ಮಧುಗಿರಿ :
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಸರ್ಕಾರಿ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಿಸಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಹೊರಹೊಮ್ಮಿಸುವ ಹೊಣೆ ಶಿಕ್ಷಕರ ಮೇಲಿದೆ. ಸರ್ಕಾರಿ ಶಾಲೆಯಲ್ಲಿ ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಇಂತಹ ಗುಣಮಟ್ಟದ ವಸ್ತು ಪ್ರದರ್ಶನವನ್ನು ಏರ್ಪಡಿಸಿರುವುದು ಶ್ಲಾಘನೀಯ ಪ್ರತಿಯೊಂದು ವಿಷಯವೂ ಕಲಿಕೆಗೆ ಪೂರಕವಾಗಿದೆ ಎಂದರು.
ವಿನೂತನ ಮಾದರಿಯ ವಸ್ತು ಪ್ರದರ್ಶನ :
ಈ ವಸ್ತು ಪ್ರದರ್ಶನದಲ್ಲಿ ವಿಜ್ಞಾನ ಶಿಕ್ಷಕಿ ಎಂ.ಎನ್. ರಜನಿ ಮಾರ್ಗದರ್ಶನದಲ್ಲಿ ಮಕ್ಕಳು ತಯಾರಿಸಿದ ನಕ್ಷತ್ರಪುಂಜ, ತಳವಿಲ್ಲದ ಬಾವಿ, ಮ್ಯಾಗ್ನೆಟಿಕ್ ಕಾರ್, ಪೆರಿಸ್ಕೋಪ್, ಟೆಲಿಸ್ಕೋಪ್, ಕೆಲಿಡೋಸ್ಕೋಪ್, ಫ್ರತಿಫಲನ ನಿಯಮ, ರಾಕೆಟ್, ಮೊಬೈಲ್ ಗೋಪುರ, ವೋಲ್ವೋಬಸ್, ಜಲಚಕ್ರ, ಹನಿ ನೀರಾವರಿ, ಸೂಕ್ಷ್ಮದರ್ಶಕ, ಬೆಳಕಿನ ವರ್ಣ ವಿಭಜನೆ, ಅಣೆಕಟ್ಟು, ಸೌರವ್ಯೂಹ, ಔಷದಿ ಸಸ್ಯಗಳು, ಜೈವಿಕ ಮಾದರಿಗಳು, ಸಂಕೇತ ದೀಪಗಳು, ಘನ ತ್ಯಾಜ್ಯ ನಿರ್ವಹಣೆ, ಎರೆಗೊಬ್ಬರ, ಸೌರಒಲೆ, ಸೌರಜಲತಾಪಕ, ಜಯಕಿಕ ಕೀಟನಾಶಕ, ನೈಸರ್ಗಿಕ ಸೊಳ್ಳೆಬತ್ತಿಯ ಮಾದರಿಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಡಿ.ವೈ.ಪಿ.ಸಿಗಳಾದ ರಾಜ್‍ಕುಮಾರ್, ನಾಗರಾಜು, ಬಿಇಓ ರಂಗಪ್ಪ, ಬಿ.ಆರ್.ಸಿ ಆನಂದ್ ಕುಮಾರ್, ಗ್ರಾ.ಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಎಸ್.ಎನ್. ರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ, ಜಿಲ್ಲಾ ಕಾರ್ಯದರ್ಶಿ ರಾಮದಾಸು, ಉಪಾಧ್ಯಕ್ಷೆ ನಾಗಮ್ಮ, ಎನ್.ಸಿ.ಇ.ಸಿ.ಒ ಅಜ್ಜೇಗೌಡ, ಸಿ.ಆರ್.ಪಿ ಹರೀಶ್, ಮುಖ್ಯ ಶಿಕ್ಷಕ ರಾಮಚಂದ್ರಯ್ಯ, ಸುರೇಶ್ ಇದ್ದರು.