ಕುಣಿಗಲ್

 
ಆಸ್ತಿ ಆಸೆಗಾಗಿ ಹೆಂಡತಿಯೇ ಸುಪಾರಿ ನೀಡಿ ಗಂಡನನ್ನು ಕೊಲೆ ಮಾಡಿಸಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಸೀನಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪತ್ನಿ ಸೇರಿ ಎಂಟು ಮಂದಿ ಆರೋಪಿಗಳನ್ನು ಕುಣಿಗಲ್ ಪೆÇಲೀಸರು ಬಂಧಿಸಿದ್ದಾರೆ.
ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ (25) ಕೊಲೆಯಾಗಿದ್ದು, ಆರೋಪಿಗಳಾದ ಈತನ ಪತ್ನಿ ಹರ್ಷಿತಾ (20), ಆಕೆಯ ಅಣ್ಣ (ದೊಡ್ಡಮ್ಮನ ಮಗ) ಬೆಂಗಳೂರಿನ ಅಂದರಹಳ್ಳಿಯ ರಘು, ರವಿಕಿರಣ್ ಹಾಗೂ ಕುಣಿಗಲ್ ತಾಲೂಕಿನ ಕಿತ್ನಾಮಂಗಲ ಗ್ರಾಮದ ಅರುಣ್, ಕೇಶವ, ನಟರಾಜು, ಸಂತೇಮಾವತ್ತೂರಿನ ಶ್ರೀಧರ್, ಮಾಗಡಿಯ ಉಮೇಶ್ ಸೇರಿ ಒಟ್ಟು ಎಂಟು ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ.
ಘಟನೆ ವಿವರ; ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥನ್ನು ಅಡುಗೆ ಗುತ್ತಿಗೆ ಕೆಲಸ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದನ್ನು, ಕಳೆದ 11 ತಿಂಗಳ ಹಿಂದೆ ಸೋಲೂರು ಹೋಬಳಿ 9 ಗುಂಟೆ ಗ್ರಾಮದ ಹರ್ಷಿತಾಳೊಂದಿಗೆ ಈತನ ವಿವಾಹವಾಗಿತ್ತು. ವಿವಾಹದ ಬಳಿಕ ಪತ್ನಿ ಹರ್ಷಿತಾಳನ್ನು ಮಂಜುನಾಥನ್ನು ತನ್ನ ಗ್ರಾಮವಾದ ಸೀನಪ್ಪನಹಳ್ಳಿಯ ತನ್ನ ಮನೆಯಲ್ಲಿ ಇರಿಸಿ ಬೆಂಗಳೂರಿನಿಂದ ಆಗಾಗ ಬಂದು ಹೋಗುತ್ತಿದ್ದನ್ನು.
ಅಣ್ಣನೊಂದಿಗೆ ಪ್ರೀತಿ, ಪ್ರಣಯ; ಕೊಲೆಯಾದ ಮಂಜುನಾಥ್‍ನ ಅಕ್ಕ ವಿದ್ಯಾಶ್ರೀ ಅವರ ಬೆಂಗಳೂರಿನ ಮನೆಯಲ್ಲಿ ಆರೋಪಿ ಹರ್ಷಿತಾಳ ದೊಡ್ಡಮ್ಮ ಬಾಡಿಗೆಗಿದ್ದರು. ಅಲ್ಲಿಗೆ ಹರ್ಷಿತಾ ಬಂದು ಹೋಗುತ್ತಿದ್ದಳು. ಈ ವೇಳೆ ಹರ್ಷಿತಾ ಹಾಗೂ ಆಕೆಯ ದೊಡ್ಡಮನ ಮಗ ರಘು ನಡುವೆ ಪ್ರೀತಿ ಏರ್ಪಟ್ಟಿತ್ತು. ಆದರೆ ಇಬ್ಬರದ್ದು ಅಣ್ಣ- ತಂಗಿ ಸಂಬಂಧವಾದ್ದರಿಂದ ಈ ಇಬ್ಬರು ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಇವರ ಪ್ರೀತಿ ವಿಚಾರ ತಿಳಿಯದ ಮಂಜುನಾಥನ ಅಕ್ಕ ವಿದ್ಯಾಶ್ರೀ ಹಾಗೂ ಹರ್ಷಿತಾಳ ದೊಡ್ಡಮ್ಮ ಸೇರಿ ಮಂಜುನಾಥ ಹಾಗೂ ಹರ್ಷಿತಾ ಇಬ್ಬರಿಗೂ ಮನೆಯವರ ಒಪ್ಪಿಗೆ ಪಡೆದು ಮದುವೆ ಮಾಡಿಸಿದ್ದರು. ಆದರೆ ವಿವಾಹದ ಬಳಿಕವೂ ಹರ್ಷಿತಾ ಮತ್ತು ಅಣ್ಣ ರಘು ನಡುವೆ ಪ್ರೀತಿ, ಪ್ರಣಯ ಮುಂದುವರೆದಿತ್ತು.
ಪ್ರಸ್ತಕ್ಕೆ ಒಲ್ಲೆ ಎಂದ ಪತ್ನಿ; ಮದುವೆಯಾದ ಬಳಿಕ ಮಂಜುನಾಥನಿಗೆ ಅರಣಿ ಅಪರೇಷನ್ ಮಾಡಲಾಗಿತ್ತು, ಈ ನಿಟ್ಟಿನಲ್ಲಿ ಈಗ ಪ್ರಸ್ತ ಬೇಡ ಎಂದು ಪತ್ನಿ ಹರ್ಷಿತಾ ಗಂಡನಿಂದ ದೂರ ಇದ್ದಳು. 11 ತಿಂಗಳಾದರೂ ದಂಪತಿಗಳು ಸೇರಿರಲಿಲ್ಲ. ಈ ನಡುವೆ ಆರೋಪಿ ರಘು ಆಗಾಗ ಹರ್ಷಿತಾಳ ಮನೆಗೆ ಬಂದು ಹೋಗುತ್ತಿದ್ದನ್ನು, ಈ ಬಗ್ಗೆ ಮಂಜುನಾಥನಿಗೆ ಅನುಮಾನವಿತ್ತು ಎನ್ನಲಾಗಿದೆ.
