ತುಮಕೂರು: ಕುಲಾಂತರಿ ಬೀಜ ನಿಯಮ ಜಾರಿಗೆ ವಿರೋಧಿಸಿ,ಹೇಮಾವತಿ ನಾಲೆಗೆ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ರದ್ದು ಹಾಗೂ ಮಳೆಯಿಂದ ಆಗಿರುವ ಬೆಳೆಹಾನಿಗೆ ವೈಜ್ಞಾನಿಕ ಪರಿಹಾರಕ್ಕೆ ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕ ರವೀಶ್ ಅವರ ನೇತೃತ್ವದಲ್ಲಿ ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿ¨sಟನೆ ನಡೆಸಿ, ತುಮಕೂರು ತಹಶೀಲ್ದಾರರವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಪರಿಸರವಾದಿ ಸಿ.ಯತಿರಾಜು,ಮ್ಯಾನ್ಸೆಂಟೋ,ಭೆಯರ್,ಕಾರ್ಗಿಲ್ ಸೇರಿದಂತೆ ಅನೇಕ ಬಹುರಿಂಷ್ಟ್ರೀಯ ಕಂಪನಿಗಳು ಕುಲಾಂತರಿ ತಳಿಗಳನ್ನು ಜಾರಿಗೆ ತರುವ ಮೂಲಕ,ದೇಶಿಯ ತಳಿಗಳನ್ನು ನಾಶಮಾಡಿ, ಜೀವ ವೈವಿದ್ಯತೆಯನ್ನು ಹಾಳುಮಾಡಿ ಕೃಷಿಕ್ಷೇತ್ರವನ್ನು ಮತ್ತು ಆಹಾರ ಸಾರ್ವಭೌಮಕ್ಕವನ್ನು ತನ್ನ ಕೈಯಲ್ಲಿ ಹೊಂದುವ ಹುನ್ನಾರವನ್ನು ಕಳೆದ 25 ವರ್ಷಗಳಿಂದಲೂ ಬಹುರಾಷ್ಟ್ರೀಯ ಕಂಪನಿಗಳು ಮಾಡುತ್ತಲೇ ಬಂದಿವೆ.ಕುಲಾAತರಿ ತಳಿಗಳ ಬೆಳೆಗಳಿಂದ,…
Author: News Desk Benkiyabale
ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್ ಆಸ್ತಿಗಾಗಿ ರಾಜ್ಯದ ರೈತರ, ಮಠಮಾನ್ಯಗಳ, ಹಿಂದೂಗಳ ಜಮೀನು ಕಬಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಸರ್ಕಾರದ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ, ಮಠಮಾನ್ಯಗಳ, ಬಡವರ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ಉಲ್ಲೇಖಿಸಲಾಗಿದೆ. ಸದ್ದು ಮಾಡದೆ ರಾಜ್ಯ ಸರ್ಕಾರ ವಕ್ಫ್ ಜೊತೆ ಸೇರಿಕೊಂಡು ಮುಸ್ಲೀಮರ ತುಷ್ಟೀಕರಣಕ್ಕಾಗಿ ಜನರ ಜಮೀನನ್ನು ಕಬಳಿಸುತ್ತಿದೆ ಎಂದು ಮುಖಂಡರು ಸರ್ಕಾರದ ವಿರುದ್ಧ ಹರಿಹಾಯ್ದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರೀಹಗರಣಗಳಲ್ಲೇ ಮುಳುಗಿದೆ. ವಾಲ್ಮೀಕಿ ನಿಗಮ, ಮುಡಾ ಹಗರಣಗಳ ನಂತರ ಈಗ ರೈತರ ಆಸ್ತಿ ಕಬಳಿಸುವ ವಕ್ಫ್ ವಿವಾದ ಆರಂಭಿಸಿದೆ. ಶಾಸಕರಿಗೆ ಅನುದಾನ ಕೊಡಲಾಗದಷ್ಟು ದಿವಾಳಿಯಾಗಿರುವ ಈ ಸರ್ಕಾರದ ಮಂತ್ರಿಗಳು ರಾಜ್ಯ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ ಎಂದು ದೊಡ್ಡದಾಗಿ ಭಾಷಣ ಮಾಡುತ್ತಿದ್ದಾರೆ. ಕಾಂಗ್ರೆಸ್…
