ತುಮಕೂರು

ಮಾಜಿ ಬಿಜೆಪಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಇದರೊಂದಿಗೆ ಚಿಕ್ಕನಾಯಕನ ಹಳ್ಳಿ ವಿಧಾನ ಸಭಾ ಕ್ಷೇತ್ರದ ಚಿತ್ರಣ ಹೊಸದೊಂದು ತಿರುವು ಪಡೆದಿದ್ದು ಇಂದು ಸುರ್ಜೆವಾಲಾ ಸಮ್ಮಖದಲ್ಲಿ ಸೇರ್ಪಡೆಗೊಂಡರು ಈ ಕ್ಷಣವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

 ಕಳೆದ ಬಾರಿ ಜೆ.ಸಿ. ಮಾಧು ಸ್ವಾಮಿ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಕಿರಣ್ ಕುಮಾರ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದಾಗಿ ಆಸ್ವಾಸನೆ ನೀಡಿದ್ದರು. ಅದರಂತೆ 2023 ರ ವಿಧಾನ ಸಭಾ ಚುನಾವಣೆ ಬರುವುದನ್ನೆ ಅವರು ಎದುರು ನೋಡುತ್ತಿದ್ದರು. ಆದರೆ ಹಾಲಿ ಸಚಿವರು ಆಗಿರುವ ಜೆ.ಸಿ. ಮಾಧುಸ್ವಾಮಿ ಅವರು ಮತ್ತೆ ಬಿಜೆಪಿ ಟಿಕೆಟ್ ಪಡೆಯುವ ಸುಳಿವು ಹಲವು ತಿಂಗಳಿನಿಂದ ಕಂಡು ಬಂದಿತ್ತು.

 ಇದರಿಂದ ತೀವ್ರ ಅಸಮಧಾನಗೊಂಡಿದ್ದ ಕೆ.ಎಸ್.ಕಿರಣ್ ಕುಮಾರ್ ಹಾಗೂ ಅವರ ಬೆಂಬಲಿಗರು ಮುಂದಿನ ಯೋಜನೆಗಳ ಬಗ್ಗೆ ತಯಾರಿ ನಡೆಸಿದ್ದರು. ಒಂದು ವೇಳೆ ಬಿಜೆಪಿ ಟಿಕೆಟ್ ತಪ್ಪಿದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂಬ ಸಲಹೆಗಳು ಬಂದಿದ್ದವು. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡದಿಂದ ಮತ್ತೆ ಸ್ಪರ್ಧೆಗೆ ಇಳಿಯಲು ಸಜ್ಜಾದ ಕಿರಣ್ ಕುಮಾರ್ ಅವರಿಗೆ ಈ ಬಾರಿಯೂ ಬಿಜೆಪಿ ಯಿಂದ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆಯಿತ್ತು  ಎನ್ನಲಾಗಿತ್ತು. ಜೆ.ಸಿ ಎಂ ಅವರ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಾ ಬಂದವು.

ತಾಲ್ಲೂಕಿನಲ್ಲಿ ಕಾಂಗ್ರೆಸ್ ದಿನೆ ದಿನೆ ಕ್ಷೀಣಿಸುತ್ತಿದ್ದು ಪ್ರಬಲ ಆಕಾಂಕ್ಷಿಗಳು ಇಲ್ಲದಿರುವುದು ಹಾಗೂ ಇಲ್ಲಿ ಜೆಸಿ ಎಂ ಮತ್ತು ಸುರೇಶ್ ಬಾಬು ನಡುವೆಯೇ ಹಣಾ ಹಣಿ ನಡೆಯುತ್ತಿದ್ದು ಇದರ ಹೊರತಾದ ಯೋಚನೆಗಳ ಬಗ್ಗೆ ಕೆಲವರು ಚಿಂತಿಸುತ್ತಿದ್ದರು. ಇದೀಗ ಕೆ.ಎಸ್. ಕಿರಣ್ ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಆನೆಬಲ ಬಂದಿದೆ.

  ಕಿರಣ್ ಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆಯೊಂದಿಗೆ ಚಿಕ್ಕನಾಯಕನಹಳ್ಳಿಯಲ್ಲಿ ಒಂದು ಹೊಸ ಸಂಚಲನ ಸೃಷ್ಟಿಯಾಗಿದ್ದು ಮೂವರು ಘಟಾನುಘಟಿಗಳ ನಡುವೆ ತ್ರಿಕೋನ ಅಸ್ಪರ್ಧೆ ಎರ್ಫಡುವ ಸಾಧ್ಯತೆಗಳು ನಿಚ್ಚಳವಾಗಿವೆ. ಕರಣ್ ಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆಯನ್ನು ಚಿ,ನಾ, ಹಳ್ಳಿ ತಾಲ್ಲೂಕಿನ ಹಲವು ಮುಖಂಡರು ಸ್ಗವಾಗತಿಸಿದ್ದಾರೆ.

(Visited 4 times, 1 visits today)