Author: News Desk Benkiyabale

ಹುಳಿಯಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ೨೦ ಸಾವಿರ ಅಸಹಾಯಕರಿಗೆ ಪ್ರತಿ ತಿಂಗಳು ೧ ಸಾವಿರ ಮಾಸಾಶನವನ್ನು ಕಳೆದ ೩೦ ವರ್ಷಗಳಿಂದ ವಿತರಿಸುತ್ತಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ೧೯೬ ಮಂದಿಗೆ ಮಾಸಾಶನ ನೀಡಲಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೆಶಕ ದಿನೇಶ್ ತಿಳಿಸಿದರು. ಹುಳಿಯಾರು ಪಟ್ಟಣದ ಮಾರುತಿನಗರದ ನಿರಾಶ್ರಿತ ಅನಾಥೆ ಲಕ್ಷಮ್ಮ ಅವರಿಗೆ ಕನಕ ಬ್ಯಾಂಕ್ ಅಧ್ಯಕ್ಷ ಗುಜರಿನಾಗಣ್ಣ ಅವರ ದಾನ ನೀಡಿದ ನಿವೇಶನದಲ್ಲಿ ಧರ್ಮಸ್ಥಳ ಯೋಜನೆಯಿಂದ ನಿರ್ಮಿಸಲಾಗಿದ್ದ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ೨೦ ಸಾವಿರ ಅಸಹಾಯಕರಲ್ಲಿ ೮೦೦ ಮಂದಿಗೆ ಮನೆ ಕಟ್ಟಿಕೊಡಲಾಗಿದೆ. ಅಲ್ಲದೆ ಅನಾ ಥರಿಗೆ ಬಟ್ಟೆ, ಪಾತ್ರೆ, ಚಾಪೆ, ಬೆಡ್‌ಶೀಟ್, ಆಹಾರ ಪದಾರ್ಥಗಳನ್ನೂ ಸಹ ಕೊಡುತ್ತಿದೆ. ಜೊತೆಗೆ ಅವರಿಗೆ ಆರೋಗ್ಯದ ಸಮಸ್ಯೆ ಕಂಡುಬAದಾಗ ಸೇವಾಪ್ರತಿನಿಧಿಯ ಮೂಲಕ ಆಸ್ಪತ್ರೆಗೆ ಕರೆದೊಯ್ದು ಚಿಕತ್ಸೆ ಸಹ ಕೊಡಿಸುವುದರ ಮೂಲಕ ನೀವು ನನಗ್ಯಾರೂ ಇಲ್ಲವೆಂದು ಎದೆಗುಂಡಬೇಡಿ ನಿಮ್ಮೊಂದಿಗೆ ಧರ್ಮಸ್ಥಳ ಸಂಸ್ಥೆಯಿದೆ ಎಂದು ಧೈರ್ಯ ತುಂಬಲಾಗುತ್ತಿದೆ ಎಂದರು. ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ…

