ತುಮಕೂರು: ಮಹಮದ್ ಫೈಗಂಬರ್ ಅವರು ಕ್ರಿ.ಶ.ಆರನೇ ಶತಮಾನದಲ್ಲಿ ಸಾರಿದ ಶಾಂತಿ, ಪ್ರೀತಿಯ ಸಂದೇಶ,ಇAದಿಗೂ ಪ್ರಸ್ತುತವಾಗಿದ್ದು,ಅದನ್ನು ಇಡೀ ವಿಶ್ವದ ಎಲ್ಲಾ ಮುಸ್ಲಿಂ ಭಾಂಧವರು ಪಾಲಿಸುತ್ತಾರೆ, ಪಾಲಿಸೋಣ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಪಾದಿಸಿದ್ದಾರೆ. ನಗರದ ಕುಣಿಗಲ್ ರಸ್ತೆಯ ಗಾಂಧಿನಗರದ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಪವಿತ್ರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಮನುಷ್ಯರ ಎಲ್ಲ ಕಷ್ಟಗಳು ದೂರವಾಗಿ, ಎಲ್ಲೆಡೆಯೂ ಶಾಂತಿ ನೆಲೆಸುವಂತಾಗಲಿ ಎಂದರು. ಈ ಬಾರಿ ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಬಂದಿರುವುದು ಒಂದು ಶುಭ ಸಂಕೇತ. ನಾಡಿನ ಎಲ್ಲಾ ಸಮಸ್ತ ಜನರು ಸಹ ಸ್ನೇಹ, ಪ್ರೀತಿ, ಸಹೋದರತ್ವದಿಂದ ಬಾಳಲಿ ಎಂಬAತೆ ದೇವರೇ ನಮನ್ನು ಹರಸಿ, ಹಾರೈಸಿದೆ.ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಮುನ್ನೆಡೆದರೆ ನಾಡಿನಲ್ಲಿ ಎಲ್ಲವೂ ಸುಭೀಕ್ಷವಾಗಿರುತ್ತದೆ ಎಂದು ಸಚಿವರು,ನಾವೆಲ್ಲರೂ ಅಣ್ಣ, ತಮ್ಮಂದಿರAತೆ ಬಾಳಿದರೆ ಅದಕ್ಕಿಂತ ದೊಡ್ಡ ಅಶಯ ಮತ್ತೊಂದಿಲ್ಲ ಎಂದು ಡಾ.ಜಿ.ಪರಮೇಶ್ವರ್ ನುಡಿದರು. ಕಾಂಗ್ರೆಸ್ ಪಕ್ಷದ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ,ರಂಜಾನ ಮಾಸ ಮುಸ್ಲಿಂರಿಗೆ…
Author: News Desk Benkiyabale
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷಾಂತರರೂ. ಅವ್ಯವಹಾರಗಳ ಸರಮಾಲೆಯೇ ನಡೆದಿದೆ ಎಂದು ತುಮಕೂರು ಹಾಲು ಒಕ್ಕೂಟ ಹಾಗೂ ಸಹಕಾರ ಸಂಘದ ನಿರ್ದೇಶಕ ಬಿ.ಎನ್. ಶಿವಪ್ರಕಾಶ್ ದಾಖಲೆಗಳೊಂದಿಗೆ ಆರೋಪಿಸಿದರು. ಪಟ್ಟಣದ ನಂದಿನಿ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ ಕಸಬ ಹೋಬಳಿ ವ್ಯಾಪ್ತಿಗೆ ಒಳಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೧೯೭೭ಕ್ಕೂ ಮುನ್ನ ಹೊನ್ನೇಬಾಗಿ ಹಾಗೂ ಮೇಲನಹಳ್ಳಿಗಳಲ್ಲಿ ಕಾರ್ಯಾನಿರ್ವಹಿಸಿತ್ತು. ಶೈಶಾವಸ್ತೆಯಲ್ಲಿದ್ದ ಸಂಘವನ್ನು ಬೆಳೆಸುವ ಉದ್ದೇಶದಿಂದ ೧೯೭೭ ರಲ್ಲಿ ಪಟ್ಟಣದಲ್ಲಿ ನೆಲೆಗೊಳಿಸಲಾಯಿತು. ಇದರಿಂದ ಹೆಚ್ಚು ಶೇರುದಾರಾಗಿ, ವಹಿವಾಟು ಬೆಳೆಯಿತು. ಅಂದಿನ ಕಾರ್ಯದರ್ಶಿಯಾಗಿದ್ದ ಜಗಿದೀಶ್ ಒಡೆಯರ್‌ರವರ ಬದ್ದತೆಯಲ್ಲಿ ಸ್ವಂತಕಟ್ಟಡಹೊAದುವ ಮೂಲಕ ಪ್ರತಿದಿನ ಲಕ್ಷಾಂತರರೂ. ವಹಿವಾಟು ನಡೆಸುವ ಸಂಘವಾಗಿ ಪರಿವರ್ತನೆಯಾಗಿತ್ತು. ಪ್ರಸ್ತುತ ೪೪೫೯ ಮಂದಿ ಶೇರುದಾರರಿರುವ ಸಂಘದಲ್ಲಿ ಕಳೆದ ಹತ್ತುವರ್ಷದಿಂದ ಹೊಸದಾಗಿ ಬಂದ ಆಡಳಿತ ಮಂಡಳಿಯವರ ಸ್ವೇಚ್ಚಾಚಾರದ ನಡಿಗೆಯಿಂದ ಕಳೆದ ೫ವರ್ಷದಲ್ಲಿ ಹಲವಾರು ಹಗರಣಗಳು ನಡೆದು ಲಕ್ಷಾಂತರೂ ಅವ್ಯವಹಾರವಾಗಿದೆ ಎಂದು ದಾಖಲೆಗಳನ್ನು ಪ್ರದರ್ಶಿಸಿ ಆರೋಪಿಸಿದರು. ಸಂಘದಲ್ಲಿ ಪ್ರಭಾರ ಸಿಇಓ…
ತುಮಕೂರು: ಪ್ರತಿಯೊಬ್ಬ ನಾಗರಿಕನೂ ತೆರಿಗೆ ಕಾನೂನಿನ ಎಲ್ಲ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಬೇಕು ಮತ್ತು ಅನುಸರಿಸಬೇಕು ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ವಕೀಲರಾದ ಕೆ. ಆರ್. ಪ್ರದೀಪ್ ಹೇಳಿದರು. ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ತೆರಿಗೆ ನ್ಯಾಯಶಾಸ್ತç ಮತ್ತು ನೇರ ತೆರಿಗೆ ಪದ್ಧತಿಗಳು’ ಕುರಿತಯ ವಿಶೇಷ ಉಪನ್ಯಾಸ ನೀಡಿದರು. ಪಾವತಿಸುವ ಸಾಮರ್ಥ್ಯ ಮತ್ತು ಪಾವತಿಸಲು ಇಚ್ಛೆ ಉತ್ತಮ ತೆರಿಗೆ ಕಾನೂನನ್ನು ಹೊಂದಲು ಎರಡು ತತ್ವಗಳಾಗಿವೆ ಎಂದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿರುವ ಪ್ರತೀಕ್ಷಣವನ್ನೂ ಕಲಿಕೆಗಾಗಿ ಬಳಸಿಕೊಳ್ಳಬೇಕು. ಕಲಿಕೆಗೆ ಯಾವುದೇ ಸಮಯದ ಮಿತಿ ಇರಬಾರದು. ಹೆಚ್ಚಿನದನ್ನು ತಮ್ಮದಾಗಿಸಿಕೊಳ್ಳುವ ಕುತೂಹಲ ಸದಾ ಜಾಗೃತವಾಗಿರಬೇಕು ಎಂದರು. ಕುಲಸಚಿವೆ ನಾಹಿದಾ ಜûಮ್ ಜûಮ್, ಮೌಲ್ಯಮಾಪನ ಕುಲಸಚಿವ ಪ್ರೊ. ಕೆ. ಪ್ರಸನ್ನ ಕುಮಾರ್, ವಾಣಿಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಶೇಖರ್, ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಭಾಗದ…
