ತುಮಕೂರು
ನಗರದ ಶ್ರೀ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಮಂಗಳವಾರ ಗೋ ಆಧಾರಿತ ಕೃಷಿ ಹಾಗೂ ಸಾವಯವ ಕೃಷಿಯಿಂದ ರೈತರ ಅಭಿವೃದ್ಧಿ ಮತ್ತು ಪಂಚ ಮಹಾಭೂತಗಳ ಅರಿವು ಕಾರ್ಯಕ್ರಮ ನಡೆಯಿತು.
ಗೋ ಆಧಾರಿತ ಕೃಷಿ ಕುರಿತು ಜಿಲ್ಲೆಯ ರೈತರೊಂದಿಗೆ ಮಹಾ ರಾಷ್ಟçದ ಕೊಲ್ಲಾಪುರ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಸಂವಾದ ನಡೆಸಿ ಮಾತನಾಡಿ ತಂತ್ರಜ್ಞಾನದ ಹೆಸರಿನಲ್ಲಿ ನಮ್ಮ ಮೂಲ ಕೃಷಿ ಪದ್ದತಿ ಕಡಿಮೆಯಾಗಿ ಇಂದು ನಾವು ತಿನ್ನುವ ಆಹಾರಗಳು ವಿಷಪೂರಿತ ವಾಗಿದೆ ಎಂದು ನುಡಿದರು.
ನಮ್ಮ ದೇಶೀಯ ಸಂಸ್ಕೃತಿ ಪರಂಪರೆಗೆ ಹೆಚ್ಚಿನಒತ್ತು ನೀಡಬೇಕು, ಅನಾಧಿ ಕಾಲದಿಂದಲೂ ನಮ್ಮ ಪೂರ್ವಿಕರು ಗೋ ಆಧಾರಿತ ಕೃಷಿ ಪದ್ದತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು, ಎಲ್ಲರಿಗೂ ಅನ್ನ ನೀಡುವ ರೈತ ಸಂಕಷ್ಟದಲ್ಲಿರುವ ಪರಿಸ್ಥಿತಿ ಬಂದಿದೆಎAದು ನುಡಿದರು.
ರೈತರು ಕೃಷಿಗೆ ಒತ್ತು ನೀಡಬೇಕು, ಇಂದು ಕೃಷಿ ಮಾಡುವವರು ಕಡಿಮೆಯಾ ಗುತ್ತಿದ್ದಾರೆ, ಕೃಷಿ ಇಲ್ಲದೇ ಬದುಕುಇಲ್ಲ, ಕೃಷಿ ಯಲ್ಲಿರಾಸಾಯನಿಕ ಬಳಸದೇ ನಮ್ಮ ಸಾವಯವ ಕೃಷಿ ಮಾಡಬೇಕುರಾಸಾಯನಿಕ ಕೃಷಿಯಿಂದ ವಿಷಪೂರಿತ ಆಹಾರ ಬೆಳೆಯುತ್ತಿದೆ, ನಮ್ಮ ಪೂರ್ವಿಕರು ಗೋವಿನ ಗಂಜಲು ಗೋವಿನ ಸಗಣಿಗೊಬ್ಬರ ಹಾಕಿ ಬೆಳೆ ಬೆಳೆಯುತ್ತಿದ್ದರು, ರೈತರು ಹೆಚ್ಚು ಆಕಡೆ ಗಮನ ನೀಡಿ, ನಮ್ಮ ಸ್ವದೇಶೀ ಗೋವುಗಳನ್ನು ರಕ್ಷಿಸಿರಿ ಅವುಗಳನ್ನು ಹೆಚ್ಚಿ ಸಾಕಿ ಅದರಿಂದ ಬರುವ ಹಾಲು, ಬೆಣ್ಣೆಆರೋಗ್ಯಕ್ಕೆಉತ್ತಮಎಂದ ಹೇಳಿದರು.
