Author: News Desk Benkiyabale

ಹುಳಿಯಾರು: ಕೇಂದ್ರ ಸರ್ಕಾರವು ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಬ್ಯಾಂಕುಗಳ ಮುಖಾಂತರ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿರುವುದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಯಳನಾಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾಧಿಕಾರಿ ಬಿ.ಆರ್.ರಕ್ಷಿತ್‌ಕುಮಾರ್ ತಿಳಿಸಿದರು. ಹುಳಿಯಾರು ಹೋಬಳಿಯ ಯಳನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಮ್ಮಡಿಹಳ್ಳಿ ಗ್ರಾಮದಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಜಂಟಿಯಾಗಿ ಗುರುವಾರ ಏರ್ಪಡಿಸಿದ್ದ ಜನ ಸುರಕ್ಷಾ ಯೋಜನೆ ಅಭಿಯಾನದಲ್ಲಿ ಮಾತನಾಡಿದರು. ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಶ್ರೀ ಆರ್ ಎಂ ಕುಮಾರಸ್ವಾಮಿ ಮಾತನಾಡುತ್ತಾ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಾದ ಪ್ರಧಾನಮಂತ್ರಿ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪೆನ್ಷನ್ ಯೋಜನೆ ಹಾಗೂ ಜನದನ್ ಖಾತೆ ಯೋಜನೆಗಳು ಜನರಿಗೆ ತುಂಬಾ ಉಪಯುಕ್ತವಾಗಿವೆ ಎಂದು ತಿಳಿಸಿದರು. ಈ ಶಿಬಿರದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಯಳನಾಡು ಶಾಖೆಯ ನವೀನ್, ಬ್ಯಾಂಕ್ ಮಿತ್ರರಾದ ಧರಣೇಶ್, ಅಪ್ಸರ್, ರಾಜಶೇಖರ್ ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು.

Read More

ತುಮಕೂರು: ಆರ್ಥಿಕ, ಸಾಮಾಜಿಕ ಸಮಾನತೆ ಇಲ್ಲವಾದರೆ ಅದು ಸ್ವತಂತ್ರ ದೇಶವಲ್ಲ. ಅಸ್ಪೃಶ್ಯತೆಯನ್ನು ಸಂಪೂರ್ಣ ಹೋಗಲಾಡಿಸಿ ಸರ್ವರಿಗೂ ಘನತೆಯ ಬದುಕನ್ನು ಕಟ್ಟಿಕೊಡುವ ದೇಶ ಎಂದಿಗೂ ಸ್ವತಂತ್ರ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಡಾ. ಬಿ. ಎಂ. ಪುಟ್ಟಯ್ಯ ಹೇಳಿದರು. ತುಮಕೂರು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 68ನೆಯ ಮಹಾಪರಿನಿಬ್ಬಾಣ ದಿನಾಚರಣೆಯಲ್ಲಿ ಮಾತನಾಡಿದರು. ಧರ್ಮದ ಲೇಪ ಹಚ್ಚಿ ಸಮಾನತೆಯನ್ನು ಸೀಮಿತಗೊಳಿಸುತ್ತಿರುವ ದುಷ್ಟಶಕ್ತಿಗಳ ವಿರುದ್ಧ ಅಂಬೇಡ್ಕರ್ ಅವರು ಹೋರಾಡಿದರು. ಬ್ರಿಟಿಷ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳೆಯರಿಗೆ ಹೆರಿಗೆ ರಜೆ ಘೋಷಿಸಿದರು. ಹಿಂದೂ ನಾಗರಿಕ ಸಂಹಿತೆಯ ಕಾನೂನು ಪರಿಚಯಿಸಿ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುವಂತೆ ಮಾಡಿದರು ಎಂದು ತಿಳಿಸಿದರು. ಮಹಿಳೆಯರಿಗೆ ಆರ್ಥಿಕ ಸಮಾನತೆ ನೀಡದೆ, ಮುಟ್ಟಾದ ಹೆಣ್ಣನ್ನು ಅಸ್ಪೃಶ್ಯಳಂತೆ ಕಂಡು, ಮಗು ಹೆರಿಗೆಯಾದರೆ ಅದನ್ನು ಸೂತಕವೆಂದು ಪರಿಗಣಿಸಿ ಸಮಾಜದಿಂದ ಹೊರಗಿಟ್ಟಿರುವುದು ಬೇಸರದ ಸಂಗತಿ. ಸಂವಿಧಾನವನ್ನು ಕೇವಲ ಆಳ್ವಿಕೆ ಮಾಡುಲು…

