ಚಿಕ್ಕನಾಯಕನಹಳ್ಳಿ; ವಕ್ಫ್ ಆಸ್ತಿ ವಿಷಯ ಹುಟ್ಟಾಕಿರೋರೇ ಬಿಜೆಪಿಗರು ಈ ಆಸ್ತಿ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯ ಅಧ್ಯಕ್ಷ ಎಚ್ ಎಂ ರೇವಣ್ಣ ಹೇಳಿದರು. ಅವರು ಚಿಕ್ಕನಾಯಕನಳ್ಳಿಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರಿಸುತ್ತಾ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವಕ್ಫ್ ಆಸ್ತಿಗಳನ್ನು ಉಳಿಸುವಂತೆ ಬರೆದಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ಆದೇಶವನ್ನು ಪಾಲಿಸಲು ಹೊರಟಿತ್ತು. ಮಸೀದಿ ಹಾಗೂ ಮಸೀದಿಯ ಜಾಗ ಕಬ್ರ ಸ್ಥಾನ ಮತ್ತು ಅದರ ಜಾಗ ದರ್ಗಾ ಹಾಗೆ ಅದರ ಜಾಗ ಇವೆಲ್ಲವನ್ನು ದೇಣಿಗೆ ಕೊಟ್ಟಿರುವುದು ಬರುತ್ತದೆ ಒರೆತು ಇದು ಯಾವುದು ರೈತರ ಜಾಗವಲ್ಲ ಬಿಜೆಪಿಗರು ಸುಳ್ಳನ್ನೇ ಮನೆ ದೇವರನ್ನಾಗಿ ಸಿಕೊಂಡು ಬೂಟಾಟಿಕೆ ಮಾಡುತ್ತಾ ಅವರು ಇಂತಹದರಲ್ಲಿ ಕಾಲ ಕಳೆಯುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ವಕ್ಫ್ ಆಸ್ತಿಯ ಬಗ್ಗೆ 2000ಕ್ಕೂ ಹೆಚ್ಚು ನೋಟಿಸ್ ಅನ್ನು ನೀಡಿದ್ದು ಅಲ್ಲದೆ ಬಿಜೆಪಿಯ…
Author: News Desk Benkiyabale
ಪಾವಗಡ: ಅಬಕಾರಿ ಅಧಿಕಾರಿಗಳು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 334 ಲಿಟರ್ ಆಕ್ರಮ ಮಧ್ಯವನ್ನು 47 ಲೀಟರ್ ಬಿಯರ್, 31 ಲೀಟರ್ ಸೆಂದಿ ಹಾಗೂ ವಿವಿಧ ಪೊಲೀಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 6.84 ಲೀಟರ್ ಮಧ್ಯವನ್ನು 3.29ಲೀಟರ್ ಬಿಯರ್ 394 ಲೀಟರ್ ಸೇಂದಿಯನ್ನು ಶುಕ್ರವಾರ ಮಧ್ಯಾಹ್ನ 12 ಗಂಟೆಯ ಸಂದರ್ಭದಲ್ಲಿ ಪಾವಗಡ ಪಟ್ಟಣದ ಹೊರವಲಯದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಬಕಾರಿ ಡಿವೈಎಸ್ಪಿ ದೀಪಕ್ ತಹಸಿಲ್ದಾರ್ ಡಿಎನ್ ವರದರಾಜು ಅಬಕಾರಿ ನಿರೀಕ್ಷಕ ನಾಗರಾಜು ಸಮ್ಮುಖದಲ್ಲಿ ನಾಶಪಡಿಸಲಾಗಿದೆ ಎಂದು ಪಾವಗಡ ಅಬಕಾರಿ ನಿರೀಕ್ಷಕರಾದ ಮೈಕಲ್ ಜಾರ್ಜ್ ತಿಳಿಸಿದ್ದು ಈ ಸಂದರ್ಭದಲ್ಲಿ ನಿರೀಕ್ಷಕ ಮಾರಪ್ಪ ಇತ್ತಲಮನಿ ಪೇದೆಗಳಾದ ರಾಜೇಶ್ ನಿಂಗಪ್ಪ ಮಾರುತಿ ನಾಗೇಶ್ ಇದ್ದರು.
