ಹರೀಶ್ ಬಾಬು ಬಿ. ಹೆಚ್ 

ಕೊರಟಗೆರೆ

ಸಾರ್ವಜನಿಕ ದೂರಿನ ಮೇರೆಗೆ ಕಷ್ಟಕರ ಜೀವನ ಸಾಗಿಸುತ್ತಿದ್ದ ವೃದ್ಧೆಯ ಮನೆಗೆ ಭೇಟಿನೀಡಿ ತ್ವರಿತವಾಗಿ ಮೂಲಭೂತ ಸೌಕರ್ಯ ಹಾಗೂ ಮನೆ ಮಂಜೂರು ಮಾಡಲು ಸಂಬAದಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ತಹಶಿಲ್ದಾರ್. ಪಟ್ಟಣದ ೫ನೇ ವಾರ್ಡ್ ನ ನಿವಾಸಿಯಾದ ಯರಕ್ಕ ಎಂಬ ೮೦ವರ್ಷದ ವೃದ್ದೆ ಅಳಿವಿನಂಚಿನಲ್ಲಿರುವ ಮನೆಯಲ್ಲಿಯೇ ವಾಸ ಮಾಡಿಕೊಂಡು ಕಷ್ಟಕರವಾದ ಜೀವನ ಮಾಡುತ್ತಿದೆ ಎಂಬ ಮಾಹಿತಿ ತಿಳಿದ ತಕ್ಷಣ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ವೃದ್ದೆಗೆ ಮನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿ ನಿರಾಶ್ರಿತರ ಅಜ್ಜಿಗೆ ಆಶ್ರಯ ನೀಡುವ ಭರವಸೆ ನೀಡಿದರು. ಸುಮಾರು ೮೦ವರ್ಷ ವಯಸ್ಸದ ವೃದ್ಧೆ ಯರಕ್ಕ ದುಸ್ಥಿತಿಯಲ್ಲಿದ್ದ ಮನೆಗೆ ಖುದ್ದು ತಹಶಿಲ್ದಾರ್ ಮುನಿಶಾಮಿರೆಡ್ಡಿ ಭೇಟಿನೀಡಿ ಅಜ್ಜಿಯ ಕಷ್ಟಗಳನ್ನು ಆಲಿಸಿ ಅವರಿಗೆ ವಿದ್ಯುತ್, ಕುಡಿಯುವನೀರು, ಸೇರಿದಂತೆ ಮನೆ ಮಂಜೂರು ಮಾಡಿಕೊಡಲು ಪ.ಪಂ ಅಧಿಕಾರಿಗೆ ಸೂಚಿಸಿ ನಂತರ ಪಡಿತರ ಚೀಟಿ ಕಳೆದು ಹೋಗಿದೆ ಎಂದು ಕಂಗಾಲಾಗಿದ್ದ ವೃದ್ಧೆಗೆ ದಿನಸಿ ಸಾಮಾಗ್ರಿಗಳನ್ನು ಒದಗಿಸಿ ಆಹಾರ ಸರಬರಾಜು ಮಾಡುವ ಅಂಗಡಿಗೆ ಅಕ್ಕಿಯನ್ನು ನೀಡಲು ತಿಳಿಸಿ ಆತ್ಮ ಸ್ಥೈರ್ಯ ತುಂಬಿದರು. ಈ ರೀತಿ ಜನಸಾಮಾನ್ಯರ ಕಷ್ಟಗಳನ್ನು ಆಲಿಸಿ ಕೆಲಸ ಮಾಡುವ ಅಧಿಕಾರಿಗಳು ಕೆಲವರು ಮಾತ್ರ ಅದರಲ್ಲಿ ಕೊರಟಗೆರೆ ತಹಶಿಲ್ದಾರ್ ರವರು ಕೂಡ ಒಬ್ಬರಾಗಿದ್ದಾರೆ. ಇನ್ನೂ ಇದೇ ರೀತಿ ರೈತರಿಗೆ, ಬಡವರಿಗೆ, ನಿರಾಶ್ರಿತರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಲು ತಹಶಿಲ್ದಾರ್ ರವರಿಗೆ ಎಲ್ಲಾರೂ ಇನ್ನೂ ಉತ್ತಮ ಸಹಕಾರ ನೀಡಬೇಕಾಗಿದೆ. ಇದೇ ಸಂದರ್ಭದಲ್ಲಿ ಪ.ಪಂ ಆರ್.ಐ ವೇಣುಗೋಪಾಲ್ ,ರ್.ಐ ಪ್ರತಾಪ್, ಗ್ರಾಮಲೆಕ್ಕಿಗ ಬಸವರಾಜು, ಹೆಲ್ತ್ ಇನ್ಸ್ಪೆಕ್ಟರ್ ಹುಸೇನ್ ಸೇರಿದಂತೆ ಇತರೆ ಅಧಿಕಾರಿವರ್ಗದವರು ಇದ್ದರು.

(Visited 1 times, 1 visits today)