ಕೊರಟಗೆರೆ:
ವಯೋವೃದ್ದೆ ಮತ್ತು ಮಹಿಳೆಯ ಕೈಕಾಲುಗಳನ್ನು ಟೈನ್‍ದಾರದಿಂದ ಕಟ್ಟಿ ಬಾಯಿಯೊಳಗೆ ಬಟ್ಟೆ ತೂರಿಸಿ ಕಿರುಚಿದರೇ ಅತ್ಯಾಚಾರ ಮಾಡುವ ಬೆದರಿಕೆ ಹಾಕಿ ಮನೆಯಲ್ಲಿದ್ದ ಬೆಳ್ಳಿ ಮತ್ತು ಬಂಗಾರವನ್ನು ದೋಚಿ ಸಿನಿಮೀಯ ರೀತಿಯಲ್ಲಿ ಪರಾರಿ ಆಗಿರುವ ಘಟನೆ ನಡೆದಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮದ ಶಾರದಮ್ಮ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಅರಸಾಪುರ ಗ್ರಾಮದ ಸರಕಾರಿ ಶಾಲೆಯ ಹಿಂಭಾಗ ಇರುವ ಒಂಟಿ ಮನೆಯಲ್ಲಿ ಶಾರದಮ್ಮ ಮತ್ತು ತಾಯಿ ಲಕ್ಕಮ್ಮ ಇಬ್ಬರು ವಾಸವಿದ್ದಾರೆ. ಏಕಾಏಕಿ ಐದು ಜನರ ತಂಡ ಮನೆಯ ಒಳಗೆ ಪ್ರವೇಶ ಮಾಡಿ ಬೆದರಿಕೆ ಹಾಕಿ ಕಳ್ಳತನ ಮಾಡಿದ್ದಾರೆ.
ಟೀಶರ್ಟು ಧರಿಸಿದ್ದ ಐದು ಜನ ಕಳ್ಳರ ತಂಡ ಕೊಠಡಿಯಲ್ಲಿದ್ದ ವೃದ್ದೆಗೆ ಬೆದರಿಕೆ ಹಾಕಿ ಬಾಗಿಲು ಹಾಕಿದ್ದಾರೆ. ನಂತರ ಅಡುಗೆ ಮನೆಯಲ್ಲಿದ್ದ ಶಾರದಮ್ಮ ಎಂಬುವರ ಮುಖಕ್ಕೆ ಹೊಡೆದು ಕೆಳಗೆ ಬಿಳಿಸಿ ಕೈಕಾಲುಗಳಿಗೆ ಟೈನ್ ದಾರದಿಂದ ಕಟ್ಟಿ ಕಿರುಚಿದರೇ ಅತ್ಯಚಾರ ಮಾಡುವ ಬೆದರಿಕೆ ಹಾಕಿ ಮನೆಯಲ್ಲಿದ್ದ ಬೆಳ್ಳಿ ಮತ್ತು ಬಂಗಾರ ದೋಚಿದ್ದಾರೆ.
ಶಾರದಮ್ಮನ ಕಿವಿಯಲ್ಲಿದ್ದ 8ಗ್ರಾಂ ಓಲೆ ಮತ್ತು ಕೈಯಲ್ಲಿದ್ದ 5ಗ್ರಾಂ ಉಂಗುರದ ಜೊತೆ ಬೀರಿನಲ್ಲಿದ್ದ 25ಗ್ರಾಂ ಸರ ಸೇರಿದಂತೆ 30ಗ್ರಾಂ ಬೆಳ್ಳಿಯ ಸಾಮಾನುಗಳನ್ನು ದೋಚಿ ಪರಾರಿ ಆಗಿದ್ದಾರೆ.
ಸಾಯುವ ಪರಿಸ್ಥಿತಿಯಲ್ಲಿದ್ದ ಶಾರದಮ್ಮ ಬಾಯಿಗೆ ಹಾಕಿರುವ ಬಟ್ಟೆ ಮತ್ತು ಕೈಕಾಲು ಬೀಡಿಸುವಂತೆ ಕೇಳಿಕೊಂಡಾಗ ಕಳ್ಳರ ಕೈಗಳಿಗೆ ಕಟ್ಟಿದ್ದ ದಾರವನ್ನು ಬಿಚ್ಚಿ ಪರಾರಿ ಆಗಿರುವ ಘಟನೆ ನಡೆದಿದೆ.
ಸೋಮವಾರ ರಾತ್ರಿಯೇ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಬೇಟಿ ನೀಡಿದ್ದಾರೆ. ಮಂಗಳವಾರ ತುಮಕೂರು ಪೊಲೀಸ್ ವರೀಷ್ಠಾಧಿಕಾರಿ ಡಾ.ಕೋನವಂಸಿಕೃಷ್ಣ, ಡಿವೈಎಸ್ಪಿ ಧರಣೀಶ್, ಕೊರಟಗೆರೆ ಸಿಪಿಐ ನದಾಪ್, ಪಿಎಸೈ ಮಂಜುನಾಥ, ಕೋಳಾಲ ಪಿಎಸೈ ಸಂತೋಷ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಅಪರಾದಿಗಳ ಪತ್ತೇಯಾಗಿ ವಿಶೇಷ ತಂಡವನ್ನು ರಚಿಸಿ ತನಿಖೆ ಪ್ರಾರಂಭ ಮಾಡಿದ್ದಾರೆ.