Read More

ಹುಳಿಯಾರು: ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದಲ್ಲಿ ಶ್ರೀ ಸಂಗಮೇಶ್ವರ ಜಾನಪದ ಕರಪಾಲ ಮೇಳ ತಂಡದವರಿAದ ಗರ್ಭಿಣಿಯರಿಗೆ ಅರಿವು ಮೂಡಿಸಲಾಯಿತು ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ ವತಿಯಿಂದ ಆಯೋಜಿಸಿದ್ದ ಈ ಕಾರ್ಯ ಕ್ರಮದಲ್ಲಿ ಗರ್ಭಿಣಿಯರ ರಕ್ತ ಹೀನv, ಶಿಶು ಮರಣ, ತಾಯಿ ಮರಣ, ಕುಷ್ಟರೋಗ ಗಂಡಾA ತರ, ಗರ್ಭಿಣಿ ಬಾಣಂತಿಯರ ಆರೋಗ್ಯ ಅರಿವು ಮೂಡಿಸಲಾಯಿತು. ತಂಡದ ನಾಯಕ ಈಶ್ವರಯ್ಯ ಕಥಾನಾಯಕ ಬೇವಿನಹಳ್ಳಿ ಮರುಳಪ್ಪನವರು ಸಹಪಾಠಿಗಳಾದ ಈಶ್ವರಯ್ಯ, ನಿಂಗರಾಜು ಮತ್ತು ದೊಡ್ಡಬಿದರಿ ಬಸವರಾಜು ಮತ್ತು ಸುಗುಣ, ವಿಜಯ, ಹಾರ್ಮೋನಿಯಂ ಮಾಸ್ಟರ್ ಶಂಕ್ರಪ್ಪ, ತಬಲಾ ಮಾಸ್ಟರ್ ನಟರಾಜ್ ಇವರಿಂದ ಅರಿವು ಮೂಡಿ ಸುವ ಕಾರ್ಯಕ್ರಮ ನಡೆಯಿತು. ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷ ಣಾಧಿಕಾರಿಗಳಾದ ಬಿ.ಸಿ.ರೇಣುಕರಾಜ್, ಆಶಾ ಕಾರ್ಯಕರ್ತೆರಾದ ಗಾಯತ್ರಮ್ಮ, ನಾಗವೇಣಿ, ಲಲಿತಮ್ಮ ಉಪಸ್ಥಿತರಿದ್ದರು.

Read More

ಕೊರಟಗೆರೆ: ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರದಸಂತೆ ಸುಂಕ ವಸೂಲಿ, ಬಸ್ಟಾಂಡ್ ಫೀ ವಸೂಲಿ ಹಾಗೂ ದಿನವಹಿ ಸುಂಕ ೨೦೨೫-೨೬ ನೇ ಸಾಲಿನ ವಸೂಲಿಗೆ ಬಹಿರಂಗ ಹರಾಜು ಪ್ರಕ್ರಿಯೆ ನಡೆದು ೧೩ ಲಕ್ಷ ರೂಗಳಿಗೆ ಬಹಿರಂಗ ಹರಾಜು ಕೂಗುವ ಮೂಲಕ ಬೀಡ್ ದಾರರು ಹಕ್ಕು ಪಡೆದರು. ಕೊರಟಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅನಿತಾ, ಮುಖ್ಯಾಧಿಕಾರಿ ಉಮೇಶ್ ಹಾಗೂ ಸದಸ್ಯರು ಸೇರಿದಂತೆ ಸಾರ್ವಜನಿಕರ ಸಮಾಕ್ಷಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಾರದಸಂತೆ ಸುಂಕ ವಸೂಲಿ, ಬಸ್ ಸ್ಟಾಂಡ್ ಫೀ ವಸೂಲಿ, ದಿನವಹಿ ಸುಂಕ ವಸೂಲಿ ಹಾಗೂ ಕಛೇರಿಯ ಹಳೆ ನ್ಯೂಸ್ ಪೇಪರ್, ಹಳೆ ಸಾಮಗ್ರಿಗಳ ವಸೂಲಾತಿಗೆ ಮಾ.೨೧ ರಂದು ಪಟ್ಟಣ ಪಂಚಾಯಿತಿ ಮುಂಭಾಗ ೨೦೨೫-೨೬ ನೇ ಸಾಲಿನಲ್ಲಿ ಒಂದು ವರ್ಷದ ಅವದಿಯ ವಸೂಲಿಗೆ ಬಹಿರಂಗ ಹರಾಜು ನಡೆದು ವಾರದಸಂತೆ ಸುಂಕ ವಸೂಲಿ ೫ ಲಕ್ಷ ಒಂದುಸಾವಿರಕ್ಕೆ, ಬಸ್ ಸ್ಟಾಂಡ್ ಫೀ ವಸೂಲಿ ೫ ಲಕ್ಷ ಕ್ಕೆ, ದಿನವಹಿ ಸುಂಕ ವಸೂಲಿ ೩ ಲಕ್ಷ ಹಾಗೂ…

Read More

ತುರುವೇಕೆರೆ: ೨೦೨೪-೨೫ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು ತಾಲ್ಲೂಕಿನ ೮ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಸುಗಮವಾಗಿ ನಡೆದು; ವಿದ್ಯಾರ್ಥಿಗಳು ಪರೀಕ್ಷೆ ಬರೆದು ನಗುಮೊಗದಿಂದ ಹೊರ ಬರುತ್ತಿದ್ದದು ಕಂದು ಬಂದಿತು. ಪಟ್ಟಣದಲ್ಲಿ ಜಿಜೆಸಿ ಪ್ರೌಢ ಶಾಲೆ, ಸರಸ್ವತಿ ಭಾಲಿಕಾ ಪ್ರೌಢ ಶಾಲೆ, ಜೆಪಿ ಆಂಗ್ಲಮಾಧ್ಯಮ ಪ್ರೌಢ ಶಾಲೆ, ಮಾಯಸಂದ್ರ ಹೋಬಳಿಯ ಎಸ್.ಬಿ.ಜಿ ವಿದ್ಯಾಲಯ ಟಿ.ಬಿ.ಕ್ರಾಸ್, ನೆಹರೂ ಬಾಲಿಕಾ ಪ್ರೌಢ ಶಾಲೆ ಮಾಯಸಂದ್ರ, ದಬ್ಬೇ ಘಟ್ಟ ಹೋಬಳಿಯ ದಬ್ಬೇಘಟ್ಟ ಗ್ರಾಮದ ಸರ್ಕಾರಿ ಪ್ರೌಢ ಶಾಲೆ, ದಂಡಿನಶಿವರ ಹೋಬ ಳಿಯ ಕೆಪಿಎಸ್ ಶಾಲೆ ದಂಡಿನಶಿವರ ಮತ್ತು ಹುಲ್ಲೇಕೆರೆಯ ಬಸವೇಶ್ವರ ಪ್ರೌಢಶಾಲಾ ಕೇಂದ್ರ ಗಳಲ್ಲಿ ಪರೀಕ್ಷೆಯು ಜರುಗಿತು. ತಾಲ್ಲೂಕಿನ ೧೬ ಸರ್ಕಾರಿ ಪ್ರೌಢಶಾಲೆ, ವಸತಿ ಶಾಲೆ ೫, ಅನುದಾನಿತ ಪ್ರೌಢ ಶಾಲೆ ೨೩, ಅನುದಾನರಹಿತ ೮, ಮೌಲಾನ ಆಜಾದ್ ಪ್ರೌಢ ಶಾಲೆ ೧ ಒಟ್ಟು ೫೩ ಪ್ರೌಢಶಾಲೆಗಳ ೧೮೨೧ ವಿದ್ಯಾರ್ಥಿ ಗಳು ಪರೀಕ್ಷೆಗೆ ತಮ್ಮ ಹೆಸರು ಗಳನ್ನು ನೋಂದಾಯಿಸಿಕೊAಡಿದ್ದರು. ಆ ಪೈಕಿ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ…

