ತುಮಕೂರು
ಮಾಜಿ ಶಾಸಕರಾದ ಬಿ ಸುರೇಶ್ ಗೌಡ ಅವರ 57ನೇ ಜನ್ಮದಿನದ ಆಚರಣೆಯನ್ನು ಬೆಳ್ಳಾವಿ ಹೋಬಳಿ ಬುಗುಡನಹಳ್ಳಿ ಗ್ರಾಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕಾರದ ವೀರ ಬಸವ ಮಹಾ ಸ್ವಾಮೀಜಿ ಗಳ ಆರ್ಶಿವಾದಗಳೊಂದಿಗೆ ಎಲ್ಲಾ ಗ್ರಾಮಗಳ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಬಹಳ ಅದ್ಧೂರಿಯಾಗಿ ಗ್ರಾಮದ ಪ್ರಮುಖ ರಾಜಭೀದಿಗಳಲ್ಲಿ ವಾದ್ಯಗೋಷ್ಠಿಗಳೊಂದಿಗೆ ಜಾನಪದ ಕಲಾ ತಂಡಗಳನ್ನ ಒಳಗೊಂಡಂತೆ ಹೂ ಮಳೆ ಸುರಿಸುತ್ತಾ ಕಾರ್ಯಕ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಸುರೇಶ್ ಗೌಡರ ಬಗ್ಗೆ ಶ್ರೀ ಮಠದ ಕಾರದ ವೀರ ಬಸವ ಮಹಾಸ್ವಾಮಿಜಿಗಳು ಬುಗುಡನಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ದೊಂದಿಗೆ ಜನಪ್ರಿಯತೆಯನ್ನು ಪಡೆದಿರುವ ಜನನಾಯಕ ಸುರೇಶ್ ಗೌಡರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವ ಅಭಿಮಾನಿಗಳಿಗೆ ಹಿತವಚನ ಹೇಳುತ್ತಾ ನಿಜವಾದ ಜನನಾಯಕ ಅಂದರೆ ಯಾರು? ಹಣ ಖರ್ಚು ಮಾಡಿ ನಾಯಕ ಎಂದು ಕರೆಸಿ ಕೊಳ್ಳುವವನು ನಾಯಕನಲ್ಲ. ದುಡ್ಡು ಖರ್ಚು ಮಾಡದೆ ಪಟಾಕಿ ಹೊಡೆಸಿಕೊಳ್ಳುವ, ಹಾರ ಹಾಕಿಸಿಕೊಳ್ಳುವ, ಕೇಕ್ ಕಟ್ ಮಾಡಿಸಿ ಕೊಳ್ಳುವ, ಪ್ರತಿ ದಿನ ಸಾರ್ವಜನಿಕರ ಜೀವನದಲ್ಲಿ ಕಾಯಕ ಮಾಡಿ ಜನಪ್ರಿಯತೆಯನ್ನ ಗಳಿಸುತ್ತಿರುವ ನಿಜವಾದ ಜನನಾಯಕ ಸುರೇಶ್ ಗೌಡ್ರು , ಅವರನ್ನು ಉಳಿಸಿ ಬೆಳೆಸುವ ಕರ್ತವ್ಯ ನಿಮ್ಮ ನಮ್ಮೆಲ್ಲರ ಮೇಲಿದೆ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು.
ನಂತರ ಮಾತನಾಡಿದ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಚಿದಾನಂದ್ ನಮ್ಮ ನಾಯಕರದ ಸುರೇಶ್ ಗೌಡರವರ ಪ್ರತಿದಿನದ ಕಾರ್ಯವೈಕರಿ ನಾವು ನೋಡುವುದಾದರೆ ಇವರು ನಿದ್ದೆ ಮಾಡುತ್ತಾರೋ ಅಥವಾ ಇಲ್ಲವೋ ಎನ್ನುವಂತಹ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಚುನಾವಣೆಯಲ್ಲಿ ಸೋತ ದಿನದಿಂದ ಇಂದಿನವರೆಗೂ ಸಹ ಪ್ರತಿ ದಿನವೂ ದೀನದಲಿತರ ಬಡವರ ರೈತರ ಕೂಲಿ ಕಾರ್ಮಿಕರ ಕೆಲಸಗಳನ್ನು ಬಹಳ ಶ್ರದ್ಧೆ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದು ಇವರ ಕಾರ್ಯವೈಖರಿಯನ್ನು ನೋಡಿ ನಾನು ಸಹ ಅವರ ಅಭಿಮಾನಿಯಾದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶಂಕರ್,ಜಿಲ್ಲಾ ಕಾರ್ಯದರ್ಶಿ ಸಿದ್ದೇಗೌಡ,ಓಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಚಿದಾನಂದ್ ರವರು,ಎಸ್ಸಿ ಮೋರ್ಚ ಅಧ್ಯಕ್ಷ ರಾದ ನರಸಿಂಹ ಮೂರ್ತಿ, ಎಸ್ಟಿ ಮೋರ್ಚ ಅಧ್ಯಕ್ಷರಾದ ವಿಜಿಕುಮಾರ್, ಪ್ರ.ಕಾರ್ಯದರ್ಶಿ ರಘುನಾಥಪ್ಪ ,ಶಿವಕುಮಾರ್ , ಮಾಜಿ ಅಧ್ಯಕ್ಷ ಕೆಂಪಣ್ಣ ಗ್ರಾಮಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರು,ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗ್ರಾಮ ಪಂ ಮಾಜಿ ಸದಸ್ಯರು,ರೈತಮೊರ್ಚ,ಯುವಮೋರ್ಚ,ಬೂತ್,ಹಿಂದುಳಿದಮೋರ್ಚ,ಡೈರಿ,ವಿಎಸ್ಎಸ್ಎನ್ ಮತ್ತು ಎಲ್ಲಾ ಮಂಡಲಗಳ ಅಧ್ಯಕ್ಷರು, ಸದಸ್ಯರುಗಳು ಪದಾಧಿಕಾರಿಗಳು ಮತ್ತು ಬುಗಡನಹಳ್ಳಿ ಅಕ್ಕಪಕ್ಕದ ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು.