Author: News Desk Benkiyabale

ತುಮಕೂರು: ಅಕ್ರಮವಾಗಿ ನಾಡಾ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಕುಖ್ಯಾತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರು ತಿಳಿಸಿದರು. ನಗರದ ಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಯಲ್ಲಿ ಮಾತನಾಡಿದ ಅವರು, ಗುಬ್ಬಿ ತಾಲ್ಲೂಕು ತಿದ್ದೂರು ಗ್ರಾಮದ ವಾಸಿಗಳಾದ ಆರೋಪಿ ಮಧುಚಂದ್ರ & ಶಿವ ಕುಮಾರ್ ರವರು ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದ ನಾಡ ಬಂದೂಕಿನೊಂದಿಗೆ ಬೇಟೆಗೆ ಬಂದಾಗ ಚೈತ್ರರವರ ಗಂಡ ರ‍್ಶನ್ ಆಕ್ಷೇಪಿಸಿದಾಗ ಬಂದೂಕು ಕೆಳಗೆ ಬಿದ್ದು ಫೈರ್ ಆಗಿ ಚೈತ್ರ ರವರಿಗೆ ಗಾಯ ಆಗಿದೆ. ಚೈತ್ರ ರವರ ಹೇಳಿಕೆ ಮೇರೆಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ರ‍್ಮ್ಸ್ ಆಕ್ಟ್ ಮತ್ತು 125(ಎ) ಬಿಎನ್‌ಎಸ್ ರೀತ್ಯಾ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದ ಎಂದು ತಿಳಿಸಿದ್ದಾರೆ. ತನಿಖಾ ಕಾಲದಲ್ಲಿ ತುಮಕುರು ಜಿಲ್ಲೆಯಲ್ಲಿ 25-30 ಸಾವಿರ ರೂ ಗಳಿಗೆ ಅಕ್ರಮ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿರುವ ಜಾಲ ಸಕ್ರಿಯವಾಗಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕರ‍್ಯಪ್ರವೃತ್ತರಾದ ಪೊಲೀಸರು 6…

Read More

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕು ನಾಗಲಮಡಿಕೆ ಗ್ರಾಮದ ಎಸ್.ಆರ್. ಎಂಟರ್ ಪ್ರೆöÊಸಸ್ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಕಳಪೆ ದರ್ಜೆಯ 2 ಜೈವಿಕ ಪ್ರಚೋದಕ(ಜೈವಿಕ/ಸಾವಯವ) ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ. ಜಪ್ತಿ ಮಾಡಲಾದ ಪರಿಕರಗಳಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕ ಅಂಶಗಳಿರುವ ಬಗ್ಗೆ ವಿಶ್ಲೇಷಣಾ ಪ್ರಯೋಗಾಲಯಗಳ ವರದಿಯಿಂದ ದೃಢಪಟ್ಟಿರುವುದರಿಂದ ಕೃಷಿ ಇಲಾಖೆಯ ಜಾರಿದಳ ವಿಭಾಗದಿಂದ ಕಳಪೆ ದರ್ಜೆಯ ಪರಿಕರಗಳನ್ನು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ಕೃಷಿ ಇಲಾಖೆಯ ಜಾರಿದಳ ವಿಭಾಗವು ನವೆಂಬರ್ 25ರಂದು ಎಸ್.ಆರ್.ಎಂಟರ್ ಪ್ರೆöÊಸಸ್ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿ ನಿಯಮಾನುಸಾರ ಪರಿಶೀಲಿಸಿದಾಗ, ಅಂದಾಜು 29,400 ರೂ. ಮೌಲ್ಯದ 4.90 ಲೀಟರ್ ಪ್ರಮಾಣದ ಹೈದರಾಬಾದ್ ಉತ್ಪಾದಕ ಕಂಪನಿಗಳಾದ ಆಸ್ಕರ್ ಕ್ರಾಪ್ ಕೇರ್ ಹಾಗೂ ವಾಯು ಎಂಬ 2 ಜೈವಿಕ ಪರಿಕರ ಮಾದರಿಗಳನ್ನು ಅನುಮತಿ ಪಡೆಯದೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಸಂಶಯಾಸ್ಪದ ಹಿನ್ನೆಲೆಯಲ್ಲಿ ಕೀಟನಾಶಕ ತೇಷಾಂಶ…

