ವರಲಕ್ಷ್ಮಿ ಹಬ್ಬದ ಪ್ರಯುಕ್ತ ಹೂವಿನ ಖರೀದಿಗೆ ಮುಗಿಬಿದ್ದ ಜನ, ಗಗನಕ್ಕೇರಿದ ಹೂವಿನ ಬೆಲೆ,

ಶ್ರಾವಣ ಮಾಸದ ಶ್ರೇಷ್ಠ ಹಬ್ಬವಾದ ವರಲಕ್ಷ್ಮಿ ಹಬ್ಬಕ್ಕೆ ಬರದ ನಡುವೆ ದಾಖಲೆ ಬೆಲೆಯಲ್ಲಿ ಹೂವುಗಳು ಮಾರಾಟವಾಗುತ್ತಿದ್ದು, ಗ್ರಾಹಕರನ್ನು ಬೆಚ್ಚಿ ಬೀಳಿಸಿದೆ.

ಪಟ್ಟಣದ ಮಾರುಕಟ್ಟೆಯಲ್ಲಿ ಗುರುವಾರ ವಹಿವಾಟುವಿನಲ್ಲಿ ಕನಕಾಂಬರ ಹೂವು ೩೫೦ ರಿಂದ ೪೦೦ರೂಪಾಯಿಯವರೆಗೂ ಮಾರಾಟವಾಗಿ ಅಗ್ರಸ್ಥಾನ ಕಾಯ್ದುಕೊಂಡರೆ, ಚಾಮಂತಿ ಹೂ ೨೦೦ ಅಸುಪಾಸಿನಲ್ಲಿ ಮಾರಾಟ ನಡೆಯಿತು ಕಾಕಡ ಮತ್ತು ಮಲ್ಲಿಗೆ ೨೦೦ ರೂಗಳಿಗೆ ಮಾರಾಟವಾಗಿ ದಾಖಲೆ ನರ‍್ಮಿಸಿಕೊಂಡಿದೆ

ಬೆಲೆ ಈ ರೀತಿ ಇದ್ದರೂ ಸಹ ಸರ‍್ವಜನಿಕರು ನಿರಾಸಕ್ತಿ ತೋರದೆ, ಮುಗಿಬಿದ್ದು ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ

ಹೂವಿನ ಬೆಲೆ ಏರಿಕೆಯ ಬಗ್ಗೆ ಮಾತನಾಡಿದ ರೈತ ಸಂಘದ ಕರ‍್ಯರ‍್ಶಿ ಕರಿಯಣ್ಣ ಮಾತನಾಡಿ ಹೂ ಬೆಳೆದ ರೈತರಿಗೆ ಉತ್ತಮ ಬೆಲೆಯಿಂದಾಗಿ ಒಳ್ಳೆಯ ಲಾಭ ಸಿಗುತ್ತಿದೆ, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಸಂತೋಷ ವ್ಯಕ್ತಪಡಿಸಿದರು

ನಂತರ ಹೂವಿನ ವ್ಯಾಪಾರಿ ಬೊಮ್ಮಣ್ಣ ಮಾತನಾಡಿ ಬರಗಾಲದಲ್ಲಿಯೂ ಬೇಡಿಕೆಯಷ್ಟು ಹೂ ಬರುತ್ತಿದ್ದು, ಪಾವಗಡ ತಾಲ್ಲೂಕಿನಿಂದ ಬಳ್ಳಾರಿ, ದಾವಣಗೆರೆ, ಚಿತ್ರದರ‍್ಗ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶದ ಕೆಲವು ಭಾಗಗಳಿಗೂ ಹೂವುಗಳನ್ನು ಕಳುಹಿಸಿಕೊಡಲಾಗುವುದು, ಇದರಿಂದಾಗಿ ನಮ್ಮ ರೈತರು ಸಂತೋಷದಲ್ಲಿದ್ದು ಅದೇ ರೀತಿ ಮಾರಾಟಗಾರರೂ ಸಹ ಖುಷಿಯಿಂದ ಇದ್ದಾರೆ ಎಂದು ತಿಳಿಸಿದರು

(Visited 1 times, 1 visits today)