ತುಮಕೂರು ಗ್ರಾಮಾಂತರ


ಹೆಬ್ಬೂರು ಹೋಬಳಿಯ ನಿಡುವಳಲು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಯಮುನ ಗೋವಿಂದರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಡುವಳಲು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 16 ಗ್ರಾಮ ಪಂಚಾಯಿತಿ ಸದಸ್ಯರುಗಳ ಸರ್ವಾನು ಮತದಿಂದ ನಿಡುವಳಲು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗೊಲ್ಲ ಸಮಾಜದ ಶ್ರೀ ಮತಿ ಯಮುನ ಗೋವಿಂದರಾಜ್ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈಗಾಗಲೇ ಅಧ್ಯಕ್ಷರಾಗಿ ರಾಜೀನಾಮೆ ನೀಡಿದ ಶ್ರೀ ಮತಿ ಚಂದ್ರಕಲಾ ಯೋಗೀಶ್ ಅವರಿಂದ ತೆರವಾದ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಯಮುನ ಅವರು ಮಾತನಾಡಿ ತುಮಕೂರು ಗ್ರಾಮಾಂತರ ದಲ್ಲಿ ಸರ್ವಜನಾಂಗಕ್ಕೂ ಯಾರಾದರೂ ನ್ಯಾಯ ದೊರಕಿಸಿಕೊಡುವವರಿದ್ದರೆ ಅದು ಮಾನ್ಯ ಸುರೇಶ್ ಗೌಡರವರು ಮಾತ್ರ ನಮ್ಮಂತಹ ಚಿಕ್ಕ ಚಿಕ್ಕ ಸಮುದಾಯವನ್ನು ಇಲ್ಲಿಯವರೆಗೆ ಯಾರು ಸಹ ಗುರುತಿಸಿ ಒಂದು ಸ್ಥಾನ ಕೊಟ್ಟಿರಲಿಲ್ಲ,
ನಮ್ಮ ಸಮಾಜವನ್ನು ಗುರುತಿಸಿ ಸಾಮಾಜಿಕ ನ್ಯಾಯದ ಮೂಲಕ ರಾಜಕೀಯ ಪ್ರಾತಿನಿಧ್ಯ ನೀಡಿದ್ದಾರೆ ಆದ್ದರಿಂದ ನಮ್ಮ ಸಮಾಜ ಅವರಿಗೆ ಚಿರ ಋಣಿ, ನಾನು ಅಧ್ಯಕ್ಷರಾಗಲು ಕಾರಣರಾದ ಗ್ರಾಮಾಂತರ ಮಾಜಿ ಶಾಸಕ ಬಿ ಸುರೇಶ್ ಗೌಡರವರಿಗೆ ಚಿರ ಋಣಿ.ಅಧ್ಯಕ್ಷನಾಗಲು ಸಹಕರಿಸಿದ ಜಿಲ್ಲಾ ಪಂಚಾಯಿತಿ ಮುಖಂಡರಾದ ಸಿದ್ದೇಗೌಡ,ಮುಖಂಡರಾದ ತಮ್ಮಯಣ್ಣ ,ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ಅಭಿವೃದ್ಧಿಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಿದ್ದೇಗೌಡ್ರು ಮಾತನಾಡಿ ಹಿಂದುಳಿದ ಚಿಕ್ಕ ಚಿಕ್ಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿ ರಾಜಕೀಯದ ಮುಖೇನ ಗೊಲ್ಲ ಸಮುದಾಯದ ಮಹಿಳೆಯನ್ನು ಈ ಪಂಚಾಯಿತಿ ಗೆ ಮೊದಲಬಾರಿಗೆ ಅಧ್ಯಕ್ಷರನ್ನಾಗಿ ಮಾಡಿದ ಕೀರ್ತಿ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ಅವರಿಗೆ ಸಲ್ಲಬೇಕು,ಈ ಸಮಾಜದೊಂದಿಗೆ ಸದಾ ನಾವು ಇರಲಿದ್ದೇವೆ ಎಂದು ತಿಳಿಸಿದರು. ಹಿಂದುಳಿದ ಮೋರ್ಚ ಅಧ್ಯಕ್ಷರಾದ ಶಿವಕುಮಾರ್ ತಮ್ಮಯ್ಯಣ್ಣ,ಗ್ರಾಮ ಪಂಚಾಯಿತಿ ಸದಸ್ಯರಾದ ಸೌಬಾಗ್ಯಮ್ಮ,ಮಾಜಿ ಅಧ್ಯಕ್ಷರಾದ ಚಂದ್ರಕಲಾಯೋಗೀಶ್,ಹನುಮಂತರಾಜು,ಶ್ರೀನಿವಾಸ್, ಶಿವಕುಮಾರ್, ಶಿವಮ್ಮ,ಬೂತ್ ಅಧ್ಯಕ್ಷ ವೆಂಕಟೇಶ್,ಮೂಡಲಗಿರಯ್ಯ,ಯೋಗಿಶ್,ಡೈರಿ ನಾಗಣ್ಣ,ಸಿದ್ದಗಂಗಯ್ಯ, ಬೋಜಣ್ಣ,ರವಿ,ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಇನ್ನಿತರ ಕಾರ್ಯಕರ್ತರು,ಹಿರಿಯ ಮುಖಂಡರು ಉಪಸ್ಥಿತರಿದ್ದರು.

(Visited 1 times, 1 visits today)