Author: News Desk Benkiyabale

ತುಮಕೂರು : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಡಿಸೆಂಬರ್ 2ರಂದು ಆಗಮಿಸುತ್ತಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ/ ಉದ್ಘಾಟನೆ, ಸವಲತ್ತುಗಳ ವಿತರಣೆಗೆ ಸಕಲ ಸಿದ್ಧತೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷ ಉಂಟಾಗದAತೆ ಜಾಗರೂಕತೆಯಿಂದ ಕಾರ್ಯ ನಿರ್ವಹಿಸಬೇಕು. ವಿವಿಧ ಇಲಾಖೆಗಳಲ್ಲಿ ಉದ್ಘಾಟನೆಗೆ ಸಿದ್ಧವಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸಬೇಕು ಹಾಗೂ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಕೆಲಸಗಳು ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಲಿರುವ ಕಾಮಗಾರಿ, ಶಂಕುಸ್ಥಾಪನೆ ನೆರವೇರಿಸಲಿರುವ ಕಾಮಗಾರಿ ಹಾಗೂ ಇಲಾಖೆಗಳಿಂದ ವಿತರಿಸಲಾಗುವ ಸವಲತ್ತುಗಳ ವಿವರವನ್ನು ದೃಢೀಕರಿಸಿ ನಿಖರ ಮಾಹಿತಿಯನ್ನು ಸಲ್ಲಿಸಬೇಕು. ಸವಲತ್ತು ವಿತರಣೆ ಮಾಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರುವ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶಿಸಿದರು. ಸಭೆಯಲ್ಲಿ ಅಪರ…

Read More

ಮಧುಗಿರಿ: ದೂರವಾಣಿಯಿಂದ ವಿದ್ಯಾರ್ಥಿಗಳ ಜೀವನ ವಿಕಾಸವಾಗಬೇಕೆ ಹೊರತು ವಿಕಾರವಾಗಬಾರದು, ಎಂದು ಕುಂಚಿಟಿಗ ಮಹಾ ಸಂಸ್ಥಾನ ಮಠ ಶ್ರೀಕ್ಷೇತ್ರ ಹೊಸದುರ್ಗ ಶ್ರೀ ಶ್ರೀ ಶಾಂತವೀರ ಮಹಾ ಸ್ವಾಮೀಜಿ ತಿಳಿಸಿದ್ದಾರೆ. ಕೊರಟಗೆರೆ ತಾಲೂಕಿನ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇರಕಸಂದ್ರ ಕಾಲೋನಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು* ದೂರಸಂಪರ್ಕ ಅನೇಕ ಸಾಂಸಾರಿಕ ತೊಡಕುಗಳಿಗೆ ಕಾರಣವಾಗಿದೆ ಶಿಕ್ಷಣವೆಂದರೆ ಕೇವಲ ಉದ್ಯೋಗಕ್ಕಾಗಿ ಅಲ್ಲ ಶಿಕ್ಷಣವನ್ನು ಸಂಸ್ಕಾರಕ್ಕಾಗಿ ಸನ್ನಡತೆಗಾಗಿ ಸದಾಚಾರಕ್ಕಾಗಿ ಸದುವಿನಯಕ್ಕಾಗಿ ಪಡೆದಾಗ ಶಿಕ್ಷಣಕ್ಕೆ ಮೌಲ್ಯ ಸಿಗುತ್ತದೆ ಕೇವಲ ಅಂಕಗಳಿಕೆಗಾಗಿ ಶಿಕ್ಷಣಕ್ಕೆ ಮಾರುಹೋಗಿರುವ ಇಂದಿನ ವಿದ್ಯಾರ್ಥಿಗಳು ಮತ್ತು ಪೋಷಕರು ನೈತಿಕ ಶಿಕ್ಷಣದಿಂದ ದೂರಸರಿತಿರುವುದು ಆತಂಕಕಾರಿ ಬೆಳವಣಿಗೆ ಗುರುಕುಲ ಮಾದರಿ ಸಾಮಾಜಿಕ ಬದ್ಧತೆ ಜನಪರ ಜೀವ ಪರ ಸೌಹಾರ್ದ ಸಹಬಾಳ್ವೆಯ ಶ್ರೇಷ್ಠ ಶಿಕ್ಷಣದ ಅಗತ್ಯತೆ ಇಂದು ಹೆಚ್ಚಾಗಿ ಬೇಕಾಗಿದೆ ರಾಷ್ಟ್ರೀಯ ಸೇವ ಯೋಜನೆಯ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ರೂಡಿಸಿಕೊಂಡು…

