ಮಧುಗಿರಿ: ಕುಂಚಿಟಿಗ ಸಮಾಜ ಅತ್ಯಂತ ಹಿಂದುಳಿದ ಸಮಾಜ ವಾಗಿದ್ದು ಆ ಸಮಾಜಕ್ಕೆ ರಾಜಕೀಯ ಸಾಮಾಜಿಕ ಶೈಕ್ಷಣಿಕವಾಗಿ ಸ್ಥಾನಮಾನ ದೊರಕಿಸುವ ಕೆಲಸ ಸರ್ಕಾರ ಮಾಡಬೇಕಾಗಿದೆ ಎಂದು ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ. ತಾಲೂಕಿನ ಕಸಬಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಕಡೂತಿ ವೇಣುಗೋಪಾಲಸ್ವಾಮಿ ದೇವಸ್ಥಾನದ ಸಮುದಾಯ ಭವನದ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಕುಂಚಿಟಿಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಾಗಿದೆ ಕುಂಚಿಟಿಗ ಸಮಾಜದ ಕುಲಶಾಸ್ತ್ರ ಅಧ್ಯಯನ ಮುಗಿದಿದ್ದು ಓಬಿಸಿ ಮೀಸಲಾತಿ ನೀಡಬೇಕಾಗಿದೆ ರಾಜ್ಯ ಸಚಿವ ಸಂಪುಟ ಕುಂಚಿಟಿಗ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದು ಕೇಂದ್ರ ಸರ್ಕಾರ ಕುಂಚಿಟಿಗ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ತಿಳಿಸಿದರು . ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳು ಮನುಷ್ಯನ ನೆಮ್ಮದಿ ಕೇಂದ್ರಗಳಾಗಬೇಕು ಪ್ರತಿ ಗ್ರಾಮಗಳಲ್ಲಿ ದೇವಸ್ಥಾನ ಜೊತೆ ಶಾಲೆಗಳನ್ನು ನಿರ್ಮಿಸಬೇಕಾಗಿದೆ ಇದರಿಂದ ಪ್ರತಿಯೊಬ್ಬರು ವಿದ್ಯಾವಂತರಾಗಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೌಶಲ್ಯ ಅಭಿವೃದ್ಧಿ…
Author: News Desk Benkiyabale
ತುಮಕೂರು: ಯೋಗ ಮಾಡುವುದರಿಂದ ಸದೃಢತೆ, ಏಕಾಗ್ರತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಇಂದಿನ ಯುವಜನತೆ ಯೋಗದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಯೋಗಪಟು ರಾಜೇಶ್ ಆಚಾರ್ ಹೇಳಿದರು. ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಸೋಮವಾರ ಹಮ್ಮಿಕೊಂಡಿದ್ದ ಅಂತರಕಾಲೇಜು ಸಾಂಪ್ರದಾಯಿಕ, ಕಲಾತ್ಮಕ ಮತ್ತು ಲಯಬದ್ಧ ಯೋಗದ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು. ಪ್ರಾಧ್ಯಾಪಕರಾದ ಪ್ರೊ. ಶ್ರೀನಿವಾಸ್ ಎಸ್. ಮಾತನಾಡಿ ಈಚಿನ ದಿನಗಳಲ್ಲಿ ಮನುಷ್ಯನಿಗೆ ಹೆಚ್ಚು ಕಾಯಿಲೆಗಳು ಬರುವುದಕ್ಕೆ ನಮ್ಮ ಕಳಪೆ ಆಹಾರ ಪದ್ಧತಿಯೇ ಕಾರಣ. ಮಕ್ಕಳು ಜಂಕ್ ಫುಡ್ಗೆ ಆಕರ್ಷಿತರಾಗಿದ್ದಾರೆ. ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಅದರ ಹಿಂದೆ ಕೊಟ್ಟಿರು ವಂತಹ ವಿವರಗಳನ್ನು ನಾವು ಓದುವುದಿಲ್ಲ. ನಾವು ಭಾವಿಸಿದಂತೆ ಸಿದ್ಧ ಆಹಾರಗಳೆಲ್ಲವೂ ಶ್ರೇಷ್ಠ ವಲ್ಲ. ಅವುಗಳಲ್ಲಿ ಹೆಚ್ಚಿನ ರಾಸಾಯನಿಕಗಳನ್ನು ಬಳಸಲಾ ಗಿರುತ್ತದೆ. ಆದ್ದರಿಂದ ನಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂಬುದನ್ನು ನಿರ್ಧರಿಸುವ ಸಾಮ ರ್ಥ್ಯವಿರಬೇಕು ಎಂದರು. ಪ್ರಾಧ್ಯಾಪಕರಾದ…
ತುರುವೇಕೆರೆ: ತಾಲ್ಲೂಕಿನ ಹಲವೆಡೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾನುವಾರ ರಾತ್ರಿ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ತಾಲ್ಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ, ದೊಂಬರನಹಳ್ಳಿ ಗೊಲ್ಲರಹಟ್ಟಿ, ಅಕ್ಕಳಸಂದ್ರ ಗೊಲ್ಲರಹಟ್ಟಿ, ಅಕ್ಕಳಸಂದ್ರ, ತೋವಿ ನಕೆರೆ, ಹರಿಕಾರನಹಳ್ಳಿ, ಸೊಪ್ಪನಹಳ್ಳಿ, ಕೊಂಡಜ್ಜಿ ಕ್ರಾಸ್, ಹಟ್ಟಿಹಳ್ಳಿ, ಹಾಲದೇವರಹಟ್ಟಿ, ಕುರುಬರಹಳ್ಳಿ ಬ್ಯಾಲಾ, ಸಂಪಿಗೆ ಹೊಸಹಳ್ಳಿ, ಆಯರಹಳ್ಳಿ, ಸಂಪಿಗೆ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಅದೇ ರೀತಿ ಮಾಯಸಂದ್ರ, ತುರುವೇಕೆರೆ ಪಟ್ಟಣ, ದಂಡಿನಶಿವರ ಮತ್ತು ದಬ್ಬೇಘಟ್ಟ ಗ್ರಾಮದ ಆಸುಪಾಸು ಸಾಧಾರಣ ಮಳೆಯಾಗಿದೆಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ. ರಾತ್ರಿ ಬೀಸಿದ ಬಿರುಗಾಳಿಗೆ ಶ್ರೀರಂಗಪಟ್ಟಣ-ಬೀದರ್ ೧೫೦ಎ ರಾಷ್ಟ್ರೀಯ ಹೆದ್ದಾರಿ ಬಾಣಸಂದ್ರ ಕಾಲೋನಿ ಬಳಿಯ ರಸ್ತೆ ಮೇಲೆ ಹಾಗು ವಿದ್ಯುತ್ ಕಂಬದ ಮೇಲೆ ಬೃಹತ್ ಗ್ರಾತ್ರದ ಹಗಲರಾಣಿ ಮರದ ಕೊಂಬೆ ಮುರಿದು ಬಿದ್ದು ಕೆಲ ಗಂಟೆಯವರೆಗೆ ವಾಹನ ಸಂಚಾರ ತೊಂದರೆಯಾಯಿತು. ಇನ್ನೂ ಮರದ ಕೊಂಬೆ ಬಿದ್ದು ೪ ವಿದ್ಯುತ್ ಕಂಬಗಳು ಮುರಿದಿದ್ದು ನಿರಂತರ ಜ್ಯೋತಿಯ ವಿದ್ಯುತ ಕೇಬ ಲ್ ನೆಲಕ್ಕೆ…