Read More

ತುಮಕೂರು : ವಿಶ್ವಕ್ಕೆ ಮಾನವೀಯತೆ ಮತ್ತು ಸಮಾನತೆಯ ಸಂದೇಶ ಸಾರಿದ ಡಾ: ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಗುಣಗಳುಳ್ಳ ವ್ಯಕ್ತಿಗಳು ಪ್ರತಿ ಮನೆಯಲ್ಲೂ ಜನಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿAದು ಜರುಗಿದ ಡಾ.ಬಿ.ಆರ್. ಅಂಬೇಡ್ಕರ್ ಅವರ 68ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಅಸ್ಪೃಶ್ಯತೆ, ಅಸಮಾನತೆ, ಮಹಿಳಾ ಅಸಮಾನತೆ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಾಣ ಮಾಡಲು ತಮ್ಮ ಜೀವನವನ್ನೇ ಸವೆಸಿ ದನಿ ಇಲ್ಲದವರಿಗೆ ದನಿಯಾಗಿದ್ದ ಅಂಬೇಡ್ಕರ್ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ದಿನ-ದಲಿತರಿಗೆ, ನೊಂದವರಿಗೆ ಪ್ರತ್ಯಕ್ಷ ದೇವರಾಗಿ ಕಾಣುವ ಮೂಲಕ ಅವರ ಪುಣ್ಯ ಸ್ಮರಣೆಯನ್ನು ಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ. ಏಷ್ಯದ ಉಪ ಖಂಡದAತಿರುವ ನಮ್ಮ ದೇಶದಲ್ಲಿ ಹಲವು ವೈವಿಧ್ಯತೆಗಳನ್ನು ಏಕೀಕರಣಗೊಳಿಸಿ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ…

Read More

ಚಿಕ್ಕನಾಯಕನಹಳ್ಳಿ: ಪಟ್ಟಣದ ಖಾಸಗಿಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಮಹಿಳೆಯರ ಶೌಚಾಲಯ ಕಟ್ಟಡ ಆರಂಭಗೊAಡು ವರ್ಷಕಳೆದರೂ ಕಾಮಗಾರಿ ಮುಗಿಯದ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಪುರಸಭಾ ಉಆಧ್ಯಕ್ಷರು ಸ್ಥಳಪರಿಶೀಲನೆ ನಡೆಸಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ ಕಳೆದ ಒಂದುವರ್ಷದಿAದ ನಡೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಮುಗಿಯದ ಈ ಕಟ್ಟಡದ ಕಾಮಗಾರಿಯ ಬಗ್ಗೆ ಸ್ಥಳೀಯರು ಪುರಸಭೆಯ ಗಮನಕ್ಕೆ ತಂದಾಗ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಉಪಾಧ್ಯಕ್ಷರಾದ ರಾಜಶೇಖರ್ ಆಗಮಿಸಿ ಕಟ್ಟಡವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಇತರರು ಸದರಿ ಕಟ್ಟಡದ ಕಳಪೆ ಕಾಮಗಾರಿಗಳ ಬಗ್ಗೆ ದೂರಿನ ಸುರಿಮಳೆಯನ್ನೆಸುರಿಸಿದರು. ಸದರಿ ಕಟ್ಟಡ ಅಭದ್ರವಾಗಿದೆ, ಒಂದು ದಿನವೂ ಕ್ಯೂರಿಂಗ್ ಕಾಣದೆ ಮೇಲ್ಚಾವಣಿ ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಿದೆ. ಶೌಚಾಲಯಕ್ಕೆ ಹಾಕಿರುವ ಎಲ್ಲಾ ಸಾಮಗ್ರಿಗಳು ಕಳಪೆಯಿಂದ ಕೂಡಿದ್ದು ಒಟ್ಟಾರೆ ಇಡೀ ಕಟ್ಟಡದ ಸ್ಥಿತಿ ಶೋಚನೀಯವಾಗಿದೆ ಎಂದು ದೂರಿದರು. ಕಟ್ಟಡ ನಿರ್ಮಾಣದ ವಿವಿದ ಹಂತದಲ್ಲಿ ಹಲವಾರು ಗುತ್ತಿಗೆದಾರರ ಕೈ ಬದಲಾಗಿದ್ದೆ ಈ ಸ್ಥಿತಿಗೆ ಕಾರಣವಾಗಿದೆ.…