Read More

ಕೊರಟಗೆರೆ: ಗಡಿಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸರಕಾರಿ ಮತ್ತು ಖಾಸಗಿ ಬಸ್ಸಿನ ಸೌಲಭ್ಯವಿಲ್ಲದೇ ರಂಗನಾಥ ಅನುಧಾನಿತ ಪ್ರೌಢಶಾಲೆಯ ಆಡಳಿತ ಮಂಡಳಿಯು ಗೂಡ್ಸ್ ವಾಹನದಲ್ಲೇ ೨೮ಜನ ಮಕ್ಕಳನ್ನು ಬೈರೇನಹಳ್ಳಿಯಿಂದ ಅಕ್ಕಿರಾಂಪುರಕ್ಕೆ ಕನ್ನಡ ಪರೀಕ್ಷೆ ಬರೆಯಲು ಕಳುಹಿಸಿರುವ ಘಟನೆ ಶುಕ್ರವಾರ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂಯ ಬೈರೇನ ಹಳ್ಳಿಯ ಶ್ರೀರಂಗನಾಥ ಪ್ರೌಢಶಾಲೆಯ ೨೮ ಜನ ವಿದ್ಯಾರ್ಥಿಗಳು ಬೈರೇನಹಳ್ಳಿಯಿಂದ ಅಕ್ಕಿರಾಂಪುರ ಪರೀಕ್ಷಾ ಕೇಂದ್ರಕ್ಕೆ ಗೂಡ್ಸ್ ವಾಹನದಲ್ಲೇ ಹೋಗಿದ್ದರು. ಪರೀಕ್ಷೆ ಮುಗಿ ಸಿಕೊಂಡು ಹಿಂದಕ್ಕೆ ಬರುವಾಗ ಬೈಚಾಪುರ ಕ್ರಾಸಿನ ನರ್ಸರಿ ಸಮೀಪದ ಮುಖ್ಯರಸ್ತೆ ಸೇತುವೆ ಬಳಿ ಆಗಬೇಕಿದ್ದ ಅನಾಹುತ ತಪ್ಪಿದೆ. ಬೈರೇನಹಳ್ಳಿಯಿಂದ ಕಡೆಯಿಂದ ಕೊರಟಗೆರೆ ಕಡೆಗೆ ಬರುತ್ತಿದ್ದ ಲಾರಿಯೊಂದು ಸೇತುವೆ ಬಳಿ ವೇಗವಾಗಿ ಬಂದಾಗ ೨೮ಜನ ಮಕ್ಕಳನ್ನು ತುಂಬಿದ್ದ ಗೂಡ್ಸ್ ಟಾಟಾ ಎಸಿ ವಾಹನ ರಸ್ತೆಯಿಂದ ಕೆಳಗಡೆ ಇಳಿಸುತ್ತಾನೆ. ಹಿಂದೇ ಒಬ್ಬರ ಮೇಲೋಬ್ಬರ ನಿಂತಿದ್ದ ಮಕ್ಕಳು ಕೆಳಗೇ ಬಾಗಿ ಮತ್ತೇ ಒಳಗಡೆ ಹೋಗುವುದು ಸಹ ಕಂಡುಬರುತ್ತೇ. ವಾಹನ…

Read More

ತುಮಕೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-೧ ಪ್ರಾರಂ ಭವಾಗಿದ್ದು, ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಶ್ರೀ ಶಿವಾನಂದ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಇಂದು ಜಿಲ್ಲಾ ಧಿಕಾರಿ ಶುಭ ಕಲ್ಯಾಣ್ ಭೇಟಿ ನೀಡಿದರು. ಪರೀಕ್ಷಾ ಕೇಂದ್ರದಲ್ಲಿ ಬೆಳಕು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯ, ಮುಂಜಾಗ್ರತಾ ಕ್ರಮವಾಗಿ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಿರುವ ಬಗ್ಗೆ ಪರಿಶೀಲಿಸಿದರು. ಅಂಗನವಾಡಿ ಕೇಂದ್ರಕ್ಕೆ ಭೇಟಿ: ನಂತರ ಕೊರಟಗೆರೆ ತಾಲೂಕು ತುಂಬಾಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಮಕ್ಕಳ ಪೋಷಣೆ, ಶೈಕ್ಷಣಿಕ ಚಟುವಟಿಕೆ, ಆರೋ ಗ್ಯ ಸೇವೆ ಹಾಗೂ ಮಕ್ಕಳಿಗಾಗಿ ತಯಾರಿಸಿದ ಆಹಾರದ ಗುಣಮಟ್ಟವನ್ನು ಪರಿ ಶೀಲಿಸಿದರು. ಅಂಗನವಾಡಿ ಕೇಂದ್ರವನ್ನು ಸ್ವಚ್ಛ ವಾಗಿಡಲು ಹಾಗೂ ಸಮರ್ಪಕವಾಗಿ ದಾಖಲೆ ನಿರ್ವಹಣೆ ಮಾಡಲು ಅಂಗನವಾಡಿ ಸಿಬ್ಬಂದಿಗೆ ಸೂಚಿಸಿದರು. ಸೌರ ಘಟಕ ವೀಕ್ಷಿಸಿದ ಜಿಲ್ಲಾಧಿಕಾರಿ: ಬಳಿಕ ತುಮಕೂರು ತಾಲ್ಲೂಕು ಅರಕೆರೆ ಗ್ರಾಮದ ಗುರುಲಿಂಗಯ್ಯ ಅವರ ಮನೆಯ ಮೇಲ್ಛಾವಣಿಯ ಮೇಲೆ ಪ್ರಧಾನ ಮಂತ್ರಿ ಸೂರ್ಯ ಘರ್…