ತುಮಕೂರು: ಕನ್ನಡ ನಾಡು,ನುಡಿ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಇಂತಹ ಸಮ್ಮೇಳನಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿವೆ ಎಂದು ತುಮಕೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಹೆಚ್.ಕೆ.ಮನಮೋಹನ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಸಾಪ ವತಿಯಿಂದ ಆಯೋಜಿದ್ದ 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಇಂತಹ ಕಾರ್ಯಕ್ರಮ ಗಳಿಗೆ ಶಿಕ್ಷಕರು ಮಕ್ಕಳನ್ನು ಕರೆತರುವ ಮೂಲಕ ಅವರಲ್ಲಿಯೂ ನಾಡು,ನುಡಿ,ಸಂಸ್ಕೃತಿ,ಪರAಪರೆಯ ಬಗ್ಗೆ ಅರಿವು ಮೂಡಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ಮಕ್ಕಳಲ್ಲಿ ಭಾಷಾಜ್ಣಾನ ಹೆಚ್ಚುವುದರ ಜೊತೆಗೆ, ಅದನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ ಎಂದರು. ತುಮಕೂರು ತಾಲೂಕಿನ ಬಿಇಓ ಹನುಮಂತಪ್ಪ ಮಾತನಾಡಿ, ನವೆಂಬರ್ ಎಂದರೆ ಕನ್ನಡ ಕಲರವ ಮಾಸ. ಸಾಹಿತ್ಯ,ಶಿಕ್ಷಣ ಒಂದಕ್ಕೊAದು ಪೂರಕವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪಾಠ,ಪ್ರವಚನಗಳಿಗೆ ತೊಂದರೆಯಾಗದ ರೀತಿ,ಶೇ 50% ಶಿಕ್ಷಕರಿಗೆ ಓಒಡಿ ನೀಡಿದೆ. ಸಾಕಷ್ಟು ಮಕ್ಕಳು ಕಾರ್ಯಕ್ರಮ ಪಾಲ್ಗೊಂಡು ಸಾಂಸ್ಕೃತಿಕ…
ತುಮಕೂರು: ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಎಂಜಿನಿಯರಿAಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಲೀಲಾ ಬಿ.ಎನ್. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಸಂದಿದೆ. ಲೀಲಾ ಬಿ.ಎನ್. ಅವರು, ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಡಸ್ಟಿçÃಯಲ್ ಇಂಜಿನಿಯರಿAಗ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಎನ್.ಡಿ.ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ‘ಇನ್ವೆಸ್ಟೀಗೇಷನ್ ಆಪ್ ಸ್ಟçಕ್ಚರ್ , ಮೆಕಾನಿಕಲ್ ಪ್ರಾಪರ್ಟೀಸ್, ವೇರ್ ಪ್ರಾಪರ್ಟೀಸ್ ಅಂಡ್ ಮೆಷಿನಬಲಿಟೀ, ಎವಾಲಿಯೇಷನ್ ಆಫ್ ಎ16061 ಅಲೈ ಸಬ್ಜೆಕ್ಟೆಟೆಡ್ ಟು ಬಾರೋನ್ ಕಾರ್ಬೈಡ್ ರೀಇನ್ಪೊರ‍್ಸ್ಮೆಂಟ್’ ವಿಷಯ ಕುರಿತ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರತಿದೆ. ತುಮಕೂರು ನಗರದ ವಾಸಿಯಾದ ಲೀಲಾ ಬಿ.