ಕೊರಟಗೆರೆ: ತಾಲ್ಲೂಕಿನ ವಡ್ಡಗೆರೆ ಗ್ರಾಮದ ೮೫೦ವರ್ಷಗಳ ಇತಿಹಾಸವುಳ್ಳ ಶ್ರೀವೀರನಾಗಮ್ಮ ತಾಯಿಯ ಯುಗಾದಿ ಜಾತ್ರಾ ಮಹೋತ್ಸವವು ಲಕ್ಷಾಂತರ ಮಂದಿ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿAದ ನಡೆಯಿತು. ಪ್ರತಿವರ್ಷ ಯುಗಾದಿ ಮರುದಿನ ನಡೆಯುವ ಶ್ರೀವೀರನಾಗಮ್ಮ ತಾಯಿ ಜಾತ್ರೆಯು ರಥೋತ್ಸವದೊಂದಿಗೆ ವಿಜೃಂಭಣೆಯಿAದ ನಡೆದಿದೆ. ಈ ವರ್ಷ ದೇವಾಲಯದ ಆಡಳಿತ ಮಂಡಳಿಯಿAದ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತೇರಿನ ರಥದಲ್ಲಿ ವೀರನಾಗಮ್ಮ ತಾಯಿ ಮೆರವಣಿಗೆ ವಿಗ್ರಹವನ್ನು ರಥದಲ್ಲಿ ಕೂರಿಸಿ ಸಂಪ್ರಾದಾಯಿಕ ಸಕಲ ಪೂಜೆಗಳನ್ನು ನೆರವೇರಿಸಿದ ಬಳಿಕ ಎಲೆರಾಂಪುರ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ತಾಯಿಗೆ ಇಷ್ಟಾರ್ಥಗಳನ್ನು ಸಲ್ಲಿಸುವಂತೆ ಪೂಜೆ ಸಲ್ಲಿಸಿ ಹರಕೆ ತೀರಿಸಿ ವೀರನಾಗಮ್ಮ ತಾಯಿಯ ರಥ ಎಳೆದು ತಾಯಿಯ ವೈಭವವನ್ನು ಕಣ್ತುಂಬಿಕೊAಡರು. ಆಗಮಿಸಿದ ಭಕ್ತಾಧಿಗಳಿಗೆ ಆಡಳಿತ ಮಂಡಳಿಯಿAದ ವಿಶೇಷ ದರ್ಶನ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಆಯೋಜನೆ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಶಿವಕುಮಾರ್ ಮಾತನಾಡಿ, ವಡ್ಡಗೆರೆ ವೀರನಾಗಮ್ಮ ತಾಯಿ ದೇವಾಲಯಕ್ಕೆ ಪುರಾತನ ಇತಿಹಾಸವಿದೆ.…
ಕೊರಟಗೆರೆ: ಫೈನಾನ್ಸ್ನಲ್ಲಿ ಸಾಲ ಪಡೆದು ಜೀವನಕ್ಕಾಗಿ ನಿರ್ಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗೆ ಕಿಡಿಗೇ ಡಿಗಳು ಬೆಂಕಿ ಇಟ್ಟ ಕಾರಣ ೬೦ಸಾವಿರಕ್ಕೂ ತಿನಸಿ ಪದಾರ್ಥಗಳು ಸುಟ್ಟು ಭಸ್ಮವಾಗಿರುವ ಯುಗಾದಿ ಹಬ್ಬದ ರಾತ್ರಿ ಘಟನೆ ನಡೆದಿದೆ. ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬ ಳಿ ಗೌರಗಾನಹಳ್ಳಿ ಕ್ರಾಸ್ ಬಳಿ ಕಳೆದ ೧.೫ ವರ್ಷಗಳಿಂದ ಗೌರಗನಹಳ್ಳಿ ಗ್ರಾಮದ ರಂಗನಾಥಯ್ಯ ಕುಟುಂಬ ಪೆಟ್ಟಿಗೆ ಅಂಗಡಿ ನಿರ್ಮಿಸಿಕೊಳ್ಳಲಾಗಿತ್ತು. ಜೀವನೋಪಾಯಕ್ಕೆ ಇದ್ದ ಪೆಟ್ಟಿಗೆ ಅಂಗಡಿ ಕಳೆದುಕೊಂಡು ಬಡ ಕುಟುಂಬ ಬೀದಿಪಾಲಗಿರುವ ಘಟನೆ ತಡರಾತ್ರಿ ನಡೆದಿದೆ. ಅಂಗಡಿಯಲ್ಲಿದ್ದ ೬೦ಸಾವಿರ ಬೆಲೆ ಬಾಳುವ ತಿನಸಿ ಪದಾರ್ಥಗಳು ಸುಟ್ಟು ಕರಕಲಾಗಿದ್ದು, ಅಂಗಡಿಗೆ ಬಿದ್ದ ಬೆಂಕಿಯಿAದ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ರವರ ಗಮನಕ್ಕೆ ತಂದು ನೆರವು ನೀಡುವುದಾಗಿ ಹೂಲೀಕುಂಟೆ ಗ್ರಾ.ಪಂ ಸದಸ್ಯ ಕೇಶವಮೂರ್ತಿ ಭರವಸೆ ನೀಡಿದ್ದಾರೆ. ಸಾರ್ವಜನಿಕರಿಂದ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಪೆಟ್ಟಿಗೆ ಅಂಗಡಿ ಮಾಲೀಕ ರಂಗನಾ ಥಯ್ಯ…
