Author: News Desk Benkiyabale

ತುಮಕೂರು: ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅತೀಕ್ ಅಹಮದ್ ಹೇಳಿದರು. ಅವರು ನಗರದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅಭೂತಪೂರ್ವ ವಿಜಯ ಸಾಧಿಸಿದ್ದು, ಇದರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಅಸಂಬದ್ಧವಾಗಿ ಮಾತನಾಡುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಜನರಿಂದ ಉತ್ತಮವಾದ ತೀರ್ಮಾನ ದೊರೆತಿದ್ದು ಗೆಲುವಿನ ಸಾಧಿಸಿದ ಮೂರು ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಾ, ರಾಜ್ಯದ ಜನತೆಗೆ ಕೇವಲ ಸುಳ್ಳನ್ನೇ ಹೇಳುತ್ತಾ, ಸುಳ್ಳನ್ನು ಸತ್ಯವನ್ನಾಗಿಸುವ ಕೆಲಸ ಮಾಡಿದ್ದರು. ಈ ರೀತಿಯ ಸುಳ್ಳು ಪ್ರಚಾರಗಳಿಗೆ ಸೊಪುö್ಪ ಹಾಕದ ರಾಜ್ಯದ…

Read More

ತುಮಕೂರು: ಹೆಂಡತಿಯ ಶೀಲ‌ ಶಂಕಿಸಿ ಕೊಲೆ ಮಾಡಿದ್ದ ಅಪರಾಧಿ ಬಸವರಾಜ ಎಂಬಾತನಿಗೆ ಜೀವಾವಧಿ, ಕಾರಾಗೃಹ ಶಿಕ್ಷೆ ಮತ್ತು ರೂ. 50 ಸಾವಿರ ದಂಡ ವಿಧಿಸಿ ಮಧುಗಿರಿಯ ಮಾನ್ಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ  ಯಾದವ ಕರಕೇರ ಅವರು ತೀರ್ಪು ನೀಡಿದ್ದಾರೆ. 2020ರಲ್ಲಿ ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್, ಕೆ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಪರಾಧ ಸಾಭೀತಾದ್ದರಿಂದ ಬಸವರಾಜನಿಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಈ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ. ನಿರಂಜನಮೂರ್ತಿ, ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

Read More

ಹುಳಿಯಾರು: ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ತಂಬಾಕು ಮುಕ್ತ ಅಭಿಯಾನದ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು. ಹುಳಿಯಾರಿನ ಬಸ್ ನಿಲ್ದಾಣ, ಡಾ.ರಾಜ್‌ಕುಮಾರ್ ರಸ್ತೆ ಸೇರಿದಂತೆ ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುತ್ತಿರುವವರಿಗೆ ವಿದ್ಯಾರ್ಥಿಗಳು ಗುಲಾಬಿ ಹೂ ನೀಡುವ ಮೂಲಕ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರು ತಂಬಾಕು ವ್ಯಸನದಿಂದ ಮುಕ್ತಿ ಹೊಂದುವAತೆ ಅರಿವು ಮೂಡಿಸಿದರು. ಅರಿವು ಆಂದೋಲನಕ್ಕೆ ಪ್ರಾಂಶುಪಾಲರಾದ ಸಿ.ಜಿ.ಶೈಲಜಾ ಚಾಲನೆ ನೀಡಿ ಮಾತನಾಡಿ ತಂಬಾಕು ಸೇವನೆ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಆರೋಗ್ಯಕ್ಕೆ ಮಾರಕವಾಗುವ ತಂಬಾಕು ಸೇವನೆಯಿಂದ ದೂರ ಇರಬೇಕು ಎಂದು ಹೇಳಿದರು. ತಂಬಾಕು, ಗುಟ್ಕಾ ಮತ್ತು ಸಿಗರೇಟ್ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮಾರಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 80 ಲಕ್ಷ ಮತ್ತು ಪ್ರತಿ ದಿನ 22 ಸಾವಿರ ಜನರು ತಂಬಾಕು ಸೇವನೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಂಬಾಕು ಸೇವನೆಯ…