Read More

ಹುಳಿಯಾರು: ದೇಶದ ಎಲ್ಲಾ ಕಾನೂನುಗಳ ತಾಯಿ ಸಂವಿಧಾನ. ನಾವು ನೆಮ್ಮದಿ ಮತ್ತು ಖುಷಿಯಿಂದ ಇರಲು ಅದೇ ಕಾರಣ. ಸಂವಿಧಾನವನ್ನು ಪ್ರೀತಿಸುವವರು ಹಾಗೂ ಗೌರವಿಸುವವರು ಎಂದೂ ಕೂಡಾ ಸುಂದರ ಬದುಕನ್ನು ನಡೆಸಬಹುದು ಎಂದು ರಾಜ್ಯಶಾಸ್ತç ಉಪನ್ಯಾಸಕ ಟಿ.ಆರ್.ಪ್ರಸನ್ನ ತಿಳಿಸಿದರು. ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಸಂವಿಧಾನವು ಇಲ್ಲೇ ಕುಳಿತು ರಚಿಸಿದ್ದಲ್ಲ. ಇದಕ್ಕಾಗಿ ಅನೇಕ ದೇಶಗಳ ಕಾನೂನುಗಳನ್ನು ಅಧ್ಯಯನ ಮಾಡಿ ಅಳವಡಿಸಲಾಗಿದೆ. ಭಾರತದ ಸಂವಿಧಾನ ರಚನೆಗೆ 2 ವರ್ಷ 9 ತಿಂಗಳು 18 ದಿನ ಹಿಡಿಯಿತು. 2015 ರ ವರೆಗೆ ‘ಲಾ ಡೇ’ ಎಂದು ಕರೆಯಲಾಗುತ್ತಿದ್ದ ದಿನವನ್ನು ಇದೀಗ ‘ಸಂವಿಧಾನ ದಿನ’ ಎಂದು ಕರೆಯಲಾಗುತ್ತಿದೆ ಎಂದರು. ಸಂವಿಧಾನ ಅತ್ಯಂತ ಪವಿತ್ರ ಗ್ರಂಥ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಆಶಯದ ಸಂವಿಧಾನ ನಮಗೆಲ್ಲರಿಗೂ ಮಹಾನ್ ಗ್ರಂಥವಾಗಿದೆ. ಸಮಾನತೆ, ಸೌಹಾರ್ದತೆ ಸಾಧಿಸುವಲ್ಲಿ ಸಂವಿಧಾನವು ದಾರಿದೀಪವಾಗಿದೆ. ಜಾಗತಿಕವಾಗಿ ಹೆಸರಾದ ಮತ್ತು ಅನೇಕ ದೇಶಗಳಿಗೆ ಮಾದರಿಯಾದ…

Read More

ತುಮಕೂರು: ಕಾರ್ಮಿಕರು ಮತ್ತು ರೈತರು ಜಂಟಿಯಾಗಿ ಸಂಯುಕ್ತ ಕಿಸಾನ್ ಮೊರ್ಚ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ದೇಶದ್ಯಂತ ಇಂದು ನಡೆದ ಪ್ರತಿಭಟನೆಯ ಭಾಗವಾಗಿ ತುಮಕೂರು ನಗರದಲ್ಲಿ ಸಹ ಪ್ರತಿಭಟನೆಯನ್ನು ನಡೆಸಲಾಯಿತು, ದಿ; 26 – 11-2024 ರಂದು ಬೆಳಿಗ್ಗೆ -11 ಗಂಟೆಗೆ ನಗರದ ಸ್ವಾತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಛೇರಿಯ ತನಕ ನೂರಾರು ರೈತ – ಕಾರ್ಮಿಕರ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿಯನ್ನು ಸಹ ನಡೆಸಲಾಯಿತು, ಅರಂಭಿಕವಾಗಿ ರೈತ ಮುಖಂಡ ಬಿ.ಉಮೇಶ್ ಅವರು ಪ್ರಾಸ್ತವಿಕ ಮಾತುಗಳನ್ನು ಅಡಿದರು . ಧರಣೀಯನ್ನು ಉದ್ದೇಶಿಸಿ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕರಾದ ಸಿ. ಯತಿರಾಜು ಅವರು ಮಾತನಾಡಿ ಕಾರ್ಪೊರೇಟ್‌ಗಳು ಮತ್ತು ಅತಿ ಶ್ರೀಮಂತರನ್ನು ಶ್ರೀಮಂತಗೊಳಿಸುವ ಗುರಿಯನ್ನು ಹೊಂದಿರುವ ಓಆಂ3 ಸರ್ಕಾರದ ನೀತಿಗಳೊಂದಿಗೆ ಭಾರತದ ದುಡಿಯುವ ಜನರು ಆಳವಾದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್-ಡ್ಯಾಮ್ ಮೂಲಕ ಭೂಮಿ ಮತ್ತು ಬೆಳೆಗಳ ಡಿಜಿಟಲೀಕರಣವನ್ನು ಹೇರುತ್ತಿz ಎಂದು ಅಪಾಧಿಸಿದರು. ಹೋರಾಟದಲ್ಲಿ ಸಿಐಟಿಯು ಎನ್. ಕೆ ಸುಬ್ರಮಣ್ಯ,…