Read More

ತುಮಕೂರು: ಸಾಮಾಜಿಕ ವಾಸ್ತವ ಹಾಗೂ ಅರಿವು ಪಡೆಯಲು ವಿದ್ಯರ‍್ಥಿಗಳು ರೈತ ಚಳವಳಿ, ಸಮತಾವಾದಿ ಚಳವಳಿಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಇದರಿಂದ ಸೋಷಿಯೋ ಎಕನಾಮಿಕ್ ರ‍್ಥವಾಗುವುದರೊಂದಿಗೆ ವಕೀಲಿ ವೃತ್ತಿಗೂ ಅನುಕೂಲ‌ವಾಗುತ್ತದೆ ಎಂದು ‍ಹಿರಿಯ ಪತ್ರರ‍್ತ ಹಾಗೂ ವಕೀಲರಾದ ವೀರೇಂದ್ರ ಪಿ.ಎಂ ತಿಳಿಸಿದರು. ನಗರದ ಶೆಟ್ಟಿಹಳ್ಳಿ ರಸ್ತೆಯ ಸುಫಿಯ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿನ ಕ್ರೀಡೆ, ಎನ್‌ ಎಸ್‌ ಎಸ್, ಕಾನೂನು ಸೇವೆಗಳ ಕೇಂದ್ರ, ಯುವ ರೆಡ್ ಕ್ರಾಸ್, ಸಾಂಸ್ಕೃತಿಕ ಹಾಗೂ ಇತರೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಕಾನೂನು ಶಿಕ್ಷಣ: ಅವಕಾಶಗಳು ಮತ್ತು ಸವಾಲುಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು‌ ಮಾತನಾಡಿದರು. ಭಾರತೀಯ ಕರ‍್ಪೊರೇಟ್ ಕ್ಷೇತ್ರ ದಿನದಿಂದ ದಿನಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ತಯಾರಿ ಅಗತ್ಯವಾಗಿದೆ. ವ್ಯವಹಾರಿಕ ಜಗತ್ತಿಗೆ ಹೊಂದಿಕೊಳ್ಳಲು ಸಿನಿಮಾ, ವಾಣೀಜ್ಯ ವಿಷಯಾಂಶಗಳನ್ನೂ ಬಿಡದೆ ಅಧ್ಯಯನ ಮಾಡಬೇಕು. ಭಾಷಾ ಕೌಶಲ್ಯ, ಬರವಣಿಗೆ, ಸಂವಹನ ಕಲೆ ವಕೀಲಿ ವೃತ್ತಿಯಲ್ಲಿ ಕೈ ಹಿಡಿಯುತ್ತದೆ. ಇಂಗ್ಲೀಷ್ ಜೊತೆಗೆ ಮಾತೃ ಭಾಷೆ ಕನ್ನಡದಲ್ಲಿ…

