ತುಮಕೂರು


2023-34 ರಾಜ್ಯ ಬಜೆಟ್ಟ್ ನಲ್ಲಿ ಅಲ್ಪ ಸಂಖ್ಯಾತರಿಗೆ ಸಾಮಾಜಿಕ ನ್ಯಾಯ, ಮತ್ತು ಸಂವಿಧಾನದ ಅಶಯಗಳಂತೆ ತಾರತಮ್ಯ ಮಾಡದೆ ಅನುಧಾನ ನೀಡಲು ಅಗ್ರಹಿಸಿ ಭಾರತ ಕಮ್ಯೂನಿಷ್ಟ ಪಕ್ಷ(ಮಾಕ್ರ್ಸವಾದಿ) ಬುಧವಾರು ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮತಾನಾಡಿದ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ದೇಶದ ಸಂವಿಧಾನವು ನಾಗರಿಕರಿಗೆ ಯಾವುದೆ ತಾರತಮ್ಯವಿಲ್ಲದೆ ಸಮಾನವಾಗಿ ನಡೆಸಿಕೊಳ್ಳುವ ಕರ್ತವ್ಯವನ್ನು ಸರ್ಕಾರಕ್ಕೆ ನೀಡಿದೆ . ಸರ್ವರಿಗೂ ಸಮಭಾವದಿಂದ ಅವರ ಅವರ ಪಾಲನ್ನು ನೀಡಬೇಕಾಗಿದೆ.. ಅದರೆ ರಾಜ್ಯ ಸರ್ಕಾರವು ಅಲ್ವ ಸಂಖ್ಯಾತರ ಜೋತೆಯಲ್ಲಿ ತಾರತಮ್ಯದಿಂದ ನಡೆದು ಕೊಳ್ಳುತ್ತಿರುವುದನ್ನು ಇತ್ತಿಚೆಗೆ ನಾಗರಿಕ ಸಮಾಜವು ಚಿಂತಿಸುವಂತೆ ಮಾಡಿದೆ.
ಈ ಹಿಂದೆ ಭಾರತ ಸರ್ಕಾರವು ಅಲ್ವಸಂಖ್ಯಾತರ ಸ್ಥಿತಿ-ಗತಿಗಳನ್ನು ಅಧ್ಯಾಯನ ಮಾಡಲು ರೂಪಿಸಿದ ಡಾ; ರಾಜೆಂದ್ರ ಸಿಂಗ್ ಸಾಚರ್, ಹಾಗು ನ್ಯಾ; ರಂಗನಾಥ ಮಿಶ್ರ ಸಮಿತಿಗಳ ಶಿಪಾರಸ್ಸುಗಳನ್ನು ನೋಡಿದರೆ ಭಾರತ / ಕರ್ನಾಟಕದ ಅಲ್ವ ಸಂಖ್ಯಾತ ಸಮುದಾಯಗಳ ಸ್ಥಿತಿ- ಗತಿಗಳ ಚಿತ್ರಣವು ಸ್ವಷ್ಟವಾಗುತ್ತದೆ.
ಮಾನವ ಅಭಿವೃದ್ದಿ ಸೂಚ್ಯಂಕದ ಮಾನದಂಡಗಳಲ್ಲಿ ಸಹ ಹಿಂದೆ ಬಿದ್ದಿರುವುದನ್ನು ಗೋಚರಿಸುತ್ತದೆ. ದೇಶದ ಒಟ್ಟಾರೆ ಅಭಿವೃದ್ದಿಯು ಈ ಸಮುದಾಯದ ಹೊರಗಿಟ್ಟು ಸಾಧಿಸಲಾಗದು , ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕರ್ನಾಟಕದ 2023-24 ನೇ ಸಾಲಿನ ಆಯ್ಯವಯ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಮಗ್ರ ಅಭಿವೃದ್ದಿಗೆ ನ್ಯಾಯೋಜಿತವಾದ ಅನುಧಾನ ಬಿಡುಗಡೆಗೆ ಕ್ರಮ ವಹಿಸುವಂತೆ ತಮ್ಮಲ್ಲಿ ಈ ಮೂಲಕ ಒತ್ತಾಯಿಸುತ್ತೆವೆ.
ರಾಜ್ಯದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ- ದಬ್ಬಾಳಿಕೆಗಳಲ್ಲಿ ಸರ್ಕಾರ ಸಂವಿಧಾನದ ರಕ್ಷಣೆ ಮತ್ತು ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ನಿಲ್ಲುವಂತೆ ಜಿಲ್ಲಾ ಸಮಿತಿ ಸದಸ್ಯ ಸಿ.ಅಜ್ಜಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಇಂತಿಯಾಜ್ ಮತನಾಡಿ ಅಲ್ವ ಸಂಖ್ಯಾತ ಸಮುದಾಯಗಳು ಅದರಲ್ಲೂ ಮುಸ್ಲಿಂ ಅಲ್ಪ ಸಂಖ್ಯಾತರ ಶೈಕ್ಷಣಿಕ ಅಭಿವೃದ್ದಿಗೆ ವಿಶೇಷ ಗಮನ ನೀಡುವುದು. ಸರ್ಕಾರ ಈ ಸಮುದಾಯದ ವಿದ್ಯಾರ್ಥಿಗಳ ಪ್ರೋತ್ಸಹಿಸಲು ವಿದ್ಯಾರ್ಥಿ ವೇತನ, ಜಿಲ್ಲಾ/ ತಾಲ್ಲುಕು ಕೆಂದ್ರಗಳಲ್ಲಿ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಗೆ ಹಾಸ್ಟಲ್ ಸೌಲಭ್ಯವನ್ನು ನೀಡುವುದು, ಉನ್ನತ ಶಿಕ್ಷಣದಲ್ಲಿ ಈ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು. ಕಡಿತ ಮಾಡಿರುವ ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಮತ್ತು ಅವಕಾಶಗಳನ್ನು ಮರು ಜಾರಿಗೊಳಿಸುಬೇಕೆಂದರು.
ನಗರ ಸಮಿತಿ ಸದಸ್ಯ ಇಬ್ರಾಹಿಂ ಖಲೀಲ್ ಮತನಾಡಿದರು.
ವಸೀಂಅಕ್ರಮ ಮತನಾಡಿ ಅವರ ಮಾತೃಬಾಷೆಯಲ್ಲಿ ಶಿಕ್ಷಣಕ್ಕೆ ಅವಕಾಶ ಗಳನ್ನು ನೀಡುವುದಲ್ಲದೆ, ಈ ಪ್ರದೇಶಗಳಲ್ಲಿ ಶಾಲಾ- ಕಾಲೇಜು ಮತ್ತು ಶಿಕ್ಷಕರ ನೇಮಕ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸುವುದು ಮತ್ತು ಅಲ್ಪ ಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಮೂಲ ಭೂತ ಸೌರ್ಕರ್ಯಗಳು, ಅಸ್ವತ್ರೆ, ಶಾಲೆ, ರಸ್ತೆ, ಕುಡಿಯುವ ನೀರು, ಒದಗಿಸಲು , ವಸತಿ ಹೀನರಿಗೆ ವಸತಿ ಕಲ್ಪಿಸಲು ಸರ್ಕಾರ ಅಧ್ಯತೆ ನೀಡಬೇಕೆಂದರು.
ಮನವಿಯನ್ನು ಅಪಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿಪಕ್ಷದ ರಾಜ್ಯಸಮಿತಿಸದಸ್ಯಸೈಯದ್‍ಮುಜೀಬ್,ಲಕ್ಷ್ಮಿಕಾಂತ್,ಆರ್.ಎಸ್.ಚನ್ನಬಸವಣ್ಣ, ದೂಡ್ಡನಂಜಪ್ಪ, ಶಂಕರಪ್ಪ,ಗಂಗಾಧರ್, ಬಾಬು ಖಾಸೀಂ, ಶಹತಾಜ್, ಬಸವರಾಜು, ಸುಧಾಕರ್ ಮುಂತಾದವರು ಭಾಗವಹಿಸಿದ್ದರು.

(Visited 3 times, 1 visits today)