Read More

ತುಮಕೂರು: ರಂಗಭೂಮಿ ಟ್ರಸ್ಟ್ (ರಿ).ಕೊಡಗು ಇವರ ವತಿಯಿಂದ ನವೆಂಬರ್ 28 ಮತ್ತು 29 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ನಾಟಕದ ಪ್ರವೇಶಕ್ಕೆ 200 ರೂ ಪ್ರವೇಶ ಶುಲ್ಕ ನಿಗಧಿ ಮಾಡಲಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮೈಸೂರಿನ ರಂಗಾಯಣದ ನಿಕಟಪೂರ್ವ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ಚರಿತ್ರೆಯ ಕುರಿತ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕ ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದ್ದು,ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸುವಂತೆ ಮನವಿ ಮಾಡಿದರು. ರಂಗಭೂಮಿ ಟ್ರಸ್ಟ್ ಕೊಡಗುನ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಮೈಸೂರಿನ ರಂಗಾಯಣದ ನಿರ್ದೇಶಕ ನಾಗಿದ್ದಾಗ, ಅಲ್ಲಿನ ಕಲಾವಿದರನ್ನು ಬಳಸಿಕೊಂಡು ಟಿಪ್ಪುವಿನ ನಿಜ ಕನಸು ಎಂಬ ನಾಟಕವನ್ನು ರಾಜ್ಯದ ಎಲ್ಲಡೆ ಪ್ರದರ್ಶನ ನಡೆಸಿದ್ದು, ಸುಮಾರು ಅರವತ್ತು ಪ್ರದರ್ಶನ ಕಂಡಿತ್ತು.ತದನAತರ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿಯೂ ಅಪಹಾಸ್ಯಕ್ಕೆ ಒಳಗಾಗಿದ್ದ ನಿಜ ಸ್ವಾತಂತ್ರ ಹೋರಾಟಗಾರ ವೀರ ಸಾರ್ವಕರ್ ಕುರಿತ ಕರಿನೀರಿನ ವೀರ…

Read More

ಶಿರಾ: ದುಶ್ಚಟಗಳು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಮಾದಕ ವ್ಯಸನದಿಂದ ಬದುಕಿಗೆ ಹಾನಿಯಾಗುತ್ತದೆ ಆಗಾಗಿ ನಾವು ಅದರಿಂದ ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಚರ್ಡ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮುತ್ತರಾಯಪ್ಪ ಹೇಳಿದರು. ಶಿರಾ ತಾಲ್ಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಸರಣಿ ಸಂವಾದ’ ಎಂಬ  ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತಾನಾಡಿದ ಅವರು ಈ ಹದಿಹರೆಯದ ವಯಸ್ಸಿನಲ್ಲಿ ತುಮುಲಗಳು ಸಹಜ ಅದನ್ನು ಹಿಡಿತದಲ್ಲಿ ಇಟ್ಟಿಕೊಳ್ಳಬೇಕು. ದುಶ್ಚಟಗಳ ಬಗ್ಗೆ ಕೆಟ್ಟ ಕೌತುಕಗಳು ಬೇಡ. ಬೆಟ್ಟಿಂಗ್, ಮೊಬೈಲ್ ಚಟದಿಂದ ದೂರವಿರಿ. ಕೀಳರಿಮೆ ಬಿಟ್ಟು ಸಾಧನೆಕಡೆಗೆ ನಿಮ್ಮ ನಡೆ ಇರಲಿ ಎಂದೇಳಿದರು ಹಾಗೆಯೇ ಮಕ್ಕಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಶಾಲಾ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಎಂ. ಮಾತಾನಾಡಿ ಈ ತರಹದ ಉಪನ್ಯಾಸಗಳು ಮಕ್ಕಳಿಗೆ ತೀರಾ ಅವಶ್ಯಕ. ನೈತಿಕ ಮೌಲ್ಯಗಳು ಬದುಕಿಗೆ ಮುಖ್ಯ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದೇಳಿದರು. ಕಾರ್ಯಕ್ರಮದಲ್ಲಿ ಗ್ರಾ. ಪಂ ಸದಸ್ಯ ಶಿವು ಕುಮಾರನಾಯ್ಕ, ಶಿವು ಸ್ನೇಹಪ್ರಿಯ, ರವಿತೇಜ ಚಿಗಳಿಕಟ್ಟೆ ಹಾಗೂ…