ಎನ್. ಅವರು ಎಸ್‌ಎಸ್‌ಐಟಿಯ ಮೆಕಾನಿಕಲ್ ಎಂಜಿನಿಯರಿAಗ್ ಎಂಜಿನಿಯರಿAಗ್ ವಿಭಾಗದಲ್ಲಿ ಕಳೆದ 5 ವರ್ಷದಿಂದ ಹಾಗೂ ಇತರೆ ಸಂಸ್ಥೆಗಳಲ್ಲಿ 10 ವರ್ಷದಿಂದ ಸಹಾಯಕ ಪ್ರಾಧ್ಯಾಪಕರಾಗಿ ರಾಜ್ಯ ಮತ್ತು ರಾಷ್ಟಿçÃಯ ಮಟ್ಟದಲ್ಲಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗÀಳನ್ನು ಮಂಡಿಸಿದ್ದಾರೆ.ಅಭಿನAದನೆ: ವಿಟಿ ವಿಶ್ವವಿದ್ಯಾಲಯದಿಂದ…
ತುಮಕೂರು : ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ/ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಡಿಸೆಂಬರ್ 2ರಂದು ನಗರದ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಫಲಾನುಭವಿಗಳನ್ನು ಕರೆತರುವ ಜವಾಬ್ದಾರಿಯನ್ನು ಅಧಿಕಾರಿಗಳೇ ವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ವೀಡಿಯೋ ಕಾನ್ಸರೆನ್ಸ್ ಸಭೆ ನಡೆಸಿ ಮಾತನಾಡುತ್ತಾ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತು ಪಡೆಯಲು ಆಗಮಿಸುವ ಫಲಾನುಭವಿಗಳ ಮಾಹಿತಿಯನ್ನು ಪಡೆದ ಅವರು ಸವಲತ್ತು ಪಡೆಯುವ ಫಲಾನುಭವಿಗಳೊಂದಿಗೆ ಡಿಸೆಂಬರ್ 2ರಂದು ಬೆಳಿಗ್ಗೆ 9:30ಗಂಟೆಗೆ ಕಾರ್ಯಕ್ರಮ ಸ್ಥಳದಲ್ಲಿ ಹಾಜರಿರಬೇಕು ಎಂದು ನಿಯೋಜಿತ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯ ಅಡಿಗಲ್ಲುಗಳನ್ನು ಒಂದೇ ವಿನ್ಯಾಸದಲ್ಲಿ ಸಿದ್ಧಪಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಸೂಚನೆ ನೀಡಿದರು. ಶಿಷ್ಟಾಚಾರದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಶಾಸಕರು ಸೇರಿದಂತೆ…
ತುಮಕೂರು: ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಜಿಲ್ಲಾ ದಿನಪತ್ರಿಕೆಗಳ ಹಂಚಿಕೆದಾರರ ಸಂಘದ ಆಶ್ರಯದಲ್ಲಿ ಗುರುವಾರ ನಗರದ ಜಿಲ್ಲಾ ಗ್ರಂಥಾಲಯ ಸಭಾಂಗಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಪತ್ರಿಕಾ ವಿತರಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಸಮಾರಂಭದಲ್ಲಿ ಮಾತನಾಡಿ, ಪತ್ರಿಕಾ ವಿತರಕರು ಸಂಘಟಿತರಾಗಿ ಅಗತ್ಯ ಸವಲತ್ತುಗಳನ್ನು ಪಡೆಯಬೇಕು. ನಾನೂ ಕಾಲೇಜು ದಿನಗಳಲ್ಲಿ ಪತ್ರಿಕೆ ವಿತರಕನಾಗಿ ಕೆಲಸ ಮಾಡಿದ್ದೆ, ವಿತರಕರ ಕಷ್ಟದ ಅರಿವಿದೆ. ಪತ್ರಿಕಾ ವಿತರಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರ ಸೇವೆಯನ್ನು ಗುರುತಿಸಿ ಗೌರವಿಸಬೇಕು ಎಂದು ತಾವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ. ಮುಖ್ಯಮಂತ್ರಿಗಳು ಸ್ಪಂದಿಸಿ ಈ ಬಾರಿಯಿಂದ ವಿತರಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸಮ್ಮತಿ ನೀಡಿದರು ಎಂದು ಹೇಳಿದರು. ನಿತ್ಯ ಬೆಳಗ್ಗೆ ಪತ್ರಿಕೆ ವಿತರಿಸುವ ಒತ್ತಡದಲ್ಲಿರುವ ವಿತರಕರು ಅಪಘಾತಕ್ಕೀಡಾದರೆ ಅಂತಹವರಿಗೆ ಸರ್ಕಾರದಿಂದ ನೆರವು ದೊರೆಯಬೇಕು ಎಂದು ಕಾರ್ಮಿಕ ಇಲಾಖೆಯಿಂದ ಪತ್ರಿಕಾ ವಿತರಕರಿಗೆ ಅಪಘಾತ ವಿಮಾ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ…
ತುಮಕೂರು: ಕನಕದಾಸರು ಸುಮಾರು 500 ವರ್ಷಗಳ ಹಿಂದೆ ರಚಿಸಿದ ಕೀರ್ತನೆಗಳು ಇಂದಿಗೂ ಜೀವಂತವಾಗಿದ್ದು ನಮ್ಮ ಜೀವನದಲ್ಲಿ ಸ್ಪೂರ್ತಿಯನ್ನು ತುಂಬಿವೆ ಎಂದು ಹಿರಿಯ ಲೇಖಕಿ ಮತ್ತು ಶಾರದಾ ಪ್ರಕಾಶನದ ಸಂಪಾದಕಿ ಪ್ರೊ. ಕಮಲಾನರಸಿಂಹ ಹೇಳಿದರು. ವಿವಿ ಕಲಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ಕನಕದಾಸರ ವಿಚಾರ ಮಂಥನ ಮತ್ತು ಕನಕದಾಸ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರನ್ನು ಅರ್ಥಮಾಡಿಕೊಳ್ಳಲು ದೈವಭಕ್ತಿಯ ದೃಷ್ಟಿಯಿಂದಷ್ಟೇ ಅಲ್ಲದೇ ಚಿಂತಕ, ಸಾಹಿತಿ, ಮತ್ತು ಸಮಾಜ ಸುಧಾರಕರನ್ನಾಗಿಯೂ ನೋಡಬೇಕು. ದಾಸರು ಹಾಡಿನ ಮೂಲಕ ಹೇಳಿರುವ ಸಾಮಾಜಿಕ ಸತ್ಯವನ್ನು ಎಲ್ಲರೂ ಅಳವಡಿಸಿಕೊಂಡು ಸಮಾಜದ ಕೊಳಕು ಮತ್ತು ಬಂಡಾಯವನ್ನು ವಿನಯದ ಸಂಪತ್ತಿನಿAದ ತೊಳೆಯಬೇಕಿದೆ ಎಂದರು. ಕನಕದಾಸರ ವಿಚಾರಧಾರೆಯನ್ನು ಕುರಿತು ಮಾತನಾಡಿದ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಶಿವಣ್ಣ ಬೆಳವಾಡಿ, ರಾಮಧಾನ್ಯಚರಿತೆಯ ಪ್ರಸಂಗವನ್ನು ವಿಶ್ಲೇಷಿಸುವ ಮೂಲಕ ಇದು ಬರಿಯ ಚರಿತೆಯಲ್ಲ ವಿಚಾರಗಳನ್ನು ಪ್ರಾಯೋಗಿಕವಾಗಿ ಕಟ್ಟಿಕೊಟ್ಟಿದ್ದಾರೆ. ಸಾರ್ವಕಾಲಿಕ ಸತ್ಯವನ್ನು ತಮ್ಮ ಕೀರ್ತನೆಗಳ ಮೂಲಕ ಸಮಾಜಕ್ಕೆ ವಾಸ್ತವವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.…
ತುಮಕೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ್.ನಿ, ಹಾಗೂ ತುಮಕೂರು ಜಿಲ್ಲಾ ಸಹಕಾರಿ ಯೂನಿಯನ್, ನಿ ತುಮಕೂರು ವತಿಯಿಂದ ನವೆಂಬರ್ 29 ರಂದು ಹೆಗ್ಗೆರೆಯ ಹೆಚ್.ಎಂ.ಗAಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸ್ವಯಂ ಚಾಲಿತ ಹಾಲು ಶೇಖರಣ ಘಟಕಗಳ ತಂತ್ರಾAಶ ಅನುಷ್ಠಾನ ಮತ್ತು ಕಾರ್ಯದರ್ಶಿಗಳಿಗೆ ತರಬೇತಿ ಮತ್ತು ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಲಿದೆ ಎಂದು ಸಹಕಾರ ಯೂನಿಯನ್ ಅಧ್ಯಕ್ಷ ಟಿ.ಜಿ.ವೆಂಕಟೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಈ ಬಾರಿಯ ಸಹಕಾರಿ ಸಪ್ತಾಹದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದಿರುವ ಹಿರಿಯ ಸಹಕಾರಿ ಧುರೀಣರು ಹಾಗೂ ನಿವೃತ್ತ ಅಧಿಕಾರಿಗಳನ್ನು ಗೌರವಿಸಲಾಗುವುದು ಎಂದರು. ನವೆAಬರ್ 29 ರ ಬೆಳಗ್ಗೆ ಹೆಗ್ಗೆರೆಯ ಶಿಕ್ಷಣ ಭೀಷ್ಮ ಹೆಚ್.ಎಂ.ಗAಗಾಧರಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಹಕಾರ ದ್ವಜಾರೋಹಣವನ್ನು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ನೆರವೇರಿಸುವರು. ಉದ್ಘಾಟನೆಯನ್ನು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ…
ಪಾವಗಡ: ರಾಜಕೀಯ ಮೇಲಾಟದಿಂದಾಗಿ 13ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಶಾಲಾ ಕಟ್ಟಡ ಇಂದು ಅನೈತಿಕ ತಾಣವಾಗಿದ್ದು ಬೆಲೆ ಬಾಳುವ ವಸ್ತುಗಳ ನಾಪತ್ತೆಯಾಗುತ್ತಿವೆ ಎಂಬುದು ಗ್ರಾಮಸ್ಥರು ದೂರಾಗಿದೆ. ಪಾವಗಡ ತಾಲ್ಲೂಕಿನ ಆರಸೀಕೆರೆ ಗ್ರಾಮದಲ್ಲಿ 8ವರ್ಷಗಳ ಹಿಂದೆ ಆದರ್ಶಶಾಲೆಗಾಗಿ 13ಕೋಟಿವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇದುವರೆಗೂ ಪಾವಗಡ ನಗರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೂ ಸ್ಥಳಾಂತರ ಗೊಳ್ಳದೆ ಸರ್ಕಾರಿ ಆದರ್ಶ ಶಾಲೆಯಕಟ್ಟಡ ಅನೈತಿಕ ತಾಳವಾಗಿ ಬಾಗಿಲುಗಲು ಕಿಟಕಿಗಳು ಗೆದ್ದಲು ಹಿಡಿದು ಹಾಳಾಗಿವೆ ಬೆಲೆ ಬಾಳುವ ವಸ್ತುಗಳು ಹಾಳಾಗಿವೆ ಕಟ್ಟಡದ ಒಳದ ಬಾಗದಲ್ಲಿ ಗಿಡಗೆಂಟಿಗಳು ಅಳುದ್ದ ಬೆಳೆದು ಕಾಡು ಪ್ರಾಣಿಗಳ ಅವಾಸಸ್ಥಾನವಾಗಿ ಮಾರ್ಪಟ್ಟಿದೆ ಮತ್ತು ಕಿಟಕಿಗಾಜು ಪ್ಯಾನ್ ಇನ್ನಿತರೆ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿವೆ ಎಂಬುದು ನಾಗರೀಕರ ದೂರಾಗಿದೆ. ತಾಲ್ಲೂಕಿಗೆ ಅದರ್ಶಶಾಲೆ ಮುಂಜೂರು ಆದಾಗ ಇದ್ದ ಸರ್ಕಾರಿ ಕಟ್ಟಡವೊಂದರಲ್ಲಿ ತಾತ್ಕಾಲಿಕವಾಗಿ ಪ್ರಾರಂಭಮಾಡಲಾಯಿತು ಅನಂತರ ನಿವೇಶನಕ್ಕಾಗಿ ಹುಡುಕಾಟ ಪ್ರಾರಂಭವಾಯಿತು 10ಎಕರೆ ಜಾಗ ಸಿಗದೆ ಇದ್ದಾಗ ಅರಸೀಕೆರೆ ಗ್ರಾಮದವರು 21ಎಕರೆ ಜಾಗವನ್ನು ರಾಜ್ಯಪಾಲರ ಹೆಸರಿಗೆ ನೊಂದಾಯಿಸಿದ್ದಾರೆ ಹೀಗಾಗಿ ಸರ್ಕಾರ ಆ ಜಾಗದಲ್ಲಿ…
ತುಮಕೂರು: ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ವಿಕಲಚೇತನರ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ ನಡೆಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿಕಲಚೇತನರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು. ಸಮರ್ಥಂ ವಿಕಲಚೇತನರ ಸಂಸ್ಥೆ ಆಯೋಜಿಸಿದ್ದ ಈ ಕ್ರೀಡಾಕೂಟವನ್ನು ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್ ಉದ್ಘಾಟಿಸಿ, ವಿಕಲಚೇತನ ಮಕ್ಕಳು ಕೀಳರಿಮೆ ತೊರೆದು ಇಂತಹ ಅವಕಾಶಗಳನ್ನು ಬಳಿಸಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು. ವಿಕಲಚೇತನರಿಗೆ ಅಂಗವೈಕಲ್ಯವಿರಬಹುದು ಆದರೆ ಅವರಲ್ಲಿ ವಿಶೇಷವಾದ ಬುದ್ಧಿವಂತಿಕೆ, ಕ್ರಿಯಾಶೀಲತೆ ಇರುತ್ತದೆ. ಇತ್ತೀಚೆಗೆ ಚೆಸ್ ಅಸೋಸಿಯೇಷನ್‌ನಿಂದ ತುಮಕೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಅಂಧರ ಚೆಸ್ ಪಂದ್ಯಾವಳಿಯಲ್ಲಿ ಆ ಮಕ್ಕಳ ಬುದ್ಧಿವಂತಿಕೆಯನ್ನು ಗಮನಿಸಿದ್ದೇನೆ. ಸಾಮಾನ್ಯ ಮಕ್ಕಳಿಗಿಂತಲೂ ಹೆಚ್ಚು ಪ್ರತಿಭಾವಂತರಾಗಿದ್ದಾರೆ ಎಂದರು. ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗಬಾರದು. ಅದನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು. ರಾಜ್ಯಮಟ್ಟದ ಕ್ರೀಡೆಯಲ್ಲಿ ವಿಜೇತರಾದವರು ರಾಷ್ಟç ಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧೆ ಮಾಡಲು ಅರ್ಹರಾಗುತ್ತಾರೆ, ಮುಂದೆ ಅಂತರರಾಷ್ಟಿçÃಯ ಮಟ್ಟದಲ್ಲೂ ಪಾಲ್ಗೊಳ್ಳುವ ಅವಕಾಶ ದೊರೆಯುತ್ತದೆ ಎಂದು ಟಿ.ಎನ್.ಮಧುಕರ್…