ತುಮಕೂರು: ನಗರದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ವತಿಯಿಂದ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ದಂತ ತಪಾಸಣೆ ಮತ್ತು ದಂತ ರಕ್ಷಣೆ ಜಾಗೃತಿ ಶಿಬಿರ ಯಶಸ್ವಿಯಾಗಿ ಜರುಗಿತು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ(ಕೋಟೆ ಶಾಲೆ)ಆವರಣದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಆಂದೋಲನದಲ್ಲಿ ಮಾತನಾಡಿದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಸಮುದಾಯ ದಂತ ವೈದ್ಯಕೀಯ ವಿಭಾಗದ ರೀಡರ್ ಡಾ. ದರ್ಶನಾ ಬೆನ್ನಾಡಿ, ಆರೋಗ್ಯ ಶುಚಿತ್ವಕ್ಕೆ ಮಹತ್ವ ಕೊಡುವ ನಾವು ದಂತ ಶುಚಿತ್ವಕ್ಕೂ ಪ್ರಾಮುಖ್ಯತೆ ನೀಡಬೇಕು. ಮಕ್ಕಳಲ್ಲಿ ದಂತ ಶುಚಿತ್ವ, ದಂತ ಆರೋಗ್ಯದ ಬಗ್ಗೆ ಬಾಲ್ಯದಲ್ಲೇ ಅರಿವು ಮೂಡಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕು ಎಂದ ಅವರು, ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಹೌಸ್ ಸರ್ಜನ್ಸ್ಗಳಾದ ಇಂಪಾನಾ, ಮೃಗಾಂಕ್ ಮತ್ತು ಕೃತಿಯ ಹಾಗು ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಾಗಾರದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ತಪಾಸಣೆ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೂ ದಂತ…
ತುಮಕೂರು: ಎನ್‌ಸಿಸಿ ಯು ವಿದ್ಯಾರ್ಥಿಗಳಿಗೆ ದೇಶ ಸೇವೆಯನ್ನು ಮಾಡಲು ಪ್ರೇರೇಪಿಸುವುದರ ಜೊತೆಗೆ ಜೀವನದಲ್ಲಿ ಶಿಸ್ತನ್ನು ಕಲಿಸುತ್ತದೆ ಎಂದು ಎಸ್ ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್.ರವಿಪ್ರಕಾಶ್ ತಿಳಿಸಿದರು. ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಸಭಾಂಗಣದಲ್ಲಿ ಮಂಗಳವಾರದAದು ಎನ್‌ಸಿಸಿ ವಿದ್ಯಾರ್ಥಿಗಳಿಗೆ ಬಿ ಮತ್ತು ಸಿ ಗ್ರೇಡ್‌ನ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಸಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿ ಜೀವನಕ್ಕೆ ಉತ್ತಮ ಮೌಲ್ಯಗಳನ್ನು ನೀಡುತ್ತದೆ ಹಾಗೂ ತನ್ನನ್ನು ತಾನು ಸಾಮಾಜಿಕವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂದು ತಿಳಿಸಿದರು. ಎನ್‌ಸಿಸಿ ಅಧಿಕಾರಿಗಳಾದ ಡಾ. ಜಯಪ್ರಕಾಶ್ ಅವರು ಮಾತ£ ಜೀವನದಲ್ಲಿ ಆತ್ಮ ಸ್ಥೆöÊರ್ಯ, ಕಲಿಕೆಯಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಹಾಗೂ ವ್ಯಕಿತ್ವ ವಿಕಸನಕ್ಕೂ ಕೂಡ ಎನ್‌ಸಿಸಿ ಸಹಕಾರಿಯಾಗಿದೆ. ದೇಶ ಕಾಯುವ ಯೋಧರಿಗೆ ಇರಬೇಕಾದ ಗುಣವನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎನ್‌ಸಿಸಿಯ ಬಿ ಮತ್ತು ಸಿ ಗ್ರೇಡ್ ನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಡೀನ್ ಡಾ. ರೇಣುಕಲತಾ.ಎಸ್, ಎನ್‌ಸಿಸಿ…
ಕೊರಟಗೆರೆ ಒಂದು ವಾರದಿಂದ ಸುರಿಯುತ್ತಿರುವ ಬಾರಿ ಮಳೆಗೆ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿ ಗ್ರಾಮಗಳಿಗೆ ಜಲ ದಿಗ್ಬಂಧನ ಆದಂತೆ ಬಾಸವಾಗುತ್ತಿದೆ. ಕೊರಟಗೆರೆ ತಾಲೂಕು ಬಯಲು ಸೀಮೆಯಾಗಿದ್ದು, ಈ ಬಾರಿ ಸುರಿದ ಬಾರಿ ಮಳೆಗೆ ಸಾವಿರಾರು ವರ್ಷಗಳ ಇತಿಹಾಸ ಇರುವ ಕೆರೆಗಳು ತುಂಬಿದ್ದು ರೈತರಿಗೆ ಒಂದು ಕಡೆ ಸಂತಸವಾದರೆ ಇನ್ನೊಂದು ಕಡೆ ಪ್ರತಿನಿತ್ಯ ಸಂಚಾರ ಮಾಡುವ ರಸ್ತೆಗಳು ನೀರು ಹರಿದು ಗುಂಡಿಗಳು ಬಿದ್ದು ರಸ್ತೆಗಳು ತುಂಬಾ ಹಾಳಾಗುತ್ತಿವೆ. ಸಾರ್ವಜನಿಕರು ಸಂಚಾರ ಮಾಡಲು ತೀರ್ವ ತೊಂದರೆ ಉಂಟಾಗಿದೆ. ತಾಲೂಕಿನಾದ್ಯಾAತ ಅಬ್ಬರಿಸಿದ ಮಳೆಯ ಆರ್ಭಟಕ್ಕೆ ಜಯಮಂಗಲಿ, ಗರುಡಾಚಲ ನದಿ, ಸುವರ್ಣಮುಖಿ ನದಿಗಳು ಮೈದುಂಬಿ ಹರಿಯುತ್ತಿವೆ. ಅತಿ ಹೆಚ್ಚು ಮಳೆ ಬರುತ್ತಿರುವ ಕಾರಣ ತಾಲೂಕು ದಂಡಾಧಿಕಾರಿಗಳು ನದಿ ಪಾತ್ರದಲ್ಲಿರುವ ಕುಟುಂಬಗಳು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಯಾಗಿ ಇರುವಂತೆ ಸೂಚನೆ ನೀಡಿದ್ದಾರೆ. ತಹಸೀಲ್ದಾರ್ ಮಂಜುನಾಥ್ ತಾಲೂಕಿನಾದ್ಯಾಂತ ಸಂಚಾರ ಮಾಡಿ ತಾಲೂಕಿನಲ್ಲಿ ಯಾವುದೆ ಅಹಿತಕರ ಘಟನೆ ನಡೆದರೆ ತಕ್ಷಣ ಗ್ರಾಪಂ, ತಾಪಂ, ಹಾಗೂ…
