ತುಮಕೂರು: ಡಿಜಿಟಲ್ ಕೌಶಲ್ಯಗಳನ್ನು ಹೆಚ್ಚಾಗಿ ರೂಢಿಸಿಕೊಂಡರೆ ಮಾಧ್ಯಮರಂಗದಲ್ಲಿ ಉತ್ತಮ ಭವಿಷ್ಯವಿದೆ. ಇದರೊಂದಿಗೆ ಪ್ರಚಲಿತ ವಿದ್ಯಮಾನಗಳ ತಿಳುವಳಿಕೆ, ಉತ್ತಮ ಭಾಷಾಜ್ಞಾನ ಕೂಡ ಮುಖ್ಯ ಎಂದು ದೂರದರ್ಶನ ಕೇಂದ್ರದ ಹಿರಿಯ ವಾರ್ತಾವಾಚಕಿ ಚೇತನಾ ರಾಜೇಂದ್ರ ತಿಳಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಮಾಧ್ಯಮರಂಗದ ಉದ್ಯೋಗಾವಕಾಶಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಡಿಜಿಟಲ್ ಸಾಧ್ಯತೆಗಳಿಂದಾಗಿ ಮಾಧ್ಯಮರಂಗ ವಿಸ್ತಾರವಾಗಿ ಬೆಳೆದಿದೆ; ಆದರೆ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗಬೇಕಿದೆ ಎಂದರು. ಮಾಧ್ಯಮದ ವ್ಯಾಪ್ತಿ ಮತ್ತು ಪರಿಭಾಷೆ ಬದಲಾಗಿದೆ. ಸಾಂಪ್ರದಾಯಿಕ ಪತ್ರಿಕೋದ್ಯಮ ಬದಲಾವಣೆ ಹೊಂದಿ ಡಿಜಿಟಲ್‌ನ ವಿವಿಧ ಆಯಾಮಗಳು ಬದುಕನ್ನು ಆವರಿಸಿಕೊಂಡಿದೆ. ಜಾಹೀರಾತು, ಸಾರ್ವಜನಿಕ ಸಂಪರ್ಕ, ಕಾರ್ಪೋರೇಟ್ ಸಂವಹನ, ಗ್ರಾಫಿಕ್ಸ್ ಮತ್ತು ಅನಿಮೇಶನ್, ಡಿಜಿಟಲ್ ಮಾರ್ಕೆಟಿಂಗ್, ಈವೆಂಟ್ ಮ್ಯಾನೇಜ್ಮೆಂಟ್, ಮೀಡಿಯಾ ಪ್ಲಾನಿಂಗ್, ಬ್ರಾಂಡಿAಗ್, ಕಂಟೆAಟ್ ರೈಟಿಂಗ್‌ನAತಹ ಕ್ಷೇತ್ರಗಳತ್ತ ಯುವಕರು ಗಮನ ಹರಿಸಬೇಕು ಎಂದರು. ಭಾಷೆ ಎಲ್ಲದಕ್ಕೂ ಜೀವಾಳ. ಉತ್ತಮ ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಪ್ರತಿದಿನ ಓದುವುದರಿಂದ ಭಾಷಾಕೌಶಲ್ಯ ಬೆಳೆಯುತ್ತದೆ, ತಿಳುವಳಿಕೆ ವಿಸ್ತಾರವಾಗುತ್ತದೆ. ರಾಷ್ಟಿçÃಯ,…
Author: News Desk Benkiyabale
ವರದಿ: ಎಸ್. ಮೈಕೆಲ್ ನಾಡಾರ್ ಪಾವಗಡ: ಬಿಪಿಎಲ್ ಹಾಗೂ ಅಂತ್ಯೋದ್ಯಯ ಕಾರ್ಡ್ ಪಡೆಯಲು ರಾಜ್ಯ ಸರ್ಕಾರವು ನಿಗದಿತ ಮಾನದಂಡವನ್ನು ರೂಪಿಸಿದೆ. ಆ ನಿಯಮಗಳನ್ನು ಉಲ್ಲಂಘಿಸಿದ್ದರೆ ಅಂತಹವರ ಕಾರ್ಡ್ಗಳನ್ನು ಪತ್ತೆ ಮಾಡಿ ಅನರ್ಹ ಎಂದು ಪರಿಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ರದ್ದು ಮಾಡುತ್ತಿದ್ದಾರೆ. ಅದರಂತೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿಯೂ ಅನರ್ಹರ ಪಡಿತರ ಚೀಟಿ ರದ್ದುಗೊಳಿಸುತ್ತಿದೆ. ಆದರೆ ಕೆಲವು ಅರ್ಹ ಪಡಿತರ ಚೀಟಿಗಳನ್ನು ಸಸ್ಪೆನ್ಷನ್ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಬಿ.ಪಿ.