ತುಮಕೂರು : ಬಡವನಹಳ್ಳಿ ಪೊಲೀಸ್ ಠಾಣೆ ಮೊ.ನಂ. ೬೦/೨೦೧೯, ಎಸ್.ಸಿ. ಸಂ: ೫೦೩೭/೨೦೧೯ ರಲ್ಲಿ ದಾಖಲಾದ ಠಾಣಾ ಸರಹದ್ದಿನಲ್ಲಿ ಆರೋಪಿ-೦೧ ಶಿವಕುಮಾರ್ @ ಶಿವ @ ಗೆಣಸು ಬಿನ್ ನಂಜಪ್ಪ, ೪೨ ವರ್ಷ ವಯಸ್ಸು, ಮುಗ್ಗೊಂಡನಹಳ್ಳಿ ಗ್ರಾಮ, ಕೊರಟಗೆರೆ ತಾಲ್ಲೋಕು ಮತ್ತು ಕೊಲೆಯಾದ ತುಂಬಾಡಿ ಗ್ರಾಮದ ಗಿರಿಜಮ್ಮ ಕೊಂ. ಲೇ. ಮೂಡಲಗಿರಿಯಪ್ಪ ರವರು ಪರಸ್ಪರ ಸಂಬAಧಿಕರಾಗಿದ್ದು ಗಿರಿಜಮ್ಮ ರವರ ಬಳಿಯಿದ್ದ ಬಂಗಾರದ ವಡವೆಗಳ ಆಸೆಗಾಗಿ ಆರೋಪಿ-೧ ರವರು ಗಿರಿಜಮ್ಮ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿ-೦೨ ಮಂಜುನಾಥ @ ಮಂಜ @ ಮೆಂಟಲ್ ಮಂಜ, ೪೪ ವರ್ಷ, ಮಧುಗಿರಿ ತಾಲ್ಲೋಕು ಬಿಜಾವರ ಗ್ರಾಮ, ರವರೊಂದಿಗೆ ಸೇರಿ ಇಬ್ಬರು ಸಮಾನ ಉದ್ದೇಶದಿಂದ ಪೂರ್ವ ಸಿದ್ದತೆ ಮಾಡಿಕೊಂಡು ದಿ:೦೬-೦೬-೧೯ ರಂದು ಮೃತೆ ಗಿರಿಜಮ್ಮ ರವರನ್ನು ಮಧ್ಯಾಹ್ನ ೧೨-೩೦ ಗಂಟೆಯಲ್ಲಿ ತುಂಬಾಡಿಯಿAದ ಕೆ.ಎ-೦೬-ಡಿ-೩೨೭೯ ಟಾಟಾ ಇಂಡಿಕಾ ವಿಸ್ತಾ ಕಾರಿನಲ್ಲಿ ಗರಣಿ ಹೊಸಕೋಟೆಗೆ ಮಟನ್ ಊಟಕ್ಕೆ ಹೋಗಿಬರೋಣ ಎಂತಾ ಹೇಳಿ ಕರೆದುಕೊಂಡು ಬಂದು ಅದೇ ದಿವಸ ಸಂಜೆ…
ತುಮಕೂರು: ಕರ್ನಾಟಕ ಸಾಹಿತ್ಯ ಅಕಾಡೆಯು ಹಾವೇರಿ ಜಿಲ್ಲೆ ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏಪ್ರಿಲ್ ೨೧ ರಿಂದ ೨೩ರವರೆಗೆ ೩ ದಿನಗಳ ಕಾಲ ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳ ಕುರಿತು ಕಮ್ಮಟವನ್ನು ಏರ್ಪಡಿಸಿದ್ದು, ಕಮ್ಮಟದಲ್ಲಿ ಭಾಗವಹಿಸಲು ಆಸಕ್ತಿಯಿರುವವರಿಂದ ಅರ್ಜಿ ಆಹ್ವಾನಿಸಿದೆ. ಕಮ್ಮಟವು ಹಾವೇರಿ ಜಿಲ್ಲೆ ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆಸಲಾಗುವುದು. ಆಸಕ್ತ ೨೦ ರಿಂದ ೪೫ ವರ್ಷಗೊಳಗಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಏಪ್ರಿಲ್ ೫ ಕಡೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಾಲತಾಣ hಣಣಠಿ://ಞಚಿಡಿಟಿಚಿಣಚಿಞಚಿsಚಿhiಣhಥಿಚಿಚಿಛಿಚಿಜemಥಿ.oಡಿg ಸಂಪರ್ಕಿಸಬಹುದಾಗಿದೆ ಎಂದು ರಿಜಿಸ್ಟಾçರ್ ಕರಿಯಪ್ಪ ಎನ್. ತಿಳಿಸಿದ್ದಾರೆ.
