೆಯ ಸಂಚಾರ ವ್ಯವಸ್ಥೆ ಸುಗಮವಾಗಿಲ್ಲ, ಸುರಕ್ಷಿತವಾಗಿಯೂ ಇಲ್ಲ. ರಸ್ತೆಯಲ್ಲಿ ಆಟೋಗಳು, ಖಾಸಗಿ ವಾಹನಗಳ ಅಡ್ಡಾದಿಡ್ಡಿ ಸಂಚಾರ, ರಸ್ತೆಬದಿ ಅವೈಜ್ಞಾನಿಕವಾಗಿ ವಾಹನ ನಿಲುಗಡೆ ಮಾಡುವುದರಿಂದ ಇಲ್ಲಿ ಸಂಚಾರ ಮಾಡುವುದು ನರಕಯಾತನೆಯಾಗಿದೆ. ಬಸ್‌ನಿಲ್ದಾಣದ ಎದುರು ಅಶೋಕ ರಸ್ತೆಯ ಎರಡೂ ಬದಿಯಲ್ಲಿ ದಿನವಿಡೀ ವಾಹನಗಳು ಭರ್ತಿಯಾಗಿ ನಿಂತಿರುತ್ತವೆ. ಈ ರಸ್ತೆಯ ಅಂಗಡಿಗಳಿಗೆ ಬರುವ ಗ್ರಾಹಕರು ತಮ್ಮ ವಾಹನ ನಿಲುಗಡೆ ಮಾಡಲು ಜಾಗವೇ ಇಲ್ಲದಂತಾಗಿದೆ. ಇದರಿಂದ ಇಲ್ಲಿನ ವ್ಯಾಪಾರಸ್ಥರ ವ್ಯವಹಾರಕ್ಕೂ ತೊಂದರೆಯಾಗಿದೆ. ಗ್ರಾಹಕರು ದೂರದಲ್ಲೆಲ್ಲೂ ವಾಹನ ನಿಲ್ಲಿಸಿ ಬರುವಂತಾಗಿದೆ. ರಸ್ತೆಬದಿ ಮಾತ್ರವಲ್ಲದೆ, ಫುಟ್‌ಪಾತ್ ಮೇಲೂ ವಾಹನ ನಿಲುಗಡೆ ಮಾಡಿ ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗಿದೆ. ತಮ್ಮ ವೃತ್ತಿ, ವ್ಯವಹಾರಗಳಿಗೆ ಬೆಂಗಳೂರು ಮತ್ತಿತರ ಊರುಗಳಿಗೆ ನಿತ್ಯ ಹೋಗಿಬರುವವರು ಈ ರಸ್ತೆ ಬದಿ, ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ. ಹೀಗಾಗಿ ಇಲ್ಲಿನ ಅಂಗಡಿಗಳಿಗೆ ವ್ಯವಹಾರಕ್ಕೆ ಬರುವವರಿಗೆ ವಾಹನ ನಿಲುಗಡೆ ಮಾಡಲು ಜಾಗ ಇರುವುದಿಲ್ಲ. ಬಸ್ ಪ್ರಯಾಣಿಕರ…
ತುಮಕೂರು: ಚುಮು ಚುಮು ಚಳಿಯಲ್ಲಿ, ಹಗಲು ಅಲ್ಪ ರಾತ್ರಿ ದೀರ್ಘವಾಗಿದ್ದರೂ ಬೆಳಿಗ್ಗೆ ಎದ್ದೇಳಲೂ ಮನಸ್ಸಾಗದಿದ್ದರೂ ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆಗೆ ತುಮಕೂರು ಜಿಲ್ಲೆಯ ನಾನಾ ಶಾಲೆಗಳಿಂದ ಮಕ್ಕಳು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೆರೆದಿದ್ದರು. ನಸುಕಿನಲ್ಲಿ ಮರೆಯಾದ ನಕ್ಷತ್ರಗಳೆಲ್ಲ ಭುವಿಗಿಳಿದು ಎಂಜಿನಿಯರಿAಗ್ ಕಾಲೇಜಿಗೆ ಆವರಣಕ್ಕೆ ನೇರ ಬಂದಿಳಿದವೇನೋ ಎನ್ನುವ ರೀತಿಯಲ್ಲಿ ಮಕ್ಕಳು ಚಿತ್ರ ಬಿಡಿಸಲು ತಯಾರಾಗಿ ಬಂದಿದ್ದು, ಕಣ್ಣಿಗೆ ಹಬ್ಬ ಉಂಟು ಮಾಡಿತ್ತು. ಈ ದೃಶ್ಯ ಕಂಡು ಬಂದಿದ್ದು, ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ. ಶಿಕ್ಷಣ ಭೀಷ್ಮ ದಿವಂಗತ ಡಾ. ಹೆಚ್.