ಎಲ್ ಕಾರ್ಡ್ ಪಡೆದ ಸರ್ಕಾರಿ ನೌಕರರು ಮತ್ತು ತೆರಿಗೆ ಪಾವತಿ ಮಾಡುವವರ ಪಡಿತರ ಚೀಟಿಗಳನ್ನು ರದ್ದುಗೊಳಿಸ ಬೇಕಾಗಿದೆ. ಆದರೆ ಈಗ ಕೆಲ ಗ್ರಾಮಗಳಲ್ಲಿ ಬಡವರ ಪಡಿತರ ಚೀಟಿಗಳೂ ಸಹ ತೆರಿಗೆ ಪಾವತಿದಾರರ ಎಂದು ಸಸ್ಪೆನ್ಷನ್ ಮಾಡಲಾಗಿದೆ. ಪಡಿತರ ಚೀಟಿ ಬಂದ್ ಆಗಿದೆ. ಅಂದಿನಿAದ ರೇಷನ್ ಕಾರ್ಡ್ಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸುತ್ತಿದ್ದಾರೆ ಸರ್ಕಾರಿ ಕಚೇರಿಗಳು, ಗ್ರಾಮ ಒನ್ ಸೆಂಟರ್‌ನಲ್ಲಿ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಡಿತರ ಚೀಟಿ ಕೇಳಿದ್ರೆ, ವಿನಾಕಾರಣ ಕಾಲಹರಣ ಮಾಡ್ತಿದ್ದಾರೆ ಎಂದು…
ತುಮಕೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಮಟ್ಟದ ಕ್ರೀಡಾಕೂಟದ ಅಂಗವಾಗಿ ಇಂದಿನಿAದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಕ್ರೀಡಾಜ್ಯೋತಿ ಮೆರವಣಿಗೆಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ನಗರದಲ್ಲಿಂದು ವಿದ್ಯುಕ್ತ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲೆಯಾದ್ಯಂತ ಕ್ರೀಡಾಜ್ಯೋತಿ ಕೊಂಡೊಯ್ಯುವ ವಾಹನಕ್ಕೆ ಪೂಜೆ ಸಲ್ಲಿಸಿ ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಚಾಲನೆ ನೀಡಿದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿ, ತುಮಕೂರಿನಲ್ಲಿ ಇದೇ ಮೊದಲ ಬಾರಿಗೆ ನ. 24 ರಂದು ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಇದರ ಅಂಗವಾಗಿ ಕ್ರೀಡಾ ಜ್ಯೋತಿಯನ್ನು ಇಡೀ ಜಿಲ್ಲೆಯಲ್ಲಿ ಶಾಂತಿಯ ಸಂದೇಶ ಸಾರುವ ಸಲುವಾಗಿ ಕ್ರೀಡಾಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ. ಈ ಕ್ರೀಡಾಜ್ಯೋತಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಸಂಚರಿಸಿ ಸಮಾಜದಲ್ಲಿ ಶಾಂತಿ, ಸಹೋದರತ್ವ ಭಾವನೆಯಿಂದ ಬಾಳಬೇಕು ಎಂಬ ಸಂದೇಶ ಸಾರಲಿದೆ ಎಂದರು. ಪ್ರತಿಯೊಬ್ಬ ಪತ್ರಕರ್ತರಲ್ಲೂ ಕ್ರೀಡಾ ಮನೋಭಾವನೆ ಮೂಡಬೇಕು. ಈ ನಿಟ್ಟಿನಲ್ಲಿ…