ತುರುವೇಕೆರೆ: ತಾಲ್ಲೂಕಿನಾದ್ಯಂತ ನಿರಂತರ ಸುರಿಯುತ್ತಿರುವ ಮಳೆಗೆ ಕೆಲವೆಡೆಗಳಲ್ಲಿನ ಕೆರೆಗಳು ಕೋಡಿ ಬಿದ್ದು ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯಾಗಿದ್ದರೆ, ರಾತ್ರಿ ಮಳೆಗೆ ಮನೆ ಗೋಡೆ ಕುಸಿದಿದೆ. ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದ ಪಾರ್ವತಮ್ಮನವರ ವಾಸದ ಮನೆಯ ಒಂದು ಭಾಗದ ಗೋಡೆ ಬುಧವಾರ ರಾತ್ರಿ ಕುಸಿದು ಬಿದ್ದು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು ಮನೆಯ ದವಸ, ದಾನ್ಯ ಸೇರಿದಂತೆ ಹಲವು ಪರಿಕರಗಳು ಹಾಳಾಗಿವೆ. ಪಟ್ಟಣದ ೧೩ನೇ ವಾರ್ಡ್ನಲ್ಲಿ ಕೆಲವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮುಚ್ಚಿರುವುದರಿಂದ ಮಳೆ ನೀರು ಇಲ್ಲಿನ ವೆಂಕಟೇಶ್, ಕೆಂಪೇಗೌಡ, ಮರಿಯಪ್ಪ ಸೇರಿದಂತೆ ನಾಲ್ವರ ಮನೆಗಳು ಮಳೆ ನೀರು ನುಗ್ಗಿ ಮನೆಯ ದಿನ ನಿತ್ಯದ ಪರಿಕರಗಳೆಲ್ಲ ಹಾನಿಯಾಗಿವೆ. ತಹಶೀಲ್ದಾರ್ ಎನ್.ಎ.ಕುಂಞಅಹಮದ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾ, ಸದಸ್ಯ ಅಂಜನ್ ಕುಮಾರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಶಿರಸ್ತೆದಾರ್ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವು ಮಾಡಿಸಿ, ಕಾಲುವೆ ನೀರು ಸರಾಗವಾಗಿ ಹೋಗುವಂತೆ ಮಾಡಿಸಿದರು. ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಸೊಪ್ಪನಹಳ್ಳಿ…
ತಿಪಟೂರು : ಋತುವಿಗೆ ಅನುಗುಣವಾಗಿ ಅಹಾರ ಪದ್ದತಿಯನ್ನು ಅಳವಡಿಸಿಕೊಂಡರೆ ಮನುಷ್ಯನ ಜೀವನವು ಆರೋಗ್ಯಕರವಾಗಿದ್ದು, ಜೊತೆಯಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಪಠಣ ಅತಿ ಅವಶ್ಯಕ ಎಂದು ಆಯುಷ್ ಆಸ್ವತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಸುಮನಾ ತಿಳಿಸಿದರು. ತಾಲ್ಲೂಕಿನ ಬಿದರೆಗುಡಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೊನೇಹಳ್ಳಿ ಆಯುಷ್ ಆಸ್ವತ್ರೆಯ ಸಹಯೋಗದಲ್ಲಿ ೯ನೇ ರಾಷ್ಟಿçÃಯ ಆರ್ಯುವೇದ ದಿನಾಚರಣೆಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಆಗಲೀ ಜೀವ ಇರುವ ಪ್ರಾಣಿ ಸಂಕಲುಗಳಿಗೆ ರೋಗ ಬರದಂತೆ ಆಯಾಸಗೊಳ್ಳದಂತೆ ಸದಾ ಲವಲವಿಕೆಯಿಂದ ಇರುವುದೇ ಆರೋಗ್ಯವೆಂದು ಧನ್ವಂತರಿಯಲ್ಲಿ ತಿಳಿಸಿದ್ದು, ಇತ್ತೀಚಿನ ದಿನಗಳಲ್ಲಿ ಹದಿಹರಯದ ಹೆಣ್ಣು