Read More

ತಿಪಟೂರು : ಕಲ್ಪತರು ನಾಡಿನಲ್ಲಿ 1922 ರಿಂದ ಬಡ, ಹಿಂದುಳಿದ, ರೈತ ಮಕ್ಕಳು ವಿದ್ಯಾವಂತರಾಗಲು ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಸಮಾಜಕ್ಕೆ ಸತ್ಪ್ರಜೆಯಾಗಿ ರೂಪಿಸಿ, ಶರಣರ ಚಿಂತನೆಗಳನ್ನು ಮನೆ ಮನಗಳಲ್ಲಿ ಬಿತ್ತಿ ಸದ್ದು ಗದ್ದಲವಿಲ್ಲದೆ ಕೊಡುಗೆ ಸಲ್ಲಿಸುತ್ತಿರುವ ಸಿಡ್ಲೆಹಳ್ಳಿ ಮಹಾ ಸಂಸ್ಥಾನ ಮಠ, ಶ್ರೀ ಗುರುಕುಲನಂದಾಶ್ರಮದಲ್ಲಿ ನವಂಬರ್ 24 ನೇ ಭಾನುವಾರದಂದು ಗುರುಕುಲದ ಹಿರಿಯ ವಿದ್ಯಾರ್ಥಿಗಳು ಹಾಗೂ ಸದ್ ಭಕ್ತರು ಲಿಂಗೈಕ್ಯ ಪಟ್ಟದ ಶ್ರೀ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳವರ 114 ನೇ ಸಂಸ್ಮರಣೆ ಹಾಗೂ ಪ್ರಸಕ್ತ ಶ್ರೀಗಳ 27 ನೇ ಪೀಠಾರೋಹಣ, ಧಾರ್ಮಿಕ ಸಮಾರಂಭ ಆಯೋಜಿಸಿರುತ್ತಾರೆ. ಪರಂಪರೆಯAತೆ ಈ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ಕೊಡಮಾಡುವ ‘ಗುರುಕುಲಶ್ರೀ’ ಗೌರವ ಪ್ರಶಸ್ತಿಯನ್ನು ಈ ವರ್ಷ ನೈಸರ್ಗಿಕ ಕೃಷಿ ವಿಜ್ಞಾನಿಯಾದ ,ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರ ದೊರಕುವಲ್ಲಿ ರಾಸಾಯನಿಕ ಮುಕ್ತ ಕೃಷಿ ಹಾಗೂ ಕುಲಾಂತರಿ ತಳಿ ನಿಷೇದದ ಬಗ್ಗೆ ದೊಡ್ಡಹೊಸೂರು ಸತ್ಯಾಗ್ರಹ ಮಾಡಿ ನಾಡಿನ ಸಹಸ್ರಾರು ರೈತರಲ್ಲಿ ಅರಿವು ಮೂಡಿಸುವ ಸೇವಾ…

Read More

ತುಮಕೂರು: ರಾಜ್ಯದಲ್ಲಿ ರೈತರ, ಮಠಮಾನ್ಯಗಳ, ದೇವಾಲಯಗಳ, ಸರ್ಕಾರಿ ಶಾಲೆಗಳ, ಸಾರ್ವಜನಿಕರ ಆಸ್ತಿಗೆ ವಕ್ಫ್ ನೋಟಿಸ್ ನೀಡಿರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಶನಿವಾರ ನಗರದಲ್ಲಿ ನಮ್ಮ ಭೂಮಿ- ನಮ್ಮ ಹಕ್ಕು ಹೆಸರಿನ ಹೋರಾಟ ನಡೆಸಿದರು. ಬಿಜಿಎಸ್ ವೃತ್ತದಲ್ಲಿ ಸಮಾಗಮಗೊಂಡ ಮುಖಂಡರು, ಹಿಂದೂಗಳ ಜಮೀನನ್ನು ವಕ್ಫ್ಗೆ ಪರಭಾರೆ ಮಾಡುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿ, ವಕ್ಫ್ ಸಮಸ್ಯೆ ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಲ್ಪಂಸAಖ್ಯಾತರ ತುಷ್ಟೀಕರಣವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಗೊಂದಲ ಮೂಡಿಸುತ್ತಿದೆ. ರೈತರ ಜಮೀನು, ದೇವಸ್ಥಾನ, ಮಠಮಾನ್ಯಗಳ ಜಾಗ, ಸಾರ್ವಜನಿಕ ಆಸ್ತಿಯನ್ನು ವಕ್ಫ್ಗೆ ನೀಡುವ ಸಂಚು ನಡೆದಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ ಎಂಬುದು ಜನಸಾಮಾನ್ಯರಿಗೂ ಗೊತ್ತಾಗಿದೆ. ಸರ್ಕಾರದಲ್ಲಿ ಯವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಕೇವಲ ವೋಟಿಗಾಗಿ ಯಾರನ್ನೋ ತುಷ್ಟೀಕರಣ ಮಾಡಿಕೊಂಡು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಯಾವುದೋ ಸಮುದಾಯದ ಓಲೈಕೆಗಾಗಿ ದೇಶದ…