ತುಮಕೂರು: ನಗರದ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಹದಾರ್ಢ್ಯ ಪಟು ಶ್ರೀಹರಿ ಮತ್ತು ಹೈಜಂಪ್ ಕ್ರೀಡಾಳು ದರ್ಶನ್ ಹಾಗೂ ರಾಜೋತ್ಸವ ಪ್ರಶಸ್ತಿ ಪಡೆದ ವಿದ್ತಾ÷್ಯವಾಹಿನಿ ಪ್ರದೀಪಕುಮಾರ್ ಅವರನ್ನು ಅಭಿನಂದಿಸಲಾಯಿತು. ಇತ್ತೀಚೆಗೆ ಥೈಲಾಂಡ್‌ನಲ್ಲಿ ನಡೆದ ವಿಶ್ವ ದೇಹದಾರ್ಢ್ಯ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕಂಚಿನ ಪದಕ ಪಡೆದ ಶ್ರೀಹರಿ, ರಾಜ್ಯಮಟ್ಟದ ಪಿಯು ಅಥ್ಲೆಟಿಕ್ಸ್ ಕ್ರೀಡಾಕೂಟದ ಹೈಜಂಪ್ ವಿಭಾಗದಲ್ಲಿ 1.91 ಮೀಟರ್ ಎತ್ತರ ಜಿಗಿದು ಚಿನ್ನದ ಪದಕವನ್ಬು ತನ್ನದಾಗಿಸಿಕೊಂಡ ಗ್ರಾಮೀಣ ಪ್ರತಿಭೆ ದರ್ಶನ್ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರಾದ ವಿದ್ಯಾನಿಧಿ ಶಿಕ್ಷಣ ಸಂಸ್ಥೆಯ ಪ್ರದೀಪಕುಮಾರ್ ಅವರನ್ನು ಅಂತಾರಾಷ್ಟಿçÃಯ ಕ್ರೀಡಾಪಟು ಟಿ.ಕೆ. ಆನಂದ್ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಹೊಸದುರ್ಗ ತಾಲ್ಲೂಕಿನ ಒಂದು ಕುಗ್ರಾಮದಲ್ಲಿ ಹುಟ್ಟಿ ಸಮರ್ಪಕ ಪರಿಕರಗಳಿಲ್ಲದಿದ್ದರೂ ಹೈಜಂಪ್ ನಂತಹ ಕ್ರೀಡೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ರಾಷ್ಟçಮಟ್ಟದ ಪಾಲ್ಗೊಳ್ಳಲು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಹಾಗೆಯೇ ಶ್ರೀಹರಿ ಕೂಡ ತನ್ನ…
ತುಮಕೂರು: ಪಾಶ್ಚಾತ್ಯರ ಅನುಕರಣೆಯನ್ನು ತ್ಯಜಿಸಿ, ದಾಸ್ಯ ಶಿಕ್ಷಣವನ್ನು ಬದಲಿಸಿ, ಶುದ್ಧ ಚಿಂತನೆಯಿAದ ಇಂದಿನ ಶಿಕ್ಷಣವನ್ನು ಭಾರತೀಕರಣಗೊಳಿಸಿದರೆ ಮಾತ್ರ ಸಮರ್ಥ ಭಾರತವನ್ನು ಕಟ್ಟಬಹುದು ಎಂದು ಬೆಂಗಳೂರಿನ ವಿಭು ಅಕಾಡೆಮಿಯ ಮುಖ್ಯಸ್ಥೆ ಡಾ. ವಿ. ಬಿ. ಆರತಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯವು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಮರ್ಥ ಚಿಂತನೆ ಮತ್ತು ವಿಕಸಿತ ಪಥ’ ವಿಷಯದ ಕುರಿತು ಮಾತನಾಡಿದರು. ಸಮರ್ಥ ಚಿಂತನೆಯ ವ್ಯಕ್ತಿತ್ವ ನಿರ್ಮಾಣದ ಶಿಕ್ಷಣ ಭಾರತೀಯರದ್ದಾಗಿತ್ತು. ದೇಹ ಬುದ್ಧಿ ಮನಸ್ಸನ್ನು ಸಶಕ್ತಗೊಳಿಸುವ ಉದ್ಯೋಗದಾತ ವಿದ್ಯೆ ಭಾರತೀಕರಣವಾಗಿತ್ತು. ಭಾರತದ ಮೇಲೆ ಆದ ಸಾವಿರಾರು ವರ್ಷಗಳ ಆಕ್ರಮಣದಿಂದಾಗಿ, ಮೆಕಾಲೆ ನಮ್ಮ ಶಿಕ್ಷಣಕ್ಕೆ ಕೊಟ್ಟ ಪೆಟ್ಟಿನಿಂದಾಗಿ ನಾವೆಲ್ಲರೂ ದಾಸ್ಯ ಶಿಕ್ಷಣವನ್ನು ಈಗಲೂ ಅನುಸರಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಭಾರತವೇ ನಮ್ಮ ಅಸ್ಮಿತೆ. ಎಲ್ಲ ವೈವಿಧ್ಯಗಳ ಜೊತೆ ಬದುಕುವುದೇ ಭಾರತ. ಆಕ್ರಮಣಗಳ ಪೆಟ್ಟು ತಿಂದರೂ ಸಹ ಭಾರತೀಯರು ಸ್ವಾಭಿಮಾನದಿಂದ ಎದೆ ಎತ್ತಿ ನಿಂತಿರುವುದಕ್ಕೆ ಕಾರಣ ನಮ್ಮಲ್ಲಿರುವ ಪ್ರಕೃತಿಗೆ ಅನುಗುಣವಾದ ವೈವಿಧ್ಯತೆ. ವಿದೇಶಕ್ಕೆ ಹಾರಿ…