Read More

ತುಮಕೂರು: ಶಿಕ್ಷಣ ಅಂಕಪಟ್ಟಿಗೆ ಸೀಮಿತವಾಗಬಾರದು. ಉದ್ಯೋಗ ಜಗತ್ತಿಗೆ ಸೂಕ್ತವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ವಿವಿಯ ಉದ್ಯೋಗಾಧಿಕಾರಿ ಪ್ರೊ. ಪರಶುರಾಮ ಕೆ. ಜಿ. ತಿಳಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಉದ್ಯೋಗ ಮಾರ್ಗದರ್ಶನ ಮತ್ತು ನೇಮಕಾತಿ ಘಟಕ ಹಾಗೂ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿರುವ ಒಂದು ವಾರದ ವೃತ್ತಿ ಕೌಶಲ್ಯ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರಶಿಕ್ಷಣ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಮಾತನಾಡಿದರು. ಪ್ರತಿ ವರ್ಷ ಪದವಿ ಪೂರ್ಣಗೊಳಿಸುತ್ತಿರುವ ಸಾವಿರಾರು ಮಂದಿಯಲ್ಲಿ ಉನ್ನತ ಶಿಕ್ಷಣದ ಮೆಟ್ಟಿಲೇರುತ್ತಿರುವವರ ಸಂಖ್ಯೆ ಬೆರಳೆಣಿಕೆಯಷ್ಟಿರುವುದು ಬೇಸರದ ಸಂಗತಿ. ಶಿಕ್ಷಣ ಉದ್ಯೋಗ, ಉನ್ನತ ಶಿಕ್ಷಣ, ಸ್ವಯಂ ಉದ್ಯೋಗಕ್ಕೆ ದಾರಿದೀಪವಾಗಬೇಕೇ ಹೊರತು ನಿರುದ್ಯೋಗ ಸಮಸ್ಯೆ ಸೃಷ್ಟಿಸಬಾರದು. ಶಿಕ್ಷಣವೆಂದರೆ ಜ್ಞಾನ ಮತ್ತು ಸಾಕ್ಷರತೆಗಾಗಿ ಹೋರಾಟ. ಶಿಕ್ಷಣವನ್ನು ಕೌಶಲ್ಯವಾಗಿ ಪರಿವರ್ತಿಸಿ ಪ್ರತಿಭೆಗಳ ಅನಾವರಣವಾಗಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ಕಲಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ರವಿ ಸಿ. ಎಂ., ಕೃತಕ ಬುದ್ಧಿಮತ್ತೆಯ ಸ್ಪರ್ಧಾಯುಗದಲ್ಲಿ ಉದ್ಯೋಗ…