ಮಕ್ಕಳು ಜಂಕ್‌ಫುಡ್‌ಗೆ ಮಾರುಹೋಗಿ ರಾಸಾಯನಿಕ ಆಹಾರಗಳನ್ನು ಹಾಗೂ ಅತಿಯಾದ ಎಣ್ಣೆ ಪದಾರ್ಥಗಳನ್ನು, ಬೀದಿ ಬದಿಯಲ್ಲಿನ ಆಹಾರಗಳನ್ನು ಸೇವಿಸುತ್ತಿರುವುದರಿಂದ ಋತು ಸಂಬAಧಿ ಕಾಯಿಲೆಗಳು ಸಹ ಹೆಚ್ಚಾಗುತ್ತಿದ್ದು ಅದರಿಂದ ಮುಟ್ಟಿನ ದಿನಗಳಲ್ಲಿ ಹೊಟ್ಟೆ ನೋವು, ಅನಿಮಯತ ರಕ್ತಸ್ರಾವ ಅಥವಾ ಸ್ರಾವ ಆಗದೇ ಇರುವುದು ಇಂತಹ ತೊಂದರೆಗಳು, ಪಿಸಿಓಡಿಯಂತಹ ಗರ್ಭಕೋಶದ ವೈಪರಿತ್ಯಗಳು ಕಂಡುಬರುತ್ತವೆ. ಇವುಗಳಿಗೆ ಆಯುರ್ವೇದದಲ್ಲಿ ತಿಳಿಸಿರುವ ಜೀವನ ಶೈಲಿ…
ತುಮಕೂರು:\ ಇತ್ತೀಚೆಗೆ ಸುರಿಯುತ್ತಿರುವ ಮಳೆಯ ಪರಿಣಾಮ ನಗರದ ಆರ್.ಟಿ.ನಗರದ ಹೋರಿ ಮುದ್ದಪ್ಪ ಬಡಾವಣೆಯಲ್ಲಿ ಮಳೆನೀರು ಹಾಗೂ ಯುಜಿಡಿ ಕೊಳಚೆ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿದೆ. ಇದರಿಂದ ಇಡೀ ಪ್ರದೇಶದಲ್ಲಿ ದುರ್ವಾಸನೆ ಆವರಿಸಿ ನಿವಾಸಿಗಳು ನಿತ್ಯ ಸಂಕಟ ಅನುಭವಿಸುವಂತಾಗಿದೆ. ಈ ಪ್ರದೇಶದಲ್ಲಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ ಪ್ರತಿ ಬಾರಿ ಮಳೆ ಸುರಿದಾಗಲೂ ಇಲ್ಲಿನ ಜನ ಇಂತಹ ಸಮಸ್ಯೆ ಅನುಭವಿಸುವಂತಾಗಿದೆ. ಈ ಸಮಸ್ಯೆ ಬಗ್ಗೆ ಹಲವು ಬಾರಿ ನಗರಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ವಿಪರೀತ ಮಳೆ ಸುರಿದಾಗ ಮಳೆನೀರು ಸರಾಗವಾಗಿ ಹರಿದುಹೋಗದೆ, ರಸ್ತೆ, ಮನೆಗಳಿಗೆ ನುಗ್ಗಿ ಅವಾಂತರ ಸೃಸ್ಟಿಸುತ್ತದೆ. ಸಾಲದಕ್ಕೆ ಇಲ್ಲಿನ ಒಳಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ, ಕಸ ತುಂಬಿವೆ. ಮಳೆಗಾಲದಲ್ಲಿ ನೀರು ಹರಿದು ಒಳಚರಂಡಿಗಳ ಕೊಳಚೆ ಉಕ್ಕಿ ರಸ್ತೆ, ಮನೆಗಳಿಗೆ ಹರಿಯುತ್ತದೆ. ಮಳೆಗಾಲ ಆರಂಭವಾದಾಗಿನಿAದ ಇಲ್ಲಿನ ನಿವಾಸಿಗಳು…
ತುಮಕೂರು ತುಮಕೂರು ಭೂಮಿ ಕೇಂದ್ರದ ಆರ್ ಆರ್ ಟಿ ಶಿರಸ್ತೇದಾರ್ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಹಾಗೂ ಅವರ ಕುಟುಂಬ ಸರ್ಕಾರಿ ಗುಂಡುತೋಪು ನುಂಗಿರುವ ಆರೋಪ ಕೇಳಿ ಬಂದಿದ್ದು ಈ ಸಂಬAಧ ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲಾಗಿದೆ. ತುಮಕೂರು ತಾಲ್ಲೂಕು ಅನುಪನಹಳ್ಳಿ ಗ್ರಾಮದ ಸರ್ವೇ ನಂ ೩೫ರ ಪಿಯಲ್ಲಿದ್ದ ೦.