ನಮ್ಮ ದೇಶೀಯ ಹಳ್ಳಿಕಾರು ತಳಿಗಳು ಈ ಹಿಂದಿನ ರೀತಿಯಲ್ಲಿ ಮುಂದೆ ಮನೆ ಮನೆಯಲ್ಲಿಇರಬೇಕುಒಂದು ಹಸುವಿನಿಂದ ಬೆಳಿಗ್ಗೆ ೪ ಲೀಟರ್, ಸಂಜೆ ೪ ಲೀಟರ್ ಹಾಲು ಉತ್ಪತ್ತಿ ಆಗುವ ಹಾಗೆ ಆಗಬೇಕು, ಪ್ರತಿಯೊಬ್ಬರೂ ಗೋ ಆಧಾರಿತ ಕೃಷಿ ಮತ್ತು ಸಾವಯವ ಕೃಷಿ ಅಳವಡಿಸಿ ಕೊಳ್ಳಿ ಎಂದುಕರೆ ನೀಡಿದರು.
ಕಾಯಾಕ್ರಮದಅಧ್ಯಕ್ಷತೆ ವಹಿಸಿದ್ದ ಕರ್ನಾಟಕರಾಜ್ಯ ಶ್ರೀಗಂದ ಬೆಳೆಗಾರರ ಸಂಘದರಾಜ್ಯಾಧ್ಯಕ್ಷರಘುರಾವ್ ಮಾತನಾಡಿಇಂದು ನಾವು ಸೇವನೆ ಮಾಡುತ್ತಿರುವಆಹಾರದಿಂದ ಅನೇಕ ರೋಗಗಳು ಕಾಣಿಸಿ ಕೊಳ್ಳುತ್ತಿವೆ ನಮ್ಮ ಪೂರ್ವಿಕರು ಅಳವಡಿಸಿ ಕೊಂಡಿದ್ದಆಹಾರ ಪದ್ದತಿಯನ್ನು ನಾವು ಅಳವಡಿಸಿ ಕೊಳ್ಳಬೇಕು, ಸಿರಿಧಾನ್ಯವನ್ನು ಹೆಚ್ಚು ಬೆಳೆಯಬೇಕು, ಅದಕ್ಕೆ ಹೆಚ್ಚಿನಉತ್ತೇಜನ ಸಿಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಚಳ್ಳಕೆರೆ ಪ್ರಸನ್ನಕುಮಾರ್, ಹಿರೇಹಳ್ಳಿ ತೋಟಗಾರಿಕೆ ಇಲಾಖೆಯ ಹಿರಿಯ ವಿಜ್ಞಾನಿ ಡಾ.ಲೋಗಾನಂದನ್ ಭಾರತೀಯಕಿಸಾನ್ ಸಂಘದ ಹಾರೋಹಳ್ಳಿಯ ಹೆಚ್.ಎಸ್.ಸಂತೋಷ್, ದಾವಣಗೆರೆಯ ಶಂಕರಮೂರ್ತಿ, ತರೀಕೆರೆ ನಾಟಿ ವೈದ್ಯ ಅರುಣ್ ಕುಮಾರ್, ಅಮ್ಮನ ಘಟಟದ ಪ್ರಗತಿ ಪರಕೃಷಿಕರಾದ ಶಂಕರಪ್ಪ, ಮಹೇಶ್, ಸಿರಾ ಪಿ.ಸಿ ವೀರಪ್ಪಚಾರ್, ಶ್ರೀಗಂದ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಕೆ.ಪುರುಷೋತ್ತಮ್, ರೈತರಾದ ಬುಕಾಪಟ್ಟಣ ಬಸವರಾಜು, ಶಿರಾ ಮಧು, ತುರುವೇಕೆರೆಸರ್ವೋದಯ ಮಂಡಲದಕುಮಾರ ಸ್ವಾಮಿ, ಮೊದಲಾದವರುಇದ್ದರು.
ಉಪನ್ಯಾಸಕಿ ಅಕ್ಕಮ್ಮ ಪ್ರಾರ್ಥನೆ ಮಾಡಿ ದರು, ಪ್ರಗತಿ ಪರ ಕೃಷಿಕ ಶ್ರೀಗಂಧ ಬೆಳೆಗಾರ ಬುಕ್ಕಾಪಟ್ಟಣದ ರಘುರಾವ್ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದ ನಂತರ ಸಂವಾದ ಕಾರ್ಯಕ್ರಮ ನಡೆಯಿತು, ರೈತರ ಪ್ರಶ್ನೆಗಳಿಗೆ ಸ್ವಾಮೀಜಿಯವರು ಉತ್ತರ ನೀಡಿದರು.