Read More

ತುಮಕೂರು:  ಸ್ಮಾರ್ಟ್ಸಿಟಿ ಲಿಮಿಟೆಡ್‌ನ ಪ್ರಮುಖ ಯೋಜನೆಯಾದ ಸಮಗ್ರ ನಗರ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್ICMCCC-Integrated City Management Command and Control Centre))ಗೆ ಪ್ರಥಮ ಪ್ರಶಸ್ತಿ ಲಭಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಅಶ್ವಿಜ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ. ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದಿಂದ ಆಯೋಜಿತ ಮಾರ್ಚ್ ೧೯ ರಿಂದ ೨೧ರವದರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ದೇಶದ ೧೦೦ ಸ್ಮಾರ್ಟ್ ಸಿಟಿ ಭಾಗವಹಿಸಿದ್ದ ೧೦ನೇ ಸ್ಮಾರ್ಟ್ ಸಿಟೀಸ್ ಇಂಡಿಯಾ-೨೦೨೫ ಮತ್ತು ೩೨ನೇ ಕನ್ವರ್‌ಜೆನ್ಸ್ ಇಂಡಿಯಾ ೨೦೨೫ ಎಕ್ಸೊ÷್ಪÃ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಐಸಿಎಂಸಿಸಿ ಕೇಂದ್ರವು ತುರ್ತು ಪ್ರತಿಕ್ರಿಯೆ ವ್ಯವಸ್ಥೆ, ಚುರುಕು ಸಂದೇಶ ರವಾನೆ, ವ್ಯತ್ಯಯಗೊ ಳಿಸಬಹುದಾದ ಸಂದೇಶ ರವಾನೆ ವ್ಯವಸ್ಥೆ, ಸಾರ್ವಜನಿಕ ಪ್ರಕಟಣೆಗಳು, ಪರಿಸರ ಮೇಲ್ವಿಚಾರಣಾ ವ್ಯವಸ್ಥೆಯನ್ನು ತುಮಕೂರು ಒನ್ ವ್ಯವಸ್ಥೆಯೊಂದಿಗೆ ಪೂರೈಸುತ್ತದೆ.…