Read More

ತುಮಕೂರು: ಜೇಬು ಕಳ್ಳತನ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಅಂತರ್ ಜಿಲ್ಲಾ ಜೇಬುಗಳ್ಳರ ಗ್ಯಾಂಗ್ ವೊಂದು ಸಿಕ್ಕಿಬಿದ್ದಿದೆ. ಕವಿತಾ (38), ಶ್ರೀಮತಿ ಸೂರ್ಯ (38), ಲಾವಣ್ಯ (ವಯಸ್ಸು ತಿಳಿದಿಲ್ಲ), ಸಬೀನಾ (25) ಬಂಧನಕ್ಕೊಳಗಾದ ಕಳ್ಳತನ ಆರೋಪಿಗಳು. ಇತ್ತೀಚೆಗೆ ತಿಪಟೂರು ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯಾರೋ ಅಪರಿಚಿತರು ನನ್ನ ಪರ್ಸ್ ಅನ್ನು ಕಳವು ಮಾಡಿರುತ್ತಾರೆಂದು ವಾಸಿಂ ಬಿನ್ ಮೆಹಬೂಬ್ ಸಾಬ್ ಗಾಂಧಿನಗರ ತಿಪಟೂರು ರವರು ದೂರು ನೀಡಿದ ಹಿನ್ನಲೆಯಲ್ಲಿ ತಿಪಟೂರುನಗರ ಪೊಲೀಸ್ ಠಾಣಾ ಮೊ.ನಂ 208/24 ಕಲಂ 303(2) ಬಿಎನ್‌ಎಸ್ ರಿತ್ಯಾ ಕೇಸು ದಾಖಲಿಸಲಾಗಿತ್ತು. ಬಸ್‌ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಹಿಳೆಯರನ್ನು ಠಾಣೆಗೆ ಕರೆತಂದು ವಿಚಾರ ಮಾಡಲಾಗಿ ಇವರುಗಳು ಬಸ್ಸುಗಳಲ್ಲಿ ಹೆಚ್ಚಿನ ಜನ ತುಂಬಿರುವ ಸಮಯದಲ್ಲಿ ಪ್ರಯಾಣಿಕರ ಕುತ್ತಿಗೆಯಲ್ಲಿದ್ದ ಚಿನ್ನಾಭರಣಗಳನ್ನು, ಪರ್ಸ್‌ಗಳನ್ನು ಯಾಮಾರಿಸಿ ಕಳವು ಮಾಡುತ್ತಿದ್ದುದ್ದಾಗಿ ಬಾಯಿ ಬಿಟ್ಟಿದ್ದಾರೆ. ಅಪರ ಪೊಲೀಸ್ ಅಧೀಕ್ಷಕರುಗಳಾದ ವಿ ಮರಿಯಪ್ಪ ಹಾಗೂ ಬಿ ಎಸ್ ಅಬ್ದುಲ್‌ಖಾದರ್ ರವರ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗದ ಉಪಾಧಿಕ್ಷಕರಾದ ವಿನಾಯಕ ಶೆಟಗೇರಿ…

Read More

ಗೂಳೂರು: ಅಡಿಕೆ ಚೀಲಗಳನ್ನು‌ ಕಳ್ಳತನ‌ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸನ್ನಕುಮಾರ್ (40) ಕಳ್ಳತನ‌ ಆರೋಪಿ. ಈ ತನನ್ನು ವಶಕ್ಕೆ ಪಡೆಯಲಾಗಿದ್ದು, 9 ಒಣಗಿದ ಅಡಿಕೆಯ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಅಡಿಕೆ‌ ಕಳ್ಳತನಕ್ಕೆ ಸಂಬಂಧಿಸಿದಂತೆ ಗೂಳೂರು ಹೋಬಳಿಯ ಕೋಡಿಹಳ್ಳಿಯಲ್ಲಿಯೇ ಎರಡು ಪ್ರಕರಣ ದಾಖಲಾಗಿದ್ದವು. ಪ್ರಕರಣ ಭೇದಿಸಲು ಪೊಲೀಸರ ತಂಡವನ್ನು ರಚಿಸಲಾಗಿತ್ತು. ಪ್ರಕರಣವನ್ನು ಭೇದಿಸುವಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ.ಮರಿಯಪ್ಪ, ಬಿ.ಎಸ್. ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ಹಾಗೂ ಚಂದ್ರಶೇಖರ್ ಪೊಲೀಸ್ ಉಪಾಧೀಕ್ಷಕರು ತುಮಕೂರು ಉಪ-ವಿಭಾಗ, ಕ್ಯಾತ್ಸಂದ್ರ ವೃತ್ತ ನಿರೀಕ್ಷಕರಾದ ರಾಮಪ್ರಸಾದ್ ಮತ್ತು ಹೆಬ್ಬರು ಪೊಲೀಸ್ ಠಾಣೆ. ಪಿ.ಎಸ್.ಐ ಬೈರೇಗೌಡ ಜಿ.ಎಸ್. ಮತ್ತು ಸಿಬ್ಬಂದಿಗಳಾದ ಸಿದ್ದರಾಜು, ಸುರೇಶ್, ಪುಟ್ಟರಾಜು, ಬಸವರಾಜು, ವಿರೂಪಾಕ್ಷ ಪಾಟೀಲ ರವರುಗಳು ಪತ್ತೆ ಮಾಡುವಲ್ಲಿ ಶ್ರಮಿಸಿದ್ದು, ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ.ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