ಎಂ. ಗಂಗಾಧರಯ್ಯನವರ ಸ್ಮರಣಾರ್ಥ ತುಮಕೂರು ಜಿಲ್ಲೆಯ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆ ಕಾರ್ಯಕ್ರಮವನ್ನು ಅಂತಾರಾಷ್ಟೀಯ ಚಿತ್ರಕಲಾವಿದರಾದ ಸೂರ್ಯನಾರಾಯಣ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಸೃಷ್ಟಿಕರ್ತ ಪ್ರಕೃತಿಯನ್ನು ಸೃಷ್ಟಿಸಿದ್ದಾನೆ. ಸೃಷ್ಟಿಯಲ್ಲಿನ ಅಂದವನ್ನು ಚಿತ್ರಿಸಲು ಕಲಾವಿದರನ್ನು ಸೃಷ್ಟಿಸಿದ್ದಾನೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾಗಿ…
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆ ಹೋಬಳಿ ದೊಡ್ಡರಾಂಪುರ ಗ್ರಾಮದಲ್ಲಿ ಅಮಾಯಕ ಕುಟುಂಬವೊAದು ಊಟ, ಬಟ್ಟೆಯಿಲ್ಲದೆ ಸೋರುವ ಮನೆಯಲ್ಲೇ ವಾಸ ಮಾಡುತ್ತಿತ್ತು, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಇದನ್ನು ನೋಡಿದ ಜಿಲ್ಲಾಧಿಕಾರಿಗಳು ಆ ಕುಟುಂಬಕ್ಕೆ ಬೇಕಾದ ಸೌಲಭ್ಯ ಒದಗಿಸುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ. ಇದನ್ನು ಮನಗಂಡ ತುಮಕೂರಿನ ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮತ್ತು ಅವರ ತಂಡ ದೊಡ್ಡರಾಂಪುರ ಗ್ರಾಮಕ್ಕೆ ತೆರಳಿ ಕುಟುಂಬದ ಸಮಸ್ಯೆ ಆಲಿಸಿ ನೆರವಾಗುವ ಭರವಸೆ ನೀಡಿದ್ದಾರೆ. ಮತ್ತೆ ಗ್ರಾಮಕ್ಕೆ ತೆರಳಿ ದೊಡ್ಡಮ್ಮ ಅವರ ಕುಟುಂಬಕ್ಕೆಅಗತ್ಯ ಆಹಾರ ಸಾಮಗ್ರಿ, ಬಟ್ಟೆ ಸೇರಿದಂತೆ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗುಂಬ ವೆಂಕಟೇಶ್ ಆ ಬಡ ಕುಟುಂಬದ ಲ್ಲಿ ವಿಕಲಚೇತನರು, ಬುದ್ಧಿಮಾಂದ್ಯರಿದ್ದಾತೆ, ಆ ಕುಟುಂಬಕ್ಕೆ ಜಿಲ್ಲಾಧಿಕಾರಿಗಳು ನೆರವಾಗಿರುವುದು ಶ್ಲಾಘನೀಯ ಕಾರ್ಯ, ಸೋರುತಿದ್ದ ಮನೆಗೆ ಶೀಟ್ ಹಾಕಿಸಿರುವುದು, ರೇಷನ್ ಕಾರ್ಡ್ ಕೊಟ್ಟಿರುವುದು, ಪಿಂಚಣಿ ಸೌಲಭ್ಯ ಒದಗಿಸಿರುವುದು, ಮನೆಗೆ ಗ್ಯಾಸ್ ಒದಗಿಸಿರುವುದು ಮೆಚ್ಚುವ…
ತುಮಕೂರು: ತುಮಕೂರು ಜಿಲ್ಲೆಗೆ ಮರಣ ಶಾಸನವಾಗಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಯನ್ನು ಸರಕಾರ ಕೂಡಲೇ ನಿಲ್ಲಿಸಬೇಕು. ಜಿಲ್ಲೆಯ ಶಾಸಕರು ಪಕ್ಷಭೇಧ ಮರೆತು ಚಳಿಗಾಲದ ಅಧಿವೇಶನದಲ್ಲಿ ಇದರ ವಿರುದ್ದ ದ್ವನಿ ಎತ್ತಬೇಕೆಂದು ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ತುಮಕೂರು ಜಿಲ್ಲಾ ಘಟಕದವತಿ ಯಿಂದ ಪ್ರತಿಭಟನಾ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಲಾಯಿತು. ಸಂಯುಕ್ತ ಹೋರಾಟ-ಕರ್ನಾಟಕದ ಸಂಚಾಲಕ ಸಿ.