Read More

ಕೊರಟಗೆರೆ: ಸಿಎಂ, ಡಿಸಿಎಂ, ಗೃಹಸಚಿವ, ಸಣ್ಣನೀರಾವರಿ ಸಚಿವ, ವಸತಿ ಸಚಿವ, ಇಂಧನ ಸಚಿವ ಸೇರಿ 15ಕ್ಕೂ ಅಧಿಕ ಸಚಿವರ ವಿರುದ್ದ ಅವಾಚ್ಯ ಶಬ್ದದಿಂದ ನಿಂದನೆ ಮತ್ತು ವೈಯಕ್ತಿಕ ತೇಜೋವದೆಯ ವಿಡೀಯೊ ಮಾಡಿ ಪೇಸ್‌ಬುಕ್, ಇನ್ಸ್ಸ್ಟಾಗ್ರಾಂ ಮತ್ತು ಎಕ್ಸ್ನ ಖಾತೆಗಳಲ್ಲಿ ಹರಿಬಿಟ್ಟು ಉತ್ತರಕಾಂಡ ರಾಜ್ಯದ ಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಭಜರಂಗ ದಳದ ಕಾರ್ಯಕರ್ತನನ್ನು ಕೊರಟಗೆರೆ ಪಿಎಸೈ ಚೇತನಗೌಡ ನೇತೃತ್ವದ ತಂಡ ಇತ್ತೀಚಿಗೆ ಬಂಧಿಸಿರುವ ಘಟನೆ ನಡೆದಿದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ, ವಸತಿ ಸಚಿವ ಜಮೀರ್‌ಅಹಮ್ಮದ್, ಇಂಧನ ಸಚಿವ ಕೆ.ಜೆ.ಜಾರ್ಜ್ ಸೇರಿ ಹಲವರ ವಿರುದ್ದ ಬಿಜೆಪಿ ಕಾರ್ಯಕರ್ತ 1ರಿಂದ 2ನಿಮಿಷದ ವಿಡೀಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟು ಸರಕಾರದ ಘನತೆಗೆ ದಕ್ಕೆ ತಂದಿರುವ ಬಗ್ಗೆ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ದೂರಿನ ಅನ್ವಯ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರು ಜಿಲ್ಲೆಯ ವಿಶ್ವಹಿಂದುಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತನಾಗಿ ಕೆಲಸ ಮಾಡಿರುವ ಮೋಹಿತ್ ನರಸಿಂಹಮೂರ್ತಿ ಪ್ರಸ್ತುತ ಉತ್ತರಕಾಂಡದ ಉಕ್ಕಿಮಠದಲ್ಲಿ ಬಿಜೆಪಿ ಸಂಘಟಕನಾಗಿ ಕೆಲಸ ಮಾಡುತ್ತ…

Read More

ಚಿಕ್ಕನಾಯಕನಹಳ್ಳಿ : ತಮ್ಮ ಹುಟ್ಟುಹಬ್ಬದ ದಿನವನ್ನು ಗಿಡ ನೆಡುವ ಮೂಲಕ ನೆನಪಿಸಿಕೊಂಡ ಅಧ್ಯಾಪಕಿ ಬಿ ಎಸ್ ಸಾಹೇರಾ ಬಾನು, ಬುಧವಾರದಂದು ಕಾತ್ರಿಕೆಹಾಲ್-ತೀರ್ಥಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ 70 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಗೆ ಮಾದರಿಯಾದರು. ಕಾತ್ರಿಕೆಹಾಲ್ ಗ್ರಾಮದ ಡಾ.ಅಂಬೇಡ್ಕರ್ ಪ್ರೌಢಶಾಲೆಯ ಅಧ್ಯಾಪಕಿಯಾದ ಇವರು, ಅಧ್ಯಾಪನ ವೃತ್ತಿಯ ಜೊತೆಗೆ ಒಂದಿಲ್ಲೊAದು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿರುತ್ತಾರೆ. ಈ ಹಿಂದೆ, ಕೆಂಪರಾಯನಹಟ್ಟಿಯ ಮಾರ್ಗದಲ್ಲಿ ಬಸ್ ಸೌಕರ್ಯವಿಲ್ಲದೆ ನಿತ್ಯ ಪರದಾಡುತ್ತಿದ್ದ ಶಾಲಾ ಮಕ್ಕಳಿಗಾಗಿ ಸ್ಥಳೀಯ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಬಳಿ ಮನವಿ ಸಲ್ಲಿಸಿದ್ದರು. ಅವರಿಂದ ಏನೂ ಪ್ರಯೋಜನವಾಗದ ಕಾರಣ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರೆಗೂ ಬಸ್ ಸೌಕರ್ಯಕ್ಕಾಗಿ ತಮ್ಮ ಮನವಿಯನ್ನು ಕೊಂಡೊಯ್ದರು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆದೇಶದ ಮೇರೆಗೆ ಅಂತಿಮವಾಗಿ ಆ ಮಾರ್ಗಕ್ಕೆ ಬಸ್ ಸೌಕರ್ಯ ಒದಗಿತು. ಕಾತ್ರಿಕೆಹಾಲ್ ಗ್ರಾಮದ ಡಾ ಅಂಬೇಡ್ಕರ್ ಪ್ರೌಢಶಾಲೆಯ ಅಧ್ಯಾಪಕಿಯಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಿ ಎಸ್ ಸಾಹೇರಾ ಬಾನು, ತಮ್ಮ…