ತುಮಕೂರು: ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರ ತುಮಕೂರು, ಶ್ರೀ ಜ್ಞಾನ ಮಂದಾರ ಟ್ರಸ್ಟ್ ಬೆಂಗಳೂರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ನ. 24 ರಂದು ಬೆಳಿಗ್ಗೆ ೧೦ ಗಂಟೆಗೆ ರ‍್ಪಡಿಸಲಾಗಿದೆ. ಕರ‍್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ನೆರವೇರಿಸುವರು. ಅಧ್ಯಕ್ಷತೆಯನ್ನು ಬೆಂಗಳೂರಿನ ಆರ್‌ಎನ್‌ಎಸ್ ಪದವಿ ಪರ‍್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರವಿಶಂಕರ್ ಬಿ.ವಿ. ವಹಿಸಲಿದ್ದಾರೆ. ರ‍್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕರ‍್ಜುನ ಕೆಂಕೆರೆ ಮಂದಾರ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಚಂದನವನ ಕಂಪು ಮಾಸ ಪತ್ರಿಕೆಯ ಸಂಪಾದಕಿಯಾದ ಚಿಕ್ಕಮಗಳೂರಿನ ವಾಣಿ ಅವರು ಬಾಳೊಂದು ಭಾವಗೀತೆ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಫ್ಲೋರಿಡಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಝಕಾವುಲ್ಲಾ ಷರೀಫ್, ರ‍್ನಾಟಕ ಗ್ರಾಮ್ಮೆನ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾದ ಪ್ರದೀಪ್ ಎಸ್., ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ಸಂಸ್ಥಾಪಕರಾದ…
ತುಮಕೂರು : ತಾಲ್ಲೂಕಿನ ಹೆಬ್ಬೂರು ಗ್ರಾಮದ ಶ್ರೀ ಲಕ್ಷಿö್ಮÃವೆಂಕಟೇಶ್ವರ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಂದಾಜು 7286 ರೂ. ಮೌಲ್ಯದ 10.2 ಲೀಟರ್ ಪ್ರಮಾಣದ ಡೈಮಿಥೋಯೇಟ್-30% ಇ.ಸಿ.(ರೋಗಾರ್) ಎಂಬ ನಿಷೇಧಿತ ಕೀಟನಾಶಕವನ್ನು ಕೃಷಿ ಇಲಾಖೆಯ ಜಾರಿದಳ ವಿಭಾಗವು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ಕೀಟನಾಶಕ ಪರಿವೀಕ್ಷಕ ಹಾಗೂ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ. ತರಕಾರಿ ಮತ್ತು ಹಣ್ಣಿನ ಬೆಳೆಗಳಿಗೆ ಈ ಕೀಟನಾಶಕ ಬಳಸುವುದನ್ನು ನಿಷೇಧ ಮಾಡಿದ್ದರೂ ಸಹ ಲೇಬಲ್‌ನಲ್ಲಿ ನಮೂದಿಸಿ ನ್ಯೂ ಪ್ಯಾಕ್ ಆಗ್ರೋ ಕೆಮ್ ಕಂಪನಿಯು ಡೈಮಿಥೋಯೇಟ್-30% ಇ.