Read More

ಹುಳಿಯಾರು: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಹುಳಿಯಾರು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಫಲದಾಯಕವಾಗಿವೆ ಎಂಬುದಕ್ಕೆ ಈ ಉಪ ಚುನಾವಣೆ ಫಲಿತಾಂಶ ಸಾಕ್ಷಿ. ಬಿಜೆಪಿಯವರು ಏನೇ ಕುತಂತ್ರ ಮಾಡಿದರೂ ಮತದಾರ ಅದಕ್ಕೆ ಬೆಲೆ ಕೊಡದೆ ತಕ್ಕ ಪಾಠ ಕಲಿಸಿದ್ದಾನೆ ಎಂದರು. ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ ಪರಿಣಾಮ ನಮ್ಮ ಮೂವರು ಅಭ್ಯರ್ಥಿಗಳು ಭಾರಿ ಮತಗಳ ಅಂತರದಿAದ ಗೆದ್ದಿದ್ದಾರೆ. ಈ ಗೆಲುವು ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರ ಗೆಲುವಾಗಿದೆ. ವಿರೋಧ ಪಕ್ಷಗಳು ಅಭಿವೃದ್ಧಿಗೆ ಸಹಕರಿಸುವ ಬದಲು ಸುಳ್ಳು ಆರೋಪಗಳನ್ನು ಮಾಡುತ್ತ ಜನಪ್ರಚಾರ ಪಡೆಯಲು ಪ್ರಯತಿಸುತ್ತಿದ್ದಾರೆ. ಆದರೂ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿರುವುದು ಸರ್ಕಾರಕ್ಕೆ ಮತ್ತಷ್ಟು ಆನೆ ಬಲದಂತಾಗಿದೆ…

Read More

ತುಮಕೂರು: ಡಿಸೆಂಬರ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಡಕ್ ಸೂಚನೆ ನೀಡಿದ್ದಾರೆ. ತುಮಕೂರಿನಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಡಿಸೆಂಬರ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದ ಕುರಿತು ಈಗಾಗಲೇ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಆಯಾ ಇಲಾಖೆ ಕಾಮಗಾರಿಗಳ ಉದ್ಘಾಟನೆ ಸಂಬAಧಿಸಿದ ಕಾಮಗಾರಿಗಳು ಶಿಲಾನ್ಯಾಸದ ಫಲಕ ಸೇರಿದಂತೆ ವಿವಿಧ ಸಿದ್ಧತೆಗಳಿಗೆ ಸೂಚನೆ ನೀಡಲಾಗಿದೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲದAತೆ ಹಾಗೂ ಲೋಪವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಈಗಾಗಲೇ ಮುದ್ರಿಸಿ ಎಲ್ಲಾ ಹಂತದ ಅಧಿಕಾರಿಗಳಿಗೆ ನೀಡಲಾಗಿದೆ. ಸಂಬAಧಿಸಿದ ಅಧಿಕಾರಿಗಳು ಆಯಾ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ…

Read More

ತುಮಕೂರು: ವೀರಶೈವ, ಲಿಂಗಾಯತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜಿಲ್ಲೆಯ ಹಿರಿಯರು ಸೇರಿ ಐದು ಎಕರೆ ಜಾಗ ಖರೀದಿಸಿ, ಹಾಸ್ಟೆಲ್ಗಳ ನಿರ್ಮಾಣಕ್ಕೆ ಒತ್ತ್ತುನೀಡಿದರೆ ತಮ್ನ ಕೈಲಾದ ಸೇವೆಯನ್ನು ಮಾಡುವುದಾಗಿ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ನಗರದ ಗುರುಕುಲ ಹಾಸ್ಟಲ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಗುರುಕುಲ ಅರ್ಕೇಡ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ತುಮಕೂರು ಬೆಳೆದಂತೆ ಭೂಮಿಯ ಬೆಲೆ ಗಗನಮುಖಿಯಾಗಿದೆ.ಭವಿಷ್ಯದ ದೃಷ್ಟಿಯಿಂದ ನೆರೆಯ ಆಂದ್ರದವರು ಬಂದು, ಈ ಭಾಗಕ್ಕೆ ಬಂದು ಒಂದಕ್ಕೆ ಎರಡು ರೇಟ್ ನೀಡಿ ಭೂಮಿ ಖರೀದಿಸುತ್ತಿದ್ದಾರೆ.ಹಾಗಾಗಿ ಸಮುದಾಯದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವೀರಶೈವ ಸಮಾಜದ ಮುಖಂಡರು ನಗರದ ಸುತ್ತಮುತ್ತ ಐದು ಎಕರೆ ಜಾಗ ಖರೀದಿಸಿದರೆ,ಅಲ್ಲಿ ಹಾಸ್ಟಲ್ ನಿರ್ಮಿಸಿ ಮತ್ತಷ್ಟು ಮಕ್ಕಳಿಗೆ ಆಶ್ರಯ ನೀಡಬಹುದು ಎಂದರು. ತುಮಕೂರು ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಬಸವರಾಜು ಸಂಸದರಾಗಿ ಅವರು ಕೈ ಹಾಕಿದ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸುತ್ತೇನೆ. ಈಗಾಗಲೇ ಸಾಕಷ್ಟು ರೈಲುಗಳನ್ಬು ನೀಡಲಾಗಿದೆ.ಬಹುಜನರ ಕೋರಿಕೆಯಂತೆ ತುಮಕೂರು ಮೂಲಕ ಮಂಗಳೂರಿಗೆ ಟ್ರೈನ್…

Read More

ತುಮಕೂರು: ದೇಶದ ಹೆಸರನ್ನು ಎತ್ತಿ ಹಿಡಿಯಲು ಎನ್‌ಸಿಸಿ ಕೆಡೆಟ್‌ಗಳು ಶ್ರಮಿಸುತ್ತಾರೆ. ಅವರ ಅವಿರತ ಶ್ರಮ ಮತ್ತು ಸಮರ್ಪಣಾ ಮನೋಭಾವವು ದೇಶದ ಕೀರ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ತುಮಕೂರಿನ 4 ಕೆಎಆರ್ ಬೆಟಾಲಿಯನ್‌ನ ಸುಬೇದಾರ್ ಮೇಜರ್ ದಿನೇಶ್ ಸಿಂಗ್ ಸಂತಸ ವ್ಯಕ್ತಪಡಿಸಿದರು. ವಿವಿ ಕಲಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಎನ್‌ಸಿಸಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ರಕ್ಷಣಾ ಅಧಿಕಾರಿಗಳಾಗಿ ಯಶಸ್ಸನ್ನು ಸಾಧಿಸಿದ ನಂತರ ತಮ್ಮ ಪ್ರಯಾಣವನ್ನು ರೂಪಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಪೋಷಕರು ಮತ್ತು ಶಿಕ್ಷಕರ ಕೊಡುಗೆಗಳನ್ನು ಗೌರವಿಸಬೇಕು. ಎನ್‌ಸಿಸಿಯಲ್ಲಿ ಹಿರಿಯರು ಮತ್ತು ಕಿರಿಯರ ನಡುವಿನ ಸಮನ್ವಯಕ್ಕೆ ಕಾರಣ ಶಿಸ್ತು ಮತ್ತು ಒಗ್ಗಟ್ಟು ಎಂದರು. ಎನ್‌ಸಿಸಿ ಮಹಿಳಾ ತರಬೇತುದಾರೆ ಭವ್ಯಶ್ರೀ ಮಾತನಾಡಿ, ವಾರಕ್ಕೊಮ್ಮೆ ನಡೆಯುವ ಎನ್‌ಸಿಸಿ ವಿದ್ಯಾರ್ಥಿಗಳ ಮೆರವಣಿಗೆಯಿಂದ ಪ್ರೇರೇಪಿತರಾದ ಅನೇಕ ಸಾರ್ವಜನಿಕರಿದ್ದಾರೆ. ಅವರಲ್ಲಿ ರಾಷ್ಟಿçÃಯ ಮನೋಭಾವ ಉತ್ಕೃಷ್ಟಗೊಂಡಿದೆ. ಎನ್‌ಸಿಸಿ ಸಹಪಠ್ಯ ಚಟುವಟಿಕೆಗಳ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದತ್ತ ಗಮನಹರಿಸಬೇಕು. ಎನ್‌ಸಿಸಿ ಕ್ಷೇತ್ರದಲ್ಲಿ ಎ ಮತ್ತು ಬಿ ಗ್ರೇಡ್ ಪ್ರಮಾಣಪತ್ರಗಳನ್ನು ಗಳಿಸುವಲ್ಲಿ ಶಿಕ್ಷಣವು ಬಹುಮುಖ್ಯ ಪಾತ್ರ…

Read More