Read More

ತುಮಕೂರು; ವಿದ್ಯಾರ್ಥಿಗಳು ತ್ಯಾಗ ಮತ್ತು ಸತ್ಯದ ಮನೋಭಾವನೆ ಬೆಳೆಸಿಕೊಂಡರೆ, ಸಾಧನೆಯ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದು ನಿವೃತ್ತಿ ಐಜಿಪಿ ಶಂಕರ ಬಿದರಿ ಅಭಿಪ್ರಾಯಪಟ್ಟಿದ್ದಾರೆ. ಸಿದ್ದಗಂಗಾ ಮಠದಲ್ಲಿ ಸಿದ್ದಗಂಗಾ ವಿದ್ಯಾರ್ಥಿ ಸಂಘ, ಸನಿವಾಸ ವಿದ್ಯಾಸಂಸ್ಥೆಗಳು ಹಾಗೂ ಶ್ರೀಸಿದ್ದಗಂಗಾ ಮಠವತಿಯಿಂದ ಅಯೋಜಿಸಿದ್ದ ಹಿರಿಯ ಚಲನಚಿತ್ರನಟ ದೊಡ್ಡಣ್ಣ ಅವರ ಹುಟ್ಟು ಹಬ್ಬ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಇಂದು ನೇರವಾದ, ಸತ್ಯದ ಹಾಗೂ ಪ್ರಾಮಾಣಿಕ ಮಾರ್ಗದಲ್ಲಿ ನಡೆಯುವವರ ಸಂಖ್ಯೆ ಕಡಿಮೆಯಾಗಿದೆ.ಪ್ರತಿಯೊಬ್ಬರು ಬೇರೆಯವರಿಂದ ಪ್ರಾಮಾಣಿಕತೆ, ಸತ್ಯ,ನೇರವಾದ ಮಾರ್ಗಗಳನ್ನು ಬಯಸುತ್ತಾರೆ. ಅದು ತಮ್ಮಿಂದಲೇ ಆರಂಭವಾಗಬೇಕು.ಆಗಲೇ ದೇಶದಲ್ಲಿ ಪರಿವರ್ತನೆ ಸಾಧ್ಯ ಎಂದರು. ನೀವು ಗಳಿಸುವ ಅಂಕಗಳು ಉದ್ಯೋಗ ಪಡೆಯಲು ಮಾತ್ರ.ಉದ್ಯೋಗಕ್ಕೆ ಸೇರಿದ ನಂತರ ನಿಮ್ಮ ಪ್ರಾಮಾಣಿಕತೆ, ಸಹದ್ಯೊಗಿಗಳೊಂದಿಗಿನ ನಡವಳಿಕೆ,ಇತರರ ಕಷ್ಟ,ಸುಖಃಗಳಿಗೆ ಸ್ಪಂದಿಸುವ ಗುಣ ಎಲ್ಲವೂ ನಿಮ್ಮನ್ನು ಮೇಲ್ಮಟ್ಟಕ್ಕೆ ತೆಗೆದು ಕೊಂಡು ಹೋಗುತ್ತದೆ.ಬಹುಸಂಸ್ಕೃತಿಯ ನಾಡಾದ ಭಾರತದಲ್ಲಿ ಎಲ್ಲಾ ಧರ್ಮ,ಜಾತಿ,ಭಾಷೆಗಳ ಜನರು ಒಗ್ಗೂಡಿ ಭಾರತಾಂಭೆಯ ಮಕ್ಕಳಂತೆ ಬದುಕುಬೇಕಾಗಿದೆ.ಬಸಣ್ಣನವರ ವಚನದಂತೆ ಇವ ನಮ್ಮವ ಎಂದು ಕೊಂಡು ಶಾಂತಿ, ಸೌಹಾರ್ಧತೆಯಿಂದ ಬದುಕುವಂತಹ…

Read More

ತುಮಕೂರು: ಕಾಲೇಜಿನ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುವಾಗಲೇ ಉದ್ಯಮಿಯಾಗಲು ಗುರಿಯಿಟ್ಟುಕೊಂಡು ಸರ್ಕಾರದಿಂದ ಸಿಗುವ ಅನುದಾನಗಳನ್ನು ಬಳಸಿಕೊಂಡು ನಿಮ್ಮ ಯೋಜನೆಗಳು ಮತ್ತು ಆವಿಷ್ಕಾರಗಳಿಗೆ ಮಾಡಿದಾಗ ಮಾತ್ರ ದೊಡ್ಡ ಉದ್ಯಮಿಯಾಗಬಹುದು ಎಂದು ಕರ್ನಾಟಕ ಸರ್ಕಾರದ ಖಜಾನೆ ಇಲಾಖೆಯ ತಾಂತ್ರಿಕ ಸಮಾಲೋಚಕರಾದ ಚೈತನ್ಯ ನಾಯಕ್ ಅವರು ಅಭಿಪ್ರಾಯಪಟ್ಟರು. ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟಾçನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಇಂಜಿನಿಯರಿAಗ್ ವಿಭಾಗದ ವತಿಯಿಂದ ಇಂದು ಹಮ್ಮಿಕೊಂಡಿದ್ದ “ಬ್ರಾಡ್ ಕಾಸ್ಟ್-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವಾಗಲೇ ಪ್ರಾಜೆಕ್ಟ÷್ಗಳನ್ನು ಮಾಡಲು ಮುಂದಾಗಿ, ನಾಲ್ಕು ವರ್ಷ ಪೂರ್ಣಗೊಳಿಸಿದ ನಂತರ ಉದ್ಯೋಗಿಗಲಾಗುತ್ತೇನೆ ಎಂದು ಕಾಲಹರಣ ಮಾಡಬೇಡಿ ಎಂದು ಚೈತನ್ಯ ನಾಯಕ್ ಕಿವಿ ಮಾತು ಹೇಳಿದರು. ಪ್ರಾಂಶುಪಾಲರಾದ ಡಾ. ಎಂಎಸ್ ರವಿಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್ನಿಂದಲೇ ಪ್ರಾಜೆಕ್ಟ್ಗಳನ್ನು ಹೊಸ ಐಡಿಯಾಗಳೊಂದಿಗೆ ಪ್ರಾರಂಭ ಮಾಡಬೇಕು. ಆಗ ಮಾತ್ರ ಆರನೇ ಸೆಮಿಸ್ಟರ್ನ ಕೊನೆಯಲ್ಲಿ ಉತ್ತಮ ಪ್ರಾಜೆಕ್ಟ್ ಗಳು ಹೊರಬರಲಿವೆ. ಹಲವಾರು ರೀತಿಯ ಸ್ಪರ್ಧೆಗಳಿದ್ದು, ನಿಮ್ಮ ವ್ಯಕ್ತಿತ್ವ ಬರವಣಿಗೆ ಶೈಲಿ, ಕ್ರೀಡೆಗಳಲ್ಲಿ ಬೆಳವಣಿಗೆಯನ್ನು…