೨೪ ಗುಂಟೆ ಹಾಗೂ ಸರ್ವೇ ನಂಬರ್ ೨೪/ಪಿ೯ರಲ್ಲಿದ್ದ ೬ ಗುಂಟೆ ಗುಂಡುತೋಪನ್ನು ನರಸಿಂಹರಾಜು ಅವರ ಕುಟುಂಬ ಅಕ್ರಮವಾಗಿ ಕಬಳಿಸಿ ಮಾರಾಟ ಮಾಡಿದ್ದಾರೆ ಎಂದು ದುರ್ಗದಹಳ್ಳಿ ಡಿ.ಪಿ.ತಿಮ್ಮರಾಜು ದೂರು ನೀಡಿದ್ದಾರೆ. ಅನುಪನಹಳ್ಳಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ನರಸಿಂಹಮೂರ್ತಿ( ನರಸಿಂಹರಾಜು ಅವರ ತಂದೆ) ಅವರು ಹೆಂಡತಿ ಪುಟ್ಟತಾಯಮ್ಮ ಅವರ ಹೆಸರಿಗೆ ಎಂ.ಆರ್.ಸAಖ್ಯೆ:೦೩/೯೨-೯೨, ಎಲ್.ಆರ್.ಡಿ.ಸಿ.ಆರ್ ಸಂಖ್ಯೆ: ೨೭೫/೯೦-೯೧ ರಂತೆ ನಕಲಿ ದಾಖಲೆ ಸೃಷ್ಟಿ ಕಬಳಿಸಿದ್ದಾರೆ. ನಂತರ ೨೦೦೫ರಲ್ಲಿ ಪುಟ್ಟತಾಯಮ್ಮ, ವಿಜಯ್ ಕುಮಾರ್, ನರಸಿಂಹರಾಜು ಅವರು ೪೮ ಸಾವಿರ ರೂಪಾಯಿಗೆ ಅನುಪನಹಳ್ಳಿ ಯ ನಾರಾಯಣಪ್ಪ ಅವರಿಗೆ ಮಾರಾಟ ಮಾರಾಟ ಮಾಡಿದ್ದಾರೆ, ಗುಂಡುತೋಪು ಪಕ್ಕದಲ್ಲಿ ಜಮೀನು ಹೊಂದಿರುವ…
ತುಮಕೂರು: ಕುಣಿಗಲ್ ರಸ್ತೆಯ ಬಿದರಕಟ್ಟೆ ಬಳಿ ಇರುವ ತುಮಕೂರು ವಿವಿ ನೂತನ ಕ್ಯಾಂಪಸ್ ಜ್ಞಾನಸಿರಿಗೆ ತುಮಕೂರು ನಗರದಿಂದ ವಿದ್ಯಾರ್ಥಿಗಳು ತೆರಳು ಆಗಿರುವ ಸಾರಿಗೆ ಸಮಸ್ಯೆ ಕುರಿತಂತೆ ಇಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹಾಗೂ ವಿವಿಯ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಅವರೊಂದಿಗೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಜೊತೆ ಚರ್ಚೆ ನಡೆಸಿದರು. ಮಂಗಳವಾರ ಬೆಳಗ್ಗೆ ದೇವರಾಜ ಅರಸು ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಭೇಟಿಯಾಗಿ ನೂತನ ಕ್ಯಾಂಪಸ್‌ಗೆ ತೆರಳಲು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತಂತೆ ಚರ್ಚೆ ನಡೆಸಿ, ಪರಿಹರಿಸುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ತÀÄಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ನಲ್ಲಿ ಅಕ್ಟೋಬರ್ ೨೧ ರಿಂದ ವಿಜ್ಞಾನಕ್ಕೆ ಸಂಬAಧಿಸಿದ ೧೨ ವಿಷಯಗಳ ಪಾಠ ಪ್ರವಚನದ ಆರಂಭ ಗೊಂಡಿದೆ.ತÀÄಮಕೂರು ನಗರದಿಂದ ಜ್ಞಾನಸಿರಿ ಕ್ಯಾಂಪಸ್ ಸುಮಾರು ೧೮ ಕಿ.ಮಿ.ದೂರದಲ್ಲಿದ್ದು,ಕುಣಿಗಲ್ ತುಮಕೂರು ರಸ್ತೆಯ ನಾಗವಲ್ಲಿ ಗ್ರಾಮದಿಂದ ೨.೫.ಕಿ.ಮಿ ಇದೆ.ವಿವಿಗೆ ತನ್ನದೇ ಆದ ಸಾರಿಗೆ ವ್ಯವಸ್ಥೆ ಇಲ್ಲದ…