ನಿನ್ನೆ ಜಮ್ಮು ಕಾಶ್ಮೀರದ ಪುಲುವಾಮಾ ಜಿಲ್ಲೆಯಲ್ಲಿ ನಡೆದಿರುವ ಘಟನೆಯನ್ನು ಬಹಳ ಬಲವಾಗಿ ಖಂಡಿಸುತ್ತೇನೆ, ಇಂತಹ ಹೀನ ನೀಚ ಕೃತ್ಯ ಮಾಡುವ ಯಾವೊಬ್ಬನೇ ಆಗಿರಲಿ ಅವರಿಗೆ ತಕ್ಕ ಪಾಠ ನಮ್ಮ ಸೇನೆ ಕಲಿಸಬೇಕು, ಸೇರಿಗೆ ಸವ್ವಾಸೇರು ಎಂಬಂತೆ ಒಂದು ತಲೆಗೆ ಹತ್ತು ತಲೆಗಳನ್ನು ತರಬೇಕು ಇದು ನನ್ನ ಅಪೇಕ್ಷೆ ಮಾನ್ಯ ಪ್ರಧಾನಿಗಳುನನಗೆ ಅನುಮತಿ ಕೊಟ್ಟು ಕೋವಿ ಕೊಡಿ ದೇಶದ ರಕ್ಷಣೆಗಾಗಿ ಭಯೋತ್ಪಾದಕರ ರುಂಡ ಚೆಂಡಾಡುವೆ, ದೇಶದ ರಕ್ಷಣೆಗಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದು ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮದ ಮಾಜೀ ನಿರ್ದೇಶಕ ಹಾಗು ಬಿಜೆಪಿರಾಜ್ಯ ಕಾರ್ಯಕಾರಿಣಿ ಸದಸ್ಯಪ್ರಭಾಕರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಂಚಾಬಿನ ಕಾಂಗ್ರೇಸ್ ಸಚಿವ ನವಜೋತಸಿಂಗ್ ಸಿದ್ದು ಇವನೊಬ್ಬ ದೇಶದ್ರೋಹಿ ಪಾಕಿಸ್ಥಾನದ ಬಿಲಾಲನ ಮೊಮ್ಮಗ ಆಡಿದ ಹಾಗೆ ಆಡುತ್ತಾನೆ, ನಿನ್ನೆಯ ಘಟನೆಗೆ ಇಡೀ ಪಾಕಿಸ್ತಾನವನ್ನು ದೂರುವುದು ಸರಿಯಲ್ಲ ಎಂದಿರುವ ಇವನ ರಕ್ಷಣೆಗೆ ನೀಡಿರುವ ನಮ್ಮ ಭದ್ರತಾ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು,ಕಾಂಗ್ರೇಸ್‍ಪಕ್ಷಇಂತಹ ಗಂಜಿ ಗಿರಾಕಿಗಳನ್ನು ಮೊದಲಿನಿಂದಲೂ ಪೋಷಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ, ಇಂದಿನ ಈ ಭಯೋತ್ಪಾದನೆಗೆ ಮುಖ್ಯ ಕಾರಣವೇ ಈ ಕಾಂಗ್ರೇಸ್ ಪಕ್ಷ ಎಂದು ಪ್ರಭಾಕರ ಕಟುವಾಗಿ ಟೀಕಿಸಿದ್ದಾರೆ,
ಮತ ಬ್ಯಾಂಕ್ ರಾಜಕಾರಣಕ್ಕಾಗಿ ದೇಶವನ್ನೇ ಪಣಕ್ಕಿಡುವ ಮಾನಸಿಕತೆ ಇರುವ ಕಾಂಗ್ರೇಸ್ ಪಕ್ಷದಿಂದಾಗಿ ನಮ್ಮಲ್ಲಿ ಭಯೋತ್ಪಾದನೆ ಜೀವಂತವಾಗಿದೆ, ಇದನ್ನು ಬುಡ ಸಮೇತ ಕಿತ್ತೆಸೆಯಲು ದೇಶವು ಸನ್ನದ್ದವಾಗಿದೆ, ಆದರೆ ಇದರಲ್ಲಿ ಹುಳಿ ಇಂಡುವ ಕೆಲಸ ಕಾಂಗ್ರೇಸ್ ಪಕ್ಷ ಮತ್ತು ಕೆಲವು ಗಂಜಿ ಗಿರಾಕಿಗಳು ಮಾಡಬಾರದು ಎಂದರು.
ನಿನ್ನೆ ನಡೆದ ಘಟನೆಗೆ ಇಡೀ ದೇಶವೇ ಶೋಕಾಚರಣೆಯಲ್ಲಿ ಇದೆ, ಕೊನೆ ಪಕ್ಷ ನಮ್ಮ ಯೋಧರ ಕಳೇಬರಹಗಳನ್ನು ಕೂಡಾ ನೋಡದ ಹಾಗೆ ಚಿದ್ರ ಚಿದ್ರವಾಗಿದೆ, ಈ ಸಂದರ್ಭದಲ್ಲಿ ದುಂಖ ತಪ್ತ ಕುಟುಂಬಗಳಿಗೆ ಈ ನೋವನ್ನು ಭರಿಸುವಂತ ಶಕ್ತಿಯನ್ನು ಭಗವಂತ ಕರುಣಿಸಲಿ ನಿಮ್ಮಗಳ ಜೊತೆ ನಾವಿದ್ದೇವೆ.
ರೈತರ ತಮ್ಮ ಆತ್ಮರಕ್ಷಣೆಗಾಗಿ ಕೋವಿ ನೀಡುವ ಮಾದರಿಯಲ್ಲಿ ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆಗಾಗಿ ಯುವಕ ಯುವತಿಯರ ಕೈಗೆ ಕೋವಿ ನೀಡುವಂತೆ ಪ್ರಧಾನಿಗಳಿಗೆ ಮನವಿ ಮಾಡುವುದಾಗಿಪ್ರಭಾಕರ ತಿಳಿಸಿದ್ದಾರೆ,