ಕೊರಟಗೆರೆ:

      ಪ್ರೀತಿಸಿ ಯುವತಿಯ ಜೊತೆ ಮದುವೆಯಾದ ದ್ವೇಷದ ಕಿಚ್ಚಿನಿಂದ ಬೆಂಗಳೂರು ನಗರದ ಶಾಸಕರೊಬ್ಬರ ತಮ್ಮನ ಕಡೆಯ 8ಜನ ಆರೋಪಿಗಳ ತಂಡ ತುಮಕೂರು ತಾಲೂಕಿನ ಬಳಗೆರೆ ಗ್ರಾಮದ ರೌಡಿಶೀಟರ್ ಮನುಗೆ ಮಧ್ಯಪಾನ ಮಾಡಿಸಿ ಕುಡಿದ ಮತ್ತಿನಲ್ಲಿ ಕೈ ಮತ್ತು ಕಾಲಿಗೆ ಹಗ್ಗದಿಂದ ಕಟ್ಟಿ ಲಾಂಗ್ ಮತ್ತು ಮಚ್ಚಿನಿಂದ 14ಭಾರಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.

        ತಾಲೂಕಿನ ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರೈತರಾದ ಸೂಲಪ್ಪ ಮತ್ತು ತಿಮ್ಮಪ್ಪ ಎಂಬುವರ ಜಮೀನಿನ ಮೂಲಕ ಕಲ್ಲು ಗಣಿಗಾರಿಕೆಗೆ ಹಾದುಹೋಗುವ ಮಣ್ಣಿನ ನಡುರಸ್ತೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದ ಕಾಪಾಕ್ಷಿಪಾಳ್ಯದ ವಾಸಿಯಾದ ಮನು(38) ಎಂಬುವನೇ 8ಜನರಿಂದ ಕೊಲೆಯಾದ ದುರ್ದೈವಿ.

       ಮೃತ ಮನು ಮೂಲತಃ ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಹೋಬಳಿ ಬಳಗೆರೆ ಗ್ರಾಮದ ವಾಸಿ. ಪ್ರಸ್ತುತ ಬೆಂಗಳೂರು ನಗರದ ಕಾಮಾಕ್ಷಿಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಬೆಂಗಳೂರು ನಗರ ಶಾಸಕರೊಬ್ಬರ ತಮ್ಮನ ಮಗಳನ್ನು ಪ್ರೀತಿಸಿ ಕಳೆದ 40ದಿನದ ಹಿಂದೆ ಬೆಂಗಳೂರಿನಿಂದ ಪರಾರಿಯಾದ ನಂತರ ಮದುವೆಯಾಗಿ ತುಮಕೂರು ನಗರದಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.

      ಮದುವೆಯಾದ ಪ್ರೀಯತಮೆಯ ಮನೆಯಲ್ಲಿ ಕಳೆದ 8ವರ್ಷದಿಂದ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನು ಕಳೆದ 40ದಿನದ ಹಿಂದೆ ಮಾಲೀಕನ ಮಗಳೊಂದಿಗೆ ಪರಾರಿಯಾಗಿ ಮದುವೆ ಆಗಿರುವುದಾಗಿ ಪೇಸ್‍ಬುಕ್‍ನಲ್ಲಿ ಲೈವ್ ವಿಡೀಯೋ ಹಾಕಿಕೊಂಡಿದ್ದಾನೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮನು ವಿರುದ್ದ ರೌಡಿಶೀಟರ್ ಆರೋಪಿಯೂ ಆಗಿದ್ದಾನೆ. ಮದುವೆ ಆದ ನಂತರ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

      ಬೆಂಗಳೂರು ನಗರದಿಂದ ಸೋಮವಾರ ಸಂಜೆ ಆಗಿಸಿರುವ ಆರೋಪಿಗಳ ತಂಡ ರಾತ್ರಿ 12ಗಂಟೆ ವೇಳೆಯಲ್ಲಿ ಜೆಟ್ಟಿಅಗ್ರಹಾರ ಗ್ರಾಮದ ಸಮೀಪ ಮನುಗೆ ಮಧ್ಯಪಾನ ಮಾಡಿಸಿ ಎಗ್ರೈಸ್ ಊಟ ತಿನ್ನಿಸಿದ ನಂತರ ಎಣ್ಣೆಯ ಮತ್ತಿನಲ್ಲಿದ್ದ ಮನುವಿನ ಕೈ ಮತ್ತು ಕಾಲಿಗೆ ಹಗ್ಗದಿಂದ ಭದ್ರವಾಗಿ ಕಟ್ಟಿ ಲಾಂಗಿನಿಂದ ತಲೆಯ ಹಿಂದೆ ಮತ್ತು ಬೆನ್ನಿಗೆ 6ಬಾರಿ ಹಿರಿತ, ನಂತರ ಮುಖ ಮತ್ತು ಕುತ್ತಿಗೆಯ ಭಾಗಕ್ಕೆ 8ಬಾರಿ ಕತ್ತರಿಸಿ 8ಜನ ಸ್ನೇಹಿತರ ತಂಡ ಕೊಲೆ ಮಾಡಿದ್ದಾರೆ.

      ಕೊಲೆಯಾದ ಸ್ಥಳಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿ ಶೋಭರಾಣಿ, ಮಧುಗಿರಿ ಡಿವೈಎಸ್ಪಿ ಧರಣೀಶ್, ಕೊರಟಗೆರೆ ಸಿಪಿಐ ನದಾಪ್, ಪಿಎಸೈ ಮಂಜುನಾಥ, ಸಂತೋಷ್ ನೇತೃತ್ವದ ಪೊಲೀಸರ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿ ಬೇಲಿಯೊಳಗಿದ್ದ ಎರಡು ಲಾಂಗು ಮತ್ತು ಒಂದು ಚಾಕು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.

       ಕೊರಟಗೆರೆ ಸಿಪಿಐ ನದಾಪ್ ಮತ್ತು ಪಿಎಸೈ ಮಂಜುನಾಥ ನೇತೃತ್ವದ ಪೊಲೀಸರ ತಂಡ ಮೊಬೈಲ್ ತಂತ್ರಜ್ಞಾನದ ಮೂಲಕ ಕೊಲೆ ಮಾಡಿ ಪರಾರಿ ಆಗಿದ್ದ 5ಜನ ಆರೋಪಿಗಳ ಸುಳಿವು ಪಡೆದು ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಹೋಗುವ ದಾರಿಯ ಸಮೀಪದ ಕೆರೆಯ ಬಳಿ ಟೊಯೋಟೊ ಕಾರಿನಲ್ಲಿ ಮಧ್ಯಪಾನ ಮಾಡುತ್ತೀದ್ದ ಐದು ಜನ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸು ತ್ತಿರುವ ಪೊಲೀಸರ ತಂಡ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ. ಕೊಲೆಯಾದ ಘಟನೆ ಬೆಳಕಿಗೆ ಬಂದ 8ಗಂಟೆಯೊಳಗೆ ಕೊಲೆ ಮಾಡಿರುವ ಆರೋಪಿಗಳನ್ನು ವಶಕ್ಕೆ ಪಡೆದು ಬಂದಿಸಿರುವ ಕೊರಟಗೆರೆ ಪೊಲೀಸರ ಪರವಾಗಿ ಸ್ಥಳೀಯ ನಾಗರೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  

(Visited 1,019 times, 1 visits today)