Read More

ತುಮಕೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ ಮತ್ತು ವಾಸವಿ ಪದವಿಪೂರ್ವ ಕಾಲೇಜು ತುಮಕೂರು ವತಿಯಿಂದ ಜೀವಶಾಸ್ತ್ರ ವಿಷಯದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ತುಮಕೂರು ನಗರದ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಾಗಾರ ಉದ್ಘಾಟಿಸಿ ಜೀವಶಾಸ್ತ್ರ ವಿಷಯದ ವೇದಿಕೆ ಮೂಲಕ ಸಿದ್ಧಪಡಿಸಿರುವ 2024-25 ನೇ ಸಾಲಿನ ದ್ವಿತೀಯ ಪಿಯುಸಿ ಜೀವಶಾಸ್ತ್ರ ವಿಷಯದ ಪ್ರಾಯೋಗಿಕ ಯೋಜಿತ ಕಾರ್ಯಗಳ ಕೈಪಿಡಿ ಬಿಡುಗಡೆ ಮಾಡಿದ ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಮಾತನಾಡಿ, ಜಿಲ್ಲೆಯ ಫಲಿತಾಂಶ ಹೆಚ್ಚಿಸಲೂ ನಿಮ್ಮ ಸಹಕಾರ ಅಗತ್ಯ. ಇಲಾಖೆಯ ನಿಯಮದಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ. ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ನೀವು ಸಿದ್ಧಪಡಿಸಿದ ಮಾದರಿಯ ಪ್ರಶ್ನೆಪತ್ರಿಕೆ ನೋಡಿ ವಾರ್ಷಿಕ ಪರೀಕ್ಷೆಯನ್ನೂ ಯಾವುದೇ ಆತಂಕ ಪಡದೆ ಪರೀಕ್ಷೆಯನ್ನೂ ಬರೆಯಬೇಕು ಎಂದರು. ಈ ವರ್ಷ ಪ್ರಾಯೋಗಿಕ ಪರಿಕ್ಷೆಯಲ್ಲಿ ವೆಬ್ ಕ್ಯಾಮರಾ ಎಲ್ಲಾ ಪರೀಕ್ಷಾ ಕೇಂದ್ರಗಳು ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಎಲ್ಲಾ ಕಾಲೇಜಿನ ಮಕ್ಕಳು ನಮ್ಮ ಮಕ್ಕಳೇ…

Read More

ಚಿಕ್ಕನಾಯಕನಹಳ್ಳಿ; ದಕ್ಕಲಿಗ ಅಲೆಮಾರಿಗಳು ವಾಸವಿರುವ ಪಟ್ಟಣದ ಗಾಂಧಿನಗರಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿ’ಯವರು ಶುಕ್ರವಾರ ಭೇಟಿ ನೀಡಿ ಅಲ್ಲಿನ ಮಹಿಳೆ ಮತ್ತು ಮಕ್ಕಳ ಕುಂದು-ಕೊರತೆ ಬಗ್ಗೆ ಪರಿಶೀಲನೆ ನಡೆಸಿ, ಸ್ಥಳೀಯ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಶುಕ್ರವಾರ ಬೆಳಗ್ಗೆ ತಾಲ್ಲೂಕಿನ ಹುಳಿಯಾರು ಪಟ್ಟಣದ ಕನಕ ವೃತ್ತದಲ್ಲಿ ರಾಷ್ಟ್ರೀಯ ಸಂತ-ಕವಿ ಕನಕದಾಸರ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ತಾಲ್ಲೂಕಿನ ಅಲೆಮಾರಿಗಳ ಕುಂದು-ಕೊರತೆಗಳ ಬಗ್ಗೆ ಖುದ್ದಾಗಿ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು. ಹುಳಿಯಾರು ಪಟ್ಟಣದ ಕೆರೆ ದಂಡೆಯಲ್ಲಿ ವಾಸವಿರುವ ಅಲೆಮಾರಿಗಳು ಮತ್ತು ಬಡ ಕುಟುಂಬಗಳ ಪರಿಸ್ಥಿತಿ ಕಂಡು, ಅಧಿಕಾರಿಗಳಿಗೆ ಹಲವು ಸಲಹೆ-ಸೂಚನೆಗಳನ್ನು ಸ್ಥಳದಲ್ಲೇ ನೀಡಿದರು. ಅಲ್ಲಿನ ಮಕ್ಕಳು ಮತ್ತು ಮಹುಳೆಯರ ಜೊತೆ ಸ್ನೇಹ-ಸಲುಗೆಯಿಂದ ಒಳಗೊಂಡ ಮಹಿಳಾ ಆಯೋಗದ ಅಧ್ಯಕ್ಷರು, ಅಲ್ಲಿನ ಎಲ್ಲ ಬಡವರಿಗೂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅವರ ಜೊತೆ ಪ್ರಗತಿಪರ ಚಿಂತಕ ಹಾಗೂ ಯುವನಾಯಕ ನಿಕೇತ್ ರಾಜ್ ಮೌರ್ಯ ಕೂಡ ಇದ್ದರು. ನಂತರ, ಸ್ವತಃ ವೃತ್ತಿಯಿಂದ…