ತುಮಕೂರು: ವೈಜ್ಞಾನಿಕ ಅನ್ವೇಷಣೆಗಳು ತಕ್ಷಣ ಯಶಸ್ಸನ್ನು ನೀಡುವುದಿಲ್ಲ. ವೈಫಲ್ಯ ಮತ್ತು ಪ್ರತಿಕೂಲತೆಗಳು ಪ್ರಯಾಣದ ಒಂದು ಭಾಗವಾಗಿರುತ್ತವೆ. ನಿಜವಾದ ಜೈವಿಕಾ ಣುಶಾಸ್ತçಜ್ಞನು ಸಹನಶೀಲತೆ, ಧೈರ್ಯ, ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸಿನತ್ತ ಮುನ್ನಡೆಯಬೇಕು ಎಂದು ಹಿರಿಯ ವಿಜ್ಞಾನಿ ಡಾ. ಶಿವಾಜಿ ಜಾಧವ್ ತಿಳಿಸಿದರು. ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸೂಕ್ಷö್ಮ ಜೀವಶಾಸ್ತç ವಿಭಾಗದಲ್ಲಿ ‘೨೧ನೇ ಶತಮಾನದ ಜೈವಿಕಾಣುಶಾಸ್ತç: ಹೊಸ ಆವಿಷ್ಕಾರಗಳು ಮತ್ತು ಅನ್ವಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಂಕೆಗಳಿಗಿAತ ಜ್ಞಾನ ಮಹತ್ವದ್ದು. ಅಂಕೆಗಳು ಪ್ರಾರಂಭಿಕ ಅವಕಾಶಗಳನ್ನು ನೀಡಬಹುದು. ಆದರೆ ದೀರ್ಘಕಾಲೀನ ಯಶಸ್ಸನ್ನು ನಿರ್ಧರಿಸುವುದು ಆಳವಾದ ಜ್ಞಾನ ಮತ್ತು ತಜ್ಞತೆ. ಜೈವಿಕಾಣುಶಾಸ್ತçದಲ್ಲಿ ಸೂಕ್ಷö್ಮಜೀವಿಗಳು, ರೋಗ ಗಳು, ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಆಳವಾದ ತಿಳುವಳಿಕೆ ಅನಿವಾರ್ಯ ಎಂದರು. ನಿರಂತರ ಅಧ್ಯಯನ ಮತ್ತು ಕುತೂಹಲ ಅತ್ಯಗತ್ಯ. ಜೈವಿಕಾಣುಶಾಸ್ತçದ ಕ್ಷೇತ್ರ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ. ಹೊಸ ಸಂಶೋ ಧನೆಗಳು ಮತ್ತು ಆವಿಷ್ಕಾರಗಳು ನಮ್ಮ ಜೀವನದ ಅರಿವನ್ನು ವಿಸ್ತರಿಸುತ್ತವೆ. ನಾವು ಹೆಚ್ಚು ತಿಳಿಯಲು, ಅಧ್ಯಯನ ಮಾಡಲು, ಕಾರ್ಯಾ ಗಾರಗಳಲ್ಲಿ ಪಾಲ್ಗೊಳ್ಳಲು,…
ತುಮಕೂರು: ನಗರದ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ೬೪ನೇ ಜನ್ಮ ವರ್ಧಂತಿಯನ್ನು ಭಕ್ತರು ಶನಿವಾರ ಭಕ್ತಿ, ಸಡಗರದಿಂದ ಆಚರಿಸಿದರು. ಈ ಹಿನ್ನೆಲೆಯಲ್ಲಿ ಹಿರೇಮಠದಲ್ಲಿ ಹಬ್ಬದ ಸಂಭ್ರಮ ಏರ್ಪಟ್ಟಿತ್ತು. ಬೆಳಗಿನಿಂದಲೇ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳಿಗೆ ಭಕ್ತಿಗೌರವ ಸಮರ್ಪಣೆ ಮಾಡಿ, ಆಶೀರ್ವಾದ ಪಡೆದರು. ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಶಾಸಕ, ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ತುಮಕೂರು ವಿವಿ ಉಪ ಕುಲಪತಿ ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ಸಂಘಸAಸ್ಥೆಗಳ ಪ್ರಮುಖರು ಆಗಮಿಸಿ ಜನ್ಮವರ್ಧಂತಿ ಪ್ರಯುಕ್ತ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಮಾಡಿದರು. ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಉಪಾಧ್ಯಕ್ಷ ಟಿ.ಬಿ.ಹರೀಶ್, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷ ಹೆಬ್ಬಾಕ ಮಲ್ಲಿಕಾರ್ಜುನ್, ಸ್ನೇಹ ಸಂಗಮ ಬ್ಯಾಂಕ್ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಟಿ.ಸಿ.ಓಹಿಲೇಶ್ವರ್,…
ತುಮಕೂರು: ರಂಜಾನ್ ಹಬ್ಬದ ಪ್ರಯುಕ್ತ ನಗರದ ಸದಾಶಿವ ನಗರದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಕಂದರ್ ಅವರು ತಮ್ಮ ಸಿಕಂದರ್ ಫೌಂಡೇಶನ್‌ನಿAದ ಶುಕ್ರವಾರ ಸಾವಿರಾರು ಬಡ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದರು. ಫುಡ್ ಕಿಟ್ ವಿತರಣೆ ಮಾಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಅವರು, ದೈವನು ಕುರಾನ್‌ನಲ್ಲಿ ಹೇಳಿರುವಂತೆ ಯಾರಲ್ಲಿ ವಿದ್ಯೆ ಇರುವುದೊ ಅವರು ಇಲ್ಲದವರಿಗೆ ವಿದ್ಯಾ ದಾನ ಮಾಡಬೇಕು, ಸಂಪತ್ರು ಇದ್ದವರು ಅದರಲ್ಲಿ ಸ್ವಲ್ಪ ಭಾಗ ಬಡವರಿಗೆ ದಾನ ಮಾಡಬೇಕು. ಅಧಿಕಾರಲ್ಲಿ ಇರುವವರ ಅಮಾಯಕರಿಗೆ ನ್ಯಾಯ ಒದಗಿಸಬೇಕು. ಇದೇ ರೀತಿ ರಂಜಾನ್ ಹಬ್ಬದಲ್ಲಿ ಬಡವರೂ ಸಂತೋಷದಿAದ ಹಬ್ಬ ಆಚರಣೆ ಮಾಡಬೇಕು ಎಂದು ಸಿಕಂದರ್ ಫೌಂಡೇಶನ್‌ನಿAದ ಆಹಾರಧಾನ್ಯ ವಿತರಿಸಿ ಸಹಾಯ ಮಾಡಿದ್ದಾರೆ ಎಂದರು. ಪವಿತ್ರ ರಂಜಾನ್‌ನಲ್ಲಿ ಉಪವಾಸ ಮಾಡಿ, ಹಸಿವಿನ ಅನುಭವ ಪಡೆಯಬೇಕು. ಯಾರು ಹಸಿವಿ ನಿಂದ ಬಳಲುವವರೋ ಅವರಿಗೆ ಅನ್ನ ನೀಡಬೇಕು ಎಂಬುದು ರಂಜಾನ್ ಆಶಯ. ಮುಸಲ್ಮಾನ್ ಎಂದರೆ ಶರಣಾಗುವವನು ಎಂದ ರ್ಥ. ಇಸ್ಲಾಂ…
ತುಮಕೂರು : ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಬರೆಯನ್ನು ಹಾಕಿರುವ ರ‍್ಕಾರಕ್ಕೆ ಬಡವರ ಬಗ್ಗೆ ಯಾವುದೇ ಕಾಳಜಿಯಿಲ್ಲ. ಪಂಚ ಗ್ಯಾರಂಟಿ ಯೋಜನೆಗಳ ಹೊರೆಯನ್ನು ರಾಜ್ಯದ ಜನರು ನೇರವಾಗಿ ಈಗ ಎದುರಿಸುತ್ತಿರುವುದರ ಸಂಕೇತವೇ ಬೆಲೆ ಏರಿಕೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡರು ಟೀಕಿಸಿದ್ದಾರೆ. ಯುಗಾದಿ ಬೇವು ಬೆಲ್ಲದ ಹಬ್ಬ. ಆದರೆ, ಈ ರ‍್ಕಾರ ರಾಜ್ಯದ ಜನರಿಗೆ ಕೇವಲ ಬೇವು ಕೊಟ್ಟು ಕಹಿ ತಿಂದು ಹಬ್ಬ ಆಚರಿಸಿ ಎಂದು ಹೇಳಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಗಾದಿಯ ಮರುದಿನವಾದ ಏಪ್ರಿಲ್ ೧ ರಿಂದ ಹಾಲಿನ ಬೆಲೆ ಏರಿಕೆ ಜಾರಿಗೆ ಬರಲಿದೆ. ಜನರನ್ನು ಹೇಗೆ ಸಿದ್ದರಾಮಯ್ಯ ರ‍್ಕಾರ ಏಪ್ರಿಲ್ ೧ ರ ಮರ‍್ಖರ ದಿನವೇ ಮರ‍್ಖರನ್ನಾಗಿ ಮಾಡುತ್ತಿದೆ ಎನ್ನುವುದಕ್ಕೆ ಇದು ನಿರ‍್ಶನ. ಈ ರ‍್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ರ‍್ಷ ಆಗಿಲ್ಲ. ಇದರೊಳಗೆ ಪೆಟ್ರೋಲ್ ಮತ್ತು ಡೀಸಲ್ ದರ ಏರಿಸಿದರು, ವಿದ್ಯುತ್ ದರ ಎರಡು ಸಾರಿ ಏರಿಸಿದರು. ಈಗ ಒಂದು…
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ರೈತರ ಪಾಲಿನ ಏಕೈಕ ಜೀವಜಲದ ಮೂಲವಾದ ಹೇಮಾವತಿ ನಾಲೆಯ ಬಹುತೇಕಕಡೆ ಹೂಳುತುಂಬಿ ಮುಂಬರುವ ದಿನದಲ್ಲಿ ನೀರೇಹರಿಯದ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನ ರೈತರ ಪಾಲಿಗೆ ಏಕೈಕ ಭರವಸೆಯಾಗಿದ್ದ ಹೇಮಾವತಿ ನಾಲೆಯಿಂದ ಈ ಭಾಗದ ೨೬ಕೆರೆಗಳಿಗೆ ನೀರುಣಿಸುವ ಯೋಜನೆ ಅನೇಕ ಹೋರಾಟದ ತಿರುವುಗಳನ್ನು ಪಡೆದು ಕಳೆದ ಮೂರುವರ್ಷದ ಹಿಂದೆ ಒಂದುಭಾಗದ ನಾಲೆಯಕಾಮಗಾರಿ ಮುಗಿದು ತಾಲ್ಲೂಕಿನ ಸಾಸಲು, ಶೆಟ್ಟಿಕೆರೆ, ಹೆಸರಳ್ಳಿ, ಅಂಕಸAದ್ರದ ಅಣೆ, ತಿಮ್ಲಾಪುರ, ಹುಳಿಯಾರು, ಬೋರನಕಣಿವೆ ಜಲಾಷಯದವರೆಗೂ ನೀರು ಹರಿದು ತಾಲ್ಲೂಕಿನ ಜನತೆಗೆ ಸಂತಸವನ್ನುAಟು ಮಾಡಿತ್ತು. ಪಾತಾಳ ಕಂಡಿದ್ದ ಅಂತರ್ಜಲ ಮೇಲಕ್ಕೆರಿತ್ತು. ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿದ್ದ ಈ ತಾಲ್ಲೂಕಿನಲ್ಲಿ ಹೇಮಾವತಿ ಯೋಜನೆಯ ಇತರೆ ಭಾಗದ ಕಾಮಗಾರಿ ಮುಗಿದು ನೀರು ಹರಿದರೆ ಮುಕ್ಕಾಲು ತಾಲ್ಲೂಕಿನ ನೀರಿನ ಬವಣೆ ನೀಗಿಲಿದೆ, ಅಂತರ್ಜಲ ಉತ್ತಮಗೊಂಡು ಕೊಳವೆಬಾವಿಯ ನೀರಿನ ಆಶ್ರಯದಲ್ಲಿಯೇ ಬೆಳೆ ಉಳಿಸಿಕೊಳ್ಳಲು ಜೀವನ ಸವೆಸುತ್ತಿದ್ದ ರೈತರಿಗೆ ಮುಂದಿನ ದಿನ ನೆಮ್ಮದಿಯ ದಿನವಾಗಲಿದೆ ಎಂಬ ಅವರ ನಾನಾ ಕನಸಿಗ ಕೊಡಲಿ ಪೆಟ್ಯು ಬಿದ್ದಿದೆ. ತಾಲ್ಲೂಕು ಆಡಳಿತದ…