ಹುಟ್ಟು ಹಬ್ಬದಂದೇ ಕೊಲೆ; ತಮ್ಮಿಬ್ಬರ ಲವ್ವಡಗೆ ಮಂಜುನಾಥ ಅಡ್ಡಿಯಾಗುತ್ತಾನೆ ಎಂದು ಭಾವಿಸಿದ ಹರ್ಷಿತಾ ಹಾಗೂ ರಘು, ಮಂಜುನಾಥನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಇದರ ಬೆನ್ನಲ್ಲೇ ಫೆ.3 ರಂದು ಮಂಜುನಾಥನು ಬೆಂಗಳೂರಿನಿಂದ ಬಂದು ತನ್ನ ಹುಟ್ಟು ಹಬ್ಬವನ್ನು ಕುಣಿಗಲ್‍ನಲ್ಲಿ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದನು. ಬಳಿಕ ಪತ್ನಿ ಇದ್ದ ತನ್ನ ಊರು ಸೀನಪ್ಪನಹಳ್ಳಿಗೆ ತೆರಳಿದ್ದನು. ಇತ್ತ ಪತಿ ಮಂಜುನಾಥನ ಕೊಲೆಗೆ ಮೊದಲೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಪತ್ನಿ ಹರ್ಷಿತಾ, ಅಂದು ರಾತ್ರಿ 12 ಗಂಟೆ ಸಮಯದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಮನೆಗೆ ಕರೆಸಿಕೊಂಡು ಮಲಗಿದ್ದ ಪತಿ ಮಂಜುನಾಥನ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ಕೊಲೆ ಮಾಡಿಸಿದ್ದಾಳೆ. ಬಳಿಕ ಅನುಮಾನ ಬರಬಾರದೆಂದು ಬೈಕ್ ಅನ್ನು ಜಜ್ಜಿ ಕಿತ್ನಾಮಂಗಲ ಕೆರೆಗೆ ಶವ ಹಾಗೂ ಬೈಕ್ ಅನ್ನು ಹಾಕಿ ಯಾರಿಗೂ ಗೊತ್ತಾಗದ ಹಾಗೆ ಸುಮ್ಮನಾಗಿದ್ದಾರೆ.
ಪ್ರಕರಣ ಬೇದಿಸಿದ ಪೆÇಲೀಸರು; ಇದೆಲ್ಲದರ ನಡುವೆ ತನ್ನ ಪತಿ ರಾತ್ರಿ ಮನೆಯಿಂದ ಎದ್ದು ಹೋದವರು ಮನೆಗೆ ವಾಪಸ್ಸು ಬಂದಿಲ್ಲ ಎಂದು ಮಂಜುನಾಥನ ಪತ್ನಿ ಹರ್ಷಿತಾ ಕುಣಿಗಲ್ ಪೆÇಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಎಸ್ಪಿ ರಾಹುಲ್‍ಕುಮಾರ್ ಅವರ ಮಾರ್ಗದರ್ಶನಲ್ಲಿ ಡಿವೈಎಸ್‍ಪಿ ಲಕ್ಷ್ಮೀಕಾಂತ್, ಸಿಪಿಐಗಳಾದ ಗುರುಪ್ರಸಾದ್, ಅರುಣ್‍ಸಾಲಂಕಿ ಅವರ ನೇತೃತ್ವದ ಪೆÇಲೀಸ್ ತಂಡವು ಮಂಜುನಾಥನ ಸಾವಿನ ತನಿಖೆ ಕೈಗೊಂಡಿದ್ದರು. ತನಿಖೆಯಲ್ಲಿ ಮಂಜುನಾಥನ ಪತ್ನಿ ಹರ್ಷಿತಾ ಹಾಗೂ ರಘು ನಡುವೆ ಇದ್ದ ಆಕ್ರಮ ಸಂಬಂಧ ಬಗ್ಗೆ ಪೆÇಲೀಸರಿಗೆ ಸುಳಿವು ಸಿಕ್ಕಿದ್ದು, ವಿಚಾರಣೆ ನಡೆಸಿದಾಗ ಪೂರ್ಣ ವೃತ್ತಾಂತ ಬಯಲಿಗೆ ಬಂದಿದೆ. ಒಟ್ಟಾರೆಯಾಗಿ ಪವಿತ್ರವಾದ ಅಣ್ಣ-ತಂಗಿ ಸಂಬಂಧಕ್ಕೆ ಮಸಿ ಬಳಿದ ಹರ್ಷಿತಾ ಮತ್ತು ರಘು ಅನೈತಿಕ ಸಂಬಂಧಕ್ಕೆ ದಾಸರಾಗಿ ಏನೂ ತಪ್ಪು ಮಾಡದ ಮಂಜುನಾಥನನ್ನು ಕೊಲೆ ಮಾಡಿಸಿದ್ದು ಮಾತ್ರ ದುರ್ದೈವ. ಮದುವೆಯಾಗಿ ಸುಖ ಸಂಸಾರದ ಕನಸು ಕಂಡಿದ್ದ ಮಂಜುನಾಥನು ಪತ್ನಿಯ ತೇವಲಿಗೆ ಬಲಿಯಾಗಿದ್ದು ಮಾತ್ರ ದುರಂತ.

(Visited 2 times, 1 visits today)