Read More

ತುಮಕೂರು: ಮಾಗಡಿ ತಾಲೂಕುಗಳಿಗೆ ಹೇಮಾವತಿ ನೀರಿ ತೆಗೆದುಕೊಂಡು ಹೋಗಲು ನಿರ್ಮಿಸುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಕೇನಾಲ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು, ಜಿಲ್ಲೆಗೆ ನಿಗಧಿಯಾಗಿರುವ ನೀರನ್ನು ಸಂಪೂರ್ಣವಾಗಿ ಹರಿಸಬೇಕು ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊAಡು ಡಿಸೆಂಬರ್ 07 ಶನಿವಾರ ಸಂಯುಕ್ತ ಕಿಸಾನ್ ಕರ್ನಾಟಕ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಕಪ್ಪುಪಟ್ಟಿ ಧರಿಸಿ,ಬೃಹತ್ ಪ್ರತಿಭಟನಾ ಧರಣಿಯನ್ಬು ಜಿಲ್ಲಾಧಿಕಾರಿ ಕಚೇರಿ ಬಳಿ ಹಮ್ಮಿಕೊಂಡಿವೆ. ಸುದ್ದಿಗೋಷ್ಟಿ ಯಲ್ಲಿಂದು ಮಾತನಾಡಿದ ಸಂಯುಕ್ತ ಹೋರಾದ ಸಿ.ಯತಿರಾಜು,ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು,ಎಕೆಐಎಸ್Àನ ಎಸ್.ಎನ್.ಸ್ವಾಮಿ, ಪ್ರಾಂತ ರೈತ ಸಂಘದ ಚನ್ನಬಸಣ್ಣ, ಅಜ್ಜಪ್ಪ, ಎಐಕೆಎಸ್ನ ಕಂಬೇಗೌಡ ,ವೆಂಕಟೇಗೌಡ,ಮಹಿಳಾ ವಿಭಾಗದ ಜಯಮ್ಮ ಅವರುಗಳು, ಜಿಲ್ಲೆಯ ಜನಪ್ರತಿನಿಧಿಗಳು, ರೈತರ ಹಿತ ಮರೆತು,ಮತ ರಾಜಕೀಯದ ಮೇಲಾಟ ನಡೆಸುತ್ತಿದ್ದಾರೆ. ಹಾಗಾಗಿ ರೈತ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿವೆ ಎಂದರು. ಸAಯುಕ್ತ ಹೋರಾಟದ ಸಂಚಾಲಕ ಸಿ.ಯತಿರಾಜು,ತುಮಕೂರು ಶಾಖಾ ನಾಲೆಯಿಂದ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಏಕಾಏಕಿ ಆರಂಭಿಸಿ ಜಿಲ್ಲೆಯ ಜನರಲ್ಲಿ, ಮುಖ್ಯವಾಗಿ ರೈತರಿಗೆ ತೀವ್ರವಾದ ಆತಂಕವನ್ನು ಸರಕಾರ ಸೃಷ್ಟಿ ಮಾಡಿದೆ.ತುಮಕೂರು ಜಿಲ್ಲೆಯ…

Read More