ಯತಿರಾಜು,ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು,ಪ್ರಾAತ ರೈತ ಸಂಘದ ಬಿ.ಉಮೇಶ್,ಎಐಕೆಎಸ್‌ನ ಗಿರೀಶ್,ಎಐಕೆಕೆಎಸ್‌ನ ಎಸ್.ಎನ್.ಸ್ವಾಮಿ ಹಾಗೂ ಇತರೆ ರೈತಮುಖಡರುಗಳ ನೇತೃತ್ವದಲ್ಲಿ ನಗರದ ಸ್ವಾತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೊಳಿಗೆ ಕಪ್ಪುಪಟ್ಟಿ ಧರಿಸಿ,ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ಎ.ಗೋವಿಂದರಾಜು, ಜಿಲ್ಲೆಯ ಹಲವಾರು ಹಿರಿಯರ ಹೋರಾಟದ ಫಲವಾಗಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿದಿದೆ.ಆದರೆ ಕುಣಿಗಲ್ ತಾಲೂಕು ತೋರಿಸಿ, ನಮ್ಮ ಜಿಲ್ಲೆಯ ನೀರನ್ನು ಕದಿಯುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ.ಆರಂಭದಲ್ಲಿ ಇದನ್ನು…
ಹುಳಿಯಾರು: ಹೆಚ್‌ಐವಿ ಎಂಬ ವೈರಸ್ ಮಾನವ ದೇಹದೊಳಗೆ ಸೇರಿ ದೇಹದ ರಕ್ಷಣಾ ವ್ಯವಸ್ಥೆಯಾದ ಬಿಳಿ ರಕ್ತ ಕಣಗಳ ಮೇಲೆ ದಾಳಿ ಮಾಡುವುದರಿಂದ ಶರೀರದ ರೋಗನಿರೋಧಕ ಶಕ್ತಿಯು ಕ್ರಮೇಣ ಕುಗ್ಗುತ್ತದೆ. ಇದರಿಂದ ಒಂದೊAದೇ ಕಾಯಿಲೆಗಳು ಪ್ರಾರಂಭವಾಗುತ್ತದೆ. ಚಿಕಿತ್ಸೆ ಪಡೆದರೂ ಮತ್ತೆ ಮರುಕಳಿಸುತ್ತದೆ ಹಾಗೂ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುವುದಿಲ್ಲ ಎಂದು ಚಿಕ್ಕನಾಯಕನಹಳ್ಳಿಯ ಐಸಿಟಿಸಿ ಆಪ್ತಸಮಾಲೋಚಕರಾದ ನವೀನ್ ತಿಳಿಸಿದರು. ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯುಎಸಿ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಹೆಚ್.ಐ.ವಿ – ಏಡ್ಸ್ ಕುರಿತು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಚ್‌ಐವಿಯು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಯಲು ಮುನ್ನೆಚ್ಚರಿಕೆಯ ಕ್ರಮಗಳೆಂದರೆ ಮರುಬಳಕೆ ಮಾಡದಂತಹ ಸೂಜಿ ಸಿರಿಂಜುಗಳನ್ನು ಬಳಸುವುದು, ನೋಂದಾಯಿತ ರಕ್ತ ನಿಧಿಯಿಂದಲೇ ರಕ್ತವನ್ನು ಪಡೆದುಕೊಳ್ಳುವುದು, ಅಪಘಾತವಾಗದಂತೆ ಎಚ್ಚರ ವಹಿಸುವುದು, ದುಶ್ಚಟಗಳಿಗೆ ಬಲಿಯಾಗದಿರುವುದು, ಸುರಕ್ಷಿತ ಲೈಂಗಿಕ ಸಂಪರ್ಕವನ್ನು ಹೊಂದುವುದು ಹಾಗೂ ಪೌಷ್ಟಿಕ ಆಹಾರ ಪದ್ಧತಿಯ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಬೇಕು ಎಂದರು. ಮುಖ್ಯ…