ತುಮಕೂರು: ಗುಬ್ಬಿ ಪಟ್ಟಣದ ಡಾ: ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ ಗುಬ್ಬಿ ಪಟ್ಟಣದ ಡಾ: ಗುಬ್ಬಿ ವೀರಣ್ಣ ರಂಗಮAದಿರದಲ್ಲಿ ಮಕ್ಕಳಿಗಾಗಿ ಏಪ್ರಿಲ್ ೪ ರಿಂದ ಮೇ ೧೦ರವರೆಗೆ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ೮ ರಿಂದ ೧೪ ವರ್ಷ ವಯೋಮಾನದ ಮಕ್ಕಳು ಭಾಗವಹಿಸಬಹುದಾಗಿದೆ. ಶಿಬಿರವು ಪ್ರತಿ ದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ನಡೆಯಲಿದೆ. ತರಬೇತಿಗೆ ೧,೦೦೦ ರೂ. ಶುಲ್ಕವನ್ನು ನಿಗಧಿಪಡಿಸಲಾಗಿದ್ದು, ಭಾಗವಹಿಸುವ ಮಕ್ಕಳು ಊಟ, ಉಪಹಾರ ಮತ್ತು ಕುಡಿಯುವ ನೀರನ್ನು ಸ್ವಯಂ ವ್ಯವಸ್ಥೆ ಮಾಡಿಕೊಳ್ಳಬೇಕು. ಆಯ್ಕೆಯಾದ ಮಕ್ಕಳು ಟ್ರಸ್ಟ್ ಕಾಲ ಕಾಲಕ್ಕೆ ರೂಪಿಸುವ ನಿಯಮಗಳಿಗೆ ಬದ್ಧರಾಗಿರಬೇಕು. ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವ ಮಕ್ಕಳು ನಿಗಧಿತ ಅರ್ಜಿ ನಮೂನೆಯನ್ನು ಗುಬ್ಬಿ ಪಟ್ಟಣದ ಡಾ: ಗುಬ್ಬಿ ವೀರಣ್ಣ ರಂಗಮAದಿರದಿAದ ಪಡೆದು, ಭರ್ತಿ ಮಾಡಿದ ಆರ್ಜಿಯನ್ನು ಏಪ್ರಿಲ್ ೫ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: ೦೮೧೩೧-೨೨೩೩೩೬ / ೦೮೧೬-೨೨೭೫೨೦೪, ಮೊ.ಸಂ.೮೫೪೬೯೪೮೮೫೮ನ್ನು ಸಂಪರ್ಕಿಸಬೇಕೆAದು ತಿಳಿಸಿದ್ದಾರೆ.
ಹುಳಿಯಾರು: ಹುಳಿಯಾರು ಆರ್ಯವೈಶ್ಯ ಮಂಡಳಿಯ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ಯನ್ನು ಶುಕ್ರವಾರ ಅವಿರೋಧವಾಗಿ ಮಾಡ ಲಾಗಿದ್ದು ಅಧ್ಯಕ್ಷರಾಗಿ ಟಿ.ಆರ್.ನಾಗೇಶ್ ಆಯ್ಕೆ ಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಿ.ಎಸ್.ಮೋಹನ್ ಕುಮಾರ್, ಕಾರ್ಯದರ್ಶಿಯಾಗಿ ಎಂ.ಜಿ.ನಾಗ ಭೂಷಣ್, ಸಹಕಾರ್ಯದರ್ಶಿಯಾಗಿ ಟಿ.ಕೆ.ದುರ್ಗರಾಜು ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಎಲ್.ಎ.ವೆಂಕಟೇಶ್ ಮೂರ್ತಿ, ಟಿ.ಜಿ.ನಾಗರಾಜಗುಪ್ತ, ಫನುಮಂ ತಶೆಟ್ಟಿ, ಎಸ್.ಮಂಜುನಾಥ್, ಬಿ.ಆರ್.ಪ್ರದೀಪ್, ಕೆ.ಪಿ.ನವೀನ್, ಟಿ.ಆರ್.ರವಿ, ನಿರೂಪ್ ವಿ ಮೇಡ, ಜಿ.ಆರ್.ಸನತ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.
ಹುಳಿಯಾರು: ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ತಮ್ಮ ತಮ್ಮಲ್ಲಿ ಉಳಿತಾಯ ಮಾಡಿ ರಾಷ್ಟಿçÃಕೃತ ಬ್ಯಾಂಕಿನಲ್ಲಿಟ್ಟು ತಮ್ಮ ಉಳಿತಾಯ ಹಣದ ಅನುಗುಣವಾಗಿ ೨೦ ಲಕ್ಷ ರೂಗಳವರೆಗೆ ಆಧಾರ ರಹಿತ ಸಾಲ ಪಡೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಆರ್ಥಿಕ ಸೇರ್ಪಡೆ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ವಿ.