ತುಮಕೂರು

ರಾಗಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವ ಜಿಲ್ಲೆಯ ಎಲ್ಲಾ ರೈತರು ನಿಗಧಿತ ವೇಳಾ ಪಟ್ಟಿಯನ್ವಯ ತಮಗೆ ಟೋಕನ್‍ನಲ್ಲಿ ನೀಡಿರುವ ದಿನಾಂಕಗಳಂದೇ ರಾಗಿಯನ್ನು ಖರೀದಿ ಕೇಂದ್ರಗಳಿಗೆ ತರುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.

ರಾಗಿ ಕೇಂದ್ರದಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ರೈತರಿಂದ ರಾಗಿಯನ್ನು ಖರೀದಿಸಲಿದ್ದು, ರೈತರು ಅನವಶ್ಯಕ ಗೊಂದಲಗಳಿಗೆ ಒಳಗಾಗದೆ ಟೋಕನ್‍ನಲ್ಲಿ ನೀಡಿರುವ ದಿನಾಂಕದಂದೇ ರಾಗಿಯನ್ನು ಖರೀದಿ ಕೇಂದ್ರಗಳಿಗೆ ತರುವಂತೆ ಅವರು ಮನವಿ ಮಾಡಿದ್ದಾರೆ.
2022-23ನೇ ಸಾಲಿನ ಕನಿಷ್ಟ ಬೆಂಬಲ ಯೋಜನೆಯಡಿ ರೈತರಿಂದ ರಾಗಿ ಖರೀದಿಸುವ ಸಂಬಂಧ ಜಿಲ್ಲೆಯಲ್ಲಿ 11 ರಾಗಿ ಕೇಂದ್ರಗಳನ್ನು ತೆರಯಲಾಗಿರುತ್ತದೆ. ಈ ಯೋಜನೆಯಡಿ 63,735 ರೈತರಿಂದ ಸುಮಾರು 9ಲಕ್ಷ ಕ್ವಿಂಟಾಲ್ ರಾಗಿ ಮಾರಾಟ ಮಾಡಲು ಇಚ್ಚಿಸಿ ರಾಗಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿರುತ್ತಾರೆ. ಖರೀದಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, ನೋಂದಣಿ ಮಾಡಿರುವ ರೈತರಿಂದ ರಾಗಿ ಖರೀದಿಸುವ ಬಗ್ಗೆ ನಿಗಧಿತ ದಿನಾಂಕದಲ್ಲಿ ರಾಗಿ ದಾಸ್ತಾನನ್ನು ಖರೀದಿ ಕೇಂದ್ರಗಳಿಗೆ ತರುವಂತೆ ತಿಳಿಸಿ ಟೋಕನ್ ನೀಡಲಾಗಿರುತ್ತದೆ.

(Visited 7 times, 1 visits today)