ಸಿ., (ರೋಗಾರ್) ಎಂಬ ಕೀಟನಾಶಕವನ್ನು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದರಿಂದ ಜಪ್ತಿ ಮಾಡಲಾಗಿದೆ. ಕೃಷಿ ಇಲಾಖೆಯ ಜಾರಿದಳ ವಿಭಾಗವು ನವೆಂಬರ್ 19ರಂದು ಶ್ರೀ ಲಕ್ಷಿö್ಮÃವೆಂಕಟೇಶ್ವರ ಆಗ್ರೋಟೆಕ್ ಕೀಟನಾಶಕ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿ ನಿಯಮಾನುಸಾರ ಪರಿಶೀಲಿಸಿದಾಗ, ಮೇಲ್ಕಂಡ ಉಲ್ಲಂಘನೆ ಕಂಡು ಬಂದಿತ್ತು. ಕಳೆದ ಬಾರಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ನಿಷೇಧಿತ ಕೀಟನಾಶಕ ದಾಸ್ತಾನಿಗೆ…
ತುಮಕೂರು: 2300 ವರ್ಷಗಳ ಹಿಂದೆ ಅಶೋಕ ಬರೆಸಿದ ಮೊಟ್ಟಮೊದಲ ಉಪಲಬ್ಧ ಲಿಪಿಯ ಇತಿಹಾಸದಿಂದ ಗೋಚರಿಸುವುದು ಜ್ಞಾನ ವಿಸ್ತಾರವಾದಂತೆಲ್ಲ ಲಿಪಿಯ ಅವಶ್ಯಕತೆ ಹೆಚ್ಚಾಯಿತೆಂದು ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ತಿಳಿಸಿದರು. ತುಮಕೂರು ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ಶಾಸನ ಡಿಪ್ಲೋಮಾ ತರಗತಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಪಾರಂಪರಿಕವಾಗಿ ಬರುವ ವಿದ್ಯೆಯನ್ನು ಕೈಬಿಟ್ಟು ಅಕ್ಷರ ಜ್ಞಾನದ ಹಿಂದೆ ಬಿದ್ದಿರುವ ಯುಗದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ಪ್ರಯತ್ನಪೂರ್ವಕವಾಗಿ ಕಲಿಯುವ ಅಕ್ಷರವನ್ನು ಎಂದಿಗೂ ವಿದ್ಯೆಯೊಂದಿಗೆ ಬೆರೆಸಬಾರದು. ಕುಲಕಸುಬಿನ ವಿದ್ಯೆ ಮಾಯವಾಗಿ ಕಾಂಚಾಣದ ಹಸಿವು ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಜ್ಞಾನ ನೀಡುವ ಪವಿತ್ರ ಕೇಂದ್ರವಾಗಬೇಕು. ಪ್ರಾಧ್ಯಾಪಕರು ವಿಷಯ ಕುರಿತು ಆಳವಾದ ಜ್ಞಾನ ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ವಿಷಯ ಮುಟ್ಟಿಸಬೇಕು ಎಂದರು. ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ…
ತುಮಕೂರು : ಜಿಲ್ಲೆಯ ತುರುವೇಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸಕಾಲದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಎಕ್ಸರೇ, ಇಸಿಜಿ ಯಂತ್ರಗಳು ಕೆಟ್ಟುಹೋಗಿವೆ. ಲಭ್ಯವಿರುವ ಬೆರಳೆಣಿಕೆಯಷ್ಟು ವೈದ್ಯರು ಕ್ಲಿನಿಕ್‌ಗಳನ್ನು ತೆರೆದು ರೋಗಿಗಳನ್ನು ತಮ್ಮ ಕ್ಲಿನಿಕ್‌ಗಳಿಗೆ ಶಿಫಾರಸ್ಸು ಮಾಡುತ್ತಿದ್ದಾರೆಂದು ತಾಲ್ಲೂಕು ಆಸ್ಪತ್ರೆಯ ವೈಫಲ್ಯಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಬಳಿ ದೂರುಗಳ ಸುರಿಮಳೆಗೈದರು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಅವರು ನವೆಂಬರ್ 12ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಜಿಲ್ಲೆಯಲ್ಲಿರುವ ಆಸ್ಪತ್ರೆ, ವಿದ್ಯಾರ್ಥಿನಿಲಯ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುರುವೇಕೆರೆ ತಾಲ್ಲೂಕು ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆ ಸೇವೆಯ ಬಗ್ಗೆ ಸಾರ್ವಜನಿಕರು ದೂರುಗಳನ್ನು ಹೇಳಿಕೊಂಡರು. ತಾಲ್ಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಆಸ್ಪತ್ರೆ ಸಮಸ್ಯೆಗಳ ಚಿತ್ರಣದ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಆಸ್ಪತ್ರೆಯಲ್ಲಿ…
ತುಮಕೂರು: ಸ್ವಾತAತ್ರö್ಯ ಪೂರ್ವದಲ್ಲಿ ಮತ್ತು ನಂತರದಲ್ಲಿ ವಕೀಲರ ಸಾಧನೆ ಅವಿಸ್ಮರಣೀಯ,ವಕೀಲರು ರಾಜಕೀಯ,ಸಹಕಾರ,ವಕೀಲ ವೃತ್ತಿ,ಸಮಾಜಸೇವೆ,ಧಾರ್ಮಿಕ ವಲಯ ಹೀಗೆ ನಾನಾ ವಿಭಾಗಗಳಲ್ಲಿ ವಕೀಲರು ಸಮಾಜಮುಖಿಯಾಗಿ ಕೆಲಸ ಮಾಡಿ ಸಮಾಜದ ಅಭ್ಯುದಯಕ್ಕಾಗಿ ದುಡಿದಿದ್ದಾರೆ,ಮುಂದೆಯೂ ವಕೀಲರು ನೊಂದವರ,ದೀನ-ದಲಿತರ,ಬಡವರ ನೋವಿಗೆ ಕಣ್ಣೀರಿಗೆ ಧ್ವನಿಯಾಗಿ ಕೆಲಸ ಮಾಡಲಿ ಎಂದು ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಹೇಳಿದರು. ಅವರು ಇಂದು ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ ರಾಜ್ಯೋತ್ಸವ ಪ್ರಶಸ್ತಿ,ಕನಕಶ್ರೀ ಪ್ರಶಸ್ತಿ,ಸಹಕಾರರತ್ನ ಪ್ರಶಸ್ತಿ ಪಡೆದ ವಕೀಲರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷರು ಮತ್ತು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹೆಬ್ಬಾಕಮಲ್ಲಿಕಾರ್ಜುನಯ್ಯನವರು ನನಗೆ ಎಲ್ಲಾ ಅಭಿನಂದನೆಗಳಿಗಿAತ ವಕೀಲರ ಸಂಘ ನೀಡಿದ ಸನ್ಮಾನ ದೊಡ್ಡದು,ನಾನು ಸಹಕಾರ ರಂಗದಲ್ಲಿ,ಸಮಾಜಸೇವೆಯಲ್ಲಿದ್ದು ಕಳೆದ 30 ವರ್ಷಗಳಿಂದ ಸಮಾಜದ ಅಭ್ಯುದಯಕ್ಕಾಗಿ ದುಡಿಯುತ್ತಿದ್ದೇವೆ,ಮುಂದೆಯೂ ಸಮಾಜಕ್ಕಾಗಿ ಸಹಕಾರ ರಂಗದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಿ ಬಡ ಮತ್ತು ಮಧ್ಯಮ ವರ್ಗದವರಿಗೋಸ್ಕರ ಹಲವಾರು ಕಾರ್ಯಕ್ರಮ ರೂಪಿಸಿ ಅವರಿಗೆ ಆರ್ಥಿಕ ಚೈತನ್ಯ…