ಹರಿಪ್ರಸಾದ್ ತಿಳಿಸಿದರು. ಹಂದನಕೆರೆ ವಾಲ್ಮೀಕಿ ಭವನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕ್ಷೇತ್ರ ಮಟ್ಟದ ಹಣಕಾಸು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಎಲ್ಲ ರಂಗಗಳಲ್ಲೂ ಮುಂದಿದ್ದು ದೇಶದ ಆರ್ಥಿಕತೆಗೆ ತಮ್ಮ ಮಹತ್ತರವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದರು. ತುಮಕೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ ಚೈತನ್ಯ ಕಂಚಿಬೈಲು ಮಾತನಾಡಿ ಆರ್ಬಿಐನ ಕ್ಷೇತ್ರ ಮಟ್ಟದ ಆರ್ಥಿಕ ಸೇರ್ಪಡೆ ಕಾರ್ಯಕ್ರಮವು ನಮ್ಮ ತುಮಕೂರು ಜಿಲ್ಲೆಯಲ್ಲಿ ಅದರಲ್ಲೂ ಹಿಂದುಳಿದ ಹೋಬಳಿಯಾದ ಹಂದನಕೆರೆಯಲ್ಲಿ ಮಾಡುತ್ತಿರುವುದು ನಮ್ಮ ನಿಮ್ಮೆಲ್ಲ ರ…
ತುಮಕೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಹಾಗೂ ಕೆಪಿಸಿಸಿಯ ವರಿಷ್ಠರುಗಳ ಆದೇಶದಂತೆ ಕೆಪಿಸಿಸಿ ಆಸ್ತಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನೊಳಗೊಂಡ ಸಭೆ ನಡೆಯಿತು. ಸ್ವಂತ ಕಚೇರಿಗಳ ಸಮಿತಿಯ ರಾಜ್ಯಾಧ್ಯಕ್ಷ ಬಿ.ವಿ.ಶ್ರೀನಿವಾಸ್, ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಸದಸ್ಯರಾದ ಸೂರ್ಯ ಮುಕುಂದರಾಜ್, ಕೆಪಿಸಿಸಿಯ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ಇಕ್ಬಾಲ್ ಅಹಮದ್, ಮಾಜಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮತ್ತು ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಈ ಸಭೆಯಲ್ಲಿ ಹಾಜರಿದ್ದರು.
ಹುಳಿಯಾರು: ಒಂದು ತಲೆಗೆ ೧೫ ಕೆಜಿ ಅಕ್ಕಿ ಬದಲು ೧೦ ಕೆಜಿ ಅಕ್ಕಿ ಕೊಡುತ್ತಿದ್ದನ್ನು ಖಂಡಿಸಿ ಕಾರ್ಡ್ದಾರರು ಸೊಸೈಟಿ ಮುತ್ತಿಗೆ ಹಾಕಿ ವಂಚನೆಯ ವಿರುದ್ಧ ಸಿಡಿದೆದ್ದ ಘಟನೆ ಹುಳಿಯಾರು ಹೋಬಳಿಯ ಗೌಡಗೆರೆಯಲ್ಲಿ ಶುಕ್ರವಾರ ಜರುಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕೊರೆತೆ ಯಿಂದಾಗಿ ಇಲ್ಲಿಯವರೆವಿಗೂ ತಲಾ ೫ ಕೆಜಿ ಅಕ್ಕಿ ಉಳಿದ ೫ ಕೆಜಿಗೆ ಕಾರ್ಡ್ದಾರರ ಖಾತೆಗೆ ಹಣ ಸಂದಾಯ ಮಾಡಲಾಗುತ್ತಿತ್ತು. ಫೆಬ್ರವರಿ ಮಾಹೆ ಯಿಂದಲೇ ಹಣದ ಬದಲು ಅಕ್ಕಿ ಕೊಡುವುದಾಗಿ ಸರ್ಕಾರ ಘೋಷಿಸಿ ಮಾರ್ಚ್ ತಿಂಗಳ ೧೦ ಕೆಜಿ ಅಕ್ಕಿಯ ಜೊತೆಗೆ ಫೆಬ್ರವರಿ ಮಾಹೆಯ ೫ ಕೆಜಿ ಅಕ್ಕಿಯನ್ನೂ ಸೇರಿಸಿ ತಲಾ ೧೫ ಕೆಜಿ ಅಕ್ಕಿ ವಿತರಣೆಗೆ ಮುಂದಾಗಿದೆ. ಅದರೆ ಗೌಡಗೆರೆಯ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನೀಡಿರುವಂತೆ ಯಾರೊಬ್ಬರಿಗೂ ೧೫ ಕೆಜಿ ಅಕ್ಕಿ ವಿತರಿಸದೆ ೧೦, ೧೨, ೧೪ ಹೀಗೆ ವ್ಯಕ್ತಿಯನ್ನು ನೋಡಿ ಅಕ್ಕಿ ವಿತರಿಸಲಾಗುತ್ತಿತ್ತು. ವೃದ್ಧರು, ವಿದ್ಯಾರ್ಥಿಗಳು, ಅನಕ್ಷರಸ್ತರು ಬಂದರೆ ತಲಾ ೧೦ ಕೆಜಿ ಅಕ್ಕಿ, ಪುರುಷರು ಬಂದರೆ ೧೩…