Read More

ತುರುವೇಕೆರೆ: ಭೂಮಿಯಲ್ಲಿನ ಅಂತರ್‌ಜಲ ಹೆಚ್ಚಳಕ್ಕೆ ಚಕ್ ಡ್ಯಾಮ್ ನಿರ್ಮಾಣ ಮಾಡುವ ಯೋಜನೆಗಳನ್ನು ಸರ್ಕಾರ ನೀಡಬೇಕು ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ತಾಲೂಕಿನ ಮಾಯಸಂದ್ರ ಹೋಬಳಿ ಹೊಣಕೆರೆ, ಬೋಮ್ಮೇನಹಳ್ಳಿ,ಹರಳಹಳ್ಳಿ, ನಾಗಲಾಪುರ ಗ್ರಾಮದಲ್ಲಿನ ಹಳ್ಳಗಳಿಗೆ ಹೇಮಾವತಿ ಇಲಾಖೆಯಿಂದ ಮುಂಜೂರಾಗಿರುವ ಚಕ್ ಡ್ಯಾಮ್ ಗಳಿಗೆ ಭೂಮಿ ಪೂಜೆ ನೆರವೇರಸಿ ಮಾತನಾಡಿದ ಅವರು ಮಳೆಗಾಲದಲ್ಲಿ ಮಳೆಯ ನೀರು ಪೋಲಾಗದಂತೆ ಕ್ರಮ ವಹಿಸುವಂತಹ ಕಾರ್ಯಕ್ರಮವನನು ಕೈಗೊಳ್ಳಬೇಕು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವಂತಹ ಮಳೆಯ ನೀರನ್ನು ಸಂಗ್ರಹಿಸಿ ಬೂಮಿಯಲ್ಲಿ ಹಿಂಗಿಸುವAತಹ ಕೆಲಸ ಮಾಡಿದರೆ ಭೂಮಿಯಲ್ಲಿ ಅಂತರ್ ಜಲ ಮಟ್ಟ ಹೆಚ್ಚಾಗಿ ಬೇಸಿಗೆಯಲ್ಲಿ ಬೋರ್‌ವೆಲ್‌ಗಳಲ್ಲಿ ಸಮರ್ಪಕವಾಗಿ ಸಿಗಲಿದೆ ಇದರಿಂದ ರೈತರಿಗೆ ಬೆಳೆಗಳನನು ಬೆಳೆಯಲು ಸಹಕಾರಿಯಾಗಲಿದೆ ಎಂದರು. ಈ ಸಂದರ್ಬದಲ್ಲಿ ಮುಖಂಡರಾದ ರಾಜೀವ್ ಕೃಷ್ಣಪ್ಪ, ಸೋಮಶೇಖರಯ್ಯ, ಶಂಕರೇಗೌಡ, ಪ್ರೇಮಕುಮಾರ್, ದೀಪು ಸೇರಿದಂತೆ ಇತರರು ಇದ್ದರು.