Read More

ತುಮಕೂರು: ಬೆಳಗಾವಿಯಲ್ಲಿ ನಡೆದ ಎಂಇಎಸ್ ಪುಂಡಾಟಿಕೆಯಲ್ಲಿ ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಯಾವುದೇ ಬೆಂಬಲ ವ್ಯಕ್ತವಾಗದೆ, ಕೆಲ ಕನ್ನಡ ಪರ ಸಂಘಟನೆಗಳ ಪ್ರತಿಭಟನೆಗಷ್ಟೇ ಸೀಮಿತವಾಯಿತು. ಬೆಳಗಾವಿಯಲ್ಲಿ ಮಹಾರಾಷ್ಟ್ರರ ಪುಂಡರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ವಿವಿಧ ಅರಣ್‌ಕುಮಾರ್ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿ ಸ್ವಲ್ಪಹೊತ್ತು ರಸ್ತೆತಡೆ ನಡೆಸಿ ಆಕ್ರೋಶ ಹೊರ ಹಾಕಿದರು. ನಂತರ ಟೌನ್ ಹಾಲ್ ವೃತ್ತದಿಂದ ಎಂ.ಜಿ. ರಸ್ತೆ ಮುಖೇನ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿನಂತರ ಎಂ.ಜಿ.ಸ್ಟೇಡಿಯA ಕಾರ್ಯ ಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವ ಎಂಇಎಸ್ ಪುಂಡರನ್ನು ಈ ಕೂಡಲೇ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿ ಸಿದರು.ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮಿತಿ ಮೀರಿದೆ. ಈ ಸಂಘಟನೆಯನ್ನು ಸರ್ಕಾರ ನಿಷೇಧ ಮಾಡಬೇಕು. ಇವರ ಪುಂಡಾಟಿಕೆ…

Read More

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಜೆ.ಸಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಪಾಳ್ಯದ ಶ್ರೀ ಸಿದ್ದರಾಮೇಶ್ವರ ಕಿವುಡು ಮಕ್ಕಳ ವಸತಿಶಾಲೆಯಲ್ಲಿ ಜೇನು ಕೃಷಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊ ಳ್ಳಲಾಯಿತು. ಬೆಂಗಳೂರಿನ ಜಿಕೆವಿಕೆ ಜೇನುಕೃಷಿ ವಿಭಾಗ ಹಾಗೂ ಬಿ.ಪಾಳ್ಯದ ಶ್ರೀಸಿದ್ದರಾಮೇಶ್ವರ ಕಿವುಡು ಮಕ್ಕಳ ವಸತಿ ಶಾಲೆಯ ಸಹಯೋಗದಲ್ಲಿ ನಡೆದ ಜೇನು ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಬೆಂಗಳೂರಿನ ಜಿಕೆವಿಕೆಯ ಕೃಷಿ ವಿಜ್ಞಾನಿ ಕೆ.ಟಿ. ವಿಜಯ್‌ಕುಮಾರ್ ಮಾತನಾಡಿ ನಮ್ಮಲ್ಲಿ ನಾಲ್ಕು ವಿಧದ ಜೇನುಹುಳುಗಳಿದ್ದು, ಅವುಗಳಲ್ಲಿ ತುಡುವೆ ಹಾಗೂ ವೆಲ್ಲಿಫ್ರೆರ್ ಜೇನುಗಳು ಸಾಕಲಿಕ್ಕೆ ಯೋಗ್ಯವಾಗಿದೆ. ಜೇನುಹುಳುಗಳ ಗುಣಸ್ವಭಾವ, ಜೀವನಶೈಲಿ ಅರಿತಾಗ ಜೇನುಕೃಷಿ ಮಾಡಲು ಸಾಧ್ಯ, ಜೇನು ಸಾಕಾಣಿಕೆಯಿಂದ ಪರಾಗಸ್ಪರ್ಷ ಕ್ರಿಯೆಯು ಹೆಚ್ಚಿ ರೈತರ ಉತ್ಪನ್ನಗಳು ಹೆಚ್ಚಿನ ಇಳುವರಿ ನೀಡಲಿದೆ ಎಂದರು. ಕೃಷಿ ವಿಜ್ಞಾನಿ ಕೆ.ಎಸ್. ಜಗದೀಶ್ ಮಾಹಿತಿ ನೀಡಿ ಜೇನು ಸಾಕಾಣಿಕೆಯಲ್ಲಿ ಅದರ ಮೌಲ್ಯವರ್ಧನೆಗೆ ಅವಕಾಶವಿದೆ, ಇದರಿಂದ ಉಪ ಉತ್ಪನ್ನಗಳಾದ ಬಿ.ವಿನಮ್, ರಾಯಲ್‌ಜೆಲ್ಲಿ ಹಾಗೂ ಲಿಪ್ಸಿ÷್ಟಕ್ ಬಾಮ್ ತಯಾರಿಸಿ ಲಾಭಗಳಿಸಬಹುದೆಂದರು. ತಾಲೂಕಿನ ತೊರೆಮಾವಿನಲ್ಲಿ ಜೇನುಕೃಷಿ ಮಾಡಿ ಯಶಸ್ವಿಯಾಗಿರುವ ರೈತ ಪ್ರಭಾಕರ್ ಮಾತನಾ…