Read More

ತುಮಕೂರು : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರಥಮ ಬಾರಿಗೆ ಕಲ್ಪತರು ನಗರಿಗೆ ತುಮಕೂರು ಜಿಲ್ಲೆಯಲ್ಲಿ ಪತ್ರಕರ್ತರಿಗಾಗಿ ರಾಜ್ಯಮಟ್ಟದ ಸುವರ್ಣ ಸಂಭ್ರಮ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದ್ದು ನವಂಬರ್ ನಲ್ಲಿ ನಡೆಯುವ ಕ್ರೀಡಾ ಕೂಟಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಈಗಾಗಲೇ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಸೇರಿದಂತೆ ವಿವಿಧ ಗಣ್ಯರು ಶುಭಕೋರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸುವರ್ಣ ಸಂಭ್ರಮ ಕ್ರೀಡಾಕೂಟ ಲಾಂಛನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಕೂಡ ತುಮಕೂರಿನಲ್ಲಿ ನಡೆಸಲು ನಿಶ್ಚಯಿಸಿರುವುದರಿಂದ ಜನವರಿಯಲ್ಲಿ ಪತ್ರಕರ್ತರ ಸಮ್ಮೇಳನ ನಡೆಸುವಂತೆ ದಿನಾಂಕ ನಿಶ್ಚಯಗೊಳಿಸಿದ್ದಾರೆ ಎಲ್ಲ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ನಡೆಯುವ ಸುವರ್ಣ ಸಂಭ್ರಮ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಎಲ್ಲ ಪತ್ರಕರ್ತರ ಸಹಕಾರ ಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಜಿಲ್ಲಾ ಪುರುಷೋತ್ತಮ ಅವರು ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ…

Read More

ತುರುವೇಕೆರೆ: ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ತಾಲೂಕಿನಾದ್ಯಂತ ಜಾಗೃತಿ ಆಂದೋಲನ ಮಾಡಲಾಗುವುದು ಎಂದು ತಹಸೀಲ್ದಾರ್ ಎ.ಎನ್. ಕುಂಇ ಅಹಮದ್ ತಿಳಿಸಿದರು. ತಾಲೂಕು ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಾದಕ ದ್ರವ್ಯಗಳು ತಾಲೂಕಿನಲ್ಲಿ ಮಾರಾಟವಾಗುತ್ತಿದೆ ಎಂಬ ಸಂಗತಿ ತಿಳಿದು ಬಂದಿದ್ದು. ಯುವಕರು ಮಾದಕ ವಸ್ತುಗಳಿಗೆ ದಾಸರಾಗಿ ಹಲವಾರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಸಮಾಜಘಾತುಕ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಇದನ್ನು ತಪ್ಪಿಸುವ ಸಲುವಾಗಿ ತಾಲೂಕು ಆಡಳಿತ ಮಾದಕ ವಸ್ತುಗಳ ಮುಕ್ತ ತಾಲೂಕನ್ನಾಗಿ ಮಾಡಲು ಪಣ ತೊಟ್ಟಿದೆ ಎಂದು ತಿಳಿಸಿದರು. ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಉಂಟು ಮಾಡುವುದು. ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಮಾದಕ ವಸ್ತುಗಳನ್ನು ಸೇವಿಸುವವರ ಬಗ್ಗೆಯೂ ಮಾಹಿತಿ ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಅಲ್ಲದೆ ಅವರಿಗೆ ತಾಲೂಕು ಆಡಳಿತದಿಂದ ಗೌಪ್ಯವಾಗೇ ಬಹುಮಾನವನ್ನೂ ಸಹ ನೀಡಲಾಗುವುದು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತ ತಂಡ…