Read More

ಕೊರಟಗೆರೆ: ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಬಫರ್‌ಡ್ಯಾಂ ನಿರ್ಮಾಣದ ಸ್ಥಳ ವಿಕ್ಷಣೆ ಮತ್ತು 12ಗ್ರಾಮದ ರೈತರ ಜೊತೆ ಸಮಾಲೋಚನೆ ಸಮಾವೇಶದ ಹೇಲಿಪ್ಯಾಡ್ ಸ್ಥಳಕ್ಕೆ ಗುರುವಾರ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಅಶೋಕ್‌ವೆಂಕಟ್ ಬೇಟಿನೀಡಿ ಗ್ರಾಮ ಮತ್ತು ಜಮೀನಿನ ಪರಿಶೀಲನೆ ನಡೆಸಿದರು. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಬೂಚನಹಳ್ಳಿ ಗ್ರಾಮಕ್ಕೆ ಗುರುವಾರ ತುಮಕೂರು ಜಿಲ್ಲಾಧಿಕಾರಿ ಬೇಟಿನೀಡಿ ಪರಿಶೀಲನೆ ನಡೆಸಿ ರೈತರಿಂದ ಮನವಿ ಸ್ವೀಕರಿಸಿದರು. ನಂತರ ಅಧಿಕಾರಿಗಳ ಜೊತೆ ಚರ್ಚಿಸಿ ಹೇಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ಮತ್ತು ಬಂದೋಬಸ್ತ್ ವಿಚಾರವಾಗಿ ಮಾಹಿತಿ ಪಡೆದರು. ಸಮಾವೇಶದ ವೇಳೆ ಯಾವುದೇ ರೀತಿಯ ಗೊಂದಲ ಆಗದಂತೆ ರೈತರಿಗೆ ಮನವರಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಂಡಿ ಕಾಲಿಗೆ ಬಿದ್ದ ರೈತ.. ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಹೇಲಿಪ್ಯಾಡ್ ಸ್ಥಳ ಪರಿಶೀಲನೆ ನಡೆಸಲು ಆಗಮಿಸಿದ ವೇಳೆ ಸ್ಥಳೀಯ ರೈತನೋರ್ವ ನಮ್ಮ ಜಮೀನು ಮತ್ತು ಮನೆ ಕಿತ್ತುಕೊಳ್ಳಬೇಡಿ. ನಮ್ಮ ಊರಿನಲ್ಲೇ ನಮಗೇ ಬದುಕಲು ಅವಕಾಶ ಮಾಡಿಕೋಡಿ.…

Read More

ತುಮಕೂರು: ದೇಶದಲ್ಲಿ ಉಪಶಮನಕಾರಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದಕ್ಕೆ ಸಂಬAಧಿಸಿದAತೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಇಂದು ಅಜಿತ್ ಐಸಾಕ್ ಫೌಂಡೇಷ್ ಜತೆ ಒಪ್ಪಂದಕ್ಕೆ ಸಹಿ ಮಾಡಿದೆ. ಇದರ ಅನ್ವಯ ತುಮಕೂರಿನಲ್ಲಿ 63 ಹಾಸಿಗೆಗಳ ಉಪಶಮನಕಾರಿ ಆರೈಕೆ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಇದು ಕಾರ್ಯಾರಂಭ ಮಾಡಲಿದೆ. ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಾರಣಾಂತಿಕ ಅನಾರೋಗ್ಯಕ್ಕೆ ಒಘಗಾದ ರೋಗಿಗಳಿಗೆ ಸಹಾನುಭೂತಿಯ, ಘನತೆಯ ಆರೈಕೆ ಸೇವೆ ಒದಗಿಸುವುದು ಇದರ ಉದ್ದೇಶ. ಸಮುದಾಯ ಆಧರಿತ ಆರೈಕೆದಾರರಿಗೆ ತರಬೇತಿ ಮತ್ತು ಅಗತ್ಯ ಬೆಂಬಲವನ್ನೂ ಈ ಕೇಂದ್ರ ಒದಗಿಸಲಿದೆ ಎಂದು ಜೆಎಯು ಅಧ್ಯಕ್ಷ ರೋನಾಲ್ಡ್ ಜೆ.ಡೇನಿಯಲ್ಸ್ ಮತ್ತು ಎಐಎಫ್ ಸಹ ಸಂಸ್ಥಾಪಕ ಅಜಿತ್ ಐಸಾಕ್ ಪ್ರಕಟಣೆಯಲ್ಲಿ ಹೇಳಿದ್ದಾರೆ. ದೇಶದಲ್ಲಿ ಸುಮಾರು 80 ಲಕ್ಷದಿಂದ 1ಕೋಟಿ ಮಂದಿಗೆ ಉಪಶಮನಕಾರಿ ಆರೈಕೆ ಅಗತ್ಯವಿದ್ದು, ಈ ಸೌಲಭ್ಯ ಶೇಕಡ 1 ರಿಂದ 2ರಷ್ಟು ಮಂದಿಗೆ ಮಾತ್ರ ಲಭ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಸೇವೆಗಳು ವಿರಳವಾಗಿದ್ದು, ಈ ಸೌಲಭ್ಯ ಪಡೆಯಲು ಹಣಕಾಸು ಕೊರತೆಯೂ ಬಾಧಿಸುತ್ತಿದೆ. ಗುಣಮಟ್ಟದ…

Read More