Read More

ತುಮಕೂರು: ವಿಶ್ವವಿದ್ಯಾನಿಲಯವೆಂದರೆ ಕೇವಲ ಜ್ಞಾನವನ್ನು ವರ್ಗಾಯಿಸುವ ಕೇಂದ್ರವಲ್ಲ. ಅದು ಸುತ್ತಲಿನ ಸಮಾಜ ಹಾಗೂ ರಾಷ್ಟçದ ಭಾವನೆಗಳನ್ನು ಪ್ರತಿಬಿಂಬಿಸಬೇಕು. ಸಮಕಾಲೀನ ಜಗತ್ತಿನ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಗುಜರಾತ್‌ನ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್.ಎ. ಬಾರಿ ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯ ಗುರುವಾರ ಆಯೋಜಿಸಿದ್ದ ೨೧ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ತಂತ್ರಜ್ಞಾನ ಬಹುವಾಗಿ ಬೆಳೆದಿದೆ. ನಾವೀಗ ಜಾಗತಿಕ ಮಟ್ಟದಲ್ಲೂ ಅಲ್ಲ, ಜಗತ್ತಿನಾಚೆಗಿನ ಬ್ರಹ್ಮಾಂಡದ ಕುರಿತು ಯೋಚಿಸಬೇಕಾಗಿದೆ ಎಂದರು. ಉನ್ನತ ಶಿಕ್ಷಣರಂಗದಲ್ಲಿ ಭಾರತದ ವಿಶ್ವವಿದ್ಯಾನಿಲಯಗಳ ಪಾತ್ರ ಏನು ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕಾಗಿದೆ. ದೇಶದಲ್ಲಿ ೧೬೦೦ ವಿಶ್ವವಿದ್ಯಾನಿಲಯಗಳಿವೆ. ಜಾಗತಿಕ ರ‍್ಯಾಂಕಿAಗ್‌ನಲ್ಲಿ ಶ್ರೇಷ್ಠ ೧೦೦ ವಿವಿಗಳ ಪೈಕಿ ಭಾರತದ ಒಂದು ವಿಶ್ವವಿದ್ಯಾನಿಲಯವೂ ಇಲ್ಲದಿರುವುದು ಯೋಚಿಸಬೇಕಾದ ಸಂಗತಿ ಎಂದರು. ಸಾಮಾನ್ಯರAತೆ ಇರುವ ವಿದೇಶಿ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ನೊಬೆಲ್ ಪ್ರಶಸ್ತಿ ಪಡೆದುಕೊಳ್ಳುತ್ತಾರೆ. ಏಕೆಂದರೆ ನೈಜ ಹೊಸ ಸಂಶೋಧನೆಗಳನ್ನು ಕೈಗೊಳ್ಳುತ್ತಾರೆ. ನಮ್ಮಲ್ಲಿ ಮಾಡಿದ ಸಂಶೋಧನೆಗಳದ್ದೇ ಪುನರಾವರ್ತನೆ ನಡೆಯುತ್ತದೆ. ಇದರಿಂದಾಗಿ ಭಾರತದ ವಿವಿಗಳಲ್ಲಿರುವ ಪ್ರಾಧ್ಯಾಪಕರಿಗೆ…

Read More