Read More

ತುಮಕೂರು : ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಹಂತದ ತಂಬಾಕು ಮುಕ್ತ ಯುವ ಅಭಿಯಾನ ಹಾಗೂ ಗುಲಾಬಿ ಆಂದೋಲನ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಸುಮಾರು 3 ಲಕ್ಷ ವಿದ್ಯಾರ್ಥಿಗಳಿಂದ ಸಾರ್ವಜನಿಕರಿಗೆ ಗುಲಾಬಿ ನೀಡುವ ಮೂಲಕ ತಂಬಾಕು ದುಷ್ಪರಿಣಾಮಗಳು ಹಾಗೂ ತಂಬಾಕು ಚಟದಿಂದ ಮುಕ್ತಿ ಹೊಂದುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಶೇಖರ್, ಸ್ಥಾನಿಕ ವೈದ್ಯಾಧಿಕಾರಿ ಡಾ: ಚೇತನ್, ತಾಲೂಕು ಆರೋಗ್ಯ ಅಧಿಕಾರಿ ಡಾ: ಲಕ್ಷ್ಮೀಕಾಂತ್, ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಹೆಚ್. ಬಿ. ಪ್ರಕಾಶ್, ಜಿಲ್ಲಾ ಆರೋಗ್ಯ…

Read More

ತುಮಕೂರು : ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಶೇಖರ್ ಸೂಚನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಅನುಷ್ಟಾನಗೊಳಿಸುವಲ್ಲಿ ಪೊಲೀಸ್ ಇಲಾಖೆ ಸಹಕಾರ ಅಗತ್ಯ. ತಂಬಾಕಿನಿAದ ತಯಾರಿಸಿದ ಉತ್ಪನ್ನಗಳನ್ನು ಬಳಕೆ ಮಾಡಿದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಬಗ್ಗೆ ಯುವ ಜನರಲ್ಲಿ ಅರಿವು ಮೂಡಿಸಬೇಕು. ತಂಬಾಕಿನ ಚಟದಿಂದ ಹಲವಾರು ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಬರುತ್ತಿವೆ. ಈ ನಿಟ್ಟಿನಲ್ಲಿ ತಂಬಾಕು ನಿಯಂತ್ರಣಕ್ಕಾಗಿ ತಂಬಾಕು ನಿಷೇಧ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಪೊಲೀಸ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮತ್ತಿತರ ಇಲಾಖೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಈ…

Read More

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಸಮಾಜಕಾರ್ಯ ವಿಭಾಗ, ರಾಜ್ಯಶಾಸ್ತç ವಿಭಾಗ, ಕಲಾ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಸ್ನಾತಕೋತ್ತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪುರುಷ ವಿದ್ಯಾರ್ಥಿ ನಿಲಯಗಳು ರಾಷ್ಟಿçÃಯ ಗ್ರಂಥಾಲಯದ ಸಪ್ತಾಹದ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಗ್ರಂಥಾಲಯ ಜಾಥಾ’ಗೆ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮತ್ತು ಕುಲಸಚಿವೆ ನಾಹಿದಾ ಜûಮ್ ಜûಮ್ ಚಾಲನೆ ನೀಡಿದರು. ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ಬಿ. ಟಿ. ಸಂಪತ್ ಕುಮಾರ್, ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಬಿ., ರಾಜ್ಯಶಾಸ್ತç ವಿಭಾಗದ ಅಧ್ಯಕ್ಷ ಪ್ರೊ. ಬಸವರಾಜ ಜಿ., ಕಲಾ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸುಮಾದೇವಿ ಎಸ್., ಸ್ನಾತಕೋತ್ತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪುರುಷ ವಿದ್ಯಾರ್ಥಿ ನಿಲಯಗಳ ನಿಲಯಪಾಲಕರಾದ